ಯಾವುದೇ ದೇಶ ಅಥವಾ ನಾಡಿನ ಶ್ರೀಮಂತಿಕೆಯನ್ನು ಅಳೆಯಲು ಆ ನಾಡಿನ ಸಂಸ್ಕೃತಿ ಮತ್ತು ಪರಂಪರೆ, ಅಲ್ಲಿಯ ಜೀವನ ವಿಧಾನ ಮತ್ತು ಆ ಜನರು ಅನುಸರಿಸುವ ಮೌಲ್ಯಾದರ್ಶಗಳು ಮುಖ್ಯವಾಗುತ್ತವೆ. ಅಂಥ ಶ್ರೀಮಂತ ಇತಿಹಾಸ ಮತ್ತು ಪರಂಪರೆಯುಳ್ಳ ನಾಡು ಕರ್ನಾಟಕ. ಈ ನೆಲದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಎಲ್ಲವೂ ವಿಶಿಷ್ಟ ಹಾಗೂ ಅನನ್ಯ. ಅಂತೆಯೇ ಈ ಕಲೆ, ಸಂಸ್ಕೃತಿ ಮತ್ತು ಜ್ಞಾನಪರಂಪರೆಗಳು ಅಳಿಸಿ ಹೋಗದಂತೆ ಮಾಡಲು ಹಾಗೂ ಅವುಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲ್ಲೂಕು ಗೋಟಗೋಡಿಯಲ್ಲಿ ಪ್ರಪಂಚದಲ್ಲೇ ಮೊದಲನೆಯದಾದ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ನಾಡಿನ ಮಧ್ಯಭಾಗದಲ್ಲಿರುವ ಹಾವೇರಿ ಜಿಲ್ಲೆ ರಾಜ್ಯದ ನಾಲ್ದೆಸೆಯ ಜನಪದರ ಬದುಕು, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪುನಶ್ಚೇತನ ಕೇಂದ್ರವಾಗಲಿದೆ ಎನ್ನುವುದು ಅಭಿಮಾನದ ಸಂಗತಿಯಾಗಿದೆ.
ಹಾವೇರಿ ಜಿಲ್ಲೆ ಮೂಲತಃ ಕಲೆ-ಕಲಾವಿದರ ನೆಲೆವೀಡು. ದೊಡ್ಡಾಟ ಕಲೆಯ ಪುನಶ್ಚೇತನಕ್ಕಾಗಿ ಶ್ರಮಿಸಿದ ಕಲಾವಿದರ ತಾಣ. ರಂಗಕಲೆಯನ್ನು ಜೀವಂತವಾಗಿ ಇರಿಸುವಲ್ಲಿ ಶ್ರಮಿಸುತ್ತಿರುವ ರಂಗಗ್ರಾಮ 'ಶೇಷಗಿರಿ' ಇರುವುದು ಈ ಜಿಲ್ಲೆಯಲ್ಲೇ. ಬಹುಹಿಂದಿನಿಂದಲೂ ಸೂತ್ರದ ಗೊಂಬೆಗಳನ್ನು ಕುಣಿಸಿ ಸೂತ್ರದ ಗೊಂಬೆಯಾಟವನ್ನು ಜೀವಂತವಾಗಿರಿಸಿರುವ ಅಂತರವಳ್ಳಿ ಮತ್ತು ಯರೇಗ್ಪು ಇರುವುದು ಕೂಡ ಇಲ್ಲಿಯೇ. ಇಂಥ ಶ್ರೀಮಂತ ಕಲಾಪರಂಪರೆಯುಳ್ಳ ಈ ಪ್ರದೇಶದಲ್ಲಿ ಜಾನಪದ ವಿಶ್ವವಿದ್ಯಾಲಯಅಸ್ತಿತ್ವಕ್ಕೆ ಬಂದಿರುವುದು ವಿಶೇಷ.
ಜಾನಪದ ವಿಶ್ವವಿದ್ಯಾಲಯದ ಕೇಂದ್ರಸ್ಥಾನದ ಆವರಣ ಸುಂದರ ಪ್ರಾಕೃತಿಕ ಪರಿಸರದಲ್ಲಿದ್ದು ಉನ್ನತ ಶಿಕ್ಷಣಕ್ಕೆ ಸೂಕ್ತ ತಾಣವಾಗಿದೆ. ಜಿಲ್ಲಾ ಕೇಂದ್ರವಾಗಿರುವ ಹಾವೇರಿ ಪಟ್ಟಣದಿಂದ 36 ಕಿ.ಮೀ. ಹಾಗೂ ತಾಲ್ಲೂಕು ಕೇಂದ್ರವಾದ ಶಿಗ್ಗಾವಿಯಿಂದ 6 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ `ಗೊಟಗೋಡಿ' ಎಂಬ ಸ್ಥಳದಲ್ಲಿ ಈವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದೆ.
ಜಾನಪದ ವಿಶ್ವವಿದ್ಯಾಲಯ ಒಂದು ಅನನ್ಯವಾದ ಶೈಕ್ಷಣಿಕ ಚಹರೆಯನ್ನು ಧಾರಣಗೊಳಿಸಿಕೊಂಡಿದ್ದು, ಪ್ರಸಕ್ತಕಾಲದ ಅಗತ್ಯಗಳಿಗನುಗುಣವಾಗಿ ದೇಶೀ ಜ್ಞಾನ ಪರಂಪರೆಗಳ ಅಧ್ಯಯನ ಹಾಗೂ ಅವುಗಳ ಸಂವರ್ಧನೆಗೆ ಕಟಿಬದ್ಧವಾಗಿದೆ. ಜನಪದರ ಲೋಕದೃಷ್ಟಿ, ಅವರ ವಿವೇಕ ಹಾಗೂ ಜಾಗತೀಕರಣದಿಂದಾಗಿ ತೀವ್ರಗತಿಯಲ್ಲಿ ಬದಲಾಗುತ್ತಿರುವ ಪ್ರಪಂಚಕ್ಕೆ ಪರ್ಯಾಯ ಜ್ಞಾನ ಆಕರವಾಗಿ ಅದರ ಪ್ರಸ್ತುತತೆಗೆ ವಿಶ್ವವಿದ್ಯಾಲಯ ವಿಶೇಷ ಗಮನಹರಿಸುತ್ತದೆ. ಶಿಷ್ಟ ಭಾಷೆಯ ಯಾಜಮಾನ್ಯಕ್ಕೆ ಭಿನ್ನವಾಗಿ ಮೌಖಿಕತೆಯಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿ ಹಾಗೂ ಮೌಖಿಕ ಸಂಕಥನಕ್ಕೆ ಹೆಚ್ಚು ಒತ್ತು ಕೊಡುತ್ತದೆ.
ಕಲಿಕೆ ಮತ್ತು ತರಬೇತಿ ಕಾರ್ಯಕ್ರಮಗಳೊಂದಿಗೆ ಕಾಲಕಾಲಕ್ಕೆ ವಿಚಾರ ಸಂಕಿರಣಗಳು, ಸಮ್ಮೇಳನಗಳು ಹಾಗೂ ಶಿಬಿರಗಳನ್ನು ಆಯೋಜಿಸಿ ಸಂಶೋಧನೆ ಮತ್ತು ವಿಸ್ತರಣ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಉದ್ದೇಶಿಸಿದೆ. ಆರಂಭದಲ್ಲಿ ಹದಿನೇಳು ಅಧ್ಯಯನ ವಿಭಾಗಗಳನ್ನು ಹೊಂದಲಿರುವ ಈ ವಿಶ್ವವಿದ್ಯಾಲಯ ಸಾಮಾನ್ಯ ಜಾನಪದ, ಶಾಬ್ದಿಕ ಜಾನಪದ, ಜನಪದ ಕಲೆಗಳ ಅಧ್ಯಯನ, ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಅಲಕ್ಷಿತ ಅಧ್ಯಯನಗಳು ಹಾಗೂ ಆನ್ವಯಿಕ ಜಾನಪದ ಎಂಬ ಆರು ನಿಕಾಯಗಳನ್ನು ಹೊಂದಿರುತ್ತದೆ. ಜಾನಪದ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಂಸ್ಥೆಗಳಿಗೆ ಮನ್ನಣೆ ದೊರಕಿಸಿಕೊಡುವುದು ಮತ್ತು ರಾಜ್ಯದ ಬೇರೆ ಬೇರೆ ಪ್ರದೇಶದ ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ.
ವಿಶ್ವವಿದ್ಯಾಲಯವು ಜಾನಪದ ಮತ್ತು ಅದರ ಆನ್ವಯಿಕತೆಗೆ ವಿಶೇಷ ಒತ್ತುಕೊಟ್ಟು ಎಂ.ಎ., ಎಂ.ಎಸ್ಸಿ., ಎಂ.ಬಿ.ಎ., ಪಿ ಎಚ್.ಡಿ. ಕಾರ್ಯಕ್ರಮಗಳೊಂದಿಗೆ ಆಯ್ದ ಕೆಲವು ಸಂಯೋಜಿತ ಶಿಕ್ಷಣಗಳನ್ನು ನೀಡಲು ಕ್ರಮವಹಿಸಿದೆ. ವಿಶೇಷವಾಗಿ ಒಂದು ಆರ್ಕೈವ್ಸ್ ಹಾಗೂ ಗ್ರಂಥಾಲಯವನ್ನು ರೂಪಿಸುವುದು ಆದ್ಯತೆಯ ಕಾರ್ಯವಾಗಿದೆ. ಕರ್ನಾಟಕಹಾಗೂ ದೇಶದಾದ್ಯಂತ ಜಾನಪದ ಸಂಬಂಧವಾದ ಎಲ್ಲ ಚಟುವಟಿಕೆಗಳ ಮುಖ್ಯ ಕೇಂದ್ರವಾಗಿ ಬೆಳೆಯಬೇಕೆಂಬುದು ಇದರ ಗುರಿಯಾಗಿದೆ. ಕರ್ನಾಟಕದ ಅತ್ಯಂತ ಸಮೃದ್ಧವೂ ವೈವಿಧ್ಯಪೂರ್ಣವೂ ಆದ ಭೌತಿಕ ಸಂಸ್ಕೃತಿಯನ್ನು ಅನಾವರಣಗೊಳಿಸಲು ವಿಶ್ವವಿದ್ಯಾಲಯದಲ್ಲಿ ಒಂದು ಬೃಹತ್ತಾದ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುವುದು. ನಾಡಿನ ಜನತೆಯ ಉದಾರ ನೆರವಿನಿಂದ ಕಲಾತ್ಮಕವಾದ ಎಲ್ಲ ಬಗೆಯ ಬಳಕೆಯ ವಸ್ತುಗಳನ್ನು ಇಲ್ಲಿ ಶೇಖರಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗುವುದು. ಕೃಷಿ ಸಲಕರಣೆಗಳು ಗೃಹೋಪಯೋಗಿ ಸಲಕರಣೆಗಳು, ಅಳತೆಯ ಮಾನಗಳು, ಉಡುಗೆ ತೊಡುಗೆಗಳು, ಪೀಠೋಪಕರಣಗಳು, ಸಂಗೀತೋಪಕರಣಗಳು ಇತ್ಯಾದಿ ವಸ್ತುಭಂಡಾರವನ್ನೇ ಇಲ್ಲಿ ಹೊಂದಲಾಗುವುದು. ಆಧುನೀಕರಣ ಹಾಗೂ ಜಾಗತೀಕರಣದಿಂದಾಗಿ ತೀವ್ರವಾಗಿ ಕಣ್ಮರೆಯಾಗುತ್ತಿರುವ ಜನಪದ ಭೌತಿಕ ಸಂಸ್ಕೃತಿಯನ್ನು ಸಂರಕ್ಷಿಸಿಡುವುದೇ ಇದರ ಉದ್ದೇಶ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಜಾನಪದ ಅಧ್ಯಯನಕ್ಕೆ ವಿಸ್ತೃತವಾದ ನೆಲೆಗಳನ್ನು ಒದಗಿಸಲೆಂಬ ವಿಶಿಷ್ಟ ಗುರಿಯನ್ನು ಸಾಧಿಸಲಿಕ್ಕಾಗಿಯೇ ಆರಂಭಗೊಂಡಿದೆ.
ಕರ್ನಾಟಕ ಘನ ಸರ್ಕಾರವು ಕನ್ನಡದ ಸಮಸ್ತ ಜನರ ಆಶೋತ್ತರಗಳಿಗೆ ಸ್ಫಂದಿಸಲೆಂದೇ ಕರ್ನಾಟಕ ಜನಪದ ಸಂಸ್ಕೃತಿಯನ್ನು ಅಧ್ಯಯನ ಮಾಡಲೆಂದು ಹಾಗೂ ಕನ್ನಡ ಜಾನಪದ ವಿಜ್ಞಾನದ ಬೆಳವಣಿಗೆಗೆಂದೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಪಶ್ಚಿಮಕ್ಕೆ ಸಹ್ಯಾದ್ರಿಯ ಪರ್ವತದ ಕೊನೆಯ ಅಂಚಿನ ಹಾಗೂ ಪೂರ್ವಕ್ಕೆ ಬಯಲುಸೀಮೆಯ ವಿಶಾಲ ಮೈದಾನ ಭೂಮಿಯಲ್ಲಿಯ ನಡುವಿನ ಸುಂದರ ಭೌಗೋಳಿಕ ಪರಿಸರದ ನಡುವಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಈ ವಿಶ್ವವಿದ್ಯಾಲಯವು ತಲೆಯೆತ್ತಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಅರ್ಥಪೂರ್ಣ ನೆರವಿನಿಂದ ಕರ್ನಾಟಕ ಸಂಸ್ಕೃತಿಯಲ್ಲಿಯೇ ಬಹು ವೈವಿಧ್ಯವನ್ನು ಸಾಂಸ್ಕೃತಿಕ ಸಿರಿವಂತಿಕೆಯನ್ನು ಹೊಂದಿರುವ ಕರ್ನಾಟಕದ ಜನಪದ ಸಂಸ್ಕೃತಿಯ ವಿರಾಟ ಸ್ವರೂಪವನ್ನು ಪರಿಚಯಿಸುವ ಹಾಗೂ ಅಧ್ಯಯನದ ಮೂಲಕ ಅದರ ಅಂತಃಸತ್ವವನ್ನು ತಿಳಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದೆ. ಪ್ರಸಕ್ತ ವರ್ಷದಲ್ಲಿಯೇ ಈ ಪ್ರಕಾರವಾಗಿ ಜನಪದ ಸಂಸ್ಕೃತಿಯನ್ನು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ಮಾಡಲೆಂದೇ ಇದರಲ್ಲಿ ಜಾನಪದ ಸರ್ವೇಕ್ಷಣೆ ಮತ್ತು ದಾಖಲಾತಿ ಕಾರ್ಯ ನಡೆಸಲು ಅವಕಾಶವಿದೆ. ಈ ವಿಶ್ವವಿದ್ಯಾಲಯದ ಸ್ಥಾಪನೆಯಿಂದಾಗಿ ಬಹುಭಾಷಾ ಸಂಸ್ಕೃತಿಯ ದೇಶವಾದ ಭಾರತದಲ್ಲಿ ಕನ್ನಡ ಸಂಸ್ಕೃತಿಯ ಕುರಿತು ಅರ್ಥಪೂರ್ಣವಾಗಿ ಅಧ್ಯಯನ ನಡೆಸಲು ಸಾಧ್ಯವಾಗಬಲ್ಲಂತಹ ಅವಕಾಶ ಒದಗಿಸುವ ಮೂಲಕ ಉನ್ನತ ಶಿಕ್ಷಣ ಕೇತ್ರದಲ್ಲಿಯೇ ಹೊಸ ಮಜಲನ್ನು ಸೃಷ್ಟಿಸಿದ ಕೀರ್ತಿಗೆ ಕರ್ನಾಟಕವು ಭಾಜನವಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಜಾನಪದ ವಿಶ್ವವಿದ್ಯಾಲಯವು ಈ ಮುಂದಿನ ಧ್ಯೇಯೋದ್ದೇಶಗಳನ್ನು ಹೊಂದಿರತಕ್ಕದ್ದು, ಎಂದರೆ:-
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಜಾನಪದ ಅಧ್ಯಯನಕ್ಕೆ ವಿಸ್ತೃತವಾದ ನೆಲೆಗಳನ್ನು ಒದಗಿಸಲೆಂಬ ವಿಶಿಷ್ಟ ಗುರಿಯನ್ನು ಸಾಧಿಸಲಿಕ್ಕಾಗಿಯೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆರಂಭಗೊಂಡಿದೆ.
ಕರ್ನಾಟಕ ಘನ ಸರ್ಕಾರವು ಸಮಸ್ತ ಕನ್ನಡ ಜನರ ಆಶೋತ್ತರಗಳಿಗೆ ಸ್ಫಂದಿಸಲೆಂದೇ ಕರ್ನಾಟಕ ಜನಪದ ಸಂಸ್ಕೃತಿಯನ್ನು ಅಧ್ಯಯನ ಮಾಡಲೆಂದು ಹಾಗೂ ಕನ್ನಡ ಜಾನಪದ ವಿಜ್ಞಾನದ ಬೆಳವಣಿಗೆಗೆಂದೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಪಶ್ಚಿಮಕ್ಕೆ ಸಹ್ಯಾದ್ರಿಯ ಪರ್ವತದ ಕೊನೆಯ ಅಂಚಿನ ಹಾಗೂ ಪೂರ್ವಕ್ಕೆ ಬಯಲುಸೀಮೆಯ ವಿಶಾಲ ಮೈದಾನ ಭೂಮಿಯಲ್ಲಿಯ ನಡುವಿನ ಸುಂದರ ಭೌಗೋಳಿಕ ಪರಿಸರದ ನಡುವಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಈ ವಿಶ್ವವಿದ್ಯಾಲಯವು ತಲೆಯೆತ್ತಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಅರ್ಥಪೂರ್ಣ ನೆರವಿನಿಂದ ಕರ್ನಾಟಕ ಸಂಸ್ಕೃತಿಯಲ್ಲಿಯೇ ಬಹು ವೈವಿಧ್ಯವನ್ನು ಸಾಂಸ್ಕೃತಿಕ ಸಿರಿವಂತಿಕೆಯನ್ನು ಹೊಂದಿರುವ ಕರ್ನಾಟಕದ ಜನಪದ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಪರಿಚಯಿಸುವ ಹಾಗೂ ಅಧ್ಯಯನದ ಮೂಲಕ ಅದರ ಅಂತಃಸತ್ವವನ್ನು ತಿಳಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದೆ. ಪ್ರಸಕ್ತ ವರ್ಷದಲ್ಲಿಯೇ ಈ ಪ್ರಕಾರವಾಗಿ ಜನಪದ ಸಂಸ್ಕೃತಿಯನ್ನು ಕುರಿತು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ಮಾಡಲೆಂದೇ ಇದರಲ್ಲಿ ಜಾನಪದ ಸರ್ವೇಕ್ಷಣೆ ಮತ್ತು ದಾಖಲಾತಿ ಕಾರ್ಯ ನಡೆಸಲು ಅವಕಾಶವಿದೆ. ಈ ವಿಶ್ವವಿದ್ಯಾಲಯದ ಸ್ಥಾಪನೆಯಿಂದಾಗಿ ಬಹುಭಾಷಾ ಸಂಸ್ಕೃತಿಯ ದೇಶವಾದ ಭಾರತದಲ್ಲಿ ಕನ್ನಡ ಸಂಸ್ಕೃತಿಯ ಕುರಿತು ಅರ್ಥಪೂರ್ಣವಾಗಿ ಅಧ್ಯಯನ ನಡೆಸಲು ಸಾಧ್ಯವಾಗಬಲ್ಲಂತಹ ಅದಕ್ಕೆ ಅವಕಾಶ ಒದಗಿಸುವ ಮೂಲಕ ಉನ್ನತ ಶಿಕ್ಷಣ ಕೇತ್ರದಲ್ಲಿಯೇ ಹೊಸ ಮಜಲನ್ನು ಸೃಷ್ಟಿಸಿದ ಕೀರ್ತಿಗೆ ಕರ್ನಾಟಕವು ಭಾಜನವಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವೆಂಬುದು ಕೇವಲ ಉನ್ನತ ಶಿಕ್ಷಣ ನೀಡುವ ಸಂಸ್ಥೆಯಾಗದೆ ಜನಪದರ ಬದುಕಿನ ಎಲ್ಲಾ ಮಗ್ಗುಲುಗಳಲ್ಲಿಯೂ ಇರಬಹುದಾದ ಬದುಕು-ಬವಣೆ, ಸವಾಲು-ಸೋಲು-ಗೆಲುವು, ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಬದಲಾವಣೆಯ ತೀವ್ರತೆ, ಜಾಗತೀಕರಣದ ಪರಿಣಾಮ - ಹೀಗೆ ಹಲವು ಬಗೆಯ ಏರಿಳಿತಗಳ ಕುರಿತು ನಿರಂತರ ಅವಲೋಕನ, ಸಂಶೋಧನೆ ನಡೆಸುವ ಉನ್ನತ ಸ್ತರದ ಸಂಶೋಧನಾಲಯವೇ ಆಗಿದೆ. ಅಂತೆಯೇ ಅಭಿವೃದ್ಧಿ ಮಾರ್ಗಸೂಚಿ ಹಾಗೂ ಸಮಸ್ಯೆಗಳಿಗೆ ಪರಿಹಾರ, ಮಾರ್ಗೋಪಾಯಗಳನ್ನು ಸಂದರ್ಭಕ್ಕೆ ಪೂರಕವಾಗಿ ಒದಗಿಸುವ ಮೂಲಕ ಸಾಮಾಜಿಕವಾಗಿ ವಿಶಿಷ್ಟವಾದ ಬಾಧ್ಯತೆಯನ್ನು ನಿರಂತರವಾಗಿ ನಿರ್ವಹಿಸಬೇಕಾದ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯಯೋಜನೆ ರೂಪಿಸಬೇಕಾದ ಹೊಣೆಗಾರಿಕೆಯನ್ನು ಮನದಟ್ಟು ಮಾಡಿಕೊಂಡು ಮುಂದಿನ ಹೆಜ್ಜೆಗಳನ್ನು ಇಡಲಾರಂಭಿಸಿದೆ.
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು - 560 002
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - 560 002
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ ಭವನ, ಮಡಿಕೇರಿ - 571 201
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಾಲ್ ಬಾಗ್, ಮಂಗಳೂರು - 575 003
ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು - 560 002
ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - 560 002
ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - 560 018
ನಾಮ ನಿರ್ದೇಶಿತ ಸದಸ್ಯರು (2015 ರ ಫೆಬ್ರವರಿ 18 ರಿಂದ)
ಬಡಗೇರಿ, ಹಲಗೇರಿ ಅಂಚೆ, ಅಂಕೋಲಾ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಪ್ರಾಧ್ಯಾಪಕರು, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276
ನಂ. 1123, ಕೇಶವ ದೀಪ, ಲಲಿತಾದ್ರಿ, 1ನೇ ಅಡ್ಡರಸ್ತೆ, ಕುವೆಂಪುನಗರ, ಮೈಸೂರು - 570023
ನಂ.1414,3ನೇಹಂತ, ಬಿಇಎಂಎಲ್ ಬಡಾವಣೆ, ಬಸವೇಶ್ವರನಗರ, ಬೆಂಗಳೂರು
ನಂ.16/1, 2ನೇ ಮುಖ್ಯ, ಟಾಟಾ ಸಿಲ್ಕ ಫಾರಂ, ಬಸವನಗುಡಿ, ಬೆಂಗಳೂರು-04
ಅವರಾದಿ ಗ್ರಾಮ, ರಾಮದುರ್ಗ ತಾಲೂಕು, ಬೆಳಗಾವಿ ಜಿಲ್ಲೆ
ತಂದೆ ಅಬ್ದುಲ್ ಕರೀಂ, ಮುಲ್ಲರವಾಡಿ, ಕುಷ್ಟಗಿ ತಾಲೂಕು, ಕೊಪ್ಪಳ ಜಿಲ್ಲೆ
ಸಪ್ತಾಪುರ, 7ನೇ ಅಡ್ಡರಸ್ತೆ, ಹಳಿಯಾಳ ರಸ್ತೆ, ಧಾರವಾಡ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ನಂ.03, ಎಚ್ ಬ್ಲಾಕ್, ರಾಮಕೃಷ್ಣನಗರ, ಮೈಸೂರು-570022
ವಿಶ್ರಾಂತ ಪ್ರಾಧ್ಯಾಪಕ ಹಾಗೂ ಡೀನ್, ನಂ.7, ಜನನಿ, 1ನೇ ಮುಖ್ಯ, 2ನೇ ಅಡ್ಡರಸ್ತೆ, ಶಿವನಗರ, ರಾಜಾಜಿನಗರ, ಬೆಂಗಳೂರು
ನಂ. 317, 7ನೇ ಬಿ ಮೈನ್, 3ನೇ ಎ ಕ್ರಾಸ್, 1ನೇ ಬ್ಲಾಕ್, ಕಲ್ಯಾಣನಗರ, ಎಚ್.ಆರ್.ಬಿ.ಆರ್. ಲೇಔಟ್, ಬೆಂಗಳೂರು
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
|
ಕಟ್ಟಡ ಸಮಿತಿ
1. ಮಾನ್ಯ ಕುಲಪತಿಯವರು | ಅಧ್ಯಕ್ಷರು | |
2. ಸಿಂಡಿಕೇಟ್ ಸದಸ್ಯರು, ಜಾನಪದ ವಿಶ್ವವಿದ್ಯಾಲಯ | ಸದಸ್ಯರು | |
3. ಮುಖ್ಯ ಇಂಜಿನಿಯರ್ ಅಥವಾ ಅವರ ಪ್ರತಿನಿಧಿ, ಲೋಕೋಪಯೋಗಿ ಇಲಾಖೆ, ಧಾರವಾಡ ವಿಭಾಗ, ಧಾರವಾಡ | ಸದಸ್ಯರು | |
4. ಪ್ರೊ. ಗುರುರಾಜ ಜೋಶಿ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ವಾಸ್ತು ಶಿಲ್ಪ ವಿಭಾಗ, ಬಿ. ವಿ. ಬಿ. ಎಂಜಿನಿಯರಿಂಗ್ ಕಾಲೇಜು, ವಿದ್ಯಾನಗರ, ಹುಬ್ಬಳ್ಳಿ | ಆಹ್ವಾನಿತ ಸದಸ್ಯರು | |
5. ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜಾನಪದ ವಿಶ್ವವಿದ್ಯಾಲಯ | ಸದಸ್ಯರು | |
6. ಶ್ರೀ ಬಂಡಿವಡ್ಡರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹಾನಗಲ್ ಉಪವಿಭಾಗ | ಆಹ್ವಾನಿತ ಸದಸ್ಯರು | |
7. ಹಣಕಾಸು ಅಧಿಕಾರಿ | ಸದಸ್ಯರು | |
8. ಕುಲಸಚಿವ ( ಮೌಲ್ಯಮಾಪನ) | ಸದಸ್ಯರು | |
9. ಕುಲಸಚಿವ | ಸದಸ್ಯ ಕಾರ್ಯದರ್ಶಿ |
ಗ್ರಂಥಾಲಯ ಸಲಹಾ ಸಮಿತಿ
1. ಮಾನ್ಯ ಕುಲಪತಿಯವರು | ಅಧ್ಯಕ್ಷರು |
2. ಸಿಂಡಿಕೇಟ್ ಸದಸ್ಯರು, ಜಾನಪದ ವಿಶ್ವವಿದ್ಯಾಲಯ | ಸದಸ್ಯರು |
3. ಹಣಕಾಸು ಅಧಿಕಾರಿ | ಸದಸ್ಯರು |
4. ಕುಲಸಚಿವ ( ಮೌಲ್ಯಮಾಪನ) | ಸದಸ್ಯರು |
5. ಕುಲಸಚಿವ | ಸದಸ್ಯ ಕಾರ್ಯದರ್ಶಿ |
ದೊಡ್ಡ ಖರೀದಿ ಸಮಿತಿ
1. ಮಾನ್ಯ ಕುಲಪತಿಯವರು | ಅಧ್ಯಕ್ಷರು |
2. ಸಿಂಡಿಕೇಟ್ ಸದಸ್ಯರು, ಜಾನಪದ ವಿಶ್ವವಿದ್ಯಾಲಯ | ಸದಸ್ಯರು |
3. ಹಣಕಾಸು ಅಧಿಕಾರಿ | ಸದಸ್ಯರು |
4. ಕುಲಸಚಿವ ( ಮೌಲ್ಯಮಾಪನ) | ಸದಸ್ಯರು |
5. ಕುಲಸಚಿವ | ಸದಸ್ಯ ಕಾರ್ಯದರ್ಶಿ |
ಗ್ರಾಮ ಕರ್ನಾಟಕ: ಬಯಲು ವಸ್ತು ಸಂಗ್ರಹಾಲಯ |
|
---|---|
1. ಮಾನ್ಯ ಕುಲಪತಿಯವರು | ಅಧ್ಯಕ್ಷರು |
2. ಸಿಂಡಿಕೇಟ್ ಸದಸ್ಯರು, ಜಾನಪದ ವಿಶ್ವವಿದ್ಯಾಲಯ | ಸದಸ್ಯರು |
3. ಶ್ರೀ ಯು. ಎಸ್. ರಾಮಣ್ಣ, ಜಾನಪದ ತಜ್ಞರು, ಮೈಸೂರು | ಸದಸ್ಯರು |
4. ಹಣಕಾಸು ಅಧಿಕಾರಿ | ಸದಸ್ಯರು |
5. ಕುಲಸಚಿವ | ಸದಸ್ಯರು |
6. ಕುಲಸಚಿವ ( ಮೌಲ್ಯಮಾಪನ) | ಸದಸ್ಯ ಕಾರ್ಯದರ್ಶಿ |
ಕ್ರಿಯಾಯೋಜನೆ ಸಲಹಾ ಸಮಿತಿ
1. ಮಾನ್ಯ ಕುಲಪತಿಯವರು | ಅಧ್ಯಕ್ಷರು |
2. ಸಿಂಡಿಕೇಟ್ ಸದಸ್ಯರು, ಜಾನಪದ ವಿಶ್ವವಿದ್ಯಾಲಯ | ಸದಸ್ಯರು |
3. ಸಿಂಡಿಕೇಟ್ ಸದಸ್ಯರು, ಜಾನಪದ ವಿಶ್ವವಿದ್ಯಾಲಯ | ಸದಸ್ಯರು |
4. ಶ್ರೀ ಬೆಳಗಲ್ಲು ವೀರಣ್ಣ, ಗೊಂಬೆಯಾಟ ಕಲಾವಿದರು, ಬಳ್ಳಾರಿ | ಸದಸ್ಯರು |
5. ಶ್ರೀ ಠಾಕಪ್ಪ, ಸಾಗರ | ಸದಸ್ಯರು |
6. ಡಾ. ಶ್ರೀರಾಮ ಇಟ್ಟಣ್ಣವರ, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೀಳಗಿ | ಸದಸ್ಯರು |
7. ಪ್ರೊ. ಬಸವರಾಜ ಮಲಸೆಟ್ಟಿ, ನಿವೃತ್ತ ಪ್ರಾಧ್ಯಾಪಕರು, ಹೊಸಪೇಟೆ | ಸದಸ್ಯರು |
8. ಡಾ. ಶ್ರೀಪಾದ ಶೆಟ್ಟಿ, ಪ್ರಾಧ್ಯಾಪಕರು, ಹೊನ್ನಾವರ | ಸದಸ್ಯರು |
9. ಶ್ರೀ ಜೋಗಿ ಸಿದ್ದರಾಜು, ಜನಪದ ಕಲಾವಿದರು, ಬೆಂಗಳೂರು | ಸದಸ್ಯರು |
10. ಡಾ. ಅಶೋಕ ಆಳ್ವ, ಸಂಯೋಜಕರು, ಆರ್. ಆರ್. ಸಿ., ಉಡುಪಿ | ಸದಸ್ಯರು |
11. ಡಾ. ಜಗನ್ನಾಥ ಹೆಬ್ಬಾಳೆ, ಸಹ ಪ್ರಾಧ್ಯಾಪಕರು, ಬೀದರ್ | ಸದಸ್ಯರು |
12. ಕುಲಸಚಿವ ( ಮೌಲ್ಯಮಾಪನ) | ಸದಸ್ಯರು |
13. ಕುಲಸಚಿವ | ಸದಸ್ಯ ಕಾರ್ಯದರ್ಶಿ |
ಪ್ರಕಟಣಾ ಸಮಿತಿ |
|
---|---|
1. ಮಾನ್ಯ ಕುಲಪತಿಯವರು | ಅಧ್ಯಕ್ಷರು |
2. ಸಿಂಡಿಕೇಟ್ ಸದಸ್ಯರು, ಜಾನಪದ ವಿಶ್ವವಿದ್ಯಾಲಯ | ಸದಸ್ಯರು |
3. ಡಾ. ಹರಿಲಾಲ್ ಪವಾರ್, ನಿರ್ದೇಶಕರು, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ | ಸದಸ್ಯರು |
4. ಡಾ. ಸುಜ್ಞಾನಮೂರ್ತಿ, ಸಹಾಯಕ ನಿರ್ದೇಶಕರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ | ಸದಸ್ಯರು |
5. ಹಣಕಾಸು ಅಧಿಕಾರಿ | ಸದಸ್ಯರು |
6. ಕುಲಸಚಿವ | ಸದಸ್ಯರು |
7. ಕುಲಸಚಿವ ( ಮೌಲ್ಯಮಾಪನ) | ಸದಸ್ಯ ಕಾರ್ಯದರ್ಶಿ |
ತಜ್ಞರ ಸಲಹಾ ಸಮಿತಿ
1. ಮಾನ್ಯ ಕುಲಪತಿಯವರು | ಅಧ್ಯಕ್ಷರು | |
2. ಡಾ. ಚಂದ್ರಶೇಖರ ಕಂಬಾರ, ಜ್ಞಾನಪೀಠ ಪುರಸ್ಕೃತರು, ಬೆಂಗಳೂರು | ಸದಸ್ಯರು | |
3. ಶ್ರೀ ಗೊ. ರು. ಚನ್ನಬಸಪ್ಪ, ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಬೆಂಗಳೂರು | ಸದಸ್ಯರು | |
4. ಡಾ. ಬಿ. ಎ. ವಿವೇಕ ರೈ, ನಿವೃತ್ತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ ಹಾಗೂ ಕೆ. ಎಸ್. ಓ. ಯು, ಮಂಗಳೂರು | ಸದಸ್ಯರು | |
5. ಪ್ರೊ. ಎಚ್. ಎಸ್. ರಾಮಚಂದ್ರೇಗೌಡ, ಪ್ರಾಧ್ಯಾಪಕರು ( ನಿವೃತ್ತ)., ಮೈಸೂರು | ಸದಸ್ಯರು | |
6. ಪ್ರೊ. ಟಿ. ಎನ್. ಶಂಕರನಾರಾಯಣ, ಪ್ರಾಧ್ಯಾಪಕರು ( ನಿವೃತ್ತ)., ಶಿವಮೊಗ್ಗ | ಸದಸ್ಯರು | |
7. ಪ್ರೊ. ಬಸವರಾಜ ಮಲಸೆಟ್ಟಿ, ಪ್ರಾಧ್ಯಾಪಕರು ( ನಿವೃತ್ತ)., ಹೊಸಪೇಟೆ | ಸದಸ್ಯರು | |
8. ಶ್ರೀ ಬೆಳಗಲ್ಲು ವೀರಣ್ಣ, ಗೊಂಬೆಯಾಟ ಕಲಾವಿದರು, ಬಳ್ಳಾರಿ | ಸದಸ್ಯರು | |
9. ಡಾ. ಪುರುಷೋತ್ತಮ ಬಿಳಿಮಲೆ, ನಿರ್ದೇಶಕರು, ಭಾರತೀಯ ಅಧ್ಯಯನದ ಅಮೇರಿಕಾ ಸಂಸ್ಥೆ, ನವದೆಹಲಿ | ಸದಸ್ಯರು | |
10. ಡಾ. ಮ. ಗು. ಬಿರಾದಾರ, ಪ್ರಾಧ್ಯಾಪಕರು ( ನಿವೃತ್ತ)., ಗುಲ್ಬರ್ಗಾ | ಸದಸ್ಯರು | |
11. ಡಾ. ರಾಘವನ್ ಪಯ್ಯನಾಡ್, ಪ್ರಾಧ್ಯಾಪಕರು ( ನಿವೃತ್ತ)., ಕೊಜಿಕೋಡ್, ಕೇರಳ | ಸದಸ್ಯರು | |
12. ಹಣಕಾಸು ಅಧಿಕಾರಿ | ಸದಸ್ಯರು | |
13. ಕುಲಸಚಿವ ( ಮೌಲ್ಯಮಾಪನ) | ಸದಸ್ಯರು | |
14. ಕುಲಸಚಿವ | ಸದಸ್ಯ ಕಾರ್ಯದರ್ಶಿ |
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಜನಪದ ಕಲೆ, ಸಂಸ್ಕೃತಿಗಳ ಕುರಿತು, ಸಮಾಜದ ಎಲ್ಲ ಸಮುದಾಯಗಳ ಮೂಲಜ್ಞಾನ ಸಂಗ್ರಹಣೆ, ದಾಖಲೀಕರಣ ಪ್ರಸಾರದ ಆಶಯವನ್ನಿಟ್ಟುಕೊಂಡು, ದೇಸಿ ಜ್ಞಾನಸಂವರ್ಧನೆಗೆ ಸಂಕಲ್ಪ ತೊಡುವ ಮೂಲಕ ಕಾರ್ಯಾನುಷ್ಠಾನಗೊಳಿಸುವ ಕೈಂಕರ್ಯಕ್ಕೆ ಜಾನಪದ ವಿಶ್ವವಿದ್ಯಾಲಯ ಮುಂದಾಗಿದೆ. ಆ ದಿಶೆಯಲ್ಲಿ ಇಂತಹ ಮಹಾತ್ವಾಕಾಂಕ್ಷಿ ಕನಸೊಂದನ್ನು ನನಸು ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ದೃಢಹೆಜ್ಜೆ ಇಟ್ಟಿದೆ. ಅದಕ್ಕೆ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ವಿನ್ಯಾಸವೇ ಅದನ್ನು ಸಾಕ್ಷೀಕರಿಸುತ್ತದೆ. ದೇಸಿ ಕಲೆ, ಸಂಸ್ಕೃತಿಗಳ ಸಂವರ್ಧನೆ ಮತ್ತು ಪ್ರಸಾರ, ಅಧ್ಯಯನ, ಅಧ್ಯಾಪನ, ಸಂಶೋಧನೆ ಇಂತಹ ಶೈಕ್ಷಣಿಕ ಚೌಕಟ್ಟುಗಳಾಚೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಮಹತ್ವದ ಉದ್ದೇಶಗಳೊಂದಿಗೆ ಸ್ಥಾಪನೆಯಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು 2012-13ನೆಯ ಸಾಲಿನಿಂದ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಅದರ ಸಂಕ್ಷಿಪ್ತ ವಿವರಣೆ ಈ ಕೆಳಗಿನಂತಿದೆ.
ಜಾನಪದ ವಿಶ್ವವಿದ್ಯಾಲಯದಲ್ಲಿ 6 ನಿಕಾಯಗಳಿದ್ದು, 17 ಅಧ್ಯಯನ ವಿಭಾಗಗಳನ್ನು ಹೊಂದಿದೆ. ಅಲ್ಲದೇ 6 ಅಧ್ಯಯನ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ನಿಕಾಯಗಳು |
ವಿಭಾಗಗಳು |
1. ಸಾಮಾನ್ಯ ಜಾನಪದ 2. ಶಾಬ್ದಿಕ ಜಾನಪದ 3. ಜನಪದಕಲಾ ಪರಂಪರೆ 4. ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ 5. ಅಲಕ್ಷಿತ ಅಧ್ಯಯನಗಳು 6. ಆನ್ವಯಿಕ ಜಾನಪದ |
1.1 ಜಾನಪದ ವಿಜ್ಞಾನ ಅಧ್ಯಯನ ವಿಭಾಗ 1.2 ಜನಪದಧರ್ಮ ಅಧ್ಯಯನ ವಿಭಾಗ 1.3 ತೌಲನಿಕ ಜಾನಪದ ಅಧ್ಯಯನ ವಿಭಾಗ
2.1 ಜನಪದ ಸಾಹಿತ್ಯ ಅಧ್ಯಯನ ವಿಭಾಗ 2.2 ಜನಪದ ಭಾಷಾ ಅಧ್ಯಯನ ವಿಭಾಗ 3.1 ಜನಪದ ಕಲೆಗಳ ಅಧ್ಯಯನ ವಿಭಾಗ 3.2 ಜನಪದ ಕರಕುಶಲ ಕಲೆಗಳ ಅಧ್ಯಯನ ವಿಭಾಗ 4.1 ಪಾರಂಪರಿಕ ಜ್ಞಾನ ಪದ್ಧತಿ ಅಧ್ಯಯನ ವಿಭಾಗ 4.2 ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ವಿಭಾಗ 5.1 ಗ್ರಾಮೀಣ ಅಲಕ್ಷಿತ ಸಮುದಾಯಗಳ ಅಧ್ಯಯನ ವಿಭಾಗ 5.2 ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳ ಅಧ್ಯಯನ ವಿಭಾಗ 5.3 ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆ ಮತ್ತು ಮಕ್ಕಳ ಅಧ್ಯಯನ ವಿಭಾಗ 5.4 ಗ್ರಾಮೀಣ ಮತ್ತು ಬುಡಕಟ್ಟು ಯುವಜನ ಸೇವೆ ಮತ್ತು ಕ್ರೀಡಾ ಅಧ್ಯಯನ ವಿಭಾಗ 6.1 ಪ್ರವಾಸೋದ್ಯಮ ಅಧ್ಯಯನ ವಿಭಾಗ 6.2 ಜನಪದಸಂವಹನ ಅಧ್ಯಯನ ವಿಭಾಗ 6.3 ಗ್ರಾಮೀಣ ಮತ್ತು ಬುಡಕಟ್ಟು ಅಭಿವೃದ್ಧಿ ಅಧ್ಯಯನ ವಿಭಾಗ 6.4 ಗ್ರಾಮೀಣ ಮತ್ತು ಬುಡಕಟ್ಟು ವ್ಯವಹಾರ ಹಾಗೂ ನಿರ್ವಹಣಾ ಅಧ್ಯಯನ ವಿಭಾಗ |
ಪ್ರತಿಯೊಂದು ಅಧ್ಯಯನ ವಿಭಾಗವೂ ಸರ್ಟಿಫಿಕೇಟ್, ಡಿಪ್ಲೊಮಾ, ಎಂ.ಎ., ಎಂ.ಎಸ್ಸಿ, ಎಂ.ಬಿ.ಎ., ಎಂ.ಫಿಲ್., ಮತ್ತು ಪಿಎಚ್.ಡಿ., ಮುಂತಾದ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ. ಪಟ್ಟಿ ಲಗತ್ತಿಸಿದೆ.
ಈ ಮೇಲೆ ಕಾಣಿಸಿದ ಪ್ರತಿಯೊಂದು ಅಧ್ಯಯನ ವಿಭಾಗವೂ ನಾಲ್ಕು ಮುಖ್ಯ ಕಾರ್ಯಗಳನ್ನು ಹೊಂದಿರುತ್ತದೆ.
ಈ ಮೇಲೆ ಪಟ್ಟಿ ಮಾಡಿರುವ ಆರು ನಿಕಾಯಗಳಡಿಯಲ್ಲಿ ಹದಿನೇಳು ಅಧ್ಯಯನ ವಿಭಾಗಗಳನ್ನು ಹೊಂದುವುದರೊಂದಿಗೆ ವಿಶ್ವವಿದ್ಯಾಲಯವು ಆರು ಮಹತ್ವದ ಅಧ್ಯಯನ ಕೇಂದ್ರಗಳನ್ನೂ ಹೊಂದಬಯಸುತ್ತದೆ. ಅವು ಹೀಗಿವೆ:
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಜಾನಪದ ವಿಶ್ವವಿದ್ಯಾಲಯ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಅಲ್ಪಾವಧಿ ಶಿಕ್ಷಣ ಕ್ರಮಗಳನ್ನು ಅನುಷ್ಠಾನಗೊಳಿಸಲಿದೆ.
ಎಂಟು ಅಲ್ಪಾವಧಿ ಶೈಕ್ಷಣಿಕ ಕಾರ್ಯಕ್ರಮಗಳಡಿ 78 ಸರ್ಟಿಫಿಕೇಟ್ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಶಿಕ್ಷಣವನ್ನು ನೀಡುವ ಮೂಲಕ ಇಡೀ ಜನಪದ ಸಂಸ್ಕೃತಿಯ ಸಮಗ್ರತೆಯನ್ನು ದರ್ಶಿಸುವ ಮತ್ತು ಅಧ್ಯಯನಕ್ಕೊಳಪಡಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯ ನಿರ್ವಹಿಸಲಿದೆ.
ಕಲಿಕೆಯನ್ನು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ ಅದನ್ನು ಪ್ರಾಯೋಗಿಕ ನೆಲೆಯಲ್ಲಿ ಅಧ್ಯಯನಕ್ಕೊಳಪಡಿಸುವ ಪ್ರಯತ್ನಕ್ಕೆ ವಿಶ್ವವಿದ್ಯಾಲಯವು ಕೈಹಾಕಿದ್ದು, ಪಡೆದ ಶಿಕ್ಷಣದ ಬಗೆಗೆ ದೃಢೀಕರಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂಬ ಉದ್ದೇಶದಿಂದ ಈ ಅಲ್ಪಾವಧಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ವಿಶ್ವವಿದ್ಯಾಲಯಮುಂದಾಗಿದೆ.
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಜಾನಪದ ಎಂಬುದೇ ಒಂದು ಅಂತರ್ ಶಿಸ್ತೀಯ ಜ್ಞಾನ ಶಾಖೆಯಾದರೂ ಅಂತರ್ ಶಿಸ್ತೀಯ ಜ್ಞಾನ ಶಾಖೆಗಳನ್ನು ಇನ್ನೂ ನಿರ್ದಿಷ್ಟಪಡಿಸಿಕೊಂಡು ಅಧ್ಯಯನಕ್ಕೊಳಪಡಿಸುವ ಉದ್ದೇಶದ ಈಡೇರಿಕೆಗಾಗಿ ಕೆಲವೊಂದು ವಿಷಯಗಳನ್ನು ಸ್ಪಷ್ಟಪಡಿಸಿಕೊಂಡು ಅಧ್ಯಯನ ಮಾಡಬೇಕಾದ ಅಗತ್ಯತೆ ಇಂದು ಹೆಚ್ಚುತ್ತಿದೆ. ಹಾಗಾಗಿ 'ಗ್ರಾಮೀಣ ಅಭಿವೃದ್ಧಿ'ಗೆ ಸಂಬಂಧಿಸಿದಂತೆ ಅಧ್ಯಯನಕ್ಕೆ ಎಡೆಮಾಡಿಕೊಡುವ ಮೂಲಕ ಜಾನಪದವನ್ನು ಆನ್ವಯಿಕಗೊಳಿಸಿಕೊಳ್ಳುವ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇರಿಸಿದೆ.
'ಗ್ರಾಮೀಣ ಅಭಿವೃದ್ಧಿ' ಎನ್ನುವ ಜ್ಞಾನ ಶಾಖೆಯನ್ನು ಜಾನಪದದ ಹಿನ್ನೆಲೆಯಿಂದ ನೋಡುವ ಮತ್ತು ಅಧ್ಯಯನ ಮಾಡುವ ಅವಕಾಶ ಜಾನಪದ ವಿಶ್ವವಿದ್ಯಾಲಯದ ಮಹತ್ವದ ಶೈಕ್ಷಣಿಕ ಕಾರ್ಯಕ್ರಮಗಳಲ್ಲೊಂದಾಗಿದೆ.
ವಿಜ್ಞಾನ ಮಾನವನ ತಿಳಿವಳಿಕೆಯ ಹಾದಿಯನ್ನು ಸ್ಪಷ್ಟಪಡಿಸಲು ಇರುವ ಬಹಳ ದೊಡ್ಡ ಮಾಧ್ಯಮ. ಆದರೆ ಅದೇ ಶುದ್ಧ ವಿಜ್ಞಾನವು ಅಂತರ್ ಶಿಸ್ತೀಯ ಜ್ಞಾನ ಶಾಖೆಗಳನ್ನು ಹೊಂದಿದ್ದು ಅದರ ಬಗೆಗಿನ ತಿಳಿವಳಿಕೆಯನ್ನು ವಿಸ್ತರಿಸುವ ದಿಶೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಬಿ.ಎಸ್ಸಿ. - ಎಂ.ಎಸ್ಸಿ. ಪಠ್ಯಕ್ರಮವನ್ನು ಬೋಧಿಸುವ ಮತ್ತು ವರ್ತಮಾನದ ವಿಜ್ಞಾನದಲ್ಲಾಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವ, ತಿಳಿಯುವ ಸವಾಲಿಗೆ ವಿದ್ಯಾರ್ಥಿಗಳನ್ನು ಒಡ್ಡುವ ಮಹತ್ವದ ಉದ್ದೇಶ ಈ ಕೋರ್ಸ್ ಗಳ ಅಳವಡಿಕೆಯ ಹಿಂದಿದೆ.
ಜಾನಪದ ಒಂದು ಕಡ್ಡಾಯ ವಿಷಯವಾಗಿರುವಂತೆ ಐದು ವರ್ಷಗಳ ಸಂಯೋಜಿತ ಪದವಿ ಶಿಕ್ಷಣ (ಮೂರು ವರ್ಷಗಳ ನಂತರ ಸ್ನಾತಕ ಪದವಿ ಪಡೆದು ಹೊರಹೋಗಲು ಅವಕಾಶವಿರುತ್ತದೆ).
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಮೂಲ : ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಎಂ. ಫಿಲ್. - ಪಿಎಚ್.ಡಿ ಸಂಶೋಧನೆ ಒಂದು ಶಿಸ್ತು. ಅಂತಹದೊಂದು ಜ್ಞಾನ ಶಿಸ್ತಿನ ಬಹುಮುಖಿತ್ವವನ್ನು ಗುರುತಿಸಲು ಕ್ಷೇತ್ರಕಾರ್ಯದ ಮೂಲಕ ಗುಣಮಟ್ಟದ ಸಂಶೋಧನೆ ಅತ್ಯವಶ್ಯವಾಗಿದ್ದು, ಆ ನಿಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಎಂ.ಫಿಲ್. ಹಾಗೂ ಪಿಎಚ್.ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸುತ್ತಿದೆ. ಮುಂದೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಹಾಗೂ ವಿಶ್ವವಿದ್ಯಾಲಯ ನೀಡುವ ವಿದ್ಯಾವೇತನದ ಸಹಾಯದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವು ದೊರೆಯಲಿದೆ.
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಧಾರವಾಡದಲ್ಲಿರುವ ಮಹಂತರಾ ಎಜ್ಯುಕೇಷನಲ್ ಟ್ರಸ್ಟ್ ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಮಹಂತರಾ ಎಜ್ಯುಕೇಷನಲ್ ಟ್ರಸ್ಟ್
ಸುಜಾತಾ ಕಾಂಪ್ಲೆಕ್ಸ್, ಪಿ.ಬಿ.ರಸ್ತೆ
ಧಾರವಾಡ – 580 001
ಕಛೇರಿ ದೂರವಾಣಿ ಸಂಖ್ಯೆ: 7760973656
ಧಾರವಾಡದಲ್ಲಿರುವ ಕರ್ನಾಟಕ ಕರೆಸ್ಪಾಂಡೆನ್ಸ್ ಎಜ್ಯುಕೇಶನ್ ಫೌಂಡೇಶನ್ ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕರ್ನಾಟಕ ಕರೆಸ್ಪಾಂಡೆನ್ಸ್ ಎಜ್ಯುಕೇಶನ್ ಫೌಂಡೇಶನ್)
ಐ.ಸಿ.ಐ.ಸಿ.ಐ ಬ್ಯಾಂಕ್ ಹತ್ತಿರ, ಜ್ಯೂಬ್ಲಿ ವೃತ್ತ
ಧಾರವಾಡ – 580 001
ಕಛೇರಿ ದೂರವಾಣಿ ಸಂಖ್ಯೆ: 9663710694
ಲಿಂಗಸಗೂರುನಲ್ಲಿರುವ ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ)
ಎಸ್.ಬಿ.ಎಂ. ಬ್ಯಾಂಕ್ ಹತ್ತಿರ, ಮುದಗಲ್ ರಸ್ತೆ
ಲಿಂಗಸಗೂರು – 584 122
ಕಛೇರಿ ದೂರವಾಣಿ ಸಂಖ್ಯೆ: 9916367609
ರಾಯಚೂರುನಲ್ಲಿರುವ ಸುವರ್ಣ ಕರ್ನಾಟಕ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಸುವರ್ಣ ಕರ್ನಾಟಕ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ))
ಪದನಾಳ ಬಿಲ್ಡಿಂಗ್ ಹತ್ತಿರ, ಮುದಗಲ್ ರಸ್ತೆ
ರಾಯಚೂರು, ರಾಯಚೂರು ಜಿಲ್ಲೆ
ಕಛೇರಿ ದೂರವಾಣಿ ಸಂಖ್ಯೆ: 7760963075
ಸಿಂದಗಿನಲ್ಲಿರುವ ಜೈ ಭಾರತ ಎಜ್ಯುಕೇಶನ್ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
1ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಜೈ ಭಾರತ ಎಜ್ಯುಕೇಶನ್ ಟ್ರಸ್ಟ್ (ರಿ)
ಬಸವೇಶ್ವರ ವೃತ್ತದ ಹತ್ತಿರ
ಬಿಜಾಪುರ ರಸ್ತೆ, ಸಿಂದಗಿ
ಕಛೇರಿ ದೂರವಾಣಿ ಸಂಖ್ಯೆ: 99000 49080
ಬಿಜಾಪುರದಲ್ಲಿರುವ ನವೋದಯ ವಿಕಾಸ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ನವೋದಯ ವಿಕಾಸ ಟ್ರಸ್ಟ್ (ರಿ)
ಗಾಂಧಿಚೌಕ ಹತ್ತಿರ
ಬಿಜಾಪುರ
ಕಛೇರಿ ದೂರವಾಣಿ ಸಂಖ್ಯೆ: 7760977614
ಗದಗನಲ್ಲಿರುವ ಅಖಿಲ ಭಾರತ ಪಾರಂಪರಿಕ ವೈದ್ಯ ಪರಿಷತ್ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಅಖಿಲ ಭಾರತ ಪಾರಂಪರಿಕ ವೈದ್ಯ ಪರಿಷತ್ ಟ್ರಸ್ಟ್ (ರಿ)
ಮುಳಗುಂದ ಕಂಪೌಂಡ್
ವಕೀಲ ಚಾಳ
ಗದಗ – 582101, ಗದಗ ಜಿಲ್ಲೆ
ಕಛೇರಿ ದೂರವಾಣಿ ಸಂಖ್ಯೆ: 9741908226
ಹರಪನಹಳ್ಳಿಯಲ್ಲಿರುವ ಸಂಪ್ರದಾಯ ಟ್ರಸ್ಟ್ (ರಿ) ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಸಂಪ್ರದಾಯ ಟ್ರಸ್ಟ್ (ರಿ) ಹರಪನಹಳ್ಳಿ
ನಂ. 841, 12ನೇ ವಾರ್ಡ್
ಉಪ್ಪರಗೇರೆ, ಹಡಗಲಿ ರಸ್ತೆ
ಹರಪನಹಳ್ಳಿ – 583131, ದಾವಣಗೆರೆ ಜಿಲ್ಲೆ
ಕಛೇರಿ ದೂರವಾಣಿ ಸಂಖ್ಯೆ: 9449434664
ನಾವದಗಿಯಲ್ಲಿರುವ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ನಾವದಗಿ (ರಿ)
ಗುಲಬರ್ಗಾ – ಬೀದರ್ ಹೆದ್ದಾರಿ
ನಾವದಗಿ – 585313
ಗುಲಬರ್ಗಾ ತಾಲೂಕು / ಜಿಲ್ಲೆ
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ವಿಜಯಿ ಕರ್ನಾಟಕ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ)
ಅಂತರ್ಗತ ವಿಜಯಿ ಕರ್ನಾಟಕ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ
ಬ್ಲಾಕ್ ನಂ. 28, ಪ್ಲಾಟ್ ನಂ. 42
ಹೊಯ್ಸಳನಗರ, ಧಾರವಾಡ
ಕಛೇರಿ ದೂರವಾಣಿ ಸಂಖ್ಯೆ: 9663710694 / 9900049083
ಮಂಡ್ಯದಲ್ಲಿರುವ ಕರ್ನಾಟಕ ಸಂಘ (ರಿ) ದಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕರ್ನಾಟಕ ಸಂಘ (ರಿ)
ಎಂ.ಎಲ್. ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರ
ಗುರುಭವನದ ಹಿಂಭಾಗ, ಆರ್.ಪಿ. ರಸ್ತೆ
ಮಂಡ್ಯ - 571 401
ಕಛೇರಿ ದೂರವಾಣಿ ಸಂಖ್ಯೆ: 08232-227755
ಸಂಯೋಜಕರು: ಪ್ರೊ. ಜಯಪ್ರಕಾಶ ಗೌಡ (94481 94456)
ರಾಮನಗರದಲ್ಲಿರುವ ಕರ್ನಾಟಕ ಸಾಹಸ ಕಲಾ ಅಕಾಡೆಮಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕರ್ನಾಟಕ ಸಾಹಸ ಕಲಾ ಅಕಾಡೆಮಿ
ಶ್ರೀ ರಾಮದೇವರ ಬೆಟ್ಟದರಸ್ತೆ
ಎಂ.ಎಂ.ಯು. ಕಾಲೇಜು ಹತ್ತಿರ
ರಾಮನಗರ - 562 159
ದೂರವಾಣಿ ಸಂಖ್ಯೆ: 080-27271022
ಸಂಯೋಜಕರು: ಶ್ರೀ ಹಾಸನ ರಘು (94835 01854)
ಕೊಪ್ಪಳದಲ್ಲಿರುವ ಎಸ್.ಜೆ.ಜಿ. ಆಯುರ್ವೇದಿಕ್ ವೈದ್ಯಕೀಯ ಕಾಲೇಜು ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣದ ಮಾಹಿತಿ
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಎಸ್.ಜೆ.ಜಿ. ಆಯುರ್ವೇದಿಕ್ ವೈದ್ಯಕೀಯ ಕಾಲೇಜು
ಪಿ.ಜಿ. ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಕೊಪ್ಪಳ - 583 231
ದೂರವಾಣಿ ಸಂಖ್ಯೆ: 08539-222517
ಸಂಯೋಜಕರು: ಪ್ರಾಂಶುಪಾಲರು, ಎಸ್.ಜೆ.ಜಿ. ಆಯುರ್ವೇದಿಕ್ ವೈದ್ಯಕೀಯ ಕಾಲೇಜು
ಪೊನ್ನಂಪೇಟೆಯಲ್ಲಿರುವ ಕೊಡವ ಸಮಾಜ ಎಜುಕೇಷನ್ ಕೌನ್ಸಿಲ್ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣದ ಮಾಹಿತಿ
ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕೊಡವ ಸಮಾಜ ಎಜುಕೇಷನ್ ಕೌನ್ಸಿಲ್
ಅಪ್ಪಚ್ಚುಕವಿ ವಿದ್ಯಾಲಯ,
ಪೊನ್ನಂಪೇಟೆ - 571 216
ದೂರವಾಣಿ ಸಂಖ್ಯೆ: 08274-249748 / 93432 57440
ಸಂಯೋಜಕರು: ಅಧ್ಯಕ್ಷರು, ಕೊಡವ ಸಮಾಜ ಎಜುಕೇಷನ್ ಕೌನ್ಸಿಲ್, ಅಪ್ಪಚ್ಚುಕವಿ ವಿದ್ಯಾಲಯ, ಪೊನ್ನಂಪೇಟೆ - 571 216
ಜಾನಪದ ವಿಶ್ವವಿದ್ಯಾಲಯದ ಈ ಕೆಳಗಿನ ಡಿಪ್ಲೊಮಾ / ಸರ್ಟಿಫಿಕೇಟ್ ಕೋರ್ಸ್ ಗಳನ್ನು ಶಿಗ್ಗಾವಿಯ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಶ್ರೀಮತಿ ಗೌರಮ್ಮ ಬಸವಣ್ಣೆಪ್ಪ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ನಡೆಸಲಾಗುತ್ತದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಡೆಸಲು ಸಹಕಾರ ನೀಡಿರುವ ಕಾಲೇಜುಗಳು
ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಶಿಗ್ಗಾವಿ, ಹಾವೇರಿ ಜಿಲ್ಲೆ
ಸಂಯೋಜಕರು: ಡಾ. ಶ್ರೀಶೈಲ ಹುದ್ದಾರ (80507 76670)
ಆ) ಶ್ರೀಮತಿ ಗೌರಮ್ಮ ಬಸವಣ್ಣೆಪ್ಪ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಗ್ಗಾವಿ, ಹಾವೇರಿ ಜಿಲ್ಲೆ
ಸಂಯೋಜಕರು: ಪ್ರೊ. ಬಿ.ಟಿ. ಲಮಾಣಿ, ಪ್ರಾಂಶುಪಾಲರು (08378-217163/ 9844176014)
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಹಣತೆ
ಬದುಕುವ ಸಮುದಾಯಗಳಿಗೆಲ್ಲಾ ಒಂದೊಂದು ಸಂಸ್ಕೃತಿ ಇದೆ. ಮೂಲತಃ ಪ್ರತಿ ಸಮುದಾಯಕ್ಕೂ ತನ್ನ ಸಂಸ್ಕೃತಿ ಕುರಿತು ಹೆಮ್ಮೆ ಅಭಿಮಾನ ಇದ್ದೇ ಇರುತ್ತದೆ. ಇನ್ನೊಂದು ಸಮುದಾಯದ ಜೊತೆ ಮುಖಾಮುಖಿಯಾದಾಗ ಆ ಸಮುದಾಯಗಳು ಪರಸ್ಪರ ಗೌರವಾದರಗಳಿಂದ ಒಂದನ್ನೊಂದು ಸ್ವೀಕರಿಸುವ ಮನೋಭಾವ ಇದ್ದಲ್ಲಿ ಅದು ಪರಸ್ಪರ ಅಭಿವೃದ್ಧಿಗೂ ಕಾರಣವಾಗುತ್ತದೆ. ಜಾಗತೀಕರಣದ ನೆಲೆಗಟ್ಟಿನಲ್ಲಿ ವಿಶ್ವದ ಸಮುದಾಯಗಳೆಲ್ಲಾ ಒಂದೇ ವೇದಿಕೆಯಲ್ಲಿ ಪೈಪೋಟಿಗೆ ಇಳಿಯುತ್ತಿವೆ. ತಾನು ಹೆಚ್ಚು ಎಂಬುದಕ್ಕಿಂತ ತನ್ನಲ್ಲಿರುವ ಉಪಯುಕ್ತತೆ ಎಷ್ಟು ಎಂದು ಸ್ಪಷ್ಟಪಡಿಸುವ ತಾಂತ್ರಿಕ ಕೌಶಲ್ಯಕ್ಕೆ ಇಂದು ಹೆಚ್ಚಿನ ಮಾನ್ಯತೆ ದೊರಕುತ್ತಿದೆ. ಹೀಗಾಗಿ ಪ್ರತಿ ಸಮುದಾಯವೂ ತನ್ನಲ್ಲಿರುವ ಪಾರಂಪರಿಕ ಜ್ಞಾನ ಜಗತ್ತಿನ ಸಾರವನ್ನು ತಾನೇ ಅರ್ಥಮಾಡಿಕೊಳ್ಳುವ ದಿಕ್ಕಿನಲ್ಲಿ ಹೆಜ್ಜೆ ಇಡಲಾರಂಭಿಸಿದೆ. ಅದೇ ಜಾನಪದದ ಶೋಧನೆ. ಇಂದಿನ ಜಾಗತೀಕರಣ ಹಾಗೂ ಅದಕ್ಕೆ ಪೂರ್ವಭಾವಿಯಾಗಿ ವಿಶ್ವವನ್ನು ವ್ಯಾಪಿಸಿಕೊಂಡ ಕೈಗಾರಿಕೀಕರಣ ಗ್ರಾಮಸಂಸ್ಕೃತಿಯನ್ನು ಬದಿಗೊತ್ತಿ ನಗರ ಸಂಸ್ಕೃತಿ ಹಾಗೂ ಏಕಮುಖ ಗ್ರಾಹಕ ಮಾರುಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡಿವೆ. ಮಹಾಪ್ರವಾಹದಂತೆ ಹರಿದು ಬರುತ್ತಿರುವ ಜಾಗತೀಕರಣದ ಪರಿಣಾಮಗಳಲ್ಲಿ ಗ್ರಾಮೀಣ ಜನರಿಗೆ ಒದಗುವ ಅನುಕೂಲಕ್ಕಿಂತ ದುಷ್ಪರಿಣಾಮಗಳೇ ಹೆಚ್ಚು ಎಂಬುದು ನಿಧಾನವಾಗಿ ನಮ್ಮ ವಿಚಾರವಂತರು ಅರ್ಥಮಾಡಿಕೊಳ್ಳತೊಡಗಿದ್ದು ಜಾನಪದವು ಈ ಜಾಗತೀಕರಣದ ಪರಿಣಾಮಕ್ಕೆ ಸೂಕ್ತ ರೀತಿಯಲ್ಲಿ ಮುಖಾಮುಖಿಯಾಗಿ ನಿಲ್ಲುವುದೇ ಎಂದು ಕಾತರದಿಂದ ಕಾಯುತ್ತಿದ್ದಾರೆ. ಅಂತಹ ಹೋರಾಟದ ಮುನ್ಸೂಚನೆ ಹಾಗೂ ಅದರಿಂದ ಆಗುವ ಅದ್ಭುತ ಪರಿಣಾಮಗಳ ನಿರೀಕ್ಷೆಯಲ್ಲಿರುವವರು ಅಗತ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಜಾನಪದಕ್ಕಿರುವ ಅಂತಃಸ್ಸತ್ವ ಮತ್ತು ಆಂತರಿಕವಾಗಿ ಮೈದುಂಬಿಕೊಂಡಿರುವ ಶಕ್ತಿ. ಜಾನಪದ ಎಂದೂ ಆಧುನೀಕರಣಕ್ಕೆ, ಕೈಗಾರಿಕೀಕರಣಕ್ಕೆ, ಜಾಗತೀಕರಣಕ್ಕೆ ಪ್ರತಿರೋಧವೊಡ್ಡಿ ಅದನ್ನು ಹೊಸಕಿ ಹಾಕಿಬಿಡುವುದಿಲ್ಲ. ಅಂದ ಮಾತ್ರಕ್ಕೆ ಅದೆಲ್ಲದರ ಪರಿಣಾಮಕ್ಕೆ ಪಕ್ಕಾಗಿ ತನ್ನತನವನ್ನೇ ಕಳೆದುಕೊಳ್ಳುತ್ತಾ ನಿಸ್ತೇಜವಾಗುವುದೂ ಇಲ್ಲ. ವಿದ್ಯುತ್ ಚಾಲಿತ ಯಂತ್ರದಿಂದ ಕೆಲಸ ಮಾಡುವ ಫ್ಲೋರ್ ಮಿಲ್ ವಿದ್ಯುತ್ ಕೊರತೆಯಿಂದ ನಿಂತುಬಿಟ್ಟಿತು ಎಂದರೆ ಮರುಕ್ಷಣವೇ ಕೇವಲ ರಟ್ಟೆಯ ಬಲವನ್ನೇ ನಂಬಿ ಸುತ್ತುವ ಬೀಸುವ ಕಲ್ಲು ತನ್ನ ನಿರಂತರ ಸೇವೆ ಆರಂಭಿಸಿಬಿಡುತ್ತದೆ. ಕಾಸಿನ ಕೊರತೆ ಕಾಡದಂತೆ ಹೊತ್ತಿಗೊಂದಿಷ್ಟು ಕೂಳು, ಖಾಯಿಲೆಗೊಂದಿಷ್ಟು ಮದ್ದು ಜಾನಪದದಲ್ಲಿ ಸದಾ ಲಭ್ಯ. ಆದ್ದರಿಂದಲೇ ಅದರ ಒಡಲಲ್ಲಿ ಅಡಗಿರುವ ಜ್ಞಾನದ ಶೋಧ ಅತಿಮುಖ್ಯ. ಸಂಸ್ಕೃತಿಯ ಹಿರಿಮೆ ಅರಿಯುವ ಮೂಲಕ ಸಮುದಾಯಗಳ ನಡುವಿನ ಸಾಮರಸ್ಯ ಹೆಚ್ಚುತ್ತದೆ. ಪ್ರಖರವಾಗಿ ಬೆಳಗುವ ವಿದ್ಯುತ್ ದೀಪಕ್ಕೆ ಸಂವಾದಿಯಾಗಿ ಏನನ್ನೋ ಒದಗಿಸಿಬಿಡುತ್ತೇನೆ ಎಂಬ ಹುಂಬ ಹೋರಾಟಕ್ಕೆ ಜಾನಪದ ಇಳಿಯುವುದಿಲ್ಲ. ಬದಲಾಗಿ ಪ್ರಖರ ವಿದ್ಯುತ್ ಕೈಕೊಟ್ಟಾಗ ಜಗವೆಲ್ಲ ಕತ್ತಲಿನಲ್ಲಿ ಮುಳುಗಿದಾಗ ಯಾವ ಗಾಬರಿಗೂ ಆಸ್ಪದವಿಲ್ಲದಂತೆ ಬೆಳಗುವ ಹಣತೆ ಸುತ್ತಲಿನ ಕತ್ತಲನ್ನು ಒದ್ದೋಡಿಸುತ್ತದೆ. ಇವೆಲ್ಲಕ್ಕೆ ಇಂಬು ನೀಡುವ ಸಲುವಾಗಿ ಜನಪದರ ಸೊಬಗಿನ ಸಂಸ್ಕೃತಿಯ ಅಂತಃಶಕ್ತಿ ಅರಿಯುವ ಜಾನಪದ ಸಂಶೋಧನೆ, ಶಿಕ್ಷಣ ಹಾಗೂ ಅಭಿವೃದ್ಧಿಯ ಕನಸುಗಳನ್ನು ಹೊತ್ತ ಕರ್ನಾಟಕ ಜಾನಪದವಿಶ್ವವಿದ್ಯಾಲಯ ತನ್ನ ಆಂತರ್ಯದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಗಳ ಮುಖವಾಣಿಯಾಗಿ ಹೊರಬರುತ್ತಿರುವ ಈ ಕರ್ನಾಟಕ ಜಾನಪದವಿಶ್ವವಿದ್ಯಾಲಯದ ವಾರ್ತಾ ಪತ್ರಕ್ಕೆ 'ಹಣತೆ' ಎಂಬ ಹೆಸರನ್ನು ಜನಪದರ ಅಂತಃಸ್ಸತ್ವ ಹಾಗೂ ಜ್ಞಾನದ ಸಂಕೇತವಾಗಿ ಆರಿಸಿಕೊಂಡಿದ್ದೇವೆ. ವಿಶ್ವವಿದ್ಯಾಲಯದ ಒಳಗಿನ ಚಟುವಟಿಕೆಗಳನ್ನು ಹೊರಜಗತ್ತಿನ ಆತ್ಮೀಯರಿಗೆ ಪ್ರತಿಫಲಿಸಿ ತೋರಿಸುವ ದರ್ಪಣವಾಗಿ ಈ ವಾರ್ತಾಪತ್ರ ಯಶಸ್ವಿಯಾಗಿ ಸಾಫಲ್ಯತೆ ಪಡೆಯುತ್ತದೆ ಎಂದು ಆಶಿಸುತ್ತೇವೆ. ಮುಕ್ಕೋಟಿ ದೇವರನ್ನು ಸದಾ ನೆನೆಯುತ್ತ ತಮ್ಮ ದೈನಂದಿನ ನೋವು ನಲಿವುಗಳನ್ನು ಮರೆಯುತ್ತ ದೇಶದ ಸಂಸ್ಕೃತಿಯ ಹಿರಿಮೆ ಹೆಚ್ಚಿಸುತ್ತಿರುವ ಕರ್ನಾಟಕದ ಜನಪದರ ಪದತಳದಲ್ಲಿ ವಂದಿಸುತ್ತ ಜನಪದ ಕಲೆಗಾಗಿ ಜೀವ ತೇಯುವವರಿಗೆ ಈ ಮೊದಲ ಆವೃತ್ತಿಯನ್ನು ಅರ್ಪಿಸುತ್ತಿದ್ದೇವೆ.
ಕೃತಿಗಳು | ಲೇಖಕರು / ಸಂಪಾದಕರು |
---|---|
ಇಂದಿನ ಕನಸು ನಾಳಿನ ಕನಸು | ಸಂ. ಪ್ರೊ. ಅಂಬಳಿಕೆ ಹಿರಿಯಣ್ಣ |
ಜಾನಪದ ವರ್ಷ-2011 | ಸಂ. ಡಾ.ಎಸ್.ಪಿ. ಪದ್ಮಪ್ರಸಾದ್ |
ಜಾನಪದ ವಸ್ತುಕೋಶ | ಸಂ: ಪ್ರೊ. ಸ. ಚಿ. ರಮೇಶ |
ಕೇರಳದ ಜನಪದವೀರ ತಚ್ಚೋಳಿ ಒದೇನನ್ | ಡಾ. ಕೆ. ಕಮಲಾಕ್ಷ |
ಕಾಡುಗೊಲ್ಲರ ಕೋಲಾಟದ ಪದಗಳು | ಸಂ: ಎನ್. ಮೋಹನಕುಮಾರ್ |
ತುಳುನಾಡಿನ ಜನಪದ ಕಥೆಗಳು | ಸಂ: ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ |
ಕರ್ನಾಟಕ ಸಂಶೋಧನಾ ಜಾನಪದ | ಸಂ: ಪ್ರೊ. ಎ.ವಿ. ನಾವಡ |
ಮಲೆನಾಡ ನುಡಿಕೋಶ | ಸಂ: ಎಸ್.ಡಿ. ವೇಣಾಕ್ಷಿ |
ಬುರ್ರಕಥಾ ಜಯಮ್ಮ | ಡಾ. ಕೆ. ಪ್ರೇಮಕುಮಾರ |
ಗೊಂಬೇಗೌಡರ ರಾಮನಗೌಡರು | ಡಾ. ಚಂದ್ರಪ್ಪ ಎಸ್. ಸೊಬಟಿ |
ನಮ್ಮ ಪರಿಸರದ ಲಂಬಾಣಿಗರು | ಡಾ. ಮಲ್ಲಿಕಾರ್ಜುನ ಕುಂಬಾರ |
ದೇಶೀಯ ಕೃಷಿ ಹತೋಟಿ ಮತ್ತು ಸಂರಕ್ಷಣಾ ಕ್ರಮಗಳು | ಸಂ: ಪ್ರೊ. ಪ್ರಕಾಶ ಕಮ್ಮರಡಿ |
ನಮ್ಮ ಗಿಡಮರಬಳ್ಳಿಗಳು | ಡಾ. ಶಾಂತಿ ನಾಯಕ |
ಉತ್ತರ ಕನ್ನಡದ ಕರಾವಳಿ ಜನಪದ ಕತೆಗಳು | ಸಂ: ಡಾ. ಶಾಂತಿ ನಾಯಕ |
ಹುಮಾಯೂನ್ ಹರಲಾಪುರ | ಡಾ. ವೃಷಭಕುಮಾರ್ |
ಡಾ. ಪಿ. ಕೆ. ರಾಜಶೇಖರ್ | ಸಂಗಮೇಶ್ ಎಸ್. ಗಣಿ |
ಅಪ್ಪಗೆರೆ ತಿಮ್ಮರಾಜು | ಎಂ.ಬಿ. ಶ್ವೇತಾ |
ಕಾಡುಗೊಲ್ಲರ ಬೆಡಗಿನ ಪದಗಳು | ಸಂ: ಎಂ.ಬಿ. ಶ್ವೇತಾ ಹಾಗೂ ಎನ್. ಮೋಹನಕುಮಾರ್ |
ನೆಲದ ನೆನಪು | ಡಾ. ಜಯಪ್ರಕಾಸ್ ಶೆಟ್ಟಿ ಹೆಚ್ ಹಾಗೂ ಡಾ. ಚಿಕ್ಕಮಗಳೂರು ಗಣೇಶ |
ಜಾನಪದ ವರ್ಷ -2012 | ಸಂ: ಡಾ. ಕೆ. ವಿ. ಮುದ್ದವೀರಪ್ಪ |
ದಕ್ಷಿಣ ಭಾರತೀಯ ದೇಶೀ ಕೃಷಿವಿಜ್ಞಾನ ಕೋಶ (ಸಂಪುಟ 1 & 2) | ಪ್ರ.ಸಂ: ಪ್ರೊ. ಅಂಬಳಿಕೆ ಹಿರಿಯಣ್ಣ |
ವಿಸ್ತೃತ ಜಾನಪದ ಗ್ರಂಥಸೂಚಿ | ಪ್ರ.ಸಂ: ಪ್ರೊ. ಅಂಬಳಿಕೆ ಹಿರಿಯಣ್ಣ |
ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಪಾಡ್ದನ | ಸಂ: ಡಾ. ಇಂದಿರಾ ಹೆಗ್ಗಡೆ |
ನಾಡವರ ಜಾನಪದ ತವನಿಧಿ | ಪ್ರೊ. ಎನ್. ಆರ್. ನಾಯಕ |
ತಾತ್ಯಾ-ಬಾಪು ಅವರ ಲಾವಣಿಗಳು | ಸಂ: ಡಾ. ಹರಿಲಾಲ ಪವಾರ |
ಪೂಜಾರಿ ಶಿವಣ್ಣ ಹೇಳಿದ ಜುಂಜಪ್ಪ ಮಹಾಕಾವ್ಯ | ಸಂ: ಪ್ರೊ. ತೀ.ನಂ. ಶಂಕರನಾರಾಯಣ |
ಬೆಳಗಲ್ಲು ವೀರಣ್ಣ | ಡಾ. ಎಂ.ಎನ್. ವೆಂಕಟೇಶ |
ಮಂಜಮ್ಮ ಜೋಗತಿ | ಡಾ. ಚಂದ್ರಪ್ಪ ಸೊಬಟಿ |
ಮಂಟೇಸ್ವಾಮಿ ಎಪಿಕ್ ಟ್ರದಿತಿಒನ್ ಆಫ್ ಸೌತ್ ಕರ್ನಾಟಕ | ಪ್ರೊಫ್ . ಅಮ್ಬಲಿಕೆ ಹಿರಿಯಣ್ಣ |
ದಕ್ಷಿಣ ಅಭಿನಯ ಸಿದ್ಧಾಂತ | ಡಾಕ್ಟರ್ . ಗುರು ರಾವ್ ಬಾಪಟ್ |
ದಿ ಬಯಲತಸ್ ಆಫ್ ನಾರ್ತ್ ಕರ್ನಾಟಕ | ಡಾಕ್ಟರ್. ಬಸವರಾಜ ಮಲಷೆತ್ತಿ ಅನು : ಡಾಕ್ಟರ್ ಪಾರ್ವತಿ ಜಿ . ಐತ್ಹಲ್ |
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ನಮ್ಮ ನಾಡಿನ ದೇಸೀ ಪರಿಸರವನ್ನು ಅದರ ಮೂಲ ಆಕರಗಳೊಂದಿಗೆ ಸಂಗ್ರಹಿಸಿ, ದಾಖಲಿಸಿ ಸಂರಕ್ಷಿಸುವ ಉದ್ದೇಶವೇ ಗ್ರಾಮ ಚರಿತ್ರೆ ಕೋಶ ಯೋಜನೆ. ಈ ಯೋಜನೆಯ ವ್ಯಾಪ್ತಿಯೊಳಗೆ ದೇಸಿ ಪರಿಸರದಲ್ಲಿ ಬರುವ ಗ್ರಾಮಗಳು ನಮ್ಮ ಸಾಂಸ್ಕೃತಿಕ ಕಣಜಗಳು. ಅಲ್ಲಿನ ಜೀವಸಂಕುಲ, ಪ್ರಾಕೃತಿಕ ಬದುಕಿನ ಜೀವ ದ್ರವ್ಯಗಳು, ಭಾಷಾ ಬಳಕೆ ಮತ್ತು ಅಭಿವೃದ್ಧಿಯ ವಿಶಿಷ್ಟ ರೂಪಗಳು, ಎಲ್ಲವೂ ಮಹತ್ವದ ಸಂಗತಿಗಳೇ ಆಗಿರುತ್ತವೆ. ಈ ನಾಡಿನ ಗ್ರಾಮಗಳಲ್ಲಿ ಇತಿಹಾಸವಿದೆ, ಸಂಪ್ರದಾಯ-ಧರ್ಮಗಳಿವೆ, ಮನೆ-ಮಠಗಳಿವೆ, ಮೌಲ್ಯ-ಮೌಢ್ಯಗಳಿವೆ, ಶಿಕ್ಷಣ-ಆಡಳಿತಗಳ ಚರಿತ್ರೆಗಳಿವೆ. ಈ ಎಲ್ಲ ಹಳತು-ಹೊಸತುಗಳ ಸಮ್ಮಿಶ್ರಣದಿಂದ ನಮ್ಮ ಗ್ರಾಮಗಳು ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿವೆ. ಇವು ಕೇವಲ ಜನ ವಸತಿಗಳಲ್ಲ; ಜನಸಂಸ್ಕೃತಿಯ ವೈವಿಧ್ಯಪೂರ್ಣವಾದ ಘಟಕಗಳು ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಹಳ್ಳಿಗಳ ಸೊಗಡಿನ, ಸಾಂಸ್ಕೃತಿಕತನವನ್ನು ಸಂಗ್ರಹಿಸಿಡದೆ ಹೋದರೆ, ಉಳಿಸಿಕೊಳ್ಳದೆ ಹೋದರೆ ಭಾಷಾ ಬಳಕೆಯಲ್ಲಿ ಆಗಿರುವ ಕಾಲಮಾನದ ವೈಶಿಷ್ಟ್ಯ ಮತ್ತು ಪ್ರಯೋಗಶೀಲತೆಗಳನ್ನು ಗುರುತಿಸದೆ ಹೋದರೆ ನಮ್ಮ ನಾಡ ಬದುಕಿನ ಅಂತಃಸ್ಸತ್ವವನ್ನೇ ಕಳೆದುಕೊಂಡು ಬಿಡುತ್ತೇವೆ. ಮುಂದಿನ ಪೀಳಿಗೆ ತನ್ನ ಮೂಲಸಂಸ್ಕೃತಿಯನ್ನೇ ಮರೆತು ಜಾಗತೀಕರಣದ ಮುಕ್ತ ಮಾರುಕಟ್ಟೆಯ ಅನ್ಯ ಸರಕನ್ನೇ ತನ್ನದೆಂದು ಭ್ರಮಿಸುವಂಥ ವ್ಯಕ್ತಿತ್ವ ನಾಶಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.
ಕರ್ನಾಟಕದಲ್ಲಿ ಸುಮಾರು 36,000 ಗ್ರಾಮಗಳಿವೆ. ಒಟ್ಟು 30 ಜಿಲ್ಲೆಗಳು, 175 ತಾಲ್ಲೂಕುಗಳಿವೆ. ಪ್ರತಿ ತಾಲ್ಲೂಕಿನಲ್ಲಿ ಸರಾಸರಿ 120 ಕ್ಕೂ ಹೆಚ್ಚು ಗ್ರಾಮಗಳಿವೆ. ಪ್ರತಿ ಗ್ರಾಮದ ಸಮಗ್ರ ಚರಿತ್ರೆಯನ್ನು ಪುಟ ಮಿತಿಯಲ್ಲಿ ಅಡಕಗೊಳಿಸಿ ತಾಲೂಕು ಗ್ರಾಮ ಚರಿತ್ರೆ ಕೈಪಿಡಿಯನ್ನು ಸಿದ್ಧಪಡಿಸುವುದು. ಅವುಗಳನ್ನು ಕ್ರೋಡೀಕರಿಸಿ ಸಂಪಾದಿಸಿ, ವಿಶ್ಲೇಷಿಸಿ ಜಿಲ್ಲಾ ಗ್ರಾಮ ಚರಿತ್ರೆ ಸಂಪುಟಗಳನ್ನು ಸಿದ್ಧಪಡಿಸುವುದು ಈ ಯೋಜನೆಯ ಉದ್ದೇಶ. ಈ ಯೋಜನೆಗೆ ಡಾ.ಎಂ.ಎಂ. ಕಲಬುರ್ಗಿ ಹಾಗೂ ಕಾ.ತ. ಚಿಕ್ಕಣ್ಣನವರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಿ ಅವರ ಮಾರ್ಗದರ್ಶನ - ಸಲಹೆಯಂತೆ ಪ್ರಶ್ನಾವಳಿಗಳನ್ನು ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯ ಗ್ರಾಮ ಸರ್ವೇಕ್ಷಣೆಯನ್ನು ಕೈಗೊಳ್ಳಲಾಗಿದೆ. ಈ ಜಿಲ್ಲೆಯ ಒಟ್ಟು 705 ಗ್ರಾಮಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿಡಲಾಗಿದೆ. ಅವುಗಳನ್ನು ಕೈಪಿಡಿ ರೂಪದಲ್ಲಿ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿ ನಾಡಿನ ಜನತೆಗೆ ಸಮರ್ಪಿಸುವ ಉದ್ದೇಶ ವಿಶ್ವವಿದ್ಯಾಲಯದ್ದಾಗಿದೆ.
ವಸ್ತುಸಂಗ್ರಹಾಲಯಗಳು ಮಾನವ ಬದುಕಿನ ಭೌತಿಕ ಸಾಕ್ಷಿರೂಪಗಳು ಹಾಗೂ ಪ್ರತೀಕಗಳು. ಮಾನವನು ಸಾಗಿ ಬಂದ ದಾರಿಯಲ್ಲಿ ಕಂಡುಕೊಂಡ ಜ್ಞಾನ-ವಿಜ್ಞಾನ ತಂತ್ರಜ್ಞಾನದ ಪ್ರಾತಿನಿಧಿಕ ರೂಪಗಳು. ಮಾನವನ ಅರಿವು ಸಾಗಿಬಂದ ಬೌದ್ಧಿಕ ಬೆಳವಣಿಗೆಯ ಜಾಡನ್ನು ಅಳೆಯಲು, ಅರಿಯಲು, ಅದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಅಗತ್ಯವಾಗಿ ಬೇಕಾಗಿರುವಂತಹದ್ದು ಆ ಪ್ರದೇಶದ ಆಕರ ಸಾಮಗ್ರಿಗಳು, ಸಾಧನ ಸಲಕರಣೆಗಳು, ಒಡವೆ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು, ಕೃಷಿ ಪರಿಕರಗಳು. ಅಲ್ಲದೆ ಇವು ಒಂದು ಕಾಲಘಟ್ಟದ, ಪ್ರದೇಶದ ಮಾನವನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನೇ ಬಿಂಬಿಸುತ್ತವೆ. ಈ ಮಹದುದ್ದೇಶದಿಂದ ಕರ್ನಾಟಕಜಾನಪದ ವಿಶ್ವವಿದ್ಯಾಲಯ 'ಗ್ರಾಮ ಕರ್ನಾಟಕ' ಎಂಬ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಸಂಶೋಧಕರು ರಾಜ್ಯದ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಅಮೂಲ್ಯ ಜನಪದ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ವಸ್ತುಗಳನ್ನು ವಿಶ್ವವಿದ್ಯಾಲಯದ ಸುಮಾರು ಹತ್ತು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಿಷ್ಟ ವಾಸ್ತುಶೈಲಿಯಲ್ಲಿ ರೂಪಿಸಿದ ಬಯಲು ಆಲಯದಲ್ಲಿ ಸಂಗ್ರಹಿಸಿ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ವಿದ್ವಾಂಸರಿಗೆ ಅಧ್ಯಯನಯೋಗ್ಯವಾಗಿ ಪ್ರದರ್ಶಿಸುವುದು ವಿಶ್ವವಿದ್ಯಾಲಯದ ಹಂಬಲ. ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯ ಏಳು ತಾಲೂಕುಗಳ ಒಟ್ಟು 705 ಗ್ರಾಮಗಳ ಸರ್ವೇಕ್ಷಣಾ ಕಾರ್ಯವನ್ನು ಮುಗಿಸಿ 5000 ಕ್ಕೂ ಹೆಚ್ಚು ಅಮೂಲ್ಯವಾದ ಜನಪದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಈ ಯೋಜನೆಯನ್ನು ಅವಿಘ್ನವಾಗಿ ನಡೆಸಿಕೊಂಡು ಹೋಗಬೇಕೆಂಬುದು ವಿಶ್ವವಿದ್ಯಾನಿಲಯದ ಹಂಬಲ.
ಪ್ರಕಟಣೆಗಳು ಒಂದು ವಿಶ್ವವಿದ್ಯಾಲಯದ ಹೃದಯದ ಭಾಷೆಯಿದ್ದಂತೆ. ಪ್ರತಿಯೊಂದು ವಿಶ್ವವಿದ್ಯಾಲಯ ಅದರದೇ ಆದ ಪ್ರಕಟಣಾ ವಿಭಾಗವನ್ನು ಹೊಂದುವುದು ಅವಶ್ಯ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇದೀಗ ತಾನೇ ಪ್ರಾರಂಭವಾಗಿದ್ದು ಪ್ರಾರಂಭಿಕ ಗ್ರಂಥವಾಗಿ 'ಇಂದಿನ ಕನಸು ನಾಳಿನ ನನಸು' ಎಂಬ ಪ್ರಸ್ತಾಪವನ್ನು ಪ್ರಕಟಿಸಿದೆ. ಇದರಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವಿವಿಧ ತಜ್ಞರ ವಿಚಾರಗಳು ಹಾಗೂ ಭಾವನೆಗಳನ್ನು ಸಂಗ್ರಹಿಸಿ ಅವುಗಳನ್ನು ಪರಿಶೀಲಿಸಿ ಉತ್ತಮವಾದ ವಿಚಾರಗಳನ್ನು ಒಳಗೊಂಡ ಸಂಪಾದನಾ ಗ್ರಂಥ ಇದಾಗಿದ್ದು ಇದು ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯ ಚಟುವಟಿಕೆಗಳು ಹಾಗೂ ನಡೆಯಬೇಕಾದ ದಾರಿಯ ಕೈ ದೀವಿಗೆಯಂತಿದೆ. ವಿಶ್ವವಿದ್ಯಾಲಯ 2012-13 ರ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕಾದ ತುಂಬ ದೀರ್ಘವಾದ ಪ್ರಕಟಣಾ ಯೋಜನೆಯನ್ನು ರೂಪಿಸಿದೆ.
ಕರ್ನಾಟಕ ಜಾನಪದ ಅಧ್ಯಯನ ನೆಲೆಯಲ್ಲಿ ಈಗಾಗಲೇ ಆಕರಗಳ ಸಂಗ್ರಹದ ಜೊತೆಜೊತೆಗೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿಷಯ ವಿಶ್ಲೇಷಣೆ ಕಾರ್ಯ ಕೂಡ ಸಾಕಷ್ಟು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ನೆಲೆಯಲ್ಲಿ ಪದಗಳಿಗೆ ವ್ಯಾಖ್ಯಾನ, ನಿರ್ವಚನಗಳು ರೂಪುಗೊಳ್ಳುತ್ತಿದ್ದು ವಿದ್ವಾಂಸರಿಗೆ ಅಗತ್ಯ ಪ್ರಮಾಣದಲ್ಲಿ ವಿವಿಧ ಪ್ರಾದೇಶಿಕ ಭಿನ್ನತೆಗಳ ಅರಿವನ್ನು ಗ್ರಹಿಸಲು ಸೂಕ್ತ ಅವಕಾಶವಾಗುತ್ತಿದೆ. ಆದರೆ ಜನಪದರಿಗೆ ತಮ್ಮ ದನಿ ಪದಗಳಲೋಕದಲ್ಲಿ ತಾವೇ ಸೃಷ್ಟಿಸಿಕೊಂಡ ಪದಗಳು ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನ ಅರ್ಥ ನೀಡಬಹುದು ಅಥವಾ ಅದೇ ವಸ್ತು ವಿಷಯಗಳಿಗೆ ಬೇರೆ ಬೇರೆ ಪದಗಳು ಇರಬಹುದು ಎಂಬುದು ಅನೇಕ ಬಾರಿ ಗ್ರಹಿಕೆಗೆ ಮೀರಿದ ಸಂಗತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಜ್ಞಾನವೈವಿಧ್ಯಕ್ಕೆ ಹಾಗೂ ದೇಸಿ ನುಡಿ ಸಂಪತ್ತನ್ನು ಕುರಿತ ಮಾಹಿತಿಗಾಗಿ ನಮ್ಮ ಜನಪದರು ಕೂಡ ಬಳಸಲಿಕ್ಕೆ ಯೋಗ್ಯವಾದ 'ಕನ್ನಡ ಜಾನಪದ ನಿಘಂಟು' ಯೋಜನೆಯನ್ನು ಸಿದ್ಧಪಡಿಸಲು ಯೋಜಿಸಲಾಗಿದೆ. ಇದು ಈಗಾಗಲೇ ಕರ್ನಾಟಕ ಜಾನಪದ ಅಕಾಡೆಮಿ ಕೈಗೊಂಡಿರುವ ನಿಘಂಟಿಗಿಂತ ಭಿನ್ನವಾಗಿರುತ್ತದೆ. ಮೂಲತಃ ಈ ನಿಘಂಟು ಕೇವಲ 'ಪದಕೋಶ'ವಾಗದೆ ಜನಪದರಜ್ಞಾನ ಜಗತ್ತಿನ ಅನಾವರಣಕ್ಕೆ ಅವಕಾಶ ಕಲ್ಪಿಸುವ ಪದಗಳ ವಿವರಣೆಯನ್ನು ಹೊಂದಿರುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವನ್ನು ನಿರೀಕ್ಷಿಸಲಾಗಿದೆ.
ಜನಪದ ಸಮಾಜದ ವಿವಿಧ ಆಯಾಮಗಳು ಹಾಗೂ ಅವುಗಳ ಮಜಲುಗಳನ್ನು ಅನುಶೋಧಿಸುವ, ಬೋಧಿಸುವ ಹಾಗೂ ಜನಪದಸಂಸ್ಕೃತಿ ಹಾಗೂ ನಾಗರಿಕತೆಯನ್ನು ಸಂರಕ್ಷಿಸುವ, ಸಂವರ್ಧಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಜಿಲ್ಲೆಗೊಂದರಂತೆ ಒಂದು ವರ್ಷದ ಅವಧಿಯ ಮೂವತ್ತು ಕಿರು ಸಂಶೋಧನಾ ಯೋಜನೆಗಳನ್ನು ಆರಂಭಿಸಲಾಗಿದೆ. ಈ ಯೋಜನೆಗೆ ಮೂವತ್ತು ಜನ ಪಿಎಚ್.ಡಿ ಪದವಿ ಹೊಂದಿರುವ ಸಂಶೋಧಕರನ್ನು ಸಂದರ್ಶನ ನಡೆಸಿ ಆಯ್ಕೆಮಾಡಲಾಗಿದೆ. ಪ್ರತಿಯೊಬ್ಬ ಸಂಶೋಧಕರು ಆಯಾ ಜಿಲ್ಲೆಯ ಜನಪದ ಸಾಹಿತ್ಯ, ಜನಪದ ಕಲೆ, ಕಲಾವಿದರು, ಜಾನಪದೀಯ ಸಾಂಸ್ಕೃತಿಕ ಕ್ಷೇತ್ರಗಳು, ವಿವಿಧ ಜ್ಞಾನಪರಂಪರೆಗಳ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಈ ಮುಂದಿನ ಪಟ್ಟಿಯಲ್ಲಿನ ಒಂದು ವಿಷಯದ ಬಗ್ಗೆ ತಲಸ್ಪರ್ಶಿ ಅಧ್ಯಯನ ಕೈಗೊಂಡು ಪ್ರಕಟಣೆಗೆ ಅಣಿ ಮಾಡಿಕೊಡುತ್ತಾರೆ. ಈ ಯೋಜನೆ ಆರಂಭಗೊಂಡ ಒಂದು ವರ್ಷದೊಳಗೆ ಮೂವತ್ತು ಮಹತ್ವದ ಕೃತಿಗಳು ಕನ್ನಡ ನಾಡಿನ ಜನರ ಕೈಸೇರಲಿವೆ.
ಮೂಲ :ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಜಂಗಮರೂಪದ ಭೌತಿಕ ಜ್ಞಾನಕಣಜವನ್ನಾಗಿ ಮಾರ್ಪಡಿಸುವ ಮತ್ತು ಸಂಶೋಧನಾತ್ಮಕ ನೆಲೆಗೆ ಮೂಲ ಮಾಧ್ಯಮವಾಗಿ ರೂಪಿಸುವ ಪ್ರಯತ್ನಗಳು ಈಗಾಗಲೇ ಯಶಸ್ವಿಯಾಗಿ ನಡೆದಿವೆ. ಮಾನವನ ತಿಳಿವಳಿಕೆ ಮತ್ತು ಅವನು ಸಾಗಿಬಂದ ದಾರಿಯ ಹೊಳಹುಗಳನ್ನು ಅರಿಯಲು, ಸಾಧನ-ಸಲಕರಣೆಗಳು ಮತ್ತು ಉಪಕರಣಗಳ ವೈಜ್ಞಾನಿಕ ಅಧ್ಯಯನದಿಂದ ಮಾತ್ರ ಸಾಧ್ಯ. ಅವುಗಳನ್ನು ಸಮಗ್ರವಾಗಿ ಸಂಗ್ರಹಿಸುವ, ವರ್ಗೀಕರಿಸುವ, ಅಧ್ಯಯನ- ಸಂಶೋಧನೆಗಳಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ, ಒಂದು ಕಾಲಘಟ್ಟದಲ್ಲಿದ್ದ ಜನ ಸಮುದಾಯದ ಬದುಕಿನ ಭೌತಿಕ ಸಾಕ್ಷಿರೂಪಗಳನ್ನು ಒಪ್ಪ-ಓರಣಗೊಳಿಸುವ ದೇಸಿ ವಿಶಿಷ್ಟ ವಸ್ತು ಸಂಗ್ರಹಾಲಯವು ರೂಪುಗೊಳ್ಳುತ್ತಿದೆ. ನಾಡಿನ ಸಮಗ್ರ ಭೌತಿಕ ಸಂಪನ್ಮೂಲದ ಸಂಗ್ರಹಣೆಯ ಉದ್ದೇಶ ಇಟ್ಟುಕೊಂಡು ವಿಶ್ವವಿದ್ಯಾಲಯ ಕಾರ್ಯೋನ್ಮುಖವಾಗಿದೆ. ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯ ಶಿಗ್ಗಾವಿ, ರಾಣೆಬೆನ್ನೂರು ಮತ್ತು ಹಾವೇರಿ ತಾಲ್ಲೂಕುಗಳಲ್ಲಿ ನಾಲ್ಕು ಜನ ಕ್ಷೇತ್ರ ಸಹಾಯಕರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ, ಈಗಾಗಲೇ 5000 ಕ್ಕೂ ಹೆಚ್ಚು ಅಮೂಲ್ಯವಾದ ಜನಪದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದು, ನಾಡಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ಯಶಸ್ವಿಯಾಗಿ ಮುಂದುವರೆದಿದೆ. ವಿಶ್ವವಿದ್ಯಾಲಯದ ಸುಮಾರು 10 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಿಷ್ಟ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಲಿರುವ ಆಕೃತಿಗಳು, ಜಾನಪದದ ಮಹತ್ವದ ವಸ್ತುಗಳನ್ನು ತಮ್ಮ ಮಡಿಲಲ್ಲಿ ಇಟ್ಟುಕೊಂಡು ಒಂದು ಆಕರ್ಷಣೆಯ ಕೇಂದ್ರವಾಗಿ ಸಂಗ್ರಹಾಲಯವು ರೂಪುಗೊಳ್ಳಬೇಕೆಂಬುದು ವಿಶ್ವದ್ಯಾಲಯದ ಕನಸು.
ವಸ್ತು ಸಂಗ್ರಹಾಲಯದ ಕಲ್ಪಿತ ಸಿದ್ಧಮಾದರಿಯನ್ನು ತೊಡೆದು ಹಾಕಿ, ಅದನ್ನೊಂದು ಅಧ್ಯಯನದ ಆಕರವಾಗಿ ರೂಪಿಸುವ ಉದ್ದೇಶ ಇರುವುದರಿಂದಲೇ ವ್ಯವಸ್ಥಿತ ವರ್ಗೀಕರಣದ ಮೂಲಕ ವೈಜ್ಞಾನಿಕತೆ ತರುವುದು ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯದ ಹಿಂದಿರುವ ಮುಖ್ಯ ಉದ್ದೇಶವಾಗಿದೆ. ಕೃಷಿ ಉಪಕರಣಗಳಾದ ಕೂರಿಗೆ ಬಟ್ಟಲು, ನೇಗಿಲು ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳು, ಪೂಜಾ ಸಾಮಗ್ರಿಗಳು, ವಸ್ತ್ರಾಭರಣಗಳು ಮತ್ತು ಕರಕುಶಲ ವಸ್ತುಗಳು - ಎಲ್ಲವೂ ಈ ರೀತಿ ಅನುಕ್ರಮವಾಗಿ ಜೋಡಿಸಲ್ಪಟ್ಟು ವಸ್ತುಸಂಗ್ರಹಾಲಯವು ನೋಡುಗರಿಗೆ ಆನಂದವನ್ನು, ಸಂಶೋಧಕರಿಗೆ ಆಕರವನ್ನು ಒದಗಿಸುತ್ತದೆ. ಜನಬದುಕಿನ ಜೊತೆ ನೇರ ಸಂಪರ್ಕ ಸಾಧಿಸುವ ಮೂಲಕ ಜನಮುಖಿ ವಿಶ್ವವಿದ್ಯಾಲಯ ಆಗಬೇಕೆಂಬ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೂಲ ಉದ್ದೇಶ ಸಾಕಾರಗೊಳ್ಳಲಿದೆ. ಕ್ಷೇತ್ರ ಸಹಾಯಕರು ವಸ್ತು ಸಂಗ್ರಹದ ನಿಮಿತ್ತ ಪ್ರತಿ ಹಳ್ಳಿಯ, ಪ್ರತಿಯೊಂದು ಮನೆಗೂ ಭೇಟಿಕೊಟ್ಟು ವಿಶ್ವವಿದ್ಯಾಲಯದ ಕಾರ್ಯೋದ್ದೇಶವನ್ನು ಮನವರಿಕೆ ಮಾಡಿ ಕೊಡುವ ಮೂಲಕ ಅದು ಸಾಧ್ಯವಾಗುತ್ತಿದೆ. ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯದ ಈ ಯೋಜನೆ ಜಾನಪದ ವಿಶ್ವವಿದ್ಯಾಲಯದ ಒಂದು ಮಾದರಿ ಕೆಲಸವಾಗಲಿದೆ. ಅದನ್ನು ರೂಪುಗೊಳಿಸಲು ಹೇಗೆ ಸಾಧ್ಯ ಎಂಬ ಚಿಂತನೆಯೊಂದಿಗೆ ವಸ್ತುಸಂಗ್ರಹಾಲಯವನ್ನು ವಿಶಿಷ್ಟವಾಗಿ ನಿರ್ಮಿಸಲಾಗುತ್ತಿದೆ. ವಸ್ತು ಸಂಗ್ರಹಾಲಯವು ಪೂರ್ವಿಕರ ಜೀವನ ವಿಧಾನ, ಬಳಸುತ್ತಿದ್ದ ವಸ್ತುಗಳ ತಾಳಿಕೆ-ಬಾಳಿಕೆ, ಉಪಯುಕ್ತತೆ ಅದರ ಮಹತ್ವ ಮುಂತಾದ ಅಂಶಗಳ ಬಗ್ಗೆ ಜನರಲ್ಲಿ ಮರುಬಳಕೆಯ ಪ್ರಜ್ಞೆ ಚಿಗುರೊಡೆಯುವಂತೆ ಪ್ರೇರೇಪಿಸುವಂತಾಗಬೇಕು. ಸಂಗ್ರಹಿಸಲಾದ ವಸ್ತುಗಳನ್ನು ಅಂದವಾಗಿ ಜೋಡಿಸಿ ಪ್ರದರ್ಶನಕ್ಕಿಡಲಾಗುವುದಲ್ಲದೆ, ಗ್ರಾಮದ ಹೆಸರು, ವಸ್ತುವಿನ ಹೆಸರು ಮತ್ತು ಪ್ರಕಾರ, ನೀಡಿದವರ ವಿಳಾಸ, ವಸ್ತುವಿನ ಬಳಕೆಯ ಕಾಲ, ತಯಾರಿಕೆಯ ಮೂಲ, ಅದರ ಉಪಯುಕ್ತತೆ ಮತ್ತು ಮಹತ್ವ ಈ ಎಲ್ಲ ಸಂಗತಿಗಳನ್ನು ಲಿಖಿತ ರೂಪದಲ್ಲಿ ಕ್ಷೇತ್ರ ಸಹಾಯಕರು ದಾಖಲಿಸುತ್ತಾರೆ. ಇಂಗಳಾರ ಮರದಿಂದ ತಯಾರಿಸಲಾಗುವ ಹುಟ್ಟು ಎಂಬ ಉಪಕರಣವನ್ನು ಹುಗ್ಗಿ ತಯಾರಿಸಲು ಉಪಯೋಗಿಸುತ್ತಾರೆ. ಉದಾಹರಣೆಗೆ, ಇಂಗಳಾರ ಮರವು ಅಡುಗೆ ಕೆಡದಂತೆ ಮತ್ತು ರುಚಿ ಹೆಚ್ಚಿಸುವ ಗುಣ ಹೊಂದಿದೆ ಎಂಬುದೇ ಇದಕ್ಕೆ ಕಾರಣವಾಗಿದೆ. ಜೊತೆಗೆ ಪ್ರತಿ ವಸ್ತುಗಳ ಛಾಯಾಚಿತ್ರವನ್ನು ಬಿಡಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಹಿಂದಿನ ಕಾಲದಲ್ಲಿ ಬಳಕೆಯಾಗುತ್ತಿದ್ದ ವಸ್ತುಗಳ ಬಳಕೆ ಹಾಗೂ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಇದು ಜ್ಞಾನದ ವರ್ಗಾವಣೆಯ ಇನ್ನೊಂದು ಬಗೆಯೇ ಆಗಿದೆ. ಇಂತಹ ಕಾರ್ಯದಿಂದ ಪಾರಂಪರಿಕ ಜ್ಞಾನದ ಶೋಧ, ಅದರ ಮರುಬಳಕೆ, ಮಹತ್ವಗಳನ್ನು ಗುರುತಿಸಿದಂತಾಗುತ್ತದೆ. ಹೀಗಾಗಿ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಮೂಲ ಆಕರವಾಗಿ ಈ ವಸ್ತು ಸಂಗ್ರಹಾಲಯ ಸಹಕಾರಿಯಾಗುತ್ತದೆ. ಪೂರ್ವಜರು ಬಳಸುತ್ತಿದ್ದ ಸಾಧನ-ಸಲಕರಣೆಗಳು ಇವತ್ತಿನ ಕಾಲದಲ್ಲಿ ಯಥಾಸ್ಥಿತಿಯಲ್ಲಿ ಮರುಬಳಕೆಗೆ ಯೋಗ್ಯವೇ ಎಂದು ಪರಿಶೀಲಿಸಿ ಹಾಗಿಲ್ಲದಿದ್ದಲ್ಲಿ ಅದರ ಮೂಲ ಸ್ವರೂಪದಲ್ಲಿ ಬದಲಾವಣೆ ತಂದುಕೊಂಡಾದರೂ ಉಪಯೋಗಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಅರಿವು ಮೂಡಿಸಲು ವಸ್ತು ಸಂಗ್ರಹಾಲಯದಿಂದ ಸಾಧ್ಯವಾಗುತ್ತದೆ.
ಜಾನಪದೀಯ ಜ್ಞಾನದ ನೆಲೆಯಲ್ಲಿಯೇ ಕಡಿಮೆ ಖರ್ಚು, ಹೆಚ್ಚು ಬಾಳಿಕೆ ಮತ್ತು ಆರೋಗ್ಯ ಸುಧಾರಣೆ ಇವೆಲ್ಲವನ್ನೂ ಹಿಂದಿನ ಜನ ಕಂಡುಕೊಂಡಿದ್ದರು. ಆದರೆ ಇಂದು ಅದು ಕಷ್ಟಸಾಧ್ಯ. ಅವನ್ನು ಸರಳಗೊಳಿಸಿ, ಸಾಧ್ಯವಾಗಿಸಿಕೊಳ್ಳುವ ಜರೂರತ್ತು ನಮಗೆಲ್ಲ ಇದೆ. ಪ್ರಸ್ತುತ ಜಗತ್ತಿನ ಮಾರುಕಟ್ಟೆಗೆ ತೀವ್ರ ಪೈಪೋಟಿ ಒಡ್ಡುವ ಶಕ್ತಿ ಹಿಂದಿನ ಜನ ಬಳಸುತ್ತಿದ್ದ ವಸ್ತುಗಳಿಗೆ ಇದೆ. ವಸ್ತುಗಳ ಮಾದರಿ ಅನುಸರಿಸಿ, ಯೋಗ್ಯ ರೀತಿಯಲ್ಲಿ ಮರು ಪ್ರತಿಕೃತಿ ತಯಾರಿಸಿ, ಆರ್ಥಿಕ ಉತ್ಪನ್ನಗಳಾಗಿ ಮಾರ್ಪಡಿಸಲು ಜಾನಪದ ವಸ್ತು ಸಂಗ್ರಹಾಲಯದಿಂದ ಸಾಧ್ಯವಾಗುತ್ತದೆ. ಮುಂಬರುವ ದಿನಗಳಲ್ಲಿ ವಿದ್ವಾಂಸರ, ಮಾರ್ಗದರ್ಶಕರ ನೆರವಿನಿಂದ, ಕ್ಷೇತ್ರ ಸಹಾಯಕರ ಉತ್ಸಾಹ, ಕಾರ್ಯಕ್ಷಮತೆಗಳನ್ನು ಉಪಯೋಗಿಸಿಕೊಂಡು, ನಾಡಿನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಜೀವನದ ದೇಸೀ ಜ್ಞಾನ ಪರಂಪರೆಯ ಪ್ರತೀಕಗಳಾದ ಪರಿಕರಗಳನ್ನು ಸಮಗ್ರವಾಗಿ ಸಂಗ್ರಹಿಸಿ, `ಮಾದರಿ ದೇಸೀ ವಸ್ತುಸಂಗ್ರಹಾಲಯ' ರೂಪಿಸುವ ಮಹದಾಸೆ ನಮ್ಮದು.
ಕೊನೆಯ ಮಾರ್ಪಾಟು : 2/15/2020