ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಾಲದುಡಿಮೆ

ಬಾಲದುಡಿಮೆಯನ್ನು ನಿಷೇಧಿಸಲು ಮಾರ್ಗಸೂಚಿಗಳು

ಬಾಲದುಡಿಮೆಯನ್ನು ನಿಷೇಧಿಸಲು ಮಾರ್ಗಸೂಚಿಗಳು
  • ಬಾಲದುಡಿಮೆ (ನಿಷೇಧ ಮತ್ತು ನಿಯಂತ್ರಣ ವಿನಿಯಮ) ಅಧಿಸೂಚನೆ 1986 ರಂತೆ 15 ಉದ್ಯೋಗಗಳು ಮತ್ತು 57 ಸಂಸ್ಕರಣಾ ಉದ್ಯಮಗಳಲ್ಲಿ ಬಾಲದುಡಿಮೆಯನ್ನು ನಿಷೇಧ ಮಾಡಲಾಗಿದೆ. ಈ ವಿಷಯವಾಗಿ ಕಾರ್ಮಿಕ ಇಲಾಖೆಯು ಉದ್ಯೋಗ ನೀಡುವ ಎಲ್ಲರಿಗೂ ಹಾಗೂ ಉದ್ಯಮಿಗಳಾಗ ಬಯಸುವವರಿಗೆ ಬಿಗಿಯಾದ ಎಚ್ಚರಿಕೆ ನೀಡಬೇಕು. ಕ್ಷೇತ್ರವಾರು, ಚಲಿಸುವ ಕಾರ್ಮಿಕ ನ್ಯಾಯಾಲಯಗಳ ಮೂಲಕ ಇದನ್ನು ಒಂದು ಆಂದೋಲನದ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕು ಮತ್ತು ಈಗಾಗಲೇ ದಾಖಲಿಸಿರುವ ಪ್ರಕರಣಗಳನ್ನು ಸೂಕ್ತವಾಗಿ ಮುನ್ನಡೆಸಲು ಒಂದು ಕಾರ್ಯಯೋಜನೆಯನ್ನು ರೂಪಿಸಬೇಕು.
  • ಬಾಲ ನ್ಯಾಯಾಲಯ ಅಧಿನಿಯಮ 2006 ಒಂದು ಕಲ್ಯಾಣಕಾರಿ ಅಧಿನಿಯಮವಾಗಿದ್ದು ಇವನ್ನು ಅಲಕ್ಷಿತ ಬಾಲಾಪರಾಧಿಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಪುನರ್ವಸತಿಗಳನ್ನು ನೀಡಲು ಜಾರಿಗೊಳಿಸಿದ್ದು ಇದರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರೂ ಸೇರುತ್ತಾರೆ.
  • ವಿಭಾಗ 2(d) (ia) ರಂತೆ, ’ದುಡಿಯುವ ಮಗು’, ’ರಕ್ಷಣೆ ಮತ್ತು ಪೋಷೆಯ ಅಗತ್ಯವಿರುವ ಒಂದು ಮಗು’ ವಿನ ಪರಿಭಾಷಯಲ್ಲಿ ಸೇರುತ್ತದೆ. ಜೆ.ಜೆ ಅಧಿನಿಯಮದ ವಿಭಾಗ 2(k) ದಲ್ಲಿ ’ಮಗು’ವನ್ನು ’ 18 ವರ್ಷಗಳನ್ನು ಪೂರೈಸದ ವ್ಯಕ್ತಿ’ ಎಂದು ಪರಿಭಾಷಿಸಲಾಗಿದೆ. ಇದರಿಂದಾಗಿ, 14 ವರ್ಷದವರೆಗಿನ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಳ್ಳುವುದನ್ನು ನಿಷೇಧಿಸುವ ಬಾಲದುಡಿಮೆ ಅಧಿನಿಯಮಕ್ಕಿಂತ ಈ ನಿಯಮದ ವ್ಯಾಪ್ತಿ ಹೆಚ್ಚಾಗಿದ್ದು 18 ವರ್ಷದ ವರೆಗಿನ ಎಲ್ಲ ಮಕ್ಕಳಿಗೂ ರಕ್ಷಣೆ ಪೋಷಣೆ ನೀಡುವುದನ್ನು ಒಳಗೊಂಡಿದೆ. ಅಂದರೆ ಬಾಲದುಡಿಮೆ ಅಧಿನಿಯಮದಡಿ ನಿಷೇಧಕ್ಕೆ ಒಳಗಾಗದ ಬಾಲದುಡಿಮೆ, ಜೆ.ಜೆ ಅಧಿನಿಯಮದಡಿ ನಿಷೇಧಕ್ಕೆ ಒಳಗಾಗಿದೆ.
  • ಜೀತಪದ್ಧತಿಯ ನಿಷೇಧ ಅಧಿನಿಯಮ 1976 ನ್ನು ಮಕ್ಕಳನ್ನು ದುಡಿಮೆಯೊಳಗೆ ತೊಡಗಿಸಿಕೊಳ್ಳುವ ಉದ್ದಿಮೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬಳಸಲೇಬೇಕು. ಬಹಳಷ್ಟು ಮಕ್ಕಳನ್ನು ಒತ್ತೆಯಿಟ್ಟು ಅವರ ಕುಟುಂಬಗಳು ಮುಂಗಡ ಪಡೆದಿರುವ ಪ್ರಕರಣಗಳ್ನು ಗಮನಿಸಲಾಗಿದೆ. ಅಂತಹ ಮಕ್ಕಳು ಬಹುತೇಕವಾಗಿ ವಲಸಿಗರಾಗಿ ದುಡಿಯುತ್ತಿದ್ದಾರೆ. ಈ ಅಧಿನಿಯಮದ ಅಡಿಯಲ್ಲಿ ಬರುವ ಕಣ್ಗಾವಲು ಸಮಿತಿಗಳನ್ನು ಕ್ರಿಯಾಶೀಲಗೊಳಿಸಬೇಕಲ್ಲದೆ, ಕಂದಾಯ ಹಾಗೂ ಕಾರ್ಮಿಕ ಇಲಾಖೆಗಳು ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಈ ಅಧಿನಿಯಮದಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲದಿರುವುದನ್ನು ಗುರುತಿಸಿಕೊಳ್ಳಬೇಕು ಮತ್ತು ಮುಂಗಡವಾಗಿ ಯಾವ ಸಾಲವನ್ನೂ ನೀಡಿಲ್ಲ ಎಂಬ ಪುರಾವೆಯನ್ನು ಒದಗಿಸುವ ಭಾರ ಉದ್ಯಮದಾರನದಾಗಿರುತ್ತದೆ.
  • ಜತೆಗೆ ಒಬ್ಬ ಗುತ್ತಿದೆದಾರನ ಮೂಲಕ ಬಾಲಕರನ್ನು ದುಡಿಮೆಗೆ ಹಚ್ಚಿರುವ ಪ್ರಕರಣಗಳಲ್ಲಿ ಪ್ರಧಾನ ಉದ್ದಿಮೆದಾರನನ್ನು ಬಾಲದುಡಿಮೆಯ ಗುತ್ತಿಗೆ (ನಿಷೇಧ ಮತ್ತು ನಿಯಂತ್ರಣ) ಅಧಿನಿಯಮ 1970 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು. ಗುತ್ತಿಗೆದಾರರ ಮೂಲಕ ಮಕ್ಕಳನ್ನು ದುಡಿಮೆಗೆ ದೂಡುವ ಈ ಚಾಳಿಯು ಸಾಮಾನ್ಯವಾಗಿದ್ದು ಅನೇಕ ಉದ್ಯಮಿ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಈ ಮಾರ್ಗವನ್ನು ಅನುಸರಿಸುತ್ತವೆ. ಈ ಅಧಿನಿಯಮವು ’ಬದಲಿ ಹೊಣೆಗಾರಿಕೆಯ’ ನೀತಿಯನ್ನಾಧರಿಸುತ್ತವೆ ಮತ್ತು ಉದ್ಯಮ ಸಂಸ್ಥೆಗಳು ಮತ್ತು ಗುತ್ತಿದೆದಾರರನ್ನು ಬಾಲದುಡಿಮೆ ಕೈಗೊಳ್ಳದಂತೆ ನಿರ್ಬಂಧಿಸಲು ಈ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಬಳಸಬಹುದು..


ಈ ಮೇಲೆ ಹೇಳಿದ ಎಲ್ಲ ಅಧಿನಿಯಮಗಳನ್ನು ಒಟ್ಟಾಗಿ ಸೇರಿಸಿ ಗಮನಿಸಿದಾಗ ಬೇಸಾಯ ವೃತ್ತಿ ಮತ್ತು ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಒಳಗೊಂಡಂತೆ, ಕಾರ್ಮಿಕ ಬಲದಲ್ಲಿರುವ ಬಹುತೇಕ ಮಕ್ಕಳನ್ನು ಆವರಿಸುತ್ತವೆ ಮತ್ತು ಸಂಬಂಧಿಸಿದ ಉದ್ಯಮದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಇವುಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಬಳಸಲೇಬೇಕಾಗುತ್ತದೆ. ನಿಯಮಾವಳಿಗಳನ್ನು ಕಠಿಣವಾಗಿ ಜಾರಿಗೊಳಿಸುವುದೇ ಉದ್ಯಮದಾರರು ಅದರಿಂದ ವಿಮುಖರಾಗಲು ಕಾರಣವಾಗುವುದೆಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಮಕ್ಕಳು ಅಗ್ಗದ ದುಡಿಮೆಗೆ ಲಭ್ಯರು ಮತ್ತು ಅವರನ್ನು ಹೆಚ್ಚು ಅವಧಿಯವರೆಗೆ ದುಡಿಸಿಕೊಳ್ಳಲು ಸಾಧ್ಯ ಎಂಬ ಅಂಶಗಳೇ ಬಾಲದುಡಿಮೆಗೆ ಕಾರಣವಾಗಿದೆ. ಇದು ಮಕ್ಕಳಿಗೆ ಉದ್ಯಮದಾರರು ಮಾಡುತ್ತಿರುವ ಉಪಕಾರವೇನೂ ಅಲ್ಲ. ಬದಲಿಗೆ ತಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳುವ ಒಂದು ಮಾರ್ಗ. ಇದಲ್ಲದೆ, ಸಾರ್ವಜನಿಕ ವಲಯದ ಎಲ್ಲ ಸಂಸ್ಥೆಗಳು, ಸರ್ಕಾರದ ಅಧೀನ ಸಂಸ್ಥೆಗಳು, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳು ತನ್ನೆಲ್ಲ ಸಿಬ್ಬಂದಿಗೆ ಮಕ್ಕಳನ್ನು ಮನೆ ಕೆಲಸಕ್ಕೆ ನೇಮಿಸದಂತೆ ಅಥವಾ ತಮ್ಮ ಕಾರ್ಯಸ್ಥಳದಲ್ಲಿ ಯಾವುದೇ ತರಹದಲ್ಲಿ ಬಾಲದುಡಿಮೆಯನ್ನು ಪ್ರೋತ್ಸಾಹಿಸದಂತೆ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಘೋಷಿಸ ಬೇಕು. ಮೇಲೆ ಹೇಳಿದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ಅನುವಾಗುವಂತೆ ನಿರ್ದಿಷ್ಟ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಲು NCPCR ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದೂರದರ್ಶನ ಕಾರ್ಯಕ್ರಮಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಭಾಗವಹಿಸುವ ಮಕ್ಕಳ ವಿಷಯಕ್ಕೆ ಸಂಬಂಧಿಸಿದ ಹಾಗೆ NCPCR ಗೆ ಒಂದು ಕಾರ್ಯಸಮೂಹವನ್ನು ನೇಮಕಮಾಡಿದೆ. ಹಿಂದಿನ ಬಾಲತಾರೆ ಸಚಿನ್ ಪಿಲಗಾಂವ್ ಕರ್ ಮತ್ತು ಜಾಹೀರಾತು ತಜ್ಞ ಪ್ರಲ್ಹಾದ ಕಕ್ಕರ್ ಅಲ್ಲದೆ ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಂದ ಪ್ರತಿನಿಧಿಗಳು ಈ ಕಾರ್ಯ ಸಮೂಹದಲ್ಲಿ ಸೇರಿದ್ದಾರೆ. ದೂರದರ್ಶನದ ಸರಣಿಗಳು, ರಿಯಾಲಿಟಿಷೋಗಳು ಮತ್ತು ಜಾಹೀರಾತುಗಳಲ್ಲಿ ಪಾಲ್ಗೊಳ್ಳುವ ಮಕ್ಕಳ ಹಕ್ಕುಗಳ ಆಬಾಧಿತ ಉಲ್ಲಂಘನೆಯನ್ನು ನಿಯಂತ್ರಿಸುವ ಅಗತ್ಯವನ್ನು ಈ ಸದಸ್ಯರು ಚರ್ಚಿಸಿದ್ದಾರೆ. NCPCR ನ ಸದಸ್ಯೆ ಸಂಧ್ಯಾ ಬಜಾಜ್ ಇಂತಹ ಮಕ್ಕಳ ಕಾರ್ಯಸ್ಥಿತಿಗಳನ್ನು ನಿಯಂತ್ರಿಸಲು ಮಾರ್ಗಸೂಚಿಕೆಗಳನ್ನು ಸಿದ್ಧಪಡಿಸಲು ಒಂದು ಪ್ರಸ್ತಾಪವನ್ನಿಟ್ಟಿದ್ದಾರೆ. ಎಲ್ಲ ದೂರದರ್ಶನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಪ್ರತೀ ದಿನ ಕೆಲಸಮಾಡಬೇಕಾದ ಒಟ್ಟು ಗಂಟೆಗಳು ಹಾಗೂ ಒಂದು ವರ್ಷದಲ್ಲಿ ಮಾಡಬಹುದಾದ ಒಟ್ಟು ಅವಧಿಯನ್ನು ನಿರ್ದಿಷ್ಟಗೊಳಿಸಬೇಕು. ಮಕ್ಕಳು ಮತ್ತವರ ಕುಟುಂಬಗಳು ದಾಖಲಿಸಿದ ದೂರುಗಳನ್ನು ನಿರ್ವಹಿಸಲು ಒಂದು ವ್ಯವಸ್ಥೆಯನ್ನು ಅಳವಡಿಸಲು ಸಹ ನಿರ್ಧರಿಸಲಾಯಿತು; ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ದೂರದರ್ಶನ ಚಾನೆಲ್ ಗಳು / ನಿರ್ಮಾಣ ಸಂಸ್ಥೆಗಳ ವಿರುದ್ಧ ಕ್ರಮಗಳನ್ನು ನಿರೂಪಿಸುವುದು; ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ ದೂರದರ್ಶನ ಕಾರ್ಯಕ್ರಮಗಳ ಆಯೋಜಕರು ಹಾಗೂ ಮಕ್ಕಳ ಪೋಷಕರ ಜವಾಬ್ದಾರಿಗಳನ್ನು ನಿರೂಪಿಸುವುದು: ಮಕ್ಕಳಿಗೆ ಸಂದಾಯವಾಗ ಬೇಕಾದ ಹಣಕ್ಕೆ ಸೂಕ್ತ ವ್ಯವಸ್ಥೆ – ಉದಾಹರಣೆಗೆ ಶೈಕ್ಷಣಿಕ ಬಾಂಡ್ ಗಳೂ/ ಸರ್ಟಿಫಿಕೇಟ್ ಗಳು ಮತ್ತು ಕೊನೆಯದಾಗಿ ಈ ಮಾರ್ಗಸೂಚಿಕೆಗಳ ಪರಿಷ್ಕರಣೆಗೆ ಒಂದು ವ್ಯವಸ್ಥೆ ರೂಪಿಸುವುದು. ಕಾರ್ಯಪಡೆಯು, ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳನ್ನು ಮುಂದಿನ ಕ್ರಮಗಳಿಗಾಗಿ ಭೇಟಿಮಾಡುವರು.

ಮೂಲ: ಪೋರ್ಟಲ್ ತಂಡ

3.0
ravi iyengar Mar 12, 2016 05:49 PM

ತುಂಬಾ ಉತ್ತಮವಾದ ಮಾಹಿತಿ ನೀದೆದ್ದೆರ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top