ನಾಯಕತ್ವ ಏಕೆ
- ಗುಂಪಿಗೆ ಸೂಕ್ತ ಮಾಗದರ್ಶನ ನೀಡಲು.
- ಗುಂಪಿನ ಕೆಲಸಗಳು ಸುಸೂತ್ರವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳಲು.
- ಗುಂಪಿನ ಎಲ್ಲ ಕೆಲಸಗಳಲ್ಲಿ ಸಮನ್ವಯತೆ ತರಲು ಮತ್ತು ಗುಂಪಿನ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯುವಂತೆ ನೋಡಿಕೊಳ್ಳಲು.
- ಗುಂಪಿನ ಸದಸ್ಯರ ಮಧ್ಯೆ ಸ್ನೇಹ ಸಂಬಂಧ ಬೆಳೆಸಲು.
- ಗುಂಪಿನಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಎಲ್ಲಾ ಸದಸ್ಯರು ಭಾಗವಹಿಸುವಂತೆ ನೋಡಿಕೊಳ್ಳಲು.
- ಬೇರೆ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಬೆಳೆಸಲು ಮತ್ತು ಒಕ್ಕೂಟ ಹಾಗೂ ಇತರೆ ಸಂಸ್ಥೆಗಳೊಂದಿಗೆ ಸಂಘದ ಪರವಾಗಿ ಪ್ರತಿನಿಧಿಸಲು ಹಾಗೂ ಗುಂಪಿಗೆ ಹೆಚ್ಚಿನ ಬೆಂಬಲ ಪಡೆಯಲು.
- ಒಂದಕ್ಕೊಂದು ಕೆಲಸಗಳನ್ನು ಜೋಡಿಸಿ ಕಡಿಮೆ ಕಾಲ ಮತ್ತು ಕಡಿಮೆ ಖರ್ಚಿನಲ್ಲಿ ನೆರವೇರಿಸುವಂತೆ ಯೋಜನೆ ತಯಾರಿಸಲು.
- ಗುಂಪಿಗೆ ಯೋಜನೆ ಮು ಮುಂದಿನ ಗುರಿ ರೂಪಿಸಲು.
- ಗುಂಪಿನ ಪ್ರತಿ ಸದಸ್ಯರಿಗೆ ಹಾಗೂ ಗುಂಪಿನ ಇತರೆ ಸದಸ್ಯರನ್ನು ಉತ್ತೇಜಿಸಿ ಅವರಿಂದ ಒಳ್ಳೆಯ ಕೆಲಸಗಳನ್ನು ಮಾಡಿಸಲು.
- ಗುಂಪಿನಲ್ಲಿ ಜಗಳಗಳು ಬಂದಾಗ ಪರಿಹರಿಸಲು.
ವಿವಿಧ ರೀತಿಯ ನಾಯಕತ್ವದ ಮಾದರಿಗಳು
ಸ್ವಯಂ ಪ್ರಭುತ್ವ
- ಸ್ವಾರ್ಥಿ ಅಧಿಕಾರ ಚಲಾಯಿಸುವುದು.
- ಸಂಕುಚಿತ ಮನೋಭಾವ ಮಾತು ಅಹಂಕಾರದಿಂದಿರುವವರು.
- ತಾವೇ ಎಲ್ಲರಿಗಿಂತ ಹೆಚ್ಚಿನವರು ಎಂದು ತಿಳಿದಿರುತ್ತಾರೆ.
ತಟಸ್ಥ ನಾಯಕತ್ವ
- ಈ ಮಾದರಿ ನಾಯಕರು ಕೇವಲ ಹೆಸರಿಗೆ ನಾಯಕರಾಗಿರುತ್ತಾರೆ.
- ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ.
ಅರಾಜಕ ನಾಯಕತ್ವ
- ಇವರ ಆಡಳಿತದಲ್ಲಿ ಪೂರ್ತಿ ಜಗಳ.
- ಯಾರು ಏನನ್ನು ಬೇಕಾದರೂ ಮಾಡುತ್ತಾರೆ.
- ಹಾಗು ಅದನ್ನು ಕೇಳುವವರು ಯಾರು ಇರುವುದಿಲ್ಲ. ಎಲ್ಲರೂ ನಾಯಕರಂತೆ ವರ್ತಿಸುತ್ತಾರೆ.
ಪ್ರಜಾಪ್ರಭುತ್ವ ಅಥವಾ ಭಾಗವಹಿಸುವಿಕೆ ಮಾದರಿ:
- ಈ ನಾಯಕರು ಎಲ್ಲ ಜನಗಳ ಪರವಾಗಿ ಅವರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ.
- ಪ್ರತಿಯೊಬ್ಬರ ಅಭಿಪ್ರಾಯ ಕೇಳಿ, ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ತೀರ್ಮಾನ ತೆಗೆದುಕೊಳ್ಳುತ್ತಾರೆ.
- ಜವಾಬ್ದಾರಿ ತೆಗೆದುಕೊಳ್ಳಲು ಮುಂದಿರುತ್ತಾರೆ.
- ಕೆಲಸ ಮಾಡುವಾಗ ಭೇಧ ಭಾವ ಇರುವುದಿಲ್ಲ.
- ತನ್ನ ಗುಂಪಿನಲ್ಲಿ ಇತರೆ ಸದಸ್ಯರೂ ಸಹ ನಾಯಕರಾಗಿ ಬೆಳೆಯಲು ಸಹಾಯ ಮಾಡುತ್ತಾರೆ.
ಈ ಮೇಲಿನ ನಾಲ್ಕು ಮಾದರಿಯ ನಾಯಕರಲ್ಲಿ ಯಾವುದು ಉತ್ತಮ ಮಾದರಿಯ ನಾಯಕತ್ವ ಎಂಬುದನ್ನು ನೀವೇ ತೀರ್ಮಾನಿಸಿ?
ಒಳ್ಳೆ ನಾಯಕರ ಗುಣಗಳು
- ಪ್ರಾಮಾಣಿಕರಾಗಿರುತ್ತಾರೆ.
- ಧೈರ್ಯಶಾಲಿಗಳಾಗಿರುತ್ತಾರೆ.
- ವಿನಯಿಗಳಾಗಿರುತ್ತಾರೆ.
- ತನ್ನ ಗುಂಪಿನ ಸದಸ್ಯರ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಕೊಡುತ್ತಾರೆ .
- ಸದಾ ಕಲಿಯಲು ಹಾಗು ಮಾಹಿತಿ ಪಡೆಯಲು ಮುಂದಿರುತ್ತಾರೆ.
- ಎಲ್ಲ ಮಾಹಿತಿಗಳನ್ನು ಸರ್ವ ಸದಸ್ಯರಿಗೆ ತಿಳಿಸುತ್ತಾರೆ.
- ಜವಾಬಾರಿ ತೆಗೆದುಕೊಳ್ಳುತ್ತಾರೆ.
- ಗುಂಪು ಮುಂದೇನು ಮಾಡಬೇಕು endu ಮುಂದಾಲೋಚಿಸುತ್ತಾರೆ.
- ತನ್ನ ಸ್ವಂತ ಕೆಲಸಗಳಿಗಿಂತ ಗುಂಪಿನ ಕೆಲಸ ಇವರಿಗೆ ಮುಖ್ಯವಾಗಿರುತ್ತದೆ.
- ಸಂಘದಲ್ಲಿ ಇತರೆ ಸದಸ್ಯರಿಗೆ ನಾಯಕರಾಗಿ ಬೆಳೆಯಲು ಅವಕಾಶ ಕೊಡುತ್ತಾರೆ,
- ಕೆಲಸಗಳಲ್ಲಿ ಭೇಧ ಭಾವ ಮಾಡುವುದಿಲ್ಲ.
- ಗುಂಪಿನಲ್ಲಿರುವ ಯಾವುದೇ ಹಣವು ದುರುಪಯೋಗವಾಗದಂತೆ ನೋಡಿಕೊಳ್ಳುತ್ತಾರೆ.
- ಗುಂಪಿನಲ್ಲಿನ ಬಡ ಸದಸ್ಯರಿಗೆ ಮೊದಲು ಸಹಾಯ ಸಿಗುವಂತೆ ಮಾಡುತ್ತಾರೆ.
- ಗುಂಪಿನ ಲೆಕ್ಕ ಪತ್ರಗಳನ್ನು ಜೋಪಾನ ಮಾಡುತ್ತಾರೆ. ಮತ್ತು ಎಲ್ಲರಿಗೂ ತಿಳಿಸುತ್ತಾರೆ.
ಗುಂಪಿನಲ್ಲಿ ನಾಯಕರ ಜವಾಬ್ದಾರಿಗಳನ್ನು ಏಕೆ ಹಂಚಿಕೊಳ್ಳಬೇಕು
- ಎಲ್ಲ ಸದಸ್ಯರು ಜವಾಬ್ದಾರಿ ತೆಗೆದುಕೊಳ್ಳುವುದರಿಂದ ನಾಯಕತ್ವ ಗುಣ ಬೆಳೆಸಿಕೊಳ್ಳಲು ಎಲ್ಲರಿಗೂ ಅವಕಾಶ ಸಿಗುತ್ತದೆ.
- ಎಲ್ಲರೂ ಜವಾಬ್ದಾರಿ ಹಂಚಿಕೊಳ್ಳುವುದರಿಂದ ಒಬ್ಬರಿಗೆ ಹೆಚ್ಚು ಹೊರೆ ಆಗುವುದಿಲ್ಲ.
- ಗುಂಪಿನ ಪ್ರತಿನಿಧಿಗಳು ಅಥವಾ ಅಧ್ಯಕ್ಷರು / ಕಾರ್ಯದರ್ಶಿ ಬೇರೆ ಕೆಲಸಕ್ಕೆ ಹೊರಗಡೆ ಹೋಗಬೇಕಾದ ಸಂಧರ್ಭಗಳಲ್ಲಿ ಗುಂಪಿನ ಕೆಲಸಗಳು ನಿಲ್ಲದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.
- ಜವಾಬ್ದಾರಿ ಯಾವಾಗಲೂ ಒಬ್ಬ ಅಥವಾ ಇಬ್ಬರ ಕೈಯಲ್ಲಿ ಇದ್ದಾರೆ ಅಧಿಕಾರವೂ ಸಹ ಒಬ್ಬಿಬ್ಬರ ಕೈಯಲ್ಲಿರುತ್ತದೆ. ಇದರಿಂದ ಅವರೂ ಸಹ ಅಧಿಕಾರ ಚಲಾಯಿಸಲು ಪ್ರಾರಂಭಿಸಬಹುದು. ಆದ್ದರಿಂದ ಎಲ್ಲಾ ಸದಸ್ಯರೂ ನಾಯಕರ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದನ್ನು ಕಲಿಯಬೇಕು.
ಎಲ್ಲಾ ಸದಸ್ಯರಲ್ಲಿ ನಾಯಕ ಗುಣ ಬೆಳೆಸಲು ಏನು ಮಾಡಬೇಕು?
- ಪ್ರತಿ ವರ್ಷ ಪ್ರತಿನಿಧಿಗಳನ್ನು ಬದಲಾಯಿಸಬೇಕು.
- ಪ್ರತಿ ಸದಸ್ಯರಿಗೆ ವಿವಿಧ ರೀತಿಯ ತರಬೇತಿ ನೀಡಬೇಕು.
- ಪ್ರತಿ ವಾರದ ಸಭೆಗೆ ಅಧ್ಯಕ್ಷತೆ ವಹಿಸಿ ಸಭೆ ನಡೆಸಲು ಎಲ್ಲಾ ಸದಸ್ಯರಿಗೆ ಅವಕಾಶ ನೀಡಬೇಕು.
- ಬ್ಯಾಂಕಿಗೆ ಹಣ ತುಂಬಲು ಪಾಳಿ ಪ್ರಕಾರ ಎಲ್ಲಾ ಸದಸ್ಯರು ಹೋಗಬೇಕು.
- ಜಲಾನಯನ ಇಲಾಖೆ, ಕೃಷಿ ಇಲಾಖೆ, ಗ್ರಾಮ ಪಂಚಾಯತಿ, ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸಗಳಿದ್ದಾಗ ಪ್ರತಿನಿಧಿಗಳು ಬೇರೆ ಬೇರೆ ಸದಸ್ಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿರಬೇಕು.
- ಪ್ರತಿ ವಾರದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲಾ ಸದಸ್ಯರಿಗೂ ಜವಾಬ್ದಾರಿ ನೀಡುತ್ತಿರಬೇಕು.
- ಓದು ಬರಹ ಬರುವ ಎಲ್ಲಾ ಸದಸ್ಯರು ಗುಂಪಿನ ಪುಸ್ತಕ ಬರೆಯಬೇಕು.
- ಕ್ಷೇತ್ರ ಭೇಟಿ, ಪಗ್ರಹ ಆಧಾರಿತ ತರಬೇತಿ ಇತ್ಯಾದಿಗಳಿಗೆ ಬೇರೆ ಬೇರೆ ಸದಸ್ಯರನ್ನು ಕಳುಹಿಸುತ್ತಿರಬೇಕು.
- ಸದಸ್ಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು.
ಕೊನೆಯ ಮಾರ್ಪಾಟು : 1/28/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.