অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಜ್ಯ ಶೈಕ್ಷಣಿಕ ಮೌಲ್ಯಮಾಪನ ಮತ್ತು ಶೈಕ್ಷಣಿಕ ವೃತ್ತಿ ಮಾರ್ಗದರ್ಶನ

ರಾಜ್ಯ ಶೈಕ್ಷಣಿಕ ಮೌಲ್ಯಮಾಪನ ಮತ್ತು ಶೈಕ್ಷಣಿಕ ವೃತ್ತಿ ಮಾರ್ಗದರ್ಶನ

ಅ) ರಾಜ್ಯ ಶೈಕ್ಷಣಿಕ ಮೌಲ್ಯ ಮಾಪನ : ಇದರ ಮುಖ್ಯ ಕಾರ್ಯಕ್ರಮಗಳೆಂದರೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು, ಶಿಕ್ಷಕರಿಗೆ ವಿಷಯ ಕಾರ್ಯಾಗಾರ ತರಬೇತಿ ಸಂಚಿಕೆಗಳ ತಯಾರಿಕೆ, ಸೆಮಿಸ್ಟರ್ ಪದ್ಧತಿಯ ಮಾರ್ಗದರ್ಶನ ಮುಂತಾದವುಗಳನ್ನೊಳಗೊಂಡಿದೆ.

NCF 2005, RTE 2009 ರ ಸೆಕ್ಷನ್(4) ಮತ್ತು ಸೆಕ್ಷನ್ 30 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿವೆ. RTE 2009 ರ ಶಿಕ್ಷಣ ಹಕ್ಕು ಕಾಯ್ದೆಯನ್ವಯ 6 ರಿಂದ 14 ರ ವಯೋಮಾನದ ಪ್ರತಿಯೊಂದು ಮಗುವಿಗೂ ಉಚಿತ, ಕಡ್ಡಾಯ ಹಾಗೂ ಗುಣಾತ್ಮಕ ಶಿಕ್ಷಣ ನೀಡುವುದು ಸರ್ಕಾರದ ಹೊಣೆಯಾಗಿರುವುದರಿಂದ, ಈ ಸಾಲಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ 1 ರಿಂದ 9 ನೇ ತರಗತಿಯವರಿಗೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ (CCE- Continuous & Comprehensive Evaluation) ಅನುಷ್ಠಾನಕ್ಕೆ ತರಲು ಕ್ರಮ ವಹಿಸಲಾಗಿದೆ. ಈ ಮೌಲ್ಯಮಾಪನ ಪದ್ಧತಿಯಲ್ಲಿ ಶಾಲೆಯ ಪಠ್ಯ ಹಾಗೂ ಸಹ ಪಠ್ಯ, ವಿವಿಧ ಚಟುವಟಿಕೆಗಳಲ್ಲಿ ಸಹಜ ಪಾಲ್ಗೊಳ್ಳುವಿಕೆ ಮತ್ತು ಪ್ರಗತಿಯನ್ನು ವಿವಿಧ ತಂತ್ರಗಳ ಮೂಲಕ ಗಮನಿಸಿ ಸಮಗ್ರವಾಗಿ ದಾಖಲಿಸುವುದಾಗಿದೆ.

ಈ ಮೌಲ್ಯಮಾಪನ ಪದ್ಧತಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಶಿಕ್ಷಕ ತರಬೇತಿ ಸಾಹಿತ್ಯ, "ಸಾಧನ”, ಸಂಪನ್ಮೂಲ ಸಾಹಿತ್ಯ ರಚಿಸಿ ರಾಜ್ಯದ ಎಲ್ಲಾ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ ವಿತರಿಸಲಾಗಿದೆ. ಅಲ್ಲದೆ ರಾಜ್ಯದ ಬೋಧಕ ಶಿಕ್ಷಕರಿಗೆ 3 ದಿನಗಳ ಸನಿವಾಸ ತರಬೇತಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ ರಾಜ್ಯ ಮಟ್ಟದ ತರಬೇತಿ ನೀಡಲಾಗಿದೆ. ಇದಕ್ಕಾಗಿ ಎಸ್.ಎಸ್.ಎ. ಮತ್ತು ಆರ್.ಎಂ.ಎಸ್.ಎ. ವತಿಯಿಂದ ಅನುದಾನ ಭರಿಸಲಾಗಿದೆ. RMSA ನಿಂದ ಒಟ್ಟು ರೂ. 14.15 ಲಕ್ಷ ಬಿಡುಗಡೆಯಾಗಿದ್ದು, CCE ಅನುಷ್ಠಾನಕ್ಕಾಗಿ ಶಿಕ್ಷಕರಿಂದ ಮಾಹಿತಿ, ಪೂರಕ ಸಾಹಿತ್ಯ ರಚನೆ ಇತ್ಯಾದಿಗಳಿಗಾಗಿ ಪ್ರತಿ ಡಯಟ್ ಗಳಿಗೆ ಅಂದಾಜು ರೂ.38,000/- ಬಿಡುಗಡೆ ಮಾಡಲಾಗಿದೆ. ಆಯುಕ್ತರ ಕಛೇರಿಯಿಂದ ರೂ. 5.00 ಲಕ್ಷ ಅನುದಾನ ನೀಡಿದ್ದು, ಈ ಹಣವನ್ನು "ಸೌರಭ" ಸಾಹಿತ್ಯ ಮುದ್ರಣಕ್ಕೆ ಹಾಗೂ ಮೌಲ್ಯಮಾಪನ ಕಾರ್ಯಾಗಾರಕ್ಕೆ ಬಳಸಲಾಗಿದೆ.

(ಆ) ಶೈಕ್ಷಣಿಕ ವೃತ್ತಿ ಮಾರ್ಗದರ್ಶನ : ವಿದ್ಯಾರ್ಥಿ ಮತ್ತು ಶಿಕ್ಷಕರ ಮಧ್ಯೆ ಮನೋವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ವಿನೂತನ ಯೋಜನೆಯೇ ಮನೋವಿಜ್ಞಾನ ಪ್ರಯೋಗಾಲಯ. ಇದನ್ನು ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಶಾಖೆಯಿಂದ ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದ್ದು, ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಮತ್ತು ವರ್ತನಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲು ದೂರಗಾಮಿ ಪರಿಕಲ್ಪನೆಯನ್ನು ರೂಪಿಸಲಾಗುತ್ತಿದೆ. 2012-13 ನೇ ಸಾಲಿನಲ್ಲಿ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ (4278) ಪ್ರತಿ ಪ್ರೌಢ ಶಾಲೆಗೆ ರೂ. 2000/- ರಂತೆ 85.56 ಲಕ್ಷಗಳನ್ನು ಬಿಡುಗಡೆ ಮಾಡಿ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಲಹಾ ಕೇಂದ್ರಗಳನ್ನು ಸ್ಥಾಪಿಸಿ ಅವುಗಳು ಕಾರ್ಯಾರಂಭ ಮಾಡುವಂತೆ ಕ್ರಮವಹಿಸಲಾಗಿದೆ.

2012-13 ನೇ ಸಾಲಿನಲ್ಲಿ ಸಿ.ಸಿ.ಆರ್.ಟಿ., ನವದೆಹಲಿ ಇವರು ಆಯೋಜಿಸಿರುವ ತರಬೇತಿಗಳಿಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಮಾಹೆಯೂ 4 ತರಬೇತಿಗಳಲ್ಲಿ ಒಂದು ತರಬೇತಿಗೆ 10 ಜನರಂತೆ ವರ್ಷಕ್ಕೆ 480 ಜನ ಶಿಕ್ಷಕರು ತರಬೇತಿ ಪಡೆಯುತ್ತಿದ್ದಾರೆ.

ಇ) ದೈಹಿಕ ಶಿಕ್ಷಣ ಘಟಕ : 
ಈ ಘಟಕದ ವತಿಯಿಂದ ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಯೋಗ ಶಿಕ್ಷಣ ಜ್ಞಾನವನ್ನು ನೀಡುವುದು, ಶಿಕ್ಷಕರಿಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಏಕಾಗ್ರತೆ ಮೂಡಿಸುವುದು, ಮತ್ತು ಆಧ್ಯಾತ್ಮಿಕ ಮೌಲ್ಯ ಶಿಕ್ಷಣ ತರಬೇತಿಗಳನ್ನು ನೀಡಲಾಗಿದೆ. ಇದಕ್ಕಾಗಿ ಈ ಸಾಲಿನಲ್ಲಿ ರೂ. 13.00 ಲಕ್ಷಗಳನ್ನು ಖರ್ಚು ಮಾಡಲಾಗಿದೆ.

ದೈಹಿಕ ಶಿಕ್ಷಣ ಶಿಕ್ಷಕರ ಕೈಪಿಡಿ, ಮೌಲ್ಯ ಮಾಪನ ಸಂಚಿ ರಚನೆ ಹಾಗೂ ಪಠ್ಯ ಪುಸ್ತಕಗಳ ಭಾಷಾಂತರ ಕೆಲಸಗಳನ್ನು ನಿರ್ವಹಿಸಲಾಗಿದೆ. ಶಿಕ್ಷಕರ ಕೈಪಿಡಿ ಹಾಗೂ ಮೌಲ್ಯಮಾಪನ ಸಂಚಿಯಿಂದ ಶಿಕ್ಷಕರು ಹಿಕ ಶಿಕ್ಷಣವನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಬೋಧನೆ ಮಾಡುವ ಬಗ್ಗೆ ಹಾಗೂ ಮಾಡಿದ ಬೋಧನೆಯನ್ನು ಪರಿಣಾಮಕಾರಿಯಾಗಿ ಮೌಲ್ಯಮಾಪನ ಮಾಡುವ ಬಗ್ಗೆ ತಿಳುವಳಿಕೆ ಮೂಡಿಸುವಲ್ಲಿ ಪ್ರಯೋಜನಕಾರಿಯೆನಿಸಿದೆ.

ಮೂಲ : ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ

ಕೊನೆಯ ಮಾರ್ಪಾಟು : 12/21/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate