ಕಾರ್ಗತ್ತಲಿನ ಶೂನ್ಯ ಜಗತ್ತಿಗೆ ಭಗವಂತನು ಬೆಳಕನ್ನು ನೀಡಲು ಸರಿಸೂರ್ (ಸೂರ್ಯ) ನನ್ನು ಸೃಷ್ಟಿಸಿದ ಎತ್ತ ನೋಡಿದರು ಬೆಳಕು. ಆಗ ಸರಿಸೂರ್ ನನ್ನು ಸಿಡಿಸಿದಾಗ ದಜ್ (ಭೂಮಿ) ಸೃಷ್ಟಿಯಾಯಿತು. ಬಿಸಿಯ ಚೆಂಡಿನನ್ತಿದ್ದ ಭೂಮಿಗೆ ತಣ್ಣಗಾಗಿಸಲು ಅಭೀರ್ ಸಂದ್ (ನೀರು) ನ್ನು ಸೃಷ್ಟಿಸಿದ. ಭೂಮಿ ನೀರಿನಲ್ಲಿ ಗಿರಗಿರನೆ ಸುತ್ತುತ್ತಿರಲು ಬಹಳ ಗಲೀಜಾಗಿ ವಾಸನೆ ಹರಡಿತು. ಅದಕ್ಕಾಗಿ ಖರಪಾಲ್ (ಗಾಳಿ) ಯನ್ನು ಸೃಷ್ಟಿಸಿದ. ಗಾಳಿಯು ಎತ್ತಲದಿಂದ ಎತ್ತಲೋ ಹೋಗುತ್ತಿತ್ತು. ಅದಕ್ಕೆ ನಿರ್ದಿಷ್ಟತೆ ಕೂಡಲೆಂದೇ ಆಕಾಶವನ್ನು ಸೃಷ್ಟಿಸಿದ. ಪಂಚಭೂತಗಲೆಂದು ಕರೆಯಲ್ಪಡುವ ಈ ಐದು ಅಂಶಗಳ ಬಗ್ಗೆ ಅನಕ್ಷರಸ್ಥರೂ ಸಹ ಈ ವಿಷಯಗಳ ಬಗ್ಗೆ ಹೇಳುತ್ತಿದ್ದರೆ ಆಶ್ಚರ್ಯವಾಗುತ್ತದೆ.
ಭೂಮಿಯಲ್ಲಿ ಯಾವ ಪ್ರಾಣಿ, ಪಕ್ಷಿ, ಗಿಡ,ಮರ, ಜಲಚರಗಳೂ ಇರುವುದಿಲ್ಲ. ಭಗವಂತ ಈ ಐದರ ಸೃಷ್ಟಿಗೆ ಅನುಗುಣವಾಗಿ ಜಾಂಬುವರ್ ರೀಂಚ್ (ಕರಡಿಯನ್ನು) ಸೃಷ್ಟಿಸಿದ. ಆಗ ಕರಡಿ ತಾನೊಬ್ಬನೇ ಎಲ್ಲೇ ತಿರುಗಾಡಲಿ ಆಹಾರಕ್ಕೇನು ಮಾಡಲಿ ಎಂದು ಮರಗಿಡ ಸೃಷ್ಟಿಸಿ, ಹಣ್ಣು, ಹಂಪಲು ನೀಡಲು ಮೊರೆ ಇಟ್ಟಾಗ, ಭಗವಂತ ತಥಾಸ್ತು ಎಂದನಂತೆ ಅಲ್ಲಿ ಸಾಕಷ್ಟು ಹುಲ್ಲು ದಟ್ಟವಾಗಿ ಬೆಳೆದುದರಿಂದ ಕರಡಿ ಓಡಾದಲಾಗದೆ ಕಷ್ಟಪಡುತ್ತಿದ್ದಾಗ ಅದನ್ನು ಮೇಯಲೆಂದು ಸಿರಿಗಾಯಿ-ಗಾವಡಿ (ಕಾಡ ಹಸು) ಯನ್ನು ಸೃಷ್ಟಿಸಿದ. ಕರಡಿ & ಹಸುವು ಹೇಗಿದೆಯೆಂದು ನೋಡಿಬರಲು ಭಗವಂತ ಭೂಮಿಗೆ ಬಂದು ನೋಡಲಾಗಿ ಆನಂದ ಪಟ್ಟು ಮರವೇರಿಕೊಂಡು ರುಚಿಯಾದ ಮಾವಿನ ಹಣ್ಣು ತಿನ್ನುತ್ತಿದ್ದನಂತೆ. ಆ ಮರದ ಕೆಳಗೆ ಕರಡಿ ಬಂದು ನೋಡಲಾಗಿ ಹಣ್ಣನ್ನೆಲ್ಲಾ ಯಾವನೋ ತಿನ್ನುತ್ತಿದ್ದಾನೆಂದು ಕೋಪದಿಂದ ದೇವರೆಂದು ತಿಳಿಯದೆ ಉಗಿದುಬಿಟ್ಟಿತನ್ತೆ ಅದಕ್ಕೆ ಭಗವಂತ ಮುಖ ತೋರಿಸಬೇಡವೆಂದು ಶಾಪ ಕೊಟ್ಟನಂತೆ. ಅದಕ್ಕೆ ಅಂದಿನಿಂದ ಕರಡಿಗೆ ಹಣ್ಣು ತಿನ್ನಲು ಮುಖ ಮೇಲೆ ಮಾಡಿ ಮರವೇರಲು ಆಗಲೇ ಇಲ್ಲವಂತೆ ಅದಕ್ಕಾಗಿ ಈಗಲೂ ಸಹ ರೀಂಚ್ (ಕರಡಿ) ಹಿಂದಿನ ಕಾಲು ಮೊದಲು ಮಾಡಿ ಮರವೇರುವುದನ್ನು ಕಾಣು ತ್ತೆವೆನ್ನುತ್ತಾರೆ. ಲಂಬಾಣಿಗಳು ಕಥೆ.
ಭಗವಂತ ಮತ್ತೆ ಸ್ವಲ್ಪದಿನ ಕಳೆದ ನಂತರ ಭೂಮಿಗೆ ಬಂದು ನೋಡಲಾಗಿ ಹಸುವು ಹಾಲನ್ನು ನೀಡಿತು. ಹಾಲು ಕುಡಿದ ಭಗವಂತನಿಗೆ ಮೆತ್ತನೆಯ ಹಾಸಿಗೆ ಮತ್ತು ನೆರಳಿಗಾಗಿ (ಒಂಬತ್ತು ತಲೆಯ ಹಾವನ್ನು ) ನೌ ಮುಂಡೆರ್ ನಾಗರ್ ಸಾಪ್ ನ್ನು ಸೃಷ್ಟಿಸಿ ಅದರ ಮೇಲೆ ವಿಶ್ರಾಂತಿ ಪಡೆದು ಹೋದನಂತೆ. ಹೀಗೆ ಭೂಮಿ ಮೇಲೆ ಮೊದಲು ಕರಡಿ, ಹಸು. ಮತ್ತು ಒಂಬತ್ತು ತಲೆಯ ಹಾವು ಜನ್ಮ ತಾಳಿದ ನಂತರ ಈ ಮೂರು ಪ್ರಾಣಿಗಳು ಸ್ನಾನ ಮಾಡದೆ ಕೊಳೆಯಿಂದ ತುಂಬಿರಲು ಒಮ್ಮೆ ತಮ್ಮ ಶರೀರವನ್ನು ಒದರಿತು. ಕೊಳೆ ಭೂಮಿಗೆ ತಾಕಿದಾಗ ಕೊಳಕು, ಸಾದು, ವಿಷ, ಪ್ರಾಣಿ ಕೀಟಗಳು ಜನ್ಮ ತಾಳಿ ಜೀವ ಸಂಕುಲವು ಸೃಷ್ಟಿಯಾಯಿತು. ಎಂಬ ಕತೆಯನ್ನು ಲಂಬಾಣಿಗಳು ಹೇಳುತ್ತಾರೆ.
ಒಮ್ಮೆ ವಿಹಾರಕ್ಕೆಂದು ಶಿವಪಾರ್ವತಿಯರು ಭೂ ಲೋಕಕ್ಕೆ ಬಂದಾಗ ಅವರ ಇಷ್ಟದಂತೆ 'ರಾಮ್' ಗಂಡು. 'ರೀಮ್' ಹೆಣ್ಣನ್ನು ಸೃಷ್ಟಿಸಿ ಹೋದರಂತೆ. ಇವರಿಬ್ಬರು ಮಾತನಾಡುವ ಜೀವಿಗಳಾದ್ದರಿಂದ ಪಂಚ ಭೂತಗಳು ಕೋಪಗೊಂಡು ನಮ್ಮಗಳ ಶಕ್ತಿಯ ಭಾಗಗಳನ್ನು ಈ ಮಾನವರು ಹೊಂದುತ್ತಿದ್ದಾರೆಂದು ಭೂಮಿ ಜೋರಾಗಿ ತಿರುಗಲಾರಂಭಿಸಿತು. ನೀರು ಭೂಮಿಯನ್ನು ಮುಳುಗಿಸಿತು. ಗಾಳಿ ಸುನ್ತರಗಾಳಿಯಾಯಿತು. ಸೂರ್ಯ ಆಕಾಶದಿಂದ ಮರೆಯಾದನಂತೆ. ಇನ್ನೇನು ಈ ಮಾನವರು ಸಾಯಬೇಕೆಂದು ಕೊಂಡಾಗ ಮತ್ತೆ ಶಿವ ಪಾರ್ವತಿಯರು ಬಂದು ಅವರನ್ನು ಒಂದು ಸೋರೆಕಾಯಿ ಬುರುಡೆಯಲ್ಲಿ ಹಾಕಿ ಅದರಲ್ಲಿ ಶಕ್ತಿ ತುಂಬಿ ಮಾಯವಾದರಂತೆ. ಪಂಚ ಭೂತಗಳ ಕೋಪ ೭ ದಿನದ ನಂತರ ಕಡಿಮೆ ಯಾದಾಗ ಮೊದಲಿನ ಸ್ಥಾನಕ್ಕೆ ಬಂದು ನಿಂತಿತ್ತು ಆಗ ಸೋರೆಕಾಯಿ ಬುರುಡೆ ಸೂರ್ಯೋದಯಕ್ಕೆ ಸರಿಯಾಗಿ ಬಂದು ಭೂಮಿಗೆ ತಾಕಿದಾಗ ಸೋರೆಕಾಯಿ ಬುರುಡೆ ಹೊಡೆದು ಕಮಲದಂತೆ ಅರಳಿತು.ದೇವಾದಿ ದೇವತೆಗಳಿಗೆ ಸಂತೋಷವಾಯಿತು. ಅವರಿಗೆ ಶಕ್ತಿ ಬಂದಂತಾಯಿತು. ಮುಂದೆ ದೇವತೆಗಳಿಗೆ ಪೂಜೆ ಪುರಸ್ಕಾರಗಳು ನಡೆಯುತ್ತದೆ ಅದಕ್ಕಾಗಿ ದೇವತೆಗಳು ಹೂ ಮಳೆಗೈದು ಆಶಿರ್ವಾದ ಮಾಡಿದರು. ಈ ರಾಮ್ & ರೀಮ್, ಇಬ್ಬರು ಭೂಮಿಯ ಮೇಲೆ ಓಡಾದಲಾರಂಭಿಸಿದರು. ಅವರ ಸಂತತಿ ಬೆಳೆಯಲೆಂದು ಮತ್ತೆ ಶಿವಪಾರ್ವತಿಯರು ಭೂ ಲೋಕಕ್ಕೆ ಬಂದು ಅವರಿಬ್ಬರನ್ನು ಎದುರು ಬದುರಾಗಿ ನಿಲ್ಲಿಸಿ 'ಓಂ ನಮಃ ಶಿವಾಯ' ಎಂಬ ಬೀಜಮಂತ್ರವನ್ನು ಮೂರು ಭಾರಿ ಹೇಳಿಸಿ, ಒಂದು ವಿಶೇಷ ಮರವನ್ನು ಸೃಷ್ಟಿಸಿ ಅದರ ಹಣ್ಣನ್ನು ತಿನ್ನದಿರುವಂತೆ ಹೇಳಿ ಮಾಯವಾದರಂತೆ. ರಾಮ್ & ರೀಮ್ರಲ್ಲಿ ಒಂದೆರಡು ದಿನ ಕಳೆಯುತ್ತಿದ್ದಂತೆ ಪ್ರೇಮಾಂಕರ್ಷಣೆಗೆ ಒಳಗಾದರಂತೆ ಆಗ ರೀಮ್ಗೆ ಶಿವ ಪಾರ್ವತಿಯರು ಸೃಷ್ಟಿಸಿದ ವಿಶೇಷ ಮರದ ಹಣ್ಣು ತಿನ್ನಲು ಆಸೆ ಮೂಡಿದಂತೆ ಆಗ ರಾಮ್ ಅದನ್ನು ಕಿತ್ತು ಕೊಟ್ಟಾಗ ರೀಮ್ ತಿನ್ನಲಾಗಿ ನಗ್ನವಾಗಿ ಇರಲು ನಾಚಿಕೆಯಾಗಿ ಎಲೆಗಳಿಂದ ತನ್ನ ಗುಪ್ತಾಂಗಗಳನ್ನು ಮುಚ್ಚಲಾರಂಭಿಸಿದಳಂತೆ ಹಾಗೂ ರಾಮ್ ನ ಗುಪ್ತಾಂಗಗಳನ್ನು ಸಹ ನೋಡಲು ನಾಚಿಕೊಂಡಾಗ ಅವನೂ ಸಹ ಎಲೆಗಳಿಂದ ಮುಚ್ಚಿಕೊಂದನಂತೆ. ಹೀಗೆ ಸ್ವಚ್ಚಂದವಾಗಿ ಕಾಡಿನಲ್ಲಿ ಪ್ರೀತಿ, ಪ್ರೇಮ, ನಾಚಿಕೆಯಲ್ಲಿ ಸೇರುತ್ತಿರಲು ಗರ್ಭಿಣಿಯಾದ ರೀಮ್ಗೆ ಎರಡು ಗಂಡು ಮಗು ಜನನವಾಯಿತು. ಅವರೇ ತೇಡಾ & ಚಾಡ, ಇವರನ್ನು ಸಾಕುತ್ತಿರಲು ಒಬ್ಬ ಋಷಿ ಮುನಿಗಳು ಬಂದು ಇಬ್ಬರು ಹೆಣ್ಣು ಮಕ್ಕಳನ್ನು ಸೃಷ್ಟಿಸಿ ತೀಡಾ & ಚಾಡಾನಿಗೆ ಮದುವೆ ಮಾಡಿಸಿದರಂತೆ ಅಂದಿನಿಂದ ತೀಡಾ & ಚಾಡಾನ ಸಂತತಿ ಬೆಳೆಯಲಾರಂಭಿಸಿತು. ಈ ವಿಷಯಗಳನ್ನು ಕಥೆಯ ಮೂಲಕ ಆಲಿಸಿದಾಗ ಇವರ ಮೂಲ ಸ್ಥಾನ ರಾಜಸ್ಥಾನವಾ ! ಅಥವಾ ಮದ್ಯ ಎಷ್ಯದಿಂದ ಬಂದ ಆರ್ಯಕುಲದವರ! ಎಂಬ ಅನುಮಾನ ಮೂಡುತ್ತದೆ.
ರಾಮ್, ರೀಮ್ ಎಂಬುವುದು ಹಿಂದೂ ಧರ್ಮಗ್ರಂಥಗಳ ಪುರಾಣ. ಪುರುಷರ ಹೆಸರು. ಇಲ್ಲವೇ ಲಂಬಾಣಿಗರ ಹುಟ್ಟುವಿನ ಬಗ್ಗೆ ಇತರ ಗ್ರಂಥ ತಿಳಿದ ಸಾದು ಸಂತರು ಹೀಗೊಂದು ಕತೆಯನ್ನು ಎಣೆದಿರಬಹುದೆಂಬ ಸಂಶಯವೂ ಸಹ ಮೂಡಿಬರುತ್ತದೆ.
ಮೇಲಿನ ಕತೆ ಕಟ್ಟುಕತೆಯಂತೆ ಕಂಡರೂ ಸಹ ಇದರ ಮುಂದಿನ ಭಾಗವೂ ಸತ್ಯಾಂಶಗಳಿಗೆ ಹತ್ತಿರವಾಗುವಂತಿರುವುದನ್ನು ನೋಡಿದರೆ ಮೇಲಿನ ಕತೆಯಲ್ಲಿಯೂ ಸಹ ಸ್ವಲ್ಪವಾದರೂ ಸತ್ಯ ವಿಷಯಾಂಶಗಳು ಸೇರ್ಪಡೆಯಾದಂತೆ ತೋರುತ್ತದೆ.
ಕೋಡುಗೆದಾರರು : ಪಳನಿಸ್ವಾಮಿ ಜಾಗೇರಿ
ಕೊನೆಯ ಮಾರ್ಪಾಟು : 10/15/2019
ಭಾರತದ ತುಂಬೆಲ್ಲ ಅಲ್ಲಲ್ಲಿ ಚದುರಿಕೊಂಡು ಅನೇಕತೆಯಲ್ಲಿ ಏಕ...
ಹಾತಿರಾಮ್ ಬಾವಾಜಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಲಂಬಾಣಿಗರ (ಬಂಜಾರರ) ಮದುವೇ ಶಾಸ್ತ್ರ ಕುರಿತಾದ ಮಾಹಿತಿ ಇಲ್...
ಲಂಬಾಣಿಗರ ಐತಿಹಾಸಿಕ ಹಿನ್ನಲೆಯನ್ನುನೋಡಿದಾಗ ಕೆಲವು ಇತಿಹಾಸ...