ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಮಕ್ಕಳ ಹಕ್ಕುಗಳು / ಬಾಲ ಕಾರ್ಮಿಕತೆ ನಿಷೇದಿಸಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಾಲ ಕಾರ್ಮಿಕತೆ ನಿಷೇದಿಸಿ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯುನಿಸೆಫ್ ಮತ್ತು ಐಎಲ್‌ಒ ಸಹಯೋಗದೊಂದಿಗೆ ಎಲ್ಲ ರೀತಿಯ ಬಾಲಕಾರ್ಮಿಕತೆಯನ್ನ್ನುನಿಷೇದಿಸಲು ಮತ್ತು ಪ್ರತಿ ಮಗುವೂ ಶಾಲೆಗೆ ಹೋಗುವುದನ್ನು ಖಾತ್ರಿ ಪಡಿಸಲು ರಾಜ್ಯ ಮಟ್ಟದ ಸಲಹಾ ಸಭೆಗಳ ಸರಣಿಗಳನ್ನು ನಡೆಸಲಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಯುನಿಸೆಫ್ ಮತ್ತು ಐಎಲ್‌ಒ ಸಹಯೋಗದೊಂದಿಗೆ ಎಲ್ಲ ರೀತಿಯ ಬಾಲಕಾರ್ಮಿಕತೆಯನ್ನ್ನುನಿಷೇದಿಸಲು ಮತ್ತು ಪ್ರತಿ ಮಗುವೂ ಶಾಲೆಗೆ ಹೋಗುವುದನ್ನು ಖಾತ್ರಿ ಪಡಿಸಲು ರಾಜ್ಯ ಮಟ್ಟದ ಸಲಹಾ ಸಭೆಗಳ ಸರಣಿಗಳನ್ನು ನಡೆಸಲಿದೆ. ಹಕ್ಕು ಆಧಾರಿತ ದೃಷ್ಟಿಕೋನವನ್ನು ಅಳವಡಿಸಿಕೊಂಡು, ಬಾಲಕಾರ್ಮಿಕತೆಯ ಪೂರ್ಣ ನಿಷೇದ ಮತ್ತು ಔಪಚಾರಿಕ ಶಾಲೆಗಳಲ್ಲಿನ ಪೂರ್ಣಾವಧಿಯ ಶಿಕ್ಷಣದ ನಡುವಿನ ಬಿಡಿಸಿಕೊಳ್ಳಲಾಗದ ಬಂಧವನ್ನು ಎತ್ತಿ ಹಿಡಿದಿವೆ.

ಅದು ಬಾಲ ಕಾರ್ಮಿಕತೆ ವ್ಯಾಖ್ಯೆಯಲ್ಲಿ ಬಾಲಕಾರ್ಮಿಕತೆ ಮತ್ತು ಮಕ್ಕಳ ಕೆಲಸ, ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಬಾಲಕಾರ್ಮಿಕತೆಯ ನಡುವೆ ಔಪಚಾರಿಕವಾಗಿ ವ್ಯತ್ಯಾಸ ಮಾಡದಿರುವ ಅಂಶವನ್ನು ಒತ್ತಿ ಹೇಳಿತು. ಅದು ಮಕ್ಕಳು ಮನೆಯಲ್ಲಿ ಮಾಡುವ ಕೆಲಸವನ್ನು, ಕೃಷಿ ಕೆಲಸವನ್ನು ಮತ್ತು ಅವರನ್ನು ಶಾಲೆಯಿಂದ ದೂರವಿಡುವ ಎಲ್ಲ ಚಟುವಟಿಕೆಗಳನ್ನು ಬಾಲ ಕಾರ್ಮಿಕತೆ ಎಂದೆ ಗುರುತಿಸಲು ಬಯಸಿತು. ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ (UNCRC) ದ ನಿರ್ಧಾರ ಮತ್ತು 18 ವರ್ಷದ ಒಳಗಿನ ಎಲ್ಲರೂ ಮಕ್ಕಳೇ ಎಂಬ ನಿರ್ಣಯಕ್ಕೆ ಅನುಗುಣವಾಗಿರಬೇಕು.

ಈ ವರೆಗೆ ಜೈಪುರ, ಲಕ್ನೋ ಮತ್ತು ಬೆಂಗಳೂರುಗಳಲ್ಲಿ ಮೂರು ಸಮಾಲೋಚನೆಗಳನ್ನು ನಡೆಸಲಾಗಿದೆ. ದೇಶದ ಇತರ ಭಾಗಗಳಲ್ಲಿ ಇನ್ನೂ 9 ಸಮಾಲೋಚನೆಗಳನ್ನು ನಡೆಸಲಾಗುವುದು.ಅದರ ಅಂತಿಮ ಸಮಾವೇಶವು ಡಿಸೆಂಬರ್‌ ೧೧-೧೨ ರಂದು ನ್ಯಾಷನಲ್‌ ಫೋರಂ ನವದೆಹಲಿಯಲ್ಲಿ ಬಾಲ ಕಾರ್ಮಿಕತೆಯ ಮತ್ತು ಮಕ್ಕಳ ಶಿಕ್ಷಣದ ಹಕ್ಕಿನ ಸಾಧನೆಗಾಗಿ ನಡೆಸಲಾಗುವುದು.

ಈ ವರೆಗೆ ನಡೆದ ಸಮಾಲೋಚನೆಗಳಲ್ಲಿ ಸರಕಾರೇತರ ಸಂಸ್ಥೆಗಳು ಮತ್ತು ಆಸಕ್ತ ನಾಗರೀಕ ಸಂಘಟನೆಗಳ ಪ್ರತಿನಿಧಿಗಳು, ಸಕ್ರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಬಾಲ ಕಾರ್ಮಿಕತೆಯನ್ನು ನಿಷೇದಿಸಲು ಮತ್ತು ಮಕ್ಕಳ ಶಿಕ್ಷಣ ಹಕ್ಕನ್ನು ನೈಜವಾಗಿಸಲು ಬಯಸಿದರು. ಮಕ್ಕಳೂ ತಾವು ಕಲ್ಲುಗಣಿಗಳಿಂದ, ಸೀರೆ ನೇಯವ ಮಗ್ಗಗಳಿಂದ ಮತ್ತು ಇತರ ಕಠಿನ ಪರಿಶ್ರಮ ಬಯಸುವ ಕೆಲಸಗಳಿಂದ ಹೊರಬಂದ ತರುವಾಯ ತಮಗೆ ದೊರಕಿದ ಅತಿ ಹೆಚ್ಚಿನ ಅವಕಾಶಗಳನ್ನು ಕುರಿತು ಮಾತನಾಡಿದರು. ಹೆತ್ತವರೂ ಕೂಡಾ ತಮ್ಮಮಕ್ಕಳಿಗೆ ದೊರೆತ ಅಪಾರ ಅವಕಾಶಗಳ ಬಗ್ಗೆ ಮಕ್ಕಳ ಅಭಿಪ್ರಾಯವನ್ನು ಅನುಮೋದಿಸಿದರು.. ವ್ಯಾಪಕವಾಗಿ ನಡೆಸಿದ ಸತತ ಸಾಮಾಜಿಕ ಕ್ರೋಢೀಕರಣದ ಪರಿಣಾಮವಾಗಿ ಬಾಲ ಕಾರ್ಮಿಕತೆಯನ್ನು ಭಾರತದಲ್ಲಿ ನಿಷೇದಿಸುವ ಅಭಿಯಾನವು ಮೊದಲಾಗಿದೆ. ಈ ಉಪಕ್ರಮಗಳು ಶಿಕ್ಷಣ ಕೇಂದ್ರಿಕೃತವಾಗಿರುವುದೆ ಮಕ್ಕಳನ್ನು ದುಡಿಮೆಯಿಂದ ದೂರವಿಡುವ ಅತಿ ಪರಿಣಾಮಕಾರಿ ತಂತ್ರವಾಗಿದೆ ಮತ್ತು ಇದು ಮಕ್ಕಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಿಸುವುದನ್ನು ನಿವಾರಿಸುವುದು. ಶಿಕ್ಷಣವು ಅನೇಕರಿಗೆ ದೌರ್ಜನ್ಯದಿಂದ ಬಿಡುಗಡೆ ಮಾಡಿ ಅವರಿಗೆ ಆತ್ಮಗೌರವವನ್ನು ನೀಡಿದೆ.

2001 ರಲ್ಲಿ ನಡೆದ ಜನಗಣತಿಯ ಪ್ರಕಾರ ಐದು ವರ್ಷದ ಒಳಗಿನ 500,000 ಕ್ಕೂ ಹೆಚ್ಚು ಮಕ್ಕಳು ಮನೆಗೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಬಡಜನರಿಂದ ಬಂದ ಶಿಕ್ಷಣದ ಸಲುವಾಗಿನ ಅಭೂತ ಪೂರ್ವ ಬೇಡಿಕೆಯ ಹೊರತಾಗಿಯೂ, ಲಕ್ಷಾಂತರ ಮಕ್ಕಳು ಹೊಲಗದ್ದೆಗಳಲ್ಲಿ , ಸಿರಿವಂತರ ಮನೆಗಳಲ್ಲಿ, ಹೋಟೆಲುಗಳಲ್ಲಿ , ಖಾನಾವಳಿ ಮೊದಲಾದ ಕಡೆ ಕೆಲಸದಲ್ಲಿ ತೊಡಗಿದ್ದಾರೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಅಧ್ಯಕ್ಷರಾದ ಶಾಂತಾ ಸಿನ್ಹರ ಪ್ರಕಾರ ಮಕ್ಕಳು ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ಮತ್ತು ದೇಶದಲ್ಲೆ ಇರುವ ವರ್ಗ ವ್ಯತ್ಯಾಸದಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಮಕ್ಕಳು ಅಭದ್ರತೆ ಮತ್ತು ಹತಾಶೆಯಿಂದ ತುಂಬಿ ತುಳುಕುವ ವಾತಾವರಣದಲ್ಲಿ ಬದುಕುವುದರಿಂದ ಕುಟುಂಬದ ಒಳಗೆ ಮತ್ತು ಹೊರಗೆ ದುರ್ಬಳಕೆಗೆ ಒಳಗಾಗುವ ವರದಿಗಳು ಹೆಚ್ಚುತ್ತಿವೆ. ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಶಾಲೆಯನ್ನು ಬಿಟ್ಟು ಕೆಲಸದಲ್ಲಿ ತೊಡಗಲು ಒತ್ತಡಕ್ಕೆ ಸಿಲುಕುವರು ಮತ್ತು ಅವರಿಗೆ ಬಿಡುವು ಅಥವ ಮನರಂಜನೆಗೆ ಸಮಯ ಇರುವುದೆ ಇಲ್ಲ. ಈ ಕೆಳಗೆ ಕಾಣಿಸಿದವು ಅರಿಯಲೆ ಬೇಕಾದ ಮೂರು ವಿಷಯಗಳಾಗಿವೆ..

ಶಾಲೆಬಿಟ್ಟ ಯಾವುದೆ ಮಗುವೂ ಬಾಲ ಕಾರ್ಮಿಕನೆ

ಎಲ್ಲ 18 ವರ್ಷದ ವರೆಗಿನ ಮಕ್ಕಳು ಪೂರ್ಣಾವಧಿ ಸಾಂಪ್ರದಾಯಿಕ ಶಾಲೆಗಳಿಗೆ ಹೋಗಬೇಕು.

ಎಲ್ಲ ಶಾಲೆಗಳೂ ಕೇಂದ್ರೀಯ ವಿದ್ಯಾಲಯಗಳ ಗುಣಮಟ್ಟದ ಹೊಂದಿರಬೇಕು.

ಬಾಲಕಾರ್ಮಿಕತೆಯನ್ನು ಸಂಪೂರ್ಣವಾಗಿ ನಿಷೇದಿಸಬೇಕು.

ಮೂಲ: ಪೋರ್ಟಲ್ ತಂಡ

2.91743119266
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top