ಮಕ್ಕಳಿಗಾಗಿ POCSO ಇ-ಬಾಕ್ಸ್
ಇತ್ತೀಚೆಗೆ ಹೆಚ್ಚಾಗುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಯೋಚಿಸಿದಾಗ , ಭೂತಳದ ರೈಲು ಸುರಂಗಗಳಲ್ಲಿ ಸಂಭವಿಸಬಹುದಾದ ಸ್ಫೋಟದ ಪರಿಣಾಮಗಳ ಕುರಿತು ಗಮನಹರಿಸಬೇಕಾದ್ದು ಅತೀ ಅವಶ್ಯಕ. ಅಗ್ನಿ ದುರ0ತ, ಕೊಳವೆಗಳಲ್ಲಿ ಬಿರುಕುಂಟಾಗಿ ಅನಿಲ ಸೋರಿಕೆ, ಅಂತರ್ಜಲದ ಪ್ರವಾಹ, ನೆಲದ ಮೇಲ್ಮೈನಲ್ಲಿರುವ ಕಟ್ಟಡಗಳಿಗೆ ಹಾನಿ ಈ ಎಲ್ಲಾ ಅವಘಡಗಳಿಗೆ ಇ0ಥ ಸ್ಫೋಟ ಕಾರಣವಾಗಬಹುದು. ಹೀಗಾಗಿ ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನೆಲದಾಳದ ಸುರ0ಗಮಾರ್ಗಗಳ ಸ್ಥಿರತೆ, ದೃಢತೆಗಳ ಲೋಪದ ಕುರಿತಾಗಿ ಅಧ್ಯಯನ ನಡೆಸುವುದು ಹಾಗೂ ದೋಷರಹಿತ ಸುರಂಗಮಾರ್ಗಗಳ ರಚನೆಯತ್ತ ಹೆಜ್ಜೆಹಾಕುವುದು ಇಂದಿನ ಅಗತ್ಯವಾಗಿದೆ.
ವೈಮಾನಿಕ ಎಂಜಿನ್ನುಗಳು ಅಗ್ಗದ ಇಂಧನದಿಂದ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ತೆರೆದಿಡುವ ಮೂಲವಸ್ತುವೊಂದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ವಸ್ತುವು ಕೋಬಾಲ್ಟ್ ಎಂಬ ಮೂಲ ಧಾತುವನ್ನು ಆಧರಿಸಿದೆ. ಇದು ಪ್ರತಿಕೂಲ ಪರಿಸ್ಥಿತಿಗಳಲ್ಲೂ ತನ್ನ ಸದೃಢತೆಯನ್ನು ಕಾಯ್ದುಕೊಳ್ಳುವುದಲ್ಲದೇ ತುಕ್ಕು ಹಿಡಿಯುವ ಪ್ರಕ್ರಿಯೆಯನ್ನೂ ಪ್ರತಿರೋಧಿಸುವ ಗುಣವನ್ನು ಈ ವಸ್ತು ಹೊಂದಿದೆ.