অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕ ಜ್ಞಾನ ಆಯೋಗ

ಕರ್ನಾಟಕ ಜ್ಞಾನ ಆಯೋಗ (ಕರ್ನಾಟಕ ನಾಲೆಡ್ಡ್ ಕಮಿಷನ್)ನ ಪ್ರಮುಖ ಉದ್ದೇಶವೆಂದರೆ ‘ಕರ್ನಾಟಕವನ್ನು ಒಂದು ಸ್ಪಂದನಶೀಲ ಜ್ಞಾನ ಸಮಾಜವನ್ನಾಗಿ ಪರಿವರ್ತಿಸುವುದು.’ ಡಾ. ಕೆ. ಕಸ್ತೂರಿರಂಗನ್ ಅವರ ಘನ ಅಧ್ಯಕ್ಷತೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಕರ್ನಾಟಕ ಜ್ಞಾನ ಆಯೋಗದ ಪಯಣ ಅತ್ಯಂತ  ನವೀನ ಮತ್ತು ಆವಿಷ್ಕಾರದ ಹೊಸ ಪ್ರಯತ್ನವಾಗಿದೆ. ಇದರ ಕಾರ್ಯ ಮತ್ತು ಪ್ರಯತ್ನಗಳಿಗೆ ರಾಜಕೀಯ ಕ್ಷೇತ್ರದ ಮತ್ತು ಅಧಿಕಾರಷಾಹಿಯ ವಿವಿಧ ಭಾಗೀದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಯೋಗವು ಕೇವಲ ತಜ್ಞರು, ಪರಿಣಿತರನ್ನಲ್ಲದೆ ಉತ್ತಮ ಸಾಮಾಜಿಕ ವ್ಯವಸ್ಥೆಯ ಬಗೆಗೆ ಕಾಳಜಿ ಹೊಂದಿದ ಹಲವರ ನಿರೀಕ್ಷೆಗಳನ್ನು ಹೆಚ್ಚಿಸಿತು. ಇವೆಲ್ಲವೂ ನಾವು ಗ್ರಹಿಸಿದ ಮತ್ತು ಸೆರೆಹಿಡಿದಿಟ್ಟ ಅಂಶಗಳು. ಸತ್ಯ ಬೇರೆಯದೇ ಆಗಿರಲೂಬಹುದು. ನಾವು ಮೌಲ್ಯಮಾಪನಕ್ಕೆ ಒಳಗಾಗಲು ಬಯಸಿದ್ದು, ಶುಭ್ರ-ಶುದ್ಧ ಗಾಜಿನಿಂದ ಕಾಣಿಸಿಕೊಳ್ಳಲೇ ಹೊರತು ಬಣ್ಣದ ಗಾಜಿನಿಂದಲ್ಲ. ಹಾಗಾಗಿ, ಬೆಂಗಳೂರಿನ ಪಬ್ಲಿಕ್ ಅಫೇರ್ಸ್ ಸೆಂಟರ್ ಈ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿತು. ಒಂದು ಸ್ವತಂತ್ರ ಸಂಸ್ಥೆಯ ಮೂಲಕ ಸ್ವಯಂ ಪ್ರೇರಣೆಯಿಂದ ನಿಷ್ಪಕ್ಷಪಾತವಾದ ಮತ್ತು ವಸ್ತುನಿಷ್ಠವಾದ ಮೌಲ್ಯಮಾಪನಕ್ಕಾಗಿ ನಮ್ಮನ್ನು ಒಳಪಡಿಸಿಕೊಳ್ಳಲಾಗಿದೆ. ಇದು ಸಹ ಆಯೋಗದ ಒಂದು ಉತ್ತಮ ಕಾರ್ಯವಿಧಾನವಾಗಿದೆ.

ಬಳಕೆದಾರರ ಅಭಿಪ್ರಾಯ ಆಧರಿಸಿ ವಿಶ್ಲೇಷಿಸುವ ‘ಸಿಟಿಜನ್ ರಿಪೋರ್ಟ್ ಕಾರ್ಡ್’ ಮಾದರಿ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಗಳ ವಿಶ್ಲೇಷಣೆ-ಅಧ್ಯಯನಕ್ಕೆ ಪಬ್ಲಿಕ್ ಅಫೇರ್ಸ್ ಸೆಂಟರ್(ಪಿಎಸಿ) ಪ್ರಖ್ಯಾತಿ ಗಳಿಸಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ಎಲ್ಲಾ ಹಂತಗಳಲ್ಲೂ ಆಡಳಿತ ವ್ಯವಸ್ಥೆಯ ಸುಧಾರಣೆಗೆ ಸೃಷ್ಟಿಸಲಾದ ಜ್ಞಾನವು ಅತ್ಯಂತ ಉಪಯುಕ್ತ ಮತ್ತು ಪ್ರಮುಖವೆಂದು ಸಾಬೀತಾಗಬೇಕಾದದ್ದು ಅವಶ್ಯಕ. ಕರ್ನಾಟಕ ಜ್ಞಾನ ಆಯೋಗವು ನಮ್ಮನ್ನು ಮೌಲ್ಯಮಾಪನಕ್ಕಾಗಿ ಆಹ್ವಾನಿಸಿದಾಗ, ಆಯೋಗದ ಶಿಫಾರಸ್ಸುಗಳ ಯೋಜಕರ, ಬಳಕೆದಾರರ ಹಾಗೂ ಅನುಷ್ಠಾನಕರ ಪ್ರತಿಕ್ರಿಯೆಗಳನ್ನು ಪಡೆಯುವಲ್ಲಿ ಪಿಎಸಿ ಯು ಅದೇ ದೃಷ್ಟಿಕೋನವನ್ನು ಅಳವಡಿಸಿಕೊಂಡಿತು. ಆಯೋಗವೇ ಸ್ವತಃ ತನ್ನ ಕಾರ್ಯ ಮತ್ತು ಉತ್ಪನ್ನಗಳ ಮೂಲಕ ಸೃಷ್ಟಿಸಿರುವ ಸಾಕ್ಷ್ಯ ಮತ್ತು ಇತರೆ ದಾಖಲೆಗಳನ್ನು ಸವಿವರವಾದ ಪರಿಶೀಲನೆಗೆ ಒಳಪಡಿಸಿ ಮೌಲ್ಯಮಾಪನ ಮಾಡಲಾಯಿತು.

ಈ ಮೌಲ್ಯಮಾಪನದ ಮೂಲಕ ಪಿಎಸಿಯು ಪಡೆದ ಅನುಭವ ಹಲವು ನೆಲೆಯಲ್ಲಿ ಅನನ್ಯ. ಮೊದಲನೆಯದಾಗಿ, ದೇಶದಲ್ಲಿ ಎಲ್ಲಿಗೂ ಹೋಲಿಸಲಾರದಂತಹ ಜ್ಞಾನದ ಅಭಿವೃದ್ಧಿ ಪ್ರಯತ್ನದ ಪ್ರಾಥಮಿಕ ಭಾಗೀದಾರರನ್ನು ಗುರುತಿಸುವ ಅವಕಾಶ ನಮಗೆ ಈ ಮೂಲಕ ದೊರೆಯಿತು. ಎರಡನೆಯದಾಗಿ, ಈ ಮೌಲ್ಯಮಾಪನದಿಂದ ಸಿಕ್ಕ ವಿವಿಧ ದೃಷ್ಟಿಕೋನಗಳು ನಮ್ಮ ತಂಡವನ್ನು ಮತ್ತಷ್ಟು ಉತ್ಕøಷ್ಟಗೊಳಿಸಿತಲ್ಲದೇ, ಕರ್ನಾಟಕದಲ್ಲಿ ಲಭ್ಯವಿರುವ ಜ್ಞಾನರಾಶಿಯ ಬಗ್ಗೆ ನಮ್ಮ ಕಣ್ಣು ತೆರೆಸಿತು. ಮೂರನೆಯದಾಗಿ, ಕರ್ನಾಟಕವನ್ನು ಒಂದು ಸ್ಪಂದನಶೀಲ ಸಮಾಜವನ್ನಾಗಿ ಪರಿವರ್ತಿಸಬೇಕೆಂಬ ಆಲೋಚನೆಗಳು ಸಮಾಜದ ಎಲ್ಲ ಹಂತದಲ್ಲೂ ಮತ್ತು ರಾಜ್ಯದ ವಿವಿದ ಆಡಳಿತ ವ್ಯವಸ್ಥೆಯ ಪ್ರತಿ ಹಂತದಲ್ಲೂ ಈಗಾಗಲೇ ಚಾಲ್ತಿಯಲ್ಲಿರುವುದು ನಮ್ಮ ಅರಿವಿಗೆ ಬಂದಿತು. ನಿಜವಾಗಲೂ ಇದು ಪಿಎಸಿ ಗೆ ಪ್ರೋತ್ಸಾಹದಾಯಕವೆನಿಸುವ ಸಂಗತಿ, ಎಕೆಂದರೆ ಅಧಿಕಾರಷಾಹಿ ವ್ಯವಸ್ಥೆಯ ಗೊಂದಲಗಳ ನಿವಾರಣೆಗೆ ದಾರಿ ಹುಡುಕುವ ನೆಲೆಯಲ್ಲಿ ನಡೆದ ಇದರ ಹಿಂದಿನ ಕೆಲಸಗಳು ಒಳ್ಳೆಯ ಆಲೋಚನೆ ಅಥವಾ ಉದ್ದೇಶಪೂರ್ಣ ಅಭಿವ್ಯಕ್ತಿಗೆ ಅಡೆತಡೆ ಎನಿಸಿತ್ತು.

ಇದಕ್ಕೆ ವಿರುದ್ಧವಾಗಿ, ಜ್ಞಾನ ಸೃಷ್ಟಿ, ಜ್ಞಾನವನ್ನು ಅಳವಡಿಸಿಕೊಳ್ಳುವುದು ಹಾಗೂ ಜ್ಞಾನ ಕ್ರೋಢೀಕರಣದತ್ತ ಆಯೋಗವೇ(ಕೆಜೆಎ) ಸ್ವತಃ ಒಂದು ಕ್ರಿಯಾತ್ಮಕ ದೃಷ್ಟಿಕೋನವನ್ನು ಹೊಂದಿತಲ್ಲದೇ, ಕಚೇರಿಗಳಲ್ಲಿದ್ದ ಹಿರಿಯ ಅಧಿಕಾರಿಗಳ ಗಮನ ಸೆಳೆಯಿತು ಮತ್ತು ಕರ್ನಾಟಕದ ಬದುಕಿನ ಎಲ್ಲ ರಂಗಗಳ ಹಿತೈಷಿಗಳ ಬೆಂಬಲ ಪಡೆಯಿತು. ರಾಜ್ಯದ ಹಿತದೃಷ್ಟಿಯಿಂದ ಶಾಶ್ವತವಾದ ಅತ್ಯುತ್ತಮ ಬದಲಾವಣೆಗಾಗಿ ಶಕ್ತಿಯ ಹಲವಾರು ಸಂಪನ್ಮೂಲಗಳನ್ನು ಹೇಗೆ ಸೃಜನಾತ್ಮಕವಾಗಿ ಬಳಸಿಕೊಳ್ಳಬಹುದೆಂಬುದಕ್ಕೆ ಆಡಳಿತದಲ್ಲಿ ಇರುವ ಎಲ್ಲರಿಗೂ ಆಯೋಗದ ಕಾರ್ಯದ ಈ ಮೌಲ್ಯಮಾಪನವು ನಿಜವಾಗಲೂ ಒಂದು ಮಾದರಿ ಮತ್ತು ಉದಾಹರಣೆಯಾಗಿ ತೋರಬೇಕು.

ಹಿನ್ನೆಲೆ ಮತ್ತು ಮೌಲ್ಯಮಾಪನದ ತಾರ್ಕಿಕ ವಿವರಣೆ

ಹಿನ್ನೆಲೆ ಮತ್ತು ಮೌಲ್ಯಮಾಪನದ ತಾರ್ಕಿಕ ವಿವರಣೆ ಜ್ಞಾನ ಸಮಾಜದ ಮಹಾತ್ವಾಕಾಂಕ್ಷೆಯ ಮಾದರಿಯಾಗಿ ಕರ್ನಾಟಕ ಸರಕಾರವು ಸೆಪ್ಟೆಂಬರ್ 2008 ರಲ್ಲಿ ಕರ್ನಾಟಕವನ್ನು ಒಂದು ಸ್ಪಂದನಶೀಲ ಸಮಾಜವನ್ನಾಗಿ ಪರಿವರ್ತಿಸುವ ಆದೇಶದೊಂದಿಗೆ ಕರ್ನಾಟಕ ಜ್ಞಾನ ಆಯೋಗವನ್ನು ರಚಿಸಿತು. ಆಯೋಗವು (ಕೆಜೆಎ), ಕರ್ನಾಟಕ ಸರಕಾರ ರಚಿಸಿದ 18 ಕಾರ್ಯಪಡೆಗಳ ಪೈಕಿ ಒಂದಾಗಿ ತನ್ನ ಸ್ಥಾನಮಾನವನ್ನು ಕಾಯ್ದುಕೊಂಡು ಸ್ವತಂತ್ರ ಸಮಿತಿಯಾಗಿ ಕಾರ್ಯಾಚರಿಸಿತು. ರಾಜ್ಯದ ದೂರದೃಷ್ಟಿ (ವಿಷನ್)2020 ಗೆ ಪೂರಕವಾಗಿ ಆಯೋಗವು ಆರು ಪ್ರಮುಖ ವಲಯಗಳನ್ನು ಮತ್ತು ಅದರೊಂದಿಗೆ ಆರು ಪ್ರಮುಖ ಕ್ಷೇತ್ರಗಳನ್ನು ಗುರುತಿಸಿ ಆರು ಕಾರ್ಯತಂಡಗಳು ಮತ್ತು ಆರು ಮಿಷನ್ ಗ್ರೂಪ್‍ಗಳಿಗೆ ಅವುಗಳನ್ನು ವಹಿಸಿಕೊಟ್ಟಿತು. ಈ ಗುಂಪುಗಳು ಸತತ ಚಿಂತನೆ, ಅಧ್ಯಯನ, ಸಂಶೋಧನೆ ಹಾಗೂ ಚರ್ಚೆಗಳನ್ನು ನಡೆಸಿ ನಾಲ್ಕು ಹಂತಗಳಲ್ಲಿ ಒಟ್ಟು 89 ಶಿಫಾರಸ್ಸುಗಳನ್ನು ರೂಪಿಸಿ, ಮುಖ್ಯಮಂತ್ರಿಯವರ ಕಚೇರಿಗೆ ಸಲ್ಲಿಸಲಾಯಿತು. ಇದನ್ನು ಆಧರಿಸಿ ಆಯೋಗದ ಮೂಲಕ ಕೆಲವು ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳಲಾಯಿತು. ಸರಕಾರಿ ಇಲಾಖೆಗಳೊಂದಿಗೆ ಹೊರಗಿನವನಾಗಿ ಕೆಲಸ ಮಾಡುವುದು ಸ್ವಲ್ಪ ಕಷ್ಟಕರವಿರಬಹುದು, ಆದರೆ ಆಯೋಗವು ಆ ವ್ಯವಸ್ಥೆಯೊಳಗಿನವನಾಗಿ ಕಾರ್ಯಾಚರಿಸುವ ಸಾಂದರ್ಭಿಕ ಅವಕಾಶ ಆಯೋಗಕ್ಕೆ ದಕ್ಕಿತು ಮತ್ತು ಸರಕಾರದ ಒಂದು ಭಾಗವಾಗಿ ಹಲವು ಬಾರಿ ಗುರುತಿಸಲ್ಪಟ್ಟಿತು. ಆಯೋಗದ ಆರಂಭದ ಮೂರು ವರ್ಷಗಳ ಆಡಳಿತದ ಬಳಿಕ ಪಬ್ಲಿಕ್ ಅಫೇರ್ಸ್ ಸೆಂಟರ್ (ಪಿಎಸಿ) ಚಿಂತಕರ ಚಾವಡಿಯಲ್ಲಿ ನೀತಿಯ ಭಾಗೀದಾರರು ಅದರಲ್ಲೂ  ಮುಖ್ಯವಾಗಿ ಬಳಕೆದಾರರ ದೃಷ್ಟಿಕೋನ ಮತ್ತು ಆಯೋಗದ ಅರೆ ಸರ್ಕಾರಿ ಪಾತ್ರದ ಕುರಿತು ಹಲವಾರು ಗುಣಮಟ್ಟದ ಸಂಶೋಧನಾ ವಿಧಾನಗಳನ್ನು ಬಳಸಿ ಪರಿಶೋಧನೆ ನಡೆಸಿತು. ಈ ಸಂದರ್ಭದಲ್ಲಿ ಕೆಲವು ಅನ್ವೇಷಣಾ ಕ್ರಮಗಳು [ಜ್ಞಾನ ಫೆಲೋಶಿಪ್‍ಗಳು, ಕೆಎಸ್‍ಐಎನ್‍ಸಿ, ಕಣಜ ಜಾಲತಾಣ (ಪೋರ್ಟಲ್)] ಮತ್ತು ಉತ್ತಮ ಪದ್ಧತಿಗಳನ್ನು ಗುರುತಿಸಲಾಯಿತು. (ತಜ್ಞರ ಜೊತೆ ಸಮಾಲೋಚನೆ, ಪುನರಾವರ್ತಿತ ಪ್ರಕ್ರಿಯೆಯ ಮೂಲಕ ಫಲಿತಾಂಶ ಪಡೆಯುವಿಕೆ, ಸಹಭಾಗಿತ್ವದ ನಿರ್ಮಾಣ, ಸಂವೇದನಾತ್ಮಕತೆ, ಇಲಾಖೆಗಳ ಕಾರ್ಯಕ್ಕೆ ಮನ್ನಣೆ ನೀಡುವುದು, ಫಲಿತಾಂಶ ಆಧಾರಿತ ಚಿಂತನೆಯನ್ನು ಮುಂದುವರಿಸುವುದು). ಇದೇ ವೇಳೆ, ಆಯೋಗವು ತನ್ನ ಉದ್ದೇಶಿತ ದೂರದೃಷ್ಟಿ ಯೋಜನೆಯ ಗುರಿಯನ್ನು ಮುಟ್ಟಲು ಅಳವಡಿಸಿಕೊಂಡ ಪ್ರಕ್ರಿಯೆ ಮಾದರಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇತರ ಅವಲೋಕನಗಳನ್ನು ನಡೆಸಲಾಯಿತು. ಇತ್ತೀಚೆಗೆ ರಾಮಪ್ರಸಾದ್ ಮತ್ತು ಶ್ರೀಧರ್ (2011) ನಡೆಸಿದ ಮಹತ್ವದ ಅಧ್ಯಯನವು ತ್ರಿಸ್ತರ ಮಾದರಿ (ಟ್ರಿಪಲ್ ಹೆಲಿಕ್ಸ್)ಯಲ್ಲಿ ಆಯೋಗವು ಅನುಸರಿಸುತ್ತಿರುವ ವಿವಿಧ ಪ್ರಕ್ರಿಯೆಗಳ ವಿಶ್ಲೇಷಣೆಯಿಂದ ಮೂಲತತ್ವಶಾಸ್ತ್ರ ವಿಚಾರದ ಚೌಕಟ್ಟೊಂದನ್ನು ರಚಿಸಿತು. ಇದರಲ್ಲಿ ಅಧ್ಯಯನವು, ಬಹುಮುಖ್ಯವಾದ ಪಾಲುದಾರಿಕೆಗಳಿಗೆ ಸಂಬಂಧಪಟ್ಟಂತೆ

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಆಯೋಗವು, `ಮುನ್ನಡೆಸುವ', ಪ್ರೋತ್ಸಾಹಿಸುವ ಮತ್ತು ನಿಯಂತ್ರಿಸುವ ಪಾತ್ರವನ್ನು ವಹಿಸಿದೆ ಎಂದು ಹೇಳಲಾಗಿದೆ. ಎಲ್ಲಾ ಯೋಜನೆಗಳನ್ನು ಪ್ರತ್ಯೇಕ ಹಾಗೂ ಒಟ್ಟಾರೆ ಮಟ್ಟದಲ್ಲಿ ಈ ಚೌಕಟ್ಟಿನೊಳಗೆ ಸೇರಿಸಿ, ಟ್ರಿಪಲ್ ಹೆಲಿಕ್ಸ್ ಅಂಶಗಳ ಮೂರು ವಿಭಾಗಗಳ ವ್ಯಾಪ್ತಿಯಲ್ಲಿ ಪ್ರತಿ ಯೋಜನೆಗಳ ಸಂಬಂಧಾತ್ಮಕ ಮಹತ್ವವನ್ನು ಕಂಡುಹಿಡಿಯಬಹುದು. ಆಯೋಗದ ಎರಡನೇ ಹಂತವನ್ನು ಪುನರ್ ರಚನೆ ಮಾಡಿದ ಬಳಿಕ, ಹೊಸ ಪ್ರಗತಿಗಳನ್ನು ಯೋಜಿಸಲಾಯಿತು ಮತ್ತು ಈ ಮೊದಲೇ ಗುರುತಿಸಿದ ವಲಯಗಳೊಳಗಿನ ಇತರ ಕ್ಷೇತ್ರಗಳ ಬಗ್ಗೆ ಗಮನ ಹರಿಸಲಾಯಿತು. ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ತನ್ನ ಕೊಡುಗೆ ಹಾಗೂ ಕೈಗೊಂಡ ಕಾರ್ಯಗಳ ಬಗ್ಗೆ ಅಂತಿಮ ಮೌಲ್ಯಮಾಪನ ಮಾಡುವಂತೆ ಆಯೋಗವು ಮತ್ತೊಮ್ಮೆ ಪಿಎಸಿ ಯನ್ನು ಕೋರಿತು.

ಮೌಲ್ಯಮಾಪನದ ಉದ್ದೇಶ: ಈ ಕೆಳಗಿನ ಅಂಶಗಳ ಮೇಲೆ ಆಯೋಗವು ತನ್ನ ಪೂರ್ಣ ಅವಧಿಯಲ್ಲಿ ಕೈಗೊಂಡ ಕೆಲಸಗಳನ್ನು ಮೌಲ್ಯಮಾಪನ ಮಾಡುವ ಉದ್ದೇಶವನ್ನು ಹೊಂದಿತ್ತು.

  • ಕರ್ನಾಟಕದಲ್ಲಿ ಸಶಕ್ತ ಜ್ಞಾನ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಆಯೋಗದ ಕೊಡುಗೆಗಳ ವ್ಯಾಪ್ತಿ.
  • ತನಗೆ ಒಪ್ಪಿಸಿದ ಕಾರ್ಯ-ತನ್ನ ಗುರಿಯನ್ನು ಸಾಕಾರಕ್ಕೆ ತರುವಲ್ಲಿ ಆಯೋಗವು ತನ್ನ ಕರ್ತವ್ಯವನ್ನು ಎಷ್ಟರಮಟ್ಟಿಗೆ ನಿರ್ವಹಿಸಿದೆ.
  • ಇದೇ ರೀತಿಯ ಬೇರೆ ಆಯೋಗಗಳಿಗೆ ಎಷ್ಟರಮಟ್ಟಿಗೆ ಆಯೋಗದ ಕೆಲಸಗಳು ಒಂದು ಕಾರ್ಯ ಚೌಕಟ್ಟಾಗಿ ಪರಿಣಮಿಸಿದೆ?
  • ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಉದ್ದೇಶಗಳನ್ನು ಇಡೇರಿಸಲು ಸಾಧ್ಯವಾಗಿದೆ ಎಂಬ ವಿಷಯವನ್ನು ಆಯೋಗದ ಗುಂಪಿನಯ ಜೊತೆ ಹಂಚಿಕೊಳ್ಳಲಾಗಿತ್ತು.
  • ಆಯೋಗದ ಕೆಲಸಗಳು, ಅದಕ್ಕೆ ಸಂಬಂದಿಸಿದ ಪ್ರಕ್ರಿಯೆ ಮತ್ತು ಬಳಿಕದ ಸ್ಥಿತ್ಯಂತರ(ಪರಿವರ್ತನೆ) ಸೇರಿದಂತೆ ಎಲ್ಲಾ ರಚನೆ ಮತ್ತು ಕಾರ್ಯಾತ್ಮಕ ಅಂಶಗಳನ್ನು (ಟಿಒಆರ್, ಜನರು, ಘಟಕಗಳು, ಚಟುವಟಿಕೆಗಳು) ಗುರುತಿಸುವ ಮತ್ತು ಪಟ್ಟಿಮಾಡುವ ಕಾರ್ಯವನ್ನು ಮಾಡುವುದು. .
  • ಅಭಿವೃದ್ಧಿಯ ವಿವಿಧ ಹಂತಗಳ ಉತ್ಪನ್ನ ಆಧಾರಿತ ಅಂಶಗಳಾದ ಶಿಫಾರಸ್ಸುಗಳು, ಪ್ರಾಯೋಗಿಕ ಯೋಜನೆಗಳು, ಪ್ರಮುಖ ಉಪಕ್ರಮಗಳು, ದಾಖಲಾತಿ, ಪ್ರಸರಣ ಸೇರಿದಂತೆ ಎಲ್ಲದರ ವಿವಿಧ ಫಲಿತಾಂಶಗಳ ವಿಶ್ಲೇಷಣೆ.
  • ಆಯೋಗದ ಕೆಲಸದಲ್ಲಿ ಪಾಲ್ಗೊಂಡ ನಾನಾ ಭಾಗೀದಾರರ ಮನೋವರ್ತನೆ, ಕೆಲಸದ ಕುರಿತ ಕಾಳಜಿ ಅಥವಾ ಜಾಗೃತಿಯ ಕುರಿತು ವಸ್ತುನಿಷ್ಠ ಮೌಲ್ಯಮಾಪನ (ಸಂದರ್ಭ, ಪ್ರಮಾಣ ಮತ್ತು ನಿರ್ಣಯಿಸುವ ಮಾನದಂಡ) ಮಾಡುವುದು.
  • ಆಯೋಗದ ಕೆಲಸಗಳ ನಿರೀಕ್ಷಿತ ಫಲಿತಾಂಶ(ಎಲ್ಲೆಲ್ಲಾ ಸ್ಪಷ್ಟವಾಗಿ ಅಭಿವ್ಯಕ್ತಿಯಾಗಿದೆಯೋ)ದ ವಿಶ್ಲೇಷಣೆ.
  • ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಆಯೋಗದ ಕೆಲಸದ ಮಹತ್ವವನ್ನು ಅಳೆಯುವ ನೂತನ ಮಾದರಿವಿಧಾನವನ್ನು ರೂಪಿಸುವ ಯತ್ನ. ಅನುಸರಿಸಿದ ವಿಧಾನ ಸಂಶೋಧನಾ ವಿನ್ಯಾಸ ಪ್ರಸ್ತುತ ಅಧ್ಯಯನವು ವಿವರಣಾತ್ಮಕ-ವಿಶ್ಲೇಷಣಾತ್ಮಕ ಮತ್ತು ಕಠಿಣಾವಾದ ಸಂಶೋಧನಾ ವಿನ್ಯಾಸವನ್ನು ಅನುಸರಿಸಿದೆ. ಆಯೋಗವು ತನ್ನ ಗುರಿಯನ್ನು ಸಾಧಿಸಲು ಕೈಗೊಂಡ ವಿವಿಧ ಪರಿಕಲ್ಪನೆ ಮತ್ತು ಚಟುವಟಿಕೆಗಳನ್ನು ಅರ್ಥೈಸಿಕೊಳ್ಳುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಇದಕ್ಕೆ ಹೆಚ್ಚುವರಿಯಾಗಿ, ಆಯೋಗದ ಕೆಲಸಗಳಲ್ಲಿ ವಿವಿಧ

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಭಾಗೀದಾರರು ವಹಿಸಿದ ಸಹಭಾಗಿತ್ವದ ಪ್ರಮಾಣ, ತಮ್ಮದೆಂದು ಸ್ವೀಕರಿಸಿ ಕಾರ್ಯಪ್ರವೃತ್ತವಾದ ಉಪಯುಕ್ತತೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ವಸ್ತುನಿಷ್ಟ ಪರಿಶೀಲನೆಯನ್ನು ನಡೆಸುವ ಉದ್ದೇಶ ಇದಕ್ಕಿದೆ.

ಪ್ರಾಥಮಿಕ ಮತ್ತು ಪೂರಕ ದತ್ತಾಂಶ ಇದಕ್ಕೆ ಸಂಬಂದಿಸಿದ ಮಾಹಿತಿಯನ್ನು ವಿವಿಧ ವಿಧಾನಗಳು ಮತ್ತು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

  • ಪೂರಕವಾದ ದತ್ತಾಂಶ ಸಂಗ್ರಹ. ಬಿ       ಸರ್ಕಾರಿ ದಾಖಲೆ ಮತ್ತು ಪತ್ರಗಳು, ಮತ್ತು ಬಿ        ಪ್ರಾಯೋಗಿಕ ಯೋಜನೆಗಳ ಕುರಿತ ತ್ರೈಮಾಸಿಕ ವರದಿಗಳು, ಆಯ್ದ ಶಿಫಾರಸ್ಸುಗಳು, ಜ್ಞಾನ ಫೆಲೋಶಿಪ್ ವರದಿಗಳು, ಸಭೆಗಳ ವರದಿಗಳು ಇತ್ಯಾದಿ.
  • ಈ ಮಾಹಿತಿಯನ್ನು ಈ ಕೆಳಗಿನ ಅಂಶಗಳಡಿಯಲ್ಲಿ ಮತ್ತೊಮ್ಮೆ ಪುನರ್ ಪರಿಶೀಲನೆಗೆ ಒಳಪಡಿಸಲಾಗಿದೆ. ಬಿ ಆಯೋಗವು ವಿವರವಾದ ಸ್ವರೂಪ/ರಚನೆ, ಅವುಗಳ ಸರಣಿ ಸಂಪರ್ಕ ಕೊಂಡಿಗಳು ಮತ್ತು ಆಯೋಗವು ತನ್ನ ಗುರಿಯನ್ನು ಸಾಧಿಸಲು ಅನುಸರಿಸಿದ ಪ್ರಕ್ರಿಯೆ; ಬಿ ಆಯೋಗದ ಎಲ್ಲಾ ಕೆಲಸಗಳ ರಚನೆ ಮತ್ತು ಕಾರ್ಯಾತ್ಮಕ ವಸ್ತು ಅಥವಾ ಅಂಶ(ಟಿಒಆರ್, ಜನರು, ಘಟಕ ಮತ್ತು ಚಟುವಟಿಕೆಗಳು)ಗಳನ್ನು ಗುರುತಿಸಿ ಪಟ್ಟಿಮಾಡುವುದು. ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕೆ ಸಂಬಂದಿಸಿದಂತೆ ಮಾಹಿತಿ ಸಂಗ್ರಹಣೆ ಅದರ ಪ್ರಕ್ರಿಯೆ ಹಾಗೂ ಫಲಿತಾಂಶ ಸೇರಿದ ಚೌಕಟ್ಟನ್ನು ಸಿದ್ಧಪಡಿಸಲಾಯಿತು.
  • ಮಾದರಿಗಳ ಸೂಕ್ತ ಅನುಪಾತದ ಆಧಾರದ ಮೇಲೆ ಶಿಫಾರಸ್ಸುಗಳು, ಯೋಜನೆಗಳು ಮತ್ತು ಸಂಶೋಧನಾ ಅಧ್ಯಯನ (ಅನುಬಂಧ-1)ಗಳನ್ನು ವಿಸ್ತೃತತ ಅಧ್ಯಯನಕ್ಕೆ ಆಯ್ಕೆ ಮಾಡಲಾಯಿತು. ಸಂದರ್ಶನದಲ್ಲಿ ಭಾಗವಹಿಸುವ ಲಭ್ಯತೆಯ ಆಧಾರದಲ್ಲಿ ಪ್ರತಿಕ್ರಿಯೆದಾರರನ್ನು ಆಯ್ಕೆ ಮಾಡಲಾಗಿದೆ.
  • ಪ್ರಾಥಮಿಕ ಮಾಹಿತಿಯನ್ನು ಮುಖಾಮುಖಿ ಚರ್ಚೆ/ ಇ-ಮೇಲ್ ಮೂಲಕ ಪ್ರಶ್ನೋತ್ತರ/ ಅರೆ-ರಚನಾತ್ಮಕ ಮಾರ್ಗದರ್ಶಿಗಳನ್ನು ಉಪಯೋಗಿಸಿ ಗುಣಮಟ್ಟದ ತಂತ್ರಜ್ಞಾನ(ಔಪಚಾರಿಕ ಮತ್ತು ಅನೌಪಚಾರಿಕ)ದ ಮೂಲಕ ಪಡೆಯಲಾಗಿದೆ. ಬಿ ಆಯೋಗದ ಕಾರ್ಯತಂಡದ ಸದಸ್ಯರು/ಮಿಶನ್ ಗ್ರೂಪ್‍ನ ಸದಸ್ಯರು ಮತ್ತು ಇತರ ಸೂಕ್ತ ಆಯೋಗದ ಅಧಿಕಾರಿಗಳನ್ನು ಆಯ್ಕೆಮಾಡಲಾಯಿತು ಬಿ ಸಂಬಂಧಪಟ್ಟ ಇಲಾಖೆಗಳಿಂದ ಆಯ್ಕೆಯಾದ ಅಧಿಕಾರಿಗಳು ನಾಯಕತ್ವ ಮತ್ತು ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದವರು. ಬಿ ಇತರ ಭಾಗೀಧಾರರು-ಆಯ್ದ ತಜ್ಞರು, ನಾಗರಿಕರು, ಮಾಧ್ಯಮ ಇತ್ಯಾದಿ
  • ಮಾಹಿತಿಗಳು ಈ ಕೆಳಗಿನ ಅಂಶಗಳನ್ನು ಹೊಂದಿದ್ದು ಬಿ ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಧಾರಿತ ಸಮಾಜವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಭಾಗೀದಾರರ ಮನೋವರ್ತನೆ, ಪ್ರಾಮಾಣಿಕ ಗ್ರಹಿಕಾ ಮಟ್ಟವನ್ನು ಈ ಕೆಳಗಿನ ನಿರ್ಧಿಷ್ಟ ಉಲ್ಲೇಖಗಳನ್ನು ಆಧಾರಿಸಿವೆ: ಶಿ                ಒಟ್ಟಾರೆ ಪರಿಕಲ್ಪನೆಯ ಪ್ರಸ್ತುತತೆ ಶಿ     ನಿರೀಕ್ಷೆಗಳು/ಪಾಲ್ಗೊಳ್ಳುವಿಕೆ; ಶಿ            ಉಪಯುಕ್ತತತೆ/ಅಸ್ತಿತ್ವದ ಉಳಿಕೆ(ಗುಣಮಟ್ಟ ಮತ್ತು ಪ್ರಮಾಣ) ;

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಶಿ             ಪ್ರಗತಿ/ಪ್ರಸ್ತುತವಿರುವ ಜ್ಞಾನದ ಹೆಚ್ಚಳ; ಶಿ             ಪರಂಪರೆ ಮತ್ತು ಅಸ್ತಿತ್ವ; ಶಿ ಎದುರಾದ ಸಮಸ್ಯೆಗಳು ಮತ್ತು ಪರ್ಯಾಯ ಪರಿಹಾರಗಳು. ಮಾದರಿಯ ವಿನ್ಯಾಸ ಆಯೋಗದ ಕೆಲಸದ ಸಮರ್ಪಕ ವಿಶ್ಲೇಷಣೆಗಾಗಿ ಆಯೋಗವು ಶಿಫಾರಸ್ಸುಗಳು, ಸಂಶೋಧನಾ ಅಧ್ಯಯನ ಮತ್ತು ಯೋಜನೆಗಳು ಸೇರಿದ ಮೂರು ವಿಭಾಗಗಳಿಂದ ಪ್ರಾತಿನಿಧಿಕ ಮಾದರಿಗಳ ಆಯ್ಕೆಯನ್ನು ಸರಿಯಾದ ಅನುಪಾತದಲ್ಲಿ ಆಯೋಗದ ಮೂಲಕ ಪಡೆಯಲಾಯಿತು.

  • ಪ್ರಗತಿ ಸಾಧಿಸಿರುವುದು.
  • ಪ್ರಗತಿಯ ಪಥದಲ್ಲಿರುವುದು.
  • ಪ್ರಗತಿ ರಹಿತ. ಅಂತಿಮವಾಗಿ, ಪ್ರಾಥಮಿಕ ದತ್ತಾಂಶ ಸಂಗ್ರಹಕ್ಕಾಗಿ ಈ ಕೆಳಗಿನ ಮಾದರಿಗಳನ್ನು (ಶೇ.10ರಷ್ಟು ಒಳಗೊಳ್ಳುವ ರೀತಿಯಲ್ಲಿ ಹೊಂದಾಣಿಕೆ ಮಾಡಿ) ಯಾದೃಚ್ಚಿಕವಾಗಿ ಆಯ್ಕೆ ಮಾಡಲಾಗಿದೆ.
  • ಒಟ್ಟು 89 ಶಿಫಾರಸ್ಸುಗಳಲ್ಲಿ 10 ಶಿಫಾರಸ್ಸುಗಳು.
  • ಒಟ್ಟು 13 ಸಂಶೋಧನಾ ಅಧ್ಯಯನಗಳಲ್ಲಿ 3 ಸಂಶೋಧನೆ ಅಧ್ಯಯನಗಳು.
  • ಒಟ್ಟು 9 ಯೋಜನೆಗಳಲ್ಲಿ 6 ಯೋಜನೆಗಳು. ಆಯ್ಕೆಯಾದ ಶಿಫಾರಸ್ಸುಗಳು, ಸಂಶೋಧನಾ ಅಧ್ಯಯನಗಳು ಮತ್ತು ಯೋಜನೆಗಳ ಸಂಪೂರ್ಣ ವಿವರಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ. ಶಿಫಾರಸ್ಸುಗಳು, ಸಂಶೋಧನಾ ಅಧ್ಯಯನಗಳು ಮತ್ತು ಯೋಜನೆಗಳು ಆಯ್ಕೆಯಾದ ಬಳಿಕ, ನಾವು 3 ವಿಭಾಗಗಳಲ್ಲಿ ಪ್ರತಿಕ್ರಿಯೆದಾರರನ್ನು ಆಯ್ಕೆ ಮಾಡಿದೆವು. ಅವರೆಂದರೆ ಯೋಜಕರು, ಅನುಷ್ಠಾನಕರು ಮತ್ತು ಬಳಕೆದಾರರು. ಅಂತಿಮವಾಗಿ ಈ ಮೂರು ವಿಭಾಗಗಳಲ್ಲಿ ಒಟ್ಟು 40 ಪ್ರತಿಕ್ರಿಯೆದಾರರ ಸಂದರ್ಶನ ಮಾಡಲಾಯಿತು.

ಪ್ರಶ್ನಾಪತ್ರಿಕೆ ವಿನ್ಯಾಸ ಆಯೋಗದ ಕೆಲಸದ ವಸ್ತುನಿಷ್ಠ ಮೌಲ್ಯಮಾಪನಕ್ಕಾಗಿ, ಭಾಗೀದಾರರನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ, ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರಶ್ನಾವಳಿಯನ್ನು ವಿನ್ಯಾಸ ಮಾಡಲಾಗಿದೆ. 1. ಯೋಜಕರು: ಶಿಫಾರಸ್ಸುಗಳು, ಸಂಶೋಧನಾ ಅಧ್ಯಯನಗಳು ಮತ್ತು ಯೋಜನೆಯ ಪ್ರಸ್ತಾವನೆಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ಪಾಲ್ಗೊಂಡ ತಜ್ಞರು, ಸಮಾಲೋಚಕರು, ಸರ್ಕಾರಿ ಅಧಿಕಾರಿಗಳನ್ನು ಆಯೋಗದ ಯೋಜಕರು ಎಂಬ ಗುಂಪಿನಲ್ಲಿ ಸೇರಿಸಿದೆ. 2. ಅನುಷ್ಠಾನಕರು: ಶಿಫಾರಸ್ಸುಗಳು, ಸಂಶೋಧನಾ ಅಧ್ಯಯನಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಭಾಗಿಯಾದ ಸರ್ಕಾರದ ಪ್ರತ್ಯೇಕ ವಿಭಾಗಗಳ ಅಧಿಕಾರಿಗಳನ್ನು ಆಯೋಗದ ಅನುಷ್ಠಾನಕರು ಎಂಬ ಗುಂಪಿನಲ್ಲಿ ಸೇರಿಸಿದೆ. 3. ಬಳಕೆದಾರರು: ಅನುಷ್ಠಾನಗೊಂಡ ಶಿಫಾರಸ್ಸುಗಳು, ಸಂಶೋಧನಾ ಅಧ್ಯಯನಗಳು ಮತ್ತು ಯೋಜನೆಗಳ ಫಲಾನುಭವಿಗಳನ್ನು ಬಳಕೆದಾರರು ಎಂಬ ಗುಂಪಿನಲ್ಲಿ ಸೇರಿಸಲಾಗಿದೆ. ಬಳಕೆದಾರರಲ್ಲಿ ಸರ್ಕಾರಿ ಅಧಿಕಾರಿಗಳು/ಇಲಾಖೆಗಳು/ಸಂಸ್ಥೆಗಳು, ಖಾಸಗಿ ಸಂಸ್ಥೆಗಳ ಜೊತೆಗೆ ಸಾಮಾನ್ಯ ನಾಗರಿಕರನ್ನು ಸೇರಿಸಿಕೊಳ್ಳಲಾಗಿದೆ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಈ ಮೂರು ಗುಂಪುಗಳಿಗೆ ಸಿದ್ಧಪಡಿಸಿದ ಪ್ರಶ್ನಾಪತ್ರಿಕೆಯಲ್ಲಿ ಹಲವು ಪ್ರಮುಖ ಕ್ಷೇತ್ರಗಳನ್ನು ಗಮನಿಸಲಾಗಿದೆ. ಅವುಗಳೆಂದರೆ:

  • ಪ್ರಕ್ರಿಯೆಯಲ್ಲಿ ಭಾಗವಹಿಸಿದ ವ್ಯಾಪ್ತಿ. ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಯೋಜನೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯ ಬಗ್ಗೆ ಇರುವ ತೃಪ್ತಿ.
  • ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಯೋಜನೆಯ ಸ್ಥಿತಿಗತಿ.
  • ಸಂಬಂಧಪಟ್ಟ ಇಲಾಖೆಯ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿರುವ ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಯೋಜನೆಯ ಪ್ರಸ್ತುತ್ತತೆ.
  • ಸಂಬಂಧಪಟ್ಟ ಇಲಾಖೆಯ ಪ್ರಸಕ್ತ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿರುವ ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಯೋಜನೆಯ ಕುರಿತ ವಿಷಯಕ್ಕೆ ಪೂರಕವಾಗಿದೆ
  • ಭವಿಷ್ಯದಲ್ಲಿ ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಯೋಜನೆಯ ಸ್ಥಿರತೆ ಸಾಮಥ್ರ್ಯ.
  • ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಯೋಜನೆಯ ಪರಿಣಾಮಕಾರಿ ಬಳಕೆ.
  • ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಯೋಜನೆಯ ಪರಿಣಾಮ.
  • ಬಹುಮುಖ್ಯವಾಗಿ ಕರ್ನಾಟಕವನ್ನು ಸಶಕ್ತ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವ ಆಯೋಗದ  ಬೃಹತ್ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಯೋಜನೆಯ ಉಪಯುಕ್ತತೆ. ಯೋಜನೆಯ ವಿಶ್ಲೇಷಣೆ ವಿವಿಧ ಮೂಲಗಳಿಂದ ಸಂಗ್ರಹಿಸಲಾದ ನಾನಾ ರೀತಿಯ ಮಾಹಿತಿ ಮತ್ತು ದತ್ತಾಂಶಗಳ ಹಿನ್ನೆಲೆಯಲ್ಲಿ ಆಯೋಗವು  ತನ್ನ ಪೂರ್ಣ ಅವಧಿಯಲ್ಲಿ ಮಾಡಿದ ಕೆಲಸಗಳ ವಸ್ತುನಿಷ್ಠ ಮೌಲ್ಯಮಾಪನ ಮಾಡುವ ಉದ್ದೇಶದಿಂದ ವ್ಯವಸ್ಥಿತ ರೀತಿಯಲ್ಲಿ ವಿಶ್ಲೇಷಣೆಯ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಮೌಲ್ಯಮಾಪನ ಸಂಹಿತೆಯಲ್ಲಿ ಮೂರು ರೀತಿಯ ವಿಶ್ಲೇಷಣೆಯನ್ನು ಬಳಸಿಕೊಳ್ಳಲಾಗಿದೆ.
  • ರಚನೆಯ ವಿಶ್ಲೇಷಣೆ: ಆಯೋಗವು ಎಲ್ಲಾ ಚಟುವಟಿಕೆಗಳು ಮತ್ತು ಅವುಗಳ ನಡುವಿನ ಸಂಪರ್ಕಗಳ ರಚನಾತ್ಮಕ ಮತ್ತು ಕಾರ್ಯಾತ್ಮಕ ಅಂಶಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಪೂರಕ ಮೂಲಗಳು ಮತ್ತು ಆಯೋಗದ ತಂಡದೊಳಗಿನ ಸದಸ್ಯರ ನಡುವಿನ ಮುಖಾಮುಖಿ ಚರ್ಚೆಯಿಂದ ಮಾಹಿತಿ ಸಂಗ್ರಹಿಸಿ ಅದನ್ನು ದೃಢೀಕರಿಸಿಕೊಳ್ಳಲಾಗಿದೆ.
  • ಮೌಲ್ಯಮಾಪನ ಮತ್ತು ಮೇಲ್ವಿಚಾರಣೆಯ ಚೌಕಟ್ಟಿನಲ್ಲಿ ಪೂರಕ ದತ್ತಾಂಶ ವಿಶ್ಲೇಷಣೆ: ಎಲ್ಲಾ ಪೂರಕ (ಮಾಧ್ಯಮಿಕ) ದತ್ತಾಂಶಗಳನ್ನು ಸುದ್ದಿಪತ್ರಗಳು, ತ್ರೈಮಾಸಿಕ ವರದಿಗಳು, ಜ್ಞಾನ ಪಲ್ಲವ, ಅಂತರ್ಜಾಲ ಮಾಹಿತಿ ಮತ್ತು ಇತರೆ ವರದಿಗಳ ಮೂಲಕ ಸಂಗ್ರಹಿಸಲಾಗಿದೆ. ಈ ಮಾಹಿತಿಯು ಹೂಡುವಳಿ(ಇನ್ ಪುಟ್), ಪ್ರಕ್ರಿಯೆ, ಉತ್ಪನ್ನ(ಔಟ್ ಪುಟ್) ಮತ್ತು ಫಲಿತಾಂಶ ಸೇರಿದ ಅಂಶಗಳನ್ನು ಮೌಲ್ಯಮಾಪನ ಮತ್ತು ಮೇಲ್ವಿಚಾರಣೆಯ ಚೌಕಟ್ಟಿನ ವಿಶ್ಲೇಷಣೆಗೆ ಒಳಪಡಿಸಲಾಗಿದೆ.
  • ಪ್ರಾಥಮಿಕ ದತ್ತಾಂಶ ವಿಶ್ಲೇಷಣೆ: ಸೂಕ್ತವಾದ ಮಾಹಿತಿಯನ್ನು ಮುಖಾಮುಖಿ, ದೂರವಾಣಿ ಮತ್ತು ಅಂತರ್ಜಾಲ ಮೊದಲಾದ ಅರೆ ರಚನಾತ್ಮಕ ಸಂದರ್ಶನಗಳ ಮೂಲಕ ಸಂಗ್ರಹಿಸಲಾಗಿದೆ. ವಸ್ತುನಿಷ್ಠ ಮೌಲ್ಯಮಾಪನಕ್ಕಾಗಿ ಈ ಮಾಹಿತಿಗಳನ್ನು ಗುಣಾತ್ಮಕ ಹಾಗೂ ಪ್ರಮಾಣಾತ್ಮಕ(ಕೋಷ್ಟಕ ಮತ್ತು ಚಿತ್ರಗಳು) ವಿಧಾನಗಳ ಮೂಲಕ ವಿಶ್ಲೇಷಣೆ ಮಾಡಲಾಗಿದೆ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಮಿತಿಗಳು

ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವಿವಿಧ ಹಿನ್ನೆಲೆಯುಳ್ಳ ಭಾಗೀದಾರರ ಆಳವಾದ ಸಂದರ್ಶನ ಅವಶ್ಯಕವಾಗಿತ್ತು. ಆದರೆ ಅವರುಗಳಿಗೆ ಬೇರೆ ಆದ್ಯತೆಯ ಕೆಲಸಗಳಿರುವುದರಿಂದ ಸಂದರ್ಶನಕ್ಕಾಗಿ ಅಲ್ಪಾವಧಿಯ ಸೂಚನೆಯ ಮೇರೆಗೆ ತಮ್ಮ ಅಮೂಲ್ಯ ಸಮಯವನ್ನು ನೀಡಲು ಸಾಧ್ಯವಾಗಿರುವುದಿಲ್ಲ. ಕೆಲವೊಂದು ಪ್ರತಿಕ್ರಿಯೆ ಸ್ವರೂಪದಲ್ಲಿ ಪ್ರತ್ಯಕ್ಷಾನುಭವವಾಗಿರುವುದರಿಂದ,   ಕರ್ನಾಟಕವನ್ನು ಸಶಕ್ತ ಜ್ಞಾನಧಾರಿತ ಸಮಾಜವನ್ನಾಗಿಸುವ ಕುರಿತ ನೈಜ ಮಾಹಿತಿ ಕೆಲವೊಂದು ಬಾರಿ ಅರಿವಿಗೆ ಬಾರದೇ ಇರುವ ಸಾಧ್ಯತೆ ಇದೆ. ಆಯೋಗದ ಕಾರ್ಯನಿರ್ವಹಣೆ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಐದು ವರ್ಷಗಳಲ್ಲಿ ಅದು ಮಾಡಿದ ಕೆಲಸಗಳನ್ನು ಗುರುತಿಸುವ ಕಾರ್ಯವನ್ನು ಇದು ಒಳಗೊಂಡಿದೆ, ಇದಕ್ಕೆ ಸಂಬಂದಿಸಿದ ಪ್ರತಿಕ್ರಿಯೆಯು ಅದರದೆ ಆದ ದೃಷ್ಟಿಯನ್ನು ಹೊಂದಿರುವದರಿಂದ ನಿಕರ ಮಾಹಿತಿಯು ಸಿಗದಿರಲುಬಹುದು. ಇದಕ್ಕೆ ಹೋಲಿಸಿದರೆ ವಿಶ್ಲೇಷಣೆ ಅಥವಾ ಮೌಲ್ಯಮಾಪನಕ್ಕೆ ನಿಗದಿಪಡಿಸಿದ ಕಾಲಾವಕಾಶ ತೀರಾ ಅಲ್ಪವಾಗಿದ್ದು, ಇದರಿಂದಾಗಿ ಆಯೋಗದ ಕೆಲಸಗಳ ಫಲಿತಾಂಶ ಮತ್ತು ಪರಿಣಾಮಗಳಂತಹ ಕೆಲವು ಅಂಶಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲು ಸಾಧ್ಯವಾಗಲಿಲ್ಲಿ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಆಯೋಗದ ರಚನೆಯ ವಿಶ್ಲೇಷಣೆ,  ಪಾತ್ರದ ವಿವರಣೆ ಮತ್ತು ಪರಿವರ್ತನೆ

ರಚನೆ ಮತ್ತು ವಿನ್ಯಾಸ ಕರ್ನಾಟಕ ರಾಜ್ಯದ ಕರ್ನಾಟಕ ಜ್ಞಾನ ಆಯೋಗ (ಕೆಜೆಎ)ವು 2008ರ ಸೆಪ್ಟೆಂಬರ್ 5 ರಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಆಗಿನ ಕರ್ನಾಟಕ ಮುಖ್ಯಮಂತ್ರಿಯವರಿಂದ ಸ್ಥಾಪನೆಯಾಯಿತು. ಇದರಲ್ಲಿ ಪ್ರೊ. ಎಂ.ಕೆ. ಶ್ರೀಧರ್ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯಕಾರಿ ನಿರ್ದೇಶಕರಾಗಿದ್ದರು. 2009ರಲ್ಲಿ ಅತ್ಯಂತ ದಕ್ಷ ಸಿಬ್ಬಂದಿಯ ಜೊತೆ ಮೂವರು ಸಂಶೋಧನಾ ಸಹಾಯಕರನ್ನು ಒಳಗೊಂಡ ಪ್ರಧಾನ ತಂಡವನ್ನು ಆಯೋಗವು ಒಳಗೊಂಡಿತು. ಈ ತಂಡವು ಸಭೆಗಳಿಂದ ಹಿಡಿದು ಇಲಾಖೆಗಳೊಂದಿಗಿನ ಸಂಪರ್ಕ-ಮಾಹಿತಿ ಸಂಗ್ರಹ ಸೇರಿದಂತೆ ಆಯೋಗದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಆಯೋಗವನ್ನು ರಾಷ್ಟ್ರೀಯ ಜ್ಞಾನ ಆಯೋಗದ ಆರು ಉಲ್ಲೇಖ-ಉದ್ದೇಶಗಳ ಅಧಾರದಲ್ಲಿ ರಚಿಸಲಾಗಿದ್ದು, ಕರ್ನಾಟಕ ಜ್ಞಾನ ಆಯೋಗದ ಟಿಒಆರ್‍ಗಳು ಈ ಕೆಳಗಿನಂತಿವೆ.

  • 21ನೇ ಶತಮಾನದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಉತ್ಕøಷ್ಠ ಶೈಕ್ಷಣಿಕ ವ್ಯವಸ್ಥೆಯ ನಿರ್ಮಾಣ ಮತ್ತು ಈ ಮೂಲಕ ಜ್ಞಾನ ಕ್ಷೇತ್ರದಲ್ಲಿ ಎದುರಾಗಬಹುದಾದ ಎಲ್ಲಾ ರೀತಿಯ ಸ್ಪರ್ಧೆ-ಸವಾಲುಗಳನ್ನು ಎದುರಿಸಲು ಶಕ್ಯವಾಗುವಂತೆ ಕರ್ನಾಟಕವನ್ನು ಸಾಮಥ್ರ್ಯವನ್ನು ಹೆಚ್ಚಿಸುವುದು.
  • ಕರ್ನಾಟಕದ ಎಲ್ಲ ಔಪಚಾರಿಕ ಮತ್ತು ಅನೌಪಚಾರಿಕ ಶೈಕ್ಷಣಿಕ, ವೈಜ್ಞಾನಿಕ ಮತ್ತು ಜ್ಞಾನಾಧಾರಿತ ಸಂಸ್ಥೆಗಳಲ್ಲಿ ಜ್ಞಾನ ಸೃಷ್ಟಿಯ ಪ್ರಕ್ರಿಯನ್ನು  ಪ್ರೋತ್ಸಾಹಿಸುವುದು.
  • ಕರ್ನಾಟಕದಲ್ಲಿನ ಶೈಕ್ಷಣಿಕ ಮತ್ತು ಜ್ಞಾನಾಧಾರಿತ ಸಂಸ್ಥೆಗಳಲ್ಲಿ ನಾಯಕತ್ವವನ್ನು ಮತ್ತಷ್ಟು ಸಶಕ್ತಗೊಳಿಸುವುದು.
  • ಕೃಷಿ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ಕೈಗಾರಿಕಾ ಮತ್ತಿತರ ವಲಯಗಳಲ್ಲಿ ಜ್ಞಾನದ ಅನ್ವಯಿಕಗಳನ್ನು ಪ್ರೋತ್ಸಾಹಿಸುವುದು.
  • ನಾಗರಿಕರಿಗೆ ಪರಿಣಾಮಕಾರಿಯಾಗಿ ಸೇವೆಗಳನ್ನು ಒದಗಿಸುವ ದಕ್ಷ ಪೂರೈಕೆದಾರರನ್ನಾಗಿ ಸರಕಾರವನ್ನು ಮಾರ್ಪಡಿಸಲು, ಜ್ಞಾನ ಸಾಮಥ್ರ್ಯಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಜನರ ಗರಿಷ್ಠ ಪ್ರಯೋಜನಕ್ಕೆ ಲಭ್ಯವಾಗುವಂತೆ ಜ್ಞಾನದ ಪ್ರಸರಣವನ್ನು ವ್ಯಾಪಕವಾಗಿ ಕೈಗೊಳ್ಳುವುದು
  • ಜ್ಞಾನದ ಸಂರಕ್ಷಣೆ, ಲಭ್ಯತೆ, ಸೃಷ್ಟಿ, ಅನ್ವಯಗೊಳಿಸುವಿಕೆ, ಪ್ರಸರಣ, ತಲುಪಿಸುವಿಕೆ ಹಾಗೂ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಪರಸ್ಪರ ಅಂತರ್ ವಲಯಗಳ ಸಂವಾದ ಮತ್ತು ಸಾಧ್ಯತೆಯ ಪರಿಕಲ್ಪನೆಯನ್ನು  ಪ್ರೋತ್ಸಾಹಿಸುವುದು.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಆಯೋಗದ 2011ರ ಸೆಪ್ಟೆಂಬರ್ ವರೆಗಿನ ತನ್ನ ಪ್ರಥಮ ಹಂತದಲ್ಲಿ ಒಟ್ಟು 28 ಸದಸ್ಯರನ್ನು ಹೊಂದಿತ್ತು. ಮೊದಲನೇ ಹಂತವು ಮೂರು ವರ್ಷದಲ್ಲಿ ಕೊನೆಗೊಂಡಿತ್ತು. ಹನ್ನೊಂದು ಹೆಸರುಗಳನ್ನು ಸೂಚಿಸುವ ಮೂಲಕ ಹಾಗು ಉಳಿದ 17 ಸದಸ್ಯರನ್ನು ರಾಷ್ಟ್ರೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಇಲಾಖೆಗಳ ಮಾಜಿ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.  ಮೊದಲ ಹಂತದಲ್ಲಿ ಆಯೋಗವು ಆರು ವಲಯಗಳ ಬಗ್ಗೆ ಗಮನ ಹರಿಸಿದ್ದು, ಪ್ರತಿ ವಲಯಕ್ಕೆ ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ತಜ್ಞರನ್ನೊಳಗೊಂಡ ಕಾರ್ಯ ತಂಡವನ್ನು ರಚಿಸಲಾಗಿತ್ತು. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಈ ಕಾರ್ಯಕಾರಿ ತಂಡಕ್ಕೆ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಿದ್ದರು. ಈ ಪ್ರತಿ ತಂಡವು ತಮಗೆ ಸಂಬಂಧ ಪಟ್ಟ ಕ್ಷೇತ್ರದಲ್ಲಿ ಚಿಂತಕರ ಚಾವಡಿಯಾಗಿ ಕೆಲಸ ನಿರ್ವಹಿಸುತ್ತಿತ್ತು. ಹೀಗೆ ರಚಿಸಲಾದ ಆರು ಕಾರ್ಯ ತಂಡಗಳೆಂದರೆ:

  • ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ಕುರಿತ ಕಾರ್ಯತಂಡ. (ಡಬ್ಲ್ಯೂಜಿಎಲ್‍ಎಸ್‍ಇ)
  • ವೃತ್ತಿಪರ ಶಿಕ್ಷಣದ ಕಾರ್ಯತಂಡ (ಡಬ್ಲ್ಯೂಜಿವಿಇ).
  • ಉನ್ನತ ಶಿಕ್ಷಣದ ಕಾರ್ಯತಂಡ (ಡಬ್ಲ್ಯೂಜಿಹೆಚ್‍ಇ).
  • ಮಾನವಿಕ, ಸಮಾಜ ವಿಜ್ಞಾನ, ಕಾನೂನು ಮತ್ತು ನಿರ್ವಹಣೆ ಕಾರ್ಯತಂಡ (ಡಬ್ಲ್ಯೂಜಿಹೆಚ್ ಎಸ್‍ಎಸ್‍ಎಲ್‍ಎಂ).
  • ಗ್ರಂಥಾಲಯ ಮತ್ತು ಜ್ಞಾನ ಸಂಪರ್ಕಜಾಲಗಳ ಕಾರ್ಯತಂಡ (ಡಬ್ಲ್ಯೂಜಿಎಲ್‍ಕೆಎನ್).
  • ಆರೋಗ್ಯ ವಲಯದ ಕಾರ್ಯತಂಡ (ಡಬ್ಲ್ಯೂಜಿಹೆಚ್‍ಎಸ್). ಕೆಲವೊಂದು ಕಾರ್ಯತಂಡಗಳು ವಿಷಯಗಳ ಆಳವಾದ ಅಧ್ಯಯನಕ್ಕೆ ತಮ್ಮ ಅವಶ್ಯಕತೆಗೆ ಅನುಗುಣವಾಗಿ ತಜ್ಞರ ಉಪ ಗುಂಪನ್ನು ರಚಿಸಿದ್ದು, ಇವುಗಳನ್ನು ಅಧ್ಯಯನ ತಂಡ ಎಂದು ಕರೆಯಲಾಗಿದೆ. ವಿಷಯಗಳಿಗೆ ಸಂಬಂಧಪಟ್ಟಂತೆ ತಮ್ಮ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಕಾರ್ಯತಂಡದ ಸದಸ್ಯರು ಮಾತ್ರವಲ್ಲದೆ ಸಂಬಂಧಪಟ್ಟ ಆಸಕ್ತರು ಮತ್ತು ತಜ್ಞರ ಜೊತೆಯೂ ಸಮಾಲೋಚನೆ ನಡೆಸಿದೆ. 2009ರ ಮೇ 12ರ ಕಚೇರಿ ಆದೇಶದನ್ವಯ ಒಟ್ಟಾಗಿ ಮೂರು ಅಧ್ಯಯನ ತಂಡಗಳನ್ನು ರಚಿಸಲಾಯಿತು. 2011ರ ಸೆಪ್ಟೆಂಬರ್ ವರೆಗಿನ ಇದರ ಮೂರು ವರ್ಷ ಅವಧಿ ಪೂರ್ಣಗೊಳ್ಳುತ್ತಿರುವಂತೆ, ಕರ್ನಾಟಕ ಸರ್ಕಾರ ಆಯೋಗದ ಅವಧಿಯನ್ನು 18 ತಿಂಗಳಿಗೆ ವಿಸ್ತರಿಸಿದ್ದಲ್ಲದೆ 2012ರ ಜನವರಿಯಲ್ಲಿ ಆಯೋಗವನ್ನು ಪುನರ್ ಸ್ಥಾಪಿಸಿತು. ಪುನರ್ ಸ್ಥಾಪಿತ ಆಯೋಗವು ಅಧ್ಯಕ್ಷರ ಅಧೀನದಲ್ಲಿ 13 ಸದಸ್ಯರನ್ನು ಹೊಂದಿದ್ದು, ಇದರಲ್ಲಿ ಮೂವರು ಆಡಳಿತಾಂಗದ ಉನ್ನತ ಹುದ್ದೆಗಳಿಂದ ನಿವೃತ್ತರಾದವರಾಗಿದ್ದಾರೆ. ಎರಡನೇ ಹಂತಕ್ಕಾಗಿ ಆಯೋಗವು ಈ ಕೆಳಗಿನ ಆರು ಪ್ರಮುಖ ವಲಯಗಳನ್ನು ಗುರುತಿಸಿಕೊಂಡಿದೆ.
  • ಶಿಕ್ಷಕರ ಅಭಿವೃದ್ಧಿ (ಎಂಜಿಟಿಡಿ)
  • ಉನ್ನತ ಶಿಕ್ಷಣ ನೀತಿ (ಎಂಜಿಹೆಚ್‍ಇಪಿ)
  • ಸಾರ್ವಜನಿಕ ಆರೋಗ್ಯ (ಎಂಜಿಪಿಹೆಚ್)
  • ಕೌಶಲ್ಯ ಅಭಿವೃದ್ಧಿ (ಎಂಜಿಎಸ್‍ಡಿ)
  • ಪಾರಂಪರಿಕ( ಸಮುದಾಯ) ಜ್ಞಾನ ಮತ್ತು ಪದ್ಧತಿಗಳು (ಎಂಜಿಸಿಕೆಪಿ)
  • ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ (ಕೆ-ಜಿಐಎಸ್) 2012ರ ಮಾರ್ಚ್ 17ರಂದು ನಡೆದ ಆಯೋಗದ 15ನೇ ಸಭೆಯಲ್ಲಿ ಪ್ರತಿ ಗಮನಕೇಂದ್ರಿತ ಕ್ಷೇತ್ರಕ್ಕಾಗಿ ಒಂದು ಮಿಶನ್ ತಂಡ ಅಥವಾ ಕಾರ್ಯಪಡೆಯನ್ನು ರಚಿಸಲು ತೀರ್ಮಾನ ಕೈಗೊಳ್ಳಲಾಯಿತು.  ಮೊದಲ ಐದು ಗಮನಕೇಂದ್ರಿತ ವಲಯಗಳಿಗಾಗಿ ಮಿಶನ್ ತಂಡಗಳನ್ನು ಮತ್ತು ಆರನೇ ವಲಯಕ್ಕೆ ಕಾರ್ಯಪಡೆಯನ್ನು ರಚಿಸಲಾಯಿತು.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಇವುಗಳ ಪ್ರಾಥಮಿಕ ಕೆಲಸವೆಂದರೆ, ಶಿಫಾರಸ್ಸುಗಳನ್ನು ಅನ್ವೇಷಿಸುವುದು ಮತ್ತು ಅದರ ಅನುಷ್ಠಾನಕ್ಕಾಗಿ ಬೇಕಾದ ಕಾರ್ಯತಂತ್ರವನ್ನು ಸಿದ್ಧಪಡಿಸುವುದು.

ಕಾರ್ಯನಿರ್ವಹಣೆ ಸಂಪರ್ಕ ಕಾರ್ಯತಂಡ, ಅಧ್ಯಯನ ತಂಡ, ತಜ್ಞರ ಸಮಿತಿ, ಮಿಶನ್ ತಂಡ ಮತ್ತು ಕಾರ್ಯಪಡೆಗಳನ್ನು ಆಯೋಗವು ನಿಗದಿ ಪಡಿಸಿದ ಫಲಿತಾಂಶಗಳನ್ನು ನೀಡಲು ರಚಿಸಲಾಗಿದೆ. ಈ ತಂಡಗಳ ಚರ್ಚೆಗಳ ಫಲಿತಾಂಶಗಳನ್ನು ಆಯೋಗಕ್ಕೆ ಸಲ್ಲಿಸಿದರು. ಒಟ್ಟಾಗಿ ಆಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಿಗೆ ನಾಲ್ಕು ಪ್ರತಿಗಳಲ್ಲಿ ಒಟ್ಟು ಎಂಬತ್ತೊಂಬತ್ತು ಶಿಫಾರಸ್ಸುಗಳನ್ನು ಸಲ್ಲಿಸಿದೆ. ಇವುಗಳ ಪೈಕಿ ಮೊದಲ 60 ಶಿಫಾರಸ್ಸುಗಳನ್ನು ಮೊದಲ ಹಂತದಲ್ಲಿ ಮೂರು ಪ್ರತಿಗಳಲ್ಲಿ ಸಲ್ಲಿಸಲಾಗಿದ್ದರೆ, ಹಾಗು ಎರಡನೇ ಹಂತದಲ್ಲಿ 29 ಶಿಫಾರಸ್ಸುಗಳನ್ನು ನಾಲ್ಕು ಮತ್ತು ಕೊನೆಯ ಪ್ರತಿಗಳಲ್ಲಿ  ಕರ್ನಾಟಕದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ. ಸರ್ಕಾರಕ್ಕೆ ಸಲ್ಲಿಸಲಾದ ಶಿಫಾರಸ್ಸುಗಳು ಅನುಕ್ರಮವಾಗಿ ಈ ರೀತಿ ಇವೆ 1.  2009ರ ಆಗಸ್ಟ್‍ನಲ್ಲಿ  - 28 ಶಿಫಾರಸ್ಸುಗಳುಳ್ಳ ಮೊದಲ ಪ್ರತಿ 2.  2010ರ ಫೆಬ್ರವರಿಯಲ್ಲಿ  -  17 ಶಿಫಾರಸ್ಸುಗಳುಳ್ಳ ಎರಡನೇ ಪ್ರತಿ 3.  2011ರ ಜನವರಿಯಲ್ಲಿ   - 15 ಶಿಫಾರಸ್ಸುಗಳುಳ್ಳ ಮೂರನೇ ಪ್ರತಿ 4.  2012ರ ಅಕ್ಟೋಬರ್‍ನಲ್ಲಿ  - 29 ಶಿಫಾರಸ್ಸುಗಳಿರುವ ಕೊನೆಯ ಪ್ರತಿ ಕಾರ್ಯತಂಡ ಮತ್ತು ಮಿಶನ್ ತಂಡದಲ್ಲಿದ್ದ ತಜ್ಞರು ಮಾಡಿದ ವಿನೂತನ ಕಲ್ಪನೆಗಳನ್ನು ಜಾರಿಗೊಳಿಸುವ ಉದ್ದೇಶವನ್ನು ಪ್ರ್ರಾಯೋಗಿಕ ಯೋಜನೆಗಳ ಅಭಿವೃದ್ಧಿ ಕಾರ್ಯ ಹೊಂದಿದೆ.  ಪ್ರ್ರಾಯೋಗಿಕ ಯೋಜನೆಗಳನ್ನು ಜಾರಿಗೊಳಿಸಲು ಸಹಾಯಕವಾಗುವ ಇಲಾಖೆಗಳ ಜೊತೆ ಆಯೋಗವು ಸಹಭಾಗಿತ್ವವನ್ನು ಹೊಂದಿದೆ. ಒಟ್ಟಾಗಿ 13 ಪ್ರ್ರಾಯೋಗಿಕ ಯೋಜನೆಗಳು ಈವರೆಗೆ ಅನುಷ್ಠಾನಕ್ಕೆ ಬಂದಿದ್ದು, ಅವುಗಳೆಂದರೆ:

  • ಕಣಜ
  • ಅರಿವು
  • ಸಹಯೋಗ
  • ಸಮರ್ಥ
  • ಸ್ವಾಸ್ಥ್ಯ
  • ದ್ರವ್ಯಕೋಶ
  • ಓದು ಪುಟಾಣಿ
  • ದಕ್ಷ
  • ಜಾನಪದ ಮೇಲಿನ ಸಮೀಕ್ಷೆ ಮತ್ತು ಪಾರಂಪರಿಕ ಜ್ಞಾನ ವ್ಯವಸ್ಥೆಯ ದಾಖಲೀಕರಣ
  • ಕೆ-ಜಿಐಎಸ್ ವಿಶನ್ ಕುರಿತ ಸಿದ್ಧತೆ ಮತ್ತು ಬಳಕೆದಾರರ ಅವಶ್ಯಕತೆಗಳ ದಾಖಲೆ
  • ಕೌಶಲ್ಯ ಅಭಿವೃದ್ಧಿಯ ಮೂಲಕ ಯುವ ಜನಾಂಗದ ಸಬಲೀಕರಣ 12. 2012-13ರಲ್ಲಿ ಎಸ್‍ಎಸ್‍ಟಿಎಸ್‍ಎಸ್ ಪರೀಕ್ಷೆಗಳನ್ನು ನಡೆಸುವುದು
  • ಜಿಐಎಸ್‍ಗೆ ಸಮೂಹ ಸಂಪನ್ಮೂಲದ ವಿಧಾನ ಅಳವಡಿಕೆ

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ತನಗೆ ವಹಿಸಲಾದ ಕೆಲಸಗಳ ಕುರಿತಾದ 89 ಶಿಫಾರಸ್ಸುಗಳ ಹೊರತಾಗಿ, 13 ಪ್ರಾಯೋಗಿಕ ಯೋಜನೆಗಳು, ಮೂರು ಮಹತ್ವದ ಉಪಕ್ರಮಗಳು ಹಾಗು 10 ಸಂಶೋಧನಾ ಅಧ್ಯಯನಗಳನ್ನು ಆಯೋಗವು ನಡೆಸಿದ್ದು, ಇದು ತನಗೆ ನಿರ್ವಹಿಸಲು ನೀಡಲಾದ ಷರತ್ತಿನ ಅಥವಾ ಕರಾರನ್ನು ಪೂರೈಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿದೆ. ಮುಂದೆ ಇದು ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ವಿನೂತನ ಆವಿಷ್ಕಾರಗಳು ಹಾಗೂ ಅನನ್ಯ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ವಿವಿಧ ಆಸಕ್ತರ ಜೊತೆ ಸಹಭಾಗಿತ್ವ ಹೊಂದಲು ಸಹಕಾರಿಯಾಗುತ್ತದೆ. ಆಯೋಗವು ಪೂರ್ಣಗೊಳಿಸಿದ ಮಹತ್ವದ ಅಧ್ಯಯನಗಳು ಈ ಕೆಳಗಿನಂತಿವೆ:

  • ಆರ್.ವಿ. ಶೈಕ್ಷಣಿಕ ಒಕ್ಕೂಟದಿಂದ ಕರ್ನಾಟಕದ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾಪೂರ್ವ ಅಧ್ಯಯನ.
  • ಪ್ರೈಸ್ವಾಟರ್ ಹೌಸ್ ಕೂಪರ್ಸ್ ಅವರಿಂದ ಕರ್ನಾಟಕದಲ್ಲಿ ಸುಜ್ಞಾನ ಸಮಾಜ ನಿರ್ಮಾಣ ಕುರಿತ ಅಧ್ಯಯನ.
  • ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಮತ್ತು ಶಿಕ್ಷಣ ಸಂಶೋಧನಾ ಕೇಂದ್ರದಿಂದ ಯುವ ಜನಾಂಗದ ಮನೋಭಾವನೆ, ಮನೋಪ್ರವೃತ್ತಿ, ಆಶೋತ್ತರ, ನಿರೀಕ್ಷೆ ಮತ್ತು ಸಲಹೆಗಳ ಕುರಿತ ಅಧ್ಯಯನ.
  • ಐಟಿ ಫಾರ್‍ಚೇಂಜ್‍ನಿಂದ ಸಮುದಾಯ ಜ್ಞಾನ ಕೇಂದ್ರದ ಮಾದರಿ ಅಭಿವೃದ್ಧಿ ಕುರಿತ ಅಧ್ಯಯನ.
  • ವಿಶ್ವವಿದ್ಯಾಲಯಗಳ ಹಣಕಾಸು ಪರಿಸ್ಥಿತಿ-ಬೆಂಗಳೂರಿನ ಇಂಡಿಯನ್ ಇನ್ಸಿಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‍ನಿಂದ ಅಧ್ಯಯನ.
  • ಮುಂಬೈನ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯಿಂದ ರಾಜ್ಯ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಸಾಮಥ್ರ್ಯ ಹೆಚ್ಚಳ ಮತ್ತು ಸಬಲೀಕರಣ ಅಧ್ಯಯನ.
  • ಸಿಎಸ್‍ಸಿಎಸ್‍ನ ಹೆಚ್‍ಇಐಆರ್‍ಎ ನಿಂದ ಕರ್ನಾಟಕದಲ್ಲಿ ಜ್ಞಾನ ಸಮಾಜಕ್ಕಾಗಿ ಒಂದು ಉನ್ನತ ಶಿಕ್ಷಣ ವ್ಯವಸ್ಥೆ ಅಧ್ಯಯನ.
  • ಅಜೀಂ ಪ್ರೇಮ್ ಜಿ ಪ್ರತಿಷ್ಠಾನದಿಂದ ಶಿಕ್ಷಕರ ಅವಶ್ಯಕತೆಗಳ ಕುರಿತ ವಿಶ್ಲೇಷಣಾತ್ಮಕ ವರದಿ.
  • ಅಜೀಂ ಪ್ರೇಮ್ ಜಿ ಪ್ರತಿಷ್ಠಾನದಿಂದ ಕರ್ನಾಟಕ ಶಿಕ್ಷಕರ ವೃತ್ತಿಪರತೆ ಅಭಿವೃದ್ಧಿ ಸೂತ್ರ.
  • ಕರ್ನಾಟಕ ರಾಜ್ಯ ಜನಪದ ವಿಶ್ವವಿದ್ಯಾಲಯದಿಂದ ಹಾವೇರಿ ಜಿಲ್ಲೆಯಲ್ಲಿ ಸಮುದಾಯ ಜ್ಞಾನ ಮತ್ತು ಅದರ ಬಳಕೆ ಕುರಿತ ಅಧ್ಯಯನ. ಈ ಸಂಶೋಧನಾ ಅಧ್ಯಯನಗಳ ಹೊರತಾಗಿ, ಕಾರ್ಯತಂಡದಿಂದ ರಚಿಸಲ್ಪಟ್ಟ ಅಧ್ಯಯನ ಗುಂಪುಗಳು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ವಿಸ್ತೃತ ವರದಿಗಳನ್ನು ಸಲ್ಲಿಸಿವೆ. ಆರೋಗ್ಯ ಕುರಿತಾದ ಕಾರ್ಯತಂಡವು ಆರೋಗ್ಯ ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಎರಡು ಅಧ್ಯಯನ ಗುಂಪಗಳಲ್ಲಿ ಪ್ರಸ್ತುತ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಿದೆ. ಅಧ್ಯಯನ ಗುಂಪಿನಲ್ಲಿರುವ ತಜ್ಞರು ಪ್ರಸ್ತುತದಲ್ಲಿಯ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿಯ  ಆರೋಗ್ಯ ಕ್ಷೇತ್ರದ ಎಲ್ಲಾ ಬೆಳವಣಿಗೆಗಳ ಕುರಿತು ಸಂಪೂರ್ಣ ಮಾಹಿತಿ ಹೊಂದಿದ್ದಾರೆ. ಅವರು ತಮ್ಮ ಸ್ವಂತ ಅನುಭವ ಮತ್ತು ಪರಿಣತಿಯ ಆಧಾರದ ಜೊತೆಗೆ ಕರ್ನಾಟಕದಲ್ಲಿರುವ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದಲ್ಲಿರುವ ಎಲ್ಲಾ ಸಂಬಂಧಪಟ್ಟವರ ಜೊತೆಗೆ ಸಮಾಲೋಚನೆ ನಡೆಸಿ ಈ ಕೆಳಗಿನ ಸಮಗ್ರ ವರದಿಯನ್ನು ಸಲ್ಲಿಸಿರುತ್ತಾರೆ: 1. ಕರ್ನಾಟಕದ ವೈದ್ಯಕೀಯ ಶಿಕ್ಷಣದ ಸ್ಥಿತಿಗತಿಯ ಕುರಿತು ಅಧ್ಯಯನ ತಂಡದ ವರದಿ. 2. ಆರೋಗ್ಯ ಸೇವೆಗಳ ಪೂರೈಕೆಯ ಸ್ಥಿತಿಗತಿಯ ಕುರಿತು ಅಧ್ಯಯನ ತಂಡದ ವರದಿ.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಆಯೋಗವು ತನ್ನ ಒಟ್ಟಾರೆ ಕಾಲಾವಧಿಯಲ್ಲಿ, ಕಾರ್ಯತಂಡ ಕೈಗೊಂಡ ಮೂರು ವಿನೂತನ ಆರಂಭಿಕ ಕ್ರಮಗಳ ಕುರಿತು ಸಲ್ಲಿಸಿದ ನಿರ್ದಿಷ್ಟ ಶಿಫಾರಸ್ಸುಗಳ ಬಗ್ಗೆ ಆಯೋಗವು ಸ್ಪಂದಿಸಿದೆ. ಈ ಆರಂಭಿಕ ಕ್ರಮಗಳೆಂದರೆ ಜ್ಞಾನ ಫೆಲೋಶಿಪ್ ಯೋಜನೆ 2011, ಕರ್ನಾಟಕ ಆವಿಷ್ಕಾರ ಸಮಿತಿ ಮತ್ತು ಜ್ಞಾನ ಶೋಧ 2012.

  • ಜ್ಞಾನ ಫೆಲೋಶಿಪ್:  2011ರ ಉತ್ತರಾರ್ಧದಲ್ಲಿ ಈ ಕುರಿತ ಬಂದ ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿ ಪ್ರಸಿದ್ಧ ಸಂಶೋಧಕರ ಮಾರ್ಗದರ್ಶನದಲ್ಲಿ ಒಟ್ಟು 18 ಜನರನ್ನು ಈ ಜ್ಞಾನ ಫೆಲೋಶಿಪ್‍ಗಾಗಿ 10 ವಿಭಾಗಗಳಿಗೆ ಆಯ್ಕೆ ಮಾಡಲಾಯಿತು. ಅವುಗಳೆಂದರೆ ಸರ್ಕಾರದ ಯೋಜನಾ ಇಲಾಖೆ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆ (ಸೇವೆಗಳು),  ಯುವಜನ ಸೇವಾ ಇಲಾಖೆ, ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆ (ಚುನಾವಣೆ) ಇಲಾಖೆ ಮತ್ತು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಈ ಅಭ್ಯರ್ಥಿಗಳು ಕೊಪ್ಪಳ, ಬಾಗಲಕೋಟೆ, ಹಾವೇರಿ, ಧಾರವಾಡ, ದಾವಣಗೆರೆ, ತುಮಕೂರು, ಮಂಗಳೂರು, ಕೊಡಗು, ಶಿವಮೊಗ್ಗ ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಪ್ರಾತಿನಿಧ್ಯವನ್ನು ಹೊಂದಿದ್ದರು. ಇವರೆಲ್ಲರೂ ಅಂತಿಮವಾಗಿ ಜ್ಞಾನದ ವಿಷಯದ ಪ್ರಮುಖ ಆಯಾಮಗಳಿಗೆ ಸಂಬಂಧಪಟ್ಟಂತೆ ವರದಿಗಳನ್ನು ನೀಡಿದ್ದು, ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ.                 ಕರ್ನಾಟಕ ಆವಿಷ್ಕಾರ ಸಮಿತಿ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಿಗೆ ರಾಷ್ಟ್ರೀಯ ಮಟ್ಟದ ಆವಿಷ್ಕಾರ ಸಮಿತಿಯ ಅಧ್ಯಕ್ಷರು ಕರ್ನಾಟಕ ಆವಿಷ್ಕಾರ ಸಮಿತಿ ರಚಿಸಲು ಮನವಿ ಮಾಡಿಕೊಂಡರು. ಇದರನ್ವಯ ಪ್ರೊಫೆಸರ್ ಹೆಚ್. ಪಿ. ಕಿಂಚ (ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯ ನಿವೃತ್ತ ಉಪಕುಲಪತಿಗಳು) ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಆವಿಷ್ಕಾರ ಸಮಿತಿ ಸ್ಥಾಪನೆಗೆ ಆಯೋಗವು ಅವಶ್ಯಕವಾದ ಎಲ್ಲಾ ನೆರವನ್ನು ನೀಡಿತು. ಈ ಸಮಿತಿಯ ಕಾರ್ಯವ್ಯಾಪ್ತಿ ತೀರಾ ದೊಡ್ಡದಿದೆ. ವಿನೂತನ ಆವಿಷ್ಕಾರಗಳಿಗೆ ಸರ್ಕಾರದ ಉತ್ತೇಜನವನ್ನು ಬೆಂಬಲಿಸುವ, ರಾಜ್ಯದಲ್ಲಿ ಆವಿಷ್ಕಾರಗಳಿಗೆ ದೊರಕಬಹುದಾದ ಅವಕಾಶಗಳನ್ನು ಕಂಡುಹಿಡಿಯುವ, ಪ್ರತಿಭೆಗಳನ್ನು ಗುರುತಿಸಿ ಮಾನ್ಯತೆ ನೀಡುವ ಮತ್ತು ಯಶೋಗಾಥೆಗಳನ್ನು ಪ್ರಸರಣ ಮಾಡುವ, ವಿಚಾರ ಸಂಕಿರಣಗಳನ್ನು ಆಯೋಜಿಸುವ, ಉಪನ್ಯಾಸ, ಆವಿಷ್ಕಾರಗಳ ಕುರಿತು ಕಾರ್ಯಾಗಾರಗಳನ್ನು ನಡೆಸುವ ಮತ್ತು ರಾಜ್ಯ ಆವಿಷ್ಕಾರ ಪೋರ್ಟಲ್ ಇತ್ಯಾದಿ ಸೇರಿದಂತೆ ವಿಸ್ತೃತ ವ್ಯಾಪ್ತಿಯಲ್ಲಿ ಸಮಿತಿ ಕೆಲಸ ಮಾಡಿದೆ.
  • ಜ್ಞಾನ ಶೋಧ: ಬಹುವಿಧದ ಹಾಗೂ ಭಿನ್ನ ಆಸಕ್ತರನ್ನು ಆಯೋಗದ ಕೆಲಸಗಳಲ್ಲಿ ಭಾಗಿಯಾವಂತೆ ಉತ್ತೇಜಿಸಲು ಆಯೋಗವು `ಜ್ಞಾನ ಶೋಧ-2012' ಅನ್ನು ಸ್ಥಾಪಿಸಿತು. ಕರ್ನಾಟಕವನ್ನು ಗುರಿಯಾಗಿರಿಸಿಕೊಂಡು, ಸಾಮಾಜಿಕ ಮತ್ತು ಕೈಗಾರಿಕಾ ಆವಿಷ್ಕಾರ, ಕೃಷಿ ಸುಧಾರಣೆಗಾಗಿ ಸಮುದಾಯ ಜ್ಞಾನ ಮತ್ತು ಪರಿಪಾಠಗಳ ವರ್ಧನೆ, ಸಾರ್ವಜನಿಕ ಆರೋಗ್ಯಸುಧಾರಣೆಗಾಗಿ ಸಮುದಾಯ ಜ್ಞಾನ ಮತ್ತು ಪರಿಪಾಠಗಳನ್ನು ಅಭಿವೃದ್ದಿಪಡಿಸುವಿಕೆ, ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಅಭಿವೃದ್ಧಿ (ಸಾಮಾನ್ಯ ಪದವೀಧರರಲ್ಲಿ), ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಜ್ಞಾನದಲ್ಲಿ ಐಸಿಟಿ ಉಪಯೋಗ ಸೇರಿದಂತೆ ಹತ್ತು ಹಲವು ಭಿನ್ನ ವಿಷಯಗಳ ಕುರಿತಂತೆ ಸಂಶೋಧನಾ ಅಧ್ಯಯನ ನಡೆಸಲು ಹಲವು ಸಂಸ್ಥೆಗಳಿಗೆ ಆಹ್ವಾನ ನೀಡುವ ಪ್ರಕ್ರಿಯೆಯನ್ನು ಇದು ಹೊಂದಿದೆ. ಇದಲ್ಲದೆ ಕರ್ನಾಟಕವನ್ನು ನಿರ್ದಿಷ್ಟವಾಗಿಸಿಕೊಂಡು, ಸಾರ್ವಜನಿಕ ಆರೋಗ್ಯ, ಉನ್ನತ ಶಿಕ್ಷಣ, ಶಿಕ್ಷಕರ ವೃತ್ತಿಪರತೆ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ, ಸಮುದಾಯ ಜ್ಞಾನ ಮತ್ತು ಪರಿಪಾಠಗಳು ಮತ್ತು ಜ್ಞಾನ ಸಮಾಜ ನಿರ್ಮಾಣದಂತಹ ವಿಶಾಲ ವ್ಯಾಪ್ತಿಯಲ್ಲೂ ಇದು ಕೆಲಸ ಮಾಡಿದೆ. ಈ ಕ್ರಮಗಳಿಂದ ಆಯೋಗಕ್ಕೆ ನಾನಾ ಸಂಶೋಧನಾ ಸಂಘಟನೆಗಳ ಜೊತೆಗೂಡಿ ಪಾಲುದಾರಿಕೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿದ್ದು, ಈ ಮೂಲಕ ಹೊಸ ಹೊಸ ಕಲ್ಪನೆಗಳನ್ನು ಪಡೆದುಕೊಂಡು ಕರ್ನಾಟಕವನ್ನು ಸುಜ್ಞಾನಿ ಸಮಾಜವನ್ನಾಗಿಸುವ ಆಯೋಗದ ಲಕ್ಷ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದೇ ವೇಳೆ, ಒಟ್ಟು 13 ಆಯ್ದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು,

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಸ್ವಯಂ ಸೇವಾ ಸಂಘಟನೆಗಳು ಮತ್ತು ಸರ್ಕಾರ ಹಾಗೂ ಅರೆ ಸರ್ಕಾರಿ ಸಂಘಟನೆ/ಮಂಡಳಿಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆಯ ಸ್ಥಾನ ಹಾಗೂ ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ನೋಂದಾಯಿತ ಟ್ರಸ್ಟ್‍ಗಳು ಹಾಗೂ ಪ್ರತಿಷ್ಠಾನಗಳು ತಮ್ಮ ಸಂಶೋಧನೆಗಳನ್ನು ನಡೆಸಿವೆ. ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಆಯ್ಕೆ ಪ್ರಕ್ರಿಯೆ, ಮೇಲ್ವಿಚಾರಣೆಯನ್ನು ಅತಿ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಕೈಗೊಳ್ಳಲಾಗಿದೆ. ಸ್ಥಿತ್ಯಂತರ ಮತ್ತು ತರ್ಕಾಧಾರಿತ ಪಾತ್ರ ಆಯೋಗದ ಮೊದಲ ಹಂತದ ಅಂತ್ಯದಲ್ಲಿ ಪ್ರಕ್ರಿಯೆ, ಸಾಧನೆ, ಮಿತಿ ಮತ್ತು ಮುಂದೆ ಸಾಗಬೇಕಾದ ದಾರಿಯ ಕುರಿತು ವಿವಿಧ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳು ವ್ಯಕ್ತವಾದವು. 2011ರ ಮಹಾ ಲೆಕ್ಕಪಾಲರ ವರದಿಯಲ್ಲಿ ಪ್ರಯೋಗಗಳ ಸಂಖ್ಯೆ ವೃದ್ಧಿ, ಹೆಚ್ಚು ಹೆಚ್ಚು ಬಹುಸ್ತರ ಅಧ್ಯಯನಗಳ ಮೂಲಕ ಮಾಹಿತಿ ಉತ್ಪಾದನೆಯನ್ನು `ಜ್ಞಾನದ ಉತ್ಪಾದನೆ'ಯನ್ನಾಗಿ ಪರಿವರ್ತಿಸುವುದು, ವಿಶ್ವವಿದ್ಯಾಲಯಗಳಿಂದ ಬೇರೆಯದಾದ ಜ್ಞಾನ ಸಮಾಜ ನಿರ್ಮಾಣ ಸೇರಿದಂತೆ ಆಯೋಗದಲ್ಲಿ ಅಪೂರ್ಣ ಕಾರ್ಯಸೂಚಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಸರ್ಕಾರದ ನೀತಿ ನಿಯಮಾವಳಿಗಳು, ಹಣಕಾಸು ಪೂರೈಕೆ ಮತ್ತು ಪ್ರತಿ ಯೋಜನೆಯ ತಾಂತ್ರಿಕ ವಿವರ, ಯೋಜನೆಗಳ ಪುನರ್ ಪರಿಶೀಲನೆ ಮತ್ತು ಕಾಲಾನುಕಾಲಕ್ಕೆ ಲೆಕ್ಕಪತ್ರ ಪರಿಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಬಗ್ಗೆ ಇದೇ ಅಧ್ಯಯನ (ಮಹಾಲೆಕ್ಕಪಾಲಕರ ವರದಿ) ಸಲಹೆ ನೀಡಿದೆ. 2011ರಲ್ಲಿ ರಾಮಪ್ರಸಾದ್ ಮತ್ತು ಶ್ರೀಧರ್ ಎಂಬುವವರು ಇನ್ನೊಂದು ಅಧ್ಯಯನ ನಡೆಸಿದ್ದು, ಮೂರು ಸ್ತರದ ವಿಭಿನ್ನ ಮಾದರಿಯ ಮೂಲಕ (ಟ್ರಿಪಲ್ ಹೆಲಿಕ್ಸ್) ಆಯೋಗದ ಪಾತ್ರವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಮುಖ್ಯವಾದ ಪಾಲುದಾರಿಕೆಗಳ ಪರಿಚಯದ ವಿಧಾನ, ಅವುಗಳ ಸಂಖ್ಯೆ ಹೆಚ್ಚಳ ಮತ್ತು ನಿಯಂತ್ರಣದ ಬಗ್ಗೆ ಸಂಪೂರ್ಣ ವಿವರವಾದ ಅಧ್ಯಯನ ನಡೆಸಲಾಗಿದೆ. ವರದಿಯು ಯೋಜನೆಗಳನ್ನು ಮೂರು ಸ್ತರದ (ಟ್ರಿಪಲ್ ಹೆಲಿಕ್ಸ್) ಅಂಶಗಳನ್ನಾಗಿ ವಿಂಗಡಿಸಲು ಮತ್ತು ಸಂಘಟಿಸಲು ಸಾಕಷ್ಟು ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ಹೊಸ ಕ್ಷೇತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಮೂಲಕ ಒಟ್ಟಾರೆ ಚೌಕಟ್ಟನ್ನು ವಿಸ್ತರಿಸಬಹುದು ಎಂದು ವರದಿಯು ಅಭಿಪ್ರಾಯಪಟ್ಟಿದೆ. ಲೆಕ್ಕಪತ್ರ ವರದಿ (ಪಿಎಸಿ-2011) ಮತ್ತು ಸಂಶೋಧನಾ ವರದಿ (ರಾಮಪ್ರಸಾದ್ ಮತ್ತು ಶ್ರೀಧರ್-2011)ಗಳಿಂದ ತಿಳಿದುಬಂದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಆಯೋಗದ ಎರಡನೇ ಹಂತಕ್ಕೆ ಅಸ್ತಿಭಾರ ಹಾಕಲಾಗಿದೆ. ಬಳಿಕ ಆಯೋಗದ ಎರಡನೇ ಹಂತದ ತನ್ನ ಲಕ್ಷ್ಯಗಳನ್ನು ಈ ಕೆಳಗಿನಂತೆ ಸ್ಪಷ್ಟವಾಗಿ ಗುರುತಿಸಿಕೊಂಡಿತು:

  • ದೀರ್ಘಾವಧಿ ಕಾರ್ಯಯೋಜನೆ
  • ವ್ಯವಸ್ಥೆ/ಇಲಾಖೆಗಳಲ್ಲಿ ಒಂದು ಪರಂಪರೆಯನ್ನು ಹುಟ್ಟುಹಾಕುವ ಒಲವು
  • ಸಂಬಂಧಪಟ್ಟ ಇಲಾಖೆಗಳ ನಿರ್ದಿಷ್ಟ ಅವಶ್ಯಕತೆ ಮತ್ತು ನಿರೀಕ್ಷೆಗಳಿಗೆ ಸೂಕ್ತವಾಗಿ ಕೆಲಸ ನಿರ್ವಹಣೆ  ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲದೆ ಇತರ ಹಲವು ಆಸಕ್ತರನ್ನು ತಲುಪುದು
  • ನಾಗರಿಕರ ಜೊತೆ ಇನ್ನಷ್ಟು ಉತ್ತಮ ಪಾಲ್ಗೊಳ್ಳುವಿಕೆ ಈ ಲಕ್ಷ್ಯಗಳ ಆಧಾರದಲ್ಲಿ ಆಯೋಗವು ತನ್ನ ಸಂಯೋಜನೆ ಮತ್ತು ಗಮನದಲ್ಲಿ ಮಹತ್ವದ ಪರಿವರ್ತನೆಯನ್ನು ಹೊಂದಿತಲ್ಲದೇ, ಶಿಫಾರಸ್ಸುಗಳನ್ನು ಸಲ್ಲಿಸುವ ಪಾತ್ರವನ್ನು ಘಟಕದ ಹೊರಗು ಮತ್ತು ಒಳಗೂ ಮುಂದುವರಿಸಿತು. ಮೊದಲ ಹಂತದಲ್ಲಿ ಕಾರ್ಯತಂಡಕ್ಕಿಂತಲೂ ಹೆಚ್ಚು ಗಮನಹರಿಸುವ ನಿಟ್ಟಿನಲ್ಲಿ ಐದು ಮಿಶನ್ ಗುಂಪುಗಳನ್ನು ಸಾಪ್ಥಿಸಲಾಯಿತು. ಇದಕೆ ್ಕಹೆಚುª್ಚÀರಿಯಾಗಿ ಕರ್ನಾಟಕ ಸರ್ಕಾರದ ನಾನಾ ಇಲಾಖೆಗಳಲಿ ್ಲಜಿಐಎಸ್ ಉಪಯೋಗವನ್ನು ಸಾಂಸ್ಥೀಕರಣಗೊಳಿಸುವ ವ್ಯವಸ್ಥೆಯನ್ನು ತಯಾರಿಸುವ ನಿರ್ದಿಷ್ಟ ಉದ್ದೇಶದೊಂದಿಗೆ ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಕುರಿತ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ. ಕಾರ್ಯಪಡೆಯಿಂದ ಮಿಶನ್ ಗುಂಪಿಗೆ ಕೆಲಸವನ್ನು ವರ್ಗಾಯಿಸುವ ಆಯೋಗದ ಕ್ರಮವು, ಇದರ ಗುರಿ ನಿರ್ದೇಶಿತ ತೊಡಗಿಸಿಕೊಳ್ಳುವಿಕೆ, ಉನ್ನತ ಮಟ್ಟದ ಕಾರ್ಯತಂತ್ರದಲ್ಲಿ ಪ್ರೌಢಿಮೆ ಮತ್ತು ವಿಸ್ತೃತ ಗುರಿಯನ್ನು ಸಾಧಿಸುವ ಕುರಿತಾದ ಬದ್ಧತೆಗೆ ಸ್ಪಷ್ಟವಾದ ಸಾಕ್ಷಿಯಾಗಿದೆ.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಒಟ್ಟಾರೆಯಾಗಿ ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವ ಏಕೈಕ ಗುರಿಯೊಂದಿಗೆ ಆಯೋಗವು ರಾಜ್ಯ ಮಟ್ಟದ ಜ್ಞಾನ ಆಯೋಗವಾಗಿ ಹೊರಹೊಮ್ಮಿದೆ. ಪ್ರಸಕ್ತ, ಸರ್ಕಾರದ ವಿವಿಧ ಇಲಾಖೆಗಳ ಜೊತೆ ಕೆಲಸ ಮಾಡುತ್ತಾ ತನ್ನ ಶಿಫಾರಸ್ಸುಗಳಲ್ಲಿ ಬಹಳಷ್ಟು ಯಶಸ್ವಿಯಾಗಿ ಜಾರಿಗೊಳಿಸಿದ ಭಾರತದ ಏಕೈಕ ಆಯೋಗ ಎಂಬ ಹೆಗ್ಗಳಿಕೆಗೆ ಆಯೋಗವು ಪಾತ್ರವಾಗಿದೆ. ವಿನೂತನ ನೀತಿನಿಯಮ ಕಲ್ಪನೆ ಮಾತ್ರವಲ್ಲ ಪ್ರಾರಂಭಿಕ ಹಂತದಲ್ಲಿ ಅದರ ಅನುಷ್ಠಾನದಲ್ಲೂ ಆಯೋಗವು ಅನನ್ಯ ಪಾತ್ರ ವಹಿಸುತ್ತಿದೆ. ಇದರ ಮೂರು ಕಾರ್ಯನಿರ್ವಾಹಕ ಪಾತ್ರಗಳೆಂದರೆ:

  • ಒಂದು ಶಿಫಾರಸ್ಸು ಮಂಡಳಿಯಾಗಿ: ಆಯೋಗವು ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿದ್ದು, ಈ ಮೂಲಕ ತನಗೆ ವಹಿಸಲಾದ ಕೆಲಸವನ್ನು ಪೂರ್ಣಗೊಳಿಸಿದೆ. ಕಾರ್ಯತಂಡ ಮತ್ತು ಮಿಶನ್ ಗುಂಪುಗಳಂತಹ ರಚನೆಗಳನ್ನು ಸ್ಥಾಪಿಸಿರುವ ಆಯೋಗ, ಈ ಮೂಲಕ ನಾನಾ ಕ್ಷೇತ್ರಗಳ ಬಗ್ಗೆ ಗಮನಹರಿಸಿದೆ. ಇವುಗಳು ಹೊಸ ಹೊಸ ಯೋಜನೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಚಿಂತಕರ ಚಾವಡಿಯಾಗಿ ಮಾರ್ಪಟ್ಟಿದೆ. ಇವುಗಳು ನೀಡಿದ ಯೋಜನೆಗಳು/ಕಲ್ಪನೆಗಳೇ ಆಯೋಗವು ಸಲ್ಲಿಸಿದ ಶಿಫಾರಸ್ಸುಗಳಿಗೆ ಆಧಾರವಾಗಿದೆ.
  • ಒಂದು ಸೌಲಭ್ಯಕಾರನ ಪಾತ್ರವಹಿಸಿರುವ ಆಯೋಗ: ನೀತಿ ರಚನೆ, ಸಂಸ್ಥೆಗಳ ರಚನೆ ಮತ್ತು ಅಂತರ್ ಇಲಾಖೆ ಚಟುವಟಿಕೆಗಳ ಸಮನ್ವಯ ಕುರಿತಂತೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿದೆ. ಪ್ರಾಯೋಗಿಕ ಯೋಜನೆಗಳ ಬಗ್ಗೆ ಇಲಾಖೆಯೊಳಗೆ ಒಡೆತನದ ಭಾವನೆಯನ್ನು ಹುಟ್ಟುಹಾಕಲಾಗಿದ್ದು, ಆಯೋಗದ ಶಿಫಾರಸ್ಸುಗಳ ಆಧಾರದಲ್ಲೇ ಇವುಗಳು (ಪ್ರಾಯೋಗಿಕ ಯೋಜನೆ) ಅನುಷ್ಠಾನಕ್ಕೆ ಬರುತ್ತಿವೆ.
  • ಸಂಯೋಜಕ: ಯೋಜನೆ ಸಿದ್ಧಪಡಿಸುವವರು ಮತ್ತು ಅನುಷ್ಠಾನಗೊಳಿಸುವವರ ನಡುವೆ ತಾರ್ಕಿಕ ಸಂಪರ್ಕ ಇರುವುದನ್ನು ಖಾತರಿಪಡಿಸಿಕೊಳ್ಳುವ ಕೆಲಸ ನಿರ್ವಹಿಸುತ್ತಿರುವ ಆಯೋಗ, ಈ ಮೂಲಕ ಒಬ್ಬ ಸಂಯೋಜಕನಾಗಿ ಕೆಲಸ ನಿರ್ವಹಿಸಿದೆ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಆಯೋಗವು ಕೈಗೊಂಡ ಕಾರ್ಯಗಳ ವಿಶ್ಲೇಷಣೆ

ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ (ಎಂ ಮತ್ತು ಇ) ಮೂಲಕ ಪೂರಕ ದತ್ತಾಂಶಗಳ ವಿಶ್ಲೇಷಣೆಯ ಚೌಕಟ್ಟು ಆಯೋಗವು ಕೈಗೊಂಡ ಚಟುವಟಿಕೆಗಳ ಸ್ವರೂಪ ಮತ್ತು ಗಾತ್ರದ ಅರ್ಥೈಸುವಿಕೆ ಪ್ರಸಕ್ತ ದಿನಾಂಕದವರೆಗೆ ನಾವು ಮಾಡಿದ ಮೌಲ್ಯಮಾಪನದಲ್ಲಿ ಆಯೋಗವು ತನ್ನ ಅಧಿಕಾರವಧಿಯಲ್ಲಿ ಕೈಗೊಂಡ ಕಾರ್ಯಗಳ ಕುರಿತ ಎಲ್ಲಾ ಮಾಹಿತಿಗಳನ್ನು ವಿವಿಧ ಪೂರಕ ಮೂಲಗಳಿಂದ ಸಂಗ್ರಹಿಸಿ, ಪ್ರಮುಖ 6 ನಿಗದಿತ ವಲಯಗಳಲ್ಲಿ ಹಾಕಿಕೊಳ್ಳಲಾದ ಗುರಿಯನ್ನು ಅದು ಸಾಧಿಸಿರುವ ಕುರಿತಂತೆ ಆಯೋಗ ರಚಿಸಿದ ನೀತಿಸೂತ್ರದ ಅನುಸಾರ ವಿಶ್ಲೇಷಣೆ ಮಾಡಲಾಗಿದೆ. ಎಲ್ಲಾ ಚಟುವಟಿಕೆಗಳು ಎಂ ಮತ್ತು ಇ (ಮ್ಯಾಟ್ರಿಕ್ಸ್)ನ ಸಾಮಾನ್ಯ ನೀತಿ ಚೌಕಟ್ಟಿನಡಿ(ಚಿತ್ರ 3.1)ಯಲ್ಲಿ ಬರುತ್ತಿದೆ. ಇದು ಮುಖ್ಯವಾಗಿ ಪಡೆದುಕೊಂಡ ಹೂಡುವಳಿ, ಪ್ರಕ್ರಿಯೆ ಮತ್ತು ಉತ್ಪನ್ನ ಮತ್ತು ಅಂತಿಮ ಫಲಿತಾಂಶ (ಕಾರ್ಯಕ್ರಮಗಳ ಅಲ್ಪಕಾಲಾವಧಿಯ ಪರಿಣಾಮದ ಅಂಶಗಳನ್ನು ಬಿಟ್ಟು ಪರಿಗಣಿಸಲಾಗಿದೆ)ಗಳನ್ನು ಒಳಗೊಂಡಿದೆ. ಎಂ ಮತ್ತು ಇ ಅಂಶಗಳ ನಡುವೆ ತೀರಾ ತೆಳುವಾದ ವಿಭಜನೆಯಿದ್ದು, ಇವು ಪ್ರಾಯೋಗಿಕವಾಗಿ ಅಷ್ಟೊಂದು ಸ್ಪಷ್ಟವಾಗಿಲ್ಲ. ಹೀಗಾಗಿ ತರ್ಕಾಧಾರಿತ ವೈಶಿಷ್ಟ್ಯಗಳ ವಿಶ್ಲೇಷಣೆ ಸಂದರ್ಭದಲ್ಲಿ ಸಾಕಷ್ಟು ಜಾಗ್ರತೆಯನ್ನು ವಹಿಸಲಾಗಿದೆ.

ಫಲಿತಾಂಶಗಳುಹೂಡುವಳಿ ಪ್ರಕ್ರಿಯೆ ಉತ್ಪನ್ನ

ಚಿತ್ರ 3.1: ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ (ಎಂ ಮತ್ತು ಇ) ಅಂಶಗಳು

ಗಮನಕೇಂದ್ರ ವಲಯಗಳ ಕುರಿತ ಹೂಡುವಳಿಯನ್ನು ಪ್ರಮುಖ ಚಟುವಟಿಕೆಗಳಾದ ಸಮಿತಿಗಳ ರಚನೆ, ಕಾರ್ಯನಿರ್ವಹಣೆ ಗುಂಪು, ಅಧ್ಯಯನ ಗುಂಪು, ಮಿಶನ್ ಗುಂಪು, ಕಾರ್ಯಪಡೆ, ಪ್ರಸ್ತಾವನೆಗಳ ಕೋರಿಕೆ, ಕಚೇರಿ ಸ್ಥಾಪನೆ ಮತ್ತು ಇತರ ಆಡಳಿತಾತ್ಮಕ ರಚನೆಗಳಿಗಾಗಿ (ಸಿಬ್ಬಂದಿ, ಉಪಕರಣ ಇತ್ಯಾದಿ) ಬಳಸಿಕೊಳ್ಳಲಾಗಿದೆ. ವಿವಿಧ ಗಮನಕೇಂದ್ರಿತ ವಲಯಗಳ ಪ್ರಕ್ರಿಯೆಯ ಅಂಶಗಳಿಗೆ ಸಂಬಂಧಪಟ್ಟವರು, ಮುಖ್ಯಮಂತ್ರಿ, ಸರ್ಕಾರಿ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ತಜ್ಞರ ಜೊತೆಗೆ ಸಭೆಗಳನ್ನು ಒಳಗೊಂಡಿದೆ.  ವಿವಿಧ ಗಮನಕೇಂದ್ರಿತ ವಲಯಗಳ ಉತ್ಪನ್ನ ಅಂಶಗಳು, ಶಿಫಾರಸ್ಸುಗಳ ತಯಾರಿ, ಅಭಿಪ್ರಾಯ, ಯೋಜನೆಗಳ ಜಾರಿಗೆ ಅಂತಿಮ ಸಿದ್ಧತೆ, ಕರಡು ಉಲ್ಲೇಖ ಇತ್ಯಾದಿಗಳನ್ನು ಒಳಗೊಂಡಿವೆ. ಫಲಿತಾಂಶವು ಯೋಜನೆಗಳು ಮತ್ತು ಪೋರ್ಟಲ್‍ಗಳ ಜಾರಿ,

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಮಸೂದೆ ಅಥವಾ ನೀತಿಗಳ ಅನುಮೋದನೆ, ಅಂತಿಮ ವರದಿ, ದೂರದೃಷ್ಟಿಯ ಕುರಿತ ದಾಖಲೆಗಳು ಇತ್ಯಾದಿಗಳನ್ನು ಒಳಗೊಂಡಿದೆ. ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಆಯೋಗವು ಚಟುವಟಿಕೆಗಳ ಪ್ರಗತಿಯ ಸ್ವರೂಪ ಮತ್ತು ವಿಸ್ತಾರವನ್ನು ಅರ್ಥ ಮಾಡಿಕೊಳ್ಳಲು ವಿಶ್ಲೇಷಣೆಗಳನ್ನು ನಡೆಸಲಾಗಿದೆ. ವಿಶ್ಲೇಷಣೆಯ ಫಲಿತಾಂಶವನ್ನು ಕೋಷ್ಟಕ 3.1, ಚಿತ್ರ 3.2 ಮತ್ತು ಚಿತ್ರ 3.3ರಲ್ಲಿ ನೀಡಲಾಗಿದೆ. ಆಯೋಗದ ಚಟುವಟಿಕೆಗಳ ವಿಸ್ತೃತತೆಯ ವಿಶ್ಲೇಷಣೆಯಲ್ಲಿ ಒಟ್ಟು ಆರು ಗಮನ ಕೇಂದ್ರಿತ ವಲಯಗಳ ಪೈಕಿ ಎರಡರಲ್ಲಿ ಅತ್ಯಂತ ಹೆಚ್ಚು ಕೆಲಸ ಸಾಧ್ಯವಾಗಿದೆ. ಅವುಗಳೆಂದರೆ ಗ್ರಂಥಾಲಯ ಮತ್ತು ಜ್ಞಾನಸಂಪರ್ಕ ಹಾಗೂ ಉನ್ನತ ಶಿಕ್ಷಣ. `ಮಾನವೀಯತೆ ಮತ್ತು ಸಮಾಜ ವಿಜ್ಞಾನ’ ವಲಯವು ಅತ್ಯಂತ ಕಡಿಮೆ ಚಟುವಟಿಕೆಗಳನ್ನು ಕಂಡ ವಲಯವಾಗಿದೆ. ಹೀಗಿದ್ದರೂ, ಎಂ ಮತ್ತು ಇ ಸ್ವರೂಪ ಕುರಿತಾಗಿ ನಡೆಸಲಾದ ವಿಶ್ಲೇಷಣೆಯು ಭಿನ್ನ ಚಿತ್ರಣ ನೀಡುತ್ತಿದೆ. ಆದರೆ, ಎಲ್ಲಾ ವಲಯಗಳಲ್ಲೂ ಸರಾಸರಿ ಮತ್ತು ಪ್ರತ್ಯೇಕ ಪ್ರಕ್ರಿಯೆಯ ಹಂತದಲ್ಲಿರುವ ಚಟುವಟಿಕೆಗಳು ಹೆಚ್ಚು ಕಂಡು ಬರುತ್ತಿದ್ದು, ಆದರೆ ಅಂತಿಮ ಫಲಿತಾಂಶದಲ್ಲಿ ಮಾತ್ರ ಅವು ಅತ್ಯಂತ ಕಡಿಮೆ ಎಂದು ಕಂಡು ಬರುತ್ತಿವೆ. ಆರೋಗ್ಯ ಮತ್ತು ಉನ್ನತ ಶಿಕ್ಷಣ ವಲಯಗಳ ಫಲಿತಾಂಶ ಅಂಶಗಳು ಇತರ ವಲಯಗಳಿಗಿಂತ ಹೆಚ್ಚಿವೆ. ಆದರೂ ಒಟ್ಟಾರೆ ಫಲಿತಾಂಶ ಕಡಿಮೆಯಿದೆ. `ಸಾಕ್ಷಾರತೆ ಮತ್ತು ಶಾಲಾ ಶಿಕ್ಷಣದ ಫಲಿತಾಂಶವು ಹೆಚ್ಚಿದೆ. `ಸಾಕ್ಷಾರತೆ ಮತ್ತು ಶಾಲಾ ಶಿಕ್ಷಣ’ ಮತ್ತು `ಗ್ರಂಥಾಲಯ ಮತ್ತು ಜ್ಞಾನಸಂಪರ್ಕ ವಲಯವು ಹೋಲಿಕೆ ಮಾಡಿದರೆ ಇತರ ವಲಯಗಳ ಫಲಿತಾಂಶಕ್ಕಿಂತ ಹೆಚ್ಚಿನ ಸಾಧನೆ ಮಾಡಿವೆ.

ಕೋಷ್ಟಕ 3.1: ಎಂ ಮತ್ತು ಇ ಅಂಶಗಳ ಶೇಕಡವಾರು ಹಂಚಿಕೆ

(ಎನ್=235) ನಿರ್ಣಾಯಕ ವಲಯ ಹೂಡುವಳಿ ಪ್ರಕ್ರಿಯೆ ಉತ್ಪನ್ನ ಫಲಿತಾಂಶ ಸಾಕ್ಷರತೆ ಮತ್ತು ಶಾಲಾ ಶಿಕ್ಷಣ 12 44 29 15 ವೃತ್ತಿಪರ ಶಿಕ್ಷಣ 22 49 27 2 ಆರೋಗ್ಯ 26 32 37 5 ಗ್ರಂಥಾಲಯ ಮತ್ತು ಜ್ಞಾನ ಸಂಪರ್ಕ 28 36 24 12 ಮಾನವೀಯತೆ ಮತ್ತು ಸಮಾಜ ವಿಜ್ಞಾನ 10 70 20 0 ಉನ್ನತ ಶಿಕ್ಷಣ 9 35 45 11 ಒಟ್ಟು 19 40 32 9

ಗಮನಕೇಂದ್ರಿತ ವಲಯಗಳ ಪ್ರಗತಿ ಮತ್ತು ತಾರ್ಕಿಕ ಸಂಪರ್ಕದ ಚಟುವಟಿಕೆಗಳು ಎಂ ಮತ್ತು ಇ ಚೌಕಟ್ಟಿನ ಮೂಲಕ ಗಮನಕೇಂದ್ರಿತ ವಲಯಗಳ ಕುರಿತಾದ ವಿಶ್ಲೇಷಣೆಯನ್ನು ತೋರಿಸಿರುವ ಎಲ್ಲಾ ವಿವರಗಳ ಸಾರಾಂಶವೆಂದರೆ,  ಗಮನಕೇಂದ್ರಿತ ವಲಯಗಳು ಎಂ ಮತ್ತು ಇ ಅಂಶಗಳ ಅನುಸಾರ ಸಾಧಿಸಿರುವ ಯಶಸ್ಸಿನಲ್ಲಿ 6ರ ಪೈಕಿ 4 ಅಂಶಗಳು (ಆರೋಗ್ಯ, ಉನ್ನತ ಶಿಕ್ಷಣ, ಗ್ರಂಥಾಲಯ ಹಾಗೂ ಜ್ಞಾನ ಸಂಪರ್ಕ, ಸಾಕ್ಷರತೆ ಹಾಗೂ ಶಾಲಾ ಶಿಕ್ಷಣ) ಹೆಚ್ಚು ಫಲಿತಾಂಶವನ್ನು ನೀಡಿವೆ. ಇದು ಪ್ರಾಯಶಃ ಅವುಗಳ ಚಟುವಟಿಕೆಗಳ ಸ್ವರೂಪ, ಮತ್ತಿತರ ವಿಶೇಷ ಕಾರಣಗಳನ್ನು ಒಳಗೊಂಡಿವೆ ಎಂದು ತರ್ಕಿಸಲಾಗಿದೆ. ಈ ಆರು ಅಂಶಗಳ ಚಟುವಟಿಕೆಗಳ ಸಮಗ್ರ ಗುಣಾತ್ಮಕ ಪರಿಶೀಲನೆಯಿಂದ ನಮಗೆ ಹಲವು ಗುಣಾತ್ಮಕ ಆಸಕ್ತಿಕರ ಒಳನೋಟಗಳು ಗೋಚರಿಸಿವೆ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಚಿತ್ರ. 3.2:  ಪ್ರತಿ ಗಮನಿಕೃತ ವಲಯದ ನಡುವಿನ ಮೌಲ್ಯ ಮಾಪನ ಮತ್ತು ಮೇಲ್ವಿಚಾರಣಾ (ಎಂ ಮತ್ತು ಇ) ಪ್ರಮಾಣದ ಅನುಪಾತ

ಚಿತ್ರ. 3.3 ಮೌಲ್ಯ ಮಾಪನ ಮತ್ತು ಮೇಲ್ವಿಚಾರಣಾ (ಎಂ ಮತ್ತು ಇ) ಯ ಪ್ರತಿ ಗಮನಕೇಂದ್ರಿತ ವಲಯದ ನಡುವಿನ ಅನುಪಾತ

ಆಯೋಗದ ಕೆಲಸಗಳ ಪೈಕಿ 6 ಗಮನಕೇಂದ್ರಿತ ವಲಯಗಳ ಕಾರ್ಯಗಳು ಕೆಲವೊಮ್ಮೆ ಅತಿ ಸಂಪರ್ಕ(ತಾರ್ಕಿಕ ಹಂತ) ಮತ್ತು ಹೂಡುವಳಿ, ಪ್ರಕ್ರಿಯೆ ಮತ್ತು ಉತ್ಪನ್ನ ಮತ್ತು ಫಲಿತಾಂಶಗಳ ನಡುವೆ ಸಂಪರ್ಕ ಹೊಂದಿರುವುದನ್ನು ಕಾಣಬಲ್ಲೆವಾದರೂ ಇತರ ಕೆಲವು ಚಟುವಟಿಕೆಗಳು ಇಂತಹ ಸಂಪರ್ಕವನ್ನು ಹೊಂದಿಲ್ಲದಿರುವುದು ಕಂಡು ಬಂತು. ಸ್ಪಷ್ಟವಾಗಿ ಸಂಪರ್ಕ ಹೊಂದಿರುವ ಕೆಲವು ಚಟುವಟಿಕೆಗಳು ಈ ಕೆಳಗಿನಂತಿವೆ. 1. ಓದು ಪುಟಾಣಿ ಯೋಜನೆ 2. ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

3. ಶಿಷ್ಯವೃತ್ತಿ ನೀತಿ ಕಾರ್ಯ 4. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಅಭಿವೃದ್ಧಿ ಕಾರ್ಯ 5. ವಲಯವಾರು ಔಷಧ ಸಂಗ್ರಹ 6. ಕಣಜ ಅಂತರ್ಜಾಲದ ಆರಂಭ 7. ಮಾನವ ಭಂಡಾರ ಯೋಜನೆ 8. ಜ್ಞಾನವಾಹಿನಿ ಯೋಜನೆ (ಸಂಚಾರಿ ಅಂತಾರ್ಜಾಲ ವ್ಯಾನ್) 9. ಪ್ರಸಕ್ತ ಇರುವ ಎರಡು ವಿಶ್ವವಿದ್ಯಾಲಯಗಳನ್ನು ಮಾದರಿ ವಿಶ್ವವಿದ್ಯಾಲಯಗಳನ್ನಾಗಿ ಪರಿವರ್ತಿಸುವ ಯೋಜನೆ 10. ದಕ್ಷಾ ಯೋಜನೆ 11. ಆವಿಷ್ಕಾರಾತ್ಮಕ ವಿಶ್ವವಿದ್ಯಾಲಯ ಮಸೂದೆ 2011. ಸಂಬಂಧಪಟ್ಟವರ ಪರಿಶೀಲನೆಯ ಅನುಸಾರ ಪ್ರಾಥಮಿಕ ದತ್ತಾಂಶಗಳ ವಿಶ್ಲೇಷಣೆ ಯೋಜಕರ, ಅನುಷ್ಠಾನಿಕರ ಮತ್ತು ಬಳಕೆದಾರರ ದೃಷ್ಟಿಕೋನದಲ್ಲಿ: ಆಯೋಗದ ಕೆಲಸಗಳ ಅನುಷ್ಠಾನದ ವಿಶ್ಲೇಷಣೆಯಲ್ಲಿ ಎರಡು ಹಂತಗಳಿವೆ. ಮೌಲ್ಯಮಾಪನ ಮತ್ತು ಮೇಲ್ವಿಚಾರಣೆಯ ಚೌಕಟ್ಟಿನೊಳಗೆ ಲಭಿಸಿದಂತಹ ಪೂರಕ ಮಾಹಿತಿಗಳನ್ನು ಆಧರಿಸಿ ಆಯೋಗವು ನಡೆಸಿದ ಎಲ್ಲಾ ಚಟುವಟಿಕೆಗಳ ಸಮಗ್ರ ದಾಖಲಾತಿ ಮತ್ತು ಆಯೋಗವು ನಡೆಸಿದ ಶಿಫಾರಸ್ಸು/ಯೋಜನೆ/ಸಂಶೋಧನಾ ಅಧ್ಯಯನದಲ್ಲಿ ಭಾಗಿಯಾದವರಿಂದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿರುವುದನ್ನು ಇದು ಒಳಗೊಂಡಿದೆ. ಇವರುಗಳೆಂದರೆ 1. ಯೋಜಕರು-ವಿವಿಧ ಕ್ಷೇತ್ರಗಳ ತಜ್ಞರು, ವಿವಿಧ ಕಾರ್ಯನಿರತ ಗುಂಪುಗಳು ಮತ್ತು ಮಿಶನ್ ಗುಂಪುಗಳ ಜೊತೆಗೂಡಿ ತಯಾರಿಸಿದ ಶಿಫಾರಸ್ಸುಗಳು, ಕಾರ್ಯಯೋಜನೆಗಳು, ಸಂಶೋಧನಾ ಅಧ್ಯಯನಗಳನ್ನು ಸಿದ್ಧಪಡಿಸಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿರುವುದು. 2. ಅನುಷ್ಠಾನಕರು- ಶಿಫಾರಸ್ಸುಗಳು/ಕಾರ್ಯ ಯೋಜನೆಗಳು/ ಸಂಶೋಧನಾ ಅಧ್ಯಯನಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡ ಇಲಾಖೆಗಳ ಅಧಿಕಾರಿಗಳು ಮತ್ತು ಕೆಲಸವನ್ನು  ವಿಸ್ತರಿಸಿದ, ಯೋಜನೆಗಳಿಗೆ ನೆರವು ನೀಡಿದ ಹಾಗೂ ಸಂಶೋಧನಾ ಅಧ್ಯಯನದಲ್ಲಿ ಆಯೋಗದ ಜೊತೆ ಸಹಭಾಗಿತ್ವ ಹೊಂದಿ ಕೆಲವೊಂದು ಕಾರ್ಯಗಳನ್ನು ಇಲಾಖೆಗಳ ಅಧಿಕಾರಿಗಳಿಗೆ ತಾಂತ್ರಿಕ ಮತ್ತು ಹಣಕಾಸಿನ ನೆರವನ್ನು ನೀಡಿವ ಮೂಲಕ ಆಯೋಗವು ಅನುಷ್ಠಾನಗೊಳಿಸಿದೆ.- 3. ಬಳಕೆದಾರರು- ಇಂತಹ ಶಿಫಾರಸ್ಸುಗಳು, ಕಾರ್ಯಯೋಜನೆಗಳು ಮತ್ತು ಸಂಶೋಧನಾ ಅಧ್ಯಯನಗಳಿಂದ ಲಾಭ ಪಡೆದ ಫಲಾನುಭವಿಗಳು. ಯೋಜಕರು, ಅನುಷ್ಠಾನಕರು ಮತ್ತು ಬಳಕೆದಾರರಿಂದ ಮಾಹಿತಿಗಳನ್ನು ಕೇಂದ್ರೀಕೃತ ಪ್ರಶ್ನೆಗಳ ಮೂಲಕ ಸಿದ್ಧಪಡಿಸಲಾದ ರಚನಾತ್ಮಕ ನೇರ ಸಂದರ್ಶನದಿಂದ ಪಡೆದುಕೊಳ್ಳಲಾಗಿದೆ. ಪ್ರತಿ ವಿಭಾಗಗಳಿಗೆ ಪ್ರತ್ಯೇಕವಾಗಿ ಸಂದರ್ಶನಗಳನ್ನು ಏರ್ಪಡಿಸಲಾಗಿದ್ದು, ಅವರೆಂದರೆ, ಯೋಜಕರು, ಅನುಷ್ಠಾನಕರು ಮತ್ತು ಬಳಕೆದಾರರು ಆಗಿರುತ್ತಾರೆ. ಇವರಿಂದ ಪಡೆದ ಗುಣಮಟ್ಟ ಮತ್ತು ಗಾತ್ರಾನುಸಾರ ನಡೆಸಿದ ದತ್ತಾಂಶಗಳನ್ನು ಕೋಷ್ಟಕ 3.2ಎ, 3.2ಬಿ, 3.2ಸಿ, 3.2ಡಿ ಮತ್ತು 3.2ಇಯಲ್ಲಿ ವಿಶ್ಲೇಷಿಸಲಾಗಿದೆ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಯೋಜಕರು ಯೋಜಕರ ಮೇಲಿನ ಸಂದರ್ಶನವು ಕೆಲವು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಕರ್ನಾಟಕವನ್ನು ಸಂಪೂರ್ಣ ಜ್ಞಾನಾಧಾರಿತ ಸಮಾಜವನ್ನಾಗಿಸುವ ಬೃಹತ್ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಇಡೀ ಪ್ರಕ್ರಿಯೆಯಲ್ಲಿ ಅವರ ಪಾಲ್ಗೊಳ್ಳುವಿಕೆ, ಶಿಫಾರಸುಗಳನ್ನು ತಯಾರಿಸುವಲ್ಲಿ ಅವರಿಗೆ ಉಂಟಾದ ತೃಪ್ತಿ, ಸಂಶೋಧನಾ ಅಧ್ಯಯನ, ಶಿಫಾರಸ್ಸುಗಳ ಉಪಯೋಗಗಳನ್ನು ಒಳಗೊಂಡಿತ್ತು. ಕೋಷ್ಟಕ 3.2ಎ : ಯೋಜಕರ ತೃಪ್ತಿಯ ಪ್ರಮಾಣ* ಪ್ರತಿಕ್ರಿಯೆ ಶೇಕಡವಾರು ಅತ್ಯಂತ ತೃಪ್ತಿದಾಯಕ 35 ತೃಪ್ತಿದಾಯಕ 35 ತಟಸ್ಥ 18 ಅತೃಪ್ತಿದಾಯಕ 12 ಅತ್ಯಂತ ಅತೃಪ್ತಿದಾಯಕ 0 ಒಟ್ಟು 100

*ಮೇಲಿನ ಪ್ರಕ್ರಿಯೆಯು ಸಂಶೋಧನೆಯ ಅಧ್ಯಯನ, ಶಿಫಾರಸ್ಸು ಮತ್ತು ಯೋಜನೆಯನ್ನು ಒಳಗೊಂಡಿದೆ.

  • ಕೆಲವೊಬ್ಬ ಯೋಜಕರು ಶಿಫಾರಸ್ಸುಗಳನ್ನು ಮಾಡುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿದ್ದು ಅವರಲ್ಲಿ ಕೆಲವರು ಕಾರ್ಯನಿರ್ವಾಹಕ/ಮಿಶನ್ ಗುಂಪಿನ ಮುಖ್ಯಸ್ಥರಾಗಿದ್ದರೆ, ಇನ್ನು ಕೆಲವರು ಶಿಫಾರಸ್ಸುಗಳ ಹಲವು ಅಂಶಗಳು ಮತ್ತು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವವರಾಗಿದ್ದಾರೆ.
  • ಶಿಫಾರಸ್ಸು/ಕಾರ್ಯಯೋಜನೆ/ಸಂಶೋಧನಾ ಅಧ್ಯಯನ ಕುರಿತಂತೆ ಒಟ್ಟಾರೆ ಈ ಪ್ರಕ್ರಿಯೆಯ ಬಗ್ಗೆ ಸುಮಾರು ಶೇ. 70ರಷ್ಟು ಯೋಜಕರು ತಮ್ಮ ಸಂತೃಪ್ತಿಯನ್ನು ತೋರಿಸಿದ್ದರೆ, ಅವರಲ್ಲಿ ಶೇ. 50ರಷ್ಟು ಯೋಜಕರು ಸಂಪೂರ್ಣ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ವಿವರಿಸಲು ಕೇಳಿದಾಗ ಆಯೋಗವು ಇವರೊಂದಿಗೆ ಸ್ಪಂದಿಸುವ ಮತ್ತು ಸಲಹೆ ನೀಡುವ ಪ್ರವೃತ್ತಿಯು ಸಂತೋಷವನ್ನು ಉಂಟುಮಾಡಿತು ಎಂದಿದ್ದಾರೆ.
  • ಆಸಕ್ತಿದಾಯಕ ವಿಷಯವೆಂದರೆ, ಶೇ. 12ರಷ್ಟು ಯೋಜಕರು ಈ ಬಗ್ಗೆ ಅತೃಪ್ತಿಯನ್ನು ತೋರಿಸಿದ್ದು, ಇದರ ಹಿಂದಿನ ಕಾರಣವೆಂದರೆ ಇದರ ಜಾರಿ ಕುರಿತಂತೆ ವಿವಿಧ ಇಲಾಖೆಗಳನ್ನು ಮನವೊಲಿಸುವುದೇ ಸಮಸ್ಯೆಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅವರ ಸಲಹೆಯೆಂದರೆ ಯೋಜನೆಗಳು / ಶಿಫಾರಸ್ಸುಗಳು ಮತ್ತು ಸಂಶೋಧನಾ ಅಧ್ಯಯನಗಳನ್ನು ಪೂರ್ಣವಾಗಿ ಅಳವಡಿಸಿಲ್ಲ.
  • ಹಾಗೆಯೇ ಶೇ.18%ರಷ್ಟು ಯೋಜಕರು ತಮ್ಮ ತಟಸ್ಥ ನಿಲುವನ್ನು ವ್ಯಕ್ತಪಡಿಸಿದ್ದಾರೆ, ಎಕೆಂದರೆ ಅವರ ಶಿಫಾರಸ್ಸುಗಳನ್ನು ಸರಿಯಾಗಿ ಕಾರ್ಯಚರಣೆಗೆ ತಂದಿಲ್ಲ ಹಾಗು ಇದು ಸ್ಥಳೀಯ ಜನರಿಗೆ ತಲುಪಿಲ್ಲ. •  ಈ ಯೋಜನೆಗಳು, ಸಂಶೋಧನಾ ಅಧ್ಯಯನಗಳು ಮತ್ತು ಶಿಫಾರಸ್ಸುಗಳು ಉಪಯೋಗವಿಲ್ಲವೆಂದು ಯಾವುದೇ ಯೋಜಕರು ಹೇಳಿಲ್ಲ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

  • ಆಯೋಗದ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಬಹುತೇಕ ಯೋಜಕರು ಅಭಿಪ್ರಾಯಪಟ್ಟಿದ್ದು, ಇದಕ್ಕಾಗಿ ಕೆಲವೊಂದು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಅವರ ಸಲಹೆಗಳು ಈ ಕೆಳಗಿನಂತಿವೆ   ಅನುಷ್ಠಾನದ ಮೂಲಕ ಶಿಫಾರಸ್ಸುಗಳಿಗೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಆಯೋಗ ಅಥವಾ ಇದೇ ರೀತಿಯ ಯಾವುದೇ ಸಂಸ್ಥೆಯನ್ನು ಸ್ಥಾಪಿಸಬೇಕು.
  • ಶಿಫಾರಸ್ಸುಗಳ ಫಲವು ಸ್ಥಳೀಯ ಜನತೆಯನ್ನು ತಲುಪಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.
  • `ಜ್ಞಾನ’ ಎಂಬ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಹಾಗೂ ಸಮಗ್ರ ತಿಳುವಳಿಕೆ ಮೂಡಿಲ್ಲ. ಅದನ್ನು ಸಮರ್ಪಕವಾಗಿ ತಿಳಿಸುವಂತಹ ಹಾಗೂ ಜನತೆಯಲ್ಲಿ ತಿಳುವಳಿಕೆ ಮೂಡಿಸುವಂತಹ ಕೆಲಸವಾಗಬೇಕು. ಅನುಷ್ಠಾನಕರು ಅನುಷ್ಠಾನಕರ ಸಂದರ್ಶನವು ಪ್ರಮುಖವಾಗಿ ಶಿಫಾರಸ್ಸುಗಳು /ಸಂಶೋಧನಾ ಅಧ್ಯಯನ/ಕಾರ್ಯ ಯೋಜನೆಗಳ ಸ್ಥಿರತೆ, ಉಪಯುಕ್ತತೆ ಸಂಬಂಧಪಟ್ಟ ಇಲಾಖೆಗಳು ಈಗಾಗಲೇ ಸಿದ್ಧಪಡಿಸಿದ ಯೋಜನೆಗಳಿಗೆ ಪೂರಕವಾಗಿರುವ ಅಂಶವನ್ನು ಒಳಗೊಂಡಿದೆಯೇ. ಈ ಮೂಲಕ ಇವುಗಳು ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ಆಯೋಗದ ಬೃಹತ್ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಉಪಯೋಗಿಯಾಗಿದೆಯೆ. ಕೋಷ್ಟಕ 3.2ಬಿ : ಅನುಷ್ಠಾನಕರ ಸಂತೃಪ್ತಿಯ ಪ್ರಮಾಣ* ಪ್ರತಿಕ್ರಿಯೆ ಶೇಕಡವಾರು ಅತ್ಯಂತ ತೃಪ್ತಿದಾಯಕ 45 ತೃಪ್ತಿದಾಯಕ 45 ತಟಸ್ಥ 10 ಅತೃಪ್ತಿದಾಯಕ 0 ಅತ್ಯಂತ ಅತೃಪ್ತಿದಾಯಕ 0 ಒಟ್ಟು 100
  • ಅನುಷ್ಠಾನ ಇಲಾಖೆಗಳ ಪ್ರಸಕ್ತ ಯೋಜನೆ ಜೊತೆ ಹೊಂದಾಣಿಕೆ/ ಶಿಫಾರಸ್ಸುಗಳ ಅಗತ್ಯತೆ/ಕಾರ್ಯ ಯೋಜನೆಯ ಅನುಸಾರ

ಟೇಬಲ್ 3.2ಸಿ : ಅನುಷ್ಠಾನಕರ ದೃಷ್ಟಿಕೋನ** ಪ್ರತಿಕ್ರಿಯೆ ಶೇಕಡವಾರು ಸ್ಥಿರತೆ 60 ತಟಸ್ಥ 20 ಸ್ಥಿರತೆಇಲ್ಲದ 20 ಒಟ್ಟು 100

  • ಯೋಜನೆಯು ಇಲಾಖೆಯ ಆಯವ್ಯಯದ ಜೊತೆ ಹೊಂದಿದೆಯೇ ಮತ್ತು ಭವಿಷ್ಯದ ಕಾರ್ಯ ಯೋಜನೆ ಹಾಗೂ ಅದರ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆಯೆ ಎಂಬುದು.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

  • ಸಂದರ್ಶನ ನಡೆಸಿದ ಬಹುತೇಕ ಅನುಷ್ಠಾನಕರು ಶಿಫಾರಸ್ಸು/ಕಾರ್ಯ ಯೋಜನೆ/ಸಂಶೋಧನಾ ಅಧ್ಯಯನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
  • ಈ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವುದು ಸುಲಭವೆ ಎಂಬ ಪ್ರಶ್ನೆಗೆ ಶೇ. 70ರಷ್ಟು ಸುಲಭ ಸಾಧ್ಯ ಎಂದು ಉತ್ತರಿಸಿದ್ದಾರೆ. ಪ್ರತಿಕ್ರಿಯೆ ನೀಡಿದ ಬಹುತೇಕರಲ್ಲಿ (ಶೇ.90) ಇಂತಹ ಒಂದು ಕೆಲಸವು ತಮ್ಮ ಇಲಾಖೆಯ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಮಾತುಕತೆಯ ಹಂತದಲ್ಲೇ ಇರುವ ಹಲವು ಯೋಜನೆಗಳ ಬಗ್ಗೆಯೂ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
  • ಇದರ ಅನುಷ್ಠಾನ ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟವರು ಅದಕ್ಕೆ ಕೆಲವು ಕಾರಣಗಳನ್ನು ನೀಡಿದ್ದಾರೆ. ಅವೆಂದರೆ, ಇಲಾಖೆಯೊಳಗಿನ ಮಾನವ ಮತ್ತು ಇತರ ಮೂಲ ಸಂಪನ್ಮೂಲಗಳ ಕೊರತೆಯನ್ನು ಎತ್ತಿತೋರಿಸಿದ್ದಾರೆ, ಮಾತ್ರವಲ್ಲದೆ ಯೋಜನೆ ಮತ್ತು ಅದರ ಸಾಧ್ಯಸಾಧ್ಯತೆ ಬಗ್ಗೆ ತಜ್ಞರು ಅಧ್ಯಯನ ನಡೆಸಬೇಕಾದ ಅವಶ್ಯಕತೆಯನ್ನು ಹೇಳಿದ್ದಾರೆ.
  • ಸಂಬಂಧಪಟ್ಟ ಇಲಾಖೆಗಳ ಪ್ರಸಕ್ತ ಯೋಜನೆಗಳ ನಡುವೆ ಹೊಸದಾದ ಸೂಕ್ತ ಶಿಫಾರಸ್ಸುಗಳು/ಕಾರ್ಯ ಯೋಜನೆಗಳ ಕುರಿತಂತೆ ಶೇ. 90ರಷ್ಟು ಅನುಷ್ಠಾನಕಾರರು ತಮ್ಮ ತೃಪ್ತಿ ವ್ಯಕ್ತಪಡಿಸಿದ್ದಾರೆ.
  • ಈಗಾಗಲೇ ಇಲಾಖೆಯ ಆಯವ್ಯಯದಲ್ಲಿ ಸಾಕಷ್ಟು ಅನುದಾನ ನೀಡಿಕೆ ಅಥವಾ ಅಂತಹ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇಲಾಖೆಗಳ ಆಯವ್ಯಯ ಮತ್ತು ಕಾರ್ಯ ಯೋಜನೆಯ ಮೂಲಕ ಈ ಶಿಫಾರಸ್ಸು/ಕಾರ್ಯಯೋಜನೆಯನ್ನು ಸಾಂಸ್ಥೀಕರಣಗೊಳಿಸುವ ಕುರಿತಂತೆ ಶೇ. 60ರಷ್ಟು ಅನುಷ್ಠಾನಕರು ಸಮ್ಮತಿ ಸೂಚಿಸಿದ್ದಾರೆ.
  • ಈ ಬಗ್ಗೆ ಅಸಮ್ಮತಿ ಸೂಚಿಸಿದವರು ಇದರ ಅನುಷ್ಠಾನಕ್ಕೆ ಸಾಕಷ್ಟು ಕಾಲಾವಧಿ ಬೇಕೆಂಬ ಮಾತನ್ನು ಮುಂದಿಟ್ಟು ತಮ್ಮ ಅಸಮ್ಮತಿಯನ್ನು ಸೂಚಿಸಿದ್ದಾರೆ. ಜೊತೆಗೆ ಪರೋಕ್ಷವಾಗಿ ಇದಕ್ಕೆ ಸಾಕಷ್ಟು ಆಯವ್ಯಯದ ನೆರವು ನೀಡಬೇಕೆಂಬ ಬಗ್ಗೆ ಸಾಂಕೇತಿಕವಾಗಿ ಅಭಿಪ್ರಾಯಪಟ್ಟಿದ್ದಾರೆ.
  • ಕೆಲವು ಅನುಷ್ಠಾನಕರು ಯುವಜನಾಂಗ ನೀತಿ ರಚನೆ ಸೇರಿದಂತೆ ಹಲವು ವಿಧಾನಗಳ ಮೂಲಕ ಈ ಶಿಫಾರಸ್ಸು/ಸಂಶೋಧನಾ ಅಧ್ಯಯನ/ ಕಾರ್ಯಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ. ಬಳಕೆದಾರರು ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ಆಯೋಗದ ಬೃಹತ್ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಕ್ಷೇತ್ರಗಳಾದ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಕಾರ್ಯ ಯೋಜನೆಗಳ ಪರಿಣಾಮಕಾರಿ ಬಳಕೆ ಹಾಗೂ ನಿರ್ದಿಷ್ಟ ಶಿಫಾರಸ್ಸು/ಸಂಶೋಧನಾ ಅಧ್ಯಯನ/ಕಾರ್ಯ ಯೋಜನೆಯ ಉಪಯೋಗದ ಕುರಿತ ಕ್ಷೇತ್ರಗಳನ್ನು ಪ್ರಮುಖ ಗುರಿಯನ್ನಾಗಿಸಿಕೊಂಡು ಬಳಕೆದಾರರ ಸಂದರ್ಶನವನ್ನು ಕೈಗೊಳ್ಳಲಾಗಿದೆ.
  • ಶಿಫಾರಸ್ಸು/ ಕಾರ್ಯ ಯೋಜನೆಗಳ ಉಪಯುಕ್ತತತೆಯನ್ನು ಗಮನದಲ್ಲಿಟ್ಟುಕೊಂಡು ಬಳಕೆದಾರರ ಮನೋಸ್ಥಿತಿಯನ್ನು ತಿಳಿದುಕೊಳ್ಳಲು ಆಯೋಗವು ಪ್ರಯತ್ನಿಸಿದ್ದು, ಶಿಫಾರಸ್ಸುಗಳು ಫಲಾನುಭವಿಗಳಿಗೆ ತಲುಪಿದೆಯೆ ಎಂಬುದನ್ನು ಖಾತರಪಡಿಸಿಕೊಳ್ಳುವಲ್ಲಿ ಆಯೋಗವು ಯಾವುದೇ ರೀತಿಯಲ್ಲಿ ನೇರ ಪಾತ್ರ ವಹಿಸಿಲ್ಲ. ನಾವು ಬಳಕೆದಾರರ ದೃಷ್ಟಿಕೋನದಲ್ಲಿ ಇದರ ಉಪಯುಕ್ತತತೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇವೆ.
  • ಬಹುತೇಕ ಬಳಕೆದಾರರು ಶಿಫಾರಸ್ಸು/ಕಾರ್ಯಯೋಜನೆಯ ಫಲಿತಾಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಜ್ಞಾನದ ವಿಶ್ಲೇಷಣೆ, ಹೋಲಿಕೆ ಮತ್ತು ಸಂಗ್ರಹ ಮಾತ್ರವಲ್ಲದೆ ಫಲಾನುಭವಿಗಳಿಗೆ ಜ್ಞಾನದ ಹರಡುವಿಕೆ ಕುರಿತಂತೆ ಆಯೋಗವು ಕೈಗೊಂಡ ಪ್ರಕ್ರಿಯೆಯೂ ಇದಕ್ಕೆ ಕಾರಣ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

  • ಈ ಶಿಫಾರಸ್ಸು/ಕಾರ್ಯ ಯೋಜನೆಯು ತಮ್ಮ ಜೀವನದ (ಮನೋಸ್ಥಿತಿ, ಮನೋವರ್ತನೆ, ವೃತ್ತಿಜೀವನ, ಕೆಲಸ ಮಾಡುವ ವಿಧಾನ ಸೇರಿದಂತೆ)ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಶೇ. 58ರಷ್ಟು ಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೆಲವೊಬ್ಬರು ಈ ಬಗ್ಗೆ ತಮ್ಮ ಅತೃಪ್ತಿಯನ್ನು ತೋರಿದ್ದರೂ, ಅದು ಕೇವಲ ಶಿಫಾರಸ್ಸಿನಲ್ಲಿ ಆದ ವಿಳಂಬದ ಕಾರಣದಿಂದ ಎಂಬುದು ಸ್ಪಷ್ಟವಾಗಿದೆ. ಕೋಷ್ಟಕ: 3.2ಡಿ: ಬಳಕೆದಾರರ ತೃಪ್ತಿಯ ಮಟ್ಟ: ಗಮನಾರ್ಹ ಬದಲಾವಣೆ / ಪ್ರಭಾವ* ಪ್ರತಿಕ್ರಿಯೆ ಶೇಕಡವಾರು ಅತ್ಯಂತ ತೃಪ್ತಿದಾಯಕ 29 ತೃಪ್ತಿದಾಯಕ 29 ತಟಸ್ಥ 42 ಅತೃಪ್ತಿದಾಯಕ 0 ಅತ್ಯಂತ ಅತೃಪ್ತಿದಾಯಕ 0 ಒಟ್ಟು 100 * ಆಯೋಗದ ಶಿಫಾರಸ್ಸು, ಯೋಜನೆಗಳು ಬಳಕೆದಾರ ವೃತ್ತಿಜೀವನ, ಮನೋಸ್ಥಿತಿ, ಮನೋವರ್ತನೆ, ಕೆಲಸ ಮಾಡುವ ವಿಧಾನದ ಪರಿಣಾಮ ಒಳಗೊಂಡಂತೆ.

ಭಾಗೀದಾರರ ಸಂಯುಕ್ತ ಮನೋಭಿಲಾಷೆ ಕರ್ನಾಟಕವನ್ನು ಜ್ಞಾನ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಪ್ರತಿ ಶಿಫಾರಸ್ಸುಗಳು/ಕಾರ್ಯ ಯೋಜನೆಗಳು/ ಸಂಶೋಧನಾ ಅಧ್ಯಯನಗಳು ಯಾವ ರೀತಿಯಲ್ಲಿ ಉಪಯುಕ್ತವಾಗಿವೆ ಎಂಬ ಬಗ್ಗೆ ಮೂರು ಭಾಗೀದಾರರಲ್ಲಿ ಸಂದರ್ಶನಗಳನ್ನು ಮಾಡಲಾಗಿದೆ. ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ಗುರಿಯನ್ನು ಸಾಧಿಸುವ ಶಿಫಾರಸ್ಸು/ಕಾರ್ಯ ಯೋಜನೆ/ ಸಂಶೋಧನಾ ಅಧ್ಯಯನದ ಮಾದರಿಗಳು ಕುತೂಹಲಕಾರಿಯಾಗಿದೆ. ಕೋಷ್ಟಕ 3.2ಇ: ಉಪಯುಕ್ತತತೆ ಕುರಿತ ವ್ಯಾಖ್ಯಾನ** (ಶೇಕಾಡವಾರು) ಪ್ರತಿಕ್ರಿಯೆ ಯೋಜಕರು ಅನುಷ್ಠಾನಕರು ಬಳಕೆದಾರರು ಅತ್ಯಂತ ಉಪಯುಕ್ತ 58 73 57 ಉಪಯುಕ್ತ 18 18 43 ತಟಸ್ಥ 18 0 0 ನಿರುಪಯುಕ್ತ 6 9 0 ಅತ್ಯಂತ ನಿರುಪಯುಕ್ತ 0 0 0 ಒಟ್ಟು 100 100 100 **ಶಿಫಾರಸ್ಸಿನ ಮಾದರಿ/ಯೋಜನೆ/ಸಂಶೋಧನಾ ಅಧ್ಯಯನಗಳ ಮೂಲಕ ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವುದು

ಈ ಕುರಿತ ಆಸಕ್ತಿದಾಯಕ ಫಲಿತಾಂಶಗಳು ಈ ಕೆಳಗಿನಂತಿವೆ.

  • ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ತಮ್ಮ ಕಾಣಿಕೆಯನ್ನು ನೀಡಿರುವ ಯೋಜಕರ ಪೈಕಿ ನಾಲ್ಕನೇ ಮೂರು ಭಾಗ ಯೋಜಕರು ಇದು ಉಪಯುಕ್ತ ಎಂದು (ಅತ್ಯಂತ ಉಪಯುಕ್ತ ಎಂದು ಶೇ. 58 ಮತ್ತು ಉಪಯುಕ್ತ ಎಂದು ಶೇ. 18 ಯೋಜಕರ ಅಭಿಪ್ರಾಯ) ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

  • ಇದೇ ಪ್ರಶ್ನೆಗೆ ಶೇ. 90ರಷ್ಟು ಅನುಷ್ಠಾನಕರು ಈ ಶಿಫಾರಸ್ಸುಗಳು/ಕಾರ್ಯ ಯೋಜನೆಗಳು/ ಸಂಶೋಧನಾ ಅಧ್ಯಯನಗಳು ಉಪಯುಕ್ತ (ಶೇ.73ರಷ್ಟು ಜನರು ಅತ್ಯಂತ ಉಪಯುಕ್ತ, ಶೇ. 18 ಜನರಿಂದ ಉಪಯುಕ್ತ) ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ತಾವು ಹೊಂದಿರುವ ಜ್ಞಾನವನ್ನು ಜನರಿಗೆ ವರ್ಗಾವಣೆ ಮಾಡಲು ಹಾಗೂ ಅದನ್ನು ನಿರಂತರವಾಗಿ ನಡೆಸಲು ಸಾಧ್ಯ ಎಂದವರು ಅಭಿಪ್ರಾಯಪಟ್ಟಿದ್ದಾರೆ.
  • ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಈ ಶಿಫಾರಸ್ಸುಗಳು/ಕಾರ್ಯ ಯೋಜನೆ/ ಸಂಶೋಧನಾ ಅಧ್ಯಯನವು ಯಾವ ರೀತಿ ಉಪಯುಕ್ತ ಎಂಬ ಪ್ರಶ್ನೆಯನ್ನು ಬಳಕೆದಾರರಲ್ಲಿ ಕೇಳಿದಾಗ, ಎಲ್ಲಾ ಬಳಕೆದಾರರು (ಶೇ.100) ಇದು ಉಪಯುಕ್ತ ಎಂದು (ಶೇ.57 ಜನರು ಅತ್ಯಂತ ಉಪಯುಕ್ತ ಹಾಗೂ ಶೇ. 43 ಜನರು ಉಪಯುಕ್ತ) ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಪಟ್ಟ ಎಲ್ಲಾ ಸಂಸ್ಥೆ/ವ್ಯಕ್ತಿಗಳಿಂದ ಸಂಗ್ರಹಿಸಿದ ಮಾಹಿತಿ ಮತ್ತು ನಮ್ಮ ಸಮಗ್ರ ಅರಿವಿನ ವಿಶ್ಲೇಷಣೆಯ ಆಧಾರದಲ್ಲಿ ಯಶಸ್ಸು ಮತ್ತು ಸೀಮಿತತೆ ಹಲವು ಅಂಶಗಳು ಬೆಳಕಿಗೆ ಬಂದವು.

ಪ್ರಗತಿಪರ (ಯಶಸ್ವಿ) ಪ್ರವೃತ್ತಿಯ ಅಂಶಗಳು

  • ಶಿಫಾರಸ್ಸುಗಳು, ಕಾರ್ಯ ಯೋಜನೆ ಮತ್ತು ಸಂಶೋಧನಾ ಅಧ್ಯಯನದಲ್ಲಿ ಆಯೋಗವು ಹೆಚ್ಚು ಸ್ಪಂದಿಸುವ ಹಾಗೂ ಉತ್ತಮ ಪ್ರಕ್ರಿಯೆಯ ಅನುಸರಣೆಯನ್ನು ಹೊಂದಿದೆ.
  • ಸತತ ಸಮಾಲೋಚನೆ ಪ್ರಕ್ರಿಯೆ.
  • ಉತ್ತೇಜನ ಸೇರಿದಂತೆ ಇತರ ಕ್ರಮಗಳ ಮೂಲಕ ಅನುಷ್ಠಾನಕರಲ್ಲಿ ಹೆಚ್ಚಿನ ಸ್ಪಂದನಶೀಲತೆಯನ್ನು ಬೆಳೆಸುವುದು.
  • ಇಂತಹ ಉತ್ತಮ ಕಾರ್ಯಕ್ರಮಗಳನ್ನು ಭವಿಷ್ಯದಲ್ಲಿ ಆರಂಭಿಸಲು ಅನುಷ್ಠಾನಕರನ್ನು ಸಕ್ರಿಯರನ್ನಾಗಿಸುವುದು.
  • ಹೊಸ ಅನ್ವೇಷಣೆಗಳನ್ನು ಪ್ರಸ್ತತ ಇಲಾಖೆಗಳ ಆಕಾಂಕ್ಷೆಗಳಡಿಯಲ್ಲಿ ನಡೆಸಲಾಗಿತ್ತು.
  • ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಆಡಳಿತದ ಪ್ರಮುಖರು ಇದರಲ್ಲಿ ಭಾಗಿಯಾಗಿರುವುದನ್ನು ಆಯೋಗವು ಖಾತರಿ ಪಡಿಸಿದೆ.
  • ಜನ ಸಾಮಾನ್ಯರು ಮತ್ತು ತಂತ್ರಜ್ಞರಲ್ಲಿ ಉಪಯುಕ್ತತತೆಯ ಕುರಿತಂತೆ ಸಕಾರಾತ್ಮಕ ಭಾವನೆ ಮೂಡಿಸುವುದು.
  • ಕೆಲವೊಂದು ಇಲಾಖೆಗಳು (ಉದಾ-ಡಿಐಇಟಿ) ತಂತ್ರಜ್ಞಾನ ಉನ್ನತಿಯನ್ನು ಪಡೆಯುವ ಅವಕಾಶ ಹೊಂದಿರುವುದು.
  • ಆಯೋಗ ತೋರಿಸಿಕೊಟ್ಟಿರುವ ಹೊಸ ಕ್ಷೇತ್ರಗಳ ಅವಕಾಶವನ್ನು ನೋಡಲಾಗಿದೆ.
  • ಜನರು ಮತ್ತು ಪಾರಂಪರಿಕ ಜ್ಞಾನದ ಕಳೆದುಹೋದ ಕೊಂಡಿಯನ್ನು ಕೆಲವೊಂದು ಯೋಜನೆಗಳು ಮರುಸ್ಥಾಪಿಸಿದ್ದು (ಉದಾ-ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ಹೊಂದಿರುವವರು) ಈ ಮೂಲಕ ಜನತೆ ಅಥವಾ ವಿಸ್ತೃತ ಸಮಾಜದ ಜೊತೆಗೆ ಆಯೋಗವು ಸಂಪರ್ಕ ಬೆಳೆಸಲು ಸಾಧ್ಯವಾಗುವಂತೆ ಮಾಡುವುದು. ಅಡೆತಡೆಯೊಡ್ಡುವ ಅಥವಾ ವಿಳಂಬಿಸುವ ಅಂಶಗಳ ಪ್ರವೃತ್ತಿ
  • ಶಿಫಾರಸ್ಸು/ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಇಲಾಖೆಗಳಿಗೆ ಚಟುವಟಿಕೆಗಳನ್ನು ಮನವರಿಕೆ ಮಾಡವಲ್ಲಿ ಸಮಸ್ಯೆ.
  • ಶಿಫಾರಸ್ಸುಗಳು/ಕಾರ್ಯ ಯೋಜನೆ/ ಸಂಶೋಧನಾ ಅಧ್ಯಯನವನ್ನು ವಿನ್ಯಾಸಗೊಳಿಸುವಾಗ ಕಾರ್ಯಪಡೆಯ ತಜ್ಞರ ಹಲವು ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕೆಲವೊಂದು ಯೋಜನೆಗಳ ಅಸಮರ್ಪಕ ಅನುಷ್ಠಾನದಿಂದ ಸ್ಥಳೀಯ ಜನತೆಗೆ ಗುಣಮಟ್ಟದ ಸೇವೆ ಸಿಗುವುದಿಲ್ಲ.

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

  • ಸಂಬಂಧಪಟ್ಟವರ ಜೊತೆಯಲ್ಲಿ `ಜ್ಞಾನ’ ಎಂಬ ವಿಷಯ ಅಥವಾ ಶಬ್ಧದ ಸಂಪೂರ್ಣ ತಿಳುವಳಿಕೆ ಇಲ್ಲದಿರುವುದು.
  • ಅನುಷ್ಠಾನದ ಸಂದರ್ಭದಲ್ಲಿ ವಾಸ್ತವ ಯೋಜನೆಯು ಬದಲಾವಣೆಯಾಗಿದೆ.
  • ತಜ್ಞರು, ಮಾನವ ಸಂಪನ್ಮೂಲ, ಮೂಲ ಸೌಕರ್ಯ ಕೊರತೆ ಸೇರಿದಂತೆ ಇಲಾಖೆಗಳಲ್ಲಿರುವ ಸಮಸ್ಯೆಗಳು.
  • ಕೆಲವೊಂದು ವಿಚಾರಗಳು ಸಂಪೂರ್ಣ ವಿನೂತನವಾಗಿದ್ದು, ಹೀಗಾಗಿ ಪ್ರತಿರೋಧದ ವಾತಾವರಣ ನಿರ್ಮಾಣವಾಗುತ್ತದೆ.
  • ಶಿಫಾರಸ್ಸುಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ.
  • ಕೆಲವೊಂದು ಯೋಜನೆಗಳು (ಉದಾ-ಕಣಜ) ಒಟ್ಟಾರೆ ಜನಸಂಖ್ಯೆಯ ಸೀಮಿತ ಭಾಗಕ್ಕಷ್ಟೇ ಉಪಯುಕ್ತವಾಗಿದೆ. ಇದಕ್ಕೆ ಅಂತರ್ಜಾಲದ ಕುರಿತ ಮಾಹಿತಿ ಜನ ಸಾಮಾನ್ಯರಲ್ಲಿ ಇರದಿರುವುದು(ಡಿಜಿಟಲ್ ಡಿವೈಡ್) ಕಾರಣ. ವಾಸ್ತವಿಕ ಮೌಲ್ಯಮಾಪನ: ಸಂಯೋಜಿತ ಪ್ರಗತಿ ಮೊತ್ತ (ಸಿಪಿಎಸ್) ಉದ್ದೇಶಿತ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಆಯೋಗವು ಕೈಗೊಂಡ ಕೆಲಸಗಳ ಮಹತ್ವವನ್ನು ಅಳತೆ ಮಾಡುವ ನಿಟ್ಟಿನಲ್ಲಿ ಮಾಪನವನ್ನು ಅಭಿವೃದ್ಧಿ ಪಡಿಸುವ ಲಕ್ಷ್ಯದೊಂದಿಗೆ ಒಂದು ಸಂಯೋಜಿತ ಪ್ರಗತಿ ಮೊತ್ತ (ಸಿಪಿಎಸ್) ವನ್ನು ಲೆಕ್ಕ ಹಾಕಲಾಯಿತು. ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ಬೃಹತ್ ಗುರಿಯ ಹಿನ್ನಲೆಯಲ್ಲಿ ಯೋಜಕರು, ಅನುಷ್ಠಾನಕರು ಮತ್ತು ಬಳಕೆದಾರರ ಮನೋಭಾವನೆಯನ್ನು ಆಧಾರವಾಗಿಸಿಕೊಂಡು ಮಾದರಿ ಶಿಫಾರಸ್ಸು/ಯೋಜನೆ/ಸಂಶೋಧನಾ ಅಧ್ಯಯನದ ಉಪಯುಕ್ತತತೆ ಮತ್ತು ಮೇಲಿನ ಕೋಷ್ಟಕದಲ್ಲಿ 3.2ಇ ನೀಡಲಾದ ದತ್ತಾಂಶಗಳ ಉಪಯುಕ್ತತತೆ ತೋರಿಸುತ್ತದೆ. ಕರ್ನಾಟಕವನ್ನು ಜ್ಞಾನಾಧಾರಿತ ಸಮಾಜವನ್ನಾಗಿಸುವ ಆಯೋಗದ ವಾಸ್ತವಿಕ ಮೌಲ್ಯಮಾಪನದ (ಪ್ರಾಮುಖ್ಯತೆ ಹಾಗೂ ನ್ಯಾಯಯುತ ವಿಭಾಗ) ಕೆಲಸಕ್ಕೆ ಸಂಬಂಧಪಟ್ಟಂತೆ ಎಲ್ಲರಿಗೂ (ಯೋಜಕರು,ಅನುಷ್ಠಾನಕರು, ಬಳಕೆದಾರರು) ನಾನಾ ರೀತಿಯ  ಅಂಕಗಳನ್ನು ನೀಡಿದ್ದೇವೆ.
  • ಅವುಗಳೆಂದರೆ :
  • ಯೋಜಕರು = 3
  • ಅನುಷ್ಠಾನಕರು= 2
  • ಬಳಕೆದಾರರು= 1

ಇದನ್ನು ಆಧಾರವಾಗಿಟ್ಟುಕೊಂಡು ಆಯೋಗದ ಒಟ್ಟಾರೆ ಕೆಲಸದ ಸಂಯೋಜಿತ ಪ್ರಗತಿ ಮೊತ್ತವನ್ನು 10ರಲ್ಲಿ 8.5 ಎಂದು ನಿರ್ಧರಿಸಲಾಗಿದೆ. ಇದರಲ್ಲಿ ‘0’ ಕಡಿಮೆ ಸಾಧನೆಯ ಸೂಚಕವಾದರೆ, 10 ಪರಿಪೂರ್ಣ ಸಾಧನೆಯನ್ನು ಪ್ರತಿನಿಧಿಸುತ್ತದೆ.

ಆಯೋಗದ ಎರಡೂ ಹಂತಗಳ ಹೋಲಿಕಾತ್ಮಕ ವಿಶ್ಲೇಷಣೆ ಆಯೋಗದ ಎರಡೂ ಹಂತಗಳ ಹೋಲಿಕಾತ್ಮಕ ವಿಶ್ಲೇಷಣೆಯನ್ನು ಒಟ್ಟಾರೆ ಅವಲೋಕನ ಮತ್ತು ನಮ್ಮ ಸಮಗ್ರ ತಿಳುವಳಿಕೆಯ ಆಧಾರದಲ್ಲಿ ಕೈಗೊಳ್ಳಲಾಗಿದೆ. ಇದರಿಂದ ಕಂಡುಬಂದ ಅಂಶಗಳು ಈ ಕೆಳಗಿನಂತಿವೆ:

ಈಗಾಗಲೇ ಆರಂಭಿಸುವ ಸುಜ್ಞಾನ ಪರಿವರ್ತನೆಯ ಕೆಲಸವನ್ನು ಮುಂದುವರಿಸಿ, ನಿರ್ದಿಷ್ಟ ಫಲಿತಾಂಶವನ್ನು ಖಾತರಿಪಡಿಸಿಕೊಳ್ಳುವ ಗುರಿಯನ್ನು ಆಯೋಗವು ಹೊಂದಿದೆ. ಮೊದಲನೇ ಹಂತವು ಕೆಲಸವನ್ನು ಆರಂಭಿಸುವ ನಿಟ್ಟಿನಲ್ಲಿ ಮುನ್ನುಡಿ ಅಥವಾ ತಳಪಾಯವಾಗಿದ್ದು, ಎರಡನೇ ಹಂತದಲ್ಲಿ ಉನ್ನತ ಪರಂಪರೆಯನ್ನು ಹುಟ್ಟುಹಾಕುವ ಲಕ್ಷ್ಯವನ್ನು ಆಯೋಗವು ಹೊಂದಿದೆ. ಆಯೋಗವು ಆರಂಭಿಸಿದ ಎಲ್ಲಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ನಾನಾ ಇಲಾಖೆಗಳು ಆರಂಭಿಸಿರುವುದು ನಮ್ಮ ಎಲ್ಲಾ ವಿಶ್ಲೇಷಣೆ ಮತ್ತು ಸಮೀಕ್ಷೆಗಳಿಂದ ತಿಳಿದುಬಂದಿದ್ದು, ಇದರಿಂದ ಆಯೋಗವು ಅತ್ಯುನ್ನತ ಕೆಲಸವನ್ನು ಮಾಡಿದೆ ಎಂಬುದು

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಸಾಬೀತಾಗುತ್ತಿದೆ. ಆದರೆ, ಈ ಕ್ರಮಗಳ ಅನುಷ್ಠಾನದ ಮೇಲೆ ನಿಗಾ ಇಡುವ ವ್ಯವಸ್ಥೆ ಇಲ್ಲದಿರುವುದು ಒಂದು ರೀತಿಯಲ್ಲಿ ಆತಂಕವನ್ನು ತಂದೊಡ್ಡಿದೆ.

  • ಆಯೋಗದ ಮೊದಲ ಹಂತವು ವಿಶ್ವಾಸಾರ್ಹತೆಯನ್ನು ಮೂಡಿಸುವುದು ಮತ್ತು ಸರ್ಕಾರವು ಈ ಕಡೆಗೆ ತ್ವರಿತ ಗಮನ ಸೆಳೆಯುವಂತೆ ಮಾಡುವ ಗುರಿಯನ್ನು ಹೊಂದಿದ್ದರೆ, ಎರಡನೇ ಹಂತದಲ್ಲಿ ಆಯೋಗವು ವ್ಯವಸ್ಥೆಯಲ್ಲಿ ಸ್ವೀಕಾರಾರ್ಹತೆಯ ಮಟ್ಟವನ್ನು ಹೆಚ್ಚಿಸುವ ಲಕ್ಷ್ಯದತ್ತ ಗಮನ ಹರಿಸಿತ್ತು. ಈ ಹಿಂದೆಯೇ ವಿವರಿಸಿದಂತೆ ಆಯೋಗದ ಒಳಗೆ ಮತ್ತು ಸರ್ಕಾರದ ಜೊತೆಗೆ ಕೆಲಸ ಮಾಡುವ ಸಂಸ್ಥೆಗಳು ಹಾಗೂ ಸಂಘಟನೆಗಳಲ್ಲಿ ಏರಿಳಿಕೆ ಇರುತ್ತದೆ. ಪ್ರತಿಕ್ರಿಯೆ ನೀಡುವವರು ಕೆಲವೊಮ್ಮೆ ಆಯೋಗವು ಸರ್ಕಾರದ ಅಂಗ ಸಂಸ್ಥೆಯ ಗುಣಲಕ್ಷಣಗಳನ್ನು ಹೊಂದಿರುವ ಬಗ್ಗೆ ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಆಯೋಗವು ಈಗ ಕಾರ್ಯ ನಿರ್ವಹಿಸುತ್ತಿರುವ ಪರಿಸರವೂ ಕಾರಣವಾಗಿರಬಹುದು. ಹೀಗಾಗಿ ಬಹುತೇಕರು ಇದಕ್ಕೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡುವ ಮೂಲಕ ಇದನ್ನು ಖಾಸಗಿ ಅಥವಾ ಸಾಮಾಜಿಕ ವ್ಯವಸ್ಥೆಯಡಿ ತರಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ.
  • ಮೊದಲ ಹಂತದಲ್ಲಿ ಸಂಕುಚಿತ ಗುರಿಯನ್ನು ಹೊಂದಿದ್ದ ಆಯೋಗವು ವಿಸ್ತೃತ ವಲಯಗಳತ್ತ ಗಮನ ಹರಿಸಿ, ತನ್ನ ಮನೋಭೂಮಿಕೆಗೆ ಅನುಸಾರವಾಗಿ ತನ್ನ ಶಿಫಾರಸ್ಸುಗಳನ್ನು ಸಿದ್ಧಪಡಿಸುತ್ತಿತ್ತು. ಆದರೆ, ಎರಡನೇ ಹಂತದಲ್ಲಿ ಪ್ರತಿಯೊಂದು ವಲಯ ಅಥವಾ ಕ್ಷೇತ್ರದ ಒಳ ಸುಳಿಗಳತ್ತ ಗಮನ ಹರಿಸಿ, ನಿರೀಕ್ಷೆಗಳು ಮತ್ತು ಪುರಾವೆಗಳನ್ನು ಆಧಾರಿಸಿ ತನ್ನ ಶಿಫಾರಸ್ಸುಗಳನ್ನು ಸಿದ್ಧಪಡಿಸಿದೆ.
  • ಎರಡನೇ ಹಂತದಲ್ಲಿ ಮೊದಲ ಹಂತದಲ್ಲಿ ಕಂಡುಕೊಳ್ಳಲಾದ ವಾಸ್ತವಾಂಶಗಳನ್ನು ವಿಶ್ಲೇಷಿಸಿ ಹಾಗೂ ಅಭಿವೃದ್ಧಿ ಪಡಿಸಿ ಸ್ಪಷ್ಟವಾದ ನಿಲುವನ್ನು ಆಯೋಗವು ಜ್ಞಾನಾಧಾರಿತ ಸಮಾಜದ ಚೌಕಟ್ಟು ಸಿದ್ಧಪಡಿಸುವ ನಿಟ್ಟಿನಲ್ಲಿ ಕಂಡುಕೊಂಡಿದೆ. ನಮ್ಮ ಒಟ್ಟಾರೆ ಅವಲೋಕನ ಮತ್ತು ಹೆಚ್ಚಾಗಿ ಪ್ರಾಥಮಿಕ ದತ್ತಾಂಶಗಳಿಂದ ಈ ಗುರಿಯನ್ನು ತಳಸ್ತರದಿಂದ ಸಾಧಿಸಲು ಸಾಧ್ಯ ಹಾಗೂ ಸಂಬಂಧಪಟ್ಟ ಎಲ್ಲರಲ್ಲೂ ಜ್ಞಾನದ ಕುರಿತಾದ ಸಂಪೂರ್ಣ ಅರಿವನ್ನು ಮೂಡಿಸುವ ಅವಶ್ಯಕತೆಯನ್ನು ಕಂಡುಕೊಳ್ಳಲಾಗಿದೆ.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಸಾರಾಂಶ ಮತ್ತು ಉಪಸಂಹಾರ

ಮೌಲ್ಯಮಾಪನದ ಸಾರಾಂಶ ನಾನಾ ಆಸಕ್ತರು ಅಥವಾ ಸಂಬಂಧಪಟ್ಟವರಿಂದ ಸಂಗ್ರಹಿಸಲಾದ ಪ್ರಾಥಮಿಕ ದತ್ತಾಂಶಗಳಿಂದ ಕೆಲವೊಂದು ಮಹತ್ವದ ಆಸಕ್ತಿದಾಯಕ ಅಂಶಗಳು ಲಭಿಸಿದ್ದು, ಇದು ಕರ್ನಾಟಕವನ್ನು ಸುಜ್ಞಾನಿ ಸಮಾಜವನ್ನಾಗಿಸುವ ಆಯೋಗದ ಕಾರ್ಯದತ್ತ ಮುನ್ನಡೆಸಲು ಅನುಕೂಲವಾಗಿದೆ. ವಿಶ್ಲೇಷಣೆಯಿಂದ ಕಂಡುಕೊಳ್ಳಲಾದ ಅಂಶಗಳು ಸಮ್ಮಿಶ್ರವಾಗಿದ್ದು, ಒಟ್ಟಾರೆಯಾಗಿ ಆಯೋಗವನ್ನು ಕುರಿತಂತೆ ಸಕಾರಾತ್ಮಕ ಅಭಿಪ್ರಾಯದಲ್ಲಿ ಸ್ಥಿರತೆ ಇದೆ, ವಿಮಾರ್ಶತ್ಮಾಕ ವಿಷಯವನ್ನು ಇದು ಹೊಂದಿಲ್ಲ.

ಸಕಾರಾತ್ಮಕ ಅಂಶಗಳು

  • ಈ ಆಯೋಗ ದೀರ್ಘಾವಧಿಗೆ ಮುಂದುವರಿಯ ಬೇಕೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿ ಮೂಡಿಬಂದಿದ್ದು, ಕೆ-ಜಿಐಎಸ್, ಮೊಬೈಲ್ ಇಂಟರ್ ನೆಟ್ ವ್ಯಾನ್ ಇತ್ಯಾದಿ ವಿನೂತನ ಯೋಜನೆಗಳನ್ನು ಉಳಿಸಿ ಬೆಳೆಸುವ ಮೂಲಕ ತನ್ನ ಉದ್ದೇಶಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಲು ದೀರ್ಘಾವಧಿಗೆ ಇದನ್ನು ಉಳಿಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.                ಕರ್ನಾಟಕ ಯುವಜನ ಸೇವಾ ಕಾಯ್ದೆ 2012, ಸಾರ್ವಜನಿಕ ಆಸ್ಪತ್ರೆಗಳಿಗೆ ಔಷಧ ವಿತರಣೆ ಸಂಬಂಧಿ ಕಾಯ್ದೆ (ರೂಪುಗೊಳ್ಳುತ್ತಿದೆ)ಯನ್ನು ರೂಪಿಸುವಲ್ಲಿ ಆಯೋಗವು ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಕೆಲವು ಸಂಘಸಂಸ್ಥೆಗಳು ಈ ಮೊದಲು ಆರಂಭಿಸದಿರುವ ಕೆಲವು ವಿನೂತನ ಚಿಂತನೆಗಳು ಮತ್ತು ಕ್ರಮಗಳನ್ನು ಮೊದಲಿಗೆ ಆಯೋಗವು ಕೈಗೆತ್ತಿಕೊಂಡಿದೆ.
  • ಸರ್ಕಾರದ ನಾನಾ ಇಲಾಖೆಗಳ ನಡುವೆ ಆಯೋಗವು ಅತ್ಯುತ್ತಮ ಸಮನ್ವಯತೆಯನ್ನು ಹೊಂದಿದ್ದು ಇದು ಉತ್ತಮ ಕೆಲಸಕ್ಕೆ ಅಡಿಗಲ್ಲು ಹಾಕಿದೆ.
  • ಆಯೋಗವು ಅನುಸರಿಸಿದ ಎಲ್ಲಾ ಪ್ರಕ್ರಿಯೆಗಳು ಉದ್ದೇಶಿತ ಸುಧಾರಣೆ ಮತ್ತು ಪ್ರಸಕ್ತ ಇರುವ ವ್ಯವಸ್ಥೆ ನಡುವಿನ ಅಂತರವನ್ನು ತಗ್ಗಿಸಲು ನೆರವಾಗಲಿದೆ.
  • ಸರ್ಕಾರ ಮತ್ತು ಚಿಂತನಾ ಸಮೂಹದ ನಡುವೆ ಪ್ರಬಲ ಸಂಪರ್ಕವನ್ನು ಕೂಡ ಆಯೋಗವು ಏರ್ಪಡಿಸಲಿದೆ.
  • ಸರ್ಕಾರದ ಕಾರ್ಯ ನಿರ್ವಹಣೆ ವಿಧಾನದ ಕುರಿತು ಜನತೆಯಲ್ಲಿ ಮನೆ ಮಾಡಿರುವ ಕೆಲವೊಂದು ಮನೋವರ್ತನೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕೂಡ ಆಯೋಗವು ಪ್ರಮುಖ ಪಾತ್ರ ವಹಿಸಿದೆ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

  • ಕೆಲವರು ಆಯೋಗವು ಈ ಕೆಳಗಿನ ಅಂಶಗಳಲ್ಲಿ ಯಶಸ್ವಿಯಾಗಬಹುದು ಎಂದು ಹೇಳುತ್ತಿದ್ದಾರೆ.
  • ಸುಜ್ಞಾನ ಸಮಾಜಕ್ಕೆ ಮುಖ್ಯವಾದ ಬಹುಸಂಖ್ಯೆಯ ಜನರನ್ನು (ಕ್ರಿಟಿಕಲ್ ಮಾಸ್) ಸೃಷ್ಟಿಸುವ ನಿಟ್ಟಿನಲ್ಲಿ ಬೇಕಾದ ಅರ್ಹತೆ, ಪರಿಸರದ ಸೃಷ್ಟಿ.
  • ವ್ಯವಸ್ಥೆಯಲ್ಲಿರುವ ಮತ್ತು ಹೊರಗಿರುವ ಅತ್ಯುತ್ತಮ ಅಂಶಗಳ ಶೋಧನೆ, ಕಾರ್ಯಕ್ರಮಗಳ ಪುನರ್ ವಿನ್ಯಾಸ, ತಜ್ಞರ ಜೊತೆ ವಿಸ್ತೃತ ಅವಧಿಯಲ್ಲಿ ಚಿಂತನ-ಮಂಥನ ಮತ್ತು ಸರ್ಕಾರದ ಅನುಮೋದನೆ.
  • ಅತ್ಯಂತ ಆಸ್ಥೆ, ಅವಿಚ್ಛಿನ್ನತೆ ಮತ್ತು ಬಹುಸ್ತರ ಕಾರ್ಯವಿಧಾನಗಳ ಮೂಲಕ ವಿನೂತನ ಸಂಶೋಧನೆಯ ಅಭಿವೃದ್ಧಿ ಮತ್ತು ನಿರ್ವಹಣೆ.
  • ಜೊತೆಗೆ, ಜ್ಞಾನ ಫೆಲೋಶಿಪ್, ಅನ್ವೇಷಣಾ ವಿಶ್ವವಿದ್ಯಾಲಯ ವಿಧೇಯಕ 2011 (ಇನ್ನೋವೇಟಿವ್ ಯೂನಿವರ್ಸಿಟಿ ಬಿಲ್ 2011) ಗಳಂಥ ಉಪಕ್ರಮಗಳ ಮೂಲಕ ಜ್ಞಾನ ಆಯೋಗವು, ಒಂದು ವಿದ್ಯಮಾನವನ್ನು ಪ್ರಚೋದಿಸುವ ಮತ್ತು ವಿಚಾರ ವಿಮರ್ಶೆ-ವಿನಿಮಯ ಮಾಡುವ ಜ್ಞಾನ ರಾಶಿಯನ್ನು (ಕ್ರಿಟಿಕಲ್ ಮಾಸ್) ಸರಕಾರದ ಹೊರಗೂ ಮತ್ತು ಒಳಗೂ ಸೃಷ್ಟಿಸುವುದಕ್ಕಾಗಿ ಪರಿಸರ ಅನುವು ಮತ್ತು ಪೋಷಕ ಪರಿಸರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಧನಾತ್ಮಕ ಕಂಪನವಿದೆ ಎಂಬುದು ಹಲವರ ಅಭಿಪ್ರಾಯ.
  • ನ್ಯಾಯ ಸಮ್ಮತ ಮತ್ತು ಸಾಮಾಜಿಕ ನ್ಯಾಯ: ಆಡಳಿತಾಂಗದ ಕೆಲವೊಂದು ಭಾಗದಲ್ಲಿ ಸಮಾಜದ ಕೆಲವೊಂದು ವಿಭಾಗಗಳಿಗೆ ಯುವಜನಾಂಗದ ಸೂಕ್ತ ಪ್ರಾತಿನಿಧ್ಯವಿಲ್ಲದಿರುವುದರಿಂದ, ಈ ವಿಷಯವಾಗಿ ಆಯೋಗವು ಈಗಾಗಲೇ ಆಡಳಿತಾಂಗದ ಮೇಲೆ ಒತ್ತಡ ಹೇರಿದೆ. ಗಮನಿಸಬೇಕಾದ ಕ್ಷೇತ್ರಗಳು
  • ಆಯೋಗದ ಕ್ರಮಗಳ ಕುರಿತ ಅಭಿವ್ಯಕ್ತಿಯ ಪ್ರಕ್ರಿಯೆಯಲ್ಲಾಗುತ್ತಿರುವ ಕಾರ್ಯನಿರ್ವಹಣೆ ಮತ್ತು ಆಡಳಿತಾತ್ಮಕ ವಿಳಂಬದ ಬಗ್ಗೆ ಸಾಕಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಕುರಿತಂತೆ ಸಂಬಂಧಪಟ್ಟ ಇಲಾಖೆಗಳಿಗೆ ತಮ್ಮದೇ ಆದ್ಯತೆಗಳಿವೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ.
  • `ಜ್ಞಾನ' ಎಂಬ ಶಬ್ಧದ ಕುರಿತಾಗಿ ಸ್ಪಷ್ಟವಾದ ವ್ಯಾಖ್ಯಾನದ ಅವಶ್ಯಕವಿದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ಮೂಲಕ ಜನ ಸಾಮಾನ್ಯರಿಗೂ ಈ ಕುರಿತು ಸ್ಪಷ್ಟನೆ ದೊರೆಯುವಂತಾಗಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯಕ್ಕೆ ಸೂಚಕಗಳು: ಸುಸ್ಥಿರತೆÉ ಮತ್ತು ಪುನರಾವರ್ತನೀಯತೆ ಈ ಮೌಲ್ಯಮಾಪನವು ಪುನರಾವರ್ತನೀಯ ಮತ್ತು ಉಳಿಯುವಿಕೆಯ ಕೆಲವೊಂದು ಅಂಶಗಳನ್ನು ಅವಲಂಬಿಸಿದೆ. ಆಯೋಗದ ಅವಧಿಯು ಮುಗಿದ ನಂತರ ಇದರ ಮುಂದುವರಿಕೆಗೆ ಯಾವ ರೀತಿಯ ಶಿಫಾರಸ್ಸು ಮಾಡುತ್ತೀರೆಂದು ಸಂಬಂದ ಪಟ್ಟವರ ಬಳಿ ಪ್ರಶ್ನೆಯನ್ನು ಕೇಳಲಾಯಿತು. ಅವರಿಂದ ಬಂದ ಉತ್ತರಗಳು ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂದಿಸಿತ್ತು. ಅವುಗಳೆಂದರೆ...
  • `ಜ್ಞಾನ’ ಎಂಬ ಶಬ್ಧದ ಕುರಿತ ಪರಿಪೂರ್ಣ ವ್ಯಾಖ್ಯಾನವನ್ನು ಅಭಿವೃದ್ಧಿ ಪಡಿಸಬೇಕು. ಇದು ಕರ್ನಾಟಕದ ಎಲ್ಲಾ ಸಮಾಜದ ಎಲ್ಲಾ ಹಂತಗಳನ್ನೂ ಪ್ರತಿನಿಧಿಸುವಂತಿರಬೇಕು.
  • ಸಂಬಂಧಪಟ್ಟ ಮತ್ತು ಆಸಕ್ತರ ಜೊತೆಗೆ ನಿರಂತರ ಸಂಪರ್ಕ ಇರಬೇಕು.
  • ವಿನೂತನ ಚಿಂತನೆಗಳಿಗೆ ಮುಕ್ತವಾದ ಉತ್ತೇಜನ ನೀಡಬೇಕು.
  • ಶಿಫಾರಸ್ಸುಗಳ ಪರಿಣಾಮಕಾರಿ ಜಾರಿ ಕುರಿತು ನಿರಂತರ ನಿಗಾವಹಿಸಬೇಕು.
  • ಶಿಫಾರಸ್ಸುಗಳ ಜಾರಿಯ ಪ್ರಗತಿ ಕುರಿತು ಮೇಲ್ವಿಚಾರಣೆ ನಡೆಸಬೇಕು.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

  • ಆಯೋಗವು ಸ್ವಾಯತ್ತತೆಯ ಸಂಸ್ಥೆಯಾಗಿ ನಿರ್ವಹಣೆ ಮಾಡಬೇಕು.
  • ಗುಣಮಟ್ಟದ ಜ್ಞಾನದ ಅಭಿವೃದ್ಧಿ ಮತ್ತು ಅದರ ಉಳಿವಿಕೆಯ ಬಗ್ಗೆ ನಿರಂತರ ನಿಗಾವಹಿಸಬೇಕು ಮತ್ತು ಆಡಳಿತಾತ್ಮಾಕ ಕೆಲಸದ ಭಾಗವಹಿಸುವಿಕೆಯನ್ನು ಕಡಿಮೆ ಮಾಡಬೇಕು.
  • ಗುಣಾತ್ಮಕ ಜ್ಞಾನಕೋಸ್ಕರ ಪರಿಸರ ಸೃಷ್ಟಿಸುವುದು ಮತ್ತು ಅದರ ನಿರಂತರತೆಯನ್ನು ಕಾಯ್ದಕೊಳ್ಳಬೇಕು.
  • ಜ್ಞಾನ ಸಂಪಾದನೆ ಕ್ಷೇತ್ರದಲ್ಲಿ ಸಮಾಜದ ಎಲ್ಲಾ ವರ್ಗಗಳ ಸಕ್ರಿಯ ಸಹಭಾಗಿತ್ವದ ಖಾತರಿ.

ಶಿಫಾರಸ್ಸುಗಳು ನಾವು ವಿವಿಧ ಮೂಲಗಳಿಂದ ವಿಶ್ಲೇಷಿಸಿದ ಮಾಹಿತಿ ಮತ್ತು ನಮ್ಮ ಅಧ್ಯಯನದಲ್ಲಿ ಅರ್ಥಮಾಡಿಕೊಂಡ ಪ್ರಕಾರ ಕೆಳಗಿನ ಶಿಫಾರಸ್ಸುಗಳನ್ನು ಮಾಡುತ್ತಿದ್ದೇವೆ.

  • ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ವೃತ್ತಿಪರ ಶಿಕ್ಷಣ ಮತ್ತು ಮಾನವೀಯತೆ ಹಾಗೂ ಸಮಾಜ ವಿಜ್ಞಾನ ಕ್ಷೇತ್ರಗಳು ಇನ್ನಷ್ಟು ಕೆಲಸ ಮಾಡುವ ಅವಶ್ಯಕತೆ ಇದೆ. ಈ ಗುರಿಯನ್ನು ಇನ್ನಷ್ಟು ವ್ಯವಸ್ಥೀಕೃತ ಹಾಗೂ ಹೆಚ್ಚಿನ ಸೌಲಭ್ಯಗಳ ಮೂಲಕ ಸಾಧಿಸಬಹುದು.
  • ಆಯೋಗವು ಗಮನ ನೀಡಿದ ವಲಯಗಳ ಕುರಿತಾಗಿ ಮಾಡಿದ ಕೆಲವು ಕೆಲಸಗಳಲ್ಲಿ ಸಂಪರ್ಕ ಹೊಂದಿದೆ ಎಂದು ಕಾಣಿಸಿದರೂ, ಕೆಲವು ಕೆಲಸ-ಕಾರ್ಯಗಳಲ್ಲಿಯ ಸಂಪರ್ಕವು ನಿಕರವಾಗಿ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗವು ಚಟುವಟಿಕೆಗಳನ್ನು ಪ್ರತಿ ಹಂತದಲ್ಲಿಯೂ  ಸರಿಯಾದ ಮೇಲ್ವಿಚಾರಣೆಯನ್ನು ಮಾಡಿ, ಅದರ ನಿರೀಕ್ಷಿತ ಫಲಿತಾಂಶವನ್ನು ಹೊಂದಿದೆಯೇ ಎಂದು ಪರೀಕ್ಷಿಸಬೇಕು. ಇದರಲ್ಲಿ ಏನಾದರು ಅಂತರ ಕಂಡುಬಂದರೆ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು
  • ಆಯೋಗದ ಕೆಲಸವನ್ನು ಕ್ಷೇತ್ರ ಮಟ್ಟದಲ್ಲಿ ಜಾರಿಮಾಡುವ ಪಾಲುದಾರರಲ್ಲಿ ಕ್ಷೇತ್ರಮಟ್ಟದ ತಜ್ಞರನ್ನು ನೇಮಿಸುವ ಮೂಲಕ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಬಹುದು. ಈ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರುವ ನುರಿತ ತಜ್ಞರನ್ನು ಆಯೋಗದಲ್ಲಿ ಕೆಲಸ ಮಾಡಲು ನಿಯೋಜಿಸಬಹುದು, ಇದರಿಂದಾಗಿ ಕ್ಷೇತ್ರ ಮಟ್ಟದಲ್ಲಿರುವ ಅಂತರವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.  ಇವರುಗಳು ನಿಯೋಜನೆಯ ಅಧಿಕಾರಿಗಳು, ನಿವೃತ್ತ ಹೊಂದಿದ ಅಧಿಕಾರಿಗಳು ಆಗಬಹುದು.
  • ಬಳಕೆದಾರರ ಹಿತದೃಷ್ಟಿಯಿಂದ ಆಯೋಗದ ಕೆಲಸವು ಎಲ್ಲಾ ಹಂತಗಳಲ್ಲಿಯೂ ಸರಿಯಾದ ರೀತಿಯಲ್ಲಿ ನಡೆಯಬೇಕಾದರೆ, ಸಕ್ರಿಯವಾಗಿ ಭಾಗವಹಿಸುವ ಸಿಬಿಒ, ಎನ್.ಜಿ.ಓ ಮತ್ತು ಬಳಕೆದಾರರ ಗುಂಪುಗಳು ಆಯೋಗದ ಸಕ್ರಿಯ ಸಿಬ್ಬಂದಿಗಳಾಬೇಕಾದ ಅವಶ್ಯಕತೆ ಇದೆ.
  • ಜ್ಞಾನದ ಸಾಂಸ್ಥೀಕರಣದ  ಹೊರತಾಗಿ ಅದನ್ನು ಅನುಷ್ಠಾನಗೊಳಿಸಬೇಕಾದ ಮತ್ತು ಚಿಂತನೆಗಳ ಸೃಷ್ಟಿಯ ನಿಟ್ಟಿನಲ್ಲಿ ಆಯೋಗವು ಪ್ರಮುಖವಾಗಿ ವೇಗವರ್ಧಕ ಮತ್ತು ಸೌಲಭ್ಯ ನೀಡುವ ವ್ಯವಸ್ಥೆಯಾಗುವ ಪಾತ್ರ ವಹಿಸಬೇಕಾಗಿದೆ.
  • ಒಟ್ಟಾರೆ ಶ್ರಮವು ಸಂಬಂಧಪಟ್ಟವರ ಹಂತದಲ್ಲಿ ನಡೆಯಬೇಕಾಗಿದೆ. ಈ ಮೂಲಕ ಜ್ಞಾನಾಧಾರಿತ ಸಮಾಜದ ಮುಂದಿನ ಉನ್ನತ ಹಂತಕ್ಕೆ ತಲುಪಲು ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕಾ ಕ್ಷೇತ್ರಗಳ ನೆರವು ಮತ್ತು ಸಹಕಾರ ಮಾಡಿಕೊಳ್ಳಬೇಕಾಗುತ್ತದೆ.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಕಾರ್ಯರೂಪಕ್ಕೆ ಬರಬಹುದಾದ ಉತ್ಪನ್ನದ (ಔಟ್‍ಪುಟ್) ಚೌಕಟ್ಟು ಆಯೋಗವು ಜ್ಞಾನಾಧಾರಿತ ಸಮಾಜವನ್ನು ಸೃಷ್ಟಿಸುವ ಒಂದು ಅನ್ವೇಷಣಾ ಗುರಿಯೊಂದಿಗೆ ವಿಭಿನ್ನ ವಿಚಾರಗಳನ್ನು ಉತ್ತೇಜಿಸುತ್ತಿರುವುದರಿಂದ ಆಯೋಗದ ಕಾರ್ಯವಿಧಾನ ಮತ್ತು ಕಾರ್ಯ ನಿರ್ವಹಣೆಯನ್ನು ಒಂದು ಚೌಕಟ್ಟಿನಲ್ಲಿ ವಿವರಿಸುವುದು ಬಹಳ ಕಷ್ಟ, ಆದರೂ ಸಹ ನಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ದತ್ತಾಂಶಗಳ ವಿಶ್ಲೇಷಣೆ ಮೂಲಕ ಲಭ್ಯವಿರುವ ಸಾಹಿತ್ಯವನ್ನು ಕಠಿಣವಾಗಿ ವಿಮರ್ಶಿಸಿರುವುದರ ಮೂಲಕ ಉಪಯುಕ್ತ ಮಾಹಿತಿಯನ್ನು  ವಿವರಿಸಬಹುದಾಗಿದೆ.

ರಾಮಪ್ರಸಾದ್ ಮತ್ತು ಶ್ರೀಧರ್ (2011) ಅವರು `ಟ್ರಿಪಲ್ ಹೆಲಿಕ್ಸ್ ಮಾಡೆಲ್’ ಮೂಲಕ ಆಯೋಗ ಪ್ರಕ್ರಿಯೆಗಳ ಬಗ್ಗೆ ವಿಸ್ತೃತವಾದ ಕಾರ್ಯಚೌಕಟ್ಟನ್ನು ಅಧ್ಯಯನವನ್ನು ಮಾಡಿ, ಈ ಮೂಲಕ ಆಯೋಗವು ನಿರ್ವಹಿಸುವ ಪಾತ್ರದ ಪರಿಚಯ, ಕಾರ್ಯನೀತಿಗಳು, ನಿರ್ಣಾಯಕ ಪಾಲುದಾರಿಕೆಯ ನಿಯಂತ್ರಣವನ್ನು ಕಂಡುಕೊಳ್ಳಬಹುದು. ಎಲ್ಲಾ ಯೋಜನೆಗಳನ್ನು ವೈಯಕ್ತಿಕವಾಗಿ ಯೋಜನೆಗಳ ಚೌಕಟ್ಟಿನಲ್ಲಿ ಗುರುತಿಸಲಾಗಿದೆ ಮತ್ತು ಯೋಜನೆಗಳನ್ನು 3 ವಿಭಾಗಳಲ್ಲಿ ಎಲ್ಲಿ ಅಳವಡಿಸಬಹುದು ಎಂಬುದನ್ನು ಕಂಡುಹಿಡಿದಿದ್ದಾರೆ. ಈ ಚೌಕಟ್ಟನ್ನು ಬೇರೆ ವಲಯದ ವಿಶ್ಲೇಷಣೆಯನ್ನು ಮಾಡಲು ವಿಸ್ತರಿಸಬಹುದು ಮತ್ತು ಇದರ ಸಮನ್ವಯತೆ ಮತ್ತು ವಿಬಿನ್ನತೆಯು ಮುಂದೆ ಹೊಸ ವಲಯದಲ್ಲಿ ಚೌಕಟ್ಟುನ್ನು ವಿಶ್ಲೇಷಿಸಲು ಅವಕಾಶವನ್ನು ನೀಡುತ್ತದೆ.

ಪ್ರಸಕ್ತ ಇರುವ ನಾನಾ ಆಸಕ್ತರು ಅಥವಾ ಸಂಬಂಧ ಪಟ್ಟವರಿಂದ ಪಡೆದ ಮಾಹಿತಿಯನ್ವಯ ಸಂಪೂರ್ಣ ವಿಶ್ಲೇಷಣೆಯ ಮೂಲಕ ನಾವು ಕಾರ್ಯಾತ್ಮಕ ಉತ್ಪನ್ನದ ಚೌಕಟ್ಟನ್ನು ಸಿದ್ದಪಡಿಸಿದ್ದೇವೆ.

ಎಲ್ಲಾ ಅಂಗಗಳು ಸಮನ್ವಯದಿಂದ ಕೆಲಸ ಮಾಡುವ ಮೆಕಿನ್ಸೇ 7ಎಸ್ ಫ್ರೇಮ್‍ವರ್ಕ್ ಮೂಲಕ ಆಯೋಗವು ಕೂಡ ಸಂಪೂರ್ಣ ತಿಳಿವಳಿಕೆಪೂರ್ಣವಾಗಿ ಕೆಲಸ ನಿರ್ವಹಿಸಬೇಕು ಎಂಬುದು ನಮ್ಮ ಉದ್ದೇಶ. ಆದರೂ ಆಯೋಗವು ಅಲ್ಫಾವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ ಸಂಸ್ಥೆ.  ಬಹು ವಲಯದ ಕೆಲಸಗಳನ್ನು ಮಾಡುವ ಬಹುಸ್ತರ ವಿಭಾಗಗಳ ತಂಡವಾಗಿ ಆಯೋಗವು ಕೆಲಸ ಮಾಡಿದ್ದರಿಂದಲೇ ಇದು ಸಾಧ್ಯವಾಯಿತು. ಆಯೋಗದ ವ್ಯವಸ್ಥೆ ಮತ್ತು ಅದರ ಪ್ರಕ್ರಿಯೆಯು ಎಲ್ಲಾ ಕಡೆಯಿಂದಲೂ ಪಾರದರ್ಶಕತೆ ಮತ್ತು ಮುಕ್ತವಾದ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವಿಕೆಯಿಂದ ಶ್ಲಾಘನೆಗೆ ಪಾತ್ರವಾಗಿದೆ. ಆಯೋಗವು ಎಲ್ಲಾ ಪಾಲುದಾರರಿಗೆ ಹೆಚ್ಚು ಸ್ಪಂದಸಿದೆ. ಕಾರ್ಯಪಡೆಯಿಂದ ಮಿಶನ್ ಗುಂಪಿಗೆ ಕೆಲಸವನ್ನು ವರ್ಗಾಯಿಸುವ ಆಯೋಗದ ಕ್ರಮವು, ಇದರ ಗುರಿ ನಿರ್ದೇಶಿತ ತೊಡಗಿಸಿಕೊಳ್ಳುವಿಕೆ, ಉನ್ನತ ಮಟ್ಟದ ಕಾರ್ಯತಂತ್ರದಲ್ಲಿ ಪ್ರೌಢಿಮೆ ಮತ್ತು ವಿಸ್ತೃತ ಗುರಿಯನ್ನು ಸಾಧಿಸುವ ಕುರಿತಾದ ಬದ್ಧತೆಗೆ ಸ್ಪಷ್ಟವಾದ ಸಾಕ್ಷಿಯಾಗಿದೆ. ಆಯೋಗದ ಕಾರ್ಯತಂತ್ರವು  ಹೊಂದಿಕೊಳ್ಳುವಂತಹುದು ಹಾಗು ಅಳವಡಿಸಿಕೊಳ್ಳಲು ಬಹುದು. ಆಯೋಗದ ಯಶಸ್ಸಿಗೆ ಮುಖ್ಯವಾಗಿ ಕಾರ್ಯದರ್ಶಿ ಸದಸ್ಯರ ಶ್ರಮ, ಪ್ರಭಾವ ಹಾಗೂ ಸರ್ಕಾರವನ್ನು ಮನವೊಲಿಸುವ ಅವರ ಕ್ರಮವೇ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಸರ್ಕಾರದೊಂದಿಗೆ ಆಯೋಗವು ಹೊಂದಿದ ಸಂಬಂದವು ಸರ್ಕಾರಿ ಇಲಾಖೆಗಳ ಮತ್ತು ಅನೇಕ ತಜ್ಞರ ಮಧ್ಯಸ್ಥಗಾರರಿಂದ ಬಂದಿದೆ. ಕೆಲವು 7ಎಸ್ ಮಾದರಿಯು ಆಯೋಗವು ಎಲ್ಲಾ ಬಹು ಸ್ತರ ಹಂತಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಸರ್ಕಾರದ ಮೆಚ್ಚುಗೆಯನ್ನೂ ಪಡೆಯಬಲ್ಲುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಪರಿವರ್ತನೆಯ ಸ್ಥಾನದ ಕುರಿತು ವಿವರಣೆ ನೀಡುವಾಗ ಆಯೋಗದ ಮೂರನೇ ಕೋನದಲ್ಲಿ ಅಂದರೆ ಸರ್ಕಾರ, ಖಾಸಗಿಯ ನಡುವಿನ ಸ್ಥಾನವನ್ನು ಹೊಂದಿದೆ. ಇದರರ್ಥ ಎಂದರೆ, ಸರ್ಕಾರದ ಒಳಗಿರುವ ಕೆಲವೊಬ್ಬ ಸಂಬಂಧಪಟ್ಟವರು ಅಥವಾ ಆಸಕ್ತರು ಆಯೋಗವನ್ನು ಖಾಸಗಿ ಎಂದು ತಿಳಿದುಕೊಂಡಿದ್ದು, ಅವರ ಸಾಂಸ್ಕೃತಿಕ

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಗಡಿಯಿಂದ ಹೊರಗಿನವರು ಎಂದು ತಿಳಿದುಕೊಂಡಿದ್ದಾರೆ. ಇದೇ ರೀತಿ ಖಾಸಗಿಯವರು ಇದು ಸರ್ಕಾರಿ ಏಜೆನ್ಸಿ ಎಂದು ತಿಳಿದುಕೊಂಡಿದ್ದಾರೆ. ಈ `ದ್ವಿಪಾತ್ರದ ಗುರುತು' ಆಯೋಗವು ಹೊಸ ಯೋಜನೆಗಳಿಗೆ  ಕೆಲವೊಮ್ಮೆ ಉಪಯೋಗಿ ಕೆಲವೊಮ್ಮೆ ಅಪಾಯಕಾರಿಯಾಗಿ ಪರಿಗಣಿಸಿರುವುದು ಸುಳ್ಳಲ್ಲ. ಆದರೆ ಇದು  ಆಯೋಗದ ಹೊಸತನದಿಂದ ಹೊರ ಹೊಮ್ಮಲು ಆಯೋಗಕ್ಕೆ ಸಾಹಸದಾಯಕ ವ್ಯಕ್ತಿತ್ವವನ್ನು ನೀಡವಂತೆ ಮಾಡಿದೆ. ಆದರೂ ಆಯೋಗವು ತನ್ನ ವಿಶಿಷ್ಠ ಸ್ಥಾನದಿಂದಾಗಿ ಸರ್ಕಾರಿ ಇಲಾಖೆಗಳು ಮತ್ತು ಖಾಸಗಿಯವರ ಜೊತೆಗೆ ಸಮಾನ ದೂರವನ್ನು ಕಾಯ್ದುಕೊಂಡು ಬಂದಿದೆ. ಕೆಲವರು ನೀಡಿದ ಅಭಿಪ್ರಾಯವನ್ನು ಈ ವರದಿಯ ಹಿಂದಿನ ವಿಭಾಗಗಳಲ್ಲಿ ವಿವರವಾಗಿ (ಪ್ರಗತಿಗಳನ್ನು ಒಟ್ಟುಗೂಡಿಸುವುದು, ಮತ್ತು ಅಡ್ಡಿಪಡಿಸದ ಅಂಶಗಳು, ಕಾಳಜಿ ಇತ್ಯಾದಿ) ನೀಡಲಾಗಿದೆ. ಹಲವಾರು ಶಿಫಾರಸ್ಸುಗಳನ್ನು ಇಲಾಖೆಗಳು ಯಶಸ್ವಿಯಾಗಿ ಮುಂದಕ್ಕೆ ತೆಗೆದುಕೊಂಡು ಹೋಗಿ ಅಭಿವೃದ್ಧಿ ಪಡಿಸಲಾಗಿದೆ. ಆಯೋಗದ ಜೊತೆ ನಿಕಟ ಸಂಬಂದ ಹೊಂದಿದ ಬಹಳಷ್ಟು ಜನರು ಆಯೋಗದ ಯೋಜನೆಯ ಕಲ್ಪನೆ ಮತ್ತು ಇದನ್ನು ಅನುಷ್ಠಾನಗೊಳಿಸಿದ ಚಟುವಟಿಕೆಗಳು, ಸ್ಪಷ್ಟವಾದ ವಾತವರಣದ ಸೃಷ್ಟಿಗೆ ಕೊಡುಗೆಯನ್ನು ನೀಡುವ ಮೂಲಕ ಒಂದು ಆಟದ ಬದಲಾಣೆಯನ್ನು ತರುವ ಅಥವಾ ಬದಲಾವಣೆಯ ಬೀಜಗಳನ್ನು ಬಿತ್ತುವ ಕೆಲಸವನ್ನು ಆಯೋಗವು ಮಾಡಿದೆ ಎಂದು ಹಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ, ಆದರೆ ಇದರ ಕಲ್ಪನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುವುದೇ ಎಂಬುದು ಕೆಲವರ ಕಳವಳ. ಈ ಚೌಕಟ್ಟಿನಲ್ಲಿ ಚಿತ್ರಿಸಲಾದ ಕೆಲವು ಗ್ರಹಿಕೆಗಳು ಮತ್ತು ತೊಡಕುಗಳು ಭವಿಷ್ಯದಲ್ಲಿ ಇದರ ಅಥವಾ ಇದೇ ರೀತಿಯ ನಿಯೋಜಿತ ಮಂಡಳಿಯ ಸ್ಥಿರತೆಯನ್ನು ಸಮರ್ಥಸುತ್ತದೆ.

7ಎಸ್ ಚೌಕಟ್ಟಿನ ಅಂಶಗಳ ಪುನರ್ ಪರಿಶೀಲನೆಯ ನಿಟ್ಟಿನಲ್ಲಿ ಮೂರು ಹಂತಗಳಿವೆ. (ಚಿತ್ರ 4.1, 4.2 ಮತ್ತು 4.3) ಇವುಗಳು ಆಯೋಗ ಸರ್ಕಾರ ಮತ್ತು ಖಾಸಗಿ ವಲಯಗಳ ನಡುವಿನ ಚಾಲನಾ ಶಕ್ತಿಯಾಗಿ ಕೆಲಸ ಮಾಡಿರುವುದು ಗೊತ್ತಾಗುತ್ತದೆ. ಮೊದಲ ಹಂತವು ಆಯೋಗವು ಸರ್ಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಪಡೆದಿದ್ದು, ಖಾಸಗಿ ವಲಯದಲ್ಲಿ ಕಡಿಮೆ ಅವಕಾಶ ಪಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಎರಡನೇ ಹಂತದಲ್ಲಿ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಸಮಾನ ಪಾಲು ಪಡೆದಿರುವುದು ಸ್ಪಷ್ಟವಾಗುತ್ತದೆ. ಮೂರನೇ ಹಂತದಲ್ಲಿ ಆಯೋಗವು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಕಡಿಮೆ ಅವಕಾಶವನ್ನು ಪಡೆದಿದ್ದು, ಹೆಚ್ಚಿನ ಅಂಶವನ್ನು ಸಾರ್ವಜನಿಕರ ಜೊತೆಗೆ ಹೆಚ್ಚು ಬೆರೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಈ ಮೂಲಕ ಆಯೋಗವು ಸಮಾಜದ ಬಹು ಜನರನ್ನು ತಲುಪುವ ನಿಟ್ಟಿನಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ಪಡೆದು ಆ ಮೂಲಕ ಹೆಚ್ಚು ಸಮಾಜಮುಖಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಉತ್ಪನ್ನದ ಚೌಕಟ್ಟಿನ ರಚನೆಯಲ್ಲಿ ಬದಲಾವಣೆಯಾಗಬೇಕು ಆಯೋಗವು ಹೊಸ ವಿನ್ಯಾಸದ ರಚನೆಯನ್ನು ತಂದು ಅದು ಸಮಾಜದ ಎಲ್ಲಾ ವಿಭಾಗಳಲ್ಲಿ ಬದಲಾವಣೆಯನ್ನು ತರುವ ವಾಸ್ತುಶಿಲ್ಪಿಯಾಗಬೇಕು.

ಆಯೋಗವು ದೀರ್ಘಾವಧಿ ಕಾರ್ಯ ನಿರ್ವಹಿಸುವ ಮೂಲಕ ಕೆ-ಜಿಐಎಸ್, ಮೊಬೈಲ್ ಇಂಟರ್ ನೆಟ್ ವ್ಯಾನ್ ಇತ್ಯಾದಿ ಯೋಜನೆಗಳು ಮತ್ತು ವಿನೂತನ ಕ್ರಮಗಳನ್ನು ಮುಂದುವರಿಸಲು ಅವಕಾಶ ಮಾಡಿಕೊಡಬೇಕೆಂಬುದು ಸಾರ್ವಕಾಲಿಕ ಸ್ವೀಕಾರಾರ್ಹ ಅಭಿಪ್ರಾಯವಾಗಿದೆ. ಇಂತಹ ದೀರ್ಘಾವಧಿ ದೂರದೃಷ್ಟಿಕೋನದಿಂದ ಮಾತ್ರ ಅದು ತನ್ನ ಉದ್ದೇಶಗಳ ಬಗ್ಗೆ ತಾರ್ಕಿಕ ಅಂತ್ಯ ಪಡೆದುಕೊಳ್ಳಬಹುದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇದರಿಂದ ದೇಶವು ಜ್ಞಾನ ದೃಷ್ಟಿಯಲ್ಲಿ ಹೆಚ್ಚು ಹೆಚ್ಚು ಸಾಮಥ್ರ್ಯ  ಹೊಂದಲು ಸಾಧ್ಯ.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಚಿತ್ರ 4.1: ಹಂತ ಒಂದು-ಆಯೋಗವು ಹೆಚ್ಚು ಸಾರ್ವಜನಿಕ ಅವಕಾಶ ಹೊಂದಿದ ಸಂದರ್ಭದಲ್ಲಿ ಸರ್ಕಾರದ ಜೊತೆ ಹೆಚ್ಚು ಭಾಗವನ್ನು ಹೊಂದಿದ್ದು, ಖಾಸಗಿ ವಲಯದಲ್ಲಿ ಕಡಿಮೆ ಪಾಲನ್ನು ಹೊಂದಿರುತ್ತದೆ.

ಚಿತ್ರ 4.2: ಹಂತ ಎರಡು- ಆಯೋಗವು ಸಾರ್ವಜನಿಕ ಅವಕಾಶವನ್ನು ಹೆಚ್ಚು ಪಡೆದುಕೊಂಡ ಸಂದರ್ಭದಲ್ಲಿ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಒಂದೇ ರೀತಿಯ ಪಾಲನ್ನು ಹೊಂದಿರುತ್ತದೆ.

ಚಿತ್ರ 4.3: ಹಂತ ಮೂರು-ಆಯೋಗದ ಸರ್ಕಾರಿ ಮತ್ತು ಖಾಸಗಿ ವಲಯದ ಪಾಲು ಕಡಿಮೆಯಾದಷ್ಟು  ಅದು ಹೆಚ್ಚು ಹೆಚ್ಚು ಜನತೆಯ ಜೊತೆ ಬೆರೆಯಲು ಸಾಧ್ಯವಾಗುತ್ತದೆ.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಮೂರು ವರ್ಷಗಳ ತನ್ನ ಮೊದಲ ಕಾರ್ಯಾವಧಿಯಲ್ಲಿ ಆಯೋಗವು ಕರ್ನಾಟಕ ಸರ್ಕಾರದ ಕಾರ್ಯಪಡೆಯಾಗಿ ಅಭಿವೃದ್ಧಿ ಪಡಿಸುವ ಮತ್ತು ವಿಶ್ವಾಸಾರ್ಹತೆ ಮತ್ತು ಕೌಶಲ್ಯವನ್ನು ಉತ್ತಮಗೊಳಿಸುವ ಕಾರ್ಯದಲ್ಲಿ ನಿರತವಾಯಿತು. ಎರಡನೇ ಹಂತದಲ್ಲಿ ಕಾರ್ಪೋರೇಟ್ ಮತ್ತು ನಾಗರಿಕ ಸಮಾಜದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮಿಶನ್ ಗುಂಪುಗಳ ಪುನರ್ ರಚನೆಯಲ್ಲಿ ವ್ಯಸ್ತವಾಯಿತು. ಈ ವರದಿಯು ಮುಂದಿನ ದಿನಗಳಲ್ಲಿ ಆಯೋಗವು ತನ್ನೆಲ್ಲಾ ಹಳೆಯ ನಿಬಂಧನೆಗಳು ಅಥವಾ ನಿರ್ಬಂಧಗಳನ್ನು ನಿವಾರಿಸಿಕೊಂಡು ಕರ್ನಾಟಕವನ್ನು ಸುಜ್ಞಾನಿ ಸಮಾಜವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಬೇಕಾದ ಕೆಲಸಗಳನ್ನು ಮಾಡಲು ಬೇಕಾದ ಎಲ್ಲಾ ಸಾಮಥ್ರ್ಯವನ್ನು ಮೈಗೂಡಿಸಿಕೊಳ್ಳಲಿದೆ. ಆಯೋಗದ ಭವಿಷ್ಯದ ಕ್ರಮವು ಈ ಮೇಲಿನ ಕಾಣಿಸಿದ ಎಲ್ಲಾ ಕಲಿಕೆಗಳಿಂದ ಪ್ರಭಾವಿತವಾಗಿ ಕರ್ನಾಟಕವನ್ನು ಸಂಪೂರ್ಣ ಜ್ಞಾನ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಮುಂದುವರಿಯಲಿದೆ.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

ಅನುಬಂಧ-1

ಪ್ರಾಥಮಿಕ ದತ್ತಾಂಶ ಸಂಗ್ರಹಕ್ಕಾಗಿ ಆಯ್ದ ಶಿಫಾರಸ್ಸುಗಳು

ಸೂಚನೆ: ಮೊದಲ 6 ಅಂಶಗಳು ಪ್ರಗತಿಯನ್ನು ಸೂಚಿಸುವುದು: 7 ಮತ್ತು 8ನೇ ಅಂಶಗಳು ಪ್ರಗತಿಯಾಗz É ಇರುವುದನ್ನು ಮತ್ತು ಉಳಿದ 9 ಮತ್ತು 10ನೇ ಅಂಶಗಳು ಅಂತಿಮ ಪ್ರತಿಯನ್ನು ಸೂಚಿಸುತ್ತದೆ

  • ರಾಜ್ಯದಲ್ಲಿರುವ ಡಿಎಸ್‍ಇಆರ್‍ಟಿ, ಡಿಐಇಟಿಗಳು, ಬಿಆರ್‍ಸಿಗಳು ಮತ್ತು ಸಿಆರ್‍ಸಿಗಳ ಸಾಮಥ್ರ್ಯ ಹೆಚ್ಚಳ ಮತ್ತು ಸಬಲೀಕರಣದ ಮೂಲಕ ಸಂಪನ್ಮೂಲ ಸಂಸ್ಥೆಗಳ ವಿಕೇಂದ್ರೀಕರಣಗಳಿಸಬೇಕು. ಈ ಸಂಪನ್ಮೂಲ ಸಂಸ್ಥೆಗಳಿಗೆ ಜಿಲ್ಲೆ, ಬ್ಲಾಕ್ ಮತ್ತು ಕ್ಲಸ್ಟರ್ ಗಳಿಗೆ ಅವಶ್ಯಕವಾದ ಸ್ವಾಯತ್ತೆಯನ್ನು ನೀಡುವುದು.
  • ಪ್ರಸಕ್ತ ಬಿಎ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಚಿಲ್ಲರೆ ವ್ಯಾಪಾರದಲ್ಲಿ ಕೌಶಲ್ಯ ತರಬೇತಿ, ಸಂಪರ್ಕ ಕೌಶಲ್ಯ, ಜೀವನ ನಿರ್ವಹಣೆ ಕೌಶಲ್ಯ, ದತ್ತಾಂಂಶ ನಿರ್ವಹಣೆ(ಡಾಟಾ ಎಂಟ್ರಿ ಅಪರೇಶನ್),  ಔದ್ಯಮೀಕರಣ ಇತ್ಯಾದಿ ಕ್ಷೇತ್ರಗಳಲ್ಲಿ ತರಬೇತಿ ನೀಡುವುದು. ಇದನ್ನು ಕರ್ನಾಟಕದ ಎರಡು ವಿಶ್ವವಿದ್ಯಾಲಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುವುದು. ಇದನ್ನು ಅವರು ಶಿಕ್ಷಣ ಪಡೆಯುತ್ತಿರುವ ಕಾಲೇಜುಗಳಲ್ಲೇ ಹೆಚ್ಚುವರಿ ಶುಲ್ಕವಿಲ್ಲದೆ ನೀಡುವುದು.
  • ಸಮುದಾಯಗಳಿಗೆ ಉಪಯುಕ್ತವಾಗುವಂತೆ ಎಲ್ಲಾ ಜಿಲ್ಲೆಗಳಲ್ಲಿ ವಲಯವಾರು ಔಷಧ ವಿಜ್ಞಾನ ಕೋರ್ಸ್ ಗಳನ್ನು ಅಭಿವೃದ್ಧಿಗೊಳಿಸುವುದು. ಇದಕ್ಕೆ ಸಾಮುದಾಯಿಕ ಜಾನಪದ ಚಿಕಿತ್ಸಕರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳುವುದು.
  • ರೈತರು, ಗ್ರಾಮೀಣ ವಿದ್ಯಾರ್ಥಿಗಳು, ಹಿಂದುಳಿದ ವರ್ಗ, ಗೃಹಿಣಿಯರಿಗೆ ಅನುಕೂಲವಾಗುವ ರೀತಿಯಲ್ಲಿ ಕರ್ನಾಟಕದ ಕುರಿತಂತೆ ಎಲ್ಲಾ ಮಾಹಿತಿ ನೀಡುವ ವಿಶ್ವಕೋಶ (ವಿಕಿಪಿಡೀಯಾ)ದಂತಹ ಅಂತರ್ಜಾಲವನ್ನು ಸಿದ್ಧಪಡಿಸುವುದು. ಜೊತೆಗೆ ಇದರಿಂದ ಸಂಶೋಧಕರಿಗೆ ಹಾಗೂ ಶಿಕ್ಷಣ ತಜ್ಞರಿಗೂ ಲಾಭವಾಗುವಂತೆ ಮಾಡುವುದು. ಸಾರ್ವಜನಿಕ ವ್ಯವಸ್ಥೆ ಮತ್ತು ನಾಗರಿಕರ ನಡುವೆ ಇನ್ನಷ್ಟು ಹೆಚ್ಚಿನ ಅರ್ಥಪೂರ್ಣ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಫೆಲೋಶಿಪ್, ಅಧ್ಯಯನ ಕಾರ್ಯಕ್ರಮಗಳಲ್ಲಿ ಯುವ ಜನಾಂಗವು ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವುದು. ಇದರಿಂದ ಸಾರ್ವಜನಿಕ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಹೆಚ್ಚಿಸುವುದರ ಜೊತೆಗೆ ಸೃಜನಶೀಲತೆ ಮತ್ತು ವಿನೂತನ ಸಂಶೋಧನೆಗಳಿಗೆ ಹೆಚ್ಚಿನ ಅವಕಾಶ ನೀಡಲಿದೆ. 6. ಕೆ-ಜಿಐಎಸ್ ಮಾದರಿಯನ್ನು ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳಲ್ಲಿ ಜಾರಿಗೆ ತರಬೇಕು. ಈ ಮೂಲಕ ಜಿಐಎಸ್ ದತ್ತಾಂಶ ಮತ್ತು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಿಗುವಂತೆ ಮಾಡಬೇಕು. ಕಾಲಕಾಲಕ್ಕೆ ಸಂಬಂದಿಸಿದ ಮಾಹಿತಿಯನ್ನು ಅಳವಡಿಸಬೇಕು ಮತ್ತು ಇದನ್ನು ನಿರಂತರವಾಗಿ ನಿರ್ವಹಿಸುತ್ತಿರಬೇಕು.

 

ಕರ್ನಾಟಕವನ್ನು ಸ್ಪಂದನಶೀಲ ಜ್ಞಾನಾಧಾರಿತ ಸಮಾಜವನ್ನಾಗಿ ಪರಿವರ್ತಿಸುವತ್ತ

  • ಜ್ಞಾನ ಸಂಪನ್ಮೂಲದ ಲಭ್ಯತೆ ಮತ್ತು ಅದರ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಸಂಚಾರಿ ಅಂತರಜಾಲ ವಾಹನ(ಮೊಬೈಲ್ ಇಂಟರ್ ನೆಟ್ ವ್ಯಾನ್)ವನ್ನು ನಿಯೋಜಿಸಬೇಕು. ಈ ಮೊಬೈಲ್ ಘಟಕವು ಪ್ರತಿ ಬ್ಲಾಕ್ ಸಂಪನ್ಮೂಲ ಕೇಂದ್ರಗಳಿಗೂ (ಬಿಆರ್‍ಸಿ) ನಿಗದಿತ ವೇಳಾಪಟ್ಟಿಯಂತೆ ಭೇಟಿ ನೀಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. 8. ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜ್ಞಾನ ಸಂಪನ್ಮೂಲದ ಬಳಕೆ, ಜ್ಞಾನದ ಸೃಷ್ಟಿ ಸೇರಿದಂತೆ ಹಲವು ವಿಭಾಗಗಳ ಉನ್ನತಿಗಾಗಿ ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ಜಾಲ (ಯುಎನ್‍ಐಎಲ್ ಎಲ್‍ಐಎನ್ ಕೆ)ಗಳಿಗೆ ಉತ್ತೇಜನ ನೀಡಬೇಕು. ಇದಕ್ಕಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಮಿತಿ ಮತ್ತು ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳ ಸಹಭಾಗಿತ್ವವನ್ನು ಪಡೆಯಬೇಕು. 9. ಕೃಷಿ ಸಂಬಂಧಿ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಬೇಕು. ಇದನ್ನು ಬಹು ಮಾಧ್ಯಮ ತಂತ್ರಜ್ಞಾನದ ಮೂಲಕ ದಾಖಲು ಮಾಡಿಕೊಳ್ಳುವ ವ್ಯವಸ್ಥೆಯನ್ನು ಈ ಕೇಂದ್ರಗಳ ಮೂಲಕ ಮಾಡಬೇಕು. 10. ಸಾಮುದಾಯಿಕ ಕೌಶಲ್ಯ, ಜ್ಞಾನ ಮತ್ತು ಅವರ ಪ್ರಾಯೋಗಿಕತೆಯನ್ನು ದಾಖಲು ಮಾಡಿಕೊಳ್ಳಲು ಆಯ್ದ ವಿಶ್ವವಿದ್ಯಾಲಯಗಳಲ್ಲಿ ವ್ಯವಸ್ಥೆ ಮಾಡಬೇಕು. ಇದು ಮುಖ್ಯವಾಗಿ ಕೃಷಿ, ಆಹಾರ, ಆರೋಗ್ಯ, ಸ್ವದೇಶಿ ಸಂಶೋಧನೆ, ಸಾಂಪ್ರದಾಯಿಕ ಕೃತಿಗಳ ಹಸ್ತಪ್ರತಿ, ಜ್ಞಾನ ಕುರಿತ ಅವರ ವ್ಯಾಖ್ಯಾನಗಳನ್ನು ಒಳಗೊಂಡಿರಬೇಕು. ಇದರ ಆಧಾರದಲ್ಲಿ ಆನ್ ಲೈನ್/ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸಬೇಕು. ಇವುಗಳು ಸ್ವದೇಶಿ ಸಮುದಾಯ ಜ್ಞಾನ, ಇಂಜಿನಿಯರಿಂಗ್ ವ್ಯವಸ್ಥೆಯ ಜ್ಞಾನ, ಹಸ್ತಪ್ರತಿಗಳ ಸಂರಕ್ಷಣೆ ಇತ್ಯಾದಿಗಳನ್ನು ಒಳಗೊಂಡಿರಬೇಕು. ಆಯ್ದ ಸಮುದಾಯಿಕ ಜ್ಞಾನ ಮತ್ತು ಅನುಸರಣೆಯನ್ನು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕು. ಸಂಶೋಧನಾ ಅಧ್ಯಯನಗಳು
  • ಸಮುದಾಯ ಜ್ಞಾನ ಕೇಂದ್ರದ ಕುರಿತು ಒಂದು ಮಾದರಿ.
  • ಕರ್ನಾಟಕದ ಯುವ ಜನಾಂಗದ ಮನೋಭಾವನೆ, ಮನೋವೃತ್ತಿ, ಆಕಾಂಕ್ಷೆ, ನಿರೀಕ್ಷೆ ಕುರಿತ ಅಧ್ಯಯನ
  • ಕರ್ನಾಟಕ ಶಿಕ್ಷಕರ ವೃತ್ತಿಪರತೆ ಅಭಿವೃದ್ಧಿ ನೀತಿಯ ಚೌಕಟ್ಟು ಯೋಜನೆಗಳು
  • ಕಣಜ
  • ಸಹಯೋಗ
  • ಸಮರ್ಥ
  • ಕೆ-ಜಿಐಎಸ್ ವಿಷನ್ ಮತ್ತು ಬಳಕೆದಾರರ ಅವಶ್ಯಕ ದಾಖಲೆಯ ಸಿದ್ಧತೆ
ಮೂಲ: ಕರ್ನಾಟಕ ಜ್ಞಾನ ಆಯೋಗ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate