ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್ ಸಿ ಪಿ ಸಿ ಆರ್) ಮಕ್ಕಳು ಟಿವಿ ಷೋನಲ್ಲಿ ಮತ್ತು ಜಾಹಿರಾತುಗಳಲ್ಲಿ ಭಾಗವಹಿಸುವುದರ ಕಳಕಳಿ ಕುರಿತು ಅಧ್ಯಯಯನ ನಡೆಸಲು ಒಂದು ಕ್ರಿಯಾ ಗುಂಪು ರಚಿಸಿದೆ. ಈ ಗುಂಪಿನಲ್ಲಿ ಮಾಜಿ ಬಾಲ ನಟನಾದ ಪಿಲ್ಗಾಂವಕರ್ ಮತ್ತು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಯಾಗಿ ಪ್ರಹ್ಲಾದ ಕಕ್ಕರ್ ಇರುವುರು.
ಸದಸ್ಯರು ಟಿವಿ. ಸೀರಿಯಲ್‌ಗಳಲ್ಲಿ, ರಿಯಾಲಿಟಿ ಷೋಗಳಲ್ಲಿ ಮತ್ತು ಜಾಹಿರಾತುಗಳಲ್ಲಿ ಬಹುವಾಗಿ ಉಲ್ಲಂಘನೆಯಾಗುತ್ತಿರುವ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಕುರಿತು ಚರ್ಚಿಸಿದರು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ ಸಿ ಪಿ ಸಿ ಆರ್ ) ಸದಸ್ಯರಾದ ಸಂಧ್ಯಾ ಬಜಾಜ್ ಅವರು ಟಿ. ವಿ ಯಲ್ಲಿನ ಕೆಲಸದ ಪರಿಸ್ಥಿತಿಯನ್ನು ನಿಯಂತ್ರಿಸಲು ಅಗತ್ಯವಾದ ನಿಯಮಾವಳಿಗಳ ರಚನೆಗೆ ಪ್ರಸ್ತಾವನೆ ಮಂಡಿಸಿದರು. ದೈನಂದಿನ ಕೆಲಸದ ಅವಧಿ ಜತೆಯಲ್ಲಿಯೇ ವಾರ್ಷಿಕವಾಗಿ ಷೋಗಳಲ್ಲಿ ಎಷ್ಟು ತಾಸು ಮಕ್ಕಳು ಕೆಲಸಮಾಡಬೇಕಾಗಿದೆ ಎಂಬುದನ್ನು ನಿಗದಿ ಪಡಿಸಲು ಯೋಜಿಸಿದರು.
ಅದೂ ಅಲ್ಲದೆ, ಮಕ್ಕಳ ಮತ್ತು ಅವರನ್ನು ಹೆತ್ತವರ ತೊಂದರೆಗಳನ್ನು ನಿವಾರಿಸಲು ಮಕ್ಕಳ ಹಕ್ಕುಗಳ ಉಲ್ಲಂಘನೆಯ ದೂರುಗಳನ್ನು, ಪರಿಶೀಲಿಸಲು, ಉಲ್ಲಂಘನೆಯಾದರೆ ಟಿವಿ ನಿರ್ಮಾಣದ ಸಂಸ್ಥೆಗಳ ಮತ್ತು ಛಾನಲ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಲು, ಹಕ್ಕುಗಳ ರಕ್ಷಣೆಯಲ್ಲಿ ಹೆತ್ತವರ ಮತ್ತು ನಿರ್ಮಾಪಕರ ಹೊಣೆಯನ್ನು ನಿಗದಿ ಪಡಿಸಲು, ಮಕ್ಕಳ ಸಂಭಾವನೆಯನ್ನು ಶೈಕ್ಷಣಿಕ ಬಾಂಡ್/ ಸರ್ಟಿಫಿಕೆಟ್‌ಗಳ ಮೂಲಕ ನೀಡುವ ವಿಧಾನ ರೂಪಿಸಲು ಅಂತಿಮವಾಗಿ ಮಾರ್ಗದರ್ಶಿ ಸೂತ್ರಗಳ ಪರಿಶೀಲನೆಯ ವಿಧಾನಗಳನ್ನು ಜಾರಿಗೆ ತರಲು ನಿರ್ಧರಿಸಿತು.
ಕ್ರಿಯಾ ಗುಂಪು ಮಾಹಿತಿ ಮತ್ತು ಪ್ರಚಾರ ಇಲಾಖೆಯ ಸಚಿವಾಲಯದ ಅಧಿಕಾರಿಗಳನ್ನು ಮುಂದಿನ ಕ್ರಮಕ್ಕಾಗಿ ಭೇಟಿ ಮಾಡುವುದು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/25/2020