ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಲ್ಲಿ ಜನ ಸಾಮಾನ್ಯರಿಗೆ ವೈದ್ಯರ ಸೇವೆಗಳನ್ನು ಹಾಗೂ ಒಳ ರೋಗಿಗಳ ಸೇವೆಗಳನ್ನು ನೀಡುವ ಮೊದಲ ಹಂತವೇ ಪ್ರಾಥಮಿಕ ಆರೋಗ್ಯ ಕೇಂದ್ರ.
ನಮ್ಮೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಬೇಕಾದ ಸಿಬ್ಬಂದಿಗಳು
ಸಿಬ್ಬಂದಿಗಳು |
ಪ್ರಸ್ತುತ |
ಏನ್ ಆರ್ ಎಚ್ ಎಂ ಅಪೇಕ್ಷಿತ |
ವೈದ್ಯಾಧಿಕಾರಿಗಳು |
1 |
೨ (ಕನಿಷ್ಠ ಒಬ್ಬ ಮಹಿಳಾ ವೈದ್ಯರು) |
ಆಯುರ್ವೇದ, ಯೋಗ, ಹೋಮಿಯೋಪತಿ ವೈದ್ಯರು |
- |
ಯಾವುದೇ ಪದ್ದತಿಯ ಒಬ್ಬರು |
ಔಷಧಿ ವಿತರಕರು |
1 |
1 |
ನರ್ಸಗಳು |
1 |
3 |
ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ |
1 |
1 |
ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು |
೩+೩
|
೩+೩ |
ಆರೋಗ್ಯ ಶಿಕ್ಷಕರು |
1 |
1 |
ಪ್ರಯೋಗಾಲಯ ಸಿಬ್ಬಂದಿ |
1 |
1 |
ಲೆಕ್ಕ ಪತ್ರ ನಿರ್ವಾಹಕರು |
- |
1 |
ಗುಮಾಸ್ತರು |
1 |
1 |
ವಾಹನ ಚಾಲಕರು
|
1 |
ಗುತ್ತಿಗೆಗೂ ನೀಡಬಹುದು |
ಡಿ ದರ್ಜೆ ನೌಕರರು ಒಟ್ಟು |
೩ 17 |
೩
21
|
ಪ್ರಾಥಮಿಕ ಆರೋಗ್ಯ ಕೇಂದ್ರ (ಪ್ರಾ.ಆ.ಕೇ.) ಸರ್ಕಾರವು ವಾಗ್ದಾನ ಮಾಡಿರುವ ಸೇವೆಗಳು
ವೈದ್ಯರು ಸಿಗುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಪ್ರಥಮ ಹಂತ
ವೈದ್ಯಕೀಯ ಸೇವೆಗಳು:
ಹೊರರೋಗಿ ಸೇವೆಗಳು : ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನವೂ ಬೆಳಗಿನ ೪ ಗಂಟೆಗಳು ಹಾಗೂ ಮಧ್ಯಾಹ್ನದ ಮೇಲೆ ೨.1/೨ ಗಂಟೆ ಕಾಲಾವಧಿಗೆ ಹೊರರೋಗಿಗಳ ಸೇವೆ ಲಭ್ಯ. ದಿನದ ೨೪ ಗಂಟೆಗಳೂ ತುರ್ತು ಮತ್ತು ಅಪಘಾತ ಸೇವೆಗಳು ಲಭ್ಯವಿರಬೇಕು. ಉದಾ:ನಾಯಿ ಕಡಿತ, ಹಾವು ಕಡಿತ, ಅಪಘಾತದ ಗಾಯಗಳು ಮುಂತಾದವು.
ಒಳರೋಗಿಗಳ ಸೇವೆಗಳು: ಒಳ ರೋಗಿಗಳ ಸೇವೆಗಾಗಿ ಹಾಸಿಗೆಯುಳ್ಳ ಸೇವೆಗಳು ಲಭ್ಯವಿರಬೇಕು.
ಮುಂದುವರೆದ ಖಾಯಿಲೆಗಳ ಚಿಕಿತ್ಸೆಗೆ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವುದು ಹಾಗೂ ಅದರ ಅನುಸರಣೆ.
ವಾರದ ಎಲ್ಲಾ ದಿನಗಳಲ್ಲಿ ೨೪ ಗಂಟೆಗಳ ಹೆರಿಗೆ ಸೇವೆಗಳು.
ಶಸ್ತ್ರ ಚಿಕಿತ್ಸ್ಸೆಗಳು: ( ಶಸ್ತ್ರ ಚಿಕಿತ್ಸಾ ಕೊಠಡಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ.)
ಸಿಗಲೇಬೇಕಾಗಿರುವ ಸೇವೆಗಳು:
ಉಪ ಕೇಂದ್ರ ಮಟ್ಟದಲ್ಲಿ ಸಿಗಬೇಕಾಗಿರುವ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿರಬೇಕು ಅವುಗಳ ಜೊತೆಗೆ ಈ ಕೆಳಗಿನ ಸೇವೆಗಳು ಲಭ್ಯವಿರಬೇಕು.
ಪರೀಕ್ಷೆಗಳು:
ಹೆರಿಗೆ ಸೇವೆಗಳು:
ಸಂತಾನೋತ್ಪತ್ತಿ ಮಾರ್ಗದ ಹಾಗೂ ಲೈಂಗಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಶಿಕ್ಷಣ ಹಾಗೂ ಆ ರೋಗಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ.
ಮಕ್ಕಳ ಆರೋಗ್ಯ ಸೇವೆಗಳು.
ಉದಾ: ಶೀತ, ಕೆಮ್ಮು,ನೆಗಡಿ,ಜ್ವರ,ಅಪೌಷ್ಟಿಕತೆ,ನ್ಯುಮೋನಿಯಾ (ಶ್ವಾಸಕೋಶದ ಸೋಂಕು) ದಡಾರ
ಪೂರ್ಣ ಲಸಿಕಾ ಕಾರ್ಯಕ್ರಮ.
ಕುಟುಂಬ ಕಲ್ಯಾಣ ಸೇವೆಗಳು.
ಪೌಷ್ಟಿಕತೆಯ ಸೇವೆಗಳು
ಶಾಲಾ ಅರೋಗ್ಯ
ಹದಿಹರೆಯದವರ ಆರೋಗ್ಯ
ಸುರಕ್ಷಿತ ಕುಡಿಯುವ ನೀರಿನ ಹಾಗೂ ನೈರ್ಮಲ್ಯ ವಾತಾವರಣದ ಬಗ್ಗೆ ಶಿಕ್ಷಣ, ತರಬೇತಿ ಹಾಗೂ ಪ್ರೋತ್ಸಾಹ.
ಸ್ಥಳೀಯ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ನಿಯಂತ್ರಣ ಹಾಗೂ ಚಿಕಿತ್ಸೆ.
ಉದಾ:ಮಲೇರಿಯಾ, ಆನೆಕಾಲು ರೋಗ, ಮೆದುಳು ಜ್ವರ, ಡೆಂಗೀ ಜ್ವರ.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾರಿ.
ಆರೋಗ್ಯ ಶಿಕ್ಷಣ.
-ಹದಿ ಹರೆಯದವರಿಗೆ
-ಹೆಂಗಸರಿಗೆ.
ಮೂಲ: ಗ್ರಾಮ ಆರೋಗ್ಯ ಮತ್ತು ನಿರ್ಮಲ್ಯ ಸಮಿತಿ
ಕೊನೆಯ ಮಾರ್ಪಾಟು : 5/29/2020
ನಾವು ತಿನ್ನುವ ವಸ್ತುವು ಹೊಟ್ಟೆಗೆ ಹೋಗಿ, ಅಲ್ಲಿ ಜಠರಾಗ್ನಿ...
ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆ...
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...
ಆರೋಗ್ಯ ದಿನಚರಿ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.