অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇಂಗ್ಲಿಷ್ ಶಿಕ್ಷಣ

ಇಂಗ್ಲಿಷ್ ಶಿಕ್ಷಣ

ಭಾರತದಲ್ಲಿ ಪ್ರಚಲಿತವಿರುವ ದೇಶೀಯ ಭಾಷೆಗಳೊಂದಿಗೆ ವಿದೇಶೀ ಭಾಷೆಗಳೂ ಬಳಕೆಯಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿ ಇಂಗ್ಲಿಷ್ ಸಹ ಒಂದಾಗಿದೆ. ಇಂಗ್ಲೀಷರ ಆಳ್ವಿಕೆಯೊಂದಿಗೆ ಆಗಮಿಸಿದ ಇಂಗ್ಲಿಷ್ ಭಾಷೆ ಭಾರತದಲ್ಲಿ ಭದ್ರವಾಗಿ ತಳವೂರಿ ನಿಂತಿದೆ. ಭಾರತ ಸ್ವತಂತ್ರವಾದರೂ ಇಂಗ್ಲಿಷರು ನಮ್ಮ ದೇಶ ಬಿಟ್ಟು ಹೋದರೂ ಅವರ ಭಾಷೆ ನಮ್ಮನ್ನು ಬಿಟ್ಟಿಲ್ಲದಿರುವುದು ಆ ಭಾಷೆಯ ಸಾಮರ್ಥ್ಯದೊಂದಿಗೆ ನಮ್ಮ ಪರಾವಲಂಬನೆಯನ್ನೂ ವ್ಯಕ್ತಗೊಳಿಸುತ್ತದೆ.

ನಮಗೆ ಸ್ವಾತಂತ್ರ್ಯ ದೊರೆತಾಗಿನಿಂದ ಇಂಗ್ಲಿಷ್ ಭಾಷೆಯ ಬಗ್ಗೆ ವಿರೋಧ ಇದ್ದೇ ಇದೆ. ಅದರ ಬಗೆಗೆ ವಿರೋಧ ಹೆಚ್ಚಿದಷ್ಟೂ ಶೈಕ್ಷಣಿಕ ಕ್ಷೇತ್ರದಲ್ಲಿ ಅದರ ಪ್ರಾಬಲ್ಯ ಮತ್ತಷ್ಟು ದ್ರುಡವಾಗುತ್ತಾ ಸಾಗುತ್ತಿದೆ. ಸುಮಾರು ಇನ್ನೂರು ವರ್ಷಗಳ ಬಳಕೆಯ ಈ ಭಾಷೆ ಇಷ್ಟೊಂದು ಬೆಟ್ಟದಷ್ಟು ಗಟ್ಟಿಯಾಗಿ ನಿಲ್ಲಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೆ ನಮ್ಮಲ್ಲಿ ರಾಷ್ಟೀಯ ಭಾವನೆಯೊಂದಿಗೆ ರಾಷ್ಟ್ರ ಭಾಷೆಯ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇಂಗ್ಲಿಷರು ಭಾರತವನ್ನು ಬಿಟ್ಟು ಹೋದ ಮೇಲೆ ಸ್ವಾಭಾವಿಕವಾಗಿ ದೇಶಪ್ರೇಮಿಗಳ ಮನಸ್ಸಿನಲ್ಲಿ ಸ್ವದೇಶ, ಸ್ವಭಾಷೆ ಇತ್ಯಾದಿ ಭಾವನೆಗಳು ಜಾಗೃತವಾಗಿ ಇಂಗ್ಲೀಷನ್ನು ವಿರೋದಿಸಲಾರಂಭಿಸಿದರು.ಆಡಳಿತದಲ್ಲಿ ಮತ್ತು ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆಯನ್ನು ಮುಂದುವರಿಸುವುದರ ಔಚಿತ್ಯವನ್ನು ಜನರು ಪ್ರಶ್ನಿಸಲಾರಂಭಿಸಿದರು. ಇದರೊಂದಿಗೆ ಇಂಗ್ಲಿಷ್ ಭಾಷೆಯನ್ನು ಸಮರ್ಥಿಸುತ್ತಾ ಅದರ ಮುಂದುವರಿಕೆಗೂ ಜನರ ಬೆಂಬಲ ವ್ಯಕ್ತವಾಗತೊಡಗಿತು.

ಈ ವಿರೋದದ ಬೆಳವಣಿಗೆಯ ಪರಿಣಾಮವಾಗಿ ಉತ್ತರ ಭಾರತ -ದಕ್ಷಿಣ ಭಾರತವೆಂಬ ವಿಭಜಿತ ನೀತಿಯೂ ಪ್ರಾರಂಭವಾಗಿ ಸಮರ್ಥಕರು ಮತ್ತು ವಿರೋಧಿಗಳು ಹಿಂಸಾಚಾರಕ್ಕೂ ಕೈ ಹಾಕಿ ಜನರ ಭಾವನೆಗಳಿಗೆ ಧಕ್ಕೆಯುಂಟಾಗಲು ಕಾರಣವಾಯಿತು

೧೯೫೦ರಲ್ಲಿ ಸಂವಿಧಾನ ಅಂಗೀಕಾರವಾದಾಗ ರಾಷ್ಟ್ರವು ಗಣರಾಜ್ಯವಾಗುವುದರೊಂದಿಗೆ ಇಂಗ್ಲೀಷನ್ನು ಹದಿನೈದು ವರ್ಷಗಳ ಕಾಲ ಮುಂದುವರಿಸುವುದಕ್ಕೆ ಒಪ್ಪಿಗೆ ಸೂಚಿಸಲಾಯಿತು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು "ಇಂಗ್ಲಿಷ್ ಭಾಷೆ ಆಧುನಿಕ ಪ್ರಪಂಚಕ್ಕೆ ಕಿಟಕಿಯಂತಿದೆ" ಎಂದು ಹೇಳಿ ಅದಕ್ಕೆ ಬೆಂಬಲ ನೀಡಿದರು. ಇದೇ ಸಮಯದಲ್ಲಿ ಇಂಗ್ಲಿಷಿಗೆ ಪರ್ಯಾಯವಾಗಿ ಹಿಂದಿಯನ್ನು ಒಂದು ಭಾಷೆಯಾಗಿ ಬಳಸಲು ಪ್ರಯತ್ನಿಸಲಾಯಿತು. ಆದರೂ ೧೯೬೫ರ ನಂತರವೂ ಇಂಗ್ಲೀಷನ್ನು ಆಡಳಿತ ಭಾಷೆಯಾಗಿ ಮುಂದುವರಿಸಲು ಅವಶ್ಯಕ ಶಾಸನವನ್ನು ತರಬೇಕಾಯಿತು.ಇಂಗ್ಲಿಷಿಲ್ಲದೆ ಭಾರತ ಇನ್ನೂ ಕೆಲವು ವರ್ಷಗಳು ಬದುಕಲಾರದೆಂದು ಭಾವಿಸಿದರು. ಇದರ ಪರಿಣಾಮವಾಗಿ ೧೯೬೭ರ ಡಿಸೆಂಬರ್ ನಲ್ಲಿ ಆಡಳಿತ ಭಾಷೆಗೆ ಒಂದು ತಿದ್ದುಪಡಿಯನ್ನು ತಂದು ಮೂರು ಭಾಷೆಗಳನ್ನು - ಇಂಗ್ಲಿಷ್, ಹಿಂದಿ ಮತ್ತು ಪ್ರಾಂತೀಯ ಭಾಷೆಗಳನ್ನು ಆಚರಣೆಗೆ ತರುವಂತೆ ಒಪ್ಪಿಗೆ ಸೂಚಿಸಲಾಯಿತು. ಎಲ್ಲಾ ರಾಜ್ಯಗಳೂ ತ್ರಿಭಾಷಾ ಸೂತ್ರವನ್ನು ಆಚರಣೆಗೆ ತರಲು ಒಪ್ಪಿಕೊಂಡೆವು. ಅದರಂತೆ ಇಂಗ್ಲಿಷ್ ಶಿಕ್ಷಣ ಹಾಗೂ ಇತರೆ ಎಲ್ಲಾ ಇಲಾಖೆಗಳಲ್ಲೂ ಇಂಗ್ಲಿಷಿನ ಪ್ರಾಮುಖ್ಯತೆಯನ್ನು ಅರಿತುಕೊಂಡು ಮುಂದುವರಿಸುತ್ತಾ ಬರಲಾಗಿದೆ.

ಅನೇಕ ವಿಚಾರವಂತರ ಪ್ರಕಾರ ಇಂಗ್ಲಿಷ್ ಭಾಷೆಯ ನೆರವಿನಿಂದ ಭಾರತ ಒಂದುಗೂಡಲು ಸಾಧ್ಯವಾಯಿತು. ಭಾರತದಲ್ಲಿ ಅನೇಕ ಭಾಷಾ ಪ್ರಾಂತ್ಯಗಲಿರುವುದರಿಂದ, ಒಂದು ಪ್ರದೇಶದ ಜನರು ಮತ್ತೊಂದು ಪ್ರದೇಶದ ಜನರೊಡನೆ ಸಂಭಾಷಣೆ ನಡೆಸಲು ಯೋಗ್ಯವಾದ ಒಂದು ಭಾಷೆ ಅವಶ್ಯಕವಾಗಿತ್ತು. ವಿಭಿನ್ನ ಪ್ರಾಂತ್ಯಗಳ ಜನರು ತಮ್ಮ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಬೆಕಾದರೆ ಭಾಷೆ ಅಡ್ಡ ಬರುತ್ತಿತ್ತು. ಹಾಗೆಂದು ವ್ಯಾಪಾರ, ವ್ಯವಹಾರ ನಿಂತು ಹೋಗಿರಲಿಲ್ಲ. ಸಾಮಾನ್ಯ ಜನರ ಭಾವನೆಗಳನ್ನು ಇತರರು ತಿಳಿಯಲು ಕಷ್ಟವಾಗುತ್ತಿತ್ತು.ದಕ್ಷಿಣ ಭಾರತದಲ್ಲಿ ದ್ರಾವಿಡ ಭಾಷೆಗಳು ಬಳಕೆಯಲ್ಲಿದ್ದವು. ಉತ್ತರ ಭಾರತದ ಪರಿಚಯ ಅವರಿಗಿರಲಿಲ್ಲ. ವ್ಯಾಪಾರ, ವ್ಯವಹಾರವೆಲ್ಲಾ ಮಧ್ಯವರ್ತಿಗಳಾದ ಕೆಲವೇ ಜನರ ಕೈಯಲ್ಲಿತ್ತು. ಇಂಗ್ಲಿಷ್ ಕಲಿಕೆಯಿಂದ ಈ ಅಂತರ ಕಡಿಮೆಯಾಯಿತು. ಆದರೂ ದಕ್ಷಿಣ ಭಾರತದಲ್ಲಿ ತ್ರಿಭಾಷ ಸೂತ್ರ ಆಚರಣೆಗೆ ವಿಶೇಷವಾಗಿ ತಮಿಳುನಾಡು ಹಿಂದೀ ಭಾಷೆಗೆ ವಿರೋಧ ವ್ಯಕ್ತಪಡಿಸಿ ಇಂಗ್ಲೀಷನ್ನೇ ಪ್ರಧಾನವಾಗಿ ಉಪಯೋಗಿಸಲು ಪಟ್ಟುಹಿಡಿಯಿತು. ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷನ್ನು ಕೈ ಬಿಡಲು ಆ ರಾಜ್ಯಗಳು ಒಪ್ಪಲಿಲ್ಲ.ಮತ್ತೊಂದು ಕಾರಣವೂ ಇಂಗ್ಲಿಷ್ ಮುಂದುವರಿಕೆಗೆ ಸಹಾಯವಾಯಿತು.ಅದೆಂದರೆ ಒಂದು ವಿಶ್ವವಿದ್ಯಾಲಯದಿಂದ ಇನ್ನೊಂದು ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಾಗ ಪ್ರಾದೇಶಿಕ ಭಾಷೆಯ ಜ್ಞಾನವಿಲ್ಲದೇ ಅಭ್ಯಾಸ ಮಾಡಲು ವಿದ್ಯಾರ್ತಿಗಳಿಗೆ ತೊಡಕುಂಟಾಗುವ ಪರಿಸ್ಥಿತಿ ಬಂದಿತು. ಈ ಗೊಂದಲವನ್ನು ದೂರ ಮಾಡಲು ಇಂಗ್ಲಿಷ್ ಅನಿವಾರ್ಯವಾಗಿ ಬೇಕಾಯಿತು.

ಇದಕ್ಕಿಂತ ಪ್ರಬಲವಾದ ಮತ್ತೊಂದು ಕಾರಣವೂ ಎದುರಾಯಿತು.ವೈಜ್ಞಾನಿಕ  ವಿಷಯಗಳ ಮೇಲೆ ನಡೆಯುವ ಸಂಶೋದನ ವಿಷಯಗಳು ಇಂಗ್ಲಿಷ್ನಲ್ಲೇ ಮೊದಲು ಹೊರಬರುತ್ತವೆ.ವಿಜ್ಞಾನ, ಔಷದ, ಸಂಶೋದನ ಕ್ಷೇತ್ರಗಳಲ್ಲಿ ಹೊರ ಬರುವ ಪುಸ್ತಕಗಳೆಲ್ಲಾ ಇಂಗ್ಲಿಷ್ನಲ್ಲೇ ದೊರೆಯುವುದರಿಂದ, ಕೇವಲ ಪ್ರಾದೇಶಿಕ ಭಾಷೆಯ ನೆಪದಲ್ಲಿ ಹೊರ ಪ್ರಪಂಚದ ಜ್ಞಾನದಿಂದ ನಮ್ಮ ವಿದ್ಯಾರ್ತಿಗಳು ವಂಚಿತರಾಗುವುದು ಒಳ್ಳೆಯದೆಲ್ಲವೆಂಬ ಅಭಿಪ್ರಾಯವೂ ಇಂಗ್ಲೀಷನ್ನು ಅವಲಂಭಿಸಲು ಕಾರಣವಾಯಿತು.ಒಂದು ವೇಳೆ ನಮ್ಮ ವಿಧ್ಯಾರ್ತಿಗಳನ್ನು  ಇಂಗ್ಲಿಷ್ ಶಿಕ್ಷಣದಿಂದ ದೊರವಿಟ್ಟಿದ್ದಿದ್ದರೆ ತಾಂತ್ರಿಕ ವೈಜ್ಞಾನಿಕ ವಿಷಯಗಳ ಇತ್ತೀಚಿನ ಜ್ಞಾನದಿಂದ ಅವರನ್ನು ದೊರವಿಟ್ಟನ್ತಾಗುತ್ತಿತ್ತು. ಅಷ್ಟೇ ಅಲ್ಲದೆ ಇಂಗ್ಲಿಷ್ ಗೆ ಅಂತಾರಾಷ್ಟ್ರೀಯ ಮನ್ನಣೆ ಇರುವುದರಿಂದ ವಿದೇಶಗಳಿಗೆ ನಮ್ಮ ವಿದ್ಯಾರ್ತಿಗಳು ಹೋದಾಗ ಅವಶ್ಯವಾಗಿ ಬೇಕಾಗುವ ಜ್ಞಾನದೊಂದಿಗೆ ಭಾಷೆಯ ಪರಿಚಯವಷ್ಟೇ ಅಲ್ಲದೆ ವಿಷಯವನ್ನು ಸ್ಪಷ್ಟಪಡಿಸಲು ಭಾಷೆಯ ಪ್ರಭುತ್ವವೂ ಬೇಕಾಗುತ್ತಿತ್ತು.ಇದರಿಂದ ಪ್ರಾರಂಭದಿಂದಲೇ ಇಂಗ್ಲಿಷ್ ಭಾಷೆ ಅನಿವಾರ್ಯವಾಗುತ್ತ ಬಂತು.ಏಕೆಂದರೆ ವ್ಯಾಪಾರ, ವಾಣಿಜ್ಯ, ವ್ಯವಹಾರಗಳಲ್ಲಿ ಅಧಿಕ ಮಹತ್ವದ ಅಪಾರವಾದ, ಆಳವಾದ ಜ್ಞಾನವನ್ನು ಅದು ಒಳಗೊಂಡಿದೆ.ಸಾಹಿತ್ಯದದ ಕ್ಷೇತ್ರದಲ್ಲಂತೂ ಅತ್ಯಂತ ಗಂಭೀರವಾದ ಚಿಂತನೆ, ಭಾವನೆಗಳು, ಪಾತ್ರಗಳು, ನೈತಿಕ, ಸಾಮಾಜಿಕ ತತ್ವಗಳು,ರಾಜಕೀಯ ಚಿಂತನೆಗಳು ಇತ್ಯಾದಿ ಕ್ಷೇತ್ರಗಳಲ್ಲಿ ಇಂಗ್ಲಿಷ್ ನೆರವಾಗುವಷ್ಟು ಸುಲಭವಾಗಿ ಬೇರಾವ ಭಾಷೆಯೂ ಸಹಾಯಕ್ಕೆ ಬರುವಂತಿಲ್ಲ. ಶೇಕ್ಸ್  ಪಿಯರ್, ವರ್ಡ್ಸ್ ವರ್ತ್ , ಮಿಲ್ಟನ್, ರಸ್ಕಿನ್ ಇತ್ಯಾದಿ ವಿದ್ವಾಂಸರ ಗ್ರಂಥಗಳು ನಮಗೆ ಲಭ್ಯವೂ ಆಗುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಪ್ರಭುತ್ವದಿಂದಲೇ ಸ್ವಾಮಿ ವಿವೇಕಾನಂದರು ಭಾರತದ ಧಾರ್ಮಿಕ ವೈವಿದ್ಯವನ್ನು, ಹಿಂದೂ ಧರ್ಮದ ಮೂಲ ತತ್ವವನ್ನು ಅಮೇರಿಕಾದಲ್ಲಿ ಸಮರ್ಥವಾಗಿ ಪ್ರತಿಪಾದಿಸಲು ಸಾಧ್ಯವಾಯಿತು. ನಮ್ಮ ದೇಶದ ಅಗ್ರನಾಯಕರೆಲ್ಲ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿದ್ದರು. ಇಂದೂ  ಸಹ ಕಲೆ,ವಿಜ್ಞಾನ,ತಾಂತ್ರಿಕ ವಿಷಯಗಳ ಪುಸ್ತಕಗಳನ್ನು ಓದಲು, ತಿಳಿಯಲು ಇಂಗ್ಲಿಷ್ ಚೆನ್ನಾಗಿ ಕಲಿತವರಿಂದ ಮಾತ್ರ ಸಾದ್ಯ.

ಭಾರತದಲ್ಲಿ ಉದ್ಯೋಗ ಪಡೆಯಲು, ಇಂಗ್ಲಿಷನಲ್ಲಿ ಉತ್ತಮ ವಾಕ್ಪಟುತ್ವ,ವಿಷಯ ಮಂಡನೆಯ ಸಾಮರ್ತ್ಯ  ಇವುಗಳ ಅವಶ್ಯಕತೆ ಇರುವುದರಿಂದ ಇಂಗ್ಲಿಷ್ ಗೆ ಮಹತ್ವದ ಸ್ಟಾನವಿದೆ.ತಮ್ಮ ಮಕ್ಕಳಿಗೆ ಪ್ರಾರಂಭದಿಂದಲೇ ಇಂಗ್ಲಿಷ್ ಶಿಕ್ಷಣ ಕೊಡಿಸುತ್ತಿರುವ ಪೋಷಕರು ದಿನ ದಿನಕ್ಕೆ ಹೆಚ್ಚುತ್ತಿದ್ದಾರೆ. ಅದೇ ಕಾರಣಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಇಂಗ್ಲಿಷ್ ಮಾದ್ಯಮದ ಶಾಲೆಗಳು ಹೆಚ್ಚುತ್ತಿವೆ. ಅಲ್ಲಿ ಅಪಾರವಾದ ಶುಲ್ಕ ತೆತ್ತು ತಮ್ಮ ಮಕ್ಕಳಿಗ ಶಿಕ್ಷಣ ಕೊಡಿಸಲು ಪೋಷಕರು ಹಂಬಲಿಸುತ್ತಾರೆ. ಇದನ್ನು ಮನಗಂಡ ಸರ್ಕಾರವೂ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಬಗೆಗೆ ಚಿಂತನೆ ನಡೆಸಿದೆ.

ಅದೂ ಅಲ್ಲದೆ ಗ್ರಾಮೀಣ ಮಕ್ಕಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು, ಬುದ್ದಿವಂತಿಕೆಯನ್ನು ಉಪಯೋಗಿಸಲು ವಿದೇಶಿ ಭಾಷೆಯ ಪ್ರಭುತ್ವವಿಲ್ಲದೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗು ಅವರ ಪ್ರತಿಭೆ ವ್ಯರ್ಥವಾಗುತ್ತಿದೆ : ಅಥವಾ ಹೊರಗೆ ಬಾರದೆ ಅಡಗಿ ಹೋಗುತ್ತಿದೆ.ಇದರಿಂದ ಆ ಮಕ್ಕಳಿಗೆ ಅನ್ಯಾಯವಾಗುವುದೆಂದು ಅವರ ವಾದ.

ಭಾರತದಲ್ಲಿ ಇಂಗ್ಲಿಷ್ ನ ಸ್ಥಾನ ನಿರ್ಧಾರವೇ ಮುಕ್ಯ ವಿಷಯ.ಅದಕ್ಕಾಗಿ ಇತರ ಭಾಷೆಗಳೊಂದಿಗೆ ಇಂಗ್ಲೀಷನ್ನು ಉಪಯೋಗಿಸುವುದು.ಹಿಂದಿ ಕೇಂದ್ರದ ಆಡಳಿತ ಭಾಷೆಯಾಗುವುದು ಇಂದಲ್ಲ ನಾಳೆ ಅವಶ್ಯಕವಾಗಿದೆ. ಇಂಗ್ಲಿಷ್ ಸಹ ತನ್ನ ಪ್ರಭಾವ ಉಳಿಸಿಕೊಂಡು ಉನ್ನತ ಶಿಕ್ಷಣ ಮತ್ತು ಆಡಳಿತದ ಅವಶ್ಯಕ ಭಾಷೆಯಾಗಿ ಉಳಿಯುವುದು. ಪ್ರಾದೇಶಿಕ ಭಾಷೆಗಳು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣಕ್ಕೆ ಅಲ್ಲದೆ ಉನ್ನತ ಶಿಕ್ಷಣಕ್ಕೂ ಉಪಯೋಗವಾಗುವುದಾದರು ಕಾರ್ಯ  ನಿರ್ವಹಿಸುವಷ್ಟು  ಇಂಗ್ಲಿಷ್ ಜ್ಞಾನ ಅನಿವಾರ್ಯವಾಗುವುದು. ಉದ್ಯೋಗಿ ಮತ್ತು ಉದ್ಯಮಿಗಳಿಗೆ ಇಂಗ್ಲಿಷ್ ವ್ಯವಹಾರ ಜ್ಞಾನವೇ ಒಂದು ಆಸ್ತಿ ಎನಿಸುವುದು. ಮತ್ತೆ ಕೆಲವರಿಗೆ ಹಿಂದಿ ಅಥವಾ ಇಂಗ್ಲಿಷ್ ಬೇಕಾಗಬಹುದು.

ಒಟ್ಟಿನಲ್ಲಿ ಭಾರತಿಯ ಭಾಷೆಗಲ್ಲಿ ಇಂಗ್ಲಿಷ್ ಸಹ ಪ್ರಮುಖ ಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ.

 

ಮೂಲ:ಪ್ರಬಂದ  ಮಂಜರಿ / ಎಚ್.ಎಸ.ಕೆ.ವಿಶ್ವೇಶ್ವರಯ್ಯ

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate