ಇಂದು ಹೆಣ್ಣು ಶಿಶು ಹತ್ಯೆಯು ಭಾರತದಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ. ಇತ್ತೀಚಿಗೆ ಅಲ್ಟ್ರಾ ಸೌಂಡ್ ಡಯಗ್ನೊಸ್ಟಿಕ್ ವಿಧಾನಗಳಂಥ ನವೀನ ತಾಂತ್ರಿಕತೆಯ ಬೆಳವಣಿಗೆಯಿಂದಾಗಿ ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವಾಗಲೆ ಅದರ ಲಿಂಗ ಪತ್ತೆ ಹಚ್ಚುವ ಸಾಧ್ಯತೆಗಳು ಕೈಗೊಂಡಿರುವುದರ ಪರಿಣಾಮವಾಗಿ ಹೆಣ್ಣು ಭ್ರೂಣ ಹತ್ಯೆಗೆ ರಾಜ ಮಾರ್ಗ ತೆರೆದಂತಾಗಿದೆ. ಹೆಣ್ಣು ಶಿಶು ಹತ್ಯೆ ಮತ್ತು ಭ್ರೂಣ ಹತ್ಯೆಗಳಂಥ ಕರಾಳ ಕ್ರಮಗಳಿಗೆ ಕಾರಣವೇನೆಂದರೆ, ನಮ್ಮ ಸಮಾಜದ ಬಹುಭಾಗದಲ್ಲಿ ಗಂಡು ಮಗುವಿಗೆ ಪ್ರಾಶಸ್ತ್ಯ ನೀಡುವ ಆಲೋಚನೆ ತುಂಬಾ ಆಳವಾಗಿ ಬೇರು ಬಿಟ್ಟಿರುವುದು. ಇಂದು ಕಾಣಿಸಿಕೊಂಡಿರುವ ಕೆಲವು ಆರ್ಥಿಕ ಮತ್ತು ಸಾಮಾಜಿಕ ಪ್ರಚಲಿತ ಪ್ರಕ್ರಿಯೆಗಳ ಪರಿಣಾಮವಾಗಿ ಸಮಾಜದಲ್ಲಿ ಗಂಡು ಮಗುವಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ
ನಮ್ಮ ಜನಸಂಖ್ಯೆಯಲ್ಲಿ ಕಾಣಬರುತ್ತಿರುವ ಹೆಣ್ಣು-ಗಂಡಿನ ಅನುಪಾತದಲ್ಲಿರುವ ವ್ಯತ್ಯಾಸ ಹೆಣ್ಣು ಶಿಶು ಹತ್ಯೆಯ ನೇರ ಪರಿಣಾಮವೆಂಬುವುದೆನೊ ಸ್ಪಷ್ಟವೇ ಇದೆ. ಹೆಣ್ಣು ಶಿಶು ಹತ್ಯೆಗಿಂತಲೂ ಹೆಣ್ಣು ಭ್ರೂಣ ಹತ್ಯೆಯ ಪರಿಣಾಮವಾಗಿ ೧೯೯೧ ಮತ್ತು ೨೦೦೧ ರ ನಡುವಿನ ಅವಧಿಯಲ್ಲಿ ಶೂನ್ಯದಿಂದ ಆರು ವರ್ಷ ವಯೋಮಾನದ ಹೆಣ್ಣು ಗಂಡಿನ ಅನುಪಾತ ದಿನದಿಂದ ದಿನಕ್ಕೆ ದಾರುಣಾವಸ್ಥೆಗೆ ತಲುಪುತ್ತಿದೆ.
ಲಿಂಗ ತಾರತಮ್ಯದ ಧೋರಣೆಯನ್ನು ಅನುಸರಿಸಿಕೊಂಡು ಬರುತ್ತಿರುವುದರ ಪರಿಣಾಮವಾಗಿಯೇ ಭಾರತದ ಜನಸಂಖ್ಯೆಯಲ್ಲಿ ೫೦ ಮಿಲಿಯನಗಳಷ್ಟು ಹುಡುಗಿಯರು ಮತ್ತು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಯುನಿಸೆಫ್ ವರದಿ ಮಾಡಿದೆ.
ಭಾರತದಲ್ಲಿ ಪ್ರತಿ ವರ್ಷ ಹುಟ್ಟುವ ೧೨ ಮಿಲಿಯನ್ ಬಾಲಕಿಯರಲ್ಲಿ ಸುಮಾರು ಒಂದೊವರೆ ಮಿಲಿಯನ್ ಗಿಂತಲೂ ಹೆಚ್ಚು ಬಾಲಕಿಯರು ಒಂದು ವರ್ಷದ ಒಳಗೇ ಅಸುನೀಗುತ್ತಿದ್ದಾರೆ. ಅಂದರೆ ಶೇಕಡಾ ೧೨.೨ ರಷ್ಟು ಹೆಣ್ಣು ಮಕ್ಕಳು ತಮ್ಮ ಮೊದಲನೇ ಜನ್ಮ ದಿನೋತ್ಸವವನ್ನು ಆಚರಿಸುವ ಮುಂಚೆಯೇ ಮಣ್ಣು ಸೇರಿರುತ್ತಾರೆ. ಕೇವಲ ೯ ಮಿಲಿಯನ್ ಹೆಣ್ಣು ಮಕ್ಕಳು ಮಾತ್ರ ತಮ್ಮ ೧೫ ನೇ ಜನ್ಮ ದಿನೋತ್ಸವವನ್ನು ಆಚರಿಸಿಕೊಳ್ಳುವಷ್ಟು ಸುದೈವಿಗಳಾಗಿರುತ್ತಾರೆ.
ಶಿಶುಗಳು ಮತ್ತು ಮಕ್ಕಳು: ಒಟ್ಟು ಸಂಖ್ಯೆ.- ೧೫.೮೦ ಕೋಟಿ
ಗಂಡು ಶಿಶು ಮತ್ತು ಮಕ್ಕಳು - ೮.೨೦ ಕೋಟಿ
ಹೆಣ್ಣು ಶಿಶುಗಳು ಮತ್ತು ಮಕ್ಕಳು -೭.೬೦ ಕೋಟಿ
ಕಡಿಮೆಯಿರುವ ಹೆಣ್ಣು ಶಿಶುಗಳು ಮತ್ತು ಬಾಲಕಿಯರು-೬೦.೦೦ ಲಕ್ಷ
ಮೂಲ: ಭಾರತದ ಜನಗಣತಿ ೨೦೦೧.
" ಹೆಣ್ಣು ಭ್ರೂಣ ಹತ್ಯೆಗೆ ನೇರ ಮತ್ತು ಮುಖ್ಯ ಕಾರಣವೆಂದರೆ, ಹೆಣ್ಣು ಮಗುವನ್ನು ಕುಟುಂಬದಲ್ಲಿ ಒಂದು ಸಾಮಾಜಿಕ ಹೊರೆಯೆಂದೇ ಪರಿಗಣಿಸಲಾಗುತ್ತಿದೆ. ವರದಕ್ಷಿಣೆ, ಕುಟುಂಬದ ಮರ್ಯಾದೆ, ಅವಳನ್ನು ಮದುವೆ ಮಾಡಿಕೊಡುವ ದೊಡ್ಡ ತಾಪತ್ರಯ ಮುಂತಾದ ಸಂಗತಿಗಳು ಕುಟುಂಬದ ಹಿರಿಯರನ್ನು ಸದಾ ಕಾಡುತ್ತವೆ. ಒಟ್ಟಿನಲ್ಲಿ ಹೆಣ್ಣು ಮಗುವೆ ಬೇಡ ಎಂಬ ತೀರ್ಮಾನಕ್ಕೆ ಬರುತ್ತಾರೆ". ಕುಟುಂಬದಲ್ಲಿ ಒಂದು ಗಂಡು ಮಗು ಜನಿಸಿದರೆ ಅದು ಸುದೈವದ ಸಂಕೀತವೆಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹೆಣ್ಣು ಮಗು ಹುಟ್ಟಿದಂದಿನಿಂದ ದುರ್ದೈವದ ಸಂಕೇತವೆನಿಸುತ್ತದೆ.
ಹೌದು!ಇದೇ ಅದುವೇ
ಪಿ.ಸಿ ಮತ್ತು ಪಿ ಏನ್ ಡಿ ಟಿ ಕಾಯ್ದೆ - ೧೯೯೪
ಈ ಕಾಯ್ದೆಯು ಗರ್ಭಪೂರ್ವ ಮತ್ತು ಪ್ರಸವ ಪೂರ್ವದಲ್ ಲಿಂಗ ಪತ್ತೆ ಮಾಡುವುದನ್ನು ನಿಷೇಧಿಸುತ್ತದೆ. ಪ್ರಸವ ಪೂರ್ವದಲ್ಲಿ ಆರೋಗ್ಯದ ಕಾರಣಗಳಿಗೆ ಅಂದರೆ ವರ್ಣತಂತುಗಳ ವೈಪರೀತ್ಯಗಳು (ಕ್ರೋಮೊಸೋಮಲ್ ಅಬ್ನಾರ್ಮಲಿಟೇಸ್), ಅಥವಾ ಇನ್ನಿತರ ಆರೋಗ್ಯ ಸಂಬಂಧಿ ವೈಪರೀತ್ಯಗಳು (ಅಬ್ನಾರ್ಮಲಿಟೇಸ್) ಅಥವಾ ಮೆಟಾಬಾಲಿಕ್ ಡಿಸ್ಆರ್ಡರ್ ಅಥವಾ ಕೆಲವು ಆಜನ್ಮ ನ್ಯೂನತೆ (congential malformaton ) ಅಥವಾ ಲಿಂಗ ಸಂಬಂಧಿ ವೈಪರೀತ್ಯಗಳಿಗಾಗಿ (sex linked dis-order) ಈ ಪರೀಕ್ಷೆಯನ್ನು ಸಿನ್ಧುಗೊಳಿಸುತ್ತದೆ ಮತ್ತು ಹೆಣ್ಣು ಭ್ರುನದ ಹತ್ಯೆಗೆ ಕಾರಣವಾಗುವ ಲಿಂಗ ನಿರ್ಧರಣೆಯ ದುರ್ಬಳಕೆಯನ್ನು ತಡೆಗಟ್ಟುತ್ತದೆ.
ಇತ್ತೀಚಿನ ದಿನಗಳಲ್ಲಿ ಲಿಂಗ ನಿರ್ಧರಣೆ ಮಾಡುವ (ಗರ್ಭ ಪೂರ್ವ ಮತ್ತು ನಂತರದಲ್ಲಿ ) ತಂತ್ರಜ್ಞಾನವು ಸಾಕಷ್ಟು ಮುಂದುವರೆದಿರುವ ಕಾರಣದಿಂದ ಪರಿಣಾಮಕಾರಿ ಅನುಷ್ಠಾನಕ್ಕೆ ತೊಡಕಾಗುತ್ತಿದ್ದ ಕಾರಣದಿಂದ ಮೂಲ ಕಾಯ್ದೆ ಮತ್ತು ನಿಯಮಾವಳಿಗಳಿಗೆ ತಿದ್ದುಪಡಿ ತಂದು ಪ್ರಸ್ತುತ ಈ ಕಾಯ್ದೆಯನ್ನು "ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ತಂತ್ರ ದುರ್ಬಳಕೆ ತಡೆ ಕಾಯ್ದೆ" [The Pre-conception and Pre -natal diagnostic Techniques (Prohibition of Sex Selection ) Act "] ಎಂದು ಕರೆಯಲಾಗುತ್ತಿದ್ದು, ತಿದ್ದುಪಡಿಗೊಂಡ ನಿಯಮಾವಳಿಗಳು ೨೦೦೩ ರ ಫೆಬ್ರವರಿ ೧೪ ರಿಂದ ಜಾರಿಗೆ ಬಂದಿವೆ.
ಕೆಳಕಂಡ ಸಂದರ್ಭದಲ್ಲಿ ಪ್ರಸವ ಪೂರ್ವ ಪರೀಕ್ಷೆಯನ್ನು ಮಾಡಲೇಬೇಕಾದ ಸಂದರ್ಭ ಬಂದಾಗ ಈ ಪರೀಕ್ಷೆಗೆ ಒಳಗಾಗುವ ವ್ಯಕ್ತಿಯ / ರೋಗಿಯ ಪೂರ್ವಾರ್ಹತೆಯ ಬಗ್ಗೆ ತೃಪ್ತಿಯಾದರೆ, ಪರೀಕ್ಷೆಗೆ ಒಳಪಡಿಸಬೇಕಾದ ಕಾರಣಗಳನ್ನು ಲಿಖಿತವಾಗಿ ದಾಖಲಿಸಿ ಪರೀಕ್ಷೆ ಮಾಡಬೇಕು
ಯಾವುದೇ ವ್ಯಕ್ತಿಯು ಕಾಯ್ದೆಯ ಆಶಯಗಳಿಗೆ ವಿರುದ್ದವಾಗಿ ನಡೆದುಕೊಂಡ ಸಂದರ್ಭದಲ್ಲಿ ಕೆಳಕಂಡಂತೆ ಶಿಕ್ಷೆಗೆ ಗುರಿಯಾಗುತ್ತಾನೆ.
ಮತ್ತೆ ಇದೇ ಅಪರಾಧ ಪುನರಾವರ್ತನೆಯಾದರೆ
ವಿನಾಯಿತಿಗೊಳಪಟ್ಟ ಪರಿಸ್ತಿತಿಯನ್ನು ಹೊರತುಪಡಿಸಿ ಯಾವುದೇ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಅಥವಾ ಗರ್ಭಿಣಿಯು ಲಿಂಗಪತ್ತೆ ಪರೀಕ್ಷೆ ಅಥವಾ ಪ್ರಸವಪೂರ್ವ ಪರೀಕ್ಷೆಗೆ ಒತ್ತಾಯಿಸಿದಲ್ಲಿ ಕೆಳಕಂಡಂತೆ ಶಿಕ್ಷೆಗೆ ಗುರಿಯಾಗುತ್ತಾರೆ.
ಮತ್ತೆ ಇದೇ ಅಪರಾಧ ಪುನರಾವರ್ತನೆಯಾದರೆ
ನೊಂದಾಯಿತ ವೈದ್ಯಕೀಯ ವೃತ್ತಿ ಪರರು ಆಶಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ, ಇವರ ಹೆಸರನ್ನು ಸಕ್ಷಮ ಪ್ರಾಧಿಕಾರಿಯು ಸೂಕ್ತ ಕ್ರಮಕ್ಕೆ ರಾಜ್ಯ ವೈದ್ಯಕೀಯ ಮಂಡಳಿಗೆ ವರದಿ ಸಲ್ಲಿಸುವುದು.
ಚಿವುಟದಿರಿ, ಈ ಮುದ್ದು ಚಿಗುರ
ಬನ್ನಿ ಸೋದರ, ಸೋದರಿಯರೇ ಈ ದುಷ್ಟ ಪದ್ದತಿಯನ್ನು ತೊಲಗಿಸುವತ್ತ ನಾವೆಲ್ಲಾ ಕಟಿಬದ್ದರಾಗೋಣ.
ಮೂಲ: ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ಇತರೆ ಸಮಿತಿಗಳ ಕೈಪಿಡಿ.
ಕೊನೆಯ ಮಾರ್ಪಾಟು : 6/26/2020
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಗರ್ಭಧಾರಣೆ ಎನ್ನುವುದು ಮಹಿಳೆಯ ಜೀವನದಲ್ಲೂ ಮಹತ್ವದ ಬದಲಾವಣ...
ಗರ್ಭಿಣಿಯಲ್ಲಿ ಸೋಂಕುರೋಗಗಳು ಹರಡುವ ಬಗೆ,ಮಗುವಿಗಿರುವ ಅಪಾಯ...
ಹೈಡ್ರಾಮ್ನಿಯಾಸ್ ಎಂಬುದು ಗರ್ಭಿಣಿಯಾಗಿದ್ದಾಗ ಅತಿ ಹೆಚ್ಚು...