ಭಾರತದ ಇತಿಹಾಸ ತಿಳಿಯಲಿರುವ ಆಧಾರಗಳು
- ಜುನಾಗಡ್ ಶಾಸನದ ಕರ್ತು- ರುದ್ರದಾಮ
- ಉತ್ತರ ಮೆರೂರು ಶಾಸನದ ಕರ್ತು- ಪರಾಂತರ ಚೋಳ
- ಅಲಹಾಬಾದ್ ಸ್ತಂಭ ಶಾಸನದ ಕರ್ತು- ಸಮುದ್ರ ಗುಪ್ತ
- ಐಹೊಳೆ ಶಾಸನದ ಕರ್ತು-ರವಿವರ್ಮ
- ಅಶ್ವ ಮೇಧ ಎಂಬ ನಾಣ್ಯವನ್ನು ಜಾರಿಗೆ ತಂದವನು - ಸಮುದ್ರ ಗುಪ್ತ
- ಭಾರತದ ಹಾಗೂ ಇರಾನ್ ನಡುವಿನ ಸಂಬಂಧದ ಕುರಿತು ತಿಳಿಸುವ
- ಹೆರಡೋಟಸ್ ನ ಕೃತಿ-Historia.
- ಇರಾನ್ ನ ಪ್ರಾಚೀನ ಹೆಸರು- ಪರ್ಶಿಯಾ.
- ಮೆಗಾಸ್ತನಿಸ್ ಈ ಆಸ್ಥಾನದ ರಾಜಧೂತ - ಚಂದ್ರಗುಪ್ತಮೌರ್ಯ.
- ಇಂಡಿಕಾ ಕೃತಿಯ ಕರ್ತು- ಮೆಗಾಸ್ತನೀಸ್.
- principle of the Exithrian Seen ಕೃತಿಯ ಕರ್ತು- ಗ್ರೀಕ್ ದೇಶದವನು.
- The geography ಕೃತಿಯ ಕರ್ತು-ಟಾಲೆಮಿ.
ಗ್ರೀಕರ ಬರವಣಿಗೆಗಳು
- ಹೆರಡೋಟಸ್ - Historia
- ಅಲೆಗ್ಸಾಂಡರನ ಭಾರತ ಆಕ್ರಮಣದ ವಿವರಗಳು
- ಇಂಡಿಕಾ ಕೃತಿಯ ಕರ್ತು-ಮೆಗಾಸ್ತಲೀಸ್.
- ಮೌರ್ಯರ ಆಡಳಿತ ಬಗೆಗೆ ಬೆಳಕು ಚೆಲ್ಲುವ ಗ್ರಂಥ - ಇಂಡಿಕಾ
ಭಾರತದ ಇತಿಹಾಸದಲ್ಲಿ ಭೂಗೋಳ
ಭಾರತದ ಇತಿಹಾಸ ಪರಿಚಯ
- ಭೂಗೋಳದಲ್ಲಿ ಭಾರತದ ಸ್ಥಾನ.
- ಉತ್ತರ ಗೋಳಾರ್ಧ ಉತ್ತರ ಅಕ್ಷಾಂಶ 8 ಡಿಗ್ರಿ ಯಿಂದ 37 ಡಿಗ್ರಿವರೆಗೆ
- ಪೂರ್ವ ರೇಖಾಂಶ 70 ಡಿಗ್ರಿ ಯಿಂದ 93 ಡಿಗ್ರಿ ವರೆಗೆ ಹೊಂದಿದೆ.
ಭಾರತದ ವಿವಿಧ ಹೆಸರುಗಳು.
- ಭರತ ವರ್ಷ, ಭರತ ಖಂಡ, ಜಂಬೂದ್ವೀಪ, ಇಂಡಿಯಾ ಹಾಗೂ ಹಿಂದೂಸ್ಥಾನ್.
ಭಾರತದ ಪ್ರಮುಖ ಗಡಿಗಳು
- ಉತ್ತರದಲ್ಲಿ ಹಿಮಾಲಯ ಪರ್ವತ
- ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ ಹಿಂದೂ ಮಹಾಸಾಗರ
- ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ
- ಪಶ್ಚಿಮದಲ್ಲಿ ಪಾಕಿಸ್ತಾನ ಹಾಗೂ ಅರಬ್ಬೀ ಸಮುದ್ರ
ಭಾರತದ ಇತಿಹಾಸದ ಕಾಲಮಾನಗಳು
- ಇತಿಹಾಸದ ಪೂರ್ವಯುಗ (ಕ್ರಿ.ಪೂ.20000-5000)
- ಪ್ರಾಚೀನ ಯುಗ(ಕ್ರಿ.ಪೂ 600 ರಿಂದ ಕ್ರಿ.ಶ 1200)
- ಮಧ್ಯಯುಗ (ಕ್ರಿ.ಶ 1200-1700)
- ಆಧುನಿಕ ಯುಗ(ಕ್ರಿ.ಶ. 1700-ಇಂದಿನವರೆಗೆ)
- ಪ್ರಾಚೀನ ಭಾರತದ ಇತಿಹಾಸವು 1921 ರವರೆಗೆ ಹಾಗೂ ಅರ್ಯರು ಆರಂಭಿಸಿದ ವೇದಕಾಲದ ನಾರರೀಕತೆಯಿಂದ ಆರಂಭವಾಗುತ್ತದೆ.
- ಭಾರತ ಸಂಪೂರ್ಣವಾಗಿ - ಉತ್ತರಾರ್ಧಗೋಳದಲ್ಲಿದೆ.
- ಜನ ಸಂಖ್ಯೆಯಲ್ಲಿ ಭಾರತ - ಎರಡನೇಯ ಸ್ಥಾನದಲ್ಲಿದೆ.
- ಭಾರತ - ಏಷ್ಯಾ ಖಂಡದಲ್ಲಿದೆ.
ಸರಹದ್ದುಗಳು
- ಪೂರ್ವದಲ್ಲಿ - ಬಂಗಾಳಕೊಲ್ಲಿ
- ಪಶ್ಚಿಮದಲ್ಲಿ- ಅರಬ್ಬೀ ಸಮುದ್ರ
- ಉತ್ತರದಲ್ಲಿ- ಹಿಮಾಲಯ ಪರ್ವತ
- ದಕ್ಷಿಣದಲ್ಲಿ - ಹಿಂದೂಮಹಾಸಾಗರ
ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ
ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ.
- History ಎಂಬ ಪದವು ಗ್ರೀಕ್ ಭಾಷೆಯ Historia ದಿಂದ ಉಗಮವಾಗಿದೆ.
- History ಎಂದರೆ ವಿಚಾರಣೆ ಅಥವಾ ತನಿಖೆ ಮಾಡು ಎಂದರ್ಥ.
- ಇತಿಹಾಸವು ಸಂಸ್ಕೃತದ ಪದವಾಗಿದೆ.
- ಇತಿಹಾಸವನ್ನು ಬರೆದವರಲ್ಲಿ ಗ್ರೀಕರು ಮೊದಲಿಗರು.
- ಇತಿಹಾಸದ ಪಿತಾಮಹಾ - ಹೆರಡೊಟಸ್ .
- Parshion war ಕೃತಿಯ ಕರ್ತೃ - ಹೆರಡೊಟಸ್ .
- City of God ಕೃತಿಯ ಕರ್ತೃ-ಸಂತ ಅಗಸ್ಚನ್.
- ಚರ್ಚು ಹಾಗೂ ರಾಜ್ಯದ ನಡುವಿನ ಸಂಬಂಧವನ್ನು ಪ್ರಥಮವಾಗಿ ಚಿಂತಿಸಿದವರು - ಸಂತ ಅಗಸ್ಚನ್.
ಪ್ರಮುಖ ಹೇಳಿಕೆಗಳು.
- ಭೂತ ಕಾಲದ ರಾಜಕೀಯವೇ ವರ್ತಮಾನ ಕಾಲದ ಇತಿಹಾಸ, ಇಂದಿನ ರಾಜಕೀಯವೇ ಭವಿಷ್ಯತ್ತಿನ ಇತಿಹಾಸ- Freeman.
- ವ್ಯಕ್ತಿಗಳ ಜೀವನ ಚರಿತ್ರೆಯೇ ಇತಿಹಾಸ - ಥಾಮಸ್ ಕಾರ್ಲೈಲ್ .
- ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟವೇ ಇತಿಹಾಸ - ಕಾರ್ಲ್ ಮಾರ್ಕ್ಸ್ . Das Capital ಈತನ ಕೃತಿ.
- ಜದುನಾಥ್ ಸರ್ಕಾರರವರ ಪ್ರಮುಖ ಕೃತಿಗಳು .
- Declaine and Fall of the Maghal Empire
- Shivaji and His Times.
- India Through the ages.
- ಇತಿಹಾಸದ ಎಂದರೆ ನಾಗರೀಕತೆಗಳ ಏಳು ಬೀಳಿನ ಕತೆ- ಆರ್ನಾಲ್ಡ್ ಟಾಯ್ನ್ ಬಿ.
- A study of History- ಕೃತಿಯ ಕರ್ತೃ- Arnald Toynbi.
- ವಿಶ್ವದ 26 ನಾಗರೀಕತೆಗಳ ಸಮಗ್ರ ಅಧ್ಯಯನ ಕೃತಿಯೇ Taynbi ವಿರಚಿತ A study of History.
- ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿದ ಮಾನವನ ಕತೆಯೇ ಇತಿಹಾಸ- ಜವಾಹರಲಾಲ್ ನೆಹರೂ ರವರು.
- ಮಾನವ ಕುಲದ ಕತೆಯೇ ಇತಿಹಾಸ - ಹೆನ್ನಿಕ್ ವಾನ್ ಲೂನ್
- ಯುಗ ಯುಗದಲ್ಲಿ ನಡೆದ ಮಾನವನ ಹೋರಾಟವೇ ಇತಿಹಾಸ ಪಿಯರ್ಸ್.
- ಇತಿಹಾಸ ಲೇಖನಾ ಕಲೆಯ ತವರು ಮನೆ- ಗ್ರೀಕ್.
- ಹೆರೋಡೋಟಸ್ ನು - ಪೆಲಿಕ್ಲಿಸ್ ನ ಆಸ್ಥಾನದಲ್ಲಿದ್ದನು.
- Historia ಎಂಬ ಕೃತಿಯ ಕರ್ತು - ಹೆರೋಡೋಟಸ್ .
- Felopanedian war ಕೃತಿಯ ಕರ್ತು- ಥುಸಿಡೈಡಸ್.
- ಜರ್ಮನ್ನರು ಇತಿಹಾಸವನ್ನು - ಗೆಸ್ ಚಿಸ್ಟೆ-ಎನ್ನುತ್ತಿದ್ದರು.
- ಇತಿಹಾಸವು ಒಂದು ಅನ್ವೇಷಣೆ ಅಥವಾ ಮಹಾನ್ ವೀರರ ಕಥಾನಕ್ ಎಂದವರು- ಹೆರೋಡೋಟಸ್ .
- ಇತಿಹಾಸ ಬದಲಾಗದ ಗತಕಾಲ ಎಂದವರು- ಅರಿಸ್ಟಾಟಲ್.
- ದಾಸ್ ಕ್ಯಾಪಿಟಲ್ ಹಾಗೂ ಕಮ್ಯೂನಿಸ್ಟ್ ಮ್ಯಾಸಿಪ್ಯಾಸ್ಟ್ರೋ ಕೃತಿಗಳ ಕರ್ತು- ಕಾರ್ಲ್ ಮಾರ್ಕ್ಸ್.
- ಜಗತ್ ಕಥಾವಲ್ಲರಿ- ಕೃತಿಯ ಕರ್ತು ಜವಾಹರಲಾಲ್ ನೆಹರು.
- ಇತಿಹಾಸವು ಸಮಾಜಗಳ ನೆನಪುಗಳು ಎಂದವರು - ರೀನಿಯರ್.
- ಇತಿಹಾಸ ಜಯಭೇರಿ ಹೊಡೆದ ಯುದ್ದಗಳ ವರ್ಣನೆ- ಎಂದವರು ಹಿಟ್ಲರ್.
- ಸದ್ಗುಣ ಹಾಗೂ ದುರ್ಗುಣಗಳ ನಡುವಿನ ಹೋರಾಟ ಇತಿಹಾಸ ಎಂದವರು- ಅಗಸ್ಟೆನ್.
- ಎಲ್ಲಾ ಸಮಾಜ ವಿಜ್ಞಾನಗಳ ಪಿತೃ ಅಥವಾ ಮಾತೃ-ಇತಿಹಾಸ
- ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಎಂದವರು - ಡಾ. ಬಿ.ಆರ್.ಅಂಬೇಡ್ಕರ್.
- ಸಿಂಧೂ ಬಯಲಿನ ನಾಗರೀಕತೆಯನ್ನು ಪತ್ತೆ ಹಚ್ಚಲಾದ ವರ್ಷ-1921.
- ಇತಿಹಾಸದ ಅರ್ಥವನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸಿದವರು- Freeman
- ಇತಿಹಾಸವನ್ನು ವ್ಯಕ್ತಿಗಳಿಗೆ ಹೋಲಿಸಿದವರು ಕಾರ್ಲೈಲ್ ರವರು.
- ಇತಿಹಾಸವನ್ನು ಆರ್ಥಿಕ ವಿಶ್ಲೇಷಣೆಗೆ ಸೀಮಿತಗೊಳಿಸಿದವರು ಕಾರ್ಲ್ ಮಾರ್ಕ್ಸ್.
- ಪ್ರಾಚೀನ ಕಾಲದಲ್ಲಿ ಇತಿಹಾಸ ಕೇವಲ - ದಂತಕತೆಗಳಿಗೆ ಸೀಮಿತವಾಗಿತ್ತು.
- 19 ನೇ ಶತಮಾನದವರೆಗೆ-ರಾಜಕೀಯ ಅಂಶಗಳು ಪ್ರಧಾನವಾಗಿತ್ತು.ಇತಿಹಾಸ ಸತ್ತವರ ಮೇಲೆ ಹೆಣೆದ ಸುಳ್ಳಿನ ಕಂತೆ ಎಂದವರು-ನೆಪೋಲಿಯನ್
ಕಲ್ಯಾಣಿ ಚಾಲುಕ್ಯರು
ಕಲ್ಯಾಣಿ ಚಾಲುಕ್ಯರು
- ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊಣೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
- ಇವರನ್ನು ಪಶ್ಚಿಮದ ಚಾಲುಕ್ಯರೆಂದು ಕರೆಯುವರು
- ಇವರ ಪ್ರಾರಂಭದ ರಾಜಧಾನಿ - ಏತಗಿರಿ ಅಥವಾ ಪೊಟ್ಟಳಕೆರೆ ಹಾಗೂ ಮಹಾರಾಷ್ಟ್ರದ ಮಾನ್ಯಖೇಟ
- ಇವರ ಲಾಂಛನ - ವರಾಹ
- ರಾಷ್ಟ್ರಕೂಟರ ಸಾಮಂತರಾಗಿದ್ದ ಎರನೇ ತೈಲಪ - ಈ ಮನೆತನದ ಮೂಲ ಪುರುಷ
- ತೈಲಪ ಎರಡನೇ ಕರ್ಕನನ್ನ ಸೋಲಿಸಿ ಈ ರಜ್ಯಾಕ್ಕೆ ತಳಹದಿ ಹಾಕಿದನು
ಆಧಾರಗಳು
- ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ
- ಮೂರನೇ ಸೋಮೇಶ್ವರನ - ಮಾನಸೋಲ್ಲಾಸ
- ಬಿಲ್ಹಣನ - ವಿಕ್ರಮಾಂಕದೇವ ಚರಿತಾ
- ವಿಜ್ಞಾನೇಶ್ವರನ - ಮಿತಾಕ್ಷರ
ರಾಜಕೀಯ ಇತಿಹಾಸ
- ಎರಡನೇ ತೈಲಪ
- ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ
- ಮಾನ್ಯಖೇಟ ಈತನ ರಾಜಧಾನಿ
- ಕ್ರಿ.ಶ.997 ರಲ್ಲಿ ಮರಣ ಹೊಂದಿದ
ಆರನೇ ವಿಕ್ರಮಾಧಿತ್ಯ
- ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆ
- ಈತ 09/03/1076 ರಲ್ಲಿ “ ಚಾಲುಕ್ಯ ವಿಕ್ರಮ ಶಕೆ ” ಎಂಬ ಹೊಸ ಶಕೆಯನ್ನ ಸ್ಥಾಪಿಸಿದ
- ಈತನಿಗೆ ಭವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ ಎಂಬ ಬಿರುದಿತ್ತು
- ಈತನ ದಂಡ ನಾಯಕನ ಹೆಸರು - ಅಚ್ಚುಗಿ
- ಕರ್ನಾಟಕ ಸರಸ್ವತಿ ಎಂದು ಪ್ರಸಿದ್ದರಾದವರು - ಚಂದ್ರಲಾದೇವಿ
- ಬಳ್ಳಿಗಾಂವೆ ಈತನ ಕಾಲದ ಪ್ರಸಿದ್ದ ವಿಧ್ಯಾ ಕೇಂದ್ರ
- ಈತ “ವಿಕ್ರಮ ಪುರ ” ಎಂಬ ನಗರವನ್ನು ನಿರ್ಮಿಸಿದ ನು
- “ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿರುವ ದೇವಾಲಯ “ ಇಟಗಿಯ ಮಹಾದೇವಾ ದೇವಾಲಯ ” .
- “ ಇಟಗಿಯ ಮಹಾದೇವಾ ದೇವಾಲಯ ” ಇದರ ನಿರ್ಮಾತೃ ಈತನ ದಂಡ ನಾಯಕ - ಮಹಾದೇವಾ ( ದಂಡಾದೀಶ )
- ಈತ ಕ್ರಿ.ಶ.1026 ರಲ್ಲಿ ಮರಣ ಹೊಂದಿದನು
ಮೂರನೇ ಸೋಮೇಶ್ವರ :-
- 6 ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು
- ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ ಈತನ ಕೃತಿಗಳು
- ಮಾನಸೋಲ್ಲಾಸದ ಇನ್ನೊಂದು ಹೆಸರು - “ಅಭಿಲಾಷಿತಾರ್ಥ ಚಿಂತಾಮಣಿ ”
- “ಅಭಿಲಾಷಿತಾರ್ಥ ಚಿಂತಾಮಣಿ ” ಇದರ ಪ್ರತಿಯನ್ನು ಮೂರು ಭಾಗಗಳಾಗಿ ಪ್ರಕಟಿಸಿದ ಸಂಸ್ಥೆಯ ಹೆಸರು “ ಬರೋಡದ ಗಾಯಕವಾಡ್ ಓರಿಯಂಟಲ್ ಸಂಸ್ಥೆ ”
- ಈತನ ಬಿರುದ - “ಸರ್ವಜ್ಞ ಚಕ್ರವರ್ತಿ ”
- ಈತನ ಇತರೆ ಬಿರುದುಗಳು - ಭೂಲೋಕಮಲ್ಲ , ತ್ರಿಭುವನ ಮಲ್ಲ
ಕಲ್ಯಾಣಿ ಚಾಲುಕ್ಯರ ಆಡಳಿತ
- ಮಂತ್ರಿಗಳ ವಿಧಗಳು - “ ಪ್ರಧಾನ ” ಮತ್ತು “ ಮಹಾಪ್ರಧಾನ ”
- ಪ್ರಧಾನ ಮಂತ್ರಿಗೆ ಇರುತ್ತಿದ್ದ ಬಿರುದುಗಳು “ ಚೂಡಾಮಣಿ ” ಮತ್ತು “ ಅಮಾತ್ಯ ಕೇಸರಿ ”
- ಸ್ಥಳೀಯ ಆಡಳಿತ ವರ್ಗಗಳು - ಗ್ರಾಮ ಮಹತ್ತರು ಮತ್ತು ರಾಷ್ಠ್ರ ಮಹತ್ತರರು
- ಆಡಳಿತದ ಕೊನೆಯ ಘಟಕ - ಗ್ರಾಮ
- ಗ್ರಾಮದ ಹಿರಿಯ ಬ್ರಾಹ್ಮಣರನ್ನು “ ಮಹಾಜನ ” ಎಂದು ಕರೆಯುತ್ತಿದ್ದರು .
- ವೈಶ್ಯರನ್ನು - ನಬರ ಎಂದು ಕರೆಯುತ್ತಿದ್ದರು
- ಇವರ ಆಡಳಿತದಲ್ಲಿದ್ದ ಭೂಕಂದಾಯ ಲೆಕ್ಕವಿಡುತ್ತಿದ್ದ ಮುಖ್ಯಸ್ಥನ ಹೆಸರು - ಕಡಿತವರ್ಗಡೆ
- ಸೈನ್ಯದ ಪ್ರಮುಖ ಕೇಂದ್ರ ಕೋಟೆಗಳು
- ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ - ಶಕ್ತಿ ಪೂಜೆಯ ಕೇಂದ್ರವಾಗಿತ್ತು
- ರನ್ನನಿಗೆ ಆಶ್ರಯ ನೀಡಿದವರು - ಸತ್ಯಶ್ರಾಯ ಹಾಗೂ 2 ನೇ ತೈಲಪ
- ಇವರ ಕಾಲದಲ್ಲಿದ್ದ ಸುಪ್ರಸಿದ್ದ ಜೈನ ಭಕ್ತೆ - ಅತ್ತಿಮಬ್ಬೆ
- ಅತ್ತಿಮಬ್ಬೆಗೆ ಇದ್ದ ಬಿರುದು - ದಾನ ಚಿಂತಾಮಣಿ
- ಬಳ್ಳಿಗಾಂವೆ , ಕೋಳಿವಾಡ ಮತ್ತು ಡಂಬಳ - ಮಹಾಯಾನ ಬೌಧ್ಧರ ಕೇಂದ್ರ
ಸಾಹಿತ್ಯ ( ಕನ್ನಡ )
- ರನ್ನ - ಗದಾಯುದ್ಧ ಮತ್ತು ಅಜಿತನಾಥಪುರಾಣ ( ಕವಿಚಕ್ರವರ್ತಿ ಬಿರುದು )
- ಎರಡನೇ ಚಾವುಂಡರಾಯ - ಲೋಕೋಪಕಾರ
- ನಾಗವರ್ಮ - ಕರ್ನಾಟಕ ಕದಂಬರಿ ಮತ್ತು ಛಂದೋಬದಿ
- ಚಂದ್ರರಾಜ - ಮದನ ತಿಲಕ
- ಶ್ರೀಧರಚಾರ್ಯ - ಜಾತಕ ತಿಲಕ
- ಕೀರ್ತಿವರ್ಮ - ಗೋವೈದ್ಯ
- ಶಾಂತಿನಾಥ - ಸುಕುಮಾರ ಚರಿತ್ರೆ
- ಮಾದವರ್ಮಾಚಾರ್ಯ - ಚಂದ್ರ ಚೂಡ ಮಣಿ
- ನಯನ ಸೇನ - ಧರ್ಮಾಮೃತ
- ದುರ್ಗಸಿಂಹ - ಪಂಚತಂತ್ರ
- ಸಂಸ್ಕೃತ ಸಾಹಿತ್ಯ
- ಜಗದೇಕ ಮಲ್ಲನ ಆಸ್ಥಾನ ಕವಿ - ವಾದಿರಾಜ
- 6 ನೇ ವಿಕ್ರಮಾಧಿತ್ಯನ ಅಶ್ರಿತ ಕವಿ - ಬಿಲ್ಹಣ
- ವಾದಿರಾಜ - ಯಶೋಧರ ಚರಿತೆ ಮತ್ತು ಪಾರ್ಶ್ವನಾಥ ಚರಿತೆ
- ಬಿಲ್ಹಣ - ವಿಕ್ರಮಾಂಕ ದೇವಚರಿತ
- ವಿಜ್ಞಾನೇಶ್ವರ - ಮಿತಾಕ್ಷರ ಸಂಹಿತೆ
- ಮೂರನೇ ಸೋಮೇಶ್ವರ - ಮಾನಸೋಲ್ಲಾಸ
- ಜಗದೇಕ ಮಲ್ಲನ - ಸಂಗೀತ ಚೂಡಾಮಣಿ
- ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬೀದರ್ ಜಿಲ್ಲೆಯ ಕಲ್ಯಾಣ
- ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ - ರನ್ನ
- ಕನ್ನೇಗಾಲ ಕದನ ಸಂಭವಿಸಿದ್ದು - 6ನೇ ವಿಕ್ರಮಾಧಿತ್ಯ / ವಿಷ್ಣುವರ್ಧನ
- ನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು - ಚಂದ್ರಲಾದೇವಿ
- ಕನ್ನಡದ ಮೊದಲ ಪಶುವೈಧ್ಯ ಕೃತಿ - ಗೋವೈದ್ಯ ( ಕೀರ್ತಿವರ್ಮ )
- ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ - ಜಾತಕ ತಿಲಕ ( ಶ್ರೀಧರಚಾರ್ಯ )
- 3 ನೇ ಸೋಮೇಶ್ವರ ನ ಬಿರುದು - ಭೂಲೋಕಮಲ್ಲ , ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪ
- ಅಭಿನವ ಪಂಪ ಎಂದು ಖ್ಯಾತಿವೆತ್ತವರು - ನಾಗಚಂದ್ರಕವಿ
- ಕನ್ನಡದ ಪ್ರಪ್ರಥಮ ಕವಯಿತ್ರಿ - ಕಂತಿ
- ಅರಿಕೇಸರಿಯ ಆಸ್ಥಾನದ ಕವಿ - ಪಂಪ
- ಸಾಹಸ ಭೀಮ ವಿಜಯ - ರನ್ನ
- ಆದಿ ಕವಿ ಪಂಪ - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
- ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ - ನಾಗ ಚಂದ್ರ ಕವಿಯ - ರಾಮಚರಿತಪುರಾಣ
- ಎರಡನೇ ತೈಲಪನ ಬಿರುದು - ತ್ರೈಲೋಕ ಮಲ್ಲ
- ಎರಡನೇ ತೈಲಪನ ದಂಡ ನಾಯಕ - ಬರ್ಫೆ
- 6ನೇ ವಿಕ್ರಮಾಧಿತ್ಯನ ದಂಡನಾಯಕ - ದಂಡಾದೀಶ
- ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ - ಮದನ ತಿಲಕ (ಚಂದ್ರರಾಜ )
- ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು - 2 ನೇ ತೈಲಪ
- ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ - 3 ನೇ ತೈಲಪ
- ಕಲ್ಯಾಣಿ ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಕಲಚೂರಿ ಬಿಜ್ಜಳ
- ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬಿದರ್ ಜಿಲ್ಲೆಯ ಬಸವನ ಕಲ್ಯಾಣ
- 6 ನೇ ವಿಕ್ರಮಾಧಿತ್ಯನ ತಂದೆ ತಾಯಿ - 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿ
ಕಲಚೂರಿಗಳು
ಕಲಚೂರಿಗಳು
- ಇವರ ಮೂಲ ಪುರುಷ - ಬಿಜ್ಜಳ
- ಇವನ ಆಸ್ಥಾನದ ಮಂತ್ರಿ - ಬಸವಣ್ಣ
- ಬಸವಣ್ಣ ನವರನ್ನ ಶಾಸನಗಳಲ್ಲಿ “ ಮಹೇಶ್ವರ ” ಎಂದು ಕರೆಯಲಾಗಿದೆ
- ಇವರು ಮೂಲತಃ ಬುಂದೇಲ್ ಖಂಡದವರು
- ಬಿಜ್ಜಳನ ಬಿರುದುಗಳು - ತ್ರಿಭುವನ ಮಲ್ಲ , ಭುಜ ಬಲ ಚಕ್ರವರ್ತಿ , ಕಲಚೂರಿ ಚಕ್ರವರ್ತಿ
- ಸೋಮೇಶ್ವರ - ಬಿಜ್ಜಳನ ಮೊದಲ ಮಗ
- ಈತನ ಇನ್ನೋಂದು ಹೆಸರು - ಸೋಮದೇವ
- ಸೋಮೇಶ್ವರನ ಬಿರುದು - ರಾಯಮುರಾರಿ
- ಕಲಚೂರಿ ಪದ ಮೂಲತಃ ಬುಂದೇಲ್ ಖಂಡದ “ ಕಲಿಂಜರ್ ” ದಿಂದ ಬಂದಿದೆ
- ಕಲಚೂರಿಗಳ ಮೂಲ ರಾಜಧಾನಿ - ಕಲಿಂಜರಿ ಪುರ
- ಕಲಚೂರಿ ಸಾಮ್ರಾಜ್ಯದ ಸ್ಥಾಪಕ - ಎರಡನೇ ಬಿಜ್ಜಳ
- ಕಲಚೂರಿಗಳ ಲಾಂಛನ - ನಂದಿ ( ವೃಷಭ )
- ಬಸವೇಶ್ವರರ ಜನ್ಮ ಸ್ಥಳ - ಬಾಗೇವಾಡಿ ಅಥವಾ ಬಸವನ ಬಾಗೇವಾಡಿ
- ಬಸವೇಶ್ವರರು ಪುನರುತ್ಥಾನಗೊಳಿಸಿದ ಮತ - ವೀರಶೈವ ಧರ್ಮ
- ಬಸವಣ್ಣನ ಅಂಕಿತ - ಕೂಡಲ ಸಂಗಮದೇವ
- ಕಲ್ಯಾಣ ಇರುವ ಜಿಲ್ಲೆ - ಇಂದಿನ ಬಿಜಾಪುರ
- ಬಸವೇಶ್ವರರು ಪ್ರಚುರ ಪಡಿಸಿದ ತತ್ವ - ಶಕ್ತಿ ವಿಶಿಷ್ಟಾದ್ವೈತ
- ಬಸವಣ್ಣನ ತಂದೆ ತಾಯಿ - ಮಾದರಸ ಮತ್ತು ಮಾದಲಾಂಬಿಕೆ
- ಅನುಭವ ಮಂಟಪದ ಸ್ಥಾಪಕರು - ಬಸವಣ್ಣ
- ಕಲ್ಯಾಣಿ ಕಲಚೂರ್ಯರ ವಂಶ - ಹೈಹಯ ವಂಶ , ಇವರು ಮೂಲತಃ ಇತ್ತರ ಭಾರತದವರು
- ಕಲಚೂರ್ಯರ ಆರಂಭದ ರಾಜಧಾನಿ - ಮಂಗಳವಾಡ
- ಬಿಜ್ಜಳನ ಸೇನಾ ದಂಡ ನಾಯಕ - ಕಸಪಯ್ಯ
- ಬಿಜ್ಜಳನನ್ನ ಕೊಂದವರು - ಜಗದೇವದಣ್ಣಾಯಕ ಬೊಮ್ಮರಸ ಮತ್ತು ಮಲ್ಲಿದೇವ
- ಕಲಚೂರಿಗಳ ಕೊನೆಯ ಅರಸ - ಸಿಂಘಣ
ಚೀನಿ ಪ್ರವಾಸಿಗರ ಬರವಣಿಗೆಗಳು
ಚೀನೀ ಪ್ರವಾಸಿಗರ ಬರವಣಿಗಳು
- ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗನಾದವನು- ಫಾಹಿಯಾನ್.
- ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು
- ಫಾಹಿಯಾನ್ ಕೃತಿ- ಘೋಕೋಕಿ
- ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ.
- ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್
- ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ.
- ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ.
- ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ
- ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ
- ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ
- ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ
- ರಘು ವಂಶ ನಾಟಕದ ಕರ್ತು- ಕಾಳಿದಾಸ.
ಸಾಹಿತ್ಯ ಆಧಾರಗಳು
- ಆರ್ಯರ ಜೀವನ ಹಾಗೂ ಸಂಸ್ಕೃತಿಯ ಬಗೆಗೆ ಬೆಳಕು ಚೆಲ್ಲುವ ಗ್ರಂಥ- ವೇದಗಳು.
- ಭಾರತದ ಎರಡು ಮಹಾಕಾವ್ಯಗಳು - ರಾಮಾಯಣ ಮತ್ತು ಮಹಾಭಾರತ
- ಬೌದ್ದರ ಪ್ರಮುಖ ಕಾವ್ಯಗಳು - ದೀಪ ವಂಶ ಹಾಗೂ ಮಹಾವಂಶ.
- ಆರ್ಯರ ಆಡಳಿತ ಕುರಿತು ಬೆಳಕು ಚೆಲ್ಲುವ ಕೃತಿ- ಅರ್ಥಶಾಸ್ತ್ರ.
- ಅರ್ಥಶಾಸ್ತ್ರ ಕೃತಿಯ ಕರ್ತು- ಕೌಟಿಲ್ಯ
- ನಂದರ ಪತನದ ಬಗೆಗೆ ತಿಳಿಸುವ ಕೃತಿ - ಮುದ್ರಾರಾಕ್ಷಸ
- ಮುದ್ರಾರಾಕ್ಷಸದ ಕರ್ತು- ವಿಶಾಖದತ್ತ.
- ಹರ್ಷವರ್ಧನನ ಕುರಿತು ತಿಳಿಸುವ ಕೃತಿ-ಹರ್ಷ ಚರಿತೆ
- ಹರ್ಷಚರಿತೆಯ ಕರ್ತು - ಬಾಣಕವಿ
- ಅಷ್ಟಾಧ್ಯಾಯಿ ಕೃತಿಯ ಕರ್ತು- - ಪಾಣಿನಿ
- ಮಹಾಬಾಷ್ಯಾ ವನ್ನು ಬರೆದವರು - ಪತಂಜಲಿ
- ಅಭಿಜ್ಞಾನ ಶಾಕುಂತಳದ ಕರ್ತು-ಕಾಳಿದಾಸ
- ಕಾಶ್ಮೀರದ ದೊರೆಗಳ ಐಹಿತ್ಯ ತಿಳಿಸುವ ಕೃತಿ- ರಾಜತರಂಗಿಣಿ.
- ರಾಜ ತರಂಗಿಣಿಯ ಕರ್ತು- ಕಲ್ಹಣ
- ವಿಕ್ರಮಾಂತ ದೇವ ಚರಿತ ಕೃತಿಯ ಕರ್ತು-ಬಿಲ್ಹಣ
- ಗೌಡಮಹೋ ಕೃತಿಯ ಕರ್ತು - ವಾಕ್ವತಿ
- ರಾಮಪಾಲ ಚರಿತ ಕೃತಿಯ ಕರ್ತು- ಸಂಧ್ಯಾಕರನಂದಿ
- ಚರತ ಸಂಹಿತೆಯ ಕರ್ತು- ಚರಕ
ವಿದೇಶಿ ಬರವಣಿಗೆಗಳು.1. 1 ವಾಯುವ್ಯ ಭಾರತವನ್ನು ಪರ್ಶಿಯನ್ನರು ಗೆದ್ದ ಪ್ರಸಂಗವನ್ನು ತಿಳಿಸುವ ಗ್ರಂಥ - ಹೆರಡೊಟಸ್ ನ Historia.
2. ಅಲೆಗ್ಸಾಂಡರನ ದಂಡಯಾತ್ರೆಯನ್ನು ವರ್ಣಿಸಿದವರು -ಏರಿಯಾನ್ .
3. ತಾರೀಕ್-ಇ-ಹಿಂದ್ ಅಥವಾ ತೆಂತಕಿಕ್ - ಇ- ಯಾನ್- ಕೃರ್ತು-ಅಲ್ಪೆರೋನಿ.
4. ಪ್ರಾಚೀನ ಭಾರತದ ಇತಿಹಾಸಕ್ಕೆ ಒಳ್ಳೆಯ ಆಧಾರಗಳು - ಶಾಸನಗಳು.
5. ಇಂಡೋಗ್ರೀಕರ ಇತಿಹಾಸ ತಿಳಿಯಲು ಇರುವ ಏಕಮಾತ್ರ ಮೂಲ ಆಧಾರಗಳು- ನಾಣ್ಯಗಳು.
6. ನಾಣ್ಯಗಳ ಅಧ್ಯಯನವನ್ನು ಈ ಹೆಸರಿನಿಂದ ಕರೆಯವರು-ನ್ಯೂಮಿನ್ ಮ್ಯಾಟಿಕ್ಸ್.
7. ಶಿಲಪ್ಪಾವಿಗಾರಂ ಕರ್ತು- ಇಳಂಗೋ ಅಡಿಗಲ್
8. ಮಣಿ ಮೇಖಲೈ- ಸಾತ್ತನಾರ್.
9. ಯಾತ್ರಿಕ ಪ್ರಭು ಎಂದು ಕರೆಯಲ್ಪಟ್ಟವನ್ನು-ಹ್ಯೂಯೆನ್ ತ್ಸಾಂಗ್ .
10. ಶಿಲಾಶಾಸನದ ಪಿತಾಮಹಾ-ಅಶೋಕ.
ಪ್ರಕ್ತಾನ ಆಧಾರಗಳು.1. ಪ್ರಕ್ತಾನ ಶಾಸ್ತ್ರ ಎಂದರೆ - ಶಾಸನಗಳು ಹಾಗೂ ಸ್ಮಾರಕಗಳಿಗೆ ಸಂಬಂಧಿಸಿದ ಮೂಲಾಧಾರಗಳು.
2. ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಸೂಕ್ತ ಮೂಲಾಧಾರಗಳು-ಶಾಸನಗಳು.
3. ಹಾತಿಗುಂಪ ಶಾಸನದ ಕರ್ತು-ಖಾರವೇಲ.
4. ತಾಳಗುಂದ ಶಾಸನದ ಕರ್ತು-ಶಾಕುಸ್ಥವರ್ಮ.
5. ಶಾಸನಗಳ ಅಧ್ಯಯನವನ್ನು -ಎಫಿಗ್ರಫಿ ಎಂದು ಕರೆಯುವರು.
6. ನಾಣ್ಯಗಳ ಅಧ್ಯಯನಕ್ಕೆ ಈ ಹೆಸರಿದೆ- ನಾಣ್ಯಶಾಸ್ತ್ರ.
7. ಸಮುದ್ರ ಗುಪ್ತನ ಆಡಳಿತದ ಬಗೆಗೆ ಬೆಕು ಚೆಲುವ ಶಾಸನದ ಹೆಸರು-ಅಲಹಾಬಾದ್ ಸ್ತಂಭ ಶಾಸನ.
8. ಚೀನೀ ಪ್ರವಾಸಿಗರು ಭಾರತಕ್ಕೆ ಬಂದ ಉದ್ದೇಶ - ಬೌದ್ದ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಲು .
9. ಪುರಾಣಗಳು ಇತಿಹಾಸಕಾರನಿಗೆ ಸಹಾ.ಕವಾಗಿರುವುದು ಈ ವಿಷಯಕ್ಕೆ - ರಾಜಕೀಯ ಇತಿಹಾಸ ತಿಳಿಯಲು.
10. ಜಾತಕಗಳು ಇದಕ್ಕೆ ಸಂಬಂಧಿಸಿದೆ - ಬುದ್ದನ ಹಿಂದಿನ ಜನ್ಮ ತಿಳಿಯಲು
11. ಕುಮಾರ ಸಂಭವದ ಕವಿ-ಕಾಳಿದಾಸ.
12. ನೀತಿಸಾರದ ಲೇಖಕರು - ಕಾಮುಂದಕ
13. ಶಕಯುಗ ಪ್ರಾರಂಭಗೊಂಡ ವರ್ಷ-ಕ್ರಿ.ಶ.78.
14. ಸಂಧಿ ವಿಗ್ರಹ ಮಹಾದಂಡನಾಯಕ ಕುಮಾರಮಾತ್ಯ ಎಂಬ ಬಿರುದುಗಳ ಅರಸ- ಹರಿಷೇಣ.
15. ಆರ್ಯಭಟನಿಗೆ ಆಶ್ರಯ ನೀಡಿದವರು- ಗುಪ್ತರು.
16. ಭಾರತಕ್ಕೆ ಬಂದ ಮೊದಲ ಮುಸ್ಲಿಂ ಆಕ್ರಮಣಕಾರರು-ತುರ್ಕರು.
17. ತಾರಿಕ್ - ಇ-ಅಲಯ್ ಕೃತಿಯ ಕರ್ತು-ಅಮೀರ್ ಖುಸ್ರು.
18. ಪುರಾಣಗಳು ಎಷ್ಟಿವೆ-ಹದಿನೆಂಟು.
19. ಮೊಟ್ಟಮೊದಲು ಶಾಸನಗಳನ್ನು ಬರೆಯಿಸಿದ ಅರಸ - ಅಶೋಕ.
20. ವಿಕ್ರಮಾಂಕ ದೇವ ಚರಿತೆಯು- 6 ನೇ ವಿಕ್ರಮಾದಿತ್ಯನ ಜೀವನ ಚರಿತ್ರೆ.
21. ಮುದ್ರಾರಾಕ್ಷಸ- ಚಂದ್ರಗುಪ್ತ ಮೌರ್ಯನ ಇತಿಹಾಸಕ್ಕೆ ಸಂಬಂಧಿಸಿದೆ.
22. ಪೃಥ್ವಿರಾಜ ರಾಸೋ ಕೃತಿಯನ್ನು ಬರೆದವರು-ಝೀಯಾ ವುದ್ದೀನ್ ಬರಣಿ.
23. ಕಾಳಿದಾಸನಿಗೆ ಆಶ್ರಯ ಕೊಟ್ಟ ಮನೆತನ - ಗುಪ್ತರು.
24. ಗಾಥಶಪ್ತಪತಿ- ಪ್ರಾಕೃತ ಭಾಷೆಯಲ್ಲಿದೆ.
ಭಾರತದ ಭೌಗೋಳಿಕ ಲಕ್ಷಣಗಳು.1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ .
2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ.
3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು.
4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ.
5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ .
6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು.
7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು.
8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು.
9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ.
10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ.
11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ.
12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ.
13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ.
14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು.
15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ,ಗಂಗಾ,ಬ್ರಹ್ಮಪುತ್ರ.
ಪ್ರಾಗೈತಿಹಾಸ ಕಾಲ
ಪ್ರಾಗೈತಿಹಾಸ ಕಾಲ
- ಜಗತ್ತಿನ ಸೃಷ್ಠಿಯ ವಿಜ್ಞಾನಿಗಳ ಪ್ರಕಾರ - ಮಹಾಸ್ಪೋಟ ( Big Bang ) ನಿಂದಾಯಿತು
- ಭೂಮಿಯು ರೂಪುಗೊಂಡಿದ್ದು - ಸುಮಾರು 4600 ದಶಲಕ್ಷ ವರ್ಷಗಳ ಹಿಂದೆ
- ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿ - ಅಮೀಬಾ
- ಅಮೀಬಾ ಕಾಣಿಸಿಕೊಂಡಿದ್ದು - 700 ದಶಲಕ್ಷ ವರ್ಷ ಹಿಂದೆ
- ಬಾಲವಿಲ್ಲದ ಗೋರಿಗಳು ಕಾಣಿಸಿಕೊಂಡಿದ್ದು - 1 ದಶಲಕ್ಷ ವರ್ಷಗಳ ಹಿಂದೆ
- ಆಧುನಿಕ ಮಾನವನ ವಿಕಾಸವಾದದ್ದು - 40000 ವರ್ಷಗಳ ಹಿಂದೆ
- ಆಧುನಿಕ ಮಾನವನ ಹೆಸರು - ಹೋಮೋ ಸೆಫಿಯನ್
- ಹಳೆಯ ಶಿಲಾಯುಗದ ಹೆಸರು - ಪ್ರಾಚೀನ ಶಿಲಾಯುಗ ಅಥಾವ ಆರಂಭ ಕಾಲದ ಶಿಲಾಯುಗ
- ಹೊಸ ಶಿಲಾಯುಗದ ಜನರ ಮೊದಲ ಸಂಗಾತಿ - ಕಾಡುನಾಯಿ
- ಹೊಸ ಶಿಲಾಯುಗದ ಜನರ ಪ್ರಮುಖ ಬೆಳೆ - ಗೋದಿ , ಬಾರ್ಲಿ , ಅಕ್ಕಿ
- ಹೊಸ ಶಿಲಾಯುಗದ ಜನರು ಬೆಳೆದ ದ್ವಿದಳ ಧಾನ್ಯ - ಹುರುಳಿ
- ಕುಂಬಾರ ಚಕ್ರ ಅಥಾವ ತಿಗರಿ ಎಂದರೆ - ಮಡಕೆ ತಯಾರಿಸುವ ಸಾಧನ
- ಶಿಲಾಯುಗದ ಜನರು ಮಡಕೆ ತಯಾರಿಸಲು ಬಳಸುತ್ತಿದ್ದ ಸಾಧನ - ತಿಗರಿ
- ಕಳೇಬರವನ್ನು ಹೂಳಲು ಪ್ರಾರಂಭಿಸಿದ ಯುಗ - ಹೊಸ ಶಿಲಾಯುಗ
- ಲೋಹದ ವಸ್ತುಗಳ ತಯಾರಿಸುವ ತಂತ್ರ ಬಳಕೆಗೆ ಬಂದದ್ದು - 4000 ವರ್ಷಗಳ ಹಿಂದೆ
- ಲೋಹ ಯುಗದಲ್ಲಿ ಬಳಸಿದ ಮೊದಲ ಲೋಹ - ತಾಮ್ರ
- ತಾಮ್ರದ ಜೊತೆಗೆ ಇತರ ಲೋಹ ಬೆರೆಸಿ ತಯಾರಿಸಿದ ಲೋಹ - ಕಂಚು
- ಲೋಹಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಕಂಚಿನ ಯುಗ
- ಕಬ್ಬಿಣವು ಬಳಕೆಗೆ ಬಂದಿದ್ದು - ಸುಮಾರು 3000 ವರ್ಷಗಳ ಹಿಂದೆ
- ಬೃಹತ್ ಶಿಲಾ ಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಮೆಗಾಲತಿಕ್ ಅಥವಾ ಬೃಹತ್ ಶಿಲಾಯುಗ
- ಮೆಗಾ ಪದದ ಅರ್ಥ - ದೊಡ್ಡದು
- ಲಿತ್ ಎಂದರೆ - ಕಲ್ಲು
- ಈ ಕಾಲದ ಜನರು ಅಲೆಮಾರಿಗಳಾಗಿದ್ದರು - ಹಳೆಯ ಶಿಲಾಯುಗ
- ಹರಿತವಾದ ಆಯುಧವನ್ನು ಬಳಸಿದ್ದು - ನವಶಿಲಾಯುಗ
- ಆದಿಮಾನವರ ವಾಸಸ್ಥಾನ - ಗುಹೆ , ಪೊಟರೆ ಹಾಗೂ ಕಲ್ಲು ಸ್ಥಂಭ
- ಹಳೆಯ ಶಿಲಾಯುಗದ ಜನರ ಆಯುಧ - ಕಲ್ಲಿನ ಆಯುಧ ಮತ್ತು ಮೂಳೆ
- ಕಬ್ಬಿಣದ ಯುಗದ ಜನಾಂಗವನ್ನು ಈ ಹೆಸರಿನಿಂದ ಕರೆಯುವರು - ಬೃಹತ್ ಶಿಲಾಯುಗ ಜನಾಂಗ
- ಮೆಗಾಲಿತಿಕ್ ಪದದ ಅರ್ಥ - ದೊಡ್ಡ ಕಲ್ಲು
- ಲಿಖಿತ ಆಧಾರ ಇರುವ ಇತಿಹಾಸಕ್ಕೂ ಹಿಂದಿನದು - ಪ್ರಾಗೈತಿಹಾಸ ಕಾಲ
- ಪ್ರಾಗೈತಿಹಾಸ ಕಾಲದ ಇನ್ನೋಂದು ಹೆಸರು - ಇತಿಹಾಸ ಪೂರ್ವಕಾಲ
- ಪ್ರಾಗೈತಿಹಾಸ ಕಾಲದ ಘಟ್ಟಗಳು - ಶಿಲಾಯುಗ ಹಾಗೂ ಲೋಹ ಯುಗ
- ಭೂಮಿಯು ರೂಪುಗೊಂಡಿದ್ದು - 460 ಕೋಟಿ ವರ್ಷಗಳ ಹಿಂದೆ
- ಭೂಮಿಯ ಮೇಲೆ ಜೀವ ಸೃಷ್ಠಿಯಾದದ್ದು - 70 ಕೋಟಿ ವರ್ಷಗಳ ಹಿಂದೆ
- ಭೂಮಿಯ ಮೇಲೆ ಕಾಣಿಸಿದ ಮೊದಲ ಜೀವಿ - ಅಮೀಬಾ
- ಅಮೀಬಾ ಕಾಣಿಸಿಕೊಂಡಿದ್ದು - 70 ವರ್ಷಗಳ ಹಿಂದೆ
- ಮಾನವ ವಿಕಾಸಕ್ಕೆ ಕಾರಣವಾದ ಪ್ರಾಣಿಗಳ ಉಗಮ - 30 ಲಕ್ಷ ವರ್ಷಗಳ ಹಿಂದೆ
- ಮಾನವನ ಉದಯ ಕಾಲ - 5 ಲಕ್ಷ ವರ್ಷಗಳ ಹಿಂದೆ
- ಬರಹವು ಬಳಕೆಗೆ ಬಂದಿದ್ದು - 5000 ವರ್ಷಗಳ ಹಿಂದೆ
- ಬರಹದ ನೆರವು ಸಿಗದ ಇತಿಹಾಸ - ಪ್ರಾಗೈತಿಹಾಸ ಕಾಲ
- ಪ್ರಾಗೈತಿಹಾಸವನ್ನು ಅರಿಯುವುದು - ಮಾನವ ಬಳಸುತ್ತಿದ್ದ ಸಾಧನಗಳಿಂದ
- Pyatiolithic age - ಎಂದರೆ - ಹಳೆಯ ಶಿಲಾ ಯುಗ
- Microlithic age - ಎಂದರೆ - ಸೂಕ್ಷ್ಮ ಶಿಲಾಯುಗ
- Niolithic age - ಎಂದರೆ - - ತಾಮ್ರ ಯುಗ
- Iron age - ಎಂದರೆ - ಕಬ್ಬಿಣ ಯುಗ
- ಹಳೆಯ ಶಿಲಾಯುಗದ ಜನರನ್ನು ಈ ಹೆಸರಿನಿಂದ ಕರೆಯುವರು - ಕಪಿ ಮಾನವರು
- ಹಳೆಯ ಶಿಲಾಯುಗ ಸಾಗಿದ್ದು - ಸುಮಾರು 4 ಲಕ್ಷ ವರ್ಷಗಳ ಹಿಂದೆ
- ಹಳೆಯ ಶಿಲಾಯುಗದಲ್ಲಿ ಕಂಡುಹಿಡಿದಲ್ಲಿ ಕಂಡು ಹಿಡಾದ ಸಾಧನಗಳು - ಬೆಂಕಿ ಹಾಗೂ ಬಿಲ್ಲು ಬಾಣ
- ಬೌಧ್ಧಿಕ ಮಾನವನ ಉಗಮವಾಗಿದ್ದು - 40000 ವರ್ಷಗಳ ಹಿಂದೆ
- ಬೌದ್ಧಿಕ ಮಾನವನ ಇನ್ನೋಂದು ಹೆಸರು - ಹೋಮೋಸೆಫಿಯನ್
- ಈ ಕಾಲದ ಜನರು ಆಹಾರ ಸಂಗ್ರಹಕಾರು - ಹಳೆಯ ಶಿಲಾಯುಗ
- ಸಿಂಧೂ ನದಿಯ ಉಪನದಿಗಳು - ಸೋಹಾನ್ ಮತ್ತು ಬಿಯಾಸ್
ಶಿಲಾಯುಗದ ನೆಲೆಗಳು
ಹಳೆಯ ಶಿಲಾಯುಗದ ಪ್ರಮುಖ ನೆಲೆಗಳು
ಉತ್ತರ ಪ್ರದೇಶದ - ಮಿರ್ಜಾಪುರ
ಮಧ್ಯಪ್ರದೇಶದ - ಆದಂಗರ್
ಮದ್ರಾಸಿನ - ಅತ್ತಿರಂ ಪಕ್ಕಂ
ಗುಲ್ಬರ್ಗ ಜಿಲ್ಲೆಯ - ಹುಣಸಗಿ
ಬಾಗಲಕೋಟೆಯ - ಕಿಬ್ಬಮ ಹಳ್ಳಿ , ಅಗನವಾಡಿ
ಬಳ್ಳಾರಿ ಜಿಲ್ಲೆಯ - ನಿಟ್ಟೂರು
ಮಾನವ ಮೀನು ಹಿಡಿಯಲು ಪ್ರಾರಂಭಿಸಿದ್ದು - ಹಿಮಯುಗದಲ್ಲಿ
ಸೂಕ್ಷ್ಮ ಶಿಲಾಯುಗದ ನೆಲೆಗಳು
ಗುಜರಾತ್ - ಲಾಗನಾಜ್
ತಮಿಳು ನಾಡು
ಬೆಂಗಳೂರು - ಜಾಲಹಳ್ಳಿ
ಬಳ್ಳಾರಿ - ಸಂಗನ ಕಲ್ಲು
ಕಲ್ಲಿನ ಆಯುಧಗಳಿಗೆ ವಿಶಿಷ್ಟ ರೂಪ ಬಂದಿದ್ದು - ಸೂಕ್ಷ್ಮ ಶಿಲಾಯುಗ
ನವ ಶಿಲಾಯುಗದ ನೆಲೆಗಳು
ಕ್ರಿ.ಪೂ. 4500 ರಷ್ಟು ಹಳೆಯವು - ಬಲೂಚಿಸ್ಥಾನದ ನೆಲೆಗಳು
ದಕ್ಷಿಣ ಭಾರತದಲ್ಲಿ ನವ ಶಿಲಾಯುಗದ ಅವಧಿ - 3000 – 1000 .ಕ್ರಿ.ಪೂ
ನಾಗರೀಕ ಜೀವನ ಪ್ರಾರಂಭವಾಗಿದ್ದು - ನವಶಿಲಾಯುಗ
ನವಶಿಲಾಯುಗದ ಜನರು ಬೆಳೆಯುತ್ತಿದ್ದ ಧಾನ್ಯಗಳು - ರಾಗಿ , ಹುರುಳಿ
ನವ ಯುಗದ ಮಾನವ ರಾಗಿ ಬೆಳೆಯುತ್ತಿದ ಪ್ರದೇಶ - ಕರ್ನಾಟಕ ಮತ್ತು ಆಫ್ರೀಕಾ ಶವಗಳನ್ನು ಮಡಿಕೆಯಲ್ಲಿಟ್ಟು ಹೂಳುತ್ತಿದ್ದ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ನವಶಿಲಾಯುಗದಲ್ಲಿ
ಕರ್ನಾಟಕದ ನೆಲೆಗಳು
ಹಾವೇರಿ ಜಿಲ್ಲೆಯ - ಹಳ್ಳೂರು
ಬಳ್ಳಾರಿ ಜಿಲ್ಲೆಯ - ತೆಕ್ಕಲಕೋಟೆ ಮತ್ತು ಸಂಗನ ಕಲ್ಲು
ಮೈಸೂರು ಜಿಲ್ಲೆಯ - ಟಿ.ನರಸಿಪುರ
ಗುಲ್ಬರ್ಗಾ ಜಿಲ್ಲೆಯ - ಕಡೆಕಲ್
ನವಶಿಲಾಯುಗದ ಮುಂದುವರಿದ ಕಾಲ - ಲೋಹಯುಗ
ತಾಮ್ರ ಮತ್ತು ತವರಗಳ ಮಿಶ್ರಲೋಹ - ಕಂಚು
ಹರಪ್ಪಾ ಸಂಸ್ಕೃತಿ ಈ ಯುಗಕ್ಕೆ ಸೇರಿದ್ದು - ಲೋಹಯುಗ
ಕೆಂಪು ಬಣ್ಣದ ಕಪ್ಪ ಚಿತ್ರಗಳ ಮಡಕೆಗಳು ಅಸ್ತಿತ್ವಕ್ಕೆ ಬಂದಿದ್ದು - ಲೋಹಯುಗ
ಸತ್ತವರನ್ನು ಕಾಯಂ ಆಗಿ ನೆಲೆಸುವ ಮನೆಗಳಲ್ಲಿ ಹೂಳುವ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ಲೋಹ ಯುಗದಲ್ಲಿ
ಲೋಹಯುಗದ ಜನರು ಪೂಜಿಸುತ್ತಿದ್ದದ್ದು - ಮಾತೃ ದೇವತೆ , ವೃಕ್ಷ , ಪ್ರಾಣಿ
ಲೋಹ ಯುಗದ ಜನರು ಬೆಳೆಯುತ್ತಿದ್ದ ಧಾನ್ಯ - ಗೋಧಿ ,ಬಾರ್ಲಿ ಹಾಗೂ ಜೋಳ
ಲೋಹ ಹಾಗೂ ಕಬ್ಬಿಣ ಯುಗದ ನೆಲೆಗಳು
ಲೋಹಯುಗದ ನೆಲೆಗಳು
ಮಹಾರಾಷ್ಟ್ರದ - ಜಾರ್ವೆ
ಕರ್ನಾಟಕದ - ಬ್ರಹ್ಮಗಿರಿ
ಹಾವೇರಿಯ - ಹೂಳ್ಳೂರು
ಕೋಲಾರದ - ಬನಹಳ್ಳಿ
ಬಿಜಾಪುರದ - ತೇರ್ದಾಳ
ಸಮಾಜದಲ್ಲಿ ಆಳುವವರು ಹಾಗೂ ಕೆಳವರ್ಗದವರು ಎಂಬ ಸ್ಥರೀಕರಣ ಆರಂಭವಾದದ್ದು - ಲೋಹಯುಗದಲ್ಲಿ
ನಾಗರೀಕತೆಗಳು ಬೆಳೆದಿದ್ದು ಈ ಯುಗದಲ್ಲಿ - ಲೋಹ ಯುಗದಲ್ಲಿ
ಭಾರಿ ಸಮಾಧಿಗಳ ನಿರ್ಮಾಣವಾದದು - ಕಬ್ಬಿಣ ಯುಗದಲ್ಲಿ
ಕಬ್ಬಿಣ ಯುಗದ ನೆಲೆಗಳು
ಬೆಳಗಾವಿ ಜಿಲ್ಲೆ - ಕಣ್ಣೂರು
ಗುಲ್ಬರ್ಗಾ ಜಿಲ್ಲೆ - ರಾಜನ ಕೋಳೂರು
ಕೊಡಗಿನ - ದೊಡ್ಡ ಮೊಳತೆ
ಹಾವೇರಿ ಜಿಲ್ಲೆಯ ಹಳ್ಳೂರು
ಕೋಲಾರ ಜಿಲ್ಲೆಯ - ಬನಹಳ್ಳಿ
ಭಾರತದಲ್ಲಿಯೆ ಪ್ರಾಚೀನ ವಸ್ತುಗಳು ದೊರೆತ ಸ್ಥಳ - ಹಾವೇರಿ ಜಿಲ್ಲೆಯ ಹಳ್ಳೂರು ( ಕ್ರಿ.ಪೂ. 600 )
ಕ್ರಿ.ಪೂ. 300 ರಷ್ಟು ಹಳೆಯದಾದ ಕಬ್ಬಿಣ ಕುಲುಮೆ ದೊರೆತಿರುವ ಪ್ರದೇಶ - ಕೋಲಾರ ಜಿಲ್ಲೆಯ ಬನಹಳ್ಳಿ
ಬೃಹತ್ ಶಿಲಾ ಸಂಸ್ಕೃತಿಯನ್ನು ಕರೆಯುವರು - Megalithic Calture
ಪ್ರಾಗೈತಿಹಾಸ ಕಾಲದ ಕೊನೆಯ ಘಟ್ಟ - ಕಬ್ಬಿಣ ಯುಗ
ಮಣ್ಣಿನ ಮಡಿಕೆ ತಯಾರಿಸಲು ಪ್ರಾರಂಭವಾದದ್ದು - ನವಶಿಲಾಯುಗದಲ್ಲಿ
ಆವಿಷಾಕರ ಚಕ್ರವನ್ನು ಬಳಕೆಗೆ ಬಂದಿದ್ದು - ನವಶಿಲಾಯುಗದಲ್ಲಿ
ನವಶಿಲಾಯುಗದ ಕಾಲ - ಕ್ರಿ.ಪೂ. 8000 – 4000
ದಕ್ಷಿಣ ಭಾರತದಲ್ಲಿ ಭಾರಿ ಪ್ರಮಾಣದ ರಕ್ಕಸ ಗೂಡು ಗಳನ್ನ ತಯಾರಿಸಿದವರು - ದ್ರಾವಿಡರು
ಮಾನವ ಸಂಕುಲ ಪ್ರಥಮ ಬಾರಿಗೆ ಬಳಸಿದ ಲೋಹ - ತಾಮ್ರ
ನವ ಶಿಲಾಯುಗದ ಮಾನವ ತನ್ನ ಗುಹೆಗಳನ್ನು ಅಲಂಕರಿಸಿದ ಚಿತ್ರಗಳು - ಬೇಟೆ ಮತ್ತು ನೃತ್ಯ ಸನ್ನಿವೇಷಗಳು
ಸಿಂಧೂ ನಾಗರೀಕತೆ ಈ ಯುಗಕ್ಕೆ ಸೇರಿದ್ದು - ಕಂಚಿನ ಯುಗ
ಬೇಟೆ ,ಮೀನು ಹಿಡಿಯುವುದು ಪ್ರಧಾನ ಆರ್ಥಿಕ ವ್ಯವಸ್ಥೆಯಾಗಿದ್ದ ನವಶಿಲಾಯುಗ ದ ಪ್ರದೇಶ - ಖುರ್ಜ ಹಾಮ್
PGW ( Painted gray wave ) ಈ ಯುಗಕ್ಕೆ ಸಂಬಂಧಿಸಿದೆ - ಹಳೆಶಿಲಾಯುಗ
ಮಧ್ಯಪ್ರದೇಶದ ಬಿಂಬೆಟ್ಟಾ ಗುಹೆಯಲ್ಲಿ ಕಂಡು ಹಿಡಿದ ಪರಿಕರಗಳು ಈ ಯುಗಕ್ಕೆ ಸಂಬಂಧಿಸಿದೆ - ಹಳೆಯ ಶಿಲಾಯುಗ
ಪ್ರಾಚೀನ ಲಿಪಿಗಳನ್ನು ಓದುವ ಶಾಸ್ತ್ರಕ್ಕೆ ಹೀಗೆನ್ನುವರು - Paliography
ಮಧ್ಯ ಶಿಲಾಯುಗದ ಮಾನವನು ಉಪಯೋಗಿಸಿದ ಪರಿಕರಗಳು - ಸುಣ್ಣ ಕಲ್ಲು
ಈಶಾನ್ಯ ಭಾರತದಲ್ಲಿ ನವಯುಗಕ್ಕೆ ಸಂಬಂಧಿಸಿದ ವಸ್ತುಗಳು ಹೊರಬಿದ್ದ ರಾಜ್ಯ - ಮೇಘಾಲಯ
ತಾಮ್ರ ವಸ್ತುಗಳು ದೊರೆತ ತಾಮ್ರ ಶಿಲಾಯುಗದ ಸ್ಥಳ - ಅಹಾರ್
ಭಾರತದಲ್ಲಿ ಮೊಟ್ಟ ಮೊದಲ ಮಾನವನ ಅವಶೇಷಗಳು ದೊರೆತ ಪ್ರಾಂತ್ಯ - ಪಶ್ಚಿಮ ಏಷ್ಯಾ
ವೇಧ ಸಂಸ್ಕೃತಿಯು ಈ ನದಿ ತೀರದಲ್ಲಿ ಅಭಿವೃದ್ದಿ ಹೊಂದಿದೆ - ಸರಸ್ವತಿ
ವಿಶ್ವದಲ್ಲಿಯೇ ಮೊಟ್ಟ ಮೊದಲು ಕಬ್ಬಿಣವನ್ನು ಇಲ್ಲಿ ಕಂಡುಹಿಡಿಯಲಾಯಿತು - ಯುರೇಷಿಯಾ
ವರ್ತಕ ವಾಣಿಜ್ಯಗಳ ಆರಂಭವಾದದ್ದು - ಕಂಚಿನ ಯುಗದಲ್ಲಿ
ಮಹಾಭಾರತದ ನಿಜವಾದ ಹೆಸರು - ಜಯಸಂಹಿತ
ಅಮೆರಿಕಾ ನಾಗರಿಕತೆ
ಅಮೆರಿಕಾದ ನಾಗರಿಕತೆ
ಅಮೆರಿಕಾದ ನಾಗರಕತೆಯ ಪ್ರಮುಖ ಸಂಸ್ಕೃತಿಗಳು - ಮಾಯಾನಾಗರಿಕತೆ , ಅಜೆಟಿಕ್ ನಾಗರಿಕತೆ , ಇಂಕಾ ನಾಗರಿಕತೆ
ಹೊಸ ಜಗತ್ತಿನ ನಾಗರಿಕತೆ ಎಂದು ಕರೆಯಲ್ಪಟ್ಟ ನಾಗರಿಕತೆ - ಅಮೆರಿಕಾದ ನಾಗರಿಕತೆ
ಮಾಯಾ ಸಂಸ್ಕೃತಿ ಆರಂಭವಾದದ್ದು - ಕ್ರಿ.ಪೂ.6 ನೇ ಶತಮಾನದಲ್ಲಿ
ಮಾಯಾ ನಾಗರಿಕತೆಗಳು ಆರಂಭವಾದ ನಗರಗಳು , ಮೆಕ್ಸಿಕೊ , ಗ್ವಾಟೆಮಾಲಾ ಹಾಗೂ ಹೊಂಡುರಾಸ್
ಮಾಯಾ ಜನರು ಗ್ರಹಗಳ ವಿಕ್ಷಣಿಗೆ ಬಳಸುತ್ತಿದ್ದ ಸ್ಥಳ - ದೇವಾಲಯಗಳ ಶಿಖರಗಳು
ಇಂಕಾ ನಾಗರಿಕತೆ ಈ ಪ್ರದೇಶದಲ್ಲಿ ಕಾಣಿಸಿಕೊಂಡಿತು - ಪೆರು
ಟಿಟಿಕಾಕಾ ಸರೋವರವನ್ನು ಹೊಂದಿರುವ ದೇಶ - ಅಮೆರಿಕಾ
ಟಿಟಿಕಾಕಾ ಸರೋವರದ ದಡದಲ್ಲಿ ಏಳಿಗೆಗೆ ಬಂದಂತಹ ಮಾಗರಿಕತೆ - ಇಂಕಾ ನಾಗರಿಕತೆ
ಇಂಕಾ ನಾಗರಿಕತೆಗೆ ವಿದಾಯ ಹಾಡಿದವರು - ಸ್ಪಾನಿಷ್ ಜನರು
ಅಜೆಟಿಕ್ ಸಂಸ್ಕೃತಿಯು ವಿಕಸಿತವಾದ ಪ್ರದೇಶ - ಮೆಕ್ಸಿಕೋ
ಇವರ ಪಂಚಾಂಗ ಇದರ ಮೇಲೆ ಬರೆಯಲಾಗಿತ್ತು - ಕಲ್ಲಿನ ಚಕ್ರದ ಮೇಲೆ
ಕದಂಬರು
- ಕರ್ನಾಟಕದಲ್ಲಿ ಮೊದಲು ಹುಟ್ಟು ಹಾಕಿದ ಕನ್ನಡ ಸಾಮ್ರಾಜ್ಯ - ಕದಂಬರು .
- ಕದಂಬರು ಆಳಿದ್ದ ಕ್ರಿ.ಶ.4 ನೇ ಶತಮಾನದಿಂದ 6 ನೇ ಶತಮಾನದವರೆಗೆ
- ಕದಂಬರ ರಾಜಧಾನಿ - ಬನವಾಸಿ .
- ಬನವಾಸಿ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಉತ್ತರ ಕನ್ನಡ .
- ಕದಂಬರ ವಂಶದ ಸ್ಥಾಪಕ ದೊರೆ - ಮಯೂರ ವರ್ಮ .
- ಕದಂಬರ ಲಾಂಛನ - ಸಿಂಹ .
- ಕದಂಬರ ಧ್ವಜ - ವಾನರ .
- ಮಹಾಭಾರತ ಕಾಲದಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ವೈಜಯಂತಿ ಅಥವಾ ವನವಾಸಿ .
- ಟಾಲೆಮಿಯು ತನ್ನ ಕೃತಿ Geography ಯಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆದಿದ್ದಾನೆ - ಬೈಜಾಂಟಿಯನ್ .
ಕದಂಬರ ಮೂಲ
- ದೈವಾಂಶ ಸಿದ್ದಾಂತ
- ನಾಗ ಸಿದ್ದಾಂತ
- ಜೈನ ಸಿದ್ದಾಂತ
- ನಂದಾ ಮೂಲ
- ತಮಿಳು ಮೂಲ
- ಕನ್ನಡ ಮೂಲ
- ಕದಂಬರ ಮೂಲ ಪುರುಷ - ಮಯೂರ ವರ್ಮ .
- ಮಯೂರವರ್ಮನ ತಂದೆಯ ಹೆಸರು - ವೀರಶರ್ಮ .
- ಮಯೂರವರ್ಮನ ಗುರುವಿನ ಹೆಸರು - ವೀರಶರ್ಮ .
- ಮಯೂರವರ್ಮನನ್ನ ಅವಮಾನಿಸಿದ ಕಂಚಿಯ ಪಲ್ಲವ ದೊರೆ - ಶಿವಸ್ಕಂದ ವರ್ಮ .
- ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ
- ಚಂದ್ರವಳ್ಳಿಯ ಬಳಿ ಕೆರೆಯನ್ನು ನಿರ್ಮಿಸಿದ ಕದಂಬ ದೊರೆ - ಮಯೂರವರ್ಮ
- ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ .
- ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ - ಮಯೂರವರ್ಮ
- ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು - ಕಂಗವರ್ಮ .
- ಧರ್ಮರಾಜ , ಧರ್ಮಮಹಾರಾಜ ಎಂಬ ಬಿರುದನ್ನು ಧರಿಸಿದ್ದ ಕದಂಬ ದೊರೆ - ಕಾಕುಸ್ಥವರ್ಮ .
- ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ .
- ಹಲ್ಮಿಡಿ ಶಾಸನದ ಕರ್ತೃ - ಕಾಕುಸ್ಥವರ್ಮ .
- ತಾಳಗುಂದ ಶಾಸನದ ಕರ್ತೃ - ಕಾಕುಸ್ಥವರ್ಮ .
- ಕದಂಬರ ರಾಜ್ಯಾಡಳಿತದಲ್ಲಿ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಮಂತ್ರಿಮಂಡಳವನ್ನು ಈ ಹೆಸರಿನಿಂದ ಕರೆಯುವರು - ಪಂಚಪ್ರಧಾನರು .
- ಪ್ರಧಾನ ಮಂತ್ರಿ - ಪ್ರಧಾನ
- ಅರಮನೆಯ ವ್ಯವಹಾರಗಳ ಮಂತ್ರಿ - ಮನೆಸೇರ್ಗಡೆ .
- ವಿದೇಶಾಂಗ ವ್ಯವಹಾರಗಳ ಮಂತ್ರಿ - ತಂತ್ರ ಪಾಲ .
- ತಾಂಬೂಲ ಪಾರು ಪತ್ಯಗಾರ - ಕ್ರಮುಖ ಪಾಲ .
- ಮಂತ್ರಿಮಂಡಲದ ಪ್ರಧಾನ ಕಾರ್ಯ ದರ್ಶಿ - ಸಭಾಕಾರ್ಯ ಸಚಿವ .
- ಕದಂಬರ ಆಡಳಿತದಲ್ಲಿ ಜಿಲ್ಲೆಯ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮನ್ನೇಯ .
- ಪಟ್ಟಣ್ಣದ ಾಡಳಿತ ನೋಡಿಕೊಳ್ಳುತ್ತಿದ್ದವನು - ಪಟ್ಟಣ್ಣ ಸ್ವಾಮಿ .
- ಕದಂಬರು ಹೊರೆಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರ್ಜುಂಕ .
- ವ್ಯಾಪಾರ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬಿಲ್ ಕೊಡೆ .
- ಸಾರಿಗೆ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕಿರುಕುಳ .
- ಗೆರಿಲ್ಲಾಯುದ್ಧ ತಂತ್ರಕ್ಕೆ ಹೆಸರಾಗಿದ್ದ ದಕ್ಷಿಣ ಭಾರತದ ಮನೆತನ - ಕದಂಬರು .
- ಕದಂಬರ ಕೂಟ ಯುದ್ದವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಗೆರಿಲ್ಲಾ .
- ಕದಂಬರ ಸಮಾಜದಲ್ಲಿದ್ದ ಕುಟುಂಬ ಪದ್ದತಿ - ಮಾತೃ ಪ್ರಧಾನ , ಅವಿಭಕ್ತ ಕುಟುಂಬ ಪದ್ದತಿ .
- ಕದಂಬ ಸಾಮ್ರಾಜ್ಯವು ಈ ಲಕ್ಷಮಗಳನ್ನು ಹೊಂದಿತ್ತು - ಭಾರತೀಕರಣ .
- ಕದಂಬರು ಈ ಧರ್ಮದ ಅವಲಂಬಿಗಳು - ವೈದಿಕ ಧರ್ಮ .
- ಕದಂಬರ ಕುಲದೇವರು - ತಾಳಗುಂದದ ಪ್ರಾಣೇಶ್ವರ .
- ಕದಂಬರ ಮನೆಯ ದೇವರು - ಬನವಾಸಿಯ ಮಧಕೇಶ್ವರ .
- ಕದಂಬರ ಕಾಲದಲ್ಲಿ ಬನವಾಸಿಗೆ ಆಗಮಿಸಿದ ಚೀನೀಯಾತ್ರಿಕ - ಹ್ಯೂಯನ್ ತ್ಸಾಂಗ್ .
- ಕದಂಬರ ಮುಖ್ಯ ವೃತ್ತಿ - ವ್ಯವಸಾಯ .
- ಕದಂಬರ ಕಾಲದ ಭ ಕಂದಾಯ ಪದ್ದತಿ - ಸರ್ವ ನಮಸ್ಯ , ತ್ರೀಬೋಗ , ಹಾಗೂ ತಾಳವೃತ್ತಿ.
- ಕದಂಬರ ರೇವು ಪಟ್ಟಣ್ಣಗಳು - ಗೋವಾ , ಮಂಗಳೂರು , ಹೊನ್ನವರ , ಅಂಕೋಲ ಹಾಗೂ ಭಟ್ಕಳ
- ಕದಂಬರ ವಿಶಿಷ್ಠ ಕೊಡುಗೆಗಳು - ನಾಣ್ಯ ಪದ್ದತಿ .
- ಕದಂಬರು ಬಿಡುಗಡೆ ಮಾಡಿದ ಬೆಳ್ಳಿ ನಾಣ್ಯದ ಹೆಸರು - ಪದ್ಮಟಂಕ .
- ಕದಂಬರ ಪ್ರಮುಖ ನಾಣ್ಯಗಳು - ಗದ್ಯಾಣ , ದ್ರುಮ್ಮ , ಪಮ , ಸುವರ್ಣ ,
- ಕದಂಬರ ಕಾಲದ ಶಿಕ್ಷಣ ಪದ್ದತಿ - ಗುರುಕುಲ ಶಿಕ್ಷಮ ಪದ್ದತಿ ,
- “ ಘಟಿಕ ಸಾಹಸಿ ” ಎಂಬ ಬಿರಿದನ್ನು ಪಡೆಯುತ್ತಿದ್ದವರು - ಘಟಕದಲ್ಲಿ ಓದಿದ ವಿಧ್ಯಾರ್ಥಿಗಳಿಗೆ .
- ಇಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇತ್ತು - ಬಳ್ಳಿಗಾಮೆ , ತಾಳಗುಂದ , ಬನವಾಸಿ ಹಾಗೂ ಅಗ್ರಹಾರ .
- ಕದಂಬರ ಕಾಲದ ಪ್ರಸಿದ್ದ ವಿದ್ಯಾ ಕೇಂದ್ರ - ಕಂಚಿ .
- ಕದಂಬರ ಆರಂಭದ ಶಾಸನಗಳು ಈ ಭಾಷೆಯಲ್ಲಿದೆ - ಪ್ರಾಕೃತ .
- ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ ( ಶಾಂತಿ ವರ್ಮ ಬರೆಯಿಸಿದ )
- “ ಮದನ ತಿಲಕ ” ಕೃತಿಯ ಕರ್ತೃ - ಚಂದ್ರರಾಜ .
- ಚಂದ್ರ ಚೂಡಾ ಮಣಿ ಕೃತಿಯ ಕರ್ತೃ - ನಾಗವರ್ಮ .
- “ ಸುಕುಮಾರ ಚರಿತೆ ” ಯ ಕರ್ತೃ - ಶಾಂತಿನಾಥ
- “ ಕೌಂತಳೇಶ್ವರ ದೌತ್ಯಂ ” ಕೃತಿಯ ಕರ್ತೃ - ಎರಡನೇ ಕಾಳಿದಾಸ .
- “ ಕದಂಬ ಶೈಲಿ ” ಎಂಬ ವಾಸ್ತುಶಿಲ್ಪ ಶೈಲಿಯನ್ನು ಸೃಷ್ಠಿಸಿದವರು - ಕದಂಬರು .
- ಕದಂಬರ ಆರಂಭದ ರಚನೆ - ಮೃಗೇಶ ವರ್ಮನು ರಚಿಸಿದ ಜೈನ ಬಸದಿ .
- ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ - ತಾಳಗುಂದದ ಪ್ರಣವೇಶ್ವರ ದೇವಾಲಯ .
- ಹಲ್ಮಿಡಿ ಶಾಸನ ಈ ಜಿಲ್ಲೆಯಲ್ಲಿ ದೊರೆಯುತ್ತದೆ - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ .
- ಮಯೂರ ವರ್ಮನನ್ನು “ ದ್ವೀಜೋತಮ ” ನೆಂದು ತಿಳಿಸಿರುವ ಶಾಸನದ ಹೆಸರು - ಮಳವಳ್ಳಿ ಶಾಸನ .
- ಕಂಚಿಯಿಂದ ಹೊರನಡೆದ ಮಯೂರವರ್ಮನು ಮೊದಲು ಶಸ್ತ್ರಸ್ತ್ರ ಪಡೆಯನ್ನು ಕಟ್ಟಿದ ಪ್ರದೇಶ - ಶ್ರೀ ಶೈಲ
- “ಧರ್ಮ ಮಹಾರಾಜಾಧಿರಾಜ ” ಎಂಬ ಬಿರದ್ದನ್ನು ಹೊಂದಿದ್ದ ಕದಂಬರ ಅರಸ - ಕಂಗವರ್ಮ ಅಥಾವ ಕೊಂಗುಣಿ ವರ್ಮ .
- ತಾಳಗುಂದ ಶಾಸನ ಈ ಜಿಲ್ಲೆಯಲ್ಲಿ ದೊರಕಿದೆ - ಶಿವಮೊಗ್ಗ .
- ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಕದಂಬ ದೊರೆ - ಕಾಕುಸ್ಥವರ್ಮ .
- ಮೃಗೇಶನ ಮತ್ತೊಂದು ರಾಜಧಾನಿ - ಹಲಸಿ .
- ಕದಂಬರ ಪ್ರಾಂತ್ಯದ ಘಟಕಗಳು - ಕಂಪಣ .
- ಟಂಕ ಹಾಗೂ ಗಧ್ಯಾಣ ಎಂಬ ನಾಣ್ಯಗಳನ್ನು ಚಲಾವಣಿಗೆ ತಂದ ಮೊದಲಿಗರು - ಕದಂಬರು .
- ಚಂದ್ರವಳ್ಳಿಯ ಶಾಸನ ಈ ಜಿಲ್ಲೆಯಲ್ಲಿ ದೊರೆತಿದೆ - ಚಿತ್ರದುರ್ಗ .
- ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ .
- ಮಹಾಭಾರತದಲ್ಲಿ ಬನವಾಸಿಯನ್ನು ಈ ಹೆಸರಿನಿಂದಲೂ ಕರೆದ್ದಿದ್ದಾರೆ - ಕುಂತಲ ದೇಶ .
- ಪ್ರಣವೇಶ್ವರನ ಹೆಸರಿನಲ್ಲಿ ಕೆರೆಯನ್ನ ಕಟ್ಟಿಸಿದ ದೊರೆ - ಕಾಕುಸ್ಥವರ್ಮ .
- ಕದಂಬರು ಈ ನದಿಯ ದಡದಲ್ಲಿ ತಮ್ಮ ರಾಜ್ಯವನ್ನ ಸ್ಥಾಪಿಸಿದರು - ವರದಾ ನದಿ .
- ತಾಳಗುಂದದ ಪ್ರಾಚೀನ ಹೆಸರು - ಸ್ಥಣ ಕುಂದೂರು
- ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ
- ಮಯೂರವರ್ಮನು ವಿಧ್ಯಾಭ್ಯಾಸಕ್ಕಾಗಿ ಹೋದ ವಿದ್ಯಾಕೇಂದ್ರ - ಕಂಚಿ
- ಕದಂಬರ ಈ ದೊರೆಯನ್ನು ಕುಂತಳ ರಾಜ್ಯದ ಏಕಮಾತ್ರ ದೊರೆ ಎಂದು ಹೇಳಲಾಗಿದೆ - ಭಗೀರಥ ವರ್ಮ
- ಗುಪ್ತರೊಂದಿಗೆ ವೈವೈಹಿಕ ಸಂಬಂಧ ಹೊಂದಿದ್ದ ಕದಂಬ ದೊರೆ - ಕಾಕುಸ್ಥ ವರ್ಮ
- ಕದಂಬರ ಕೊನೆಯ ದೊರೆ - ಹರಿವರ್ಮ -
- ಕದಂಬರ ಆಳ್ವಿಕೆಯನ್ನು ಕೊನೆಗಾಣಿಸಿದ ಸಾಮ್ರಾಜ್ಯ - ಬಾದಾಮಿ ಚಾಲುಕ್ಯರು
- ತಾಳಗುಂದ ಶಾಸನವು ಈ ಅರಸರನ್ನು “ ಆಬರಣ ” ಎಂದು ಬಣ್ಣಿಸಿದೆ - ಕಾಕುಸ್ಥ ವರ್ಮ
- ಹಲ್ಮಿಡಿ ಶಾಸನದ ಕಾಲ - ಕ್ರ.ಶ.450
ಭಾರತದಲ್ಲಿ ಸಾಮ್ರಾಜ್ಯಗಳ ಉಗಮ
ಶುಂಗ ವಂಶ
ಶುಂಗ ವಂಶದ ಸ್ಥಾಪಕ - ಪುಷ್ಯಮಿತ್ರ ಶುಂಗ
ಶುಂಗ ವಂಶದ ಧರ್ಮ - ವೈದಿಕ ಧರ್ಮ
ಕಾಳಿದಾಸನು ಶುಂಗ ವಂಶದ ರಾಜನನ್ನು ನಾಯಕ ಪಾತ್ರಧಾರಿಯನ್ನಾಗಿ ರಚಿಸಿದ ಗ್ರಂಥದ ಹೆಸರು - ಮಾಳವಿಕಾಗ್ನಿ ಮಿತ್ರ
ಪುಷ್ಯ ಮಿತ್ರ ಶುಂಗ ಮಾಡಿದ ಅಶ್ವಮೇಧ ಯಾಗವನ್ನು ಸಮೀಕ್ಷಿಸಿದ ವ್ಯಕ್ತಿ - ಪತಂಜಲಿ
ಶುಂಗ ವಂಶದ ಗೋತ್ರ - ಭಾರಧ್ವಾಜ
ಪುಷ್ಯ ಮಿತ್ರ ಶುಂಗನ ಆಡಳಿತಾವಧಿಯಲ್ಲಿ ಬಾರತದ ಮೇಲೆ ದಂಡೆತ್ತಿ ಬಂದ ವಿದೇಶಿಯರು - ಡ್ರೆಮಟ್ರಿಯಸ್
ಶುಂಗರ ಕೊನೆಯ ಅರಸ - ದೇವಭೂತಿ
ಶುಂಗರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶಿಲ್ಪ ಚಿಹ್ನೆ - ಬಾಹ್ಹತ್ ಸ್ತೂಪ
ಪುಷ್ಯ ಮಿತ್ರನ ಮಗನ ಹೆಸರು - ಅಗ್ನಿಮಿತ್ರ
ಬೌದ್ಧ ಧರ್ಮ ಪೀಡನೆ ಧರ್ಮ ವಿಧಾನವನ್ನು ಅನುಸರಿಸಿದ ಶುಂಗ ದೊರೆ - ಪುಷ್ಯ ಮಿತ್ರ
ಅಂತಃ ಪುರದಲ್ಲಿ ಹತ್ಯೆಗೊಳದಗಾದ ಶುಂಗ ದೊರೆ - ವಸುಮಿತ್ರ
ಚಕ್ರವರ್ತಿ ಎಂದು ಬಿರುದಾಂಕಿತ ಶುಂಗ ದೊರೆ - ಪುಷ್ಯ ಮಿತ್ರ
ಮಾಳವಿಕಾಗ್ನಿ ಮಿತ್ರ ಕೃತಿಯ ಕರ್ತೃ - ಕಾಳಿದಾಸ
ಕಣ್ವ ವಂಶ
ಶುಂಗರ ಕೊನೆಯ ದೊರೆ ದೇವಭೂತಿಯನ್ನು ಕೊಲೆಗೈದು ಕಣ್ವ ವಂಶವನ್ನು ಸ್ಥಾಪಿಸಿದವನು - ವಾಸುದೇವ ಕಣ್ವ
ಕರ್ಮಾಚಾರಿಗಳೆಂದರೆ - ಕೂಲಿಕಾರ್ಮಿಕರ
ಪುರಾಣಗಳ ಪ್ರಕಾರ ಕಣ್ವರು - 45 ವರ್ಷ ರಾಜ್ಯವನ್ನಾಳಿದ
ವಾಸುದೇವ ಕಣ್ವ ನಂತರ ಅಧಿಕಾರಕ್ಕೆ ಬಂದವರು - ಭೂಮಿಮಿತ್ರ
ಕಣ್ವರ ಕಾಲದಲ್ಲಿ ಮಗಧವನ್ನು ಆಕ್ರಮಿಸಿದವರು - - ಶಾತವಾಹನರು
ಮೌರ್ಯಯುಗದ ನಂತರ ವಿಸ್ತೃತವಾಗಿ ಬಳಕೆಯಲ್ಲಿದ್ದ ನಾಣ್ಯ - ಫಣ
ಸುಶರ್ಮನ ಮುಂಚೆ ಕಮ್ವ ದೊರೆ - ನಾರಾಯಣ
ಕಣ್ವರ ಕೊನೆಯ ದೊರೆ - ಸುಶರ್ಮ
ಸುಶರ್ಮನನ್ನು ಕೊಂದವರು - ಶಾತವಾಹನರು
3 ನೇ ಬ್ಯಾಕ್ಟ್ರಿಯನ್ ಗ್ರೀಕರು
ಕ್ರಿ.ಪೂ.2 ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರು - ಬ್ಯಾಕ್ಟ್ರಿಯಾನ್ ಪಾಲಕರಾದ ಗ್ರೀಕರು
ಬ್ಯಾಕ್ಟ್ರಿಯಾನ್ ಗ್ರೀಕರು ಈ ಮೂಲದವರು - ಇಂಡೋಗ್ರಾಕರು
ಕ್ರಿ.ಪೂ. 2 ನೇ ಶತಮಾನದಲ್ಲಿ ಭಾರತಕ್ಕೆ ದಂಡೆತ್ತಿ ಬಂದ ಗ್ರೀಕ್ ದೊರೆ - ಡೆಮಟ್ರಿಯನ್
ಡೆಮಟ್ರಿಯನ್ ನ ರಾಜಧಾನಿ - ಪಂಜಾಬ್ ನ ಸಕಾಲ ( ಸಿಯಲ್ ಕೋಟ್ )
ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಚಿನ್ನದ ನಾಣ್ಯಗಳನ್ನು ಪ್ರವೇಶಗೊಳಿಸಿದವರು - ಇಂಡೋ ಗ್ರೀಕರು
ಗ್ರೀಕರ ಪ್ರಭಾವದಿಂದ ಭಾರತದಲ್ಲಿ ಆವಿಷ್ಕಾರಗೊಂಡ ಶಿಲ್ಪಕಲೆ - ಗಾಂಧಾರ
ಹಿಂದೂ - ಗ್ರೀಕರ ಶಿಲ್ಪಕಲೆಯ ಮಿಶ್ರಮ - ಗಾಂಧಾರ ಶಿಲ್ಪ
ವಾಯುವ್ಯ ಭಾರತದ ಮೇಲೆ ಪ್ರಥಮವಾಗಿ ದಂಡೆತ್ತಿ ಆಳ್ವಿಕೆ ನಡೆಸಿದ ವಿದೇಶಿಯರು - ಬ್ಯಾಕ್ಟ್ರಿಯನ್ ಗ್ರೀಕರು
ಡೆಮಿಟ್ರಿಯನ್ ನ ಸೇನಾಧಿಪತಿ - ಮಿನಾಂಧರ್
ಭಾರತದಲ್ಲಿ ಸ್ವತಂತ್ರ್ಯ ಬ್ಯಾಕ್ಟ್ರಿಯಾ ರಾಜ್ಯವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಡಿಯೋಡೋಟಸ್
ಯೂಕ್ರೆಟೈಟ್ಸ್ ನ ರಾಜಧಾನಿ - ಸಂಗ್ಲಾ
ಗ್ರೀಕರ ಕ್ಯಾಲೆಂಡರನ್ನು ಬಾರತದಲ್ಲಿ ಪ್ರವೇಶಗೊಳಿಸಿದವನು - ಡೆಮಿಟ್ರಿಯನ್
ಯವನಿಕ ಪದದ ಅರ್ಥ - ಪರದೆ ಅಥವಾ ತೆರೆ
ಶಕರು / ಸಿಥಿಯನ್ನರು
ಶಕರನ್ನು ಪರಿಶುದ್ದ ಶೂದ್ರರೆಂದು ಬಣ್ಣಿಸಿದ ಗ್ರಂಥ - ಮಹಾಭಾಷ್ಯ
ಶಕರನ್ನು ಕ್ಷತ್ರಿಯರನ್ನಾಗಿ ವ್ಯಾಖ್ಯಾನಿಸಲಾದ ಸಾಹಿತ್ಯ - ಮನುಸಂಹಿತೆ
ಶಕರು ಪ್ರಾರಂಭದಲ್ಲಿ - ಪಾರ್ಥಿಯನ್ನರ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು
ರಾಜನಾಥ ನಂತರ ಶಕರು ಧರಿಸಿದ ಬಿರುದು - ಸತ್ರಪ
ಶಕರು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡ ಪ್ರಾಂತ್ಯ - ಸಿಂಧೂ ಪ್ರಾಂತ್ಯ
ಶಕರ ಮತ್ತೋಂದು ಹೆಸರು - ತೋಚಾರಯನ್ಸ್
ಮಹಾರಾಜ ಮಹಾತ್ಮ ಎಂಬ ಬಿರುದು ಹೊಂದಿದ್ದ ಶಕ ದೊರೆ - ಮಾವುಸ್
ಶಕರ ಪ್ರಥಮ ವೈರಿಗಳು - ಕುಶಾನರು
ಶಕರ ಪ್ರಸಿದ್ದ ಅರಸ - ಮೊದಲನೇ ರುದ್ರಧಮನ
ರುದ್ರಧಮನ ತಂದೆಯ ಹೆಸರು - ಜಯಧಮನ
ಶಕರ ಕಾಲದ ಸಣ್ಣ ನಗರವನ್ನು ಈ ಹೆಸರಿನಿಂದ ಕರೆಯುವರು - ನಿಗಮ್
ಶಕ ವರ್ಷ ಯಾವುದು - ಕ್ರಿ.ಶ. 78
ಬಾರತದಲ್ಲಿ ಟೋಪಿ ಮತ್ತು ಪಾದರಕ್ಷೆಯನ್ನು ಪ್ರವೇಶಗೊಳಿಸಿದವರು ಮಧ್ಯ ಏಷ್ಯಾದವರು
ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ರುದ್ರಧಮನ
ಮಾಳ್ವ ರಾಜ್ಯದ ರಾಜಧಾನಿ - ಉಜ್ಜಯಿನಿ
ವಿಕ್ರಮಶಕೆ ಪ್ರಾರಂಭವಾದುದು - ಕ್ರಿ..ಪೂ.58 ರಲ್ಲಿ
ಪಾರ್ಥಿಯನ್ನರು
ಪ್ರಥಮ ಪಾರ್ಥಿಯನ್ ರಾಜ - ವನೋನ್
ಗ್ರೀಕರು ದಕ್ಷಿಣ ಅಫ್ಘಾನಿಸ್ತಾನವನ್ನು ಈ ಹೆಸರಿನಿಂದ ಕರೆದಿದ್ದಾರೆ - ಅರ್ಕೋಸಿಯಾ
ಪಾರ್ಥಿಯನ್ನರ ಕಾಲದಲ್ಲಿ ಜಿಲ್ಲಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ - ಮೆರಿಡಾರ್ಕ್
ವಿದೇಶಿ ಭೂಭಾಗದ ಮೇಲೆ ಯುದ್ಧದಲ್ಲಿ ಪಾಲ್ಗೋಂಡ ಮೊಟ್ಟ ಮೊದಲ ಭಾರತೀಯ ಸೇನಾಪಡೆ - ಕ್ರೆರೆಕ್ಸಸ್ ನ ಸೇನಾಪಡೆ
ಶಕರ ನಂತರ ಭಾರತದ ಪ್ರಾಂತ್ಯಗಳನ್ನು ಆಕ್ರಮಿಸಿದ ವಿದೇಶಿಯರು - ಪಾರ್ಥಿಯನ್ನರು
ಪಾರ್ಥಿಯನ್ನರ ಜನ್ಮಸ್ಥಳ - ಇರಾನ್
ವಾಯುವ್ಯ ಭಾರತದಲ್ಲಿ ಪಾರ್ಥಿಯನ್ನರ ಸ್ಥಾನವನ್ನು ಆಕ್ರಮಿಸಿದವರು - ಕುಶಾನರು
ಥಾನೇಶ್ವರದ ವರ್ಧನರು
ಸ್ಥಾನೇಶ್ವರದ ವರ್ಧನರು
ಗುಪ್ತರ ಪತನಾ ನಂತರ ಉತ್ತರ ಭಾರತದಲ್ಲಿ ಅನೇಕ ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡವು ಅವಗಳೆಂದರೇ
a. ವಲ್ಲಭಿಯಲ್ಲಿ - ಮೈತ್ರಕರು
b. ಕನೌಜಿನಲ್ಲಿ - ಮೌಖಾರಿಗಳು
c. ಥಾಣೇಶ್ವರದಲ್ಲಿ - ವರ್ಧನರು
d. ಮಾಳವದಲ್ಲಿ - ಮಂಡಸೋರ್ ನ ಯಶೋವರ್ಮನ್
e. ಕಾಶ್ಮೀರದಲ್ಲಿ - ಕಾರ್ಕೋಟಕರು
f. ಕಾಮರೂಪದಲ್ಲಿ - ವರ್ಮರು
g. ಬಂಗಾಳದಲ್ಲಿ - ಗೌಡಪಾದರು
ಆಧಾರಗಳು
ಕ್ರಿ.ಶ.7 ನೇ ಶತಮಾನದ ಹೊತ್ತಿಗೆ ವರ್ಧನ ಮನೆತನ ಪ್ರಮುಖ ರಾಜಕೀಯ ಶಕ್ತಿಯಾಗಿ ಸವಿಸ್ತಾರವಾದ ಸಾಮ್ರಾಜ್ಯ ಸ್ಥಾಪಿಸಿತು
ಹ್ಯೂಯನ್ ತ್ಸಾಂಗ್ ನ - ಸಿ -ಯು -ಕಿ ಕೃತಿ
ಬಾಣ ಕವಿಯ - ಹರ್ಷಚರಿತೆ
ಯಾತ್ರಾರ್ಥಿಗಳ ರಾಜ , ಕಾನೂನಿನ ಗುರು ಪ್ರಸ್ತುತ ಶಾಖ್ಯ ಮುನಿ ಎಂಬ ಹೆಸರುಗಳಿಂದ ಪ್ರಖ್ಯಾತಿ ಹೊಂದಿದ ಯಾತ್ರಿಕ - ಹ್ಯೂಯನ್ ತ್ಸಾಂಗ್
ಬಾಣನು ಈತನ ಆಸ್ಥಾನದಲ್ಲಿದ್ದನು - ಹರ್ಷವರ್ಧನ
ಹರ್ಷವರ್ಧನ ಜೀವನ ವೃತ್ತಾಂತಗಳನ್ನು ಒಳಗೊಂಡಿರುವ ಕೃತಿ - ಬಾಣ ಕವಿಯ ಹರ್ಷಚರಿತ
ವರ್ಧನ ಸಾಮ್ರಾಜ್ಯದ ಸ್ಥಾಪಕ - ಪುಷ್ಯಭೂತಿ
ವರ್ಧನರ ಪ್ರಸಿದ್ಧ ಅರಸ - ಹರ್ಷವರ್ಧನ
ಅಲಹಾಬಾದಿನ ಪ್ರಾಚೀನ ಹೆಸರು - ಪ್ರಯಾಗ್
ಕಾಶಿಯ ಪ್ರಾಚೀನ ಹೆಸರು - ಬನಾರಸ್
ವರ್ಧನರ ಕಾಲದ ಪ್ರಸಿದ್ದ ಹಿಂದೂ ದೇವತೆಗಳು - ವಿಷ್ಣು ಮತ್ತು ಶಿವ
ವರ್ಧನರ ಕಾಲದಲ್ಲಿ ಬೌದ್ಧ ಧರ್ಮದ ಈ ಪಂಥವು ಹೆಚ್ಚು ಪ್ರಚಲಿತದಲ್ಲಿತ್ತು - ಮಹಾಯಾನ
ಪ್ರಯಾಗ್ ಧರ್ಮ ಸಭೆಯನ್ನು ನಡೆಸುತ್ತಿದ್ದ ವರ್ಧನ ಅರಸ - ಹರ್ಷವರ್ಧನ
ಅಲಹಾಬಾದಿನ ಮಹಾ ಸಭೆಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ಮಹಾ ಮೋಕ್ಷ ಪರಿಷತ್
ರತ್ನಾವಲ್ಲಿ ,ಪ್ರಿಯದರ್ಶಿಕಾ ಹಾಗೂ ನಾಗನಂದ ಮುಂತಾದ ಸಂಸ್ಕೃತ ನಾಟಕದ ಕರ್ತೃ - ಹರ್ಷವರ್ಧನ
ಹರ್ಷಚರಿತ ಹಾಗೂ ಕಾದಂಬರಿ ಕೃತಿಯ ಕರ್ತೃ - ಬಾಣ ಕವಿ
ಸೂರ್ಯ ಶತಕ ಕೃತಿಯ ಕರ್ತೃ - ಮಯೂರು
ವಾಕ್ಯಪದೀಯ ಕೃತಿಯ ಕರ್ತೃ - ವ್ಯಾಕರಣ ಪಂಡಿತ
ನಲಂದಾ ವಿಶ್ವವಿದ್ಯಾ ನಿಲಯದ ಲಾಂಛನ - ಧರ್ಮಚಕ್ರ
ನಲಂದಾ ವಿಶ್ವವಿದ್ಯಾ ನಿಲಯದ ಸ್ಥಾಪನೆಗೆ ಧನ ಸಹಾಯ ಮಾಡಿದ ಶ್ರೀಮಂತ ವ್ಯಾಪಾರಿ - ಸಖರಾದಿತ್ಯ
ನಲಂದಾ ವಿಶ್ವವಿದ್ಯಾ ನಿಲಯದ ವಿಧ್ಯಾರ್ಥಿಗಳ ವಸತಿ ಗೃಹಗಳನ್ನು ಈ ಹೆಸರಿನಿಂದ ಕರೆಯುವರು - ಸಂಘರಾಮ
ನಲಂದಾ ವಿಶ್ವವಿದ್ಯಾ ನಿಲಯಕ್ಕೆ ಪ್ರವೇಶ ಪರೀಕ್ಷೆ ನಡೆಸುತ್ತಿದ್ದವರು - ದ್ವಾರಪಾಲಕ ಅಥವಾ ಪಂಡಿರು
ನಲಂದಾ ವಿಶ್ವವಿದ್ಯಾ ನಿಲಯದ ಶಿಕ್ಷಣ ಮಾಧ್ಯಮ - ಸಂಸ್ಕೃತ
ವರ್ಧನರ ಕಾಲದಲ್ಲಿ ದಕ್ಷಿಣ ಭಾರತದ ಕಂಚಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಧರ್ಮಪಾಲ
ದಂಡಕಾರಣ್ಯವನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಸ್ಥಿರಮತಿ
ವಲ್ಲಭಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಗುಣಮತಿ
ನಲಂದಾ ವಿಶ್ವವಿದ್ಯಾ ನಿಲಯದ ಹ್ಯೂಯನ್ ತ್ಸಾಂಗ್ ನ ಗುರು - ಶೀಲಭದ್ರ
ನಲಂದಾ ವಿಶ್ವವಿದ್ಯಾ ನಿಲಯದ ಗ್ರಂಥಾಲಯದ ಸ್ಥಳವನ್ನು ಈ ಹೆಸರಿನಿಂದ ಕರೆಯುವರು - ಧರ್ಮಗಂಜ್
ಬೌದ್ಧ ಕೃತಿಗಳನ್ನು ಟಿಬೆಟ್ ಭಾಷೆಗೆ ಬಾಷಾಂತರಿಸಿದವರು - ಶಾಂತರಕ್ಷಿತ
ಹರ್ಷವರ್ಧನನ ಆತ್ಮೀಯ ಸ್ನೇಹಿತನ ಹೆಸರು - ಶಶಾಂಕ
ಕನೌಜಿನ ಸಮ್ಮೇಳನವನ್ನು ಕರೆದ ವರ್ಧನ ದೊರೆ - 2 ನೇ ಪುಲಿಕೇಶಿ
ಹರ್ಷನು ಈ ನದಿಯ ದಡದಲ್ಲಿ 2 ನೇ ಪುಲಿಕೇಶಿಯಿಂದ ಸೋಲನುಭವಿಸಿದನು - ನರ್ಮದಾ ನದಿ ತೀರದ ಕದನ
ಉತ್ತರ ಪಥೇಶ್ವರ ಎಂಬ ಬಿರುದುಳ್ಳ ಅರಸ - ಹರ್ಷವರ್ಧನ
ಹರ್ಷವರ್ಧನನ ತಂಗಿಯ ಹೆಸರು - ರಾಜಶ್ರೀ
ವರ್ಧನರ ರಾಜಧಾನಿ - ಥಾನೇಶ್ವರ
ಹರ್ಷವರ್ಧನನ ರಾಜಧಾನಿ - ಕನೌಜ್
ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಾಯಾತ್ರಿಕ - ಹ್ಯೂಯನ್ ತ್ಸಾಂಗ್
ಮಹಾಯಾಗದಲ್ಲಿ ಮೋಕ್ಷಪರಿಷತ್ತು ಜರುಗುತಿದ್ದುದ್ದು - 5 ವರ್ಷಗಲಿಗೋಮ್ಮೆ
ಬಂಗಾಳದ ಪ್ರಾಚೀನ ಹೆಸರು - ಗೌಡದೇಶ
ರಾಜ್ಯಾದಾಯದ ಒಂದು ಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲು ದೊರೆ - ಹರ್ಷವರ್ಧನ
ಹರ್ಷವರ್ಧನ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ.606
ಸಂಸ್ಕೃತ ನಾಟಕಕಾರ ಭವಭೂತಿ ಯ ಆಶ್ರಯದಾತ - ಯಶೋವರ್ಮ
ಹೂಣರನ್ನು ಸೋಲಿಸಿದ ವರ್ಧನ ದೊರೆ - ಪ್ರಭಾಕರ ವರ್ಧನ
ಪ್ರಭಾಕರ ವರ್ಧನನ ಮಕ್ಕಳು - ರಾಜವರ್ಧನ , ಹರ್ಷವರ್ಧನ , ಮತ್ತು ರಾಜಶ್ರೀ
ರಾಜಶ್ರೀಯನ್ನು ರಕ್ಷಿಸಲು ಸಹಾಯ ಮಾಡಿದ ಬೌದ್ಧ ಸನ್ಯಾಸಿ - ದಿವಾಕರ ಮಿತ್ರ
ಹರ್ಷವರ್ಧನ ಸಾಮ್ರಾಜ್ಯದ ದಕ್ಷಿಣದ ಮೇರೆ - ನರ್ಮದಾ ನದಿ
ಹರ್ಷನ ಆಡಳಿತದಲ್ಲಿ ವಿದೇಶಿ ವ್ಯವಹಾರದ ಮಂತ್ರಿಯನ್ನು ಈ ಹೆಸರಿನಿಂದ ಕರೆಯುವರು - ಮಹಾಸಂಧಿ ವಿಗ್ರಹಿಕ
ಕಂದಾಯ ಮಂತ್ರಿ - ಭೋಗಪತಿ
ರಾಯಭಾರಿಯನ್ನು ಊಈ ಹೆಸರಿನಿಂದ ಕರೆಯಲಾಗುತ್ತಿತ್ತು - ಧೂತ
ಹರ್ಷನ ಆಡಳಿತದಲ್ಲಿ ಕಾನೂನು ಪಾಲನೆ ಮಾಡುತ್ತಿದ್ದವರು - ದಂಡಪಾಕ್ಷಿಕ
ಹರ್ಷನ ಪೂರ್ವಿಕರು ಈ ದೇವರ ಆರಾಧಕರಾಗಿದ್ದರು - ಶಿವ
ಹರ್ಷನು ಮರಮ ಹೊಂದಿದ್ದು - ಕ್ರಿ.ಶ.647
ಹ್ಯಯನ್ ತ್ಸಾಂಗ್ ನ ಜನನವಾದದ್ದು - ಕ್ರಿ.ಶ.600
ಹ್ಯೂಯನ್ ತ್ಸಾಂಗ್ ನು ಕಾಶ್ಮೀರವನ್ನು ಪ್ರವೇಶಿಸಿದುದು ಈ ಮರುಭೂಮಿಯ ಮುಖಾಂತರ - ಗೋಭಿಮರುಭೂಮಿ
ಹ್ಯೂಯನ್ ತ್ಸಾಂಗ್ ನು ಕಾಲವಾದುದು - ಕ್ರಿ.ಶ. 664
ಹರ್ಷವರ್ಧನನು ಈ ರಾಜವಂಶದವನು - ಪುಷ್ಯಭೂತಿ
ಹರ್ಷವರ್ಧನನ ಅಧಿಕಾರಾವಧಿ - ಕ್ರಿ.ಶ. 606 – 647
ಬಾಣಭಟ್ಟಮ ಸಂಸ್ಕೃತ ಗದ್ಯಕೃತಿ - ಕಾದಂಬರಿ
ಮಹಾರಾಜಾಧಿರಾಜ ಎಂಬ ಬಿರುದನ್ನು ಹೊಂದಿದ್ದ ವರ್ಧನರ ದೊರೆ - ಪ್ರಭಾಕರ ವರ್ಧನ
ಹರ್ಷವರ್ಧನನ ತಾಯಿಯ ಹೆಸರು - .ಯಶೋಮತಿ
ಹರ್ಷಶಕವನ್ನು ಪ್ರಾರಂಭಿಸಿದವನು - ಹರ್ಷವರ್ಧನ ( ಕ್ರಿ.ಶ.606 )
ಠಾಣೇಶ್ವರದಿಂದ ಕನೌಜಿಗೆ ರಾಜಧಾನಿಯನ್ನು ವರ್ಗಾಯಿಸಿದ ವರ್ಧನ ದೊರೆ - ಹರ್ಷವರ್ಧನ
ಶಿಲಾಧಿತ್ಯ ಎಂಬ ಬಿರುದನ್ನು ಹೊಂದಿದ್ದ ವರ್ಧನ ದೊರೆ - ಹರ್ಷವರ್ಧನ
ಹರ್ಷನ ಆಡಳಿತ ವಿಭಾಗಗಳು
ಪ್ರಾಂತ್ಯ ( ಭುಕ್ತಿ )
ವಿಷಯ ( ಜಿಲ್ಲೆ )
ಪಥಕ ( (ಗ್ರಾಮಗಳ ಗುಂಪು )
ಗ್ರಾಮ
ರಾಜಶ್ರೀಯ ಪತಿಯ ಹೆಸರು - ಗೃಹವರ್ಮ
ಬಾಣ ಕವಿಯ ಪ್ರಭಾಕರ ವರ್ಧನನ್ನು ಈ ಹೆಸರಿನಿಂದ ಕರೆದಿದ್ದಾರೆ - ಹೂಣ ಹರಿಣ ಕೇಸರಿ
ವಿಷಯದ ಕೇಂದ್ರ ಸ್ಥಾನದ ಹೆಸರು - ಅಧಿಷ್ಠಾನ
ಭುಕ್ತಿಯ ಅಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - - ಭೋಗಪತಿ
ಗಡಸೇನೆಯ ಮುಖ್ಯಸ್ಥ - ಗಜಸಾಧನಿಕ
ಕನೌಜಿನ ಸಮ್ಮೇಳನದ ಅಧ್ಯಕ್ಷತೆ - ಹ್ಯೂಯನ್ ತ್ಸಾಂಗ್
ಪ್ರತಾಪಶೀಲ ಎಂಬ ಬಿರುದನ್ನು ಹೊಂದಿದ್ದ ವರ್ಧನ ಅರಸ - ಪ್ರಭಾಕರ ವರ್ಧನ
ಕನೌಜ್ - ಹರ್ಷನ ರಾಜಧಾನಿ
ಪ್ರಯಾಗ - ಧರ್ಮ ಸಮ್ಮೇಳನ ನಡೆದ ಜಾಗ
ನಳಂದ ವಿಶ್ವ ವಿದ್ಯಾನಿಲಯ
ಥಾನೇಶ್ವರ - ಹರ್ಷನ ಪೂರ್ವದ ರಾಜಧಾನಿ
ರಜಪೂತರು
ರಜಪೂತರು
ಪ್ರಸ್ತಾವನೆ :-
ಕ್ರಿ.ಶ. 800 – 1200 ರವರೆಗೆ ಆಳಿದ ವಿವಿಧ ರಾಜಮನೆತನಗಳ ಇತಿಹಾಸವನ್ನು ಸ್ಥೂಲವಾಗಿ - ಮಧ್ಯಯುಗದ ಆರಂಭ ಕಾಲದ ಇತಿಹಾಸ
ತುರ್ಕರು ಅಫಘಾನಿಸ್ಥನರು ಹಾಗೂ ಮೊಗಲರು ಧಾಳಿಮಾಡಿದ ಕಾಲಾವಧಿ ಕ್ರಿ.ಶ.1000
ಭಾರತದಲ್ಲಿ ತುರ್ಕ ಸುಲ್ತಾನರ ಆಳ್ವಿಕೆ ಪ್ರಾರಂಭವಾಗಿದ್ದು ಕ್ರಿ.ಶ. 1206
ಭಾರತದಲ್ಲಿ ಮಧ್ಯಯುಗವು ಆರಂಭವಾಗಿದ್ದು - 13 ನೇ ಶತಮಾನದಿಂದ
ರಜಪೂತರು - ಹರ್ಷವರ್ಧನನ ಆಳ್ವಿಕೆಯ ನಂತರ ಅಧಿಕಾರಕ್ಕೆ ಬರುವರು
ರಜಪೂತರ ಆಳ್ವಿಕೆಯ ಅವಧಿ 7 ನೇ ಶತಮಾನದ ಮಧ್ಯ ಭಾಗದಿಂದ 12 ನೇ ಶತಮಾನದ ಕೊನೆಯವರೆಗೆ
ರಜಪೂತರ ಮೂಲ
a. ವೇದ ಕಾಲದ ಕ್ಷತ್ರಿಯ ಸಂತತಿಯವರು ( ಆಯೋಧ್ಯೆಯ ರಾಮನ ಕುಲದವರು )
b. ಸೂರ್ಯ ವಂಶ ಚಂದ್ರವಂಶದವರು
c. ಅಗ್ನಿ ಕುಲದವರು ( ನಿಖರ ಮಾಹಿತಿ ತಿಳಿದು ಬಂದಿಲ್ಲ )
ರಜಪೂತರ ಮನೆತನಗಳು
a. ಗುರ್ಜರ - ಪ್ರತಿಹಾರರು ( ಅಗ್ನಿಕುಲ )
b. ಪರಮಾರರು ( ಅಗ್ನಿಕುಲ )
c. ಚೌಹಮರು ( ಅಗ್ನಿಕುಲ )
d. ಸೋಲಂಕಿಗಳು ( ಅಗ್ನಿಕುಲ ) ಹಾಗೂ ಪಾಲರು
e. ಚಂದೇಲರು ಮತ್ತು ಇತರರು ( ಅಗ್ನಿಕುಲ )
ರಾಜಕೀಯ ಇತಿಹಾಸ
ಗುರ್ಜರ ಪ್ರತಿಹಾರರು
ಗುಪ್ತ ಸಾಮ್ರಾಜ್ಯದ ಅವನತಿಯ ನಂತರ - ಜೋದ್ ಪುರದ ಸುತ್ತಲಿನ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರು
ಈಗಿನ ರಾಜಸ್ಥಾನದ ಬಹುತೇಕ ಭಾಗವನ್ನು - ಗೂರ್ಜರಾಷ್ಟ್ರ ಎಂದು ಕರೆಯಲಾಗುತ್ತಿತ್ತು
ಇವರ ಇತಿಹಾಸ - 7 ನೇ ಶತಮಾನದಷ್ಠು ಹಿಂದಿನದು
ಇವರು - ಕನೌಜನ್ನು ಆಕ್ರಮಿಸಿಕೊಂಡಿದ್ದ ಅರಬ್ಬರ ವಿರುದ್ಧ ಹೊರಾಡಿದವರು
ಇವರು ಹಲವು ಭಾರಿ - ದಖನಿನ ರಾಷ್ಟ್ರಕೂಟರ ಆಕ್ರಮಣಕೊಳಗಾದರು
ಇವರು 11 ನೇ ಶತಮಾನದಿಂದ ಪ್ರಾರಂಭದಲ್ಲಿ ಘಜ್ನಿ ಮಹಮ್ಮದ್ ನಿಂದ ಸೋತ ಮೇಲೆ ಇತಿಹಾಸದಿಂದ ಕಣ್ಮರೆಯಾದರು
ಹರಿಚಂದ್ರ - ಈ ಪಂಗಡದ ಮೂಲಪುರುಷ
ಕ್ರಿ.ಶ.550 ರಲ್ಲಿ - ಗುಜರಾತ್ ನಲ್ಲಿ ಒಂದು ರಾಜ್ಯ ಸ್ಥಾಪಿಸಿ ತನ್ನ ನಾಲ್ಕು ಮಕ್ಕಳನ್ನು ಮಾಂಡಲಿಕರನ್ನಾಗಿ ಮಾಡಿದ
ಈ ವಂಶ ಕ್ರಿ.ಶ.735 ರಲ್ಲಿ ಅವಂತಿಯ ( ಉಜ್ಜಯಿನಿಯ ಪರಿಸರ ) ಪ್ರತಿಹಾರರನ್ನು ಕೊನೆಗೊಳಸಿದ
ಹರಿಚಂದ್ರನ ಮಗ - ರಜ್ಜಲ
ಈತ ಮಾಂಡೂಕ್ ( ಮಾಂಡವ್ಯ ಪುರ ) ದಲ್ಲಿ ಗೂರ್ಜರ ಪ್ರತಿಹಾರರ ರಜಪೂತ ಶಾಖೆಯನ್ನು ಪ್ರಾರಂಭಿಸಿದನು
ಇವನು ರಾಜಧಾನಿಯನ್ನು ಮೇದಂತಕ ( ಈಗಿನ ಮೆರ್ತ ) ಕ್ಕೆ ಸ್ಥಳಾಂತರಗೊಂಡಿತು
ಪಾಲದೊರೆ - ದೇವಪಾಲನ ಅಂತ್ಯದಲ್ಲಿ ಮತ್ತೋಮ್ಮೆ ಮರುಜೀವ ಪಡೆದರು
ನಂತರದಲ್ಲಿ ಬಂದ ಭೋಜನು - ಈ ವಂಶದ ನಿಜವಾದ ಸಂಸ್ಥಾಪಕ
ಭೋಜನ ರಾಜಧಾನಿ - ಕನೌಜ್ ಆಗಿತ್ತು
ಈತ ಪಾಲರು ಮತ್ತು ರಾಷ್ಟ್ರಕೂಟರ ನಡುವೆ ಹೋರಾಡಿದನು
ಹಾಗೇಯೆ ಮಾಳವ - ಕೆಲವು ಭಾಗದಲ್ಲಿ ಪ್ರಭುತ್ವವನ್ನು ಸ್ಥಾಪಿಸಿದನು
ರಾಷ್ಟ್ರಕೂಟರ - 3 ನೇ ಇಂದ್ರ ಕನೌಜಿನ ಮೇಲೆ ಆಕ್ರಮಣ ಮಾಡಿ ಗುರ್ಜರ ಪ್ರತಿಹಾರರನ್ನು ಕೊನೆಗಾಣಿಸಿದನು
ಸಾಮ್ರಾಟ ಪ್ರತಿಹಾರರಂದು ಪರಿಚಿತರಾದ - ಗೂರ್ಜರ ಪ್ರತಿಹಾರದ ಮಾಳ್ವ ಶಾಖೆಯವರು ಆವಂತಿ (ಉಜ್ಜಯಿನಿ ) ಯಿಂದ ಆಳುತ್ತಿದ್ದರು
ಈ ವಂಶದ ದೊರೆ - ನಾಗಭಟ್ಟ ಎಂಬುವವನು
ಈ ವಂಶದ ದೊರೆ - ನಾಗಭಟ್ಟ ಎಂಬುವವನು
ಈತ ಸುಮಾರು - 8 ನೇ ಶತಮಾನದಲ್ಲಿ ಪ್ರಸಿದ್ದಿಗೆ ಬಂದನು
ಈತ ಅರಬ್ಬರ ದಂಡಯಾತ್ರೆಯನ್ನು ಕಡೆಗಣಿಸಿದ
ಈತ ವಿಧ್ವಾಂಸ ಹಾಗೂ ಸಾಹಿತ್ಯ ಪ್ರಿಯನು ಆಗಿದ್ದ
ಭೋಜನ ಆಸ್ಥಾನಕ್ಕೆ ಬಂದಿದ್ದ ಅರಬ್ ಯಾತ್ರಿಕ ಸುಲೇಮಾನ್
ಖ್ಯಾತ ಸಂಸ್ಕೃತ ಕವಿ - ರಾಜಶೇಖರ ಭೋಜನ ಆಸ್ಥಾನದ ಕವಿಯಾಗಿದ್ದನು
ರಾಜಶೇಖರನ ಕೃತಿಗಳು - ವಿದ್ಧಸಾಲ ಭಂಜಿಕ , ಕರ್ಪೂರ ಮಂಜರಿ ಹಾಗೂ ಕಾವ್ಯಮೀಮಾಂಸೆ
ಭೋಜನು - ಭೋಜಪುರ ಎಂಬ ನಗರವನ್ನು ನಿರ್ಮಿಸಿದನು
ಪಾಲರು
ಪಾಲರು
ಕ್ರಿ.ಶ. 8 ನೇ ಶತಮಾನದ ಮಧ್ಯಭಾಗದಲ್ಲಿ - ಪಾಲರು ಅಧಿಕಾರಕ್ಕೆ ಬಂದರು
ಇವರು ಬಂಗಾಳ ಹಾಗೂ ಕನೌಜ್ ನ್ನು ಆಳಿದರು
ಹರ್ಷವರ್ಧನನು ತೀರಿಕೊಂಡ 100 ವರ್ಷದ ಬಳಿಕ ಬಂಗಾಳದಲ್ಲಿ ತಮ್ಮ ಅಧಿಪತ್ಯ ಸಾಥಿಪಿಸಿದರು
ಗೂರ್ಜರ ಪ್ರತಿಹಾರ ಹಾಗೂ ರಾಷ್ಟ್ರಕೂಟರ ವಿರುದ್ದ ಹೋರಾಡಿದರು
ಈ ರಾಜವಂಶದ ಪ್ರಮುಖ ಅರಸ - ಧರ್ಮಪಾಲ
ಈತನ ಉತ್ತರಾಧಿಕಾರಿಯ ಹೆಸರು - ದೇವಪಾಲ
ದೇವಪಾಲನು - 9 ನೇ ಶತಮಾನದ ಪೂರ್ವ ಭಾಗದಲ್ಲಿ ಆಳಿದನು
ಪಾಲರು - ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧವನ್ನು ಹೊಂದಿದ್ದರು
ನಳಂದಾ ಹಾಗೂ ವಿಕ್ರಮಶೀಲಾ - ಇವರ ಕಾಲದ ಉನ್ನತ ವಿಧ್ಯಾಕೇಂದ್ರಗಳು
ಧರ್ಮಪಾಲ - ಬೌದ್ಧ ಮತವನ್ನು ಪ್ರೋತ್ಸಾಹಿಸಿದನು
ಪಾಲವಂಶದ ಸ್ಥಾಪಕ ದೊರೆ - ಗೋಪಾಲ
ಪಾಲರು ಟಿಬೆಟ್ಟಿನೊಂದಿಗೆ - ವ್ಯಾಪಾರ ಸಂಪರ್ಕ ಹೊಂದಿದ್ದರು
ಬಂಗಾಳದ ಸೇನರು, ಚಾಂದೇಲರು
ಬಂಗಾಳದ ಸೇನರು
ಇವರನ್ನು ಕರ್ನಾಟಕ ಮೂಲದವರೆಂದು ಹೇಳಲಾಗಿದೆ
ಪಾಲರನ್ನು ಬಂಗಾಳದಲ್ಲಿ ಸೋಲಿಸಿ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರು
ಸಮಂತ ಸೇನ - ಈ ವಂಶದ ಸ್ಥಾಪಕ
ಬೆಳ್ಳುಳ ಸೇನ - ಈ ವಂಶದ ಪ್ರಸಿದ್ದ ದೊರೆ
ಬೆಳ್ಳುಳ ಸೇನ - ಕುಲಿನ ವರ್ಗ ಎಂಬ ಹೊಸ ವರ್ಗವನ್ನು ಹುಟ್ಟುಹಾಕಿದ
ನಂತರ ಅಧಿಕಾರಕ್ಕೆ ಬಂದವನು - ಲಕ್ಷ್ಮಣ ಸೇನ
ಈತ - ಲಕ್ನೋವತಿ ಎಂಬ ನಗರವನ್ನು ನಿರ್ಮಿಸಿದ
ಚಾಂದೇಲರು
ಚಂದಲರು
ಇವರು - ಬುಂದೇಲ್ ಕಂಡದಲ್ಲಿ ಪ್ರಭುತ್ವಕ್ಕೆ ಬಂದರು
ಇವರು - ನನ್ನುಕ ನ ನಾಯಕತ್ವದಲ್ಲಿ ಪ್ರಬಲರಾದರು ( 9 ನೇ ಶತಮಾನದ ಆರಂಭ )
ಪ್ರಾರಂಭದಲ್ಲಿ ಇವರು - ಪಾಲರ ಜಹಂಗೀರುದಾರರಾಗಿದ್ದರು
ಕೀರ್ತಿವರ್ಮ ಈ ವಂಶದ ಹೆಸರಾಂತ ದೊರೆ
ಚಂದೇಲರ ರಾಜಧಾನಿ - ಮಹೋಬ
ಪ್ರಾರಂಭದಲ್ಲಿ ಇವರು - ಪ್ರತಿಹಾರರ ಸಾಮಂತರಾಗಿದ್ದರು
ಈ ವಂಶದ ಸಮರ್ಥ ದೊರೆ - ಯಶೋವರ್ಮ
ಈತ ಪ್ರತಿಹಾರರ ದೇವಪಾಲನನ್ನ ಸೋಲಿಸಿ - ಕನೌಜನ್ನು ವಶಪಡಿಸಿಕೊಂಡ
ಖಜುರಹೋದಲ್ಲಿ ಚತುರ್ಭುಜ ದೇವಾಲಯದ ನಿರ್ಮಾತೃ - ಯಶೋವರ್ಮ
ಖಜುರಹೋ - ಯಶೋವರ್ಮನ ರಾಜಧಾನಿ
ಈತನ ಆಸ್ಥಾನ ಕವಿ - ಭವಭೂತಿ
ಭವಭೂತಿಯ ಕೃತಿಗಳು - ಮಾಲತೀ ಮಾಧವ , ಉತ್ತರ ರಾಮಚರಿತ ಹಾಗೂ ಮಹಾವೀರ ಚರಿತ
ಇವನ ಆಸ್ಥಾನದ ಮತ್ತೋಬ್ಬ ಕವಿ - ವಾಕ್ಪತಿ
ಈ ವಂಶದ ಅತ್ಯಂತ ಪ್ರಸಿದ್ಧ ದೊರೆ - ಇವನ ಮಗ ಧಂಗ
ಢಂಗನ ರಾಜಧಾನಿ - ಕಾಲಿಂಜರ್
ಢಂಗನ ನಂತರ ಅಧಿಕಾರಕ್ಕೆ ಬಂದ ಪ್ರಸಿದ್ದ ದೊರೆ - ಕೀರ್ತಿ ವರ್ಮ
ಕೀರ್ತಿವರ್ಮನ ಕಾಲದಲ್ಲಿ ನಿರ್ಮಿತವಾದ ಸರೋವರ - ಕಿರಾತಕ
ಈ ರಾಜ್ಯಕ್ಕೆ ತಿಲಾಂಜಲಿ ಇಟ್ಟವನು - ಅಲ್ಲಾವುದ್ದೀನ್ ಖಿಲ್ಜಿ
ಆರಂಭದಲ್ಲಿ ಚಂದೇಲರು - ಛತ್ರಪುರದ ಪಾಳೇಗಾರರಾಗಿದ್ದರು
ಖಜುರಾಹೋ ದೇವಾಲಯದ ನಿರ್ಮಾತೃ - ಢಂಗ
ಅಕ್ಷರನೊಂದಿಗೆ ಹೋರಾಡಿದ ಚಂದೇಲರ ರಾಣಿ - ಚಂಡೇ ರಾಜಕುಮಾರಿ
ಬುಂದೇಲ್ ಖಂಡ ಪ್ರಸ್ತುತ - ಉತ್ತರ ಪ್ರದೇಶದಲ್ಲಿದೆ
ಪರಮಾರರು, ಚೌಹಾನರು
ಪರಮಾರರು
ಇವರು ರಾಷ್ಟ್ರಕೂಟರ ಸಂತತಿಯವರೆಂದು ನಂಬಲಾಗಿದೆ
ಇವರು ಮಾಳವ ಪ್ರಾಂತ್ಯದಲ್ಲಿ ಏಳಿಗೆಗೆ ಬಂದರು
ಈ ವಂಶದ ಸ್ಥಾಪಕ - ಉಪೇಂದ್ರ ಅಥವಾ ಕೃಷ್ಣ
ಇವರನ್ನು - ಅಬುಪರ್ವತದಿಂದ ಬಂದವರೆಂದು ಹೇಳಲಾಗಿದೆ
ಈ ವಂಶದ ಇನ್ನೋಂದು ಹೆಸರು - ಪವಾರ
ಉಪೇಂದ್ರ - ಪ್ರಾರಂಭದಲ್ಲಿ ರಾಷ್ಟ್ರಕೂಟ ಮಾಂಡಲಿಕನಾಗಿದ್ದ
ಇವರ ರಾಜಧಾನಿ - ಮಾಳ್ವಾದ ಧಾರ
ಈ ವಂಶದ ಏಳನೇ ದೊರೆ - ಮುಂಜ
ಈತ - ಎರಡನೇ ಸಿಯಕನ ಮಗ
ಸಿಯಕನ - 927 ರಾಷ್ಚ್ರಕೂಟರನ್ನ ಸೋಲಿಸಿ ರಾಜಧಾನಿ ಮಳಖೇಡವನ್ನು ಸುಲಿಗೆ ಮಾಡಿದ್ದ
ಮುಂಜನನ್ನು ಈ ಹೆಸರಿನಿಂದ ಲೂ ಕರೆಯುವರು - ವಾಕ್ಪತಿ
ಈತನು - 947 ರಲ್ಲಿ ಪಟ್ಟಕ್ಕೆ ಬಂದನು
ಈತ ಚೌಹಾಣರಿಂದ - ಅಬುಪರ್ವತವನ್ನು ಗೆದ್ದನು
ಈತ - ಅನಿಲಪಾಟಕದ ( ಚಾಳುಕ್ಯರನ್ನು ) ಸೋಲಿಸಿದನು
ಈತ - ಕಲ್ಯಾಣದ ಚಾಲುಕ್ಯರಿಗೆ ಸೆರೆ ಸಿಕ್ಕಿ ಹತನಾದ
ಉಜ್ಜಯಿನಿಯ ಮಹಾಕಾಲ ದೇವಾಲಯದ ನಿರ್ಮಾತೃ - ಮುಂಜ
ಇವನ ಉತ್ತರಾಧಿಕಾರಿ - ಸಿಂಧುರಾಜ ( ಸತ್ಯಾಶ್ರಯನನ್ನು ಸೋಲಿಸಿದ )
ಸಿಂಧೂರಾಜನ ಆಸ್ಥಾನ ಕವಿ - ಪದ್ಮಗುಪ್ತ
ಪದ್ಮಗುಪ್ತನ ಕೃತಿ - ನವಸಾಹಸಾಂಕ ಚರಿತ
ಸಿಂಧೂರಾಜನ ನಂತರ ಆತನ ಮಗ - ಮಿಹಿರ ಭೋಜ ಅಧಿಕಾರಕ್ಕೆ ಬಂದನು
ಈತ 1008 ರಲ್ಲಿ ಘಜ್ನಿಯನ್ನು ಎದುರಿಸಲು - ಆನಂದ ಪಾಲನಿಗೆ ನೆರವಾಗಿದ್ದ
ಚಂಪೂರಾಮಾಯಣ ಕೃತಿಯ ಕರ್ತೃ - ಭೋಜ
ಧಾರಾ ಹಾಗೂ ಉಜ್ಜಯಿನಿಗಳು ಈ ಕಾಲದ - ಪ್ರಸಿದ್ದ ವಿಧ್ಯಾಕೇಂದ್ರಗಳು
ಪರಮಾರರ ಪ್ರಸಿದ್ದ ಅರಸ - ರಾಜಭೋಜ
ಬೋಪಾಲ್ ನಗರದ ನಿರ್ಮಾತೃ - ರಾಜಭೋಜ
ಈತ ಕಟ್ಟಿಸಿದ ಸರೋವರ ಹೆಸರು - ಭೋಜಪುರ
ಚೌಹಾನರು
ಚೌಹಾಣರು ( ಚಾಹಮಾನರು )
ಈ ವಂಶದ ಮತ್ತೊಂದು ಹೆಸರು - ಚಾಹಮಾನರು ಶಾಕಾಂಬರಿ ಚಹಮಾನರು
ಈ ವಂಶದ ಅತ್ಯಂತ ಪ್ರಸಿದ್ದ ದೊರೆ - ಎರಡನೇ ಪೃಥ್ವಿರಾಜ
ಈತನ ಪ್ರೀಯತಮೆ - ಸಂಯುಕ್ತೆ
ಸಂಯುಕ್ತೆಯು - ಕನೌಜದ ರಾಜ , ಜಯಚಂದ್ರನ ಮಗಳು
ಪೃಥ್ವಿರಾಜ ಮೂಲತಃ - ಅಜ್ಮೀರದವರು
ಪೃಥ್ವಿರಾಜನ ರಾಜಧಾನಿ - ದಿಲ್ಲಿ ಅತವಾ ದೆಹಲಿ
ಈತನು - ಮಹಮ್ಮದ್ ಘೋರಿಯ ಆಕ್ರಮಣಗಳನ್ನು ವಿರೋಧಿಸಿದನು
ಪ್ರಥಮ ತರೈನ್ ಯುದ್ಧ ನಡೆದ ವರ್ಷ - 1191 ( ತರೈನ್ ನಲ್ಲಿ )
ಪ್ರಥಮ ತರೈನ್ ಯುದ್ದ ಪರಿಣಾಮ - ಮಹಮ್ಮದ್ ಘೋರಿಯ ಸೋಲು
ಎರಡನೇ ತರೈನ್ ಕದನ - 1192 ( ತರೈನ್ ಎಂಬಲ್ಲಿ )
ಎರಡನೇ ಹಾಗೂ 1ನೇ ತರೈನ್ ಕಾದಾಟ ನಡೆದದ್ದು - ಘೋರಿಮಹಮ್ಮದ್ ಮತ್ತು ಪೃಥ್ವಿರಾಜ್ ಚೌಹನ್ ನಡುವೆ
ಎರಡನೇ ತರೈನ್ ಕದನದ ಪರಿಣಾಮ - ಪೃಥ್ವಿರಾಜ್ ಚೌಹನ್ ನ ಸೋಲು ಹಾಗೂ ಸಾವು ,ದೆಹಲಿ ಘೋರಿಯ ವಶವಾಯಿತು
ಈ ವಿಜಯ - 1206 ರ ದೆಹಲಿಯ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು
ಪೃಥ್ವಿರಾಜನ ಆಸ್ಥಾನದ ಕವಿ - ಚಾಂದ್ ಬರ್ದಾಯಿ
ಚಾಂದ್ ಬರ್ದಾಯಿ ಕೃತಿಯ ಹೆಸರು - ಪೃಥ್ವಿರಾಜ ರಾಸೋ
ಚೌಹಾಣರು ಮೂಲತಃ ಪೂರ್ವರಾಜಸ್ಥಾನದವರು
ಪೃಥ್ವಿರಾಜನು ಚಾಂದೇಲರನ್ನು - ಮಹೋಬಾ ಯುದ್ಧದಲ್ಲಿ ಸೋಲಿಸಿದನು
ಕ್ರಿ.ಶ.1180 ರಲ್ಲಿ ಘೋರಿಯು ಆಕ್ರಮಿಸಿದ ಪ್ರವೇಶ - ತಬರ್ಹಿಂದ್
ಆ ವಂಶದ ಮೊದಲ ಪ್ರಮುಖ ದೊರೆ - ಅಜಯ ರಾಜ್
ಸೋಲಾಂಕಿಗಳು , ಗಹಾಡವಾಲರು
ಸೋಲಂಕಿಗಳು
ಇವರನ್ನು - ಅನಿಲ್ ವಾರದ ಸೋಲಂಕಿಗಳು ಎಂದು ಕರೆಯುವರು
ಇವರು - ಗುಜರಾತ್ ಮತ್ತು ಕಾಥೇವಾಡ ಪ್ರದೇಶದಿಂದ ಆಳ್ವಿಕೆ ನಡೆಸಿದರು
ಈ ವಂಶದ ಪ್ರಮುಖ ಅರಸು - ಮೂಲರಾಜ ಭೀಮ ಹಾಗೂ ಜಯಸಿಂಹ ಸಿದ್ದರಾಜಾ ಈ ವಂಶದ ಪ್ರಮುಖ ಅರಸರು
1 ನೇ ಭೀಮನ ಕಾಲದಲ್ಲಿ - ಘಜ್ನಿಯು ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು
ಸಿದ್ದರಾಜನು ಪರಮಾರರನ್ನು ಸೋಲಿಸಿ - ಅವಂತಿನಾಥ ಎಂಬ ಬಿರುದನ್ನು ಪಡೆದುಕೊಂಡನು
ಇವರು ಕಾಥಿಯವಾಡ ( ಈಗಿನ ಗುಜರಾತ್ ) ಪ್ರಾಂತ್ಯದಲ್ಲಿ ಆಳಿದರು
ಗುಜರಾತ್ ನ ಹಿಂದಿನ ಹೆಸರು - ಕಾಥಿಯವಾಡ
ಈ ವಂಶದ ಪ್ರಸಿದ್ದ ಅರಸ - ರಾಜಾಭೀಮ ದೇವ
ರಾಜಭೀಮದೇವನ ಮಂತ್ರಿಯ ಹೆಸರು - ವಿಮಲಷಾ
ಅಬುಪರ್ವತದಲ್ಲಿನ ಸುಂದರ ಬಸದಿಯ ನಿರ್ಮಾತೃ - ವಿಮಲಷ
ಕುಮಾರಪಾಲನ ಆಸ್ಥಾನದ ಖ್ಯಾತ ಜೈನ ಪಂಡಿತ - ಹೇಮಚಂದ್ರ
ಹೇಮಚಂದ್ರನ ಕೃತಿ - ದೇಶಿನಾಮ ಮೂಲ
ಈ ಕೃತಿ - ಪ್ರಾಕೃತ ಭಾಷೆಯಲ್ಲಿದೆ
ಕುಮಾರಪಾಲನ ಪತ್ನಿ ನಾಯಕಿದೇವಿ (ಕದಂಬ ವಂಶದವಳು )
ಘೋರಿಯನ್ನು ಗರಗಟ್ಟಿ ಎಂಬಲ್ಲಿ ಸೋಲಿಸಿದ ಮಹಿಳಾ ಸೋಲಂಕಿ - ನಾಯಕಿದೇವಿ
ಈ ವಂಶದ ಕೊನೆಯ ಅರಸ - ಕರ್ಣ
ಈತನ ರಾಜಧಾನಿ - ಕರ್ಣವತಿ
ಕರ್ಣಾವತಿಯ ಪ್ರಸ್ತುತ ಹೆಸರು - ಅಹಮದಾಬಾದ್
ಸೋಲಂಕಿಗಳ ಪ್ರಮುಖ ವ್ಯಪಾರ ಕೇಂದ್ರ - ಬರೂಚ್ ಅಥವಾ ಬೃಗುಕಚ್ಚ
ಗಹಾಡವಾಲರು
ಗಾಹಡವಾಲರು
ಇವರು 11 ನೇ ಶತಮಾನದ ಉತ್ತರಾರ್ದದಲ್ಲಿ ಕನೌಜಿನಲ್ಲಿ ಅಧಿಕಾರಕ್ಕೆ ಬಂದರು
ಈ ಸಂತತಿಯ ಸ್ಥಾಪಕ - ಚಂದ್ರದೇವ
ವಾರಣಾಸಿ - ಇವರ ಎರಡನೇ ರಾಜಧಾನಿ
ಚಂದ್ರದೇವ - ಗಾಹಡವವಾಲರ ಕೊನೆಯ ಅರಸ
ಈತನ ಮಗಳೇ - ಸಂಯುಕ್ತೆ
ಸಂಯುಕ್ತೆ - ಪೃಥ್ವಿರಾಜ ಚೌಹಣನನ್ನು ವರಿಸಿದ್ದಳು
ಇವರನ್ನು - ರಾಠೋಡರು ಎಂದು ಕರೆಯುವರು
ರಾಠೋಡರ ಇನ್ನೋಂದು ಹೆಸರು - ಗಹದ್ವಾಲರು
ಗುಹಿಲರು , ತೋಮರರು
ಗುಹಿಲರು
ಇವರು ರಜಪೂತರ - ಶ್ರೇಷ್ಠ ವೀರ ಪರಂಪರೆಯನ್ನು ಹೊಂದಿದ್ದ ರಾಜಮನೆತನ
ಇವರ ಇನ್ನೋಂದು ಹೆಸರು - ಗುಹಿಲೋಟರು
ಈ ವಂಶದ ಆಳ್ವಿಕೆಯನ್ನು ಪ್ರಾರಂಭವಾದುದು - 6 ನೇ ಶತಮಾನದ ಮಧ್ಯಭಾಗದಿಂದ
ಈ ವಂಶದ ಆಳ್ವಿಕೆಯನ್ನು ಮೊದಲು ಆರಂಭಿಸಿದವರು - ಗುಹದತ್ತು
ಈ ವಂಶದ 9 ನೇ ದೊರೆ - ಖೊಮ್ಮಾಣ
ಈತ 8ನೇ ಶತಮಾನದಲ್ಲಿ ಅರಬ್ಬರ ಧಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿ - ಬಪುರಾವಲ್ ಎಂಬ ಬಿರುದನ್ನು ಪಡೆದುಕೊಂಡನು
ಈ ವಂಶದ ಪ್ರಖ್ಯಾತ ದೊರೆ - ರಾಣಾಸಂಗ ಅಥವಾ ಸಂಗ್ರಾಮಸಿಂಹ
ಚಿತ್ತೋಡದ ವಿಜಯ ಸ್ತಂಭದ ಸ್ಥಾಪಕ - ರಾಣಾಕುಂಭ
ಮೂರು ಕದನಗಳ ವೀರ ಎಂದು ಖ್ಯಾತಿಾಗಿದ್ದವನು - ರಾಣಾಸಂಗ ಅಥವಾ ಸಂಗ್ರಾಮಸಿಂಹ
1527 ರಲ್ಲಿ ಸಂಗ್ರಾಮ ಸಿಂಹ ಕಣ್ವ ಕದನ ದಲ್ಲಿ - ಬಾಬರನನ್ನು ಎದುರಿಸಿ ಸೋತು ಹೋದ
ತೋಮರರು
ತೋಮರರು
ಇವರು 8 ನೇ ಶತಮಾನದಲ್ಲಿ ಅಧಿಕಾರಕ್ಕೆ ಬಂದರು
ಇವರು - ದಿಲ್ಲಿಕಾ ಎಂಬ ನಗರವನ್ನು ನಿರ್ಮಿಸಿದರು
ದಿಲ್ಲಿಕಾ ನಗರದ ಇಂದಿನ ಹೆಸರು - ದೆಹಲಿ
Extra Tips
ಮಹಮ್ಮದಿಯ ಸುಲ್ತಾನರ ಆಳ್ವಿಕೆ ಭಾರತದಲ್ಲಿ ಮೊದಲು ಆರಂಭವಾದುದು - ದಕ್ಷಿಣ ಭಾರತದಲ್ಲಿ
ಮಧ್ಯಯುಗದ ಕಾಲದಲ್ಲಿ - ಮಹಿಳೆಯರು ಮತ್ತು ಶ್ರಮ ಡೀವಿಗಳ ಮೇಲೆ ಕೆಲವು ಮೌಲ್ಯ ಅಥವಾ ಕಟ್ಟುಪಾಡುಗಳನ್ನು ವಿಧಿಸಿಲಾಗಿತ್ತು
ಪ್ರಾರಂಭಿಕ ಮಧ್ಯ ಕಾಲೀನ ಇತಿಹಾಸನ್ನು - ರಜಪೂತರ ಯುಗ ಎಂದು ಕರೆಯುವರು
ರಜಪೂತರು ತಮ್ಮನ್ನು - ಕ್ಷತ್ರಿಯರೆಂದು ಗುರುತಿಸಿಕೊಂಡಿದ್ದರು
ರೈತರಿಂದ ಭೂ ಕಂದಾಯ ವಸೂಲಿಮಾಡುತ್ತಿದ್ದ ರಜಪೂತ ಅಧಿಕಾರಿಗಳನ್ನು - ರಾಯ್ ಗಳೆಂದು ಅಥವಾ ಠಾಕೂರರೆಂದು ಕರೆಯುತ್ತಿದ್ದರು
ನಂತರದಲ್ಲಿ ಠಾಕೂರರು - ಊಳಿಗಮಾನ್ಯ ಅಧಿಕಾರಿಗಳಾದರು
ರಜಪೂತರ ಆಳ್ವಿಕೆಯಲ್ಲಿ ಅಬಿವೃದ್ದಿ ಹೊಂದಿದ ವರ್ಗ - ಮೇಲುವರ್ಗ
ರಾಜರಿಂದ ಧಾನದತ್ತಿಗಳನ್ನು ಪಡೆಯುತ್ತಿದ್ದವರು - ಬ್ರಾಹ್ಮಣರು
ದೇಶದ ಒಳಗೆ ಹಾಗೂ ಹೊರಗಿನ ವ್ಯಾಪರದಿಂದ ಅಪಾರ ಲಾಭಗಳಿಸುತ್ತಿದ್ದವರು - ವಣಿಕವರ್ಗ
ವಣಿಕವರ್ಗ - ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸಂಬಂಧ ಹೊಂದಿತ್ತು
ರಜಪೂತರ ಕಾಲದಲ್ಲಿದ್ದ ವಿಶಿಷ್ಠ ಪದ್ಧತಿ - ಜೋಹಾರ್
ಜೋಹರ್ ಎಂದರೇ - ಸಾಮೂಹಿಕ ಆತ್ಮಹತ್ಯೆ
ರಜಪೂತರು ಪ್ರೋತ್ಸಾಹಿಸಿದ ಚಿತ್ರಕಲೆಗಳು - ಗೋಡೆಯ ಮೇಲೆ ಬಣ್ಣದ ಚಿತ್ರಗಳನ್ನು ರಚಿಸುವ ಕಲೆ ಚಿಕಮಿ ಚಿತ್ರಕಲೆ
ದಿಲ್ಪಾರ ದೇವಾಲಯ ಈ ಪ್ರದೇಶದಲ್ಲಿದೆ - ಮೌಂಟ್ ಅಬು
ಚಂದೇಲರು ಕಟ್ಟಿಸಿದ ಪ್ರಖ್ಯಾತ ದೇವಾಲಯ - ಖಜುರಾಹೋ ದೇವಾಲಯ
ರಾಜಸ್ಥಾನದ ಪ್ರಾಚೀನ ಹೆಸರು - ರಾಜ್ ಪುತಾನ್
ರಜಪೂತರು ನಾಶ ಹೊಂದಿದ್ದು - ದೆಹಲಿ ಸುಲ್ತಾನರ ಆಡಳಿತದ ಅವಧಿಯಲ್ಲಿ
ಅಕ್ಬರನನ್ನು ಕೊನೆಯ ತನಕ ಪ್ರತಿಭಟಿಸಿದ ರಜಪೂತ ದೊರೆ - ರಾಣಾಪ್ರತಾಪ
ಮೊಗಲರ ಕಾಲದಲ್ಲಿ ಿವರು - - ಮಾಂಡಲಿಕರಾಗಿದ್ದರು
ಜೋಹಾರ್ ಪದ್ಧತಿಗೆ ಆಹುತಿಯಾದ ರಜಪೂತ ಹಕ್ಕನ್ನು ಹೊಂದಿದ್ದ ಿವರನ್ನು ಮಹಾಮಂಡಲೇಶ್ವರ ಠಾಕೂರರೆಂದು ಕರೆಯುತ್ತಿದ್ದರು
ರಜಪೂತರ ಕಾಲದ ಗಣ್ಯ ಯಾತ್ರಸ್ಥಳ - ಪುಷ್ಯರಗಣ್ಯ ( ಇದು ಬ್ರಹ್ಮನ ಆವಾಸ ಸ್ಥಾನವೆನಿಸಿದೆ )
ದಶರೂಪ ಕೃತಿಯ ಕರ್ತೃ - ಧನಂಜಯ
ಹಲಾಯುಧ - ಛಂದಸ್ಸಿಗೆ ಭಾಷ್ಯ ಬರೆದನು
ಕೃಷ್ಣ ಮಿತ್ರ - ಪ್ರಭೋಧ ಚಂದ್ರೋದಯ ಕೃತಿಯನ್ನು ಬರೆದನು
ರಾಜಶೇಖರ - ಬಾಲಭಾರತ , ಬಾಲರಾಮಾಯಣ , ಕಾವ್ಯಮೀಮಾಂಸೆ ಕೃತಿಯನ್ನು ಬರೆದನು
ಕಾವ್ಯ ಮೀಮಾಂಸೆ - ಅಲಂಕಾರ ಶಾಸ್ತ್ರದಲ್ಲಿ ಕವಿಗಳ ಕೈ ಪಿಡಿ ಎಂದು ಕರೆಯಲಾಗಿದೆ
ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ - ಹಿಂದಿಯಲ್ಲಿ ಬರೆಯಲಾಗಿದೆ
ಚಂದೇಲರು ಕಟ್ಟಿಸಿದ ದೇವಾಲಯ - ಖಜುರಾಹೋದ ಕಂಡರಾಯ ಮಹಾದೇವ ದೇವಾಲಯ
ಗೀತಾ ಗೋವಿಂದ - ಜಯದೇವ ಕವಿ ಬರೆದನು
ಜಯದೇವ - ಸೇನರ ಆಸ್ಥಾನದ ಕವಿ
ಕಲ್ಹಣ - ರಾಜತರಂಗಿಣಿಯನ್ನು ಬರೆದನು
ಪೃಥ್ವಿರಾಜನು ಚಂದೇಲರನ್ನು - ಮಹೋಬಾ ಯುದ್ಧಲ್ಲಲಿ ಸೋಲಿಸಿದನು
ಸೋಲಂಕಿಗಳ ರಾಜಧಾನಿ - ಕಾಥೇವಾಡ
ಮಾಂಡೋಕ್ ನಲ್ಲಿ ಗುರ್ಜರ ಪ್ರತಿಹಾರರ ಶಾಖೆಯನ್ನು ಆರಂಭಿಸಿದವನು - ಹರಿಶ್ಚಂದ್ರನ ಮಗ ರಜ್ಜಲ
ಪುಷರ ಸರೋವರವು - ರಾಜಸ್ಥಾನದಲ್ಲಿದೆ
ಚಂಪೂರಾಮಯಾಣ - ಇದು ಭೋಜನ ಕೃತಿ
ದೇಶಿಯ ನಾಮಾ ಮಾಲ ಎಂಬ ಪ್ರಾಕೃತ ನಿಘಂಟನ್ನು ಬರೆದವನು - ಜೈನ ವಿಧ್ವಾಂಸ ಹೇಮಚಂದ್ರ
ಹೇಮಚಂದ್ರನ ಇನ್ನೊಂದು ಕೃತಿ - ಛಂದೋನು ಶಾಸನ
ರಜಪೂತರ ಕಾಲದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣಗೊಂಡ ವಾಸ್ತುಶಿಲ್ಪ - ಜೈನಮಂದಿರಗಳು
ರಜಪೂತರ ಕಾಲದ ಪ್ರಸಿದ್ಧ ಸೂರ್ಯದೇವಾಲಯ - ಕೋನಾರ್ಕ್ ನಲ್ಲಿ
ರಜಪೂತ ರಾಣಿಯರು ಗಂಡನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪದ್ದತಿ - ಸ್ವಯಂವರ
ಇವರ ಕಾಲದಲ್ಲಿ ರಚನೆಯಾದ ನೀತಿಗ್ರಂಥ - ಹಿತೋಪದೇಶ
ಕಥಾಸರಿತ್ಸಾಗರದ ಕರ್ತೃ - ಸೋಮದೇವ
ರಜಪೂತರ ಯುಗದಲ್ಲಿನ ಒಂದು ಐತಿಹಾಸಿಕ ಮಹತ್ವದ ಕೃತಿ - ಕಲ್ಹಣನ ರಾಜತರಂಗಿಣಿ
ಹವಾಮಹಲ್ - ಜಯಪುರದಲ್ಲಿದೆ
ಅರಬ್ಬರು ಕ್ರಿ.ಶ.712 ರಲ್ಲಿ ಭಾರತಕ್ಕೆ ದಂಡಯಾತ್ರೆಯ ನೇತೃತ್ವವನ್ನು ವಹಿಸಕೊಂಡಿದ್ದವರು - ಪ್ರಥಮ ಹಂತದಲ್ಲಿ - ಘಜ್ನಿ ಹಾಗೂ ಎರಡನೇ ಹಂತದಲ್ಲಿ ಘೋರಿ
ಕಂಚಿಯ ಪಲ್ಲವರು
- ಕ್ರಿ.ಶ.6 – 9 ನೇ ಶತಮಾನದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಮನೆತನ - ಕಂಚಿಯ ಪಲ್ಲವರು .
- ಕಂಚಿಯ ಪಲ್ಲವರು ಮೊದಲು - ಶಾತವಾಹನರ ಮಂಡಲಾಧಿಪತಿಗಳಾಗಿದ್ದರು .
- ಶಾತವಾಹನರ ನಂತರ ದಕ್ಷಿಣದಲ್ಲಿ ಸ್ವತಂತ್ರರಾದ ಮನೆತನ - ಪಲ್ಲವರು .
- ಕಂಚಿಯ ಪಲ್ಲವರ ಸ್ಥಾಪಕ ದೊರೆ - ಬಪ್ಪ .
- ಬಪ್ಪನ ನಂತರ ಅಧಿಕಾರಕ್ಕೆ ಬಂದವರು - ವಿಷ್ಣುಗೋಪ .
- ಪಲ್ಲವರ ರಾಜಧಾನಿ - ಕಂಚಿ .
- ಪಲ್ಲವರ ಕಾಲದಲ್ಲಿ ಸ್ಥಾಪನೆಯಾದ ನಲಂದ ವಿ.ವಿ. ನಿಲಯಕ್ಕೆ ಸರಿಸಮಾನವಾದ ವಿ.ವಿ. ನಿಲಯ - ಕಂಚಿ ವಿಶ್ವ ವಿದ್ಯಾ ನಿಲಯ .
- ಮತ್ತವಿಲಾಸ ಪ್ರಹಸನದ ಎಂಬ ಸಂಸ್ಕೃತ ನಾಟಕದ ಕರ್ತೃ - ಒಂದನೇ ಮಹೇಂದ್ರ ವರ್ಮನ್ .
- “ ಭಾರವಿ ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು .
- “ ನ್ಯಾಯ ಭಾಷ” ಕೃತಿಯ ಕರ್ತೃ - ವಾತ್ಸಾಯನ .
- ಪಲ್ಲವರ ಆಸ್ಥಾನದಲ್ಲಿದ್ದ ತ್ರಿವಳಿಗಳು - ಅಪ್ಪಾರ್ , ಸಂಬಂಧರ್ , ಸುಂದರರ್ .
- “ ಧರ್ಮಪಾಲ ” ಈ ವಿ.ವಿ ನಿಲಯದ ಕುಲಪತಿಯಾಗಿದ್ದ - ನಲಂದಾ ವಿ.ವಿ. ನಿಲಯ .
- “ ತಿರುವಾಚಗಂ ” ಕೃತಿಯ ಕರ್ತೃ - ಮಣಿಕೈ ವಸಗರ್ .
- ಪಲ್ಲವರ ಕಾಲದಲ್ಲಿದ ಧಾರ್ಮಿಕ ಪಂಥಗಳು - ಭಾಗವ ಹಾಗೂ ಪಾಶುಪತ .
- ಭಾಗವತ ಇದು - ವೈಷ್ಣವ ಪಂಥ .
- ಕಂಚಿಯ ಪಲ್ಲವರ ಕಾಲದಲ್ಲಿ ಭಕ್ತಿ ಚಳವಳಿಯನ್ನು ಪ್ರಖ್ಯಾತಗೊಳಿಸಿದವರು - ನಯನಾರರು .
- ತಿರುಮೂಲರ್ ಕೃತಿಯ ಕರ್ತೃ - ತಿರುಮಂದಿರಂ
- ಪಲ್ಲವರ ಕಾಲದಲ್ಲಿ ಜನ್ಮತಾಳಿದ ಕಲೆ ಮತ್ತು ವಾಸ್ತುಶಿಲ್ವ ಶೈಲಿ - ದ್ರಾವಿಡ ಶೈಲಿ .
- ಪಲ್ಲವರ ವಾಸ್ತುಶಿಲ್ಪದ ಭಾಗಗಳು - ಗುಹಾ ದೇವಾಲಯ ಹಾಗೂ ದೇವಾಲಯ .
- ಗುಹಾದೇವಾಲಯದ ಎರಡು ಉಪ ವಿಭಾಗಗಳು - ಸ್ಥಂಭ ಮಂಟಪ ಹಾಗೂ ಏಕಶಿಲೆಯ ದೇವಾಲಯಗಳು .
- ಸ್ಥಂಭ ಮಂಟಪದಲ್ಲಿದ್ದ ಮಹೇಂದ್ರ ಶೈಲಿಯ ಕರ್ತೃ - 1 ನೇ ಮಹೇಂದ್ರ ವರ್ಮ .
- ಏಕಶಿಲಾ ದೇವಾಲಯದ್ಲಿದ್ದ ನರಸಿಂಹ ವರ್ಮನ್ ಶೈಲಿಯ ಕರ್ತೃ - 1 ನೇ ನರಸಿಂಹ ವರ್ಮನ್ .
- ಪಲ್ಲವರ ಕಾಲದ ಏಕಶಿಲ ರಥಗಳು ಈ ಪ್ರದೇಶದಲ್ಲಿದೆ - ಮಾಮ್ಲ ಪುರ .
- ಪಲ್ಲವರ ಕಾಲದ ಅತಿ ಉದ್ದವಾದ ಹಾಗೂ ಪೂರ್ಣಗೊಂಡ ರಥ ವಾಸ್ತು ಶಿಲ್ಪ - ಧರ್ಮರಾಜ ರಥ .
- ರಾಜ ಸಿಂಹ ಶೈಲಿಯ ಕರ್ತೃ - ರಾಜ ನರಸಿಂಹನ್ .
- “ ದೇವಾಲಯಗಳ ನಗರ ಅಥವಾ ಗೋಪುರಗಳ ನಗರ ” ಎಂದು ಕರೆಯಲ್ಪಟ್ಟಿರುವ ಪ್ರದೇಶ - ಕಂಚಿ .
- ತೀರದ ದೇವಾಲಯದ ನಿರ್ಮಾತೃ - 2 ನೇ ನರಸಿಂಹ .
- ಕಂಚಿಯ ಕೈಲಾಸ ದೇವಾಲಯದ ಕರ್ತೃ - ರಾಜ ಸಿಂಹ ಪಲ್ಲವ .
- ಕಂಚಿಯ ಕೈಲಾಸ ದೇವಾಲಯವನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ರಾಜ ಸಿಂಹೇಶ್ವರ .
- “ ಅಪರಾಜಿತ ಶೈಲಿ”ಯು ಇವರ ಕಾಲಕ್ಕೆ ಸೇರಿದ್ದು - ಕಂಚಿಯ ಪಲ್ಲವರು .
- “ ದೇವಗಂಗೆಯ ಭೂಸ್ಪರ್ಷ ಅಥವಾ ಗಂಗವಾತರಣ ” ಶಿಲ್ಪ ಿರುವ ಪ್ರದೇಶ - ಮಹಾಬಲಿಪುರಂ .
- “ ಚಿತ್ತಾಕ್ಕಾರಪುಳಿ ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ - 1 ನೇ ಮಹೇಂದ್ರ ವರ್ಮನ್ .
- ಪಲ್ಲವ ಪದದ ಅರ್ಥ - ಬಳ್ಳಿ .
- “ ಪಲ್ಲವರ ನಾಡು ” ಪದದ ಅರ್ಥ - ( ತಮಿಳಿನಲ್ಲಿ ) - ತಗ್ಗು ಪ್ರದೇಶ .
- ಪಲ್ಲವರು ಎಂದರೇ - ತಗ್ಗು ಪ್ರದೇಶದ ಜನರು ಎಂದರ್ಥ.
- ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ .
- ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ .
- ಐಹೊಳೆ ಶಾಸನದ ಕರ್ತೃ - ರವಿಕೀರ್ತಿ .
- ಕುಡಿಯ ಮಲೈ ಶಾಸನದ ಕರ್ತೃ - ಮಹೇಂದ್ರ ವರ್ಮ .
- “ ಮತ್ತವಿಲಾಸ ಪ್ರಹಸನದ ” ಕೃತಿಯ ಕರ್ತೃ - ಮಹೇಂದ್ರ ವರ್ಮ .
ಪಲ್ಲವರ ಮೂಲ
- ಪಾರ್ಥಿಯನ್ ಮೂಲ
- ವಾಕಾಟಕರ ಮೂಲ
- ಆಂದ್ರದ ಮೂಲ
- ಪುಲಿಂದರ ಮೂಲ
- ಸ್ಥಳೀಯ ಮೂಲ
- ರಾಜಕೀಯ ಇತಿಹಾಸ
- ಪಲ್ಲವರ ಸ್ಥಾಪಕ - ಬಬ್ಬು .
- ಪಲ್ಲವರ ಶಿವಸ್ಕಂದ ವರ್ಮ - ಮೊದಲ ಅರಸ .
- ಪಲ್ಲವರ ಪ್ರಸಿದ್ದ ದೊರೆ - ಶಿವ ಸ್ಕಂದ ವರ್ಮ .
- “ ಧರ್ಮ ಮಹಾ ರಾಜಾ ” ಎಂಬ ಬಿರುದನ್ನು ಹೊಂದಿದ್ದ ಪಲ್ಲವ ದೊರೆ - ಶಿವಸ್ಕಂದ ವರ್ಮ .
- ಬುದ್ದ ವರ್ಮ - ಶಿವ ಸ್ಕಂದ ವರ್ಮನ ನಂತರ ಅಧಿಕಾರಕ್ಕೆ ಬಂದವನು .ನಂತರದ ಅರಸರು 1 ನೇ ನರಸಿಂಹ ವರ್ಮನ್ , 2 ನೇ ಸ್ಕಂದ ವರ್ಮನ್ , ವಿಷ್ಣು ಗೋಪ , ಮೂರನೇ ಸ್ಕಂದ ವರ್ಮನ್ .
- ಕಂಚಿಯ ಪಲ್ಲವ ದೊರೆ ವಿಷ್ಣು ಗೋಪನನ್ನು ಸೋಲಿಸಿದ ಗುಪ್ತದೊರೆ - ಸಮುದ್ರ ಗುಪ್ತ .
- ಪಲ್ಲವ ಸಂತತಿಯಲ್ಲಿ ಅತ್ಯಂತ ಪ್ರಸಿದ್ದ ದೊರೆ - ಒಂದನೇ ಮಹೇಂದ್ರ ಮರ್ಮನ್ .
- ಇಮ್ಮಡಿ ಪುಲಿಕೇಶಿ ಸಮಕಾಲಿನ ದೊರೆ .- ಒಂದನೇ ಮಹೇಂದ್ರ ಮರ್ಮನ್ .
- ಎರಡನೇ ಪುಲಿಕೇಶಿಯೊಡನೆ ಯುದ್ದ ಮಾಡಿದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
- ಮತ್ತ ವಿಲಾಸ , ವಿಚಿತ್ರ ಚಿತ್ತ , ಪರಮೇಶ್ವರ , ಚಿತ್ರಕಾರಪಲಿ , ಚೈತ್ಯಕಾರ ಗುಣಭಾರ , ಮುಂತಾದ ಬಿರುದುಳ್ಳ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್ .
- ಕಲಹ ಪ್ರೀಯ ಎಂದು ಕರೆಯಲ್ಪಡುವ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
- ಸಂಸ್ಕೃತದಲ್ಲಿ ಭಗವದಚ್ಚುಕ ಕೃತಿಯ ಕರ್ತೃ - ಒಂದನೇ ಮಹೇಂದ್ರ ಮರ್ಮನ್ ..
- ಒಂದನೇ ಮಹೇಂದ್ರ ಮರ್ಮನ್ ಸಂಗೀತದ ಗುರುಗಳ - ರುದ್ರಾಚಾರ್ಯ .
- ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ - ಒಂದನೇ ಮಹೇಂದ್ರ ಮರ್ಮನ್ . “ಕುಡಿಮಿಯಾ ಮಲೈ ಶಾಸನ .”
- ಚೆಟ್ಟಿಕಾರಿ ಎಂದರೆ - ದೇಗುಲಗಳ ನಿರ್ಮಾಪಕ ಎಂದರ್ಥ .
- ಚೆಟ್ಟಿ ಕಾರಿ ಎಂಬ ಹೆಸರನ್ನು ಹೊಂದಿದ್ದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
- “ಚಿತ್ರಜೀಕತಕಾಟ ” ಕೆರೆಯ ನಿರ್ಮಾತೃ - ಒಂದನೇ ಮಹೇಂದ್ರ ಮರ್ಮನ್ ..
- ಈ ಕೆರೆಯು ಯಾವ ಊರಿನಲ್ಲಿ ನಿರ್ಮಿಸಲಾಗಿದೆ - ಮಾಮಂದೂರ್ .
- ‘ವಾತಾಪಿ ಕೊಂಡ ಹಾಗೂ ಮಹಾಮಲ್ಲ ’ ಎಂಬ ಬಿರುದನ್ನು ಹೊಂದಿದ್ದ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್ .
- ಒಂದನೇ ನರಸಿಂಹ ವರ್ಮನ ಕಾಲದಲ್ಲಿ ಕಂಚಿಗೆ ಬೇಟಿ ನೀಡದ ಚೀನಿಯಾತ್ರಿಕ - ಹ್ಯೂಯನ್ ತ್ಸಾಂಗ್ ,
- ಒಂದನೇ ನರಸಿಂಹ ವರ್ಮನ ಸೇನಾ ನಾಯಕ - ಸಿರೋತೃಂಡ ಅಥವಾ ಶಿರೋತ್ತುಂಡ ನಾಯನಾರ್ .
- ಪುಲಿಕೇಶಿಯನ್ನು ಬಗ್ಗು ಬಡಿದ ಪಲ್ಲವ ಅರಸ - ಒಂದನೇ ನರಸಿಂಹ ವರ್ಮನ.
- ಪುಲಿಕೇಶಿಯ ವಿರುದ್ದ ಜಯಗಳಿಸಿ ಒಂದನೇ ನರಸಿಂಹ ವರ್ಮನ ಧರಿಸಿದ ಬಿರುದು - ವಾತಾಪಿಕೊಂಡ .
- ಪಲ್ಲವ ಅರಸ ಒಂದನೇ ನರಸಿಂಹ ವರ್ಮನ ನೊಂದಿಗೆ ಹೋರಾಡಿದ ಸಿಂಹಳದ ದೊರೆ - ಮಾನವವರ್ಮ .
- ಒಂದನೇ ನರಸಿಂಹ ವರ್ಮನ ಎರಡನೇ ರಾಜಧಾನಿ - ಮಹಾಬಲಿಪುರಂ .
- ಧರ್ಮರಾಜ ರಥವನ್ನು ಕೆತ್ತಿಸಿದ ಪಲ್ಲವ ದೊರೆ - ಒಂದನೇ ನರಸಿಂಹ ವರ್ಮನ .
- ಪಲ್ಲವರ ಕೊನೆಯ ದೊರೆ - ಅಪರಾಜಿತ ವರ್ಮ .
- ಪಲ್ಲವರ ಆಡಳಿತ ಈ ರಾಜರ ಆಡಳಿತವನ್ನು ಹೋಲುತ್ತಿತ್ತು - ಶಾತವಾಹನರು .
- ಪಲ್ಲವರು ರಾಜನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮಹಾರಾಜ ಹಾಗೂ ಧರ್ಮ ಮಹಾರಾಜ .
- ಪಲ್ಲವರು ಪ್ರಾಂತ್ಯಗಳನ್ನು - ನಾಡುಗಲಾಗಿ ವಿಂಗಡಿಸಿದರು .
- ಪ್ರಾಂತ್ಯಗಳನನ್ನ - ಜಿಲ್ಲೆ ಅಥವಾ ಕೊಟ್ಟಂಗಳಾಗಿ ವಿಂಗಡಿಸಲಾಗಿತ್ತು .
- ಕೊಟ್ಟಂಗಳನ್ನು - ಸ್ಥಳೀಯ ಸ್ವಾಯತ್ತ ಸಂಸ್ಥೆಗಳಾಗಿ ವಿಂಗಡಿಿದರು .
- ಕೊಟ್ಟಂನ ಆಡಳಿತಾಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ದೇಶಾಟಿಕ .
- ಆಡಳಿತದ ಚಿಕ್ಕ ಘಟಕ - ಗ್ರಾಮವಾಗಿತ್ತು .
- ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದವನು - ಗ್ರಾಮ ಬೋಜ .
- ಗ್ರಾಮ ಸಭೆಯ ಸದಸ್ಯರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೆರುಮಾಳ್ .
- ಪಲ್ಲವರ ಕಾಲದ ನ್ಯಾಯದಾನ ವ್ಯವಸ್ಥೆಯ ಮುಖ್ಯಸ್ಥ - ರಾಜ .
- ಗ್ರಾಮಾಂತರ ಪ್ರದೇಶಗಳಲ್ಲಿ ನ್ಯಾಯದಾನ ಮಾಡುತ್ತಿದ್ದ ಸಮಿತಿಗಳು - ಮರಿಯ ಸಮಿತಿ .
- ಪಲ್ಲವರ ಕಾಲದಲ್ಲಿ ನದಿಯ ಕಾಲುವೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅರಕ್ಕುಳ್ .
- ಪಲ್ಲವರ ಕಾಲದ ಪ್ರಮುಖ ಬಂದರುಗಳು - ಮಹಾಬಲಿ ಪುರಂ ಹಾಗೂ ನಾಗಾಪಟ್ಟಣಂ .
- ಕಂಚಿಯ ಪಲ್ಲವರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು .
- ಶಿಕ್ಷಣ ನೀಡುವ ಕೇಂದ್ರಗಳಿಗೆ ಈ ಹೆಸರಿನಿಂದ ಕರೆಯುತ್ತಿದ್ದರು - ಘಟಕಗಳು .
- ತಮಿಳು ಸಾಹಿತ್ಯ ಬೆಳವಣಿಗೆಯ ದ್ವೀತಿಯ ಹಂತ - ಪಲ್ಲವರ ಕಾಲ .
- “ ಕಾವ್ಯದರ್ಶ ಹಾಗೂ ಅವಂತಿ ಸುಂದರ ಕಥಾ” ಕೃತಿಯ ಕರ್ತೃ - ದಂಡಿ .
- ತಿರುಮಂದಿರಂ ಕೃತಿಯ ಕರ್ತೃ - ಮಾಮುಲರ್ .
- “ ನನ್ಮುಖ ತಿರುವಂದಾಡಿ ಮತ್ತು ತಿರುಚ್ಚಂದ್ರ ವಿರುತ್ತನ್ ” ಎಂಬ ಕೃತಿಯ ಕರ್ತೃ - ತಿರುಮಲೇಶೈ .
- ಮಹಾ ಭಾರತವನ್ನು ತಮಿಳು ಭಾಷೆಗೆ ತ್ರಜುಮೆ ಮಾಡಿದ ಕವಿ - ಪೆರುಂದೇವನಾರ್ .
- ನಾಚಿಯಾರ್ ತಿರುಮಮಾಲಿ ಮತ್ತು ತಿರು ಪ್ಪಾವೈ ಕೃತಿಯ ಕರ್ತೃ - ಆಂಡಾಳ್ .
- ಒಂದನೇ ಮಹೇಂದ್ರ ವರ್ಮನ ಕಾಲದಲ್ಲಿ ದಕ್ಷಿಣ ಭಾರತದ ಶಿಲ್ಪ ಕಲೆಗಳಿಗೆ ಹಾಗೂ ಮೂರ್ತಿ ಶಿಲ್ಪ ಕಲೆಯ ಉಗಮಸ್ಥಾನ - ಮಹಾಬಲಿಪುರಂ .
- ಮಹಾಬಲಿಪುರಂ ಶಿಲಾ ರಥಗಳು ಈ ಹೆಸರಿನಿಂದ ಪ್ರಸಿದ್ದಿಯಾಗಿದೆ - ಸಪ್ತ ಪಗೋಡ ,
- ಪಲ್ಲವರ ರಾಜ್ಯ ಲಾಂಛನ - ಸಿಂಹ .
- “ ಮಹಾಮಲ್ಲ ” ಎಂಬ ಬಿರುದ್ದನ್ನು ಹೊಂದಿದ್ದ ಪಲ್ಲವ ದೊರೆಯ ಹೆಸರು - ಒಂದನೇ ನರಸಿಂಹ ವರ್ಮನ.
- ಪಲ್ಲವರ ಕಾಲದ ಪ್ರಸಿದ್ದ ಕಲಾ ಕೃತಿಗಳ ಕೇಂದ್ರ - ಮಹಾಬಲಿಪುರಂ ಹಾಗೂ ಕಂಚಿ .
- ದಶಕುಮಾರ ಚರಿತ ಕೃತಿಯ ಕರ್ತೃ - ದಂಡಿ .
- ಹ್ಯೂಯನ್ ತ್ಸಾಂಗನು ಪಲ್ಲವ ರಾಜ್ಯಕ್ಕೆ ಬೇಟಿ ನೀಡಿದ್ದು - ಕ್ರಿ.ಶ. 640 ರಲ್ಲಿ .ಪಲ್ಲವರ ರಾಜ್ಯವನ್ನು “ ದ್ರಾವಿಡ ದೇಶ ” ಎಂದು ಕರೆದವರು - ಹ್ಯೂಯನ್ ತ್ಸಾಂಗ್