অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲೈಂಗಿಕ ರೋಗಗಳು

ಲೈಂಗಿಕ ರೋಗ ಲಕ್ಷಣಗಳು ಪುರುಷರಲ್ಲಿ

ಮೂತ್ರನಾಳದಿಂದ ಕೀವು, ಮೂತ್ರ ಮಾಡುವಾಗ ಉರಿ, ವೃಷಣ ಬಾವು ಬರುವುದು, ತೊಡೆ ಸಂದಿಯಲ್ಲಿ ಊತ, ಶಿಶ್ನದ ತುದಿಯಲ್ಲಿ ನೋವಿರುವ / ಇಲ್ಲದಿರುವ ಒಂದು ಅಥವಾ ಹಲವು ಗುಳ್ಳೆಗಳು, ಇತ್ಯಾದಿ.

ಲೈಂಗಿಕ ರೋಗ ಲಕ್ಷಣಗಳು ಮಹಿಳೆಯರಲ್ಲಿ

ಯೋನಿಯಿಂದ ಅಸಹಜ ಸ್ರಾವ, ಕಿಬ್ಬೊಟ್ಟೆ ನೋವು, ಗರ್ಭಕೋಶದ ಕಂಠದಲ್ಲಿ, ಯೋನಿಯಲ್ಲಿ ನೋವಿರುವ / ನೋವಿಲ್ಲದಿರುವ ಒಂದು ಅಥವಾ ಹಲವು ಗುಳ್ಳೆಗಳು. ಯೋನಿ ಮೇಲಿರುವ ಗಾಯಗಳಿಂದ ಎಚ್,ಐ,ವಿ ಅಥವಾ ಎಸ,ಟಿ,ಐ ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ವೈದ್ಯರಿಂದ ಪರೀಕ್ಷೆ ಮಾಡಿಸಬೇಕು.

ಯಾವುದೇ ವ್ಯಕ್ತಿಯಲ್ಲಿ ಗುಪ್ತ ಖಾಯಿಲೆ ಬಗ್ಗೆ ಅನುಮಾನ ಬಂದರೆ ಕೂಡಲೇ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ಗಮನಕ್ಕೆ ತಂದು ಹತ್ತಿರದ ಕೇಂದ್ರದಲ್ಲಿ ತಪಾಸಣೆ ಮಾಡುವುದು ಮತ್ತು ನಿರಂತರ ಚಿಕಿತ್ಸೆ ಮಾಡಿಸುವುದು ಅತೀ ಅಗತ್ಯ. ಈ ಸೇವೆಗಳನ್ನು ನಮಗಾಗಿ ಸರಕಾರ ನೀಡಿದೆ. ಇಲ್ಲಿರುವ ಸೇವೆಗಳಿಗೆ ಯಾವುದೇ ಹಣ ನೀಡಬೇಕಾಗಿಲ್ಲ. ಗುಪ್ತ ಖಾಯಿಲೆಗಳಿಗೆ ಸಂಪೂರ್ಣವಾದ ಮತ್ತು ಸರಿಯಾದ ಚಿಕಿತ್ಸೆ ನೀಡದಿದ್ದಲ್ಲಿ ಅದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗರ್ಭಪಾತ, ಗರ್ಭಧಾರಣೆಯಲ್ಲಿ ತೊಂದರೆ, ಮಗುವಿಗೆ ಸೋಂಕು, ನಿರ್ಜೀವ ಶಿಶು ಜನನ, ಗರ್ಭ ಕಂಠದ ಕ್ಯಾನ್ಸರ್, ಹೃದಯ ಮತ್ತು ನರವ್ಯೂಹ ಸಮಸ್ಯೆಗಳು ಮತ್ತು ಎಚ್,ಐ,ವಿ ಸೋಂಕಿನ ಅಪಾಯ ಹೆಚ್ಚಾಗುತ್ತಿದೆ.

ಗುಪ್ತ ಖಾಯಿಲೆಯ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಮಾಡಿಸುವುದರಿಂದ ರೋಗದ ತೊಂದರೆಗಳನ್ನು ತಡೆಗಟ್ಟಬಹುದು. ತನಗೂ ತಮ್ಮ ಲೈಂಗಿಕ ಸಂಗಾತಿಗೂ ಅಧಿಕೃತ ಸರ್ಕಾರಿ ವೈದ್ಯರಿಂದಲೇ ಚಿಕಿತ್ಸೆ ಮಾಡಿಸುವ ಮೂಲಕ ರೋಗ ಮತ್ತೊಮ್ಮೆ ಬಾರದಂತೆ ಎಚ್ಚರವಹಿಸಬಹುದು.

ಎಚ್ ಐ ವಿ ಮತ್ತು ಏಡ್ಸ್ ಏನು, ಹೇಗೆ?

ಎಚ್ ಐ ವಿ ದೇಹದ ರೋಗ ನಿರೋಧಕ ಶಕ್ತಿಯನ್ನು ಕ್ರಮೇಣ ನಿಧಾನವಾಗಿ ನಾಶಮಾಡುವ ವೈರಸ್., ಎಚ್ ಐ ವಿ ಸೋಂಕಿನ ಹಂತದಲ್ಲಿ ಹಲವಾರು ವರ್ಷಗಳ ಕಾಲ ಮನುಷ್ಯರು ಆರೋಗ್ಯವಾಗಿಯೇ ಇರುತ್ತಾರೆ. ಈ ಹಂತದ ಪ್ರಗತಿ ಒಬ್ಬ ವ್ಯಕ್ತಿಯ ಆರೋಗ್ಯದ ಸ್ಥಿತಿಯನ್ನವಲಂಭಿಸಿರುತ್ತದೆ., ಆರೋಗ್ಯಕರ ಜೀವನ ಶೈಲಿ ಅನುಸರಿಸದಿದ್ದಲ್ಲಿ ವ್ಯಕ್ತಿಯ ದೇಹದ ರೋಗ ನಿರೋಧಕ ಶಕ್ತಿಯು ಹಂತ ಹಂತವಾಗಿ ಕುಂಟಿತಗೊಂಡು ಹಲವು ವರ್ಷಗಳ ನಂತರ ಬೇರೆ ಬೇರೆ ರೋಗಗಳಿಗೆ ಬಲಿ ಬೀಳುವ ಪರಿಸ್ಥಿತಿ ಬರಬಹುದು. ಈ ಸ್ಥಿತಿಯನ್ನು ಏಡ್ಸ್ ಹಂತ ಎನ್ನುತ್ತಾರೆ.

ಎಚ್ ಐ ವಿ ಬರದಂತೆ ನಾವೇನು ಮಾಡಬೇಕು

ವಿವಾಹದವರೆಗೆ ಬ್ರಹ್ಮಚರ್ಯ, ಏಕ ಸಂಗಾತಿಯೊಂದಿಗೆ ನಿಷ್ಠೆಯ ಲೈಂಗಿಕ ಸಂಪರ್ಕ, ಅನಿವಾರ್ಯವಾಗಿ ಇತರರ ಜೊತೆ ಲೈಂಗಿಕ ಸಂಪರ್ಕ ಮಾಡಬೇಕಾದಲ್ಲಿ ಸರಿಯಾಗಿ ಕಾಂಡೋಮ್ ಬಳಸುವುದು, ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ಪಿಪಿಟಿಸಿಟಿ ಕೇಂದ್ರದಲ್ಲಿ ಸೌಲಭ್ಯ ಪಡೆದುಕೊಳ್ಳುವುದು, ರಕ್ತ ಪಡೆಯುವುದು ಅನಿವಾರ್ಯವಾದಾಗ ಎಚ್ ಐ ವಿ ರಹಿತ ಎಂದು ಖಾತ್ರಿಪಡಿಸುವುದು. ಇತರರಿಗೆ ಬಳಸಿದ ಸೂಜಿ ಸಿರೆಂಜುಗಳನ್ನು ಬಳಕೆ ಮಾಡದಿರುವುದು.

ಎಚ್ ಐ ವಿ ಹರಡುವಿಕೆ ಬಗ್ಗೆ ತಪ್ಪು ಕಲ್ಪನೆಗಳು

ಎಚ್ ಐ ವಿ ಬಾಧಿತರ ಜೊತೆ ಒಂದೇ ಮನೆಯಲ್ಲಿರುವುದರಿಂದ, ಅವರಜೊತೆ ಹಂಚಿಕೊಂಡು ಊಟ ಮಾಡುವುದರಿಂದ, ಸೊಳ್ಳೆ ಕಚ್ಚುವುದರಿಂದ, ಬಾಧಿತರ ಮನೆಯಲ್ಲಿ ತಿಂಡಿ ತಿನ್ನುವುದರಿಂದ, ಪ್ರೀತಿಯಿಂದ ಮುದ್ದಿಸುವುದರಿಂದ, ಮೈದಡವುದರಿಂದ, ಕೈ ಕುಲುಕುವುದರಿಂದ ನೀರಿನಲ್ಲಿ ಒಟ್ಟಿಗೆ ಸ್ನಾನ ಮಾಡುದರಿಂದ ಖಂಡಿತ ಎಚ್ ಐ ವಿ ಹರಡುವುದಿಲ್ಲ.

ರಕ್ತ ಪರೀಕ್ಷೆಯಿಂದ ಮಾತ್ರ ಎಚ್ ಐ ವಿ ಸೋಂಕು ಪತ್ತೆ ಹಚ್ಚಲು ಸಾಧ್ಯ

ಇಚ್ಚಿಸಿದಲ್ಲಿ ಐ ಸಿ ಟಿ ಸಿ  ಕೇಂದ್ರಗಳಲ್ಲಿ ಗುಟ್ಟಾಗಿ, ಉಚಿತವಾಗಿ ಎಚ್ ಐ ವಿ ಪರೀಕ್ಷೆ ಮಾಡಿಸಿಕೊಳ್ಳಬಹುದು, ಎಲ್ಲಾ ಜಿಲ್ಲ/ತಾಲೋಕ್ ಆಸ್ಪತ್ರೆ ಹಾಗೂ ನಿಮ್ಮ ಊರಿನ ಹತ್ತಿರದ ಕೆಲವೊಂದು ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐ ಸಿ ಟಿ ಸಿ ಸೇವೆಗಳು ಲಭ್ಯ. ಪಿಪಿಟಿಸಿಟಿ ಸೌಲಭ್ಯಗಳು  ಐ ಸಿ ಟಿ ಸಿ ಯಲ್ಲಿದೆ.

ಎಚ್ ಐ ವಿ ಇದ್ದರೆ

ಸ್ವಯಂ ಆರೈಕೆ, ಉತ್ತಮವಾದ, ಆಹಾರ ಸೇವನೆ, ನಂತರ ವ್ಯಾಯಾಮ  ಮತ್ತು  ಸ್ವಚ್ಛತೆಯ ಕಡೆಗೆ ಗಮನ ನೀಡಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಎಚ್ ಐ ವಿ ಇದ್ದರೂ ಸಹ ದೀರ್ಘ ಕಾಲ ಆರೋಗ್ಯವಾಗಿ ಬದುಕಬಹುದು. ವೈದ್ಯರ ಸಲಹೆ ಮೇರೆಗೆ ನಿತ್ಯ ಸಮಯಕ್ಕೆ ಸರಿಯಾಗಿ ಎ.ಆರ್.ಟಿ.ಔಷಧಿಯನ್ನು ಎಚ್,ಐ,ವಿ. ಸೋಂಕಿತರು ತೆಗೆದುಕೊಳ್ಳಬಹುದಾಗಿದೆ.

ಎಲ್ಲ ಲೊಂಗಿಕ ಸಮಸ್ಯೆಗಳನ್ನು ಆರೋಗ್ಯ ಸಹಾಯಕಿಯರಲ್ಲಿ ಮುಕ್ತವಾಗಿ ಚರ್ಚಿಸೋಣ, ನಮ್ಮೂರಿನಲ್ಲಿ ಎಚ್ ಐ ವಿ ಜಾಗೃತಿ ಬಗ್ಗೆ ಕಾರ್ಯಕ್ರಮಗಳಿರುವಾಗ ಸಕ್ರಿಯವಾಗಿ ಭಾಗವಹಿಸೋಣ, ಆಕಾಶವಾಣಿ ಹಾಗೂ ಇತರ ಮಾದ್ಯಮಗಳ ಮೂಲಕ ಮೂಡಿ ಬರುವ ಕಾರ್ಯಕ್ರಮಗಳಲ್ಲಿ ದೂರವಾಣಿ ಮೂಲಕ ನಮ್ಮ ಅನುಮಾನಗಳನ್ನು ಪರಿಹರಿಸೋಣ, ಉಚಿತ ದೂರವಾಣಿ ೧೦೯೭ ಕರೆ ಮಾಡಿ ಕಾಲ ಕಾಲಕ್ಕೆ ಹೊಸ ಮಾಹಿತಿಗಳನ್ನು ಪಡೆಯೋಣ, ಎಚ್ ಐ ವಿ ಬಗ್ಗೆ ನಮಗೆ ತಿಳಿದ ಮಾಹಿತಿಯನ್ನು ಮಿತ್ರರೊಂದಿಗೆ, ನೆರೆಹೊರೆಯವರೊಡನೆ ಪರಿಚಯಸ್ಥರಿಗೆ ತಿಳಿಸಿ ಈ ಮೂಲಕ ಜಾಗೃತಿ ಮೂಡಿಸೋಣ.

ಮೂಲ: ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ಇತರೆ ಸಮಿತಿಗಳ ಕೈಪಿಡಿ.

ಕೊನೆಯ ಮಾರ್ಪಾಟು : 7/8/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate