ಮಕ್ಕಳ ಅಗತ್ಯಗಳು ಮತ್ತು ಹಕ್ಕುಗಳನ್ನು ಖಾತ್ರಿಪಡಿಸಿಕೊಳ್ಳಲು ಅಭಿವೃದ್ಧಿ ಯೋಜನೆಗಳಿಂದ ಪ್ರಭಾವಿತ ಕುಟುಂಬಗಳ ಪುನರ್ವಸತಿ ಮತ್ತು ಪುನಸಜ್ಜೀಕರಣದ ರಾಷ್ಟ್ರೀಯ ನೀತಿ-2003 ಮತ್ತು ರಾಷ್ಟ್ರೀಯ ಪುನರ್ವಸತಿ ನೀತಿ-2006 ಇವುಗಳಲ್ಲಿ ಬದಲಾವಣೆಗಳನ್ನು ತರಲು NCPCR ಸಲಹೆ ಮಾಡಿದೆ. |
ರಘುವಂಶ ಪ್ರಸಾದ್ ಅವರಿಗೆ ಪತ್ರ ಬರೆದು ಸಾಮಾನ್ಯವಾಗಿ ಸೂಕ್ತ ಆಹಾರ ಮತ್ತು ಆರೋಗ್ಯ ಸೌಲಭ್ಯಗಳಿಗೆ ಅವಕಾಶವಿಲ್ಲದೇ ಮಕ್ಕಳ ಉಪವಾಸವಿರುವುದಲ್ಲದೆ, ಅಪೌಷ್ಟಿಕತೆಯಿಂದ ಬಳಲುತ್ತಾರೆ. ಶಾಲೆಯ ಮಕ್ಕಳು ಶಾಲೆಯಿಂದ ಹೊರದೂಡಲ್ಪಡುತ್ತಾರೆ ಅಲ್ಲದೆ ಅವರು ಪುನರ್ನೆಲಸಿದ ಪ್ರದೇಶಗಳಲ್ಲಿನ ಹೊಸ ಶಾಲೆಗಳಿಗೆ ಅವರನ್ನು ಸೇರಿಸುವ ಯಾವ ವ್ಯವಸ್ಥೆಗಳೂ ಆಗುವುದಿಲ್ಲ. ನೆರೆರಾಜ್ಯಗಳಲ್ಲಿನ ಪ್ರದೇಶದಲ್ಲಿ ಪುನರ್ನೆಲೆಸುವಿಕೆಯಾದರಂತೂ, ಆ ಮಕ್ಕಳು ಗುರುತಿನ ಚೀಟಿಯಿಲ್ಲದೆ ವರ್ಗಾವಣೆ ಪ್ರಮಾಣ ಪತ್ರವಿಲ್ಲದೇ, ಶಾಲೆಗೆ ಪ್ರವೇಶ ಪಡೆಯುವಲ್ಲಿ ವಿಫಲರಾಗುತ್ತಾರೆ. ತಮ್ಮ ನೆಂಟರಿಷ್ಟರನ್ನು ಕಳೆದುಕೊಂಡ ಮಕ್ಕಳು ಆದರೋಪಚಾರ ಮತ್ತು ಸಂರಕ್ಷಣೆಗಳಿಲ್ಲದವರಾಗುತ್ತಾರೆ. ಮಕ್ಕಳ ಹಕ್ಕುಗಳ ಕಣ್ನೆಲೆಯಲ್ಲಿ ಪುನರ್ವಸತಿ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವನ್ನು ಕುರಿತು, ಸಂಸದೀಯ ಮಂಡಳಿಗೆ ಒಂದು ಪ್ರಸ್ತಾಪ ಪ್ರಸ್ತುತ ಪಡಿಸುವುದನ್ನು ಕುರಿತು ಆಯೋಗವು ಆಲೋಚಿಸುತ್ತಿದೆ. ಪುನರ್ವಸತಿ ಕುರಿತ ರಾಷ್ಟ್ರೀಯ ನೀತಿಯ ಪ್ರಸ್ತಾವನೆಯು “ಸ್ಥಳಾಂತರವು ಪೌಷ್ಟಿಕಾಂಶ, ಶಿಕ್ಷಣ, ಆರೋಗ್ಯ ಮತ್ತಿತರ ಸವಲತ್ತುಗಳು ಸೇರಿದಂತೆ, ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ದಾರಿಯಾಗ ಬಹುದು” ಎಂಬುದನ್ನು ಸೇರಿಸಿಕೊಳ್ಳಬೇಕು. “ಮಕ್ಕಳು ಮತ್ತವರ ಎಲ್ಲ ಸವಲತ್ತುಗಳ ಲಭ್ಯತೆಗೆ ಇವುಗಳ ಪರಿಣಾಮವನ್ನು ಮೌಲ್ಯಾಂಕನ ಮಾಡಬೇಕು” ಎಂದೂ ಸಹ ಇದು ಹೇಳುತ್ತದೆ ಅಲ್ಲದೆ ಇದು ಜೆಂಡರ್ ಮತ್ತು ವಯೋಮಾನ – ನಿರ್ದಿಷ್ಟ ಆಗಿರಬೇಕು.
fರಾಷ್ಟ್ರೀಯ ನೀತಿಯಲ್ಲಿ ಸೇರಿದಂತೆಯೇ ಪರಿಶಿಷ್ಟ ಜಾತಿ/ ವರ್ಗಗಳಿಗೆ ಸೇರಿದ ಮಕ್ಕಳಿಗೆ ವಿಶೇಷ ಗಮನ ನೀಡಿ ಅವರ ನಿರಂತರ ಶಾಲಾ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳಬೇಕು. ಆಶ್ರಮ ಶಾಲೆಗಳು, ವಿದ್ಯಾರ್ಥಿನಿಲಯಗಳು, ಐಸಿಡಿ ಗಳು, ವಿದ್ಯಾರ್ಥಿ ವೇತನವೇ ಮೊದಲಾದ ಮಕ್ಕಳ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಬೇಕು. ಅವಿವಾಹಿತ ಹೆಣ್ಣು ಮಕ್ಕಳೂ, ಗಂಡು ಮಕ್ಕಳಂತೆ ಎಲ್ಲ ಸೌಲಭ್ಯಗಳನ್ನು ಅನುಭವಿಸುವಂತಾಗ ಬೇಕು ಅಲ್ಲದೆ, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಅಗತ್ಯವಾದರೆ, ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಭೂಮಿಯನ್ನು ವಶಪಡಿಸಿಕೊಳ್ಳಬೇಕೆಂದು ಆಯೋಗ ಹೇಳಿದೆ. ಈ ಸೇವೆಗಳನ್ನು ನೀಡುವುದಕ್ಕಾಗಿ ನೇಮಕ ಮಾಡಿಕೊಂಡ ಸಿಬ್ಬಂದಿಯನ್ನೂ ಸಹ ಪಟ್ಟಿಮಾಡಬೇಕೆಂದು ಆಯೋಗ ತಿಳಿಸಿದೆ.
ರಾಷ್ಟ್ರೀಯ ಪುನರ್ವಸತಿ ನೀತಿ (National Re-habitation policy - NRP) ಯನ್ನು ಮೇಲ್ವಿಚಾರಣೆ ಮಾಡಲು, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಾಮಾಜಿಕ ನ್ಯಾಯ ಇಲಾಖೆ, ಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿ ಇಲಾಖೆಗಳನ್ನೂ ಒಳಗೊಳ್ಳಲು ಆಯೋಗ ವಿನಂತಿಸಿದೆ. ಆ ಕುಟುಂಬಗಳಿಗೆ ಸೇರಿದ ಮಕ್ಕಳ ವಯೋಮಾನ ಮತ್ತು ಜೆಂಡರ್ ನಿರ್ದಿಷ್ಟ ಅರೋಗ್ಯ, ಪೌಷ್ಟಿಕತೆ, ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಲು ಪ್ರಭಾವಿತ ಕುಟುಂಬಗಳ ಸಮೀಕ್ಷೆ ನಡೆಸುವುದನ್ನು ಕಡ್ಡಾಯಗೊಳಿಸುವ ಒಂದು ಹೊಸ ಖಂಡ (Clause) ವನ್ನು NRP ಯಲ್ಲಿ ಸೇರಿಸಲೂ ಆಯೋಗ ಹೇಳಿದೆ. ತಮ್ಮ ಶೈಕ್ಷಣಿಕ ವರ್ಷದಲ್ಲಿ ತಡೆಗಳನ್ನು ನಿವಾರಿಸಲು ನಿರ್ದಿಷ್ಟವಾಗಿ ಮಗು ಓದುತ್ತಿರುವ ತರಗತಿ ವಿಶೇಷವಾಗಿ ಸೇರಿದಂತೆ ಶಾಲಾ ಶಿಕ್ಷಣದ ವಿವರಗಳನ್ನು ಸಮೀಕ್ಷೆ ಹೊಂದಿರಬೇಕು.
ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಐಸಿಡಿಎಸ್ ಕೇಂದ್ರಗಳು ಸೇತುಬಂಧ ಶಾಲೆಗಳ ನೀಡುವಿಕೆಯನ್ನು ಖಚಿತಪಡಿಸಿಕೊಂಡು ಇದಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಿಕೊಡುವ ಜವಾಬ್ದಾರಿ, ಪುನರ್ನೆಲಸುವಿಕೆಯ ಅನುಷ್ಠಾನಾಧಿಕಾರಿಯದಾಗಿರಬೇಕು.
ಸ್ಥಳಾಂತರ ಮತ್ತು ಪುನರ್ನೆಲಸುವಿಕೆಯ ಮಧ್ಯಕಾಲದಲ್ಲಿ ಮಕ್ಕಳ ಆರೋಗ್ಯ, ಪೌಷ್ಟಿಕಾಂಶ ಮತ್ತು ಶಿಕ್ಷಣಗಳ ಸವಲತ್ತುಗಳನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾರೆ. ಆದ್ದರಿಂದ ಇದಕ್ಕಾಗಿ ಶಾಲೆ ಮತ್ತು ಐಸಿಡಿಎಸ್ ಕೇಂದ್ರಗಳ ಲಭ್ಯತೆಯನ್ನು ಮಧ್ಯಕಾಲೀನವಾಗಿಯೂ ಒದಗಿಸಬೇಕೆಂದು ಆಯೋಗ ಹೇಳಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯ ಎಲ್ಲ ಪ್ರಕರಣಗಳು ಮತ್ತು ಅದನ್ನು ಪರಿಹರಿಸಲು ತೆಗೆದುಕೊಂಡ ಕ್ರಮಗಳು ಕಾಲಕಾಲಕ್ಕೆ NCPCR ಗೆ ವರದಿಯಾಗಬೇಕು
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/30/2020
ದೀನ ದಯಾಳ್ ಪುನರ್ವಸತಿ ಯೋಜನೆ ಕುರಿತಾದ ಮಾಹಿತಿ ಇಲ್ಲಿ ಲಭ್...
ವಿಕಲ ಚೇತನರಿಗಾಗಿ ಪುನರ್ವಸತಿ ಯೋಜನೆ