ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರೋಗ್ಯ ಕವಚ

ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯದ ಯಾವುದೇ ಭಾಗದಿಂದ 108 ನಂಬರ್ ಗೆ ಕರೆ ಮಾಡಿದರೆ ೨೦ ರಿಂದ ೩೦ ನಿಮಿಷಗಳ ಒಳಗೆ ಆಂಬುಲೆನ್ಸ್ ವಾಹನವು ಅವಶ್ಯಕತೆ ಇರುವಡೆಗೆ ತಲುಪುವ ವ್ಯವಸ್ಥೆಯೇ "ಆರೋಗ್ಯ ಕವಚ" (108) ಸೇವೆ.

ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯದ ಯಾವುದೇ ಭಾಗದಿಂದ 108 ನಂಬರ್ ಗೆ ಕರೆ ಮಾಡಿದರೆ ೨೦ ರಿಂದ ೩೦ ನಿಮಿಷಗಳ ಒಳಗೆ ಆಂಬುಲೆನ್ಸ್ ವಾಹನವು ಅವಶ್ಯಕತೆ ಇರುವಡೆಗೆ ತಲುಪುವ ವ್ಯವಸ್ಥೆಯೇ "ಆರೋಗ್ಯ ಕವಚ" (108) ಸೇವೆ.

2008 ರ ನವಂಬರ್ 01 ರಂದು ರಾಜ್ಯ ಸರ್ಕಾರವು "ಆರೋಗ್ಯ ಕವಚ" ಎಂಬ ಈ ವಿನೂತನ ಯೋಜನೆಯನ್ನು ಜಾರಿಗೆ ತಂದಿತು. ಜನರಿಗೆ ತುರ್ತು ನಿರ್ವಹಣಾ ಪ್ರತಿಕ್ರಿಯೆ ಸೇವೆಯನ್ನು (EMRI -Emergency Management Response Service ) ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ.

ಅಪಘಾತ, ಅಗ್ನಿದುರಂತ, ಕಟ್ಟಡಗಳ ಕುಸಿತ, ನೈಸರ್ಗಿಕ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ, ಕಷ್ಟಕರವಾದ ಹೆರಿಗೆ, ಹಾವು ಕಡಿತ ಇತ್ಯಾದಿ ಸಂದರ್ಭಗಳಲ್ಲಿ ಸೇವೆ ನೀಡುವುದು ಮತ್ತು NRHM ಅಡಿಯಲ್ಲಿ ತಾಯಿ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು ಆರೋಗ್ಯ ಕವಚ "108" ನ ಮುಖ್ಯ ಗುರಿಯಾಗಿರುತ್ತದೆ.

"ಆರೋಗ್ಯ ಕವಚ" 108  ಸೇವೆಯು ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಸಮಗ್ರ ತುರ್ತು ಚಿಕಿತ್ಸೆ ಸೇವೆಯನ್ನು ನೀಡುವ ಸಲುವಾಗಿ ಉಚಿತ ಟೋಲ್ ಫ್ರೀ 108 ನಂಬರ್ನೊಂದಿಗೆ ೨೪ ಗಂಟೆಗಳ ಕಾಲ ಸಕಾಲಿಕ ನಿರಂತರ ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸುತ್ತಿದೆ.

ತುರ್ತು ಅವಶ್ಯಕತೆಯ ಕರೆ ಬಂದಲ್ಲಿ ವಾಹನಗಳನ್ನು ೨೦ ನಿಮಿಷಗಳಲ್ಲಿ ನಗರ ಪ್ರದೇಶಕ್ಕೆ ಹಾಗೂ ೩೦ ನಿಮಿಷಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ (ಸರಾಸರಿ ೨೫.೫ ನಿಮಿಷದಲ್ಲಿ ) ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಈ ಆಂಬುಲೆನ್ಸ್ ನಲ್ಲಿ ಪ್ರಥಮೋಪಚಾರ ನೀಡುವ ಸಿಬ್ಬಂಧಿಗಳು (Medical Technicians ) ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಆಸ್ಪತ್ರೆ ಪೂರ್ವ ಚಿಕಿತ್ಸೆಯನ್ನು ವಾಹನದಲ್ಲಿಯೇ ನೀಡುತ್ತಾ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತದೆ. ಇದರಿಂದ ಜೀವಹಾನಿ, ಅಂಗವಿಕಲತೆ, ಆಸ್ತಿ ಹಾನಿ ತಡೆಯಬಹುದಾಗಿದೆ ಮತ್ತು ತಾಯಿ ಮಕ್ಕಳ ಮರಣವನ್ನು ಕಡಿಮೆಗೊಳಿಸಬಹುದಾಗಿದೆ.

ಈ ಸೇವೆಯು ದಿನದ ೨೪ ಗಂಟೆಗಳು, ವಾರದ ಏಳು ದಿನಗಳು ಹಾಗೂ ೩೬೫ ದಿನವೂ ದೊರೆಯುತ್ತದೆ.

ಈ ಆಂಬುಲೆನ್ಸ್ ನಲ್ಲಿ ಅವಶ್ಯಕ ಜೀವ ಕಾಪಾಡುವ BLS (Basic Life Support ) ಹಾಗೂ ಕೆಲವು ಆಧುನಿಕ ಉಪಕರಣಗಳ ಸೌಲಭ್ಯವಿರುವ (BLS ನೊಂದಿಗೆ Ventilator ಮತ್ತು defibrilator ) ಇರುವ ALS (Advanced Life Support ) ಆಂಬುಲೆನ್ಸ್ ಗಳಿರುತ್ತವೆ. ALS ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸೌಲಭ್ಯದ ಆಂಬುಲೆನ್ಸ್ ಆಗಿರುತ್ತದೆ.

ರಾಜ್ಯದ ೩೦ ಜಿಲ್ಲೆಗಳಲ್ಲಿ ಸೂಕ್ತ ಸ್ಥಳಗಳಲ್ಲಿ ಒಟ್ಟು ಇಂತಹ ೫೧೭ ಆಂಬುಲೆನ್ಸ್ ವಾಹನಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ೧೩೦ ALS  ಆಂಬುಲೆನ್ಸ್ ಗಳು ಹಾಗೂ ೩೮೭ BLS ಆಂಬುಲೆನ್ಸ್ ಗಳಾಗಿವೆ.

ಆಂಬುಲೆನ್ಸ್ ಸೇವೆಗಳ ವಿವರ

 

ರಾಜ್ಯದ ೩೦ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಂಬುಲೆನ್ಸ್ ಗಳು :೫೧೭

ಸ್ವೀಕರಿಸಿದ ಒಟ್ಟು ಕರೆಗಳು                                            :೨೯,೦೩೮,೯೭೮

ಸ್ವೀಕರಿಸಿದ ತುರ್ತು ಕರೆಗಳು                                          :೨೨,೬೧,೨೭೧

ವೈದ್ಯಕೀಯ ತುರ್ತು ಪ್ರಕರಣಗಳು                                    :೧೭,೮೮,೮೫೮

ಗರ್ಭಿಣಿಯರಿಗೆ ಸಂಬಂಧಿಸಿದ ಪ್ರಕರಣಗಳಿಗೆ ನೀಡಿದ ಸೇವೆ        :೭,೨೩,೪೬೩

ಗಾಯಾಳು ಪ್ರಕರಣಗಳಲ್ಲಿ ನೀಡಿದ ಸೇವೆ                             :೨,೩೫,೭೮೫

ಪೋಲಿಸ್ ಇಲಾಖೆಗೆ ಸಂಬಂಧಿಸಿದ ವಿಶೇಷ ಪ್ರಕರಣಗಳು.          :೧೬,೭೨೫

ಮೂಲ:ಕುಟುಂಬ ವಾರ್ತೆ

2.95698924731
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top