অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಕಲಚೇತನ ಶೈಕ್ಷಣಿಕ ಯೋಜನೆಗಳು

ವಿಕಲಚೇತನ ಶೈಕ್ಷಣಿಕ ಯೋಜನೆಗಳು

ಶ್ರವಣದೋಷವುಳ್ಳ ಮಕ್ಕಳಿಗಾಗಿ ವಿಶೇಷ ವಸತಿಯುತ ಶಾಲೆಗಳು

ಇಲಾಖೆಯಲ್ಲಿ ಶ್ರವಣದೋಷವುಳ್ಳ ಮಕ್ಕಳಿಗಾಗಿ ಮೈಸೂರು, ಗುಲ್ಬರ್ಗಾ, ಬಳ್ಳಾರಿ, ಬೆಳಗಾಂ ಜಿಲ್ಲೆಗಳಲ್ಲಿ 4 ಕಿವುಡು ಮಕ್ಕಳ ಶಾಲೆಗಳು ಇವೆ. ಈ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ವಸತಿ, ಊಟ, ಉಡಿಗೆ ತೊಡಿಗೆ ಮತ್ತು ರಕ್ಷಣೆಯನ್ನು ನೀಡಲಾಗುತ್ತಿದೆ. ಬೆಳಗಾಂನಲ್ಲಿರುವ ಕಿವುಡು ಮಕ್ಕಳ ಶಾಲೆಯು ಹೆಣ್ಣು ಮಕ್ಕಳಿಗೆ ಇರುವ ಪ್ರತ್ಯೇಕ ಶಾಲೆಯಾಗಿರುತ್ತದೆ.

ದೃಷ್ಟಿದೋಷವುಳ್ಳ ಮಕ್ಕಳಿಗಾಗಿ ವಿಶೇಷ ವಸತಿಯುತ ಶಾಲೆಗಳು

ಇಲಾಖೆಯಲ್ಲಿ 4 ಅಂಧ ಮಕ್ಕಳ ಶಾಲೆಗಳು ಗುಲ್ಬರ್ಗಾ, ಮೈಸೂರು, ದಾವಣೆಗೆರೆ ಹಾಗೂ ಹುಬ್ಬಳ್ಳಿಗಳಲ್ಲಿ ನಡೆಯುತ್ತಿವೆ. ಈ ಶಾಲೆಗಳಲ್ಲಿ ದೃಷ್ಟಿದೋಷವುಳ್ಳ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣವನ್ನು ನೀಡಲಾಗುತ್ತಿದೆ. ದಾವಣಗೆರೆಯಲ್ಲಿರುವ ಶಾಲೆಯು ಹೆಣ್ಣು ಮಕ್ಕಳಿಗೆಇರುವ ಪ್ರತ್ಯೇಕ ಶಾಲೆಯಾಗಿರುತ್ತದೆ.

ವಿಕಲಚೇತನ ವಿದ್ಯಾರ್ಥಿಗಳಿಗೆ ವೇತನ

ಈ ಕಾರ್ಯಕ್ರಮದಡಿ ಒಂದೇ ತರಗತಿಯಿಂದ ವಿಶ್ವವಿದ್ಯಾನಿಲಯದ ಮಟ್ಟದವರೆಗೆ ಓದುತ್ತಿರುವ ಅರ್ಹ ವಿಕಲಚೇತನರ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2001-02ನೇ ಸಾಲಿನಿಂದ ಈ ಯೋಜನೆಗೆ ಆದಾಯ ಮಿತಿಯಿಂದ ವಿನಾಯಿತಿಗೊಳಿಸಲಾಗದೆ. 2012-13ನೇ ಸಾಲಿನಲ್ಲಿ 247.22ಲಕ್ಷ ರೂ.ಗಳು ವೆಚ್ಚವಾಗಿದ್ದು 24793 ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ.

ವಿಕಲಚೇತನ ವಿದ್ಯಾರ್ಥಿಗಳಿಗೆ ಶಿಷ್ಯವೇತನ

ಮಾಹೆಯಾನ

ವಿದ್ಯಾರ್ಥಿ ನಿಲಯದ ಅಭ್ಯರ್ಥಿಗಳಿಗೆ

ಅಂಧ ವಿದ್ಯಾರ್ಥಿ ಓದುಗರ ಭತ್ಯೆ

ದೈಹಿಕ ವಿಕಲಚೇತನರು ಸಂಚಾರಿ ಭತ್ಯೆ

1 ರಿಂದ 5ನೇ ತರಗತಿ

50

-

25

25

6 ರಿಂದ 10ನೇ ತರಗತಿ

100

-

25

25

ಪಿ.ಯು.ಸಿ

150

-

75

50

ಪದವಿ ಶಿಕ್ಷಣ, ಟಿ.ಸಿ.ಹೆಚ್

200

180

75

-

ಬಿ.ಎ : ಎಂ.ಬಿ.ಬಿ.ಎಸ್ : ಎಲ್.ಎಲ್.ಬಿ : ಡಿಪ್ಲೋಮಾ ಇನ್ ಪ್ರೋಫೆಷನ್ ಮತ್ತು ಇಂಜಿನಿಯರಿಂಗ್ ಇನ್ ಪ್ಲಾಂಟ್ ಇಂಜಿನಿಯರಿಂಗ್

250

240

100

50

ಎಂ.ಎ : ಎಂ.ಎಸ್ಸಿ : ಎಂ.ಕಾಮ್ : ಎಲ್.ಎಲ್.ಎಂ ಹಾಗೂ ತತ್ಸಮಾನ

300

240

100

-

ಬ್ರೈಲ್ ಮುದ್ರಣಾಲಯ

1982ನೇ ಇಸವಿಯಿಂದ ಸರ್ಕಾರಿ ಬ್ರೈಲ್ ಮುದ್ರಣಾಲಯವು ಕಾರ್ಯನಿರ್ವಹಿಸುತ್ತಿದ್ದು ಇದರ ಮೂಲ ಉದ್ದೇಶವು ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ / ಅರೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಅಂಧ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ಪಠ್ಯ ಪುಸ್ತಕಗಳನ್ನು ಬ್ರೈಲ್ ಲಿಪಿಯಲ್ಲಿ ಮುದ್ರಿಸಿ ಅಂಧ ಮಕ್ಕಳಿಗೆ ಉಚಿತವಾಗಿ, ಸರಬರಾಜು ಮಾಡಲಾಗುತ್ತಿದೆ. 2002ನೇ ಸಾಲಿನಲ್ಲಿ ಈ ಮುದ್ರಣಾಲಯವು ಗಣಕೀಕೃತವಾಗಿದ್ದು, ಇದರಿಂದಾಗಿ ಪ್ರತಿಯೊಂದು ಅಂಧ ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕಗಳನ್ನು ಒದಗಿಸುವಂತಾಗಿದೆ. ಈ ಪಠ್ಯಪುಸ್ತಕಗಳ ಜೊತೆಯಲ್ಲಿ ಪ್ರತಿವರ್ಷವೂ ಬ್ರೈಲ್ ಕ್ಯಾಲೆಂಡರ್ ಮತ್ತು ಕಲವು ಪಠ್ಯೇತರ ಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ.

ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ಯೇಜನೆ

ಪಬ್ಲಿಕ್ ಪರೀಕ್ಷೆಗಳಲ್ಲಿ ಶೇಕಡ 60ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿಕಲಚೇತನ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಯೋಜನೆ ಇದಾಗಿದೆ. ಈ ಯೋಜನೆಯನ್ನು 20೦1-೦2ನೇ ಸಾಲಿನಿಂದ ಬಿ.ಎಡ್, ಎಮ್.ಎಡ್, ಮತ್ತು ಟಿ.ಸಿ.ಹೆಚ್ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.2012-13ನೇ ಸಾಲಿಗೆ 247.22ಲಕ್ಷರೂ.ಗಳ ಆಯವ್ಯಯ ನಿಗಧಿ ಪಡಿಸಲಾಗಿದೆ.

ವಿಶೇಷ ಶಿಕ್ಷಕರ ತರಬೇತಿ ಕೇಂದ್ರ ಮೈಸೂರು

ದೃಷ್ಟಿದೋಷವುಳ್ಳ ಮಕ್ಕಳ ಹಾಗೂ ಶ್ರವಣದೋಷವುಳ್ಳ ವಿಕಲಚೇತನ ವಿದ್ಯಾರ್ಥಿಗಳಿಗೆ ಬೋದಿಸುವ ಶಿಕ್ಷಕರಿಗೆ 2ವರ್ಷಗಳ ವಿಶೇಷ ಶಿಕ್ಷಣ ನೀಡಲು ವಿಶೇಷ ಶಿಕ್ಷಕರ ತರಬೇತಿ ಕೇಂದ್ರವನ್ನು 2000-2001ನೇ ಸಾಲಿನಲ್ಲಿ ಮೈಸೂರಿನಲ್ಲಿ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಸುಮಾರು ೨೫ ವಿದ್ಯಾರ್ಥಿಗಳಿಗೆ ಪ್ರತಿ ಬ್ಯಾಚ್ ನಲ್ಲಿ ವೀಶೇಷ ಶಿಕ್ಷಕರ ತರಬೇತಿ ನೀಡಲು ಅವಕಾಶವಿರುತ್ತದೆ

ಜಿಲ್ಲಾ ವಲಯದ ಯೋಜನೆಗಳು

ಅನುದಾನಿತ ವಿಶೇಷ ಶಾಲೆಗಳಿಗೆ ಧನಸಹಾಯ:ಸ್ಚಯಂ ಸೇವಾ ಸಂಸ್ಥೆಗಳು, ವಿವಿಧ ವಿಕಲಚೇತನರಿಗಾಗಿ ವಿಶೇಷ ಶಾಲೆಗಳನ್ನು ನಡೆಸುತ್ತಿದ್ದು ರಾಜ್ಯ ಸರ್ಕಾರವು ಅಂತಹ ಸಂಸ್ಥೆಗಳಿಗೆ ಧನಸಹಾಯವನ್ನು ನೀಡುತ್ತಿದೆ. ಈ ಯೋಜನೆಯಡಿ 35 ವಿಶೇಷ ಶಾಲೆಗಳಿಗೆ/ ತರಬೇತಿ ಕೇಂದ್ರಗಳಿಗೆ ಅನುದಾನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ಅನುದಾನ ಪಡೆಯುತ್ತಿರುವಶಾಲೆಗಳ ವಿವರವನ್ನು ಅನುಬಂಧ1 ರಲ್ಲಿ ನೀಡಲಾಗಿದೆ

ಅಂಗವಿಕಲ ಮಕ್ಕಳ ಕೇಂದ್ರಿಕೃತ ವಿಶೇಷ ಶೈಕ್ಷಣಿಕ ಯೋಜನೆ

ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತದ್ದು ಈ ಕಾರ್ಯಕ್ರಮಗಳು ಅಂಗವಿಕಲರನ್ನು ಸಾಮಾನ್ಯ ಜನರಂತೆ ಬದುಕಲು ನೆರವು ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಮುಖ ದ್ಯೇಯೋದ್ದೇಶಗಳನ್ನು ಗುರಿಗಳನ್ನು ಇಟ್ಟುಕೊಂಡಿದೆ, ಇಲಾಖೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮವು ಪ್ರಮುಖವಾಗಿದೆ

ಉದ್ದೇಶ

  • ವಿಶೇಷ ಮಕ್ಕಳ ಶಿಕ್ಷಣಕ್ಕೆ ಸೂಕ್ತ ಪರಿಸರವನ್ನು ಕಲ್ಪಿಸುವುದು
  • ಸಂವಿಧಾನದಲ್ಲಿ ಸರ್ವರಿಗೂ ಶಿಕ್ಷಣ ಹಕ್ಕು ಸೂಚಿಸಿದಂತೆ ಅಂಗವಿಕಲ ಮಕ್ಕಳಿಗೂ ಶಿಕ್ಷಣದ ಹಕ್ಕನ್ನು ನೀಡುವುದು
  • ಅಂಗವಿಕಲ ಮಕ್ಕಳನ್ನು ಇತರೆ ಸಾಮಾನ್ಯ ಪ್ರಜೆಗಳಂತೆ ರಾಷ್ಟ್ರದ ಪ್ರಗತಿಗೆ ಸಹಕಾರಿಯಾಗುವಂತೆ ಮಾಡುವುದು
  • ಶೈಕ್ಷಣಿಕ ಕಲಿಕೆ ಒಳಪಡುವ ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ವಸತಿಯುತ ಶಾಲೆಯನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸುವುದು
  • 2012-13ನೇ ಸಾಲಿನಲ್ಲಿ 39 ಶಾಲೆಗಳಿಗೆ ರೂ.298.38ಲಕ್ಷ ಅನುದಾನ ವೆಚ್ಚವಾಗಿದೆ

ಮೂಲ : ವಿಕಲಚೇತನರ  ಹಾಗು  ಹಿರಿಯ  ನಾಗರಿಕರ  ಸಾಬರಿಕಾರಣ  ಇಲಾಖೆ

ಕೊನೆಯ ಮಾರ್ಪಾಟು : 7/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate