অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಮ್ಮ ನಾಡು ನಮ್ಮ ಹೆಮ್ಮೆ - ಈ ಹೊತ್ತಿಗೊಂದು ಹೊತ್ತಗೆ

ನಮ್ಮ ನಾಡು ನಮ್ಮ ಹೆಮ್ಮೆ - ಈ ಹೊತ್ತಿಗೊಂದು ಹೊತ್ತಗೆ

ಹೀಗೆ ಒಂದು ಸಂಸ್ಥೆಲಿ ಕನ್ನಡ ರಾಜ್ಯೋತ್ಸವ ಸಲುವಾಗಿ ಆಯೋಜಿಸುವ ಕನ್ನಡ ಕಾರ್ಯಕ್ರಮಗಳ ಆಚರಣೆಯ ಬಗ್ಗೆ ಸಭೆ ಕರೆದಿದ್ದರು. ಕಡೆಗೆ ಎಲ್ಲರ ಒಪ್ಪಿಗೆಯಂತೆ ಕಾರ್ಯಕ್ರಮದ ಜವಾಬ್ದಾರಿಗಳನ್ನು ಹಾಗೂ ಕಾರ್ಯಕ್ರಮದ ಪಟ್ಟಿಯನ್ನು ಸಿಡ್ಡಪಡಿಸಲಾಯಿತು. ಆದರೆ ಕಾರ್ಯಕ್ರಮ ನಡೆಸುವ ಆ ವೇದಿಕೆಗೆ  ಎಂದಿನಂತೆ ಏನು ಹೆಸರು ಇಡಬೇಕು ಅಂತ ಅಲ್ಲಿ ನೆರೆದಿದ್ದವರೆಲ್ಲರನ್ನು ಕೇಳಲಾಯಿತು. ಅಲ್ಲಿದ್ದ ಒಬ್ಬೊಬ್ಬರೆಲ್ಲ ತಮ್ಮ ತಮ್ಮ ಅಭಿಪ್ರಾಯವನ್ನು  ಸೂಚಿಸಿದರು. ಆಗ ಅಲ್ಲೊಬ್ಬರು ಶ್ರೀ ಕೃಷ್ಣದೇವರಾಯನ  ಹೆಸರನ್ನು ಇಡೋಣ ಎಂದು ಸೂಚಿಸಿದರು. ತಕ್ಷಣ ಅಲ್ಲೇ ಇದ್ದ ಕನ್ನಡ ಕುಲಪುರೋಹಿತರೊಬ್ಬರು ಅವನು ಆಂಧ್ರದವನು, ಕನ್ನಡಿಗನಲ್ಲ ಅವನು ಕನ್ನಡಕ್ಕೆ ಏನೂ ಕೊಡುಗೆ ನೀಡಿಲ್ಲ  ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆಗ ಅಲ್ಲಿದ್ದವರೆಲ್ಲರೂ ಹೆಚ್ಚು ಮಾತನಾಡದೇ ಇದ್ದರೂ ಇರಬಹುದು ಎಂದು ಕೃಷ್ಣದೇವರಾಯನ ಹೆಸರನ್ನು ಆಂಧ್ರಕ್ಕೆ ತಳ್ಳಿ ಆ ವೇದಿಕೆಗೆ ಮತ್ತೊಬ್ಬ ಅರಸನ ಹೆಸರಿಟ್ಟರು. ಆಮೇಲೆ ಯಾರು ಹೋಗಿ ಇತಿಹಾಸವನ್ನು ಪರೀಕ್ಷಿಸುವ ಗೋಜಿಗೆ ಹೋಗಲಿಲ್ಲ ಹಾಗಾಗಿ ಅಲ್ಲಿಗೆ ಅದು ಮುಕ್ತಾಯವಾಯಿತು . ಹೀಗೆ ನಮಗೆ ಕನ್ನಡದ ಬಗ್ಗೆ ಸರಿಯಾದ ಅರಿವಿಲ್ಲದಿದ್ದರೆ  ಒಬ್ಬೊಬ್ಬ ರಾಜ ಮಹಾರಾಜರನ್ನು , ಕನ್ನಡ ತನವನ್ನು ಬೇರೆಯವರಿಗೆ ಧಾರಳವಾಗಿ ಕೊಟ್ಟುಬಿಡುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಕನ್ನಡತನದ ಬಗ್ಗೆ ಕನ್ನಡಿಗನೆನಿಸಿಕೊಳ್ಳುವವನಿಗೆ ಕನಿಷ್ಠ ಮಟ್ಟದ ಕನ್ನಡ ಇತಿಹಾಸದ ಬಗ್ಗೆ ಅರಿವಿರಲೇಬೇಕು. ಕರ್ನಾಟಕ ಹಾಗೂ ಕನ್ನಡತನದ ಬಗ್ಗೆ ಅರಿವಿನ ಅಗತ್ಯ ನಮ್ಮೆಲ್ಲರಿಗಿದೆ ಹಾಗಾಗಿ  ಇಂದಿನ ನಮ್ಮ ಹೊತ್ತಿಗೊಂದು ಹೊತ್ತಗೆಯಲ್ಲಿ ನಾವು ಪರಿಚಯಿಸುತ್ತಿರುವ ಹೊತ್ತಗೆ ಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರು ಬರೆದಿರುವ ' ಕರ್ನಾಟಕ ಗತವೈಭವ '

ಅಂದರೆ ಈ ಹೊತ್ತಗೆ ಕೇವಲ ವೈಭವವನ್ನು ಸಾರುವುದಕ್ಕೆ ಸೀಮಿತವಲ್ಲ, ಸತ್ತಂತಿಹ ಕನ್ನಡಿಗರೆಲ್ಲರನ್ನು  ಬಡಿದು ಎಚ್ಚರಿಸಿ , ಕಚ್ಚಾಡುವವರನು ಕೂಡಿಸಿ ಒಲಿಸುವಂತೆ ಮಾಡುತ್ತದೆ. ನಾಡು ನುಡಿಯ ಬಗ್ಗೆ ತನ್ನ ಅರಿವನ್ನು ಮೂಡಿಸುತ್ತದೆ.ಕನ್ನಡಿಗರಿಗೆ ತಮ್ಮ ಅಂತರಂಗದ ಕಣ್ಣನ್ನು ತೆರೆಸಿನೋಡುವಂತೆ ಮಾಡಿ, ನಾಡಿನ ಬಗ್ಗೆ ಅಭಿಮಾನ ಮೂಡಿಸುತ್ತದೆ ಎಂದರೇ ತಪ್ಪಾಗಲಾರದು. ' ಕರ್ನಾಟಕ ಗತವೈಭವ 'ವನ್ನು ಅರಿತರೆ ನಾವು ಎಂದಿಗೂ ಬೇರೆ ಭಾಷೆಯ ಮೋಹಕ್ಕೆ ಒಳಗಾಗದೆ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂದು ನಮ್ಮ ಮಾತೆಯನ್ನು ನಾವು ಪ್ರೀತಿ ಮಾಡಿ ಅನ್ಯ ಮಾತೆಯರನ್ನು ಗೌರವಿಸುವ ಗುಣವನ್ನು ಹೇಳಿಕೊಡುತ್ತದೆ.

' ಕರ್ನಾಟಕ ಗತವೈಭವ ' ಆಲೂರು ವೆಂಕಟರಾಯರು ಕರ್ನಾಟಕ ಮೃತರಾಷ್ಟ್ರವೇ , ಈ ಮೃತವಾದ ಕರ್ನಾಟಕದಿಂದೇನು ಎಂದು ಕನ್ನಡಿಗರ ಅಂತ್ಕರಣವನ್ನು ಪ್ರಶ್ನಿಸುವುದರಿಂದ ಹೊತ್ತಗೆಯನ್ನು ಆರಂಭಿಸುತ್ತಾರೆ. ಕರ್ನಾಟಕದ ವಿಸ್ತಾರದ  ಬಗ್ಗೆ ವಿವರಿಸುತ್ತಾ ಕನ್ನಡ ನಾಡಿನ ಸೀಮೆಯನ್ನು ಗುರುತಿಸುತ್ತಾರೆ. ಕನ್ನಡ ನಾಡನ್ನು ಆಳಿದ ಮಹಾರಾಜರನ್ನು ಕರ್ನಾಟಕದ ವಿಭೂತಿಗಳೆಂದು, ಅವರ ಸಾರವನ್ನು ಸಾರುವ ಲಿಪಿ,ಶಾಸನ , ಶಿಲ್ಪಾ ಕಲೆ , ಸಾಹಿತ್ಯವನ್ನು ಸಾಧನ ಸಾಮಗ್ರಿಯಲ್ಲಿ ವಿವರಿಸುತ್ತಾರೆ. ಕನ್ನಡ ನಾಡನ್ನು ಆಳಿದ ಕದಂಬ,   ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು , ರಾಷ್ಟ್ರಕೂಟರು,  ಕಲಚೂರ್ಯ-ಯಾದವ , ವಿಜಯನಗರ ಅರಸರ ವೈಭವವನ್ನು ವಂಶಾವಳಿಯ ಇತಿಹಾಸವನ್ನು ನಮ್ಮ ಮುಂದೆ ನೀಡುತ್ತಾರೆ. ಕರ್ನಾಟಕದ ವೈಭವ, ಕರ್ನಾಟಕದ ಕಟ್ಟಡಗಳು , ವಾಗ್ಮೆಯ ವೈಭವ ದೊಂದಿಗೆ ' ಕರ್ನಾಟಕ ಗತವೈಭವ 'ದ ಉಪಸಂಹಾರದೊಂದಿಗೆ ಮುಕ್ತಾಯ ಮಾಡಿ ಕನ್ನಡಿಗರನ್ನು ಕನ್ನಡ ಪರ ಹೋರಾಟಕ್ಕೆ ಸಜ್ಜುಗೊಳಿಸುತ್ತಾರೆ ಎಂದರೇ ತಪ್ಪಾಗಲಾರದು.

ಆತ್ಮೀಯರೇ , ಆಲೂರು ವೆಂಕಟರಾಯರ ' ಕರ್ನಾಟಕ ಗತವೈಭವ ' ಹೊತ್ತಗೆಯನ್ನು ನೀವು ಇಂದೇ ಖರೀದಿಸಿ, ಓದಿ ಮತ್ತೆ ಬೇರೆಯರವರ ಮುಂದೆ ವಾಚಿಸಿ. ಹಾಗಾಗಿ ಇದಕ್ಕಿಂತ ಉತ್ತಮವಾದ ಕನ್ನಡ ಕೆಲಸ ಇಲ್ಲ ಅಂತ ಭಾವನೆ ನನ್ನದು.

- ಜೈ ಕರ್ನಾಟಕ

ಕೊಡುಗೆದಾರರು : ಮಧು ಚಂದ್ರ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate