ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಹು ಜಾಣ್ಮೆಯ ತತ್ವ

ಬಹು ಜಾಣ್ಮೆಯು ಹೊವಾರ್ಡ್‌ ಗಾರ್ಡಿನರನ, ಜನರ ಮತ್ತು ಅವರ ವಿಭಿನ್ನ ರೀತಿಯ ಜಾಣ್ಮೆ ( ತರ್ಕಬದ್ದತೆ, ದೃಷ್ಟಿ, ಸಂಗೀತ, ಇತ್ಯಾದಿ) ಗಳ ಬಗೆಗಿನ ಮನಶಾಸ್ತ್ರದ ತತ್ವ. ಪ್ರತಿ ಮಾನವನಲ್ಲೂ ಏಳು ರೀತಿ ಯ ಜಾಣ್ಮೆಗಳಿರುತ್ತವೆ.

ಬಹು ಜಾಣ್ಮೆಯು  ಹೊವಾರ್ಡ್‌ ಗಾರ್ಡಿನರನ, ಜನರ ಮತ್ತು ಅವರ ವಿಭಿನ್ನ ರೀತಿಯ ಜಾಣ್ಮೆ ( ತರ್ಕಬದ್ದತೆ, ದೃಷ್ಟಿ, ಸಂಗೀತ, ಇತ್ಯಾದಿ) ಗಳ ಬಗೆಗಿನ ಮನಶಾಸ್ತ್ರದ ತತ್ವ. ಪ್ರತಿ ಮಾನವನಲ್ಲೂ ಏಳು ರೀತಿ ಯ ಜಾಣ್ಮೆಗಳಿರುತ್ತವೆ.  ಪ್ರತಿ  ವ್ಯಕ್ತಿಯಲ್ಲಿ ಎರಡೋ , ಮೂರೋ ಪ್ರಧಾನ ಜಾಣ್ಮೆಗಳಿರಬಹುದು ಕೆಲವರಿಗೆ ಏಳೂ ಸಮತೋಲಿತ ಜಾಣ್ಮೆಗಳಿರಬಹುದು.

ಹೊವಾರ್ಡ್‌ ಗಾರ್ಡ್ನರ್ ನು  ಪ್ರಪ್ರಥಮವಾಗಿ ಏಳೂ ಜಾಣ್ಮೆಗಳ ಪಟ್ಟಿ ತಯಾರಿಸಿದನು. ಅವನ ಪಟ್ಟಿಯು ತಾತ್ಕಾಲಿಕವಾಗಿತ್ತು. ಮೊದಲ ಎರಡಕ್ಕೆ ಸಾಮನ್ಯವಾಗಿ ಶಾಲೆಗಳಲ್ಲಿ ಬಹಳ ಬೆಲೆ. ಮುಂದಿನ ಮೂರು ಸಾಧಾರಣವಾಗಿ ಕಲಾಪ್ರಪಂಚಕ್ಕೆ ಸಂಬಂಧಿಸಿದವು: ಕೊನೆಯ ಮೂರನ್ನು  ಹೊವಾರ್ಡ್‌ ಗಾರ್ಡ್ನರ್ ನು ವೈಯುಕ್ತಿಕ ಜಾಣ್ಮೆ ಎಂದು ಹೆಸರಿಸಿದ.

ಬಹು ಜಾಣ್ಮೆಯ ವಿಧಗಳು ಯಾವು?

ದೃಶ್ಯ ಪ್ರಾದೇಶಿಕ ಜಾಣ್ಮೆ

ದೃಶ್ಯವನ್ನು ಗ್ರಹಿಸುವ ಸಾಮರ್ಥ್ಯ. ಈ ರೀತಿಯ ಕಲಿಯುವವರು ದೃಶ್ಯಾವಳಿಗಳ ಮೂಲಕ ಯೋಚಿಸುತ್ತಾರೆ. ಏನನ್ನಾದರೂ ಕಲಿಯಬೇಕಾದರೆ ಅವರು ಅದರ ವಿವರವಾದ ಚಿತ್ರವನ್ನು ಮನೋ ಪ್ರತಿಬಿಂಬವಾಗಿಸಿ ಕೊಂಡಾಗ ಮಾತ್ರ ನೆನಪಿಡಲು ಸಾಧ್ಯ. ಅವರು, ನಕಾಶೆ, ಗ್ರಾಫ್, ಚಿತ್ರಗಳು, ವಿಡಿಯೋ ಮತ್ತು ಚಲನಚಿತ್ರ (ಮೂವೀಸ್) ಗಳನ್ನು ನೋಡುವಲ್ಲಿ ಬಹಳ ಸಂತೋಷ ಅನುಭವಿಸುವರು.

ಅವರಲ್ಲಿ ಕೆಳಗಿನ ಕೌಶಲ್ಯಗಳಿವೆ:

ಒಗಟುಗಳ ರಚನೆ, ಓದು, ಬರಹ, ಚಾರ್ಟ್ಗಳನ್ನು, ಗ್ರಾಫ್ ಗಳನ್ನು ಅರ್ಥೈಸುವುದು, ದಿಕ್ಕುಗಳನ್ನು ಗುರುತಿಸುವ ಉತ್ತಮ ಸಾಮರ್ಥ್ಯ, ಚಿತ್ರರಚನೆ , ದೃಶ್ಯ ರೂಪಕಗಳ ರಚನೆ, ಹೋಲಿಕೆ (ದೃಶ್ಯಕಲೆಯ ಮೂಲಕ), ನಿರ್ಮಾಣ, ದುರಸ್ತಿ, ದೈನಂದಿನ ಬಳಕೆ ವಸ್ತುಗಳ ವಿನ್ಯಾಸ, ದೃಶ್ಯ ಬಿಂಬಗಳ ವಾಖ್ಯೆ.

ಸಂಭವನೀಯ ವೃತ್ತಿ ಆಸಕ್ತಿಗಳು

ಸಾಗರಯಾನಿ, ಶಿಲ್ಪಿ, ದೃಶ್ಯ ಕಲಾಕಾರ, ಸಂಶೋಧಕ, ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕಾರ, ಮೆಕ್ಯಾನಿಕ್, ಇಂಜೀನಿಯರ್

ಶಾಬ್ದಿಕ ಭಾಷಾ ಜಾಣ್ಮೆ

ಪದಗಳನ್ನು ಮತ್ತು ಭಾಷೆಯನ್ನು ಬಳಸುವ ಸಾಮರ್ಥ್ಯ. ಈ ವಿಭಾಗದ ಕಲಿಯುವವರು ಉತ್ತಮ ಕೇಳುವ ಕೌಶಲ್ಯ ಹೊಂದಿರುವರು ಮತ್ತು ಸಾಧಾರಣವಾಗಿ ಒಳ್ಳೆಯ ಮಾತುಗಾರರು. ಅವರು ಚಿತ್ರಕ್ಕಿಂತ ಹೆಚ್ಚಾಗಿ ಪದಗಳಲ್ಲೆ ಯೋಚಿಸುವರು.

ಅವರಲ್ಲಿ ಕೆಳಗಿನ ಕೌಶಲ್ಯಗಳಿವೆ :

ಕೇಳುವುದು, ಮಾತನಾಡುವುದು, ಬರೆಯುವುದು, ಕಥೆ ಹೇಳುವುದು, ನೆನಪಿಸಿ ಕೊಳ್ಳುವುದು, ಹಾಸ್ಯ ಮಯವಾಗಿರುವುದು ಪದಗಳ ರಚನೆ ಮತ್ತು ಅರ್ಥ ಅರಿಯುವುದು, ಮಾಹಿತಿಯನ್ನು ನೆನಪಿಡುವುದು, ಯಾರನ್ನಾದರೂ ತಮ್ಮ ಅಭಿಪ್ರಾಯ ಒಪ್ಪುವಂತೆ ಮಾಡುವುದು ಭಾಷೆಯಬಳಕೆಯನ್ನು ವಿಶ್ಲೇಷಿಸುವುದು .

ಸಂಭವನೀಯ ವೃತ್ತಿ ಆಸಕ್ತಿಗಳು:

ಕವಿ, ಪತ್ರಕರ್ತ, ಬರಹಗಾರ, ಶಿಕ್ಷಕ, ವಕೀಲ, ರಾಜಕಾರಣಿ, ಅನುವಾದಕ

ತಾರ್ಕಿಕ / ಗಣಿತ ಜಾಣ್ಮೆ

ಆಧಾರವನ್ನು ಅರಿಯುವ ಸಾಮರ್ಥ್ಯ, ತರ್ಕ ಮತ್ತು ಸಂಖ್ಯೆಗಳು. ಈ ಗುಂಪಿನಲ್ಲಿನ ಕಲಿಯುವವರು ಅಮೂರ್ತವಾಗಿ ಯೋಚಿಸಬಲ್ಲರು.   ತಾರ್ಕಿಕವಾಗಿ ಮತ್ತು ಮಾಹಿತಿ ತುಣಕುಗಳ ಸಂಖ್ಯಾವಿನ್ಯಾಸವನ್ನು ಗುರುತಿಸಬಲ್ಲರು. ತಮ್ಮ ಸುತ್ತಲಿನ ವಿಶ್ವದ ಬಗ್ಗೆ ಸದಾ ಕುತೂಹಲಿಗಳಾಗಿರುವರು. ಇವರು ತುಂಬ ಪ್ರಶ್ನೆಗಳನ್ನು ಕೇಳುವರು ಮತ್ತು  ಪ್ರಯೋಗದಲ್ಲಿ ಆಸಕ್ತರಾಗಿರುವುರು.

ಅವರಲ್ಲಿ ಕೆಳಗಿನ ಕೌಶಲ್ಯಗಳಿವೆ:

ಸಮಸ್ಯೆಗಳ ಪರಿಹಾರ, ಮಾಹಿತಿಯ ವರ್ಗೀಕರಣ ಮತ್ತು ಅಮೂರ್ತವಾದ  ಚಿಂತನೆಗಳ ನಡುವಣ ಸಂಬಂಧವನ್ನು ಅರಿಯುವುದು, ದೀರ್ಘವಾದ ಆಲೋಚನಾಸರಣಿಗಳನ್ನು ನಿಭಾಯಿಸಿ ಸ್ಥಳಿಯ ವಿದ್ಯಾಮಾನಕ್ಕೆ ಅನ್ವಯ, ನಿಯಂತ್ರಿತ ಪ್ರಯೋಗ ಮಾಡುವುದು, ಪ್ರಶ್ನಿಸುವುದು, ನೈಸರ್ಗಿಕ ಘಟನೆಗಳ ಬಗ್ಗೆ ಅಚ್ಚರಿ, ಸಂಕೀರ್ಣ ಗಣಿತದ ಲೆಕ್ಕಾಚಾರ ಮಾಡುವುದು, ಜ್ಯಾಮಿತಿಯ ಆಕೃತಿಗಳೋಂದಿಗೆ ಕೆಲಸ ಮಾಡುವುದು.
ಸಂಭವನೀಯ ವೃತ್ತಿ ಮಾರ್ಗ:ವಿಜ್ಞಾನಿಗಳು, ಇಂಜೀನಿಯರ್ ಗಳು, ಕಾಂಪ್ಯೂಟರ್ ಪ್ರೊಗ್ರಾಮರ್ ಗಳು, ಅಕೌಂಟೆಂಟ್,ಸಂಶೋಧಕರು, ಗಣಿತತಜ್ಞರು.

 

ದೈಹಿಕ ಸರಾಗ ಚಲನೆಯ ಜಾಣ್ಮೆ

ಸಂಗೀತವನ್ನು ನಿರ್ಮಿಸುವ ಮತ್ತು ಮೆಚ್ಚುವ ಸಾಮರ್ಥ್ಯ. ಸಂಗೀತದಲ್ಲಿ ಒಲವಿರವ ಇವರು ಧ್ವನಿ, ಲಯ ಮತ್ತು ವಿನ್ಯಾಸಗಳ ಮೂಲಕ ಚಿಂತನೆ ನೆಡಸುವರು. ಅವರು ಸಂಗೀತ ಕೇಳಿದ  ತಕ್ಷಣ ಮೆಚ್ಚುವ  ಇಲ್ಲವೆ ಟೀಕಿಸುವ ಮೂಲಕ ಪ್ರತಿಕ್ರಿಯಿಸುವರು. ಅವರಲ್ಲಿ ಬಹುಜನ ಪರಿಸರದ ಧ್ವನಿಗಳಿಗೆ ತುಂಬಾ ಸಂವೇದಿಯಾಗಿರುವುರು (ಉದಾ :ಕೀಟಗಳ ದ್ವನಿ, ಗಂಟೆ ಸದ್ದು, ತೊಟ್ಟಿಕ್ಕುವ ನೀರು)

ಅವರಲ್ಲಿ ಕೆಳಗಿನ ಕೌಶಲ್ಯಗಳಿವೆ

ಹಾಡುಗಾರಿಕೆ, ಶಿಳ್ಳುಹಾಕುವುದು, ಸಂಗೀತ ಉಪಕರಣಗಳನ್ನು  ನುಡಿಸುವುದು, ಸಂಗೀತ  ಸಂಯೋಜನೆ, ಧ್ವನಿ ವಿನ್ಯಾಸ ಗಳನ್ನು  ಗುರುತಿಸುವುದು, ದಾಟಿ ನೆನಪಿಡುವುದು,  ಸಂಗೀತದ ಲಯ ಮತ್ತು ರಚನೆ  ಅರ್ಥ ಮಾಡಿಕೊಳ್ಳುವುದು.
ಸಂಭವನೀಯ ವೃತ್ತಿ ಮಾರ್ಗಗಳು
ಸಂಗೀತಕಾರರು, ಡಿಸ್ಕ್ ಜಾಕಿ,ಹಾಡುಗಾರ, ಸಂಯೋಜಕರು

 

ವ್ಯಕ್ತಿಗಳ ನಡುವಿನ ಜಾಣ್ಮೆ

ಇತರರೊಂದಿಗೆ ಸಂಬಂಧ ಬೆಳಸುವ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ, ಇತರರ ಬಾವನೆ ಮತ್ತು ಚಿಂತನೆ ಅರಿಯಲು ಸಮಸ್ಯೆಯನ್ನು ಅವರ ದೃಷ್ಟಿ ಕೋನದಿಂದ ಪರಿಶೀಲಿಸುವ ಸಾಮರ್ಥ್ಯ, ಅವರಿಗೆ ಇತರರ ಭಾವನೆ, ಉದ್ದೇಶ ಮತ್ತು ಪ್ರೇರಣೆ  ಅರಿಯುವ ವಿಚಿತ್ರ ಸಾಮರ್ಥ್ಯ ವಿರುವುದು.  ಅವರು ಕೆಲವು ಸಲ ಉತ್ತಮ ಸಂಘಟಕರು, ಕೈವಶ ಮಾಡಿಕೊಳ್ಳುವರು ಸಾಧಾರಣವಾಗಿ ಅವರು ಗುಂಪಿನಲ್ಲಿ ಶಾಂತಿ ಸಹಕಾರ ಬಯಸುವರು.ಅವರು  ಇನ್ನೊಬ್ಬರೊಡನೆ ಸಂವಹನ ನೆಡೆಸಲು ಮಾತಿನ ಮತ್ತು ಶಾರೀರಿಕ ಭಾಷೆ (ಕಣ್ಣು, ಸನ್ನೆ, ಇತ್ಯಾದಿ ) ಎರಡನ್ನೂ ಬಳಸಬಲ್ಲರು

ಅವರಲ್ಲಿ ಕೆಳಗಿನ ಕೌಶಲ್ಯಗಳಿವೆ

ಯಾವುದನ್ನಾದರೂ ಇತರರ ದೃಷ್ಟಿಕೋನದಿಂದ ನೋಡುವುದು, ಕೇಳುವುದು. ಅನುಭೂತಿಯ ಉಪಯೋಗ, ಇತರರ ಲಹರಿ ಮತ್ತು ಭಾವನೆ ಅರಿಯುವುದು, ಆಪ್ತ ಸಲಹೆ ಗುಂಪಿನಲ್ಲಿ ಸಹಕಾರ, ಜನರ ಲಹರಿಯನ್ನು ಗುರುತಿಸುವುದು, ಪ್ರೇರಣೆ ಪಡೆಯುವುದು, ಉದ್ದೇಶ, ಶಾಬ್ದಿಕವಾಗಿ ಮತ್ತು ಶಾರೀರಿಕವಾಗಿ ಸಂವಹನ ನೆಡೆಸುವುದು,  ವಿಶ್ವಾಸ ವರ್ಧನೆ, ಶಾಂತಿಯಿಂದ ಸಂಘರ್ಷಗಳ ಪರಿಹಾರ , ಇತರರೊಡನೆ ಸಕಾರತ್ಮಕ ಸಂಬಂಧಗಳ ಸ್ಥಾಪನೆ.

ಸಂಭವನೀಯ ವೃತ್ತಿ ಮಾರ್ಗಗಳು

ಮಾರಾಟಗಾರರು,ರಾಜಕಾರಣಿಗಳು, ಉದ್ಯಮಿಗಳು

ವ್ಯಕ್ತಿಯೊಳಗಿನ ಜಾಣ್ಮೆ

ಆತ್ಮಾವಲೋಕನ ಸಾಮರ್ಥ್ಯ  ಮತ್ತು  ಅಂತರಾಳದ ಭಾವನೆಯ ಅರಿವು, ಕಲಿಯುವವರು  ತಮ್ಮೊಳಗಿನ ಭಾವನೆ, ಕನಸು, ಇತರರೊಡಗಿನ ಸಂಬಂಧ , ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿಯುವವರು.

ಅವರಲ್ಲಿ ಕೆಳಗಿನ ಕೌಶಲ್ಯಗಳಿವೆ

ತಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಳ್ಳುವುದು, ತಾವೆ ಪರ್ಯಾಲೋಚಿಸಿ ವಿಶ್ಲೇಷಣೆ ಮಾಡಿಕೊಳ್ಳುವುದು, ತಮ್ಮಲ್ಲಿನ ಭಾವನೆಗಳ, ಆಸೆಗಳ ಮತ್ತು ಕನಸುಗಳ  ಅರಿವು, ತಮ್ಮ ಯೋಚನಾ ವಿಧಾನದ ಮೌಲ್ಯಮಾಪನ,  ತಮ್ಮಲ್ಲೆ ಚಿಂತನೆ ಮಾಡುವುದು,ಇತರರ ಜೊತೆಗಿನ ಸಂಬಂಧದಲ್ಲಿ ತಮ್ಮ ಪಾತ್ರವನ್ನು ತಿಳಿದಿಕೊಳ್ಳುವುದು.

ಸಂಭವನೀಯ ವೃತ್ತಿ ಮಾರ್ಗಗಳು

ಸಂಶೋಧಕರು, ತತ್ವಜ್ಞರು, ತತ್ವಜ್ಞಾನಿಗಳು

ಇನ್ನೂ ಹೆಚ್ಚಿ ಜಾಣ್ಮೆಗಳಿವೆಯಾ?

ಹಾವಾರ್ಡ ಗಾರ್ಡ್ನರ್ ರನು ಜಾಣ್ಮೆಯ ಮೂಲಪಟ್ಟಿ, ಇಂಟೆಲಿಜೆನ್ಸ ಇನ್ ಫ್ರೇಮ್ಸ ಅಫ್ ಮೈಂಡ್ (1983)   ಮಾಡಿದ ನಂತರ ಅದರಲ್ಲಿ ಸೇರಿಸ ಬಹುದಾದವುಗಳ  (ತೆಗೆಯ ಬಹುದಾದ) ಬಗ್ಗೆ ಬಹಳ ಚರ್ಚೆಯಾಗಿದೆ   ನಂತರ ಹಾವಾರ್ಡ ಗಾರ್ಡ್ನರ್ ರನು ಮತ್ತು ಅವನ ಸಹೋದ್ಯೋಗಿಗಳು ಮಾಡಿದ ಸಂಶೋಧನೆ ಮತ್ತು ವಿಚಾರವಿಮರ್ಶೆಯ ಫಲವಾಗಿ ಇನ್ನೂ ಮೂರು ನಿರ್ದಿಷ್ಟ ಸಾಧ್ಯತೆ ಕಂಡಿತು: ನೈಸರ್ಗಿಕ ಜಾಣ್ಮೆ, ಆಧ್ಯಾತ್ಮಿಕ ಜಾಣ್ಮೆ ಮತ್ತು ಆಸ್ತಿತ್ವದ ಜಾಣ್ಮೆ  .
ನೈಸರ್ಗಿಕ ಜಾಣ್ಮೆ, ಯು ಪರಿಸರದ ಕೆಲ ಆಂಶಗಳ ಮೂಲಕ ಮಾನವರನ್ನು ಗುರ್ತಿಸಲು, ವರ್ಗೀಕರಿಸಲು ಸಾಧ್ಯವಾಯಿತು. ಅದು ಮೂಲ ಸಾಮರ್ಥ್ಯದ ವಿವರಣೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಪಾತ್ರದ ವಿಶೇಷ ಸಾಮರ್ಥ್ಯ ಸೇರಿರುತ್ತದೆ

ಶಿಕ್ಷಣದ ಉಪಯೋಗ

ಸಾಂಪ್ರದಾಯಿಕವಾಗಿ ಶಾಲೆಗಳು ತಾರ್ಕಿಕ ಜಾಣ್ಮೆ ಮತ್ತು ಭಾಷಾ ಜಾಣ್ಮೆಗಳಿಗೆ (ಮುಖ್ಯವಾಗಿ ಓದು ಮತ್ತು ಬರಹ) ಹೆಚ್ಚು ಒತ್ತು ನೀಡುತ್ತವೆ, ಬಹಳ ವಿದ್ಯಾರ್ಥಿಗಳು ಈ ಪರಿಸರದಲ್ಲಿ  ಚೆನ್ನಾಗಿ ಕಾರ್ಯ ನಿರ್ವಹಿಸುವರು ಕೆಲವರು ಅದಕ್ಕೆ ಅಪವಾದವಾಗಿದ್ದಾರೆ. ಗಾರ್ಡ್ನರ್ ರನ ತತ್ವದ  ಪ್ರಕಾರ ವಿದ್ಯಾರ್ಥಿಗಳು ವಿಶಾಲ ದೃಷ್ಟಿಯ ಶಿಕ್ಷಣದಿಂದ ಹೆಚ್ಚು ಉಪಯೋಗ ಪಡೆಯುತ್ತಾರೆ. ಅದರಲ್ಲಿ ಶಿಕ್ಷಕರು ಬೇರೆ ಬೇರೆ ವಿಧಾನಗಳನ್ನು ಬಳಸಿ, ಅಭ್ಯಾಸಗಳನ್ನು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಲು ಯತ್ನಿಸುತ್ತಾರೆ.  ಬರಿ ಬಾಷೆ ಮತ್ತು ತಾರ್ಕಿಕ ಜಾಣ್ಮೆ ಮಾತ್ರವಲ್ಲದೆ ಇತರ ಜಾಣ್ಮೆ ಇರುವವರು ಕೂಡಾ ಲಾಭ ಪಡೆಯಬಹುದು.
ಬಹು ಜಾಣ್ಮೆಯ ತತ್ವದ ಅನ್ವಯವು ಬಹು ವಿಭಿನ್ನವಾಗಿದೆ. ಇದು ಶಿಕ್ಷಕನು, ಸಮಸ್ಯೆಯಿರುವ ಮಗುವನ್ನು ನಿಭಾಯಿಸುವುದರಿಂದ ಹಿಡಿದು, ಬೋಧನೆ ಮಾಡಲು ವಿವಿಧ ವಿಧಾನ ಬಳಸುವನು. ಪೂರ್ಣ ಶಾಲೆಯೇ ಬಹುಜಾಣ್ಮೆಯ ಚೌಕಟ್ಟಿನಲ್ಲಿ ಬೋಧಿಸಿದರೆ ತುಂಬ ಅನುಕೂಲವಿದೆ. ಒಟ್ಟಿನಲ್ಲಿ ಬಹು ಜಾಣ್ಮೆ ತತ್ವಾಧಾರಿತ ಬೋಧನೆಯು ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ಮತ್ತು ಅವರಲ್ಲಿನ ನೈಸರ್ಗಿಕವಾಗಿರುವ ಕೆಲವು ಜಾಣ್ಮೆಗಳು ಮಾತ್ರವಲ್ಲದೆ ವಿವಿಧ ಜಾಣ್ಮೆಗಳನ್ನು ಅಭಿವೃದ್ಧಿ ಪಡಿಸುವುದು.    .
ಹಾವರ್ಡನು41 ಶಾಲೆಗಳಲ್ಲಿ ನೆಡಸಿದ ತತ್ವಾಧಾರಿತ ಅಧ್ಯಯನವು ಪೂರ್ಣಗೊಂಡಿದೆ ಈ ಶಾಲೆಗಳಲ್ಲಿ ಕಠಿನ ಪರಿಶ್ರಮದ, ಗೌರವ, ಕಳಕಳಿಯ ಸಂಸ್ಕೃತಿ ಇದೆ, ಶಿಕ್ಷಕರು ಪರಸ್ಪರ ಸಹಯೋಗದಲ್ಲಿ  ಕಲಿಯುವರು. ತರಗತಿಗಳಲ್ಲಿ ನಿಯಂತ್ರಿತ ಆದರೆ ಅರ್ಥವತ್ತಾದ ಆಯ್ಕೆಗೆ ಅವಕಾಶನೀಡಿ ವಿದ್ಯಾರ್ಥಿಗಳನ್ನು ನಿಭಾಯಿಸುವರು ವಿದ್ಯಾರ್ಥಿಗಳನ್ನು ಅತ್ಯುತ್ತಮ ಗುಣಮಟ್ಟದ ಕೆಲಸಮಾಡಲು ಸಿದ್ಧ ಗೊಳಿಸಲಾಗುವುದು.

ಬಹು ಜಾಣ್ಮೆಯ ನನ್ನ ತತ್ವಗಳ ಬಳಕೆಮಾಡುವುದರಿಂದ ಶಾಲೆಗೆ ಏನು ಉಪಯೋಗ?

 • ನೀವು ನಿಖರ  ಕಲಿಕೆ ಆಧಾರಿತ ಅವಕಾಶಗಳನ್ನು ಮಕ್ಕಳ ಅಗತ್ಯ, ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣ ವಾಗಿ ಒದಗಿಸಬಹುದು.  ಬಹು ಜಾಣ್ಮೆಯ ತರಗತಿಗಳು ನೈಜವಾದ ಜಗತ್ತಿನಂತೆ  ವರ್ತಿಸುವುದು; ಪುಸ್ತಕದ ಲೇಖಕರು ಮತ್ತು ಚಿತ್ರಕಾರರು ನಿಜವಾಗಿಯೂ ಬಹು ಮುಖ್ಯವಾದ ಪಾತ್ರವಹಿಸುತ್ತಾರೆ. ವಿದ್ಯಾರ್ಥಿಗಳು ತುಂಬ ಚುರುಕಾಗಿ, ಕಲಿಯುವಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ
 • ತಾಯಿತಂದೆಯರ ಮತ್ತು ಸಮುದಾಯದ  ತೊಡಗಿಸಿಕೊಳ್ಳುವಿಕೆಯು ಸಹಾ ಹೆಚ್ಚಾಗಬಹುದು.ಇದರಿಂದ ವಿದ್ಯಾರ್ಥಿಗಳು ತಮ್ಮ ಕೆಲಸದ ಪ್ರಾತ್ಯಕ್ಷಿಕೆಯನ್ನು ಸಮಿತಿಯ ಮತ್ತು ಪ್ರೇಕ್ಷಕರ ಮುಂದೆ ನೀಡುವರು.  ಶಿಕ್ಷಣದ ಜೊತೆ ಕೆಲಸಕಲಿಯುವ ಚಟುವಟಿಕೆಗಳು ಸಮುದಾಯದ ಸದಸ್ಯರನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು  ಪ್ರದರ್ಶಿಸುವರು ಮತ್ತು ಹಂಚಿಕೊಳ್ಳುವರು. ಸಾಮರ್ಥ್ಯದ ನಿರ್ಮಾಣವು ವಿದ್ಯಾರ್ಥಿಗೆ “ಪರಿಣಿತ” ನಾಗಲು ಪ್ರೇರಣೆ ನೀಡುವುದು. ಇದರಿಂದ ಆತ್ಮ ಗೌರವ ಹೆಚ್ಚುವುದು.
 • ನೀವು"ಅರ್ಥ ಮಾಡಿಕೊಳ್ಳಲು” ಎಳಸಿದಾಗ ನಿಮ್ಮ ವಿದ್ಯಾರ್ಥಿಗಳು ಸಕಾರಾತ್ಮಕ ಶೈಕ್ಷಣಿಕ ಅನುಭವಗಳನ್ನು ಮತ್ತು ಸಾಮರ್ಥ್ಯವನ್ನು ಬಳಸಿ  ಜೀವನದ ಸಮಸ್ಯೆಗಳಿಗೆ ಪರಿಹಾರ ಪಡೆಯುವ ಸಾಮರ್ಥ್ಯ  ಹೆಚ್ಚಿಸಿಕೊಳ್ಳುವರು.
 • ನಾನು ಬಹು ಜಾಣ್ಮೆತತ್ವ ಬಳಸಿ ನನ್ನ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಬಹುದೇ?

  ವಿದ್ಯಾರ್ಥಿಗಳು ತಾವು  ಹೇಗೆ ಜಾಣರು ಎಂಬುದನ್ನು ಅರ್ಥ ಮಾಡಿಕೊಳ್ಳುವರು, ಗಾರ್ಡ್ನರ್ ನ ಅಭಿಪ್ರಾಯದಂತೆ  ವಿದ್ಯಾರ್ಥಿಗಳು ತಮ್ಮ ಬಹು ಜಾಣ್ಮೆಯ ಅರಿವು ಪಡೆದಾಗಲೇ  ಕೆಳಕಂಡ ಗುಣಗಳು ಹೊರಹೊಮ್ಮುತ್ತವೆ-

  • ತಮ್ಮ ಕಲಿಕೆಯನ್ನು ತಾವೆ ನಿರ್ವಹಿಸುವರು
  • ವೈಯುಕ್ತಿಕ ಸಾಮರ್ಥ್ಯ ಗೌರವಿಸುವರು

  ಶಿಕ್ಷಕರು ಮಕ್ಕಳು ಜಾಣರು ಎಂದು ಅರಿತಿರುತ್ತಾರೆ,  ಎಷ್ಟು ಜಾಣರು ಎಂಬುದನ್ನೂ ತಿಳಿದಿರುತ್ತಾರೆ. ಯಾವ ವಿದ್ಯಾರ್ಥಿಗೆ ವ್ಯಕ್ತಿಗತ ಪರಸ್ಪರ ಸಂಬಂಧಗಳ ಬೆಳವಣಿಗೆಯ ಅವಕಾಶವಿದೆ ಎಂಬುದನ್ನು ಅರಿತು, ಎಲ್ಲಿ ಈ ಸಾಮರ್ಥ್ಯವನ್ನು ಇತರಲ್ಲಿಯೂ ಅಭಿವೃದ್ಧಿ ಪಡಿಸಲು ಸಾಧ್ಯವೋ ಅಲ್ಲಿ ಸೂಕ್ತ ಅವಕಾಶಗಳನ್ನು ಕಲ್ಪಿಸುವರು. ಹಾಗಾದರೂ ಬಹು ಜಾಣ್ಮೆಯ ತತ್ವವು ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳಿಗೆ ಐ.ಕ್ಯೂ -ನಂತಹ ಹೊಸ ಲೇಬಲ್ ನೀಡಲಾಗುವುದಿಲ್ಲ.
  ವಿದ್ಯಾರ್ಥಿಗಳು ಸಮಸ್ಯೆಯನ್ನು ವಿವಿಧ ಕೋನಗಳಿಂದ ಪರಿಹರಿಸಲು ಯತ್ನಿಸುತ್ತಾರೆ.  ಮರಳು ಎಂದರೇನು ? ಎಂಬ ಸಮಸ್ಯೆಯು ವೈಜ್ಞಾನಿಕ, ಕಾವ್ಯಾತ್ಮಕ, ಕಲಾತ್ಮಕ, ಸಂಗೀತಮಯ, ಮತ್ತು ಭೌಗೋಳಿಕವಾಗಿ ಅರಿಯಲು  ವಿಭಿನ್ನ ಪ್ರವೇಶ ದ್ವಾರಗಳನ್ನು ಹೊಂದಿದೆ.

ಮೂಲ: ಪೋರ್ಟಲ್ ತಂಡ

2.95192307692
nagaraj May 12, 2016 03:42 PM

ಬಹು ಜಾಣ್ಮೆಯ ತತ್ವ ಎಲ್ಲರಿಗು ಬೇಕು

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top