ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರಕ್ತ ಹೀನತೆ

ರಕ್ತ ಹೀನತೆ ಕಡೆಗಣಿಸದಿರಿ, ಇದು ಅಪಾಯಕಾರಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶ ಕಡಿಮೆಯಾದರೆ ಅದನ್ನು ರಕ್ತಹೀನತೆ ಎನ್ನಲಾಗುತ್ತದೆ. ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶ ೧೨ ಮಿ.ಗ್ರಾಂ/ಡಿ.ಎಲ್ ಗಿಂತ ಕಡಿಮೆಯಿರುವುದು ಪರೀಕ್ಷೆಯಲ್ಲಿ ಕಂಡು ಬಂದರೆ ಅದನ್ನು ರಕ್ತಹೀನತೆ ಎಂದು ಹೇಳಲಾಗುತ್ತದೆ.

ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿನಾಂಶದ ಕೊರತೆ. ನಮ್ಮ ದೇಹಕ್ಕೆ ಅತ್ಯಗತ್ಯವಾದ ಕಬ್ಬಿಣಾಂಶ ನಾವು ದಿನನಿತ್ಯ ಸೇವಿಸುವ ಆಹಾರದಿಂದ ದೊರೆಯುತ್ತದೆ. ಈ ಕಬ್ಬಿನಾಂಶದ ಕೊರತೆಯಿಂದ ರಕ್ತಹೀನತೆ ಕಂಡುಬರುತ್ತದೆ. ರಕ್ತಹೀನತೆಯಿಂದ ನಿಶ್ಯಕ್ತಿ, ಸುಸ್ತು, ಜೀರ್ಣಶಕ್ತಿ ಕಡಿಮೆಯಾಗುವುದು, ಉಸಿರಾಟದಲ್ಲಿ ಕಷ್ಟವಾಗುವುದು ಕಂಡುಬರುತ್ತದೆ. ರಕ್ತಹೀನತೆ ಇರುವವರು ಬಹುಬೇಗ ಆಯಾಸದಿಂದ ಬಳಲುತ್ತಾರೆ.

ಮಕ್ಕಳು, ಹದಿಹರೆಯದವರು ಮತ್ತು ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಮಹಿಳೆಯರಲ್ಲಿ ಗರ್ಭಿಣಿಯರು ಹಾಗೂ ಬಾನಂತಿಯರಲ್ಲಿ ರಕ್ತಹೀನತೆ ಸಾಮಾನ್ಯವಾಗಿ ಕಂಡುಬರುತ್ತದೆ. ರಕ್ತಹೀನತೆಯಿದ್ದವರಿಗೆ ಕಣ್ಣಿನ ರೆಪ್ಪೆಯ ಒಳಭಾಗ, ನಾಲಿಗೆ, ತುಟಿ, ಉಗುರು, ಅಂಗೈಗಳು ಬಿಳಿಚಿಕೊಲ್ಲುತ್ತವೆ.ಇವುಗಳಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದ ಕೂಡಲೇ ರಕ್ತ ಪರೀಕ್ಷೆ ಮಾಡಿಸುವುದರಿಂದ ರಕ್ಥಹೀನತೆಯನ್ನು ಪತ್ತೆಹಚ್ಚಬಹುದು.

ಹದಿಹರೆಯದವರಿಗೆ ಉತ್ತಮ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ನೀಡಬೇಕು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ ಅತ್ಯಗತ್ಯ. ರಕ್ತಹೀನತೆಗೆ ಮುಖ್ಯ ಕಾರಣ ಕಬ್ಬಿನಾಂಶದ ಕೊರತೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು ಮುಂತಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ದೊರೆಯುತ್ತದೆ.

ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸದಿದ್ದರೆ ಕಬ್ಬಿನಾಂಶದ ಕೊರತೆಯಿಂದಾಗಿ ರಕ್ತಹೀನತೆ ಕಂಡುಬರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಲಿಂಗ ತಾರತಮ್ಯದಿಂದ ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದೇ ಇರುವುದರಿಂದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ರಕ್ತಹೀನತೆ ಕಂಡುಬರುತ್ತದೆ. ಪದೇ ಪದೇ ಗರ್ಭಪಾತ ಹಾಗೂ ಹೆಚ್ಚು ಅಂತರವಿಲ್ಲದೆ ಗರ್ಭಧರಿಸುವುದರಿಂದ ಮಹಿಳೆಯರಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಮೂಢ ನಂಬಿಕೆಗಲಿಂದಾಗಿ ಹಲವಾರು ಆಹಾರಗಳನ್ನು ಸೇವಿಸದೇ ಇರುವುದರಿಂದಲೂ ರಕ್ತಹೀನತೆ ಉಂಟಾಗುತ್ತದೆ.

ಬಯಲು ಮಲ ವಿಸರ್ಜನೆ ಹಾಗೂ ಪಾದರಕ್ಷೆಗಳಿಲ್ಲದೆ ಓಡಾಡುವುದರಿಂದ ಪಾದಗಳ ಮೂಲಕ ಕೊಕ್ಕೆಹುಳುಗಳು ದೇಹವನ್ನು ಸೇರಿ ದೇಹದ ಪೌಷ್ಟಿಕತೆಯನ್ನು ಹೀರುತ್ತವೆ. ಇದರಿಂದಾಗಿ ರಕ್ತಹೀನತೆ ಉಂಟಾಗುತ್ತದೆ.

ರಕ್ತಹೀನತೆಯ ದುಷ್ಪರಿಣಾಮಗಳು:

 • ರಕ್ತಹೀನತೆಯಿಂದ ನಿಶ್ಯಕ್ತಿ ಉಂಟಾಗಿ ಬಹುಬೇಗ ಆಯಾಸವಾಗುವುದರಿಂದ ದಿನನಿತ್ಯದ ಕೆಲಸ ಮಾಡಲೂ ಸಹ ಕಷ್ಟವಾಗುತ್ತದೆ.
 • ರಕ್ತ ಹೀನತೆಯಿದ್ದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಸುಲಭವಾಗಿ ಸೊಂಕುಗಳಿಗೆ ತುತ್ತಾಗುತ್ತಾರೆ.
 • ಮಹಿಳೆಯರಲ್ಲಿ ಗರ್ಭಪಾತ, ದಿನತುಂಬದ ಹೆರಿಗೆ ಹಾಗೂ ಹೆರಿಗೆ ಸಮಯದಲ್ಲಿ ಹೆಚ್ಚಿನ ರಕ್ತಸ್ರಾವವಾಗಿ ಸಾವು ಸಂಭವಿಸಬಹುದು.
 • ರಕ್ತಹೀನತೆಯಿಂದ ಬಳಲುವ ಗರ್ಭಿಣಿಗೆ ಜನಿಸುವ ಮಗುವಿನ ತೂಕ ಕಡಿಮೆ ಇದ್ದು, ಹುಟ್ಟುವ ಮಗುವಿಗೂ ರಕ್ತಹೀನತೆಯಾಗಬಹುದು.
 • ಮಕ್ಕಳಲ್ಲಿ ರಕ್ತಹೀನತೆಯಿಂದಾಗಿ ಅವರ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ.
 • ಬಹಳ ಬೇಗ ಆಯಾಸಗೊಳ್ಳುವುದರಿಂದ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ.
 • ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ವೇಳೆ ಅಧಿಕ ರಕ್ತಸ್ರಾವ, ತೂಕ ಕಡಿಮೆಯಾಗುವುದು ಹಾಗೂ ಬಲಹೀನತೆ ಕಾಣಿಸಿಕೊಳ್ಳುತ್ತದೆ.

ರಕ್ತಹೀನತೆ ಬರದಂತೆ ತಡೆಯುವುದು ಹೇಗೆ?

 • ಹದಿಹರೆಯದವರಿಗೆ ಉತ್ತಮ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ನೀಡಬೇಕು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ ಅತ್ಯಗತ್ಯ. ರಕ್ತಹೀನತೆಗೆ ಮುಖ್ಯ ಕಾರಣ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು ಮುಂತಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ದೊರೆಯುತ್ತದೆ.
 • ಅಗತ್ಯವೆನಿಸಿದರೆ ಕಬ್ಬಿನಾಂಶದ ಮಾತ್ರೆಗಳು ಅಥವಾ ಸಿರಪ್ ಸೇವಿಸಬೇಕು.
 • ಗರ್ಭಿಣಿಯರು ೧೦೦ ದಿನಗಳವರೆಗೆ ೧೦೦ ಮಿ.ಗ್ರಾಂ ನ ಮಾತ್ರೆಗಳನ್ನು ದಿನಕ್ಕೆರಡು ಬಾರಿ ಸೇವಿಸಬೇಕು.
 • ಯುವತಿಯರು ಈ ಮಾತ್ರೆಗಳನ್ನು ದಿನಕ್ಕೊಂದರಂತೆ ೧೦೦ ದಿನಗಳು ತೆಗೆದುಕೊಳ್ಳಬೇಕು.
 • ಮಕ್ಕಳು ೨೦ ಮಿ.ಗ್ರಾಂ.ನ  ಒಂದು ಮಾತ್ರೆ ಅಥವಾ ಸಿರಪನ್ನು ೧೦೦ ದಿನಗಳವರೆಗೆ ಸೇವಿಸಬೇಕು.
 • ಹೆಣ್ಣುಮಕ್ಕಳಿಗೆ ಸೂಕ್ತ ವಯಸ್ಸಿನ ನಂತರವೇ ಮದುವೆ ಮಾಡಬೇಕು. ಮಕ್ಕಳ ನಡುವೆ ಅಂತರವನ್ನು ಕಾಪಾಡಿಕೊಳ್ಳಬೇಕು.

ಮೂಲ:ಕುಟುಂಬ ವಾರ್ತೆ

 

2.97872340426
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top