অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೌಶಲ್ಯಭರಿತ ಶಿಕ್ಷಣದ ಅಗತ್ಯತೆ

ಕೌಶಲ್ಯಭರಿತ ಶಿಕ್ಷಣದ ಅಗತ್ಯತೆ

ಕೌಶಲ್ಯಭರಿತ ಶಿಕ್ಷಣದ ಅಗತ್ಯತೆ

ಇಂದಿನ ಸ್ಪರ್ಧಾತ್ಮಕತೆಯಲ್ಲಿ ಪಡೆಯಲು ಸಾಫಲ್ಯ

ಇರಬೇಕು ಶಿಕ್ಷಣದಲ್ಲಿ ಕೌಶಲ್ಯ”

ಶಿಕ್ಷಣವೆಂಬುದು ಮಾನವನ ಸಹಜ ಸಾಮಾನ್ಯ ವರ್ತನೆಗಳಾದ ಕಲಿಕೆ,ಕಲೆ, ಕೌಶಲ್ಯ, ಅಭಿಪ್ರಾಯ, ನೀತಿಗಳಲ್ಲಿ ಬಯಸಿದ ಬದಲಾವಣೆಯನ್ನು ತರುವ ಪ್ರಕ್ರಿಯೆಯಿಂದ ಕೂಡಿದುದಾಗಿದ್ದು, ಯುವ ಪೀಳಿಗೆಯು ಇಂದಿನ ಮತ್ತು ಮುಂದಿನ ಜೀವನದಲ್ಲಿ ಇಚ್ಚಿತವಾದುದನ್ನು ಸಾಧಿಸಲು ಸಹಾಯ ಮಾಡುವ ಒಂದು ಸುಸಜ್ಜಿತ ಸುವ್ಯವಸ್ಥಿತ ಸಾಮಾಜಿಕ ಸಂಸ್ಥೆಯಾಗಿದೆ. ಶಿಕ್ಷಣ ಕಾರ್ಯಸಾಧನೆಯಲ್ಲಿ ಕೌಶಲ್ಯದ ಪಾತ್ರ ವಿಶೇಷವಾದುದಾಗಿದೆ. ಶಿಕ್ಷಣದ ಅವಿಭಾಜ್ಯ ಅಂಗವೇ ಕೌಶಲ್ಯ. ಕೌಶಲ್ಯಭರಿತ ಶಿಕ್ಷಣ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಭಾವಕಾರಿಯಾಗಿ ಪರಿಣಮಿಸುವುದು. ಜಾಗತೀಕರಣ, ಆಧುನೀಕರಣ, ಜೌದ್ಯೋಗೀಕರಣದಿಂದಾಗಿ ಕೇವಲ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ

ಜ್ಞಾನ+ಕೌಶಲ್ಯ+ಸೃಜನಶೀಲತೆ=ಸಾಧನೆ

ಜ್ಞಾನವು ಕೌಶಲ್ಯ ಸೃಜನಶೀಲತೆ ಜೊತೆಗೂಡಿ ಕಾರ್ಯ ಪ್ರವೃತ್ತವಾದಾಗ ಮಾತ್ರ ಸಾಧನೆಯ ಶಿಖರವನ್ನು ಏರುವಲ್ಲಿ ಯಶಸ್ವಿಯಾಗಲು ಸಾಧ್ಯ. ಕೌಶಲ್ಯದಲ್ಲಿರುವ ಅಧಮ್ಯ ಅದ್ಭುತ ಶಕ್ತಿಯು ಎಲ್ಲರಿಗೂ ಒಲಿಯುವಂತೆ ಮಾಡುವ ಕಾಣದ ಅಗೋಚರ ಬಲ್ವಿರುವುದು ಶಿಕ್ಷಣದಲ್ಲಿ ಮಾತ್ರ.

ಪ್ರಾಯೋಗಿಕ, ಪ್ರಾಯೋಜಿತ, ಕಾರ್ಯಗಳು ಇಂದಿನ ಶರವೇಗದಲ್ಲಿ ಸಾಗುತ್ತಿರುವ ಅಭಿವೃದ್ಧಿಯ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಕೌಶಲ್ಯತೆಯು ಅಗತ್ಯವಾಗಿದ್ದು, ಹೊಸ ಹೊಸ ವಿಧಾನಗಳ ಅಳವಡಿಕೆಯು ಕ್ರಿಯಾಶೀಲ, ಸೃಜನಾತ್ಮಕವಾಗಿ ನಡೆಯುವಲ್ಲಿ ಮುಖ್ಯ ಮಾಧ್ಯಮವಾಗಿ ಪರಿಣಮಿಸುವುದು. ಅದು ಔದ್ಯೋಗಿದ ಕೌಶಲ್ಯ ಕಲೆಯಾಗಬಹುದು, ಇಲ್ಲವೇ ಸಾಮಾಜಿಕ ಆರ್ಥಿಕ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯಕಲೆಯಾಗಬಹುದು. ಈ ಕೌಶಲ್ಯಗಳು ಶಿಕ್ಷಣದೊಂದಿಗೆ ಬೆರೆತಾಗಲೇ ಜಗತ್ತಲ್ಲಿ ತಮ್ಮನ್ನು ಗುರಿತಿಸಲ್ಪಡುವಂತಾಗುತ್ತೇವೆ. ಅಲ್ಲದೆ ವ್ಯಕ್ತಿತ್ವಕ್ಕೆ ಮೆರಗು ಸಿದ್ದಿಸುವುದು. ಉದಾ: ಡಾ.ಸುಧಾ ಎನ್ ಮೂರ್ತಿ ಮತ್ತು ನಾರಾಯಣಮೂರ್ತಿ, ಅಂಬಾನಿ ಸಹೋದರರು, ಸತ್ಯ ನಾದೆಲ್ಲ ಮೊದಲಾದವರ ಸಾಧನೆಯ ಹಾದಿಯನ್ನು ಗಮನಿಸಿದರೆ ಸ್ಪಷ್ಟವಾಗುವ ಸಂಗತಿಯೆಂದರೆ,

ಜ್ಞಾನ+ಕೌಶಲ್ಯ=ಸಾಧನೆ

ಎಂಬುದು. ಹೀಗಾಗಿ ಕೌಶಲ್ಯವು ಶಿಕ್ಷಣದೊಂದಿಗೆ ಬೆರೆತು ಕೌಶಲ್ಯಾಧಾರಿತ ಶಿಕ್ಷಣವಾದಾಗ ಇಂದಿನ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಸೃಜನತೆಯಾಗಿ ಮಾರ್ಪಡುತ್ತದೆ. ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಧೈರ್ಯ, ಸ್ಥೈರ್ಯ ಕೌಶಲ್ಯಾಧಾರಿತ ಶಿಕ್ಷಣದಿಂದ ಸಿದ್ದಿಸುತ್ತದೆ. ಮಕ್ಕಳಲ್ಲಿ ಕಲಿಕಾ ಹಂತಗಳು ಪ್ರಾರಂಭವಾಗುವಾಗಲೇ ಕೌಶಲ್ಯಾಧಾರಿತ ಶಿಕ್ಷಣವನ್ನು ಅವರವರ ವೈಯಕ್ತಿಕ ಇಚ್ಚೆಯನುಸಾರ ನೀಡಬೇಕಾದುದು ಇಂದಿನ ಅಗತ್ಯತೆ.

-ಶ್ರೀಮತಿ ಶಬೀನಾ

ಕೊನೆಯ ಮಾರ್ಪಾಟು : 4/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate