অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಾಲಕಾಮಿ೯ಕತೆಯ ನಿಮೂ೯ಲನೆ

ಬಾಲಕಾಮಿ೯ಕತೆಯ ನಿಮೂ೯ಲನೆ

ಮಕ್ಕಳ ಗರಿಷ್ಟ ಹಿತ ಸಾಧಿಸಲು ಬಾಲಗೃಹಗಳನ್ನು ಪರಿವರ್ತಿಸುವದು.

ನಮ್ಮ ದೇಶದಲ್ಲಿನ  ದೇಶದ ಬಹುಸಂಖ್ಯಾತ ಬಾಲಗೃಹಗಳು ಮಕ್ಕಳ ಪೋಷಣೆ , ಸ೦ರಕ್ಷಣೆ , ಮೂಲಭೂತ ಅವಶ್ಯಕತೆಗೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿವೆ.  ಇಂತಹ  ಸಮಸ್ಯೆಗಳ ನಿವಾರಣೆಗಾಗಿ ಅನೇಕ ತೊಡಕುಗಳಿದ್ದರೂ ಕೂಡ ಸೂಕ್ತ ಮಧ್ಯಸ್ತಿಕೆ ಹಾಗೂ  ಸಮಪ೯ಕವಾದ  ಸಿಬ್ಬಂದಿಯಿಂದ ಮಕ್ಕಳ ಸವಾ೯೦ಗೀಣ ಅಭಿವೃಧ್ಧಿಯನ್ನು ಸಾಧಿಸಬಹುದಾಗಿದೆ. ಇದನ್ನು ಝಾರಖಂಡ ರಾಜ್ಯದ ರಾಂಚಿಯ ಸಮೀಪದ ಹಾತಿಯಾದಲ್ಲಿ ಅತ್ಯುತ್ತಮವಾಗಿ ಮಾಡಿ  ತೋರಿಸಿದ್ದಾರೆ. ಇಲ್ಲಿಯ  ಮಹಿಳೆಯರ ಪರಿವೀಕ್ಷಣಾ  ಗೃಹವು ಕಳೆದುಹೋದ  ಮಕ್ಕಳಿಗೆ , ಮಾನಸಿಕ ಮತ್ತು ಬೌಧ್ಧಿಕವಾಗಿ ದುರಾಚರಣೆಗೆ  ಒಳಗಾದ  ತರುಣಿಯರಿಗೆ , ಕಾನೂನಿನ ಜತೆಯ ಸಂಘಷ೯ದಲ್ಲಿ  ಆಪಾದಿತರಾದ  ಹುಡುಗಿಯರಿಗೆ   ಮತ್ತು  ಪ್ರೀತಿಸಿದ ಹುಡುಗರ ಜೊತೆ  ಓಡಿಹೋದ  ಅಪ್ರಾಪ್ತ ಬಾಲಕಿಯರನ್ನು  ಕೂಡಿಡುವ  ಸ್ಥಳವಾಗಿತ್ತು.


ಸದರಿ  ಬಾಲ  ಗೃಹವು  ೧೯೮೧ ರಿಂದ  ಬಂದಿಖಾನೆಯ ವ್ಯಾಪ್ತಿಗೆ  ಒಳಪಟ್ಟಿತ್ತು. ಈ ಬಂದೀ ಖಾನೆಗಳಲ್ಲಿ ಕೂಡಿಟ್ಟ ಜನರಿಗೆ ಜೀವಿಸಲಿಕ್ಕೆ  ಸಾಕಾಗುವ ಅತಿ  ಕಡಿಮೆ ಅವಶ್ಯಕತೆಗಳನ್ನು   ಮಾತ್ರ   ಪೂರೈಸಲಾಗುತ್ತಿತ್ತು.  ಈ ನಾಲ್ಕು  ಗೋಡೆಗಳ ಮಧ್ಯೆ  ಅನೇಕ ಹೆಣ್ಣು ಮಕ್ಕಳು  ಯೌವನವಸ್ಥೆಯಲ್ಲೆಯೇ   ಕಾಲಿಟ್ಟು ನಿಗ೯ತಿಕ ಬಾಳನ್ನು ಸವೆಸಿದರು.


ತದನ೦ತರ ಸ್ವಯ೦ ಸೇವಕರ ಅವಿರತ ಪ್ರಯತ್ನ ಮತ್ತು  ನ್ಯಾಯಾಂಗ  ವ್ಯವಸ್ಥೆಯ  ಮಧ್ಯಸ್ಥೆಕೆಯಿಂದ ಅಲ್ಲಿನ ನಿವಾಸಿಗಳ ಜೀವನಶೈಲಿ ಗಣನೀಯವಾಗಿ  ಬದಲಾವಣೆಗೊಂಡಿತು.  ಸದರಿ  ಗೃಹದ  ನಿವಾಸಿಗಳ ಮೂಲಭೂತ ಅವಶ್ಯಕತೆ  ಈಡೇರಿಕೆಗಾಗಿ  ಬೇಕಾದ ಎಲ್ಲ  ಅವಶ್ಯಕ ವಸ್ತುಗಳನ್ನು ಪೂರೈಸಲಾಯಿತು.  ಇದರ ಫಲವಾಗಿ ೬೦ ಜನ ಯಾರಿಗೂ ಬೇಡದ  ವ್ಯಕ್ತಿಗಳು  , ಎಲ್ಲರಿಗೂ ನಗುಮುಖದ ಮಹಿಳೆಯರು ಮತ್ತು ಮಕ್ಕಳಾಗಿ ಪರಿವರ್ತನೆ  ಗೊಂಡರು
೨೦೦೫ ರಲ್ಲಿ ಒಂದು  ಸ್ವಯಂ ಸೇವಕ ಗುಂಪಿನ  ಮಧ್ಯಸ್ಥಿಕೆಯಿಂದ ಅಲ್ಲಿಯ  ಭೌತಿಕ ಮೂಲಭೂತ ಸೌಕರ್ಯಗಳು  ಹೀನಾಯ   ಸ್ಥಿತಿಯಲ್ಲಿರುವುದು  ಗೊತ್ತಾಯಿತು. ಅವರೆಲ್ಲ. ಗಾಳಿ ಬೆಳಕು ಇಲ್ಲದ    ಕೋಶದಂತೆ  ಇರುವ  ಕಿರು ಕೋಣೆಗಳಿಗೆ  ಅವರನ್ನು ಕೂಡಿಟ್ಟಿದ್ದರು.  ಅಲ್ಲಿ  ಸಮಯಾನುಸಾರ  ನೀರು ಸರಬರಾಜು ಇರಲಿಲ್ಲ. ಮತ್ತು   ಪೂರೈಸಿದ ಆಹಾರವು ಕೀಳು ಮಟ್ಟದ್ದಾಗಿತ್ತು  ಮತ್ತು ಅದು ಸಾಕಾಗುತ್ತಿರಲಿಲ್ಲ.  ಅಲ್ಲಿ  ಯಾವುದೇ ವಿದ್ಯಾಭ್ಯಾಸದ ಮತ್ತು  ವೃತ್ತಿ ಸಂಭಂಧದ  ತರಬೇತಿ  ಇರಲಿಲ್ಲ .  ಮತ್ತು  ಮಕ್ಕಳನ್ನು  ಅವರವರ ಕುಟುಂಬಗಳಿಗೆ  ಮರಳಿ ಸೇರಿಸುವ ಕೆಲಸವನ್ನು  ಯಾರೂ ಮಾಡಿರಲಿಲ್ಲ.  ಆರೋಗ್ಯದ ಕಾಳಜಿಯೂ  ಅತೀ ವಿರಳವಾಗಿತ್ತು. ಮತ್ತು ವಿಭಿನ್ನ ಕುಶಲತೆಯ ಮಕ್ಕಳ ನ್ನು ಕುರಿತು ಯಾವುದೇ ಕಾಳಜಿ ಇರಲಿಲ್ಲ.


ಅಲ್ಲಿಯ  ಸಿಬ್ಬಂದಿಗೆ  ಬಾಲಪರಾಧಿ ಕಾಯ್ದೆ ಮತ್ತು ನಿಯಮಗಳ ಬಗ್ಗೆ  ಜಾಗೃತಿ ಇರಲಿಲ್ಲ .  ಮತ್ತು  ಮಕ್ಕಳ ಕಾಳಜಿಯ ಬಗ್ಗೆ ಯಾವುದೇ  ಯೋಜನೆ ಕೂಡ  ಇರಲಿಲ್ಲ.  ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ  ಸಂಬಳವನ್ನು ಕೊಡುತ್ತಿರಲಿಲ್ಲ ವೆಂದು ಕಂಡು ಬಂದಿತು . ಮತ್ತು ಅವರು ಅಲ್ಲಿಯ  ಸಹವಾಸಿಗಳಿಗೆ ಕನಿಷ್ಟ ಬೇಡಿಕೆ ಮಾತ್ರ ಪೂರೈಸಿ  ತಮ್ಮ ತಮ್ಮ  ಕೆಲಸ ಮಾಡುತ್ತಿದ್ದರು.  ಈ  ಪರಿಸ್ಥಿತಿಯನ್ನು  ಝಾರಖಂಡದ ಹೈಕೋಟಿ೯ನ ಗಮನಕ್ಕೆ   ತರಲಾಗಿತ್ತು.    ಮತ್ತು ವ್ಯವಸ್ಥೆಯಲ್ಲೇ ಇರುವವರಿಗೆ ನಿಯಮಗಳನ್ನು ಹೇಗೆ ಕಾಯ೯ಗತಗೊಳಿಸಬೇಕೆಂದು ತರಬೇತಿ ಕೊಡಲು  ಒಂದು ತಜ್ಞರ ವಿಚಾರ ಅಂಕಿರಣವನ್ನು  ಏಪ೯ಡಿಸಲಾಗಿತ್ತು.  ನ್ಯಾಯಾಧೀಶರ ಸಮೂಹದ ಸಹಾಯದ ಮುಖಾಂತರ ಸಭೆಗಳನ್ನು ಏಪ೯ಡಿಸಿ  ಝಾರಖಂಡದ ಈ ಗೃಹಗಳ ಅವಸ್ಥೆಯನ್ನು ಹೇಗೆ ಸುಧರಿಸಬಹುದೆಂದು  ಚಚಿ೯ಸಲಾಯಿತು.  ಅಲ್ಲಿನ  ಅಂದಿನ ಮುಖ್ಯ ಮಂತ್ರಿಗಳನ್ನು  ಭೆಟ್ಟಿ ಮಾಡಿ  ಮಕ್ಕಳ ಬೇಡಿಕೆಗಳ  ಬಗ್ಗೆ ಗಮನ ಸೆಳೆಯಲಾಗಿತ್ತು.   ಮಕ್ಕಳನ್ನು  ರಾಂಚಿಯ  ಹಾತಿಯಾ  ಸಂಸ್ಥೆಯಿಂದ ನಂಕುಮ್ ಮಹಿಳೆಯರ ನವೀಕರಿಸಿದ ವಸತಿಗೄಹಕ್ಕೆ  ಸ್ಥಳಾಂತರಿಸಲಾಯಿತು.  ನ್ಯಾಯಾಧೀಶರ  ಸಮೂಹ ಮತ್ತು ಸ್ವಯಂ ಸೇವಕರು ಅಲ್ಲಿ  ಕನಿಷ್ಟ  ಪ್ರಮಾಣವನ್ನು  ಕಾಯ೯ರೂಪದಲ್ಲಿರುವಂತೆ ಮಾಡಿದರು.

ಕಾಯ೯ನಿವಾ೯ಹಕ  ಮಂಡಳಿ, ಜಿಲ್ಲಾ ನ್ಯಾಯಾಧೀಶರ  ಸಮೂಹ  ಮತ್ತು ಹೈಕೋಟ೯ನ ಸಹಾಯ ಮತ್ತು ಸೌಹಾದ೯ತೆಯಿಂದ ಅನೇಕ ಮಕ್ಕಳನ್ನು ಅವರವರ ಪಾಲಕರಿಗೆ ಮುಟ್ಟಿಸಲಾಯಿತು. ಔಪಚಾರಿಕ ಶಿಕ್ಷಣ ವ್ಯವಸ್ಥೆಯನ್ನು   ಪ್ರಾರಂಭ ಮಾಡಲಾಯಿತು.    ಮತ್ತು   ಮಕ್ಕಳನ್ನು  ಶಾಲೆಗೆ  ಸೇರಿಸುವ ಮುನ್ನ ಅವರನ್ನು ಸೇತುಬಂಧ ಪಠ್ಯಕ್ರಮಕ್ಕೆ ಹಾಕಲಾಯಿತು.   ವಿಶೇಷವಾದ ಮಕ್ಕಳನ್ನು  ಸಕಾ೯ರೇತರ  ಸಂಸ್ಥೆ ನಡೆಸುವ   ‘ ದೀಪ್ ಶಿಖಾ ’ ವಿಶೇಷ ಶಾಲೆಗೆ ದಾಖಲಿಸಲಾಯಿತು.  ಅವರಿಗೆ ಆರೋಗ್ಯ  ಚಿಕಿತ್ಸೆಯನ್ನು  ಪೂರೈಸಲಾಗಿತ್ತು ಮತ್ತು ವೃತ್ತಿಪರ   ತರಬೇತಿಯನ್ನು  ಕೂಡ ಕ್ರಮಗೊಳಿಸಲಾಯಿತು.    ಈ ಗೃಹವನ್ನು  ಈಗ ನಮಕುಂ ಮಹಿಳೆಯರ ಪರೀಕ್ಷಣ ಗೃಹ ಎಂದು  ಕರೆಯಲ್ಪಡುತ್ತದೆ.  ಮತ್ತು  ಇಲ್ಲಿ  ಮಕ್ಕಳು ಕೇವಲ ಜೀವದಿಂದಿರುವ ಬದಲಾಗಿ ‘ ಜೀವಕಳೆ ’ ಯಿಂದ ಇದ್ದಾರೆ.


ಅಲ್ಲಿಯ ಸಿಬ್ಬಂದಿ  ಒಂದು ದೊಡ್ಡ ಪ್ರಮಾಣದ ಬೆಂಬಲದಿಂದ  ಕಾಶಳಜಿ ವಹಿಸುವ ಗುಂಪಾಗಿ ಬದಲಾದರು. ಅವರಿಗೆ ಮೇಲಿಂದ ಮೇಲೆ ಉತ್ತೇಜನ ಮತ್ತು  ಎಚ್ಚರಿಕೆ  ಅಗತ್ಯವಾಗಿತ್ತು..  ಝಾರಖಂಡ ಕಾನೂನು ಸೇವಾ ಪ್ರಾಧಿಕಾರವು  ಕಾನೂನಿನ ಸಹಾಯ ಕೊಡುವುದರಿಂದ ಮತ್ತು ಮಕ್ಕಳ ಕಾನೂನು  ವ್ಯಾಜ್ಯಗಳ  ವಿಚಾರಣೆಗಳನ್ನು ತ್ವರಿತ ಗೊಳಿಸಲು  “ ಬಾಲ-ಅದಾಲತ  ”  ಗಳ ನಿಮಾ೯ಣದ ಮೂಲಕ ಬಹಳಷ್ಟು ಸಹಾಯ ಮಾಡಿತು.
ಈ ಹಾತಿಯದ ಕಥೆಯು ಹೇಗೆ ಕಾರ್ಯಾಂಗ, ನ್ಯಾಯಾಂಗ ಮತ್ತು  ಪ್ರಾದೇಶಿಕ ಸಮುದಾಯವು ಜೊತೆಗೂಡಿ ಮಕ್ಕಳ ಹಕ್ಕು ರಕ್ಷಣೆಯ ಕಾಯ೯ವನ್ನು ಹೇಗೆ ನಿವ೯ಹಿಸ ಬೇಕು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate