ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಾಲ ಕಾರ್ಮಿಕರು

ಈ ಕಾಯಿದೆಯು ೧೪ ವರ್ಷದೊಳಗಿನ ಮಕ್ಕಳನ್ನು ಅವರ ಜೀವ ಮತ್ತು ಆರೋಗ್ಯಕ್ಕೆ ಹಾನಿಕರವಾದ ೧೩ ವಿಧದ ವೃತ್ತಿಗಳಲ್ಲಿ ಮತ್ತು ೫೭ಕಾರ್ಯ ವಿಧಾನ ಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ.

ಶಾಸನಗಳು

ಭಾರತೀಯ ಸಂವಿಧಾನ (೨೬ ಜನವರಿ ೧೯೫೦) ಅದರಲ್ಲಿ ಅಡಕವಾದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶಕ ತತ್ವಗಳಲ್ಲಿರುವ  ವಿವಿಧ ಆರ್ಟಿಕಲ್ ಗಳು  ಈ ರೀತಿ ಇವೆ:

ಆರ್ಟಿಕಲ್ ೨೪

ಯಾವುದೇ ೧೪ ವರ್ಷದ ಕೆಳಗಿನ ಮಗುವನ್ನು ಕಾರ್ಖಾನೆಯಲ್ಲಿ, ಗಣಿಗಳಲ್ಲಿ ಅಥವಾ ಅಪಾಯಕಾರಿ ಕೆಲಸ  ಮಾಡಲು ನೇಮಿಸಬಾರದು

ಆರ್ಟಿಕಲ್ ೩೯-ಇ

ರಾಷ್ಟ್ರವು ತನ್ನ ಕೆಲಸಗಾರರ, ಮಹಿಳೆ,  ಪುರುಷ, ಮತ್ತು ಎಳೆ ವಯಸ್ಸಿನ ಮಕ್ಕಳ ಆರೋಗ್ಯ ಮತ್ತು ಶಕ್ತಿಯ ಶೋಷಣೆಯಾಗದಂತೆ. ಅವರು ತಮ್ಮ ಆರ್ಥಿಕ ತೊಂದರೆಯಿಂದಾಗಿ, ತಮ್ಮ ವಯಸ್ಸಿಗೆ  ಮೀರಿದ,  ಸಾಮರ್ಥ್ಯ ಕ್ಕೆ ಅನುಗುಣವಾಗಿಲ್ಲದ  ಕೆಲಸ ಮಾಡದಂತೆ  ನೀತಿಯನ್ನು ರೂಪಿಸಬೇಕು

ಆರ್ಟಿಕಲ್೩೯-ಎಫ್

ಮಕ್ಕಳಿಗೆ  ಆರೋಗ್ಯಕರ ವಾತಾವರಣದಲ್ಲಿ, ಗೌರವ, ಸ್ವಾತಂತ್ರ್ಯ, ಅಭಿವೃದ್ದಿ  ಪಡಿಸಿಕೊಳ್ಳುವ  ಅವಕಾಶ ಮತ್ತು  ಅನುಕೂಲತೆಗಳನ್ನು ಒದಗಿಸಬೇಕು. ಬಾಲ್ಯ ಮತ್ತು ಯೌವನದಲ್ಲಿ  ನೈತಿಕ  ಮತ್ತು ಐಹಿಕ  ಅಂಶಗಳನ್ನು ಕಳೆದುಕೊಳ್ಳದಂತೆ ರಕ್ಷಣೆ ಕೊಡಬೇಕು.

ಆರ್ಟಿಕಲ್  45

ರಾಷ್ಟ್ರದ ಸಂವಿಧಾನವು ಜಾರಿಗೆ ಬಂದ ೧೦ ವರ್ಷದೊಳಗೆ  ಎಲ್ಲ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣವನ್ನು ಅವರಿಗೆ ೧೪ ವರ್ಷ ತುಂಬುವ ತನಕ ನೀಡಲು ಪ್ರಯತ್ನಿಸಬೇಕು.

ರಾಷ್ಟ್ರೀಯ ಮಟ್ಟದಲ್ಲಿನ ಪ್ರಮುಖ ಶಾಸನಾತ್ಮಕ ಬೆಳವಣಿಗೆಗಳು ಈ ಕೆಳ ಕಂಡ ಅಂಶಗಳನ್ನು ಒಳಗೊಂಡಿವೆ.

  • ಬಾಲ ಕಾರ್ಮಿಕ ಕಾಯಿದೆ,೧೯೪೮: ಈ ಕಾಯಿದೆಯು ೧೪ ವರ್ಷದೊಳಗಿನ ಮಕ್ಕಳನ್ನು  ಅವರ  ಜೀವ ಮತ್ತು ಆರೋಗ್ಯಕ್ಕೆ ಹಾನಿಕರವಾದ ೧೩ ವಿಧದ ವೃತ್ತಿಗಳಲ್ಲಿ ಮತ್ತು ೫೭ಕಾರ್ಯ ವಿಧಾನ ಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ. ಆ ವೃತ್ತಿಗಳು ಮತ್ತು ಕಾರ್ಯ ವಿಧಾನಗಳನ್ನು ಆ ಕಾಯ್ದೆಯ ಪರಿಶಿಷ್ಟದಲ್ಲಿ ನಮೂದಿಸಲಾಗಿದೆ.
  • ಕೈಗಾರಿಕೆಗಳ ಕಾನೂನು (ಫ್ಯಾಕ್ಟರೀಸ್ ಅ್ಯಾಕ್ಟ) ,೧೯೪೮. ಈ ಕಾಯ್ದೆಯು ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು  ಕೆಲಸಕ್ಕೆ ನೇಮಿಸಿ ಕೊಳ್ಳುವುದನ್ನು ನಿಷೇಧಿಸಿದೆ ೧೫-೧೮ ವರ್ಷದ ಒಳಗಿರುವ ಹದಿ ಹರೆಯದವರನ್ನು ಕಾರ್ಖಾನೆಯ ಕೆಲಸಕ್ಕೆ  ತೆಗೆದು ಕೊಳ್ಳಬೆಕಾದರೆ ಅವರು  ವೈದ್ಯರಿಂದ ದೈಹಿಕ ಅರ್ಹತೆಯ ಪ್ರಮಾಣ ಪತ್ರ ಪಡೆದಿರಬೇಕು. ಕಾಯಿದೆಯು ೧೪ ರಂದ ೧೮ ವರ್ಷದೊಳಗಿನ ಕೆಲಸಗಾರರಿಗೆ ದಿನಕ್ಕೆ  ನಾಲಕ್ಕೂವರೆ ಗಂಟೆಯ ಕೆಲಸದ ಅವಧಿಯನ್ನು ನಿಗದಿಪಡಿಸಿದೆ ಮತ್ತು  ಅವರು ರಾತ್ರಿ ಪಾಳಿಯನ್ನು ಕೆಲಸ ಮಾಡುವುದನ್ನು ನಿಷೇಧಿಸಿದೆ.

ಬಾಲದುಡಿಮೆಯನ್ನು ನಿಷೇಧಿಸಲು ಮಾರ್ಗಸೂಚಿಗಳು

  • ಬಾಲದುಡಿಮೆ (ನಿಷೇಧ ಮತ್ತು ನಿಯಂತ್ರಣ ವಿನಿಯಮ) ಅಧಿಸೂಚನೆ 1986 ರಂತೆ 15 ಉದ್ಯೋಗಗಳು ಮತ್ತು 57 ಸಂಸ್ಕರಣಾ ಉದ್ಯಮಗಳಲ್ಲಿ ಬಾಲದುಡಿಮೆಯನ್ನು ನಿಷೇಧ ಮಾಡಲಾಗಿದೆ.
  • ಬಾಲ ನ್ಯಾಯಾಲಯ ಅಧಿನಿಯಮ 2006 ಒಂದು ಕಲ್ಯಾಣಕಾರಿ ಅಧಿನಿಯಮವಾಗಿದ್ದು ಇವನ್ನು ಅಲಕ್ಷಿತ ಬಾಲಾಪರಾಧಿಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಪುನರ್ವಸತಿಗಳನ್ನು ನೀಡಲು ಜಾರಿಗೊಳಿಸಿದ್ದು ಇದರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರೂ ಸೇರುತ್ತಾರೆ.
  • ಜೀತಪದ್ಧತಿಯ ನಿಷೇಧ ಅಧಿನಿಯಮ 1976 ನ್ನು ಮಕ್ಕಳನ್ನು ದುಡಿಮೆಯೊಳಗೆ ತೊಡಗಿಸಿಕೊಳ್ಳುವ ಉದ್ದಿಮೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬಳಸಲೇಬೇಕು.
  • ಜತೆಗೆ ಒಬ್ಬ ಗುತ್ತಿದೆದಾರನ ಮೂಲಕ ಬಾಲಕರನ್ನು ದುಡಿಮೆಗೆ ಹಚ್ಚಿರುವ ಪ್ರಕರಣಗಳಲ್ಲಿ ಪ್ರಧಾನ ಉದ್ದಿಮೆದಾರನನ್ನು ಬಾಲದುಡಿಮೆಯ ಗುತ್ತಿಗೆ (ನಿಷೇಧ ಮತ್ತು ನಿಯಂತ್ರಣ) ಅಧಿನಿಯಮ 1970 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು.

ಮೂಲ: ಪೋರ್ಟಲ್ ತಂಡ

3.0125
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top