ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊಳಗಿನ ಎಲ್ಲ ಮಾನವ ಜೀವಿಗಳು. ಇದು ಜಗತ್ತಿನಾದ್ಯಂತ ಒಪ್ಪಿತವಾದ ಮಗುವಿನ ನಿರೂಪಣೆ ಮತ್ತು ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ .(UNCRC) ಹೊರಹೊಮ್ಮಿದೆ. ಅಂತರಾಷ್ಟ್ರೀಯ ಕಾನೂನು ಸಾಧನ, ಬಹುತೇಕ ರಾಷ್ಟ್ರಗಳ ಒಪ್ಪಿಗೆ ಮತ್ತು ಅನುಮೋದನೆ ಪಡೆದಿದೆ ಭಾರತವು ೧೮ ವರ್ಷದೊಳಗಿನ ವ್ಯಕ್ತಿಗಳ ಗುಂಪನ್ನು ಸದಾ ಕಾನೂನು ಸಮ್ಮತ ವಿಭಿನ್ನ ಘಟಕ ಎಂದು ಪರಿಗಣಿಸಿದೆ. ಅದಕ್ಕಾಗಿಯೇ ಅವರು ಮತದಾನದ ಹಕ್ಕು ,ವಾಹನ ಚಾಲನಾ ಪರವಾನಿಗೆ ಅಥವ ಕಾನೂನು ಸಮ್ಮತ ಒಪ್ಪಂದ ಮಾಡಿಕೊಳ್ಳಲು ೧೮ ವರ್ಷ ಪೂರೈಸಿರಬೇಕು. ಹುಡುಗಿಗೆ ೧೮ ವರ್ಷ, ಹುಡುಗನಿಗೆ ೨೧ ವರ್ಷ ಆಗದೆ ಇದ್ದರೆ ಬಾಲ್ಯವಿವಾಹ ಕಾಯಿದೆ೧೯೨೯ರ ಪ್ರಕಾರ ಮದುವೆಯಾಗುವ ಹಾಗಿಲ್ಲ. ಅದೂ ಅಲ್ಲದೆ ೧೯೯೨ ರಲ್ಲಿ UNCRC ಯನ್ನು ಅನುಮೋದನೆ ಮಾಡಿದ ನಂತರ, ಭಾರತವು ಬಾಲಾಪರಾಧ ನ್ಯಾಯಕ್ಕೆ ಅನುಗುಣವಾಗಿ ಕಾಯಿದೆಯನ್ನು ಬದಲಾಯಿಸಿದೆ.ಇದರಿಂದ ೧೮ ವರ್ಷದೊಳಗಿನವರಿಗೆ ಅಗತ್ಯವಾದ ರಕ್ಷಣೆ ಮತ್ತು ಆರೈಕೆಯನ್ನು ದೊರಕುವುದನ್ನು ಖಚಿತ ಪಡಿಸಿಕೊಳ್ಳಲು, ಮತ್ತು ಅದನ್ನು ರಾಜ್ಯದಿಂದ ಪಡೆಯಲು ಅವರಿಗೆ ಅರ್ಹತೆ ಇದೆ. ಆದರೆ ಇನ್ನೂ ಅನೇಕ ಕಾಯಿದೆಗಳು ಮಗುವನ್ನು ವಿಭಿನ್ನವಾಗಿ ಅರ್ಥೈಸಿವೆ. ಮತ್ತು ಅವೆಲ್ಲವನ್ನೂ UNCRC.ಗೆ ಅನುಗುಣವಾಗಿರುವಂತೆ ಮಾಡಬೇಕಿದೆ. ಆದರೆ , ಈ ಮೊದಲೇ ಹೇಳಿದಂತೆ ಕಾನೂನಿನ ಪ್ರಕಾರ ಪ್ರಾಪ್ತ ವಯಸ್ಕರಾಗಲು ಗಂಡುಹುಡುಗರಿಗೆ ೨೧ ವರ್ಷ ಹೆಣ್ಣು ಹುಡುಗಿಯರಿಗೆ ೧೮ ವರ್ಷ ಅಗತ್ಯ. ಇದರಂತೆ ೧೮ ವರ್ಷದ ಕೆಳಗಿನ ಗ್ರಾಮ / ಪಟ್ಟಣ / ನಗರದಲ್ಲಿನ ಎಲ್ಲ ವ್ಯಕ್ತಿಗಳನ್ನು ಮಕ್ಕಳೆಂದು ಪರಿಗಣಿಸಬೇಕು ಮತ್ತು ನಿಮ್ಮ ಸಹಾಯ ಮತ್ತು ಆಸರೆಯ ಅವರಿಗೆ ಅಗತ್ಯ.ಒಬ್ಬ ವ್ಯಕ್ತಿಯನ್ನು ಮಗು ಎಂದು ಪರಿಗಣಿಸಲು ಅವನ ವಯಸ್ಸೇ ಅತಿ ಮುಖ್ಯ. ಒಬ್ಬ ೧೮ ವರ್ಷದ ಒಳಗಿನ ವ್ಯಕ್ತಿಯು ಮದುವೆಯಾಗಿ ಮಕ್ಕಳನ್ನು ಪಡೆದಿದ್ದರೂ ಕೂಡಾ ಅಂತರಾಷ್ಟ್ರೀಯ ಮಾಪನಕ್ಕೆ ಅನುಗುಣವಾಗಿ ಅವನನ್ನು ಮಗು ಎಂದೆ ಗುರುತಿಸಲಾಗುವುದು.ಮುಖ್ಯ ಅಂಶಗಳು ೧೮ ವರ್ಷದೊಳಗಿನ ಎಲ್ಲ ವ್ಯಕ್ತಿಗಳು ಮಕ್ಕಳೇ. ಬಾಲ್ಯವು ಎಲ್ಲ ವ್ಯಕ್ತಿಗಳೂ ಹಾದು ಹೋಗುವ ಒಂದು ಹಂತ. ಮಕ್ಕಳಿಗೆ ಬಾಲ್ಯದಲ್ಲಿ ವಿಭಿನ್ನವಾದ ಅನುಭವಗಳಾಗುತ್ತವೆ. ಎಲ್ಲ ಮಕ್ಕಳಿಗೂ ದುರ್ಬಳಕೆ ಮತ್ತು ಶೋಷಣೆಯ ವಿರುದ್ಧ ರಕ್ಷಣೆ ಬೇಕಾಗುತ್ತದೆ.
ಮಕ್ಕಳು ತಾವು ವಾಸಿಸುವಲ್ಲಿನ ಪರಿಸ್ಥಿತಿಯಿಂದ ವಯಸ್ಕರಿಗಿಂತ ಹೆಚ್ಚಾಗಿ ಬೇಗ ಪರಿಣಾಮಕ್ಕೆ ಒಳಗಾಗುತ್ತಾರೆ.ಅದರಿಂದ ಸರಕಾರದ ಮತ್ತು ಸಮಾಜದ ಕ್ರಿಯೆ ಅಥವ ನಿಷ್ಕ್ರಿಯೆಯಿಂದ ಬೇರೆ ವಯೋಮಾನದವರಿಗಿಂತ ಅವರು ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ. ನಮ್ಮದೂ ಸೇರಿದಂತೆ ಅನೇಕ ಸಮಾಜಗಳಲ್ಲಿ ಮಕ್ಕಳು ತಾಯಿತಂದೆಯರ ಆಸ್ತಿ ಎಂಬ ಭಾವನೆ ಇದೆ ಅಥವ ಅವರು ಇನ್ನೂ ವಯಸ್ಕರಾಗಬೆಕಾದವರು, ಇಲ್ಲವೆ ಸಮಾಜಕ್ಕೆ ಸದ್ಯಕ್ಕೆ ಯಾವುದೇ ಕೊಡುಗೆ ನೀಡಲಾಗದವರು ಎಂಬ ಭಾವನೆ ಇದೆ. ಮಕ್ಕಳೂ ಸಹಾ ಅವರದ್ದೆ ಆದ ಮನಸ್ಸಿರುವ, ತಮ್ಮದೆ ಅಭಿಪ್ರಾಯವಿರುವ, ಆಯ್ಕೆಯ ಸಾಮರ್ಥ್ಯವಿರುವ, ತೀರ್ಮಾನ ತೆಗೆದು ಕೊಳ್ಳುವ ಶಕ್ತಿ ಇರುವ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ. ವಯಸ್ಕರು ಅವರಿಗೆ ಮಾರ್ಗದರ್ಶನ ಮಾಡುವ ಬದಲು, ಅವರ ಜೀವನವನ್ನೇ ನಿರ್ಧರಿಸುವರು.ಮಕ್ಕಳಿಗೆ ಮತದಾನ ಮಾಡುವ ಹಕ್ಕಿಲ್ಲ,ಅಥವ ರಾಜಕೀಯ ಪ್ರಭಾವ ಇಲ್ಲ, ಆರ್ಥಿಕ ಸ್ವಾತಂತ್ರ ಇಲ್ಲ. ಅನೇಕ ಬಾರಿ ಅವರ ದನಿಯನ್ನು ಕೇಳುವವರೆ ಇರುವುದಿಲ್ಲ. ಮಕ್ಕಳು ವಿಶೇಷವಾಗಿ ದುರ್ಬಳಕೆಗೆ, ಶೋಷಣೆಗೆ ಒಳಗಾಗುವ ಸ್ಥಿತಿಯಲ್ಲಿರುವರು.
ಎಲ್ಲ ೧೮ ವರ್ಷದ ಒಳಗಿನ ವ್ಯಕ್ತಿಗಳು ಸರರ್ಕಾರದ ಆದೇಶದಲ್ಲಿ ಜಾರಿಮಾಡಿದ ಮತ್ತು ಅಂತರಾಷ್ಟ್ರೀಯ ಕಾಯಿದೆ ಪ್ರಕಾರ ಅನುಮೋದನೆ ಮಾಡಿದ ನಿಗದಿತ ಜೀವನ ಮಟ್ಟ ಮತ್ತು ಹಕ್ಕುಗಳನ್ನು ಹೊಂದಲು ಅರ್ಹತೆ ಪಡೆದಿರುವರು.ಭಾರತೀಯ ಸಂವಿಧಾನ ಭಾರತೀಯ ಸಂವಿಧಾನ ಎಲ್ಲ ಮಕ್ಕಳಿಗೆ ,ಕೆಲವು ಹಕ್ಕುಗಳನ್ನು ಪ್ರದಾನ ಮಾಡಿದೆ. ಕೆಲವನ್ನು ವಿಶೇಷವಾಗಿ ಅದರಲ್ಲಿ ಸೇರಿವೆ. ಅವು ಯಾವು ಅಂದರೆ:
ಇವಲ್ಲದೆ ಅವರಿಗೆ ಭಾರತೀಯ ಪೌರರಾಗಿ ಯಾವದೇ ಪುರುಷ ಮತ್ತು ಮಹಿಳೆಯರಿಗೆ ಇರುವ ಸಮಾನ ಹಕ್ಕುಗಳಿವೆ.
ಅಲ್ಲದೆ ರಾಜ್ಯವು:
ಸಂವಿಧಾನ ಮಾತ್ರವಲ್ಲದೆ, ಮಕ್ಕಳಿಗಾಗಿ ವಿಶೆಷ ಕಾಯಿದೆಗಳಿವೆ. ಜವಾಬ್ದಾರಿಯುತ ಶಿಕ್ಷಕರು ಮತ್ತು ನಾಗರೀಕರಾಗಿ ನಾವು ಅವುಗಳನ್ನು ಮತ್ತು ಅವುಗಳ ಪ್ರಾಮುಖ್ಯತೆಯನ್ನು ಅರಿತಿರುವುದು ಅತಿ ಮುಖ್ಯ. ಅವುಗನ್ನು ಈ ಕೈಪಿಡಿಯ ವಿವಿಧ ಭಾಗಗಳಲ್ಲಿ ಅವುಗಳಿಗೆ ಸಂಬಂಧಿಸಿದ ವಿಷಯಗಳೊಡನೆ ನೀಡಲಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶದಲ್ಲಿ ಎಲ್ಲಕ್ಕಿಂತ ಅತಿ ಪ್ರಾಮುಖ್ಯವಾದ ಅಂತರಾಷ್ಟ್ರೀಯ ಕಾನೂನು ಎಂದರೆ ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶದಲ್ಲಿ ತಗೆದು ಕೊಂಡದ್ದಾಗಿದೆ. ಅದು ಮಕ್ಕಳ ಹಕ್ಕುಗಳ ಸಮಾವೇಶ CRC ಎಂದೆ ಜನಪ್ರಿಯವಾಗಿದೆ. ಇದು, ನಮ್ಮ ಸಂವಿಧಾನ ಮತ್ತು ಇತರ ಕಾಯಿದೆಗಳು ಎಲ್ಲ ಮಕ್ಕಳು ಹೊಂದಿರಬೇಕಾದ ಹಕ್ಕುಗಳನ್ನು ಕೊಡಮಾಡುತ್ತವೆ. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ ಎಂದರೇನು? ಮಾನವ ಹಕ್ಕುಗಳು ಎಲ್ಲರಿಗೂ ಇವೆ. ಅವರ ವಯಸ್ಸು ಗಣನೆಗೆ ಬರುವುದಿಲ್ಲ. ಮಕ್ಕಳು ಕೂಡಾ ಅದರಲ್ಲಿ ಬರುವರು. ಆದಾಗ್ಯೂ ಅವರ ವಿಶೇಷ ಸ್ಥಾನದ ಫಲವಾಗಿ ಅವರಿಗೆ ಹಿರಿಯರಿಗಿಂತ ಹೆಚ್ಚುವರಿಯಾದ ರಕ್ಷಣೆ ಮತ್ತು ಮಾರ್ಗದರ್ಶನ ಅಗತ್ಯ. ಮಕ್ಕಳು ತಮ್ಮದೆ ಆದ ವಿಶೇಷ ಹಕ್ಕುಗಳನ್ನು ಹೊಂದಿರುವರು. ಅವುಗಳನ್ನು ಮಕ್ಕಳ ಹಕ್ಕು ಎನ್ನುವರು. ಇವುಗಳನ್ನು ಅಂತರಾಷ್ಟ್ರೀಯ ಸಂಸ್ಥೆಯ (CRC) UN ಮಕ್ಕಳ ಹಕ್ಕಿನ ಸಮಾವೇಶದಲ್ಲಿ ಮಂಡಿಸಲಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕಿನ ಸಮಾವೇಶದಲ್ಲಿ(CRC)ದಲ್ಲಿ ಅತಿ ಮುಖ್ಯ ಅಂಶಗಳೆಂದರೆ :
ಮಕ್ಕಳಿಗೆ ಸಮಾಜದಲ್ಲಿ ಸಮಾನ ಮತ್ತು ಉತ್ತಮ ಸ್ಥಾನ ದೊರಕಿಸುವ ಹೊಣೆಯನ್ನು ರಾಜ್ಯ ಗೌರವಿಸಬೇಕು ಮತ್ತು ಖಚಿತ ಪಡಿಸಬೇಕು
ಬದುಕುವ ಹಕ್ಕಿನಲ್ಲಿ ಕೆಳಗಿನವುಗಳು ಸೇರಿವ
ಅಭಿವೃದ್ಧಿ ಯ ಹಕ್ಕು ಈ ಕೆಳಗಿನವುಗಳನ್ನು ಒಳಗೊಂಡಿದೆ
ರಕ್ಷಣೆಯ ಹಕ್ಕು ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಒದಗಿಸುತ್ತಾ ಕೆಳಗಿನವುಗಳಿಂದ ರಕ್ಷಿಸುತ್ತದೆ
ಭಾಗವಹಿಸುವಿಕೆಯು ಕೆಳಗಿನವುಗಳನ್ನು ಒಳಗೊಂಡಿರಬೇಕು.
ಈ ಎಲ್ಲಾ ಹಕ್ಕುಗಳು ಪರಸ್ಪರ ಅವಲಂಬಿತವಾಗಿ ,ಬೇರ್ಪಡಿಸಲಾರದಂತಿವೆ ಅವುಗಳ ಗುಣಕ್ಕೆ ಅನುಗುಣವಾಗಿ ಎಲ್ಲ ಹಕ್ಕುಗಳನ್ನು ಹೀಗೆ ವಿಂಗಡಿಸಲಾಗಿದೆ
ಈ ಕೈಪಿಡಿಯಲ್ಲಿ ವಿಶೇಷವಾಗಿ ಮಕ್ಕಳ ರಕ್ಷಣೆ, ಅದನ್ನು ಖಾತರಿಯಾಗಿ ಒದಗಿಸುವಲ್ಲಿ ಶಿಕ್ಷಕರ ಮತ್ತು ಶಾಲೆಯ ಪಾತ್ರದ ಬಗ್ಗೆ ವಿವರಣೆ ನೀಡಲಾಗಿದೆ .
೯ ಗಮನಿಕೆ: ಮಕ್ಕಳು ಬೆಳೆದಂತೆ ವಿಭಿನ್ನ ಸಾಮರ್ಥ್ಯ ಮತ್ತು ಪರಿಪಕ್ವತೆಯನ್ನು ಪಡೆಯುತ್ತಾರೆ. ಇದರ ಅರ್ಥ ಅವರು ೧೫ ಅಥವ ೧೬ ವರ್ಷದವರಾದಾಗ ರಕ್ಷಣೆಯ ಅಗತ್ಯವಿಲ್ಲ ಎಂದಲ್ಲ. ಉದಾಹರಣೆಗೆ-ನಮ್ಮ ದೇಶದಲ್ಲಿ ಮಕ್ಕಳಿಗೆ ೧೬ ವರ್ಷ ತುಂಬುವ ಮೊದಲೇ ಮದುವೆ ಮಾಡುವರು ಮತ್ತು ಕೆಲಸಕ್ಕೂ ಹಚ್ಚುವರು ಆದರೆ ಅವರಿಗೆ ಅದರಿಂದ ರಕ್ಷಣೆ ಕಡಿಮೆ ಆಗಬಾರದು. ಸಮುದಾಯವು ಅವರನ್ನು ವಯಸ್ಕರೆಂದು,ಪಕ್ವತೆ ಇರುವವರೆಂದು ಪರಿಗಣಿಸಿದರೂ ಅವರಿಗೆ ಅತ್ಯುತ್ತಮ ರಕ್ಷಣೆ ಮತ್ತು ಸಹಾಯ ದೊರೆಯಲೇಬೇಕು. ಅದರಿಂದ ಅವರು ಜೀವನದ ಹಾದಿಯಲ್ಲಿ ಪ್ರೌಢತೆಯತ್ತ ಸಾಗುವಾಗ ಉತ್ತಮ ಆರಂಭ ಸಿಗುವುದು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 4/6/2015
ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮ...
3 ಮಗುವಿನ ರಕ್ಷಣೆಯ ವಿಷಯ ಮತ್ತು ಪ್ರತಿಯೊಬ್ಬ ಶಿಕ್ಷಕರು ತಿ...
ಮಗುವಿನ ಆರೋಗ್ಯದ ಸಮಸ್ಯೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ .
ಡಯಾಬೆಟಿಸ್ ಮೆಲಿಟಿಸ್ ಒಂದು ಅಸಹಜತೆ ಅದರಲ್ಲಿ ರಕ್ತದಲ್ಲಿನ ...