অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬ್ಲೂಮನ ಕಲಿಕೆಯ ಕ್ಷೇತ್ರಗಳ ವರ್ಗೀಕರಣ

ಮೂರು ರೀತಿಯ ಕಲಿಕೆಗಳು

ಒಂದಕ್ಕಿಂತ ಹೆಚ್ಚು ವಿಧದ ಕಲಿಕೆಗಳಿವೆ. ಬೆಂಜಮಿನ್ ಬ್ಲೂಮನ ನೇತೃತ್ವದಲ್ಲಿ  ಕಾಲೇಜುಗಳ ಸಮಿತಿಯು (1956),  ಮೂರು ಕಲಿಕಾ ಚಟುವಟಿಕೆಗಳ ಕ್ಷೆತ್ರಗಳನ್ನು ಗುರುತಿಸಿದೆ.

  • ಯೋಚನಾ ಕ್ಷೇತ್ರ: ಮಾನಸಿಕ ಕೌಶಲ್ಯಗಳು (ಜ್ಞಾನ)
  • ಭಾವನಾ ಕ್ಷೇತ್ರ ಭಾವನೆಗಳೆ ಬೆಳವಣಿಗೆ ಅಥವ ಭಾವನಾತ್ಮಕ ಪ್ರದೇಶದಲ್ಲಿ  (ಮನೋಭಾವ)
  • ಸೈಕೋ ಮೋಟಾರ್ ಕ್ಷೇತ್ರ: ದೈಹಿಕ ಅಥವ ಶಾರೀರಿಕ ಕುಶಲತೆಗಳು

ಉನ್ನತ ಶಿಕ್ಷಣವು ಸೈಕೋ ಮೋಟಾರ್ ಕಾರ್ಯ ನಿರ್ವಹಿಸುವುದರಿಂದ ಆ ಪದಗಳು ನಾವು ಸಾಮಾನ್ಯವಾಗಿ ಬಳಸುವುದಕ್ಕಿಂತ ಬಹಳ ಗುರುತರವಾಗಿ  ಕಾಣುತ್ತವೆ. ಕ್ಷೇತ್ರಗಳನ್ನು ಗುಂಪು ಎಂದೂ ಪರಿಗಣಿಸಬಹುದು. ತರಬೇತಿದಾರರು ಈ ಕ್ಷೇತ್ರಗಳನ್ನು (ಜ್ಞಾನ, ಕೌಶಲ್ಯ, ಮನೋಭಾವ)  ಎಂದು ವಿಂಗಡಿಸಿದ್ದಾರೆ. ಈ ಕಲಿಕಾ ವರ್ತನೆಗಳ ವರ್ಗೀಕರಣವನ್ನು “ ತರಬೇತಿ ಪ್ರಕ್ರಿಯೆಯ ಗುರಿಗಳು” ಎಂದು ಭಾವಿಸಬಹುದು. ಅಂದರೆ ತರಬೇತಿಯ ಅವಧಿ ಮುಗಿದ  ನಂತರ ಕಲಿಯಲು ಬಂದಿರುವವರು ಹೊಸ  ಕೌಶಲ್ಯಗಳು, ಜ್ಞಾನ ಮತ್ತು ಮನೋಭಾವವನ್ನು ಪಡೆದಿರಬೇಕು. ಸಮಿತಿ

ಯು ಸುಧೀರ್ಘವಾಗಿ  ಯೋಚನಾ ಮತ್ತು  ಭಾವನಾ   ಕ್ಷೇತ್ರಗಳ ಸಂಕಲನ ಮಾಡಿದೆ ಮತ್ತು ಸೈಕೋಮೋಟಾರು ಕ್ಷೇತ್ರದಲ್ಲಿ ಏನನ್ನೂ ಮಾಡಿಲ್ಲ. ಅದಕ್ಕೆ ಅವರ ವಿವರಣೆ ಏನೆಂದರೆ ಈ ಕಣ್ತಪ್ಪಿಗೆ ಕಾರಣ ಅವರಿಗೆ ದೈಹಿಕ ಕೌಶಲ್ಯಗಳನ್ನು ಕಲಿಸಲು ಕಾಲೇಜಿನ ಹಂತದಲ್ಲಿ ಅನುಭವ ಇಲ್ಲದೆ ಇರುವುದು.

ಸಂಕಲನವು ಮೂರೂ  ಕ್ಷೇತ್ರಗಳನ್ನು ಉಪ ವಿಭಾಗಗಳಾಗಿ ವಿಂಗಡಿಸಿದೆ. ತುಂಬ ಸರಳ ವರ್ತನೆಯಿಂದ ಹಿಡಿದು ಅತಿ ಸಂಕೀರ್ಣ ವರ್ತನೆಯವರೆಗೆ ವಿಭಾಗ ಮಾಡಲಾಗಿದೆ. ಈ ರೀತಿಯಾದ ವಿಭಾಗಗಳು ಅಂತಿಮವಲ್ಲ. ಶಿಕ್ಷಣ  ಮತ್ತು ತರಬೇತಿ ಜಗತ್ತಿನಲ್ಲಿ ಇನ್ನಿತರ ವ್ಯವಸ್ಥೆಗಳು ಅಥವ  ಶ್ರೇಣಿಗಳನ್ನು ಸಹಾ ರೂಪಿಸಲಾಗಿದೆ. ಆದಾಗ್ಯೂ  ಬ್ಲೂಮನ ವರ್ಗೀಕರಣವು ಈಗಲೂ ಸುಲಭವಾಗಿ ಅರ್ಥಮಾಡಿ ಕೊಳ್ಳಬಹುದಾಗಿದೆ ಮತ್ತು ಹೆಚ್ಚಾಗಿ ಅನ್ವಯವಾಗುವುದರಿಂದ ಉಪಯೋಗದಲ್ಲಿದೆ

ಯೋಚನಾ ಕ್ಷೇತ್ರ

ಯೋಚನಾ ಕ್ಷೇತ್ರವು ( ಬ್ಲೂಮ್,1956)  ಜ್ಞಾನ ಮತ್ತು ಬೌದ್ಧಿಕ ಕೌಶಲ್ಯಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಇದು ನಿರ್ದಿಷ್ಟ ಅಂಶಗಳನ್ನು ನೆನಪು ಮಾಡಿಕೊಳ್ಳುವುದು ಅಥವ ಗುರುತು ಹಿಡಿಯುವುದು, ಪ್ರಕ್ರಿಯೆಗಳ ಮಾದರಿ  ಮತ್ತು ಬೌದ್ಧಿಕ ಸಾಮರ್ಥ್ಯಗಳ  ಮತ್ತು ಕೌಶಲ್ಯಗಳ ಅಭಿವೃದ್ಧಿಗೆ ಅನುವಾಗುವ ತತ್ವವಾಗಿದೆ. ಇಲ್ಲಿ ಆರು ಪೂರಕವಾದ  ಗುಂಪುಗಳು ಇವೆ. ಅವುಗಳನ್ನು ಕ್ರಮವಾಗಿ ಕೆಳಗೆ ಪಟ್ಟಿ ಮಾಡಿದೆ. ತುಂಬ ಸರಳವಾದ ವರ್ತನೆಯಿಂದ ಪ್ರಾರಂಭಮಾಡಿ ಅತ್ಯಂತ ಸಂಕೀರ್ಣ ವರ್ತನೆಯವರೆಗೆ ಜೋಡಿಸಲಾಗಿದೆ.  ಈ ಗುಂಪಗಳನ್ನು  ಕಠಿನತೆಯ ಮಟ್ಟದ ಆಧಾರದ ಮೇಲೆ  ಮಾಡಲಾಗಿದೆ.   ಅಂದರೆ ಮೊದಲನೆಯದನ್ನು ಪೂರ್ಣ ಕಲಿತ ಮೇಲೆಯೇ ಮುಂದಿನದಕ್ಕೆ ಹೋಗಬೇಕು.

ವರ್ಗ

ಉದಾಹರಣೆ ಮತ್ತು  ಮುಖ್ಯ ಪದಗಳು

ಜ್ಞಾನ: ದತ್ತಾಂಶ ಅಥವ ಮಾಹಿತಿಯನ್ನುನೆನಪುಮಾಡಿಕೊಳ್ಳುವುದು.

ಉದಾಹರಣೆ : ನೀತಿ ನಿರೂಪಣೆ, ಗ್ರಾಹಕರಿಗೆ ನೆನಪಿನಿಂದಲೆ ಬೆಲೆಗಳನ್ನು ತಿಳಿಸುವುದು..
ಮುಖ್ಯ ಪದಗಳು: ನಿರೂಪಣೆ, ವಿವರಣೆ, ಗುರುತಿಸುವುದು, ಅರಿಯುವುದು, ಲೇಬಲ್ ಮಾಡುವುದು, ಪಟ್ಟಿಮಾಡುವುದು, ಹೋಲಿಸುವುದು, ಹೆಸರಿಸುವುದು, ರೂಪರೇಷೆ, ನೆನಪು ಮಾಡಿಕೊಳ್ಳುವುದು, ಗುರುತಿಸುವುದು, ಪುನರುತ್ಪನ್ನ, ಆಯ್ಕೆ, ಹೇಳುವುದು.

ಅರ್ಥೈಸುವಿಕೆ: ಅರ್ಥವನ್ನು  ತಿಳಿದು ಕೊಳ್ಳುವುದು,ಅನುವಾದ, ವ್ಯಾಖ್ಯಾನ ಸೂಚನೆಗಳ, ಸಮಸ್ಯೆಗಳ ಅರ್ಥೈಸುವಿಕೆ. ಸಮಸ್ಯೆಯನ್ನು ನಮ್ಮ ಮಾತಿನಲ್ಲೆ ಹೇಳುವುದು..

ಉದಾಹರಣೆ : ಪರೀಕ್ಷೆ ಬರೆವ ತತ್ವಗಳನ್ನು ಪುನರ್ ರೂಪಿಸುವುದು: ಸಂಕೀರ್ಣ ಕಾರ್ಯ ಮಾಡುವ ಬಗೆಯನ್ನು ಸ್ವಂತ ಶಬ್ದಗಳಲ್ಲಿ ಹೇಳುವುದು. ಸಮೀಕರಣವನ್ನು ಕಾಂಪ್ಯೂಟರ್ ಸ್ಪ್ರೆಡ್ ಷೀಟಿನಲ್ಲಿ ಅನುವಾದಿಸುವುದು.
ಮುಖ್ಯ ಪದಗಳು: ಅರ್ಥೈಸು, ಬದಲಾಯಿಸು, ರಕ್ಷಿಸು, ವ್ಯತ್ಯಾಸ ತಿಳಿ, ಅಂದಾಜುಮಾಡು, ವಿವರಿಸು, ವಿಸ್ತರಿಸು, ಸಾಮಾನ್ಯೀಕರಣ, ಉದಾಹರಣೆ ಕೊಡು, ಮಾದರಿ, ತೀರ್ಮಾನಿಸು, ವ್ಯಾಖ್ಯಾನಮಾಡು, ಸಂಕ್ಷೇಪಿಸು , ಮುನ್ಸೂಚನೆ ನೀಡು, ಪುನಃ ಬರೆ, ಸಾರ ಸಂಗ್ರಹಿಸು, ಅನುವಾದಿಸು.

ಅನ್ವಯ: ಹೊಸ ಸಂದರ್ಭಕ್ಕೆ ಚಿಂತನೆಯನ್ನು  ಬಳಸುವುದು, ಅಮೂರ್ತವಾದುದನ್ನು ಇತರರಿಂದ  ಹೇಳಿಸಿಕೊಳ್ಳದೆ ಬಳಸುವುದು. ತರಗತಿಯಲ್ಲಿ ಕಲಿತದ್ದನ್ನು  ಕಾರ್ಯ ಕ್ಷೇತ್ರದಲ್ಲಿ  ಹೊಸ ಸಂದರ್ಭಕ್ಕೆಅನ್ವಯಿಸುವುದು .

ಉದಾಹರಣೆ: ನೌಕರನ ರಜಾ ಅವಧಿಯನ್ನು ನೀವೆ ಲೆಕ್ಕಹಾಕಿ ಸಂಖ್ಯಾಶಾಸ್ತ್ರದ ನಿಯಮಗಳನ್ನು ಅನ್ವಯಿಸಿ ಬರಹ ಪರೀಕ್ಷೆಯ ನಂಬಿಕಾರ್ಹತೆಯ ಮೌಲ್ಯ ಮಾಪನ ಮಾಡುವುದು
ಮುಖ್ಯ ಪದಗಳು:ಅನ್ವಯಿಸು, ಬದಲಾಯಿಸು, ಲೆಕ್ಕಹಾಕು, ನಿರ್ಮಿಸು, ಪ್ರಾತ್ಯಕ್ಷಿಕೆ ನೀಡು, ಕಂಡುಹಿಡಿ, ಬುದ್ಧಿವಂತಿಕೆಯಿಂದ ಉಪಯೋಗಿಸು (manipulates), ವ್ಯತ್ಯಾಸಮಾಡು, ನಿರ್ವಹಿಸು, ಮುನ್ಸುಚನೆ ನೀಡು, ತಯಾರಿಸು, ಉತ್ಪಾದಿಸು, ಸಂಬಂಧಿಸು, ತೋರಿಸು, ಪರಿಹರಿಸು, ಬಳಸು.

ವಿಶ್ಲೇಷಣೆ: ವಸ್ತುವನ್ನು ಅಥವ  ತತ್ವವನ್ನು ವಿಭಾಗಮಾಡಿ ಅದರ ಪೂರ್ಣ ರೂಪವನ್ನು ಅರಿಯುವುದು . ವಾಸ್ತವ ಮತ್ತು ಊಹೆಗಳ ವ್ಯತ್ಯಾಸ ಅರಿಯುವುದು.

ಉದಾಹರಣೆ : ಉಪಕರಣದ ತೊಂದರೆಯನ್ನು ತಾರ್ಕಿಕವಾಗಿ ಕಂಡುಹಿಡಿಯುವುದು, ವಿಚಾರ ಸರಣಿಯಲ್ಲಿನ ದೋಷವನ್ನು ಗುರುತಿವುದು, ಇಲಾಖೆಯಿಂದ ಮಾಹಿತಿ ಸಂಗ್ರಹಿಸಿ  ಅಗತ್ಯ ಕೆಲಸವನ್ನು ತರಬೇತಿಗಾಗಿ ಆಯ್ಕೆ ಮಾಡುವುದು
ಮುಖ್ಯಪದಗಳು: ವಿಶ್ಲೇಷಿಸು, ವಿಭಜಿಸು, ಹೋಲಿಸು, ವ್ಯತ್ಯಾಸ ಅರಿ, ಚಿತ್ರಿಸು, ತಾರತಮ್ಯಮಾಡು, ವಿವರಿಸು, ಗುರುತಿಸು, ಆರಿಸು, ಬೇರ್ಪಡಿಸು

ಸಂಸ್ಲೇಷಣೆ : ವಿಭಿನ್ನ ಅಂಶಗಳಿಂದ ರಚನೆಯನ್ನು ನಿರ್ಮಿಸುವುದು ಭಾಗಗಳನ್ನು ಸೇರಿಸಿ ಪೂರ್ಣ ಗೊಳಿಸುವುದು, ವಿರುದ್ಧವಾದವುಗಳನ್ನು ಕೂಡಿಸಿ ವಿನ್ಯಾಸ ರಚನೆ ಮತ್ತು ಹೊಸ ಅರ್ಥ ಮತ್ತು ಸಂರಚನೆಗೆ  ಒತ್ತುನೀಡುವುದು.

ಉದಾಹರಣೆ: ಕಂಪನಿಯ ಕಾರ್ಯವಿಧಾನದ  ಕೈಪಿಡಿ ಬರೆಯುವುದು, ನಿರ್ದಿಷ್ಟಕೆಲಸ ಮಾಡಲು ಯಂತ್ರ ಒಂದರ ವಿನ್ಯಾಸ, ಅನೇಕ ಮೂಲಗಳಿಂದ ತರಬೇತಿ ಪಡೆದು ಸಮಸ್ಯೆಯ ಪರಿಹಾರ, ಫಲಿತಾಂಶವನ್ನು ಉತ್ತಮಪಡಿಸುವ ಪ್ರಕ್ರಿಯೆಯ ಪರಿಷ್ಕರಣ ಮಾಡುವುದು.
ಮುಖ್ಯ ಪದಗಳು;- ವರ್ಗೀಕರಿಸು, ಸೇರಿಸು, ಸಂಕಲಿಸು ರಚಿಸು, ನಿರ್ಮಿಸು, ವಿನ್ಯಾಸಮಾಡು, ವಿವರಿಸು, ಉತ್ಪಾದಿಸು, ಪುನರ್ ಜೋಡಣೆಮಾಡು, ಮಾರ್ಪಡಿಸು ಪುನರ್ ರಚನೆ ಮಾಡು, ಸಂಬಂಧಿಸು, ಪುನರಾವರ್ತನೆ ಮಾಡು, ಪನಃ ಬರೆ, ಸಾರಸಂಗ್ರಹಿಸು, ಹೇಳು, ಬರೆ.

ಮೌಲ್ಯಮಾಪನ: ಯೋಚನೆಗಳ ಅಥವ ವಸ್ತುಗಳ ಬಗೆಗೆ ತೀರ್ಮಾನ ಕೊಡುವುದು

ಉದಾಹರಣೆ ; ಬಹು ಪರಿಣಾಮಕಾರಿ ಪರಿಹಾರದ ಆಯ್ಕೆ. ಅತ್ಯಂತ ಅರ್ಹ ಅಭ್ಯರ್ಥಿಯನ್ನು ಸೇವೆಗೆ ಆರಿಸುವುದು, ಹೊಸ ಆಯವ್ಯಯ ಪತ್ರದ ವಿವರಣೆ ಮತ್ತು ಸಮರ್ಥನೆ.
ಮುಖ್ಯ ಪದಗಳು: ತಿಳಿಸು, ಹೋಲಿಕೆ, ಅಂತಿಮಗೊಳಿಸು, ವ್ಯತ್ಯಾಸ ಗುರುತಿಸು, ಟೀಕಿಸು, ಟಿಪ್ಪಣಿ, ಸಮರ್ಥಿಸು, ವಿವರಿಸು, ವಿವರಣೆ ನೀಡು, ತಾರತಮ್ಯಮಾಡು, ಮೌಲ್ಯಮಾಪನಮಾಡು, ವ್ಯಾಖ್ಯಾನಿಸು, ಸಂಬಂಧಿಸು ಸಾರ ನೀಡು, ಬೆಂಬಲಿಸು

 


ಭಾವನಾ ಕ್ಷೇತ್ರ

ಭಾವನಾ ಕ್ಷೇತ್ರವು (ಕ್ರಾತ್ವ್ಹೊಲ್, ಬ್ಲೂಮ್, ಮಸಿಯಾ, 1973) ನಾವು ಭಾವನಾತ್ಮಕ ವಸ್ತುಗಳ ವಿಷಯದಲ್ಲಿ ವರ್ತಿಸುವ ವೀಧಾನವನ್ನು ಒಳಗೊಂಡಿರುವವು ಉದಾಹರಣೆ: ಭಾವಗಳು, ಮೌಲ್ಯಗಳು, ಮೆಚ್ಚಿಗೆ, ಉತ್ಸಾಹ,ಸ್ಪೂರ್ತಿ ಮತ್ತು ಮನೋಭಾವ. ಐದು ಪ್ರಮುಖ ವರ್ಗಗಳನ್ನು ಅತ ಸರಳದಿಂದ ಅತಿ ಸಂಕೀರ್ಣ ವರ್ತನೆಗಳವರೆಗೆ  ಪಟ್ಟಿ ಮಾಡಿರುವನು.

ವರ್ಗ

ಉದಾಹರಣೆ ಮತ್ತು  ಮುಖ್ಯ ಪದಗಳು

ಪಡೆಯುವ ಸಂಗತಿ :ಅರಿವು, ಕೇಳಲು ಅಸಕ್ತಿ, ಆಯ್ದ ಗಮನ.

ಉದಾಹರಣೆಗಳು : ಇತರರು ಹೇಳುವುದನ್ನು ಗೌರವದಿಂದ ಕೇಳು. ಹೊಸದಾಗಿ ಪರಿಚಯವಾದವರ ಹೆಸರು ನೆನಪಿಡು.
ಮುಖ್ಯಪದಗಳು: ಕೇಳು, ಆರಿಸಿಕೊ, ವಿವರಿಸು, ಅನುಸರಿಸು, ಕೊಡು, ಇಟ್ಟುಕೊಂಡಿರು, ಗುರುತಿಸು, ಹುಡುಕು, ಹೆಸರಿಸು, ತೋರಿಸು, ಆರಿಸು, ಕುಳಿತುಕೋ, ನಿಲ್ಲಿಸು, ಉತ್ತರಿಸು, ಮಾರುತ್ತರ ನೀಡು, ಬಳಸು.

ಸಂಗತಿಗೆ ಪ್ರತಿಕ್ರಿಯೆ: ನಿರ್ದಿಷ್ಟ ಸಂಗತಿಯನ್ನು ಕಲಿಯುವುದು ಚುರುಕಾಗಿ ಭಾಗವಹಿಸುವುದು. ಕಲಿಕೆಯ ಫಲಿತಾಂಶವು, ಪ್ರತಿಕ್ರಿಯೆ, ಪ್ರತಿಕ್ರಿಯಿಸಲು ಆಸಕ್ತಿ, ಪ್ರತಿಕ್ರಿಯಿಸಿದ ತೃಪ್ತಿ (ಸ್ಪೂರ್ತಿ)

ಉದಾಹರಣೆಗಳು: ತರಗತಿಯ ಚರ್ಚೆಯಲ್ಲಿ ಭಾಗವಹಿಸು. ನೀನೂ ಮಂಡಿಸು. ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಹೊಸ ಆದರ್ಶಗಳನ್ನು, ಕಲ್ಪನೆಗಳನ್ನು, ಮಾದರಿಗಳನ್ನು ಪ್ರಶ್ನಿಸು. ಸುರಕ್ಷತಾ ನಿಯಮಗಳನ್ನು ಅರಿತು ಅವುಗಳನ್ನು ಪಾಲಿಸು
ಮುಖ್ಯಪದಗಳು: ಉತ್ತರಿಸು, ಸಹಾಯಮಾಡು, ಸಹಾಯ ನೀಡು, ಪಾಲಿಸು, ಅನುಗುಣವಾಗಿರು, ಚರ್ಚಿಸು, ಓದು, ಅಭಿನಂದಿಸು, ಸಹಾಯ, ಹೆಸರು ಬರೆ, ಮಾಡು, ಅಭ್ಯಸಿಸು, ನೀಡು,  ಪಠಿಸು, ವರದಿ ಮಾಡು, ಆಯ್ದುಕೊ, ಹೇಳು, ಬರೆ.

ಮೌಲ್ಯಮಾಪನಮಾಡುವಿಕೆ: ಒಂದು ನಿರ್ದಿಷ್ಟ ವಸ್ತುವಿಗೆ ಒಬ್ಬ ವ್ಯಕ್ತಿಯು ನೀಡುವ ಮೌಲ್ಯ ಅಥವ ವರ್ತನೆಗೆ, ಇದುಸರಳ ಒಪ್ಪಿಗೆಯಿಂದ ಹಿಡಿದು ಸಂಕೀರ್ಣ ಬದ್ಧತೆಯವರೆಗೆ ಇರುವುದು . ಮೌಲ್ಯನೀಡುವುದು ಅಂತರ್ಗತವಾದ. ನಿಗದಿತ  ಮೌಲ್ಯಗಳನ್ನು ಆಧರಿಸಿದೆ. ಇದರ ಕುರುಹುಗಳು ಕಲಿಯುವವ ನ  ಬಾಹ್ಯ ವರ್ತನೆಯಲ್ಲಿ  ವ್ಯಕ್ತ ವಾಗುವವು. ಮತ್ತು ಅವುಗಳನ್ನು ಅನೇಕ ಸಲ ಗುರುತಿಸಬಹುದು..

ಉದಾಹರಣೆಗಳು :  ಪ್ರಜಾತಂತ್ರ ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ವ್ಯಕ್ತಪಡಿಸು. ವೈಯುಕ್ತಿಕ ಮತ್ತು ಸಾಂಸ್ಕೃತಿಕ ಭಿನ್ನತೆಯ ಬಗ್ಗೆಗೆ ಸಂವೇದನೆ ಇರಲಿ. (ವಿಭಿನ್ನ ಮೌಲ್ಯಗಳು) ಸಮಸ್ಯೆಗಳ ಪರಿಹಾರದ ಸಾಮರ್ಥ್ಯ ಪ್ರದರ್ಶಿಸು. ಸಾಮಾಜಿಕ ಸುಧಾರಣೆಗಾಗಿ ಯೋಜನೆ ರೂಪಿಸು ಅದನ್ನು ಬದ್ಧತೆಯಿಂದ ಪಾಲಿಸು. ನೀನು ಗಾಢವಾಗಿ ಅಂದುಕೋಂಡ ವಿಷಯವನ್ನು ವ್ಯವಸ್ಥಾಪಕರಿಗೆ ತಿಳಿಸು.
ಮುಖ್ಯಪದಗಳು: ಮುಗಿಸು, ತೋರಿಸು, ವ್ಯತ್ಯಾಸ ಮಾಡು, ವಿವರಿಸು, ಅನುಸರಿಸು, ಮಾಡು, ಪ್ರಾರಂಭಿಸು, ಆಮಂತ್ರಿಸು ಸೇರು, ಸಮರ್ಥಿಸು, ಪ್ರಸ್ತಾವಿಸು, ಆಯ್ದುಕೊ, ಹಂಚಿಕೊ, ಅಧ್ಯಯನ ಮಾಡು, ಕೆಲಸ ಮಾಡು.

ವ್ಯವಸ್ಥೆ : ಮೌಲ್ಯಗಳನ್ನು ಆದ್ಯತೆಯ ಮೆರೆಗೆ ಇತರ ಮೌಲ್ಯಗಳೊಡನೆ ತುಲನೆಮಾಡಿ, ಅವುಗಳ ಸಂಘರ್ಷವನ್ನು ಕಡಿಮೆ ಮಾಡಿ, ಅನ್ವಯವಾದ ಮೌಲ್ಯ ವ್ಯವಸ್ಥೆಯನ್ನು ರಚಿಸುವುದು ಮೌಲ್ಯಗಳ ಹೊಲಿಕೆ, ಸಂಬಂಧ ಮತ್ತು ಸಂಶ್ಲೇಷಣೆಗೆ ಹೆಚ್ಚು ಒತ್ತು ನೀಡುವುದು

ಉದಾಹರಣೆ : ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯ ವರ್ತನೆಗಳ ಸಮತೋಲನವನ್ನು ಗುರುತಿಸುವುದು. ತನ್ನ ವರ್ತನೆಯ ಹೊಣೆ ವಹಿಸುವುದು. ಸಮಸ್ಯೆಯ ಪರಿಹಾರಕ್ಕೆ ವ್ಯವಸ್ಥಿತವಾದ ಯೋಜನೆಯ ಪಾತ್ರವನ್ನು ವಿವರಿಸುವುದು, ವರತ್ತಿ ಮತ್ತು ನೈತಿಕಬದ್ಧತೆಯನ್ನು ಒಪ್ಪುವುದು. ಜೀವನದ ಯೋಜನೆಯನ್ನು ನಂಬಿಗೆಗಳು, ಸಾಮರ್ಥ್ಯಗಳೊಂದಿಗೆ ಸಮರಸವಾಗಿರಿಸುವನು. ಸಮಯವನ್ನು ಪರಿಣಾಮಕಾರಿಯಾಗಿ ಅದ್ಯತೆಯಮೇರೆಗೆ ಸಂಸ್ಥೆ, ಕುಟುಂಬ ತಮಗಾಗಿ ಅಗತ್ಯಕ್ಕೆ ಅನುಗುಣವಾಗಿರುವಂತೆ ಮೀಸಲಿಡುವುದು.
ಮುಖ್ಯಪದಗಳು : ಪಾಲಿಸು, ಬದಲಾಯಿಸು, ಜೋಡಿಸು, ಒಂದಾಗು, ಹೋಲಿಸಿ, ಮುಗಿಸು, ರಕ್ಷಿಸು, ವಿವರಿಸು,  ತಯಾರಿಸು, ಸಾಮಾನ್ಯೀಕರಿಸು, ಗುರುತಿಸು,  ಮಾರ್ಪಡಿಸು, ಆದೇಶಿಸು, ವ್ಯವಸ್ಥೆಮಾಡು, ತಯಾರಿಸು , ಸಂಬಂಧಿಸು, ಸಂಶ್ಲೇಷಿಸು.

ಮೌಲ್ಯಗಳನ್ನು ಅಂತರ್ಗತ ಮಾಡಿಕೊಳ್ಳುವುದು: ವರ್ತನೆಯನ್ನು ಅವನ ಮೌಲ್ಯ ವ್ಯವಸ್ಥೆ ನಿಯಂತ್ರಿಸುವುದು. ವರ್ತನೆಯು ಸರ್ವ ವ್ಯಾಪಿ, ಸುಸ್ಥಿರ ಮತ್ತು ಕಲಿಯುವ ಅಸಕ್ತಿಯನ್ನು ತೋರುತ್ತದೆ  ಬೋಧನಾ ಗುರಿಗಳು ವಿದ್ಯಾರ್ಥಿಯ ಸಾಮಾನ್ಯ ಹೊಂದಾಣಿಕೆಯ ವಿಧಾನವನ್ನು ಅವಲಂಬಿಸಿವೆ (ವೈಯಕ್ತಿಕ, ಸಮಾ ಭಾವನತ್ಮಕ)

ಉದಾಹರಣೆಗಳು: ಸ್ವತಂತ್ರವಾಗಿ ಕೆಲಸಮಾಡುವಾಗ ಸ್ವಾವಲಂಬಿಯಾಗಿರುವನು. ಗುಂಪಿನ ಕೆಲಸಗಳಲ್ಲಿ ಸಹಕಾರ ನೀಡುವನು. (ತಂಡದ ಕೆಲಸ) ಸಮಸ್ಯೆಯ ನಿವಾರಣೆಗೆ ವಾಸ್ತವವಾದ ವಿಧಾನವನ್ನು ಬಳಸುವನು. ದೈನಂದಿನ ಕೆಲಸದಲ್ಲೂ ವೃತ್ತಿ ಬದ್ಧತೆ ನೈತಿಕತೆಯನ್ನು ತೋರ್ಪಡಿಸುವನು. ಹೊಸ ಪುರಾವೆ ದೊರೆತಾಗ ತನ್ನ ತೀರ್ಮಾನವನ್ನು ಮತ್ತು ವರ್ತನೆಯನ್ನು ಬದಲಾಯಿಸಿಕೊಳ್ಳುವನು. ಜನರನ್ನು ಅವರೇನಾಗಿದ್ದಾರೊ ಅದಕ್ಕಾಗಿ ಬೆಲೆ ಕೊಡುವನು, ಅವರು ಹೇಗೆ ಕಾಣತ್ತಾರೆ ಎಂಬದಕ್ಕಲ್ಲ.
ಮುಖ್ಯಪದಗಳು: ನಟಿಸು, ತರತಮ್ಯ ಮಾಡು, ಪ್ರದರ್ಶಿಸು ಪ್ರಭಾವಿಸು, ಕೇಳು, ಬದಲಾಯಿಸು, ಪ್ರಸ್ತಾವಿಸು, ಅರ್ಹತೆ ಗಳಿಸು, ಪ್ರಶ್ನಿಸು, ಪುನರಾವರ್ತಿಸು, ಸೇವೆಸಲ್ಲಿಸು, ಪರಿಹರಿಸು, ಪರಿಶೀಲಿಸು.


 

ಸೈಕೋ ಮೋಟಾರ ಕ್ಷೇತ್ರ

ಸೈಕೋಮೋಟಾರ್ ಕ್ಷೇತ್ರ (ಸಿಂಪ್ಸನ್, 1972)  ದೈಹಿಕ ಚಲನೆ, ಸಮನ್ವಯ ಮತ್ತು ಚಲನಾ ಕೌಶಲ್ಯ ಕ್ಷೇತ್ರದ ಬಳಕೆಯನ್ನು ಒಳಗೊಂಡಿದೆ. ಈ ಕೌಶಲ್ಯಗಳ ಅಭಿವೃದ್ಧಿಯು ಅಭ್ಯಾಸವನ್ನು ಅವಲಂಬಿಸಿದೆ ಮತ್ತು ವೇಗ, ನಿಖರತೆ, ಅಂತರ, ಪ್ರಕ್ರಿಯೆ ಅಥವ ಅನುಷ್ಠಾನದ ತಂತ್ರಗಳ ಮೂಲಕ ಅಳಿಯಲಾಗುವುದು. ಏಳು ಪ್ರಮುಖ  ಗುಂಪುಗಳನ್ನು ಕೆಳಗೆ ಸರಳತೆಯಿಂದ ಸಂಕೀರ್ಣತೆಯವರೆಗೆ ಕ್ರಮವಾಗಿ ಪಟ್ಟಿಮಾಡಲಾಗಿದ:


ವರ್ಗ (Category)

ಉದಾಹರಣೆಗಳು ಮತ್ತು ಮುಖ್ಯಪದಗಳು (Example and Key Words)

ಗ್ರಹಿಕೆ:  ಜ್ಞಾನೇಂದ್ರಿಯಗಳ ಸೂಚನೆಗಳು ಚಲನಾ ಚಟುವಟಿಕೆಗಳನ್ನು ನಿರ್ದೇಶಿಸುತ್ತವೆ. ಜ್ಞಾನೇಂದ್ರಿಯಯಗಳನ್ನು ಬಳಸಿ ಚಲನಾಚಟುವಟಿಕೆಗಳಿಗೆ ಮಾರ್ಗದರ್ಶನ ಮಾಡುವವು. ಅವು ಸಂಕೇತಗಳ ಮೂಲಕ ಪ್ರಚೋದನೆಗಳನ್ನು ಆಯ್ದು ಅಳವಡಿಸುತ್ತವೆ

ಉದಾಹರಣೆಗಳು: ಶಬ್ದರಾಹಿತ್ಯ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವ  ಮೇಲೆ ಎಸೆದ ಚೆಂಡು ಎಲ್ಲಿ ಬೀಳಬಹುದು ಎಂದು ಅಂದಾಜು ಮಾಡಿ ಸರಿಯಾದ ಜಾಗಕ್ಕೆ ಹೋಗಿ ಅದನ್ನು ಹಿಡಿಯುವನು. ಆಹಾರದ ವಾಸನೆ ಮತ್ತು ರುಚಿಯನ್ನು ಗಮನಿಸಿ ಸ್ಟೋವ್ ನ ಶಾಖವನ್ನು ಸರಿಯಾದ ಉಷ್ಣತೆಯಲ್ಲಿರುವಂತೆ ಮಾಡುವನು. ಫೋಕ್ ಲಿಫ್ಟನ ಎತ್ತರವನ್ನು ಸರಿಯಾದ ಹಂತದಲ್ಲಿ ಇಡುವನು.
ಮುಖ್ಯಪದಗಳು: ಆರಿಸು, ವಿವರಿಸು, ಹುಡಕು, ತಾರತಮ್ಯಮಾಡು, ಭಿನ್ನವಾಗಿಸು, ಗುರುತಿಸು, ಪ್ರತ್ಯೇಕಿಸು, ಸಂಬಂಧಿಸು, ಆರಿಸು.

ಸ್ಥಿತಿ : ಕೆಲಸ ಮಾಡಲು ಸಿದ್ಧತೆ, ಅದರಲ್ಲಿ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಸ್ಥಿತಿಗಳು ಸೇರಿವೆ. ಈ ಮೂರು ಕೂಟಗಳು ವಿವಿಧ ಸಂದರ್ಭ ಗಳಲ್ಲಿ ಪ್ರತಿಕ್ರಿಯೆಯು ಮೊದಲೆ ನಿರ್ಧಾರವಾಗಿರುವುದು. (ಕೆಲವು ಸಲ ಇದನ್ನು ಮನಸ್ಥಿತಿ ಎನ್ನವರು)

ಉದಾಹರಣೆಗಳು: ಉತ್ಪಾದನಾ ಪ್ರಕ್ರಿಯೆಯಲ್ಲಿನ ಸರಣಿಯ ಹಂತಗಳಂತೆ ವರ್ತಿಸುವನು. ತನ್ನ ಸಾಮರ್ಥ್ಯ ಮತ್ತು ಮಿತಿಯನ್ನು ಗುರುತಿಸುವನು. ಹೊಸ ಕ್ರಿಯೆಗಳನ್ನು ಕಲಿಯಲು ಇಷ್ಟಪಡುವನು.
ಸೂಚನೆ: ಸೈಕೊಮೋಟಾರು ಉಪವಿಭಾಗಗಳು ಭಾವನಾ ಕ್ಷೇತ್ರದ ”ಪ್ರತಿ ಕ್ರಿಯಾ  “ ಹೆಚ್ಚು ಸಂಬಂಧ ಹೊಂದಿವೆ.
ಮುಖ್ಯಪದಗಳು: ಪ್ರಾರಂಭಿಸು, ಪ್ರದರ್ಶಿಸು, ವಿವರಿಸು, ಚಲಿಸು, ಮುಂದುವರಿಸು, ಶುರುಮಾಡು, ವಿವರಿಸು, ಚಲಿಸು, ನಿರೂಪಿಸು, ಸ್ವಯಂ ಮುಂದಾಗು.

ನಿರ್ದೇಶಿತ ಪ್ರತಿಕ್ರಿಯೆಗಳು: ಅನುಕರಣೆ, ತಪ್ಪು ಮಾಡಿ ಅರಿಯುವನು, ಸಂಕೀರ್ಣವಾದ ಕುಶಲತೆಯನ್ನು ಕಲಿಯುವ ಮೊದಲ ಹಂತದಲ್ಲಿ ಸೇರಿದೆ. ಪದೇ ಪದೇ ಮಾಡಿ, ಕೆಲಸ ಕಲಿಯುವನು.

ಉದಾಹರಣೆಗಳು: ತೋರಿಸಿದಂತೆ ಗಣಿತದ ಸಮೀಕರಣಗಳನ್ನು ಮಾಡಿ. ಮಾದರಿಯನ್ನು ಸೂಚನೆಗಳ ಮೇರೆಗೆ ರಚಿಸುವುದು. ಫೋರ್ಕ ಲಿಫ್ಟನ್ನು ಚಲಿಸುವುದನ್ನು ಬೋಧಕರು ನೀಡುವ ಕೈಯ ಸಂಕೇತಗಳಂತೆ ಕಲಿಯುವುದು.
ಮುಖ್ಯಪದಗಳು: ನಕಲುಮಾಡು,  ತಿದ್ದು ಅಥವ ನಕಲು ಮಾಡು (ಟ್ರೇಸುಮಾಡು), ಅನುಸರಿಸು, ಪ್ರತಿಕ್ರಿಯಿಸು, ಪುನರುತ್ಪಾದಿಸು, ಸ್ಪಂದಿಸು

ಕ್ರಿಯಾ ವಿಧಾನ: ಇದು ಸಂಕೀರ್ಣ ಕೌಶಲ್ಯವನ್ನು ಕಲಿಯುವಾಗಿನ ಮಧ್ಯಮ ಹಂತ.  ಕಲಿತ ಪ್ರತಿಕ್ರಿಯೆಗಳು ಅಭ್ಯಾಸಗಳಾಗುವವು. ಚಲನೆಯನ್ನು ಆತ್ಮವಿಶ್ವಾಸದಿಂದ ಮತ್ತು ನಿಪುಣತೆಯಿಂದ ಮಾಡುವುದು
.

ಉದಾಹರಣೆಗಳು :  ವೈಯಕ್ತಿಕ ಕಾಂಪ್ಯೂಟರನ್ನು ಉಪಯೋಗಿಸಿ, ಸೋರುತ್ತಿರುವ ನಳವನ್ನು ದುರಸ್ತಿಮಾಡಿ, ಕಾರು ಚಲಿಸಿ, ಪೀಪಾಯಿಗಳನ್ನು ಅಥವ ಕೊಳಾಯಿಗಳನ್ನು ದುರಸ್ತಿ ಮಾಡು.
ಮುಖ್ಯಪದಗಳು: ಜೋಡಿಸು, ಅಳತೆಮಾಡು, ನಿರ್ಮಿಸು, ಬಿಚ್ಚಿಬಿಡು, ಕಟ್ಟು, ಸರಿಮಾಡು, ಪ್ರದರ್ಶಿಸು, ಬೆರಕೆ ಮಾಡು, ದುರಸ್ತಿಮಾಡು, ವ್ಯವಸ್ಥಿತವಾಗಿಡು, ರೇಖಾ ಚಿತ್ರಣ ಮಾಡು.

ಸಂಕೀರ್ಣ ಪ್ರತಿಕ್ರಿಯೆ: ಸಂಕೀರ್ಣವಾದ ಚಲನಾ ಚಟುವಟಿಕೆಯನ್ನು ಕುಶಲತೆಯಿಂದ ಮಾಡುವದು. ತೀವ್ರ , ನಿಖರ, ಹೆಚ್ಚಿನ ಸಮನ್ವಯ ದಿಂದ ಮಾಡುವಲ್ಲಿ ಕಡಿಮೆ ಶಕ್ತಿ ಬಳಸುವ ನಿಪುಣತೆ. ಈ ಗುಂಪಿನಲ್ಲಿ ಅನುಮಾನ ವಿಲ್ಲದೆ, ತನ್ನಿಂದ ತಾನೆ ಮಾಡುವುದು, ಮಾಡುವುದು.
ಉದಾಹರಣೆ- ಆಟಗಾರರು ಟೆನ್ನಿಸ್ ಚೆಂಡನ್ನು (ಬಾಲನ್ನು) ಹೊಡೆದಾಗ ತೃಪ್ತಿಯಿಂದ ಧ್ವನಿ ಹೊರಡಿಸುವರು. ಅವರು ಕೃತಿಯು ಯಾವ ಫಲಿತಾಂಶ ನೀಡುವುದು ಎಂಬುದನ್ನು ಅನುಭವಿಸುವರು.
.

ಉದಾಹರಣೆಗಳು:  ಕಾರನ್ನು ಸಮನಾಂತರವಾಗಿರುವ ಸ್ಥಳಗಳಲ್ಲಿ ನಿಲ್ಲಿಸುವುದು. ಕಾಂಪ್ಯೂಟರನ್ನು ವೇಗವಾಗಿ ನಿಖರವಾಗಿ ಬಳಸುವುದು ಪಿಯಾನೋ ನುಡಿಸುವಾಗ ಕ್ಷಮತೆ ತೋರುವುದು.

ಮುಖ್ಯಪದಗಳು:ಕಲೆಹಾಕಿಸು, ಕಟ್ಟು / ನಿರ್ಮಿಸು, ಅಂಕಿಸು, ನಿರ್ಮಿಸು, ಬಿಡಿ ಬಿಡಿ ಮಾಡು, ತೋರಿಸು, ವೇಗಿಸು, ಸರಿಪಡಿಸು, ತಿರುಗಿಸು, ಕಾಯಿಸು, ಕುಶಲತೆಯಿಂದ ನಿರ್ವಹಿಸು, ಅಳತೆ ಮಾಡು, ದುರಸ್ತಿ ಮಾಡು, ಸೇರಿಸು, ಏರ್ಪಡಿಸು, ರೂಪರೇಖೀಸು.
ಸೂಚನೆ: ಮುಖ್ಯ ಪದಗಳು ಒಂದೆ ಆಗಿರುತ್ತವೆ. ಜೊತೆಗೆ ಗುಣವಾಚಕ ಮತ್ತು ಕ್ರಿಯಾ ವಿಶ್ಲೇಷಣಗಳು ಇರತ್ತವೆ. ಅದರಿಂದ ಅದು ಇನ್ನೂ ಹೆಚ್ಚು ಬೇಗ  ಮತ್ತು ನಿಖರ ವೆನಿಸುವುದು.

ಹೊಂದಾಣಿಕೆ: ಕೌಶಲ್ಯವು ಚೆನ್ನಾಗಿ ಅಭಿವೃದ್ಧಿ ಆಗಿರುವವು. ವ್ಯಕ್ತಿಯು ತನ್ನ ಚಲನೆಯ ವಿಧಾನವು ವಿಶೇಷ ಅಗತ್ಯಗಳಿಗೆ ಅನುಗುಣವಾಗಿ ಬದಲಾಗುವುದು.

ಉದಾಹರಣೆಗಳು:ಅಂದುಕೊಳ್ಳಲಾರದ ಅನುಭವಗಳಿಗೂ ಪರಿಣಾಮಕಾರಿಯಾಗಿ ಸ್ಪಂದಿಸುವುದು. ಸೂಚನೆಗಳನ್ನು ಕಲಿಯುವವನ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡುವುದು . ಯಂತ್ರವು ಅದೆ ಕೆಲಸಕ್ಕಿಂತ ಭಿನ್ನವಾದ ಕೆಲಸ ಮಾಡುವಂತೆ ರೂಪಿಸುವುದು. (ಯಂತ್ರಕ್ಕೆ ಹಾನಿ ಯಾಗಬಾರದು ಮತ್ತು ಹೊಸ ಕೆಲಸಮಾಡುವಲ್ಲಿ ಅಪಾಯ ವಿರಬಾರದು)
ಮುಖ್ಯಪದಗಳು: ಹೊಂದಾಣಿಕೆ ಮಾಡಿಕೊ, ಬದಲಾಯಿಸು, ಪುನರ್ ಜೋಡಣೆ ಮಾಡು, ಗುರುತಿಸು, ಪುನರಾವರ್ತಿಸು, ವ್ಯತ್ಯಾಸ ಮಾಡು

ಜನನ:ನಿರ್ದಿಷ್ಟ ಚಲನಾ ವಿಧಾನವನ್ನು ಪರಿಸ್ಥಿತಿಗೆ, ಸಮಸ್ಯೆಗೆ ಸರಿ ಹೊಂದುವ ರೀತಿಯಲ್ಲಿ ಅಳವಡಿಸುವನು
ನಿರ್ದಿಷ್ಟ ಸ್ಥಿತಿಗೆ ಹೊಂದುವ ಹೊಸ ವಿನ್ಯಾಸವನ್ನು ನಿರ್ಮಿಸುವುದು. ಕಲಿಕೆಯ ಫಲಿತಾಂಶವು ಚೆನ್ನಾಗಿ ಅಭಿವೃದ್ಧಿ ಹೊಂದಿದ ಕುಶಲತೆಯನ್ನು ಆಧರಿಸಿದ ರಚನತ್ಮಕತೆಯನ್ನು ಎತ್ತಿ ಹೇಳುವುದು.

ಉದಾಹರಣೆಗಳು: ಹೊಸ ತತ್ವವನ್ನು ಕಂಡು ಹಿಡಿಯುವುದು. ಹೊಸ ತರಬೇತಿ ಕಾರ್ಯಕ್ರಮವನ್ನು ರೂಪಿಸುವುದು. ಹೊಸ ಜಿಮ್ನಾಸ್ಟಿಕ್ ಕಾರ್ಯಕ್ರಮವನ್ನು ಅಳವಡಿಸುವುದು
ಮುಖ್ಯಪದಗಳು: ಜೋಡಿಸು, ಕಟ್ಟು, ಸೇರಿಸು,  ನಿರ್ಮಿಸು, ರಚಿಸು, ವಿನ್ಯಾಸಮಾಡು, ಪ್ರಾರಂಭಿಸು, ಮಾಡು, ಶುರುವಾಗು.

 


ಇತರ ಸೈಕೋಮೋಟಾರು ಕ್ಷೇತ್ರಗಳು

ಈ ಹಿಂದೆಯೆ ಹೇಳಿದಂತೆ, ಸಮಿತಿಯು  ಸೈಕೊ ಮೋಟಾರ್ ಕ್ಷೇತ್ರದ ಮಾದರಿ ಬಗ್ಗೆ ಸಂಕಲಿಸಲಿಲ್ಲ ಇತರರು ಮಾಡಿದ್ದಾರೆ. ಮೇಲೆ ಚರ್ಚೆ ಮಾಡಿರುವುದು ಸಿಂಪ್ಸನ್ (1972)ಅವರದು. ಅದಲ್ಲದೆ ಇನ್ನೂ ಎರಡು ಜನಪ್ರಿಯ ಅವೃತ್ತಿಗಳಿವೆ ಡೇವನ(1975):

  • ಅನುಕರಣೆ: ಒಬ್ಬರನ್ನು ಗಮನಿಸಿ ವರ್ತನೆಯನ್ನು ಅವರ ರೀತಿಯಲ್ಲಿಯೇ ರೂಢಿಸಿಕೊಳ್ಳುವುದು . ಅದು ಕಡಿಮೆ ಗುಣ ಮಟ್ಟದ್ದಾಗಿರುವುದು . ಉದಾಹರಣೆ: ಕಲಾಕೃತಿಯನ್ನು ನಕಲುಮಾಡುವುದು.
  • ಕುಶಲತೆಯಿಂದ ನಿರ್ವಹಣೆ: ಕೆಲವು ಕೆಲಸಗಳನ್ನು ಸೂಚನೆ ಪಡೆದು, ಅಭ್ಯಾಸದ ನಂತರ ಮಾಡುವುದು. ಉದಾಹರಣೆ : ಪಾಠ ಕಲಿತು ಅಥವ ಅದರ ಬಗ್ಗೆ ಓದಿಕೊಂಡು  ಮಾಡುವುದು

ಸ್ವಂತ ಕೃತಿಯನ್ನು ಕಲಿತು ರಚಿಸುವುದು.

  • ನಿಖರತೆ:ಪರಿಶುದ್ಧಿಗೊಳಿಸು, ಪರಿಪೂರ್ಣಗೊಳಿಸು, ದೋಷರಹಿತ ಮಾಡು. ಉದಾಹರಣೆ : ಯಾವುದನ್ನೇ ಆಗಲಿ ಪುನಃ ಪುನಃ ಮಾಡುವುದು. ಅದರಿಂದ ಅದು “ ಸರಿ ’ ಇರಲೇಬೇಕು "
  • ವ್ಯಕ್ತಪಡಿಸುವಿಕೆ: ವರ್ತನೆಗಳ ಸರಣಿಯ ಸಮನ್ವಯ., ಸಾಮರಸ್ಯ ಸಾಧಿಸುವುದು ಮತ್ತು ಆಂತರಿಕ ನಿಷ್ಟೆ, ಉದಾಹರಣೆ: ಸಂಗೀತ, ನಾಟಕ, ವರ್ಣ, ಧ್ವನಿ ಇರುವ ವಿಡಿಯೋ ನಿರ್ಮಿಸುವುದು .
  • ನೈಸರ್ಗಿಕರಣ:ಉನ್ನತ ಮಟ್ಟದ ಸಾಧನೆಯು ಅದರ ಬಗ್ಗೆ ಯೋಚನೆ ಮಾಡುವ ಅಗತ್ಯವಿಲ್ಲದೆ ನೈಸರ್ಗಿಕವಾಗಿ ಬರುವುದು. ಉದಾಹರಣೆ ;  ಮೈಕಲ್ ಜಾನ್ಸನ್  ಬಾಸ್ಕೆಟ್ ಬಾಲ್ ಅಡುವುದು, ನ್ಯಾನ್ಸಿ ಲೋಪೆಜ್ ಗಾಲ್ಫ್ ಚೆಂಡನ್ನು ಹೊಡೆಯುವುದು, ಇತ್ಯಾದಿ .

ಹಾರೋನ(1972):

  • ಪ್ರತಿವರ್ತನಾ ಚಲನೆಗಳು – ಕಲಿಯದೆ ಇದ್ದ ಪ್ರತಿಕ್ರಿಯೆಗಳು .
  • ಮೂಲಭೂತ ಚಲನೆಗಳು– ಮೂಲ ಭೂತ ಚಲನೆಗಳು, ನೆಡೆಯುವುದು, ಹಿಡಿಯುವುದು ಇತ್ಯಾದಿ.
  • ಗ್ರಹಿಕೆ – ದೃಷ್ಟಿ, ಶ್ರವಣ, ಚಲನೆ ಅಥವ ಸ್ಪರ್ಶದ ಅರಿಯುವಿಕೆಯ ಪ್ರಚೋದನೆಗಳಿಗೆ  ಪ್ರತಿಕ್ರಿಯಿಸುವುದು.
  • ಶಾರೀರಿಕ ಸಾಧ್ಯತೆಗಳು – ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿ ಅದರಿಂದ ಶಕ್ತಿ ಮತ್ತು ಚುರುಕುತನ ಸಾಧಿಸುವುದು..
  • ಕೌಶಲ್ಯಪೂರ್ಣ ಚಲನೆ– ಮುಂದುವರಿದ ಕಲಿಕೆಯ ಚಲನೆಗಳು , ನಾವು ಕ್ರೀಡೆ ಅಥವ ನಟನೆಯಲ್ಲಿನಂತೆ.
  • ತಾರ್ಕಿಕವಲ್ಲದ ಸಂವಹನ – ಪರಿಣಾಮಕಾರಿ ಶಾರೀರಿಕ ಭಾಷೆ, ಸಂಕೇತಗಳು ಮತ್ತು ಮೌಖಿಕ ಭಾವನೆಗಳ ಅಭಿವ್ಯಕ್ತಿಯಂತೆ.

ಬ್ಲೂಮನ ಪುನರ್ ವಿಮರ್ಶಿತ ವರ್ಗೀಕರಣ

ಲೋರಿನ್ ಆಂಡರಸನ್, ಬ್ಲೂಮನ ಮಾಜಿ ವಿದ್ಯಾರ್ಥಿ, ಇವನು ತೊಂಬತ್ತರ ದಶಕದ ಮಧ್ಯದಲ್ಲಿ ಕಲಿಕೆಯ ವರ್ಗೀಕರಣದಲ್ಲಿನ ಜ್ಞಾನ ಕ್ಷೇತ್ರವನ್ನು ಪುನಃ ಪರಿಶೀಲಿಸಿದ. ಮತ್ತು ಕೆಲವು ಬದಲಾವಣೆ ಮಾಡಿದ. ಅದರಲ್ಲಿ ಬಹುಶಃ ಅತಿ ಮುಖ್ಯವಾದವುಗಳು, 1) ಆರು ಗುಂಪುಗಳ ಹೆಸರನ್ನು ನಾಮವಾಚಕದಿಂದ ಕ್ರಿಯಾವಾಚಕಗಳಿಗೆ ಬದಲಾಯಿಸಿದ್ದು ಮತ್ತು 2) ಅವುಗಳನ್ನು ತುಸು ಮರು ಜೋಡನೆ ಮಾಡಿದ್ದು

ಈ ಹೊಸ ವರ್ಗೀಕರಣವು ಹೆಚ್ಚು ಕ್ರಿಯಾಶೀಲ ಆಲೋಚನಾಶಕ್ತಿಯನ್ನು ಪ್ರತಿಫಲಿಸುವುದು ಮತ್ತು ಬಹುಶಃ ಹೆಚ್ಚು ನಿಖರವಾಗಿದೆ :

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate