অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲೋಕ ಶಿಕ್ಷಣ ನಿರ್ದೇಶನಾಲಯ

ಉದ್ದೇಶಗಳು

  • ಕರ್ನಾಟಕದ ಎಲ್ಲ ಅನಕ್ಷರಸ್ಥರಿಗೆ, ನವಸಾಕ್ಷರರಿಗೆ ಮತ್ತು ಮಧ್ಯದಲ್ಲಿ ಶಾಲೆ ಬಿಟ್ಟವರಿಗೆ ಮೂಲ ಸಾಕ್ಷರತೆ, ಮುಂದುವರಿಕೆ ಮತ್ತು ಜೀವನ ಪರ್ಯಂತ ಶಿಕ್ಷಣದ ಅವಕಾಶ ಕಲ್ಪಿಸುವುದು.
  • ರಾಷ್ಟ್ರೀಯ ಸಾಕ್ಷರತಾ ಮಿಷನ್ನಿನ ಚಟುವಟಿಕೆಗಳನ್ನು ಮತ್ತು ಸಾಕ್ಷರತಾ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದು.
  • ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಗಳ ಅಸ್ತಿತ್ವ ಮತ್ತು ಸಮರ್ಥ ಕಾರ್ಯನಿರ್ವಹಣೆಗೆ ಅಗತ್ಯವಾದ ಕಾರ್ಯನಿರ್ವಹಣೆ ಗುಂಪನ್ನು ರೂಪಿಸಲು ಸಹಕರಿಸುವುದು. ಜಿಲ್ಲಾ, ತಾಲ್ಲೂಕ ಮತ್ತು ಗ್ರಾಮ ಮಟ್ಟದಲ್ಲಿ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯವಾದ ಅಧಿಕಾರವನ್ನು ವಿಕೇಂದ್ರಿಕರಿಸುವುದು.
  • ರಾಜ್ಯದ ಸಾಕ್ಷರತೆ ಸುಧಾರಣಾ ಶೈಕ್ಷಣಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರೇತರ ಸಂಘಗಳು ಮತ್ತು ಸೇವಾ ಮನೋಭಾವವುಳ್ಳ ವ್ಯಕ್ತಿಗಳು ಪಾಲ್ಗೊಳ್ಳುವಂತೆ ಮಾಡುವುದು.
  • ಜೀವನ ಗುಣಮಟ್ಟ ಸುಧಾರಣಾ ಕಾರ್ಯಕ್ರಮಗಳನ್ನು ರೂಪಿಸುವುದು.
  • ನವಸಾಕ್ಷರರಿಗೆ ಅಗತ್ಯವಾದ ಆದಾಯ ಹೆಚ್ಚಿಸುವ ಕಾರ್ಯಕ್ರಮಗಳನ್ನು ರೂಪಿಸಿ ಅವರ ಸಕ್ರಿಯ ಸಹಕಾರದೊಡನೆ ಅನುಷ್ಠಾನಗೊಳಿಸುವುದು.
  • ವಯಸ್ಕರ ಶಿಕ್ಷಣ ಮತ್ತು ಅದರ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಅಧ್ಯಯನಗಳು, ಪ್ರಯೋಗಗಳು, ಅನ್ವೇಷಣಾ ಚಟುವಟಿಕೆಗಳು ಮತ್ತು ಸಂಶೋಧನೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದು.
  • ಶೈಕ್ಷಣಿಕ ಸಾಮಗ್ರಿಗಳನ್ನು ರಚಿಸುವುದು, ಪ್ರಕಟಿಸುವುದು ಮತ್ತು ಸಾಕ್ಷರತಾ ಕಾರ್ಯಕ್ಷೇತ್ರಕ್ಕೆ ವಿತರಿಸುವುದು.
  • ರಾಷ್ಟ್ರೀಯ ಮುಕ್ತಶಾಲೆಯ ಸಹಯೋಗದಲ್ಲಿ ರಾಜ್ಯ ಮುಕ್ತಶಾಲೆಗಳನ್ನು ಸ್ಥಾಪಿಸುವುದು.
  • ಲಾಂಛನ
  • ಮುಖ
  • ನಕ್ಷೆ
  • ಬಣ್ಣಗಳು
  • ಜ್ಯೋತಿ
  • ಮಹಿಳೆಯ ಜ್ಞಾನಾಭಿಮುಖ
  • ಕರ್ನಾಟಕ ರಾಜ್ಯದ ನಕ್ಷೆ
  • ಹಳದಿ ಮತ್ತು ಕೆಂಪು ಕನ್ನಡ ಬಾವುಟದ ಬಣ್ಣಗಳು
  • ಜ್ಞಾನದ ಸಂಕೇತ, ಲಾಂಛನದೊಳಗಿರುವ ಜಾಗೃತಿ ಪದವು, ಅರಿವಿನೊಂದಿಗೆ ಸಾಕ್ಷರತೆ ಜಾಗೃತಿಗೆ ಮೂಲ ಎಂಬುದನ್ನು ಸೂಚಿಸುತ್ತದೆ.

ನಮ್ಮ ಕಾರ್ಯಕ್ರಮಗಳು

  • ಸಾಕ್ಷರ ಭಾರತ್ 2012
  • ಮುಂದುವರಿಕೆ ಶಿಕ್ಷಣ ಕಾರ್ಯಕ್ರಮ
  • ಕಿರು ಸಾಕ್ಷರತಾ ಯೋಜನೆ
  • ಕಲಿಕೆ-ಗಳಿಕೆ
  • ವಿದ್ಯಾಥರ್ಿಗಳ ಮೂಲಕ ಸಾಕ್ಷರತೆ
  • ಸಾಕ್ಷರ ಸನ್ಮಾನ
  • ಪುನ:ಶ್ಚೇತನ ಸಾಕ್ಷರತಾ ಕಾರ್ಯಕ್ರಮ
  • ಶಿಬಿರ ಸಾಕ್ಷರತೆ
  • ಕ್ರಿಯಾತ್ಮಕ ಜಲಸಾಕ್ಷರತೆ
  • ಕಾರಾಗೃಹ ಸಾಕ್ಷರತೆ
  • ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅನಕ್ಷರಸ್ಥರಿಗಾಗಿ ಶೀಘ್ರ ಕಲಿಕಾ ವಿಶೇಷ ಕಾರ್ಯಕ್ರಮ

ಲೋಕ ಶಿಕ್ಷಣ ನಿರ್ದೇಶನಾಲಯದಲ್ಲಿ ಇ - ಆಡಳಿತ ಲೋಕ ಶಿಕ್ಷಣ ನಿರ್ದೇಶನಾಲಯದಲ್ಲಿ ಇ - ಆಡಳಿತ ವಿಭಾಗ ಕರ್ತವ್ಯ ನಿರ್ವಹಿಸುತ್ತಿದ್ದು ಎಲ್ಲಾ ಜಿಲ್ಲೆಗಳಿಂದ ವಿವಿಧ ಕಾರ್ಯಕ್ರಮದ ಮಾಹಿತಿಯನ್ನು ಇಂಟರ್ ನೆಟ್ ಮುಖಾಂತರ ತರಿಸಿ ವಿಷಯಗಳನ್ನು ಶೀಘ್ರ ವಿಲೇವಾರಿ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ವೆಬ್ ಸೈಟ್ ಅಭಿವ್ರದ್ಧಿಗೊಲಿಸಲಾಗಿದೆ. ಎಲ್ಲಾ ಜಿಲ್ಲೆಗಳಿಗೆ ಬ್ರಾಂಡ್ ಬ್ಯಾಂಡ್  ಇಂಟರ್ ನೆಟ್ ಸೇವೆ ವ್ಯವಸ್ಥೆಯಿದೆ. ಎಲ್ಲಾ ಜಿಲ್ಲಾ ಸಾಕ್ಷರತಾ ಸಮಿತಿಗಳಿಗೆ ಹಾಗೂ ನಿರ್ದೇಶನಾಲಯಕ್ಕೆ ಇ - ಮೇಲ್ ವಿಳಾಸಗಳನ್ನು ಸಿದ್ಧಪಡಿಸಿ ವರದಿಗಳನ್ನು ಇ - ಮೇಲ್ ಮತ್ತು ಫ್ಯಾಕ್ಸ್ ಮೂಲಕ ನೀಡುವುದು ಮತ್ತು ತರಿಸಿಕೊಳ್ಳುವುದು ಆಗುತ್ತುದೆ.

ಕಂಪ್ಯೂಟರ್ ಮೂಲಕ ಸಾಕ್ಷರತೆಯ ಪ್ರಯೋಗ

ವಯಸ್ಕರ ಸಾಕ್ಷರತೆಗಾಗಿ ರಾಜ್ಯ ಸಂಪನ್ಮೂಲ ಕೇಂದ್ರ ಸಿದ್ಧಪಡಿಸಿದ ' ಬಾರವ್ವ ಕಲಿಯಾಕ ' ಪಠ್ಯಪುಸ್ತಕವನ್ನು ಆಧರಿಸಿ ಸಾಫ್ಟ್ ವೇರ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಮೂಲಕ ಅನಕ್ಷರಸ್ಥರು ಸಾಕ್ಷರತಾ ಕೌಶಲ ಪಡೆಯಬಹುದಾಗಿದೆ. ಕಂಪ್ಯೂಟರ್ ಮೂಲಕ ಮೌಸ್ ಬಳಿಸಿ, ಅಕ್ಷರ ಪದಗಳನ್ನು ಉಚ್ಚಾರಣೆ ಮೂಲಕ ಕಲಿಯಬಹುದು. ಕನ್ನಡ ಅಕ್ಷರಗಳು, ಸ್ವರ ಚಿಹ್ನೆ , ಒತ್ತಕ್ಷರಗಳನ್ನು ಸೇರಿಸಿ ಬರೆಯುವ ಕ್ರಮವನ್ನು ಸರಳವಾಗಿ ಇದರಲ್ಲಿ ಪರಿಚಯಿಸಲಾಗಿದೆ. ಮೌಸ್ ಬಳಸಿ ಅಕ್ಷರ ಅಭ್ಯಾಸ ಮಾಡಬಹುದು. ಕಲಿಕಾರ್ಥಿಗಳು ಮೌಸ್ ನಿಂದ ಅಕ್ಷರ ಕಲ್ಪಿಸಲಾಗಿದೆ. ಹಾಗೆಯೇ ಅಕ್ಷರ ಬರೆಯುವ ಕ್ರಮವನ್ನು ಪರಿಚಯಿಸಲಾಗಿದೆ.

ಮಾಹಿತಿ ಹಕ್ಕು -2015-16 4(i) (a)

ಮಾಹಿತಿ ಹಕ್ಕು -2015-16 4(i) (b)

ಮಾಹಿತಿ ಹಕ್ಕು -2014-15 4(i) (a)

ಮಾಹಿತಿ ಹಕ್ಕು -2014-15 4(i) (b)

ಮಾಹಿತಿ ಹಕ್ಕು -2013-14 4(1) (a)

ಮಾಹಿತಿ ಹಕ್ಕು -2013-14 4(1) (b)

ಮಾಹಿತಿ ಹಕ್ಕು - 2012 - 13 4(1) (a)

ಮಾಹಿತಿ ಹಕ್ಕು -2012-13 4(1) (b)

ವಯಸ್ಕರ ಶಿಕ್ಷಣ

ಕರ್ನಾಟಕ  ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ  ಸ್ಥಾಪನೆಯಾಗಿದ್ದು, ದಿನಾಂಕ 18.03.1995 ರಿಂದ ಕಾರ್ಯನಿರ್ವಹಿಸುತ್ತಿದೆ. ಲೋಕ ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಸಚಿವಾಲಯವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಸಂಸ್ಥೆಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

  • 1.1978ರಲ್ಲಿ ರಾಜ್ಯದಲ್ಲಿ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳ ಮೇಲ್ವಿಚಾರಣೆ ಹಾಗೂ ಪರಿವೀಕ್ಷಣೆಗಾಗಿ (Adult Education) ವಯಸ್ಕರ ಶಿಕ್ಷಣ ನಿರ್ದೇಶನಾಲಯ  ಅಸ್ತಿತ್ವಕ್ಕೆ ಬಂತು.
  • 2.1989ರಲ್ಲಿ ರಾಜ್ಯ ವಯಸ್ಕರ ಶಿಕ್ಷಣ ನಿರ್ದೇಶನಾಲಯವನ್ನು ಲೋಕ ಶಿಕ್ಷಣ ನಿರ್ದೇಶನಾಲಯ (Directorate of Mass Education) ಎಂದು ನಾಮಕರಣ ಮಾಡಲಾಯಿತು.

3.2006ರಲ್ಲಿ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನಕ್ಕೆ ನಿರ್ದೇಶಕರನ್ನು ನಿಯುಕ್ತಿಗೊಳಿಸಿರುವುದರ ಪ್ರಯುಕ್ತ ಲೋಕ ಶಿಕ್ಷಣ ಇಲಾಖೆ ಎಂದು ನಾಮಧೇಯ ಪಡೆದಿದೆ

ಈ ನಿರ್ದೇಶನಾಲಯವು ವಯಸ್ಕರ ಶಿಕ್ಷಣ ಕಾರ್ಯಕ್ರಮಗಳನ್ನು ಜಿಲ್ಲಾ ಸಾಕ್ಷರತಾ ಸಮಿತಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕಾರ್ಯಕ್ರಮದ ಅನುಷ್ಠಾನದಲ್ಲಿ ಅಗತ್ಯವಾದ ಮಾರ್ಗದರ್ಶನ, ಸೂಚನೆ ಮತ್ತು ಮಾರ್ಗೊಪಾಯಗಳಿಗೆ  ಸಂಬಂಧಿಸಿದಂತೆ ನಿರ್ದೇಶನ ಮತ್ತು ತರಬೇತಿ ನೀಡಲಾಗುತ್ತದೆ.

ಈ ನಿರ್ದೇಶನಾಲಯಕ್ಕೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ ನಿಯಮಗಳು ಇಲ್ಲದೇ ಇರುವುದರಿಂದ ಪ್ರಧಾನವಾಗಿ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ನಿಯೋಜನೆ ಮೇರೆಗೆ ತೊಡಗಿಸಿಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.

ಲೋಕ ಶಿಕ್ಷಣ ನಿರ್ದೇಶನಾಲಯಕ್ಕೆ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಲೋಕ ಶಿಕ್ಷಣ ನಿರ್ದೇಶನಾಲಯದ ಒಟ್ಟಾರೆ ಆಡಳಿತ ಜವಾಬ್ದಾರಿ ನಿರ್ದೇಶಕರದ್ದಾಗಿರುತ್ತದೆ. ರಾಜ್ಯಮಟ್ಟದ ಅಧಿಕಾರಿಗಳಾದ ನಿರ್ದೇಶಕರಿಗೆ ಇಬ್ಬರು ಉಪನಿರ್ದೇಶಕರು ಮತ್ತು ನಾಲ್ಕು ಮಂದಿ ಸಹಾಯಕ ನಿರ್ದೇಶಕರು ಸಹ ಅಧಿಕಾರಿಗಳಾಗಿರುತ್ತಾರೆ.

ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಸಾಕ್ಷರತಾ ಕಾರ್ಯಕ್ರಮಗಳನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನ ಮಾಡುತ್ತದೆ. ಲೋಕ ಶಿಕ್ಷಣ ನಿರ್ದೇಶನಾಲಯಕ್ಕೆ ಅದರ ಸಚಿವಾಲಯ (ಕಾರ್ಯಾಲಯದ) ವಾಗಿರುತ್ತದೆ. ಲೋಕ ಶಿಕ್ಷಣ ನಿರ್ದೇಶನಾಲಯ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳ ಕಛೇರಿ ಆಡಳಿತ, ನಿರ್ವಹಣೆ ಮತ್ತು ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸುತ್ತದೆ

ಮೂಲ : ಲೋಕ ಶಿಕ್ಷಣ ನೀರ್ದೆಶನಲಾಯ

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate