ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಭರವಸೆ ಬಾಗಿಲು ತೆರೆದಿರಲಿ

ಕ್ಷಯ (ಟಿಬಿ),ಗುಪ್ತ ರೋಗ,ಎಚ್ ಐ ವಿ ಮತ್ತು ಏಡ್ಸ್ ಬಗ್ಗೆ ಸರಳ ಮಾಹಿತಿ

ಟಿಬಿ ಲಕ್ಷಣಗಳು ಮತ್ತು ಚಿಕಿತ್ಸೆ

ಸೀತಾ,ಗೀತ,ಲತಾ ಜೀವದ ಗೆಳತಿಯರು. ಎಲ್ಲರೂ ಮನೆ,ಗಂಡ ಮತ್ತು ಮಕ್ಕಳ ಜೊತೆಗೆ ಸುಖದಿಂದಿರುವರು.ಹೀಗಿರುವಾಗ ಒಂದು ದಿನ.

ಅಂಗನವಾಡಿ ಕೇಂದ್ರದ ಗೋಡೆಯಲ್ಲಿರುವ ಡಾಟ್ಸ್ ಪೋಸ್ಟರ್ ನ ಮುಂದೆ ಸೀತಾ,ಗೀತ,ಲತಾ ಇದ್ದಾರೆ. ಒಬ್ಬಳು ಕೆಮ್ಮುತ್ತಿದ್ದಾಳೆ, ಇನ್ನೊಬ್ಬಳು ಕಫ಼ ಉಗುಳುತ್ತಿದ್ದಾಳೆ. ಮತ್ತೊಬ್ಬಳು ಸುಸ್ತಾಗಿ ಕೂತಿದ್ದಾಳೆ. ಅಂಗನವಾಡಿ ಟೀಚರ್ ಈ ಮೂವರನ್ನು ಉದ್ದೇಶಿಸಿ ಏನೋ ಹೇಳುತ್ತಿದ್ದಾಳೆ ಅಂಗನವಾಡಿ ಕೇಂದ್ರದ ಗೋಡೆಯಲ್ಲಿ ಡಾಟ್ಸ್ ಕೇಂದ್ರದ ಸಿಂಬಲ್ ಸರಿಯಾಗಿ ಕಾಣುವ ಪೋಸ್ಟರ್ ಕಾಣುತ್ತದೆ.

ಮೂವರೂ ಗೆಳತಿಯರೂ ಸತತವಾಗಿ ಕೆಮ್ಮಲು ಶುರು ಮಾಡಿದರು. ಎರಡು ವಾರ ಕೆಮ್ಮು ನಿಲ್ಲಲೇ ಇಲ್ಲ. ಸೀತಕ್ಕಳ ಕಫಾದಲ್ಲಿ ರಕ್ತ , ಗೀತಕ್ಕಳಿಗೆ ಬಂತು ಜ್ವರ, ಲತಕ್ಕಳ ತೂಕವೂ ಕಡಿಮೆಯಾಯಿತು ಪಕದಲ್ಲಿರುವ ಅಂಗನವಾಡಿ ಟೀಚರ್ ಬಂದು ನೀವ್ಯಾಕೆ ಕಫ಼ ಪರೀಕ್ಷೆ ಮಾಡಿಸಿಕೊಳ್ಳಬಾರದು? ಇದು ಟಿ.ಬಿ! ಅಂದರೆ ಕ್ಷಯದ ಲಕ್ಷಣವೂ ಇರಬಹುದು.....

ವೈದ್ಯರು ಗೀತಕ್ಕ ಮತ್ತು ಲತಕ್ಕಳನ್ನು ಸರಿಯಾಗಿ ಪರೀಕ್ಷಿಸುತ್ತಾರೆ ಇಲ್ಲಿ ವೈದ್ಯರು ಪರೀಕ್ಷಿಸಿ ಇಬ್ಬರಿಗೂ ಔಷಧಿ ಕೊಟ್ಟರು. ಮದ್ದು ತೆಗೆದುಕೊಂಡ ನಂತರ ಒಂದು ವಾರದಲ್ಲೇ ಗೀತ ಮತ್ತು ಲತಾ ಮೆಲ್ಲ ಮೆಲ್ಲನೆ ಚೇತರಿಸಿಕೊಂಡರು.

ಮದ್ದು ತೆಗೆದುಕೊಳ್ಳದೆ ಈ ಕಡೆ ಸೀತಕ್ಕನ ಸ್ಥಿತಿಯು ಮಾತ್ರಾ ಗಂಭೀರವಾಯಿತು. ಲತಾ ಹಾಗೂ ಗೀತಳಿಗೆ ರೋಗ ಕಡಿಮೆಯಾಯಿತು. ಲತಕ್ಕ ಅಂದ್ಳು ನನಗೆ ಗುಣವಾಗಿದೆ. ಇನ್ನು ಸಾಕು ನನ್ಗೆ ಈ ಔಷಧಿ ನುಂಗುವ ಕರ್ಮ.

ಆಗ ಗೀತಕ್ಕ ಹೇಳಿದ್ಳು ಬೇಡ ಔಷಧಿ ನಿಲ್ಲಿಸಬೇದಾ ನಿನಗೆ ಟಿ.ಬಿಯ ಮರ್ಮ ಗೊತ್ತಿಲ್ಲ. ಅದು ತುಂಬಾ ಡೇಂಜರ್ ಮತ್ತೆ ಬಂದು ವಕ್ಕರಿಸುತ್ತದೆ ಗೀತಕ್ಕನ ಮಾತು ಕೇಳದ ಲತಕ್ಕ ಔಷಧಿಯನ್ನು ನಿಲ್ಲಿಸಿಬಿಟ್ಟಳು. ಗೆಳತಿಯರ ನಡುವೆ ಕೋಪವು ತಾಪವು ಬೆಳೆದು ಸ್ನೇಹವು ಒಡೆಯಿತು.

ಕೆಲ ಸಮಯದ ನಂತರ ಪಾಪ ನಮ್ಮ ಸೀತಕ್ಕಳೂ ಅಕಾಲಿಕ ಮರಣ ಹೊಂದಿದಳು. ಅವಳ ಮಕ್ಕಳೂ ಅಮ್ಮನನ್ನು ನೆನೆ ನೆನೆದು ನರಳುತಿದ್ದರು, ಸೋಂಕು ಮನೆ ಮಂದಿಗೆಲ್ಲಾ ಹರಡಿತು.

ಲತಕ್ಕ ಮತ್ತೆ ಕೆಮ್ಮಲು ತೊಡಗಿ ಹಾಸಿಗೆ, ಹಿಡಿದಳು ಮಕ್ಕಳು ಶಾಲೆ ಬಿಟ್ಟು ಹೊಟ್ಟೆ ಬಟ್ಟೆಗೆ ಕೂಲಿ ನಾಲಿ ಮಾಡಬೇಕಾಯಿತು. ನೆಂಟರಿಷ್ಟರು, ನೆರೆಹೊರೆಯವರು ಸೋಂಕಿನ ಭಯದಿಂದ ಲತಕ್ಕಳ ಮನೆಗೆ ಬರುವುದನ್ನೇ ಬಿಟ್ಟರು.

ಆದರೂ ನಮ್ಮ ಗೀತಕ್ಕ ಮಾತ್ರ ಡಾಕ್ಟ್ರು ಹೇಳಿದ ಹಾಗೆ ನಿಯಮಿತವಾಗಿ ಔಷಧಿ ಸೇವಿಸಿ ಸಂಸಾರದೊಂದಿಗೆ ಸುಖವಾಗಿದ್ದಾಳೆ.

ಕ್ಷಯ (ಟಿಬಿ)

 

"ಮೈಕೊಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್" ಎಂಬ ರೋಗಾಣು ಕ್ಷಯ ರೋಗಕ್ಕೆ ಕಾರಣವಾಗುತ್ತದೆ. ಕ್ಷಯ ರೋಗವು ಸಾಮಾನ್ಯವಾಗಿ ಉಗಿದ ಉಗುಳಿನ ತುಂತುರುಗಳು ಗಾಳಿಯ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಯಾವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆ ಇರುತ್ತದೆ ಅವರಿಗೆ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕ್ಷಯ ರೋಗವು ಸಾಮಾನ್ಯವಾಗಿ ಶ್ವಾಸಕೋಶಕ್ಕೆ ಬರುತ್ತದೆ. ದೇಹದ ಬೇರೆ ಬೇರೆ ಭಾಗಗಳಾದ ಮೆದುಳು, ಮೂಳೆ, ಗರ್ಭನಾಳ ಮತ್ತು ಚರ್ಮಕ್ಕೂ ರೋಗ ತಗುಲಬಹುದು.

ಟಿ.ಬಿ ರೋಗದ ಲಕ್ಷಣಗಳು

ಸತತವಾಗಿ ಎರಡು ವಾರಗಳಿಗಿಂತ ಹೆಚ್ಚು ಕೆಮ್ಮು ಇರುವುದು ಮತ್ತು ಸತತ ಎದೆ ನೋವು, ಕಫಾದಲ್ಲಿ ರಕ್ತ ಬೀಳುವುದು.

ಸಾಯಂಕಾಲದ ವೇಳೆ ಜ್ವರ ಬರುವುದು ಹಸಿವಾಗದೇ ಇರುವುದು:

ನಿಮ್ಮಲ್ಲಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಟಿ.ಬಿ ರೋಗ ಇದೆಯೇ ಎಂಬುವುದನ್ನು ಪತ್ತೆ ಹಚ್ಚಲು ಡಿ.ಎಂ.ಸಿ ಕೇಂದ್ರದಲ್ಲಿ ಎರಡು ಬಾರಿ ಕಫ಼ ಪರೀಕ್ಷೆ ಮಾಡುತ್ತಾರೆ. ಡಿ.ಎಂ.ಸಿ ಕೇಂದ್ರಕ್ಕೆ ನೀವು ಹೋದಾಗ ಒಂದು ಡಬ್ಬ ಕೊಡುತ್ತಾರೆ. ಅದರಲ್ಲಿ ಮರುದಿನ ಬೆಳಗ್ಗೆ ಎದ್ದಾಗ ಕಫ಼ (ಮಾದರಿ-೧) ಸಂಗ್ರಹಿಸಿ ಪರೀಕ್ಷೆಗೆ ಕೊಡಬೇಕು. ಸಂಗ್ರಹಿಸಿದ ಕಫ಼ ಕೊಡಲು ಹೋದಾಗ ಸ್ಥಳದಲ್ಲೇ ಮತ್ತೊಮ್ಮೆ ಕಫ಼ (ಮಾದರಿ-೨) ತೆಗೆದು ಪರೀಕ್ಷೆಗೆ ಕೊಡಬೇಕು, ಪರೀಕ್ಷೆ ಮಾಡಿ ಫಲಿತಾಂಶ ಕೊಡುತ್ತಾರೆ.

ಪ್ರಯೋಗಾಲಯದಲ್ಲಿ ಕಫಾ ಪರೀಕ್ಷೆ ಮಾಡಿದ ನಂತರ ಫಲಿತಾಂಶ ತಿಳಿಸುತ್ತಾರೆ. ಟಿಬಿ ಇರುವುದು ಖಚಿತವಾದರೆ ಡಾಟ್ಸ್ ಚಿಕಿತ್ಸೆ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ನಿಮಗೆ ಸಮೀಪದಲ್ಲಿರುವ ಡಾಟ್ಸ್ ನಿಕಟವರ್ತಿಗಳು ಸರಿಯಾದ ಸಮಯಕ್ಕೆ ನಿಮಗೆ ಔಷಧ ನೀಡುತ್ತಾರೆ. ಅವರು ನೀಡಿದ ಔಷಧಿಯನ್ನು ಮೊದಲ ಎರಡು ತಿಂಗಳಲ್ಲಿ ಡಾಟ್ಸ್ ನಿಕಟವರ್ತಿಗಳ ಎದುರಲ್ಲೇ ತೆಗೆದುಕೊಳ್ಳಬೇಕು. ಡಾಟ್ಸ್ ಕೇಂದ್ರವು ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ತಾಲೋಕ್ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಇದೆ.

ಡಾಟ್ಸ್ ನಿಕಟವರ್ತಿ ಅಂದರೆ ಡಾಟ್ಸ್ ಕೇಂದ್ರವು ಗುರುತಿಸಿದ ನಿಮ್ಮ ಸಮೀಪದಲ್ಲಿರುವ ಯಾವುದೇ ವ್ಯಕ್ತಿ ಆಗಿರಬಹುದು. ಉದಾಹರಣೆಗೆ ನಿಮ್ಮ ಗೆಳೆಯ, ಶಾಲೆಯ ಟೀಚರ್, ಅಂಗನವಾಡಿ ಕಾರ್ಯಕರ್ತೆ ಪೋಸ್ಟ್ ಮ್ಯಾನ್ ಇತ್ಯಾದಿ.

ಡಾಟ್ಸ್ ಕೇಂದ್ರದಲ್ಲಿ ದೊರಕುವ ಚಿಕಿತ್ಸೆ ಉಚಿತ

ಟಿ.ಬಿ ಸಂಪೂರ್ಣ ವಾಸಿಯಾಗಲು ೬-೮ ತಿಂಗಳು ನಿರಂತರವಾಗಿ ಚಿಕಿತ್ಸೆ ಪಡೆದುಕೊಳ್ಳಲೇಬೇಕು. ಟಿಬಿ ಸೋಂಕಿತರ ಮನೆಯಲ್ಲಿರುವ ೬ ವರ್ಷದೊಳಗಿನ ಮಕ್ಕಳಿಗೆ ಟಿಬಿ ಇಲ್ಲದಿದ್ದರೂ ಈ ರೋಗ ಬರದಂತೆ ತಡೆಯಲು ವೈದ್ಯರು ಮಕ್ಕಳಿಗಾಗಿ ನೀಡಿದ ಔಷಧಿ ತೆಗೆದುಕೊಳ್ಳಬೇಕು.

ಸೂಕ್ತ ಸಮಯಕ್ಕೆ ಚಿಕಿತ್ಸೆ ಟಿಬಿಯಿಂದ ರಕ್ಷಣೆ.

ವಿಮಲಕ್ಕನ ಕಥೆ

ಲೈಂಗಿಕ ರೋಗ, ಮತ್ತು ಎಚ್ ಐ ವಿ / ಏಡ್ಸ್ ಪರಿಚಯ

ವಿಮಲಮ್ಮ ಮತ್ತು ಕಮಲಮ್ಮ ಒಂದೇ ಹಳ್ಳಿಯ ಗೆಳತಿಯರು. ತಮ್ಮ ಹಾಗೂ ಕುಟುಂಬದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೂಲಿ ನಾಲಿ ಮಾಡಿ ಜೀವನ  ಸಾಗಿಸುತ್ತಿರುತ್ತಾರೆ ಒಂದು ದಿನ ಗದ್ದೆ ಕೆಲಸಕ್ಕೆ ಹೋಗುವಾಗ ಕಮಲಮ್ಮ ಕರೆಯಲು ಬಂದಳು.

ವಿಮಲಮ್ಮನಿಗೆ ಜಡ್ಡಾಗಿತ್ತು. ಕೇಳಿದ್ದಕ್ಕೆ "ಕಿಬ್ಬೊಟ್ಟೆ ನೋವೆಂದು ಕಣ್ಣಲ್ಲಿ ನೀರು ತಂದುಕೊಂಡು ಹೇಳಿದಳು. ಕಮಲಮ್ಮನಿಗೆ ಕಾರಣ ತಿಳಿಯಿತು. ಈ ಆರು ತಿಂಗಳಲ್ಲಿ ಅವಳಿಗೆ ಸೋಂಕು ತಗುಲಿರುವುದು ಇದು ಎರಡನೇ ಬಾರಿ. ಹೀಗಾದರೆ,ಹೇಗೆ ಕೂಲಿ ನಾಲಿ ಮಾಡಿ ದುಡಿಯುವುದೆಲ್ಲಾ ಸೋಂಕಿನ ಔಷಧಿಗೆ ಖರ್ಚಾದರೆ ಮನೆಗೆ ಉಳಿಯುವುದೇನು" ಎಂದು ಪ್ರೀತಿಯಿಂದ ಗದರಿದಳು.

ಆದದ್ದು ಆಗಿ ಹೋಯಿತು ಈಗೇನು ಸಮಯ ಮಿಂಚಿಲ್ಲ ಇವತ್ತೇ ನಮ್ಮೂರಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ (ಎ ಎನ್ ಎಂ) ಜೊತೆ ಈ ಬಗ್ಗೆ ಮಾತನಾಡಿ ವಿಷಯ ತಿಳಿಸುವ ಅಂದಳು.

"ನರಸಮ್ಮನೊಡನೆ ಮಾತನಾಡಿದ ನಂತರ ಅವಳು ನಿನಗೆ ಗುಪ್ತ ಖಾಯಿಲೆ ಇದೆ" ಎಂದು ಹೇಳಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಳು.

ಅಲ್ಲಿ ಡಾಕ್ಟ್ರು ವಿಮಲಮ್ಮನನ್ನು ಪರೀಕ್ಷಿಸಿ ಸರಿಯಾದ ಸಮಯಕ್ಕೆ ಬಂದಿದ್ದರಿಂದ ನಿನಗೆ ಗುಣವಾಗಲು ಮದ್ದು ಕೊಡಲು ಸಾಧ್ಯವಾಯಿತು. ಇಲ್ಲದಿದ್ದರೆ ಈ ಗುಪ್ತ ಖಾಯಿಲೆ ದೊಡ್ಡದಾಗಿ ಪ್ರಾಣಕ್ಕೆ ಅಪಾಯ ಬರುತಿತ್ತು.

ಅದೂ ಅಲ್ಲದೆ ಗುಪ್ತ ಖಾಯಿಲೆ ಇದ್ದಾರೆ ಎಚ್ ಐ ವಿ ಬರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಎಂದು ಹೇಳಿದರು. ಈಗ ನೀವು ನಿಮ್ಮ ಗಂಡನ ಜೊತೆ ಐಸಿಟಿಸಿ ಗೆ ಹೋಗಿ ಅಲ್ಲಿ ಎಚ್ ಐ ವಿ ಮತ್ತು ಏಡ್ಸ್ ನ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಐಸಿಟಿಸಿ ಯಲ್ಲಿ ಎಚ್ ಐ ವಿ ರಕ್ತ ಪರೀಕ್ಷೆ ಮಾಡಿಸಿದ್ದರಿಂದ ತಮಗೆ ಎಚ್ ಐ ವಿ ಬಂದಿಲ್ಲ ಎಂದು ಸ್ಪಷ್ಟವಾಯಿತು. ಆದರೆ ಗಂಡನಿಗೆ ಲೈಂಗಿಕ ಕಾಯಿಲೆ ಇತ್ತು.

ಗಂಡ ಹೆಂಡತಿಯರಿಬ್ಬರೂ ದಾಕ್ತ್ರ ಹತ್ತಿರ ಗುಪ್ತ ಕಾಯಿಲೆ ಬಗ್ಗೆ ಸರಿಯಾದ ಮಾಹಿತಿ ಪಡೆದು ವೈದ್ಯರು ಹೇಳಿದ ಅವಧಿಯಲ್ಲಿ ನಂತರ ಚಿಕಿತ್ಸೆ ಪಡೆದರು.

ಡಾಕ್ಟ್ರು ಹೇಳಿದ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸುತ್ತಿದ್ದರು ಈಗ ವಿಮಲಮ್ಮ ತನ್ನ ಗಂಡನೊಂದಿಗೆ ಹಾಯಾಗಿದ್ದಾಳೆ. ಮುದ್ದಾದ ಮಗುವಿಗೂ ಕೂಡ ಜನ್ಮ ನೀಡಿದ್ದಾಳೆ. ಪರಸ್ಪರ ನಿಷ್ಠೆಯ ದಾಂಪತ್ಯದಿನ್ದಾಗಿ ಇಬ್ಬರಿಗೊ ಯಾವ ಗುಪ್ತ ಖಾಯಿಲೆಯೂ ಇಲ್ಲ, ಎಚ್ ಐ ವಿಯೂ ಇಲ್ಲ.

ಸೂಕ್ತ ಸಮಯಕ್ಕೆ ಪರೀಕ್ಷೆ ಆರೋಗ್ಯಕ್ಕೆ ರಕ್ಷಣೆ.

ಮೂಲ:ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ಇತರೆ ಸಮಿತಿಗಳ ಕೈಪಿಡಿ

3.03921568627
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top