ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಸಾಧಕರ ಮೂಲೆ / ಸೈನಾ ನೆಹ್ವಾಲ್
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸೈನಾ ನೆಹ್ವಾಲ್

ಶೈನಿಂಗ್' ಸೈನಾ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಈಗ ವಿಶ್ವದ ನಂಬರ್ 1 ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ಶನಿವಾರ ಸ್ಪೇನ್‌ನ ಕರೋಲಿನಾ ಮರೀನ್ ಅವರನ್ನು ಪರಾಭವಗೊಳಿಸಿ ಅಗ್ರಸ್ಥಾನಕ್ಕೇರಿದ ಹೆಗ್ಗಳಿಕೆ ಸೈನಾಳದ್ದು. ಕೆಲ ದಿನಗಳ ಹಿಂದೆಯಷ್ಟೇ ಇಂಡಿಯನ್ ಓಪನ್ ಸೀರೀಸ್ ಕೂಡ ಗೆದ್ದಿರುವ ಸೈನಾ  ಬ್ಯಾಡ್ಮಿಂಟನ್‌ನಲ್ಲಿ ನಂ.1  ಪಟ್ಟಕ್ಕೇರಿದ ಮೊದಲ ಭಾರತೀಯ ಮಹಿಳೆ. ಸ್ನಿಗ್ಧ ಸೌಂದರ್ಯದ ಈ ಹುಡುಗಿ ಕಣಕ್ಕಿಳಿದರೆ ಆಕ್ರಮಣಕಾರಿ ಆಟಗಳನ್ನಾಡುತ್ತಾಳೆ. ನಂಬರ್ 1 ಸ್ಥಾನಕ್ಕೇರಿದಾಗ "ನನಗಿದನ್ನು ನಂಬಲು ಸಾಧ್ಯವಾಗುತ್ತಲೇ ಇಲ್ಲ. ಇದು ನನ್ನ ಜೀವನದ ಪ್ರಮುಖ ಘಟ್ಟ" ಎಂದು ಸೈನಾ ಖುಷಿ ಹಂಚಿಕೊಂಡಿದ್ದಳು. ಸೈನಾ ನೆಹ್ವಾಲ್ ಈ ಮಟ್ಟಕ್ಕೆ ಬೆಳೆಯಲು ಕಾರಣ ಆಕೆಯ ಕಠಿಣ ಪ್ರಯತ್ನ, ನಿಷ್ಠೆ ಮತ್ತು ಕಲಿಯುವ ಉತ್ಸಾಹ.

ಬ್ಯಾಡ್ಮಿಂಟನ್ ನಂ.1 ಆಟಗಾರ್ತಿ ಸೈನಾ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ.

  • ಸೈನಾಳ ಅಪ್ಪ ಹರ್‌ವೀರ್ ಸಿಂಗ್ ಮತ್ತು ಅಮ್ಮ ಉಷಾ ನೆಹ್ವಾಲ್ ಹರ್ಯಾಣದಲ್ಲಿ ಬ್ಯಾಡ್ಮಿಂಟನ್ ಚಾಂಪಿಯನ್‌ಗಳಾಗಿದ್ದರು.
  • ಬ್ಯಾಡ್ಮಿಂಟನ್ ಕಲಿಕೆ ಆರಂಭಿಸುವ ಮುನ್ನ ಸೈನಾ ಕರಾಟೆ ಕಲಿತಿದ್ದಳು. ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಪಡೆದಿದ್ದಾಳೆ ಈಕೆ. ಕರಾಟೆ ಕಲಿಯುತ್ತಿದ್ದ ಕಾಲದಲ್ಲಿ ಕರಾಟೆ ಮಾಸ್ಟರ್ ಹೊಟ್ಟೆ ಮೇಲೆ ಬೈಕ್ ಓಡಿಸುವ ಸ್ಟಂಟ್ ಮಾಡುತ್ತೇನೆ ಎಂದು ಹೇಳಿದಾಗ, ಸೈನಾ ಅಪ್ಪ ಕರಾಟೆ ಕ್ಲಾಸಿಗೆ ಮಗಳನ್ನು ಕಳಿಸುವುದಿಲ್ಲ ಎಂದು ಹೇಳಿ ಕರಾಟೆ ಕಲಿಕೆ ನಿಲ್ಲಿಸಿದ್ದರು.
  • ಅತೀ ಹೆಚ್ಚು ಸಂಪಾದನೆ ಮಾಡುವ ಭಾರತೀಯ ಆಟಗಾರ್ತಿ ಈಕೆ. ಜಾಹೀರಾತುಗಳಿಂದ ಸಿಗುವ ಹಣ ರು. 400 ಮಿಲಿಯನ್.
  • ಬ್ಯಾಡ್ಮಿಂಟನ್ ಹೊರತಾಗಿ ಭಾರತ್ ಪೆಟ್ರೋಲಿಯಂನಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.
  • ಬಿಡುವಿನ ವೇಳೆ ಈಕೆ ಚಿತ್ರ ಬರೆಯುತ್ತಾಳೆ. ಈಕೆಗೆ ಶಾರುಖ್ ಖಾನ್ ಎಂದರೆ ತುಂಬಾ ಇಷ್ಟ. ಆತನ ಸಿನಿಮಾಗಳನ್ನು ಈಕೆ ಮಿಸ್ ಮಾಡುವುದೇ ಇಲ್ಲವಂತೆ. ಶಾರುಖ್ ನಟಿಸಿದ ಚಕ್ ದೇ ಇಂಡಿಯಾ ಈಕೆಯ ಫೇವರಿಟ್ ಸಿನಿಮಾ.
  • ದೀಪಿಕಾ ಪಡುಕೋಣೆ ಮತ್ತು ಸೈನಾ ನೆಹ್ವಾಲ್ ಫೇಮಸ್ ಆಗುವುದಕ್ಕಿಂತ ಮುನ್ನವೇ ಪರಸ್ಪರ ಪರಿಚಿತರು. ಬ್ಯಾಡ್ಮಿಂಟನ್ ಪಂದ್ಯಗಳ ವೇಳೆ ಇಬ್ಬರೂ ಪರಿಚಿತರಾಗಿದ್ದರು. ಸೈನಾ ಬ್ಯಾಡ್ಮಿಂಟನ್ ತರಬೇತಿಗಾಗಿ ಪ್ರಕಾಶ್ ಪಡುಕೋಣೆ ಅವರ ಅಕಾಡೆಮಿಗೆ ಸೇರಿದ್ದಳು. ತನ್ನ ಜೀವನಾಧರಿತ ಸಿನಿಮಾ ಮಾಡುವುದಾದರೆ ದೀಪಿಕಾ ಪಡುಕೋಣೆ ಮಾತ್ರ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲಳು ಎಂಬುದು ಸೈನಾ ವಿಶ್ವಾಸ.
  • ಕೋಚ್ ವಿಮಲ್ ಕುಮಾರ್ ಜತೆ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರುವ ಮುನ್ನ ಸೈನಾ ಪುಲ್ಲೇಲ ಗೋಪಿಚಂದ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಳು.
  • ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್‌ನ ಕರೋಲಿನಾ ಮಾರಿನ್ ವಿರುದ್ಧ ಪಂದ್ಯ ಸೋತ ನಂತರ 2014 ಸೆಪ್ಟಂಬರ್‌ನಲ್ಲಿ ಸೈನಾ ವಿಮಲ್ ಕುಮಾರ್‌ರಿಂದ ತರಬೇತಿ ಪಡೆಯಲು ತೊಡಗಿದ್ದರು.

ಮೂಲ :ಪ್ರಜಾವಾಣಿ

3.07446808511
sreenivas May 12, 2016 04:02 PM

ಸೈನಾ ನೆಹ್ವಾಲ್ ರವ ರ ಬಗ್ಗೆ ಒಳ್ಳೆ ಮಾಹಿತಿ

vinay Apr 22, 2016 05:24 PM

ಸೈನಾ ನೆಹ್ವಾಲ್ ರವ ರ ಬಗ್ಗೆ ಒಳ್ಳೆ ಮಾಹಿತಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top