ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರೋಗ್ಯ ಸೇವೆಗಳು

ನಮ್ಮ ಹಳ್ಳಿಯಲ್ಲಿ ಸಿಗಬೇಕಾಗಿರುವ ಆರೋಗ್ಯ ಸೇವೆಗಳು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ನಮ್ಮ ಹಳ್ಳಿಯಲ್ಲಿ ಯಾರ ಮೂಲಕ ಆರೋಗ್ಯ ಸೇವೆಗಳು ದೊರೆಯುತ್ತವೆ

 • ಅಂಗನವಾಡಿ ಕಾರ್ಯಕರ್ತೆ,
 • ಆಶಾ,
 • ಕಿರಿಯ ಮಹಿಳಾ ಮತ್ತು ಪುರುಷ (ಮೇಲ್ ಹೆಲ್ತ್ ವರ್ಕರ್) ಆರೋಗ್ಯ ಸಹಾಯಕರಿಂದ.

ಗಮನಿಸಿ: ಕಿರಿಯ ಆರೋಗ್ಯ ಸಹಾಯಕಿಯರು ಮೊದಲೇ ನಿರ್ಧರಿಸಿದ  ದಿನಾಂಕ/ ದಿನದಂದು ಹಳ್ಳಿಗೆ ಭೇಟಿ ನೀಡಬೇಕು.

ಕಿರಿಯ ಮಹಿಳಾ ಅರೋಗ್ಯ ಸಹಾಯಕಿಯಿಂದ (ಕಿ.ಮ.ಆ.ಸ.).

ಗರ್ಭಿಣಿ ಮಹಿಳೆಯರಿಗೆ

ನೋಂದಾವಣಿ (ಗರ್ಭಿಣಿಯಾದ ಕೂಡಲೇ) ಅಂಗನವಾಡಿ ಕಾರ್ಯಕರ್ತೆಯ ಸಹಯೋಗದಲ್ಲಿ ಕನಿಷ್ಠ ೩ ಬಾರಿಯಾದರೂ ಗರ್ಭಿಣಿ ಪರೀಕ್ಷೆ. ಪ್ರತಿ ಬಾರಿಯೂ ಈ ಕೆಳಗಿನ ಸೇವೆಗಳು ದೊರಕಬೇಕು.

-ಹೊಟ್ಟೆ ಪರೀಕ್ಷೆ, ಬಿ.ಪಿ. ಪರೀಕ್ಷೆ, ರಕ್ತ (ಹಿಮೊಗ್ಲೋಬಿನ್) ಪರೀಕ್ಷೆ, ಮೂತ್ರ (ಸಕ್ಕರೆಗಾಗಿ) ಪರೀಕ್ಷೆ, ತೂಕ ಪರೀಕ್ಷೆ, ೧೦೦ ಕಬ್ಬಿಣದ ಮಾತ್ರೆಗಳು, ಧನುರ್ವಾಯು (ಟಿ.ಟಿ ) ಚುಚ್ಚುಮದ್ದು, ತೊಡಕಿನ (ತ್ರಾಸದಾಯಕ) ಗರ್ಭಾವಸ್ಥೆಯನ್ನು ಆದಷ್ಟು ಬೇಗ ಗುರುತಿಸಿ (ಸುಸಮಯದಲ್ಲಿ ) ಕಂಡು ಹಿಡಿದು ಹೆಚ್ಚಿನ ವೈದ್ಯಕೀಯ ಸೇವೆಗೆ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವುದು, ಸುರಕ್ಷಿತ ತಾಯ್ತನ ಹಾಗೂ ಮಗುವಿನ ಪಾಲನೆಯ ಬಗ್ಗೆ ಮಾಹಿತಿ ಮತ್ತು ಅರಿವು ಕೊಡುವುದು.

೨. ಹೆರಿಗೆ ಮತ್ತು ನಂತರ

ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸುವುದು.

ತ್ರಾಸದಾಯಕ ಹೆರಿಗೆಯಿದ್ದಲ್ಲಿ / ರೋಗಗ್ರಸ್ಥ ಮಗು ಜನಿಸಿದಲ್ಲಿ ಅವರನ್ನು ಹೆಚ್ಚಿನ ವೈದ್ಯಕೀಯ ಸೇವೆಗೆ ಕರೆದುಕೊಂಡು ಹೋಗುವುದು ಹಾಗೂ ನಂತರದ ಅದರ ಅನುಸರಣೆ- ಹೆರಿಗೆ ನಂತರ ಎರಡು ಬಾರಿಯಾದರೂ ಮನೆ ಭೇಟಿ ನೀಡುವುದು ಹಾಗೂ ತಾಯಿ ಮತ್ತು ಮಗುವಿನ ಪಾಲನೆ ಮಾಡುವುದು (ಮೊದಲನೆಯದರಲ್ಲಿ - ೪೮ ಗಂಟೆಗಳ ಒಳಗೆ, ಎರಡನೆಯದರಲ್ಲಿ -೭-೧೦ ದಿನಗಳ ಒಳಗೆ) ಉದಾ: ಆರೋಗ್ಯ ಪರೀಕ್ಷೆ, ಆರೋಗ್ಯ ಶಿಕ್ಷಣ, ಔಷದೋಪಚಾರ.

ಕುಟುಂಬ ಆರೋಗ್ಯ ಹಾಗೂ ಕುಟುಂಬ ಯೋಜನೆ ಬಗ್ಗೆ ಅರಿವು ಮು ಮಾಹಿತಿ

ಮಕ್ಕಳಿಗೆ

 • ಹುಟ್ಟಿದ ಮೊದಲು ಒಂದು ಗಂಟೆಯಲ್ಲಿ ಎದೆ ಹಾಲು ಕುಡಿಸಲು ಪ್ರಾರಂಭಿಸುವುದು
 • ನವಜಾತ ಶಿಶುಗಳ ಮನೆಗೆ ೩ ಬಾರಿ ಭೇಟಿ ಬೆಳವಣಿಗೆಯ ಬಗ್ಗೆ ನಿಗಾ ಇಡುವುದು.
 • ಎಲ್ಲಾ ಮಕ್ಕಳಿಗೆ ಸಂಪೂರ್ಣ ಲಸಿಕೆ.(ಮೈರಿ), ಹುಟ್ಟಿದ ತಕ್ಷಣ ಬಿಸಿಜಿ,

'ಓ' ಪೋಲಿಯೊ ಮತ್ತು ಹೆಪಟೈಟಿಸ್ - ಬಿ ಬರ್ತ್ ಡೋಸ್, ಡಿಪಿಟಿ ಮತ್ತು ಹೆಪಟೈಟಿಸ್ -ಬಿ ೬ರಿನ್ದ ೧೪ ತಿಂಗಳ ಒಳಗೆ -೩ ಬಾರಿ, ದ್ದಾರ-೯ರಿನ್ದ ೧೨ ತಿಂಗಳ ಒಳಗೆ ಒಂದು ಬಾರಿ ಮತ್ತು ವಿಟಮಿನ್ -ಎ ದ್ರಾವಣ ಒಂದು ಮಲ್.

 • ೧ ರಿಂದ ೫ ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ೬ ತಿಂಗಳಿಗೊಮ್ಮೆ ವಿಟಮಿನ್-ಎ ದ್ರಾವಣ ೨ ml . ೫ ವರ್ಷದೊಳಗೆ ಡಿ & ಟಿ ಲಸಿಕೆ, ೧೦ ವರ್ಷ ಮಾತು ೧೬ ವರ್ಷಕ್ಕೆ ಟಿಟಿ ಲಸಿಕೆ ಒಂದು ಬಾರಿ ನೀಡುವುದು.
 • ಮಕ್ಕಳ ತೂಕದ ಮೇಲೆ ನಿಗಾ ಇಡುವುದು ಹಾಗೂ ಅಪೌಷ್ಟಿಕತೆಯನ್ನು ಆದಷ್ಟು ಬೇಗ ಕಂಡು ಹಿಡಿಯುವುದು ಹಾಗೂ ಅದರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವುದು.
 • ಹಳ್ಳಿಯ ಕುಡಿಯುವ ನೀರಿನ ಬಾವಿಯನ್ನು ನಿಯಮಿತವಾಗಿ ಪರೀಕ್ಷೆ ಮಾಡುವುದು ಹಾಗೂ ಕ್ಲೋರಿನೆಶನ್ ಮಾಡುವುದು.
 • ಜನರ ಸಾಮಾನ್ಯ ಖಾಯಿಲೆಗಳ ಚಿಕಿತ್ಸೆ ಉದಾ: ಜ್ವರ, ಕೆಮ್ಮು, ನೆಗಡಿ, ತಲೆನೋವು,
 • ಸಾಂಕ್ರಾಮಿಕ ರೋಗಗಳ ಪ್ರತಿಬಂದೊಪಾಯಕಗಳು ಉದಾ: ಸೊಳ್ಳೆಗಳ ಸಂಖ್ಯೆ ನಿಯಂತ್ರಣ
 • ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಟಿ.ಬಿ , ಮಲೇರಿಯಾ ಮುಂತಾದ ರೋಗಗಳು ಬರದಂತೆ ತಡೆಗಟ್ಟುವುದು. ಈ ರೋಗಗಳಿಗೆ ಸಂಬಂಧಿಸಿದ ರಕ್ತ, ಕಫ಼ ಪರೀಕ್ಷೆ ಮಾಡುವುದು; ಮತ್ತು ಅದಕ್ಕೆ ಸಮಾಯೋಚಿತ ಚಿಕಿತ್ಸೆ ನೀಡುವುದು.
 • ಸಮುದಾಯ ಗುಂಪು ಸಂಘಟನೆಗಳ ಜೊತೆಗೆ ಕುಳಿತು ಆರೋಗ್ಯದ ಬಗ್ಗೆ ಚರ್ಚೆ ಹಾಗೂ ಶಿಕ್ಷಣ. ಉದಾ: ಮಹಿಳಾ ಸ್ವ ಸಹಾಯ ಗುಂಪಿನೊಂದಿಗೆ.
 • ಅಂಗನವಾಡಿ ಕಾರ್ಯಕರ್ತೆಯಿಂದ (ಅಂ. ಕಾ)
 • ಗ್ರಾಮದ ೬ ವರ್ಷ ಕೆಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ.
 • ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಪೌಷ್ಟಿಕ ಆಹಾರ
 • ೩-೬ ವರ್ಷದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ರೂಢಿಗತವಲ್ಲದ ಶಾಲಾ ಪೂರ್ವ ಶಿಕ್ಷಣ ನೀಡುವುದು.
 • ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತ ತಾಯ್ತನ ಹಾಗೂ ಮಗುವಿನ ಪಾಲನೆಗೆ ಮಾಹಿತಿ ಮತ್ತು ಅರಿವು ನೀಡುವುದು.
 • ಕಿ.ಮ.ಆ.ಸ. ಸಹಯೋಗದಲ್ಲಿ ತಿಂಗಳಿಗೊಮ್ಮೆ "ಗ್ರಾಮ ಆರೋಗ್ಯ ದಿನ" ಆಯೋಜಿಸುವುದು.
 • ತೊಡಕಿನ ಗರ್ಭಿಣಿ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುಇಸಿ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರಗೆ ಕಳುಹಿಸುವುದು.

ಶಾಲಾ ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಕಿ.ಮ.ಆ.ಸ. ಹಾಗೂ ಕಿ.ಪು.ಆ.ಸ. ರಿಂದ ವರ್ಷದಲ್ಲಿ ಒಂದು ಬಾರಿ ಗ್ರಾಮದ ಶಾಲೆಯ ಮಕ್ಕಳ ತಪಾಸಣೆ ಹಾಗೂ ಅನುಸರಣೆ.

ಮೂಲ:ಕುಟುಂಬ ಆರೋಗ್ಯ ಹಾಗೂ ಕುಟುಂಬ ಯೋಜನೆ

 

3.02083333333
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top