ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಾರ್ವಜನಿಕ ಆರೋಗ್ಯ ವ್ಯವಸ್ಥೆ

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ರೋಗ್ಯ ವವಸ್ಥೆ

" ಆರೋಗ್ಯವೇ ಭಾಗ್ಯ" ಇದು ನಮ್ಮೆಲ್ಲರ ಆಶಯ. ಈ ಆಶಯ ಈಡೇರಬೇಕಾದರೆ  ಪೌಷ್ಟಿಕ ಆಹಾರ, ಶುದ್ದ ಕುಡಿಯುವ ನೀರು, ಗಾಳಿ, ಪರಿಸರ, ನಮಗೆ ಲಭ್ಯವಿರಬೇಕು. ಅನಾರೋಗ್ಯ ಉಂಟಾದಾಗ ನಮ್ಮ ಆರೋಗ್ಯ ರಕ್ಷಣೆಗಾಗಿ ಚಿಕಿತ್ಸೆ ನೀಡುವ ಸಿಬ್ಬಂದಿ , ಆಸ್ಪತ್ರೆ, ಪ್ರಯೋಗಾಲಯ ಮುಂತಾದುವುಗಳನ್ನು ನಮ್ಮ ಹಿರಿಯರು ಕಾಲ ಕಾಲಕ್ಕೆ ರೂಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ರೆಇಯಲ್ಲಿ ಮನುಷ್ಯನ ಆರೋಗ್ಯ ರಕ್ಷಣೆಗಾಗಿ ನಮ್ಮ ಸಮಾಜವೂ ರೂಪಿಸಲ್ಪಟ್ಟಿರುವ ಒಟ್ಟು ವ್ಯವಸ್ಥೆಗೆ "ಆರೋಗ್ಯ ವ್ಯವಸ್ಥೆ" ಎಂದು ಹೇಳಬಹುದು.

ಆಸ್ಪತ್ರೆ, ವೈದ್ಯರು ಹಾಗೂ ಔಷಧಿಗಳು

ಮೇಲೆ ಹೇಳಿದಂತೆ ಆಸ್ಪತ್ರೆ, ವೈದ್ಯರು ಹಾಗೂ ಔಷಧಿಗಳು ಆರೋಗ್ಯ ವವಸ್ಥೆಯ ಒಂದು ಮುಖ್ಯ ಭಾಗವಾಗಿವೆಯೇ ಹೊರತು, ಅವೇ ಸಂಪೂರ್ಣ ವ್ಯವಸ್ಥೆ ಅಲ್ಲ. ಅವುಗಳನ್ನು ನಾವು "ಆರೋಗ್ಯ ಸೇವೆಗಳು" ಎಂದು ಕರೆಯುತ್ತೇವೆ. ಆರೋಗ್ಯ ಸೇವೆಗಳು, ಮನೆ ಮದ್ದಾಗಿರಬಹುದು ಅಥವಾ ವ್ಯವಸ್ಥಿತ  ಆರೋಗ್ಯ ಪದ್ದತಿಗಳಾದ ಆಯುರ್ವೇದ, ಹೋಮಿಯೋಪತಿ, ಯುನಾನಿ, ಯೋಗ, ಅಲೋಪತಿ, ವ್ಯವಸ್ಥೆಗಳಿರಬಹುದು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆ

ಆರೋಗ್ಯ ಸೇವೆಗಳು ಸಮುದಾಯಕ್ಕೆ ಹಳ್ಳಿಯಲ್ಲಿ ನಾಟಿ ಔಷಧಿ ಮೂಲಕ, ಖಾಸಗಿ ಆಸ್ಪತ್ರೆ ಹಾಗೂ ಸರಕಾರದ ಆರೋಗ್ಯ ಕೇಂದ್ರಗಳ ಮೂಲಕ ದೊರೆಯುತ್ತಿವೆ. ಆರೋಗ್ಯ ಸೇವೆಗಳನ್ನು ಎಲ್ಲರಿಗೂ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ಖರ್ಚಿನಲ್ಲಿ ಪಡೆದುಕೊಳ್ಳಲು ಸರಕಾರ ಸ್ಥಾಪಿಸಿರುವ ವ್ಯವಸ್ಥೆಯನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎನ್ನಬಹುದು.

ಆರೋಗ್ಯ ವ್ಯವಸ್ಥೆಯನ್ನು ಸರಕಾರ ನಮಗೆ ಉಚಿತವಾಗಿ ನೀಡುತ್ತಿದೆಯಾ

ಇಲ್ಲ. ಆರೋಗ್ಯ ವ್ಯವಸ್ಥೆಯ ಎಲ್ಲಾ ಖರ್ಚು ವೆಚ್ಚವನ್ನು ಸರ್ಕಾರವು ನಾವು ಕೊಡುವ ವಿವಿಧ ರೀತಿಯ ತೆರಿಗೆಗಳಿಂದ ಭರಿಸುತ್ತಿದೆ. ನಮ್ಮ ಊರಿನಲ್ಲಿ ಬದವರಿರಲಿ, ಶ್ರೀಮಂತರಿರಲಿ, ತಮ್ಮ ದೈನಂದಿನ ಬದುಕಲ್ಲಿ ವಿವಿಧ ರೀತಿಯಲ್ಲಿ ತೆರಿಗೆ ಕಟ್ಟುತ್ತಿದ್ದಾರೆ.ಇದು ಸಾಮಾನುಗಳನ್ನು ಖರೀದಿಸುವಾಗ ಹಣದ ರೂಪದಲ್ಲಿರಬಹುದು. (ಉದಾಹರಣೆಗೆ ಸೋಪು, ಸಕ್ಕರೆ, ಉಪ್ಪು, ಖರೀದಿಸುವಾಗ ಹಾಗೂ ಮನೆ ಪಟ್ಟಿ, ಕುಡಿಯುವ ನೀರು, ಜಮೀನು ಕರ ನೀಡಿದಾಗ) ಮತ್ತು ದೇಶದ ಉನ್ನತಿಗಾಗಿ ದುಡಿತದ ರೂಪದಲ್ಲಿರಬಹುದು. (ಉದಾಹರಣೆಗೆ ಕೂಲಿ, ಹೊಲ ಉಳುಮೆ, ನೌಕರಿ). ಹೀಗೆ ನಮ್ಮಿಂದ ತೆರಿಗೆ ರೂಪದಲ್ಲಿ ಪಡೆದ ಹಣದ ಒಂದು ಭಾಗವನ್ನು ಸರಕಾರ ಆರೋಗ್ಯ ಸೇವೆಗಳನ್ನು ಒದಗಿಸಲು ಖರ್ಚು ಮಾದುತಿದೆ. ಹಾಗಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಹೆಯು ಮೇಲ್ನೋಟಕ್ಕೆ ಉಚ್ತವಾಗಿ ಕಂಡರೂ, ನಿಜ ರೂಪದಲ್ಲಿ ಅದರ ಖರ್ಚನ್ನು ಎಲ್ಲಾ ಸಾರ್ವಜನಿಕರು ಭರಿಸುತ್ತಿದ್ದಾರೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಂದರೆ ಕೇವಲ ರೋಗಿಗಳಿಗೆ ಔಷಧ ನೀಡುವ ವ್ಯವಸ್ಥೆಯೇ

ಇಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವ್ಯಾಪ್ತಿ ಇನ್ನೂ ವಿಶಾಲವಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದು ಅದರ ಹಲವಾರು ಕೆಲಸಗಳಲ್ಲಿ ಒಂದು ಕೆಲಸ. ಇದಲ್ಲದೆ ಖಾಯಿಲೆ ಬರದ ಹಾಗೆ ತಡೆಗಟ್ಟಲು ಆರೋಗ್ಯ ಶಿಕ್ಷಣ, ಗರ್ಭಿಣಿಯರಿಗೆ ಮಾಹಿತಿ, ಅಂಗನವಾಡಿ ಕೇಂದ್ರದ ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತಿದೆ. ಪುನರ್ವಸತಿಗಾಗಿ ಪೂರಕ ಸೇವೆಗಳಾದ ಅಂಗವಿಕಲರಿಗೆ ಗುಣಾತ್ಮಕ ಜೀವನ ನಡೆಸಲು ಹಾಗೂ ಪುನರ್ವಸತಿ ಕಲ್ಪಿಸಲು ಪೂರಕ ಕೆಲಸಗಳನ್ನೂ ಕೂಡ ನಿರ್ವಹಿಸುತ್ತಿದೆ.

ಈ ಆರೋಗ್ಯ ಸೇವೆಗಳನ್ನು ತಲುಪಿಸುವ ಸಲುವಾಗಿ ಸರ್ಕಾರವು ಯಾವ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ

ಮೇಲ ತಿಳಿಸಿದ ಆರೋಗ್ಯ ಸೇವೆಗಳು ವ್ಯವಸ್ಥಿತವಾಗಿ ಪ್ರತಿಯೊಬ್ಬರಿಗೂ ತಲುಪಿಸಲು ಸರಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸ್ಥಾಪಿಸಿದೆ. ಇದರ ಅಡಿಯಲ್ಲಿ ಸರಕಾರವು ಹಲವು ಮಟ್ಟದಲ್ಲಿ ಆರೋಗ್ಯ ಸೇವೆಗಳ ವ್ಯವಸ್ಥೆ ಮಾಡಿದೆ. ಉದಾ: ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ,  ರಾಷ್ರೀಯ ಆರೋಗ್ಯ ಕಾರ್ಯಕ್ರಮಗಳು, ಇತ್ಯಾದಿ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಯಾವ ಮುಖ್ಯ ತತ್ವಗಳ ಮೇಲೆ ಅವಲಂಬಿಸಿದೆ

 • ನಮ್ಮೂರಿನ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಯನ್ನು ಪಡೆಯುವ ಹಕ್ಕು ಇದೆ. ಈ ಹಕ್ಕು ಯಾವುದೇ ಜಾತಿ, ಲಿಂಗ, ಅಂತಸ್ತುಗಳ ಭೇದ ಭಾವ ಇಲ್ಲದೆ, ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ.
 • ಆರೋಗ್ಯ ಸೇವೆಗಳು ನಮ್ಮ ಹಳ್ಳಿಯಲ್ಲಿ ನಾವಿರುವ ಸ್ಥಳಕ್ಕೆ ಆದಷ್ಟು ಹತ್ತಿರವಿರಬೇಕು.
 • ಸಾರ್ವಜನಿಕ ಆರೋಗ್ಯ ಸೇವೆಯ ಯೋಜನೆ, ಸಂಘಟನೆ, ಮತ್ತು ನಿರ್ವಹಣೆಯನ್ನು ಗ್ರಾಮದ ಜನರು ತಮ್ಮದೇ ಎಂದು ತಿಳಿದು ಸಕ್ರಿಯ ಪಾತ್ರವಹಿಸಬೇಕು.
 • ಆರೋಗ್ಯ ಸೇವೆಗಳು ಉತ್ತಮ ಗುಣ ಮಟ್ಟದ್ದಾಗಿರಬೆಕು. ಹಾಗೂ ಜನರ ಅಗತ್ಯತೆಗಳನ್ನು ಪೂರೈಸುವಂತಿರಬೇಕು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಗ್ರಾಮಸ್ಥರ ಸಹಭಾಗಿತ್ವ ಯಾಕಿರಬೇಕು

 

ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ, ನಮ್ಮ ಊರಿನ ಒಟ್ಟು ಆರೋಗ್ಯ ವ್ಯವಸ್ಥೆ ಉತ್ತಮವಾಗಿರಬೇಕು. ಅದಕ್ಕಾಗಿ ಸರಕಾರ, ಅಸ್ಮುದಾಯ ಆರೋಗ್ಯ ಸೇವೆಗಳನ್ನು ಜಾರಿಗೊಳಿಸಿದೆ. ಆದರೆ ಇದು ಕೇವಲ ಸರಕಾರದ ಕೆಲಸ ಎಂದು ನಾವು  ಕೈ  ಕಟ್ಟಿ ಕುಳಿತುಕೊಳ್ಳುವಂತಿಲ್ಲ. ಎರಡು ಕೈ ಸೇರದೆ ಚಪ್ಪಾಳೆಯಾಗದು. ಅದೇ ರೀತಿ ಗ್ರಾಮಸ್ಥರ ಸಹಕಾರವಿಲ್ಲದೆ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಯಶಸ್ಸು ನಿರೀಕ್ಷಿಸಲಾಗದು. ನಮ್ಮ ಗ್ರಾಮದ ಅಗತ್ಯತೆಗಳಿಗೆ ಪೂರಕವಾಗಿ ಕ್ರಿಯಾ ಯೋಜನೆ ತಯಾರಿಸಲು ಮತ್ತು ಅದರ ಸಮರ್ಪಕ ಅನುಷ್ಠಾನದ ಬಗ್ಗೆ ನಿಗಾ ವಹಿಸಲು, ನಮ್ಮ ಗ್ರಾಮದ ಆರೋಗ್ಯ ಸಿಬ್ಬಂದಿ ಯೊಡನೆ ಹೆಗಲಿಗೆ  ಹೆಗಲು ಕೊಟ್ಟು ನಾವು ಸಹಕರಿಸಬೇಕಾಗುತ್ತದೆ. ಕೆಲವೊಮ್ಮೆ ಯೋಜನೆ ಚೆನ್ನಾಗಿ ತಯಾರಿಸಲಾಗುತ್ತದೆ, ಆದರೆ ಸರಿಯಾದ ರೀತಿ ಜಾರಿಗೊಳಿಸಲಾಗಿರುವುದಿಲ್ಲ. ಆದ್ದರಿಂದ ಇದರ ಸಾಧಕ ಬಾಧಕಗಳ ಉಸ್ತುವಾರಿಯಲ್ಲಿಯೂ ನಾವು ಸಕ್ರಿಯ ಪಾತ್ರವಹಿಸಬೇಕು. ಇದರಿಂದ ನಮ್ಮ ಗ್ರಾಮ ಮತ್ತು ಗ್ರಾಮದ ಆರೋಗ್ಯ ವ್ಯವಸ್ಥೆ ಬಗ್ಗೆ ಸರಿಯಾದ ಮಾಹಿತಿ ದೊರಕಿ ತಪ್ಪು ಕಲ್ಪನೆಗಳು ಕಡಿಮೆಯಾಗಲು ದಾರಿಯಾಗುತ್ತದೆ. ಹಾಗೂ ಉತ್ತಮ ಆರೋಗ್ಯ ಸೇವೆಗಳು ದೊರಕು ದಾರಿಯಾಗುತ್ತದೆ.

ನಮ್ಮೂರಿನ ಆರೋಗ್ಯ ವ್ಯವಸ್ಥೆ ನಮ್ಮೂರಿನ ಸ್ವತ್ತು. ಇಲ್ಲಿ ನಡೆಯುವ ಎಲ್ಲಾ ಆಗು ಹೋಗುಗಳ ಬಗ್ಗೆ ತಿಳಿಯುವ ಹಕ್ಕು ಗ್ರಾಮದ ಎಲ್ಲಾ ಜನರಿಗಿದೆ. ಇದು ಕೇವಲ ನಮ್ಮ ಹಕ್ಕಷ್ಟೇ ಅಲ್ಲ, ನಮ್ಮ ಜವಾಬ್ದಾರಿಯೂ ಹೌದು. ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳು ತಮ್ಮ ಮೇಲಧಿಕಾರಿಗಳಿಗೆ ತಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ಹೇಗೆ ಮಾಹಿತಯನ್ನು ತಿಳಿಸುತ್ತಾರೋ ಹಾಗೆಯೇ ಗ್ರಾಮಸ್ಥರಿಗೂ ತಿಳಿಸುವ ಹೊಣೆಗಾರಿಕೆ ಅವರಿಗೆ ಇದೆ. ಉದಾಹರಣೆಗೆ  ನಮ್ಮೂರಿನ ಉಪ ಕೇಂದ್ರದ ನಿರ್ವಹಣೆಗೆ ಎಷ್ಟು ಹಣ ಬಂದಿದೆ? ಅದರಲ್ಲಿ ಎಷ್ಟು ಯಾವುದಕ್ಕೆ ಖರ್ಚಾಗಿದೆ? ಅಥವಾ ಔಷಧಿಗಳು ಯಾಕೆ ಈ ದಿನ ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದಾರೆ? ಹೀಗೆ ಬೇರೆ, ಬೇರೆ ಸೇವೆಗಳ ಬಗ್ಗೆ ಮಾಹಿತಿಯನ್ನು ಕೇಳಿದಾಗ ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳು ನೀವ್ ಕೇಳಿದ ಮಾಹಿತಿಯನ್ನು ಕೊಡಲು ನಿರಾಕರಿಸುವಂತಿಲ್ಲ, ನಮಗೆ ಮಾಹಿತಿಯನ್ನು ನೀಡುವ ಗುರುತರ ಹೊಣೆಗಾರಿಕೆ ಅವರಿಗೆ ಇದೆ, ಇದು ಅವರ ಕರ್ತವ್ಯವೂ ಹೌದು. ಅದೂ ಅಲ್ಲದೆ ಪ್ರತಿಯೊಂದು ಸಾರ್ವಜನಿಕ ವ್ಯವಸ್ಥೆಯಲ್ಲಿನ ಮಾಹಿತಿಯನ್ನು ಪಡೆಯುವುದು ನಮ್ಮ ಹಕ್ಕಾಗಿದೆ. ಯಾರಾದರೂ ನೀವು ಕೇಳಿದ ಮಾಹಿತಿಯನ್ನು ಕೊಡದೆ ಇದ್ದಲ್ಲಿ ಮಾಹಿತಿ ಹಕ್ಕು ಕಾಯಿದೆ  (೨೦೦೫) ಪ್ರಕಾರ ಅರ್ಜಿ ಹಾಕಿ ಪಡೆದುಕೊಳ್ಳಬಹುದು.

ನಮ್ಮೂರಿನ ಆರೋಗ್ಯ ವ್ಯವಸ್ಥೆಯ ವಿವರಗಳನ್ನು ನಿಮಗೆ ನೇರವಾಗಿ ಕೇಳಲು ಕಷ್ಟ ಮತ್ತು ಮುಜುಗರವಾದಾಗ ಈ ಬಗ್ಗೆ ಮಾಹಿತಿ ನೀಡಲು ಯಾವುದಾದರೂ ವ್ಯವಸ್ಥೆ ಇದೆಯೇ

ಖಂಡಿತಾ ಇದೆ. ಕೆಲವೊಂದು ಮಾಹಿತಿಯನ್ನು ನಾವು ಕೇಳದೆಯೇ ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳು ಕಡ್ಡಾಯವಾಗಿ ಜನ ಸಾಮಾನ್ಯರ ಗಮನಕ್ಕೆ ತರಬೇಕು. ಅವುಗಳೆಂದರೆ

 • ನಾಗರಿಕ ಸನ್ನದು (ನಾಗರೀಕರಿಗೆನ್ಸರ್ಕಾರ ನೀಡುವ ಭರವಸೆ ಅಥವಾ ಪ್ರಮಾಣ ವಚನ),
 • ಔಷದಿಗಳ ಪಟ್ಟಿ (ಎಷ್ಟು ಔಷಧಿಗಳು ಬಂದಿದೆ ಅದರಲ್ಲಿ ಎಷ್ಟು ಖರ್ಚಾಗಿದೆ? ಎಷ್ಟು ಉಳಿದಿದೆ? ಇದರ ವಿವರಗಳಿರುವ ಪಟ್ಟಿ) ಸೇವಾ ಸೌಲಭ್ಯಗಳ ಪಟ್ಟಿ (ಕೇಂದ್ರದಲ್ಲಿ ಲಭ್ಯ ಇರುವ ಕಾರ್ಯಕ್ರಮಗಳ ವಿವರಣೆ),
 • ಶುಲ್ಕ ಪಟ್ಟಿ (ಕೆಲವೊಂದು ಸೇವೆಗಳಿಗೆ ರಸೀದಿ ಪಡೆದು ನೀಡಬೇಕಾದ ಕನಿಷ್ಠ ಹಣದ ವಿವರ). ಈ ಎಲ್ಲಾ ವಿವರಗಳ ಪಟ್ಟಿಗಳನ್ನು ಕೇಂದ್ರಗಳನ್ನು ಎಲ್ಲರಿಗೂ ಕಾಣುವಂತೆ ಸ್ಥಳೀಯ ಭಾಷೆಯಲ್ಲಿ ಹಾಕಿರಬೇಕು.
 • ನಾಗರಿಕ ಆರೋಗ್ಯ ಸನ್ನದು ಎಂದರೇನು? ಅದರಲ್ಲಿ ಏನಿರುತ್ತದೆ?

ನಾಗರಿಕ ಸನ್ನದು ಎಂದರೆ ಸರ್ಕಾರವು ಗ್ರಾಮದ ಜನರಿಗೆ ನೀಡುವ ಭರವಸೆ ಅಥವಾ ಪ್ರಮಾಣ ವಚನ. ಇದನ್ನು ಯೋಜನಾ ವಿಭಾಗ ಮಾತು ಆರೋಗ್ಯ ಮಾತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಬೆಂಗಳೂರು ಇವರಿಂದ ತಯಾರಿಸಲ್ಪಟ್ಟಿದೆ. ೨೦೦೨ ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿ (ಡಿ.ಎಚ್.ಓ ) ಗಳಿಗೆ ಕಳುಹಿಸಲಾಗಿದ್ದು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ನಾಗರೀಕರ ಸನ್ನದನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರದರ್ಶಿಸಬೇಕೆಂದು ಆರೋಗ್ಯ ಇಲಾಖೆಯು ಆದೇಶ ನೀಡಲಾಗಿದೆ. ಅದರ ನಮೂನೆಯನ್ನು ಕೆಳಗೆ ನೀಡಲಾಗಿದೆ.

ಹೇಳಿಕೆ

 • ಶುಚಿತ್ವ ಮತ್ತು ಆಸ್ಪತ್ರೆ ಪರಿಸರದಲ್ಲಿ ಒಳ್ಳೆಯ ಆರೋಗ್ಯ ಸೇವೆ
 • ಆಸ್ಪತ್ರೆಯು ಒಂದು ಕೈಲಾಸವಿದ್ದಂತೆ, ಇದನ್ನು ಸ್ವಚ್ಛವಾಗಿಡಿ.

ನಾಗರಿಕರಿಗೆ ನಮ್ಮ ಪ್ರಮಾಣಗಳು

 

 • ನಾವು ಆರೋಗ್ಯಕರ ಮತ್ತು ಸ್ವಚ್ಛ ವಾತಾವರಣವನ್ನು ಒದಗಿಸುತ್ತೇವೆ
 • ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದ ನಾಗರಿಕರಿಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ.
 • ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಉಚಿತವಾಗಿ ಕೊಡುತ್ತೇವೆ ಮತ್ತು ಔಷಧಿಗಳು ನಮ್ಮಲ್ಲಿ ಲಭ್ಯವಿರುತ್ತವೆ.
 • ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದಿನದ ಪೂರ್ತಿ ಸಮಯವನ್ನು ಆರೋಗ್ಯ ಸೇವೆಗೆ ಕೊಡಲಾಗುವುದು.
 • ನಾವು ನಮ್ಮ ಆರೋಗ್ಯ ಸೇವೆಯಲ್ಲಿ ಯಾವುದೇ ರೀತಿಯ ಭೇದ-ಭಾವ ಮಾಡುವುದಿಲ್ಲ.
 • ನಾಗರೀಕರ ಮಾಹಿತಿಗಾಗಿ ನಾವು ತೆಗೆದುಕೊಳ್ಳುವ ಶುಲ್ಕಗಳ ವಿವರಗಳನ್ನು ಸೂಚನಾ ಫಲಕದಲ್ಲಿ ಬರೆಯಲಾಗುವುದು.
 • ಸೂಚನಾಫಲಕದಲ್ಲಿ ತೋರಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವುದಿಲ್ಲ.
 • ನಿಮ್ಮಿಂದ ತೆಗೆದುಕೊಂಡ ಹಣಕ್ಕೆ ನಾವು ರಸೀದಿ ಕೊಡುತ್ತೇವೆ.
 • ನಾವು ರೋಗಿಯ ಅಭ್ಯುದಯಕ್ಕಾಗಿ ದುಡಿಯುತ್ತೇವೆ.
 • ಎಲ್ಲಾ ರೋಗಿಗಳನ್ನು ಕರುಣೆಯಿಂದ ನೋಡಿಕೊಳ್ಳುತ್ತೇವೆ.
 • ಆಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ಉಚಿತ ಸೇವೆಗಳ ವಿವರಗಳನ್ನು ಸೂಚನಾ ಫಲಕದಲ್ಲಿ ಹಾಕಲಾಗುವುದು.
 • ಕೆಲವು ನಿರ್ದಿಷ್ಟ ದಿನಗಳನ್ನು ಲಸಿಕೆಗಾಗಿ, ಹೆರಿಗೆ ಪೂರ್ವ ಸೇವ್ಗಾಗಿ ಮೀಸಲಿಟ್ಟಿರುತ್ತೇವೆ ಮತ್ತು ಬೇರೆ ಕಾರ್ಯಕ್ರಮಗಳಿಗೂ ಹೀಗೆ ದಿನಗಳನ್ನು ಮೀಸಲಿಟ್ಟಿರುತ್ತೆವೆ.
 • ದೂರು ಪೆಟ್ಟಿಗೆಯನ್ನು ನಮ್ಮ ಅಧಿಕಾರಿಗಳು ತೆರೆಯುತ್ತಾರೆ ಮತ್ತು ಪ್ರತಿ ಸೋಮವಾರದಂದು ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
 • ದೂರು ದಾಖಲಾತಿ ಪುಸ್ತಕವನ್ನು ಇಡಲಾಗಿದ್ದು. ಪ್ರತಿಯೊಂದು ದೂರನ್ನು ದಾಖಲಿಸಲಾಗುತ್ತದೆ ಹಾಗೂ ಕ್ರಮ ತೆಗೆದುಕೊಳ್ಳಲಾಗುತ್ತದೆ, ಮತ್ತು ನಾಗರೀಕರು ಇದನ್ನು ಪರಿಶೀಲಿಸಬಹುದು.
 • ತುರ್ತು ದೂರುಗಳನ್ನು ಎಲ್ಲಾ ದಿನಗಳಲ್ಲಿಯೂ ಆಡಳಿತಾಧಿಕಾರಿಗಳಿಗೆ ಸಲ್ಲಿಸಬಹುದು. ನಿಮಗೆ ನ್ಯಾಯ ಸಿಗಲಿಲ್ಲವಾದಲ್ಲಿ ನೀವು ಮೇಲ್ಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು. ಹಿರಿಯ ಅಧಿಕಾರಿ, ಡಿ.ಎಚ್.ಓ. ಅಥವಾ ಜಿಲ್ಲಾ ಚಿಕಿತ್ಸಾಕಾಧಾರಿ. ಅವರ ದೂರವಾಣಿ ಸಂಖ್ಯೆಗಳು.
 • ದಯಮಾಡಿ ಆಸ್ಪತ್ರೆಯ ಆವರಣ ಮತ್ತು ಒಳಗಡೆ ಧೂಮಪಾನ ಮಾಡಬೇಡಿ ಮತ್ತು ಮದ್ಯಪಾನ ಮಾಡಿ ಬರಬೇಡಿ.
 • ಇದು ನಮ್ಮ ಆಸ್ಪತ್ರೆ, ಇದನ್ನು ಹಾಲು ಮಾಡಬೇಡಿ.
 • ರೋಗಿಗಳಿಗೆ ತೊಂದರೆ ಕೊಡಬೇಡಿ ಮತ್ತು ಶಾಂತತೆಯನ್ನು ಕಾಪಾಡಿ
 • ಆಸ್ಪತ್ರೆಯ ಸಿಬ್ಬಂದಿಗೆ ಲಂಚವನ್ನು ನೀಡಬೇಡಿ. ಅವರ ಸೇವೆಗಾಗಿ ಸರ್ಕಾರವು ಸಂಬಳವನ್ನು ನೀಡುತ್ತದೆ.
 • ಆಸ್ಪತ್ರೆಗೆ ಏನನ್ನಾದರೂ ಕೊಡಬೇಕೆಂದು ನಿಮಗೆ ಅನಿಸಿದರೆ ಅದನ್ನು ದೇಣಿಗೆ ಪೆಟ್ಟಿಗೆಯಲ್ಲಿ  ಹಾಕಿ.

ಮೂಲ:ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ಇತರೆ ಸಮಿತಿಗಳ ಕೈಪಿಡಿ.

3.0824742268
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top