অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಚಿತ ಮಕ್ಕಳ ಕಾದಂಬರಿ

ರಚಿತ ಮಕ್ಕಳ ಕಾದಂಬರಿ

ಕನ್ನಡ ಸಾಹಿತ್ಯವೆಂಬುದು ಪುರಾತನ ಹಾಗೂ ವಿಶಾಲವಾದುದಾಗಿದ್ದು ಕಾಲ, ಧರ್ಮಕ್ಕನುಗುಣವಾಗಿ ಹಲವಾರು ವಿಭಾಗಕ್ಕೆ ಒಳಪಟ್ಟಿರುವುದನ್ನು ಕಾಣಬಹುದು. ಅಂತಹ ವಿಭಾಗ ಕ್ರಮದಲ್ಲಿ ಹೊಸಗನ್ನಡ ಸಾಹಿತ್ಯವೂ ಒಂದು. ಈ ಹೊಸಗನ್ನಡ ಸಾಹಿತ್ಯವು ತನ್ನ ಒಡಲಲ್ಲಿ ಭಾವಗೀತೆ, ಕಥನಕಾವ್ಯ, ಮಹಾಕಾವ್ಯ, ನಾಟಕ, ಕಾದಂಬರಿ, ಸಣ್ಣಕಥೆ, ಲಲಿತ ಪ್ರಬಂಧ, ಕವಿಚರಿತೆ, ವಿಮರ್ಶೆ, ಸಂಶೋಧನೆ ಮೊದಲಾದ ಪ್ರಕಾರಗಳನ್ನು ಒಳಗೊಂಡಿದೆ. ಇವುಗಳಲ್ಲಿ ಕಾದಂಬರಿಯು ಇತರ ಪ್ರಕಾರದಂತೆ ಬಹು ಪ್ರಮುಖವಾದುದಾಗಿದೆ.

ಸ್ವಚ್ಛಂಧ ಹಾಗೂ ಸ್ವತಂತ್ರವಾಗಿ ನಿರ್ಮಾಣವಾದ ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿಯು ಒಂದು. ಇದನ್ನು ’ಕರತಲ ರಂಗಭೂಮಿ’ ಎಂದು ಕರೆಯಲಾಗುತ್ತದೆ. ಕಾದಂಬರಿಯ ಸ್ವತಂತ್ರ, ಸರಳತೆ, ಸ್ವಚ್ಛಂಧತೆಯಿಂದಾಗಿ ಯಾರು ಬೇಕಾದರೂ ಕಾದಂಬರಿ ಬರೆಯಬಹುದೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಕಾದಂಬರಿ ಎಂದರೆ “ಜನಜೀವನದಲ್ಲಿ ಉಂಟಾದ ಘಟನೆಗಳು ಮತ್ತು ಕ್ರಿಯೆಗಳೊಡನೆ ಅನುಭವಿಸಿದ ಮತ್ತು ಮಾಡಿದ ಸಂಗತಿಗಳಾಗಿವೆ”. ಇದೊಂದು ಜನಪ್ರಿಯ ಓದು ಮಾಧ್ಯಮವಾಗಿದ್ದು ಕಾದಂಬರಿಕಾರನ ನವಿರಾದ ನಿರೂಪಣೆಯ ಮನಸ್ಥಿತಿಗೆ ಒಳಪಟ್ಟಿರುತ್ತದೆ. ಅದರಲ್ಲೂ ಮಕ್ಕಳ ಕಾದಂಬರಿಯಂತು ವಿಶಿಷ್ಟವಾದುದಾಗಿದೆ. ಆದರೆ ಪ್ರಾರಂಭದಲ್ಲಿ ಮಕ್ಕಳ ಕಾದಂಬರಿಯ ರಚನೆಯು ಬಹು ವಿರಳವಾಗಿತ್ತು. ಆನಂತರ ಕಾದಂಬರಿಯ ರಚನೆ ಕಾರ್ಯವು ಹೆಚ್ಚಾಯಿತು. ಅಂದರೆ ನಿಯತಕಾಲಿಕೆಗಳಲ್ಲಿ ಹಾಗೂ ವಾರ, ಮಾಸ ಪತ್ರಿಕೆಯಲ್ಲಿ ಮಕ್ಕಳ ಕಾದಂಬರಿಗಳು ಧಾರಾವಾಹಿಯಾಗಿ ಬರಲಾರಂಭಿಸಿದ ನಂತರವೇ ಬರವಣಿಗೆ ಹೆಚ್ಚಾಯಿತು ಎಂದು ಹೇಳಬಹುದು. ಹೀಗೆ ಬೆಳೆದ ಮಕ್ಕಳ ಕಾದಂಬರಿ ಮಕ್ಕಳ ಕಾದಂಬರಿ ರಚನೆಕಾರರ ಪಾತ್ರ ಹಿರಿದಾದುದು ಹಾಗೂ ಪ್ರಶಂಸನೀಯ. ಅಂತಹ ಕೆಲವು ಮಕ್ಕಳ ಕಾದಂಬರಿಕಾರರ ಹೆಸರು ಹಾಗೂ ಅವರು ರಚಿಸಿದ ಮಕ್ಕಳ ಕಾದಂಬರಿಯ ಪರಿಚಯವು ಈ ಮುಂದಿನಂತಿದೆ.

ಆಯ್ದ ಕೆಲವು ಮಕ್ಕಳ ಕಾದಂಬರಿಕಾರರು ಮತ್ತು ಅವರ ಕೃತಿ:

ಲೇಖಕರ ಹೆಸರು                                                    ಕಾದಂಬರಿ

  1. ನಾ. ಕಸ್ತೂರಿ                              -                            ಪಾತಾಳದಲ್ಲಿ ಪಾಪಚ್ಚಿ(ಅನುವಾದ)
  2. ಟಿ.ಕೆ ರಾಮರಾಯರು                      -                           ದಿಬ್ಬದ ಮನೆ
  3. ಎಂ.ಪಿ. ಮನೋಹರ ಚಂದ್ರನ್            -                           ಹೊಸ ಕಾಡಿನಲ್ಲಿ ಪಾಪು
  4. ಗೀತಾ ಕುಲಕರ್ಣಿ                         -                           ನೇಜಿ ಗುಬ್ಬಚ್ಚಿ
  5. ಹೆಚ್.ಎಸ್ ಮೋಹನ್                     -                           ಹಲೋ ಬೆಂಗಳೂರು
  6. ಹೆಚ್. ಎಸ್.ವೆಂಕಟೇಶಮೂರ್ತಿ          -                           ಅಮಾನುಷರು, ಚಿನ್ನಾರಿ ಮುತ್ತಾ
  7. ಸುಮತೀಂದ್ರ ನಾಡಿಗ್                    -                           ಸಾಹಸ
  8. ಎಸ್.ವಿ ಶ್ರೀನಿವಾಸ ರಾವ್                -                           ಪುಟಾಣಿ ಸಾಹಸಿಗಳು, ಅದ್ಬುತ ಸೃಷ್ಟಿ
  9. ಹಾರೋಹನುಮ
  10. ಗಾಯತ್ರಿ ಮೂರ್ತಿ                        -                           ಬಿಂದು ಸಿಂಧೂ ಮತ್ತು ಬ್ರೂಸಲಿ
  11. ಕಾಡಿನಲ್ಲೊಂದು ಕ್ಯಾಂಪು
  12. ಸರೋಜಾ ನಾರಾಯಣ ರಾವ್         -                           ದಿನೇಶನ ದೀಪಾವಳಿ, ದಿನೇಶನ

ರಜೆಯ ದಿನಗಳು

  1. ಬಿ.ಎಲ್.ವೇಣು                          -                           ಗುಹೆ ಸೇರಿದವರು
  2. ರಾಜಶೇಖರ ಭೂಸನೂರಮಠ         -                           ರಾಕ್ಷಸ ದ್ವೀಪ, ಶುಕ್ರ ಗ್ರಹದ ಸಾಹಸಿ

ಝಝಾನ್, ಮಂಗಳ, ಸಿಗ್ನಿ ಸಂಗೀತ

  1. ನಾ.ಡಿಸೋಜಾ                          -                           ದ್ವೀಪ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ
  2. ಇಂದಿರಾ ಹಾಲಂಬಿ                     -                           ಜೊತೆಯಲ್ಲಿ ಇರುವವರು
  3. ಶ್ರೀಧರಮೂರ್ತಿ                         -                           ಅಂಕಲ್ ಲಾಮಾನ ಕಥೆ(ಭಾವಾನುವಾದ)
  4. ಇಂದಿರಾ ಹಾಲಂಬಿ                     -                           ಜೊತೆಯಲ್ಲಿ ಇರುವವರು
  5. ಬಿ.ಶ್ರೀ. ಪಾಂಡುರಂಗರಾವ್            -                           ಮೊಲರಾಯ ರಾಜನಾದಾಗ
  6. ವಿಜಯಲಕ್ಷ್ಮಿ ರಾಘವೇಂದ್ರ ರಾವ್      -                           ಚಿಟ್ಟೆಯಾದ ಸಂಧ್ಯಾ
  7. ಎನ್.ಪ್ರಹ್ಲಾದರಾವ್                     -                           ಮಹಾಯಾನ
  8. ಜಂಬುನಾಥ ಕಂಚ್ಯಾಣಿ                 -                           ಮಿಡಿದ ಕರುಳು
  9. ಮತ್ತೂರು ಸುಬ್ಬಣ್ಣ                      -                           ಅಂಶು ಮತ್ತು ರಾಬೋಟ್
  10. ಕೇಶವ ಮಳಗಿ                          -                           ಕಪ್ಪುಮರಿ ಮೀನು
  11. ಚಿಕ್ಕೆರೂರು ಧೀರೇಂದ್ರಾಚಾರ್          -                           ಕರ್ಣ
  12. ಹ.ಕ.ರಾಜೇಗೌಡ                        -                           ಕರಿಬಂಟನ ಕಾಳಗ
  13. ಅನುರಾಧಾ ಮೂರ್ತಿ                   -                           ಮಲೆನಾಡ ಮಾದ, ಅರಳಿ ಗುಡ್ಡದ ಮೇಲೆ
  14. ಶ್ರೀ ರವಿ                                 -                           ಮಾಯದ ಗಿಣಿ, ಹಳದಿ ಕಾಡು, ಮಂತ್ರವಾದಿ

ಮಾಯಾಜಾಲ, ಕನ್ನಡದ ಮಾರುತಿ.

  1. ನಿರುಪಮಾ                              -                           ಸುಪರ್ಣನ ಸಾಹಸ
  2. ಡಾ ಸುಧಾ ಎನ್ ಮೂರ್ತಿ              -                           ನಾನು ತಿಳಿದಿಲ್ಲ ತಾಯಿಯ(ಇಂಗ್ಲೀಷ್

ಭಾಷೆಯಲ್ಲಿದೆ)

(ಇವುಗಳಲ್ಲಿ ಕೆಲವನ್ನು ನೀಳ್ಗಥೆಗಳೆಂದೂ ಹಾಗೂ ಕಿರು ಕಾದಂಬರಿಗಳೆಂದೂ ಪರಿಗಣಿಸಬಹುದು)

ಗ್ರಂಥ ಋಣ:

  1. ಮಕ್ಕಳ ಸಾಹಿತ್ಯದ ನೆಲೆ-ಬೆಲೆ  - ಎಸ್.ವಿ.ಶ್ರೀನಿವಾಸರಾವ್
  2. ಅಂತರ್ ಜಾಲ ಮಾಹಿತಿ
  3. ಕನ್ನಡ ಸಾಹಿತ್ಯ ಕೋಶ – ರಾಜಪ್ಪ ದಳವಾಯಿ
  4. ಕನ್ನಡ ವಿಶ್ವಕೋಶ – ಮೈಸೂರು ವಿಶ್ವವಿದ್ಯಾಲಯ
  5. ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ – ಚಿ ನಿಂಗಣ್ಣ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate