অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೀದಿ ಮತ್ತು ಓಡಿಬಂದ ಮಕ್ಕಳು

ಜುವೆನೈಲ್  ಜಸ್ಟೀಸ್ ( ಕೇರ್ ಅಂಡ್ ಪರೊಟೆಕ್ಷನ್) ಕಾಯಿದೆ 2000

ಜುವೆನೈಲ್  ಜಸ್ಟೀಸ್ ( ಕೇರ್ ಅಂಡ್ ಪರೊಟೆಕ್ಷನ್) ಕಾಯಿದೆ 2000 ಇದು ಜುವೆನೈಲ್ ಅಥವ ಮಕ್ಕಳ ( ೧೮ ವರ್ಷ ಆಗದವರು) ಬಗೆಗೆ ಇರುವುದು

 • ಆರೈಕೆ ಮತ್ತು ರಕ್ಷಣೆ ಅಗತ್ಯವಿರುವವರು.
 • ಕಾನೂನಿನ ಜೊತೆಯಲ್ಲಿ ಸಂಘರ್ಷಣೆಯಲ್ಲಿರುವವರು.

ಆರೈಕೆಯ  ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು

2 (ಡಿ ),  ಪ್ರಕಾರ  “ ಆರೈಕೆ ಮತ್ತು  ರಕ್ಷಣೆಯ ಅಗತ್ಯವಿರುವ  ಮಗು ”  ಎಂದರೆ ಯಾವ ಮಗುವು.

 • ಮನೆಯಿಲ್ಲದೆ  ಅಥವ  ಬದುಕಲು ಸೌಲಭ್ಯವಿಲ್ಲದೆ  ಇರುವವನು.
 • ತಾಯಿತಂದೆ ಅಥವ ಪೋಷಕರು ನೋಡಿಕೊಳ್ಳಲಾರದೆ ಇರುವವರು.
 • ಅನಾಥ ಅಥವ ತಾಯಿತಂದೆ ತೊರೆದವ ಅಥವ ಓಡಿ ಬಂದವ ಅಥವ ಕಳೆದುಹೋದವ,  ಎಷ್ಟು ಹುಡುಕಿದರೂ ತಾಯಿತಂದೆ  ಸಿಗಲಾರದವ
 • ದುರ್ಬಳಕೆ, ಚಿತ್ರಹಿಂಸೆ, ಲೈಂಗಿಕ ಹಾಗೂ ಇತರವ ಶೋಷಣೆಗೆ ಕಾನುನು ಬಾಹಿರ ಕೆಲಸಕ್ಕೆ ಗುರಿಯಾದವ, ಅಥವ ಆಗುವ ಭಯ ಇರುವವ.
 • ಮಾದಕ  ದ್ರವ್ಯ ದುರ್ಬಳಕೆ ಅಥವ ಸಾಗಣೆಯ ಅವಕಾಶಕ್ಕೆ ಗುರಿಯಾಗಬಹುದಾದವ.
 • ದುರ್ಬಳಕೆಯಾದವ ಮತ್ತು ಆಗಬಹುದಾದವ.
 • ಸಶಸ್ತ್ರ ಸಂಘರ್ಷ , ನಾಗರೀಕ ಗಲಭೆ ನೈಸರ್ಗಿಕ ವಿಕೋಪಕ್ಕೆ ಬಲಿಯಾದವ.

ಶಿಶು ಕಲ್ಯಾಣ ಸಮಿತಿ

 • ಕಾನೂನಿನ ಪ್ರಕಾರ ಪ್ರತಿಯೊಂದು ರಾಜ್ಯವೂ  ಒಂದೊಂದು ಜಿಲ್ಲೆಗೂ ಅಥವ ಜಿಲ್ಲೆಗಳಗುಂಪಿಗೂ ಒಂದು ಅಥವ ಹೆಚ್ಚು ಶಿಶುಕಲ್ಯಾಣ ಸಮಿತಿಗಳನ್ನು ಮಕ್ಕಳ ಆರೈಕೆ,  ಚಿಕಿತ್ಸೆ, ರಕ್ಷಣೆ ಅಭಿವೃದ್ಧಿ, ಪುನರ್ವಸತಿಗೆ ಸಂಬಂಧಿಸಿದ ಮೊಕದ್ದಮೆಗಳನ್ನು ಕೈಗೆತ್ತಿಕೊಳ್ಳಲು, ಅಗತ್ಯವಿದ್ದ ಮಕ್ಕಳಿಗೆ  ಮೂಲಭೂತ ಸೌಕರ್ಯಗಳನ್ನು ,ಜತೆಗೆ ಅವರ ಮಾನವ ಹಕ್ಕುಗಳ ರಕ್ಷಣೆ ಮಾಡಲು ರಚಿಸಬೇಕೆಂದಾಗಿದೆ
 • ಸಮಿತಿಯ ಮುಂದೆ ಹಾಜರುಪಡಿಸುವುದು

ವಿಶೇಷ ಬಾಲ ಆರಕ್ಷ ಘಟಕವು  ಇಲ್ಲವೆ ಸೂಕ್ತ  ಪೋಲೀಸು ಅಧಿಕಾರಿಯು, ಮಕ್ಕಳ ಸಹಾಯವಾಣಿ, ನೊಂದಾಯಿತ ಸರಕಾರೇತರ ಸಂಸ್ಥೆ, ಸಮಾಜಿಕ ಕಾರ್ಯಕರ್ತ,ಅಥವ ಸರಕಾರದಿಂದ ಅಧಿಕಾರ ನೀಡಲಾದ ಸಾರ್ವಜನಿಕ ಹಿತಾಸಕ್ತಿಯುಳ್ಳ ನಾಗರೀಕ ಹಾಜರುಮಾಡಬಹುದು.  ಅಥವ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಗುವೇ ಸಮಿತಿಯ ಮುಂದೆ  ಸ್ವತಃ ಹಾಜರಾಗಬಹುದು.

ಶಿಶು ಕಲ್ಯಾಣ ಸಮಿತಿಯು ಮಗುವನ್ನು ಶಿಶು ಸಂರಕ್ಷಣಾ ಗೃಹಕ್ಕೆ ಕಳುಹಿಸಲು ಆದೇಶ ನೀಡಬಹುದು ಮತ್ತು ಒಬ್ಬ ಸಾಮಾಜಿಕ ಕಾರ್ಯ ಕರ್ತನಿಂದ ಇಲ್ಲವೆ ಅಧಿಕಾರಿಯಿಂದ  ತ್ವರಿತ ವಿಚಾರಣೆಗೆ ಆದೇಶ ಕೊಡಬಹುದು.  ವಿಚಾರಣೆ ಮುಗಿದ ಮೇಲೆ ಸಮಿತಿಯು ಅಭಿಪ್ರಾಯದಲ್ಲಿ ಮಗುವಿಗೆ ಕುಟುಂಬವಿಲ್ಲ ಮತ್ತು ಸೂಕ್ತ ಆಸರೆ ಇಲ್ಲ  ಎಂದಾದರೆ, ಮಗುವನ್ನು ಶಿಶು ಸಂರಕ್ಷಣಾ ಗೃಹದಲ್ಲಿ ಅಥವ  ಆಸರೆಯಲ್ಲಿ ಪುನರ್ವ್ಯವಸ್ಥೆ ಆಗುವವರೆಗೆ ಅಥವಾ ಅದು ೧೮ ವರ್ಷ ವಯಸ್ಸಾಗುವವರೆಗೆ ಇರಿಸಬಹುದು

ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳು

“ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳು”  ಎಂದರೆ ಅಪರಾಧ ಮಾಡಿರುವನು ಎಂದು ಆರೋಪಿತನಾದ ಮಗು..

ಬಾಲ ನ್ಯಾಯ ಮಂಡಳಿ

 • ರಾಜ್ಯ ಸರಕಾರವು  ಒಂದೊಂದು ಜಿಲ್ಲೆಗೂ ಅಥವ ಜಿಲ್ಲೆಗಳಗುಂಪಿಗೂ ಒಂದು ಅಥವ ಹೆಚ್ಚು ಬಾಲ ನ್ಯಾಯ ಮಂಡಳಿಗಳನ್ನು ಕಾನೂನಿನೊಡನೆ ಸಂಘರ್ಶಕ್ಕಿಳಿದ ಮಕ್ಕಳಿಗಾಗಿ ಮತ್ತು ಅವರಿಗೆ ಜಾಮೀನು ಪಡೆಯಲು  ಮತ್ತು  ಮಗುವಿನ ಹಿತಾಸಕ್ತಿಯನ್ನು ಗರಿಷ್ಟವಾಗಿ ಕಾಪಾಡುವಂತೆ ಮೊಕದ್ದಮೆಯನ್ನು ಮುಕ್ತಾಯಗೊಳಿಸಲು ರಚಿಸವುದು

ಮಾದಕ ವಸ್ತುಗಳ ದುರ್ಬಳಕೆ

 • ದ ನಾರ್ಕೊಟಿಕ್ ಡ್ರಗ್ಸ ಅಂಡ್ ಸಯಕೋಟ್ರೊಪಿಕ್ ಸಬಸ್ಟೆನ್ಸ ಆಕ್ಟ,   1985
 • ಈ ಕಾನೂನು  ನಾರ್ಕೊಟಿಕ್ ಡ್ರಗ್ಸ ಅಂಡ್ ಸಯಕೋಟ್ರೊಪಿಕ್ ಸಬಸ್ಟೆನ್ಸಗಳ ನಿಯಮ ಬಾಹಿರ  ಉತ್ಪಾದನೆ , ಹೊಂದಿರುವುದು, ಸಾಗಣೆ ,ಕೊಳ್ಳುವುದು ಮಾರುವುದು  ಮತ್ತು ವ್ಯಕ್ತಿಯನ್ನು ಚಟದ ದಾಸನನ್ನಾಗಿಸುವುದು/ಸಾಗಣಿಕೆದಾರನ್ನನಾಗಿಸುವುದು ಶಿಕ್ಷಾರ್ಹವಾಗಿದೆ
 • ವ್ಯಕ್ತಿಯು ಹಿಂಸೆಯ ಬೆದರಿಕೆ ಹಾಕುವುದು  ಅಥವ ಆಯುಧಗಳಿಂದ ಬೆದರಿಸುವುದು     ಅಪರಾಧ ಮಾಡಲು ಅಪ್ರಾಪ್ತರನ್ನು  ಬಳಸುವುದು, ಶಿಕ್ಷಣ ಸಂಸ್ಥೆ ಅಥವ ಸಾಮಾಜಿಕ ಸೇವಾ ಸೌಲಭ್ಯ ನೀಡುವಲ್ಲಿ   ಬಳಸುವುದು ಹೆಚ್ಚಿನ   ಶಿಕ್ಷೆ ನೀಡಲು ಆಧಾರವಾಗಬಹುದು
 • ನಾರ್ಕೊಟಿಕ್ ಡ್ರಗ್ಸ ಅಂಡ್ ಸಯಕೋಟ್ರೊಪಿಕ್ ಸಬಸ್ಟೆನ್ಸಗಳ  ಕಾನೂನು ಬಾಹಿರ ಸಾಗಣೆ ತಡೆ ಆಕ್ಟ, 1988
 • ಈ ಕಾನೂನಿನ ಕೆಳಗೆ    ಮಕ್ಕಳನ್ನು ಮಾದಕ ವಸ್ತುಗಳ ಸಾಗಣಿಕೆಗೆ ಬಳಸುವವರನ್ನು  ಆ ಕೆಲಸದ  ಸಹಾಯಕರು, ಸಂಚುದಾರರು  ಎಂದು  ಮೊಕದ್ದಮೆ ದಾಖಲುಮಾಡಬಹುದು.
 • ಜುವೆನೈಲ್ ಜಸ್ಟೀಸ್  (  ಕೇರ್ ಅಂದ್ ಪ್ರೊಟೆಕಷನ್ ಅಫ್ ಚಿಲ್ಡ್ರನ್ಸ)  ಆಕ್ಟ,  2000
 • ಪ್ರಕರಣ (ಸೆಕ್ಷನ್) 2 (d) ನ  ನಿರೂಪಿಸುವಂತೆ ಯಾವ ಮಗುವನ್ನು  ಮಾದಕ ವಸ್ತುವಿಗೆ , ಸಾಗಾಣಿಕೆಗೆ  ಬಳಸಬಹುದಾದ ಸಾಧ್ಯತೆ ಇದೆಯೋ ಅದನ್ನು’ ಆರೈಕೆ ಮತ್ತು  ರಕ್ಷಣೆ ಅಗತ್ಯವಿರುವ ಮಗು.’ ಎಂದು ಪರಿಗಣಿಸಲಾಗುವುದು

ಬಾಲ್ಯದಲ್ಲಿ ಭಿಕ್ಷಾಟನೆ

 • ಮಕ್ಕಳನ್ನು ಭಿಕ್ಷೆ ಬೇಡಲು ಒತ್ತಾಯಮಾಡಿದರೆ, ಅದಕ್ಕಾಗಿ ಬಳಸಿದರೆ ಕೆಳಗಿನ ಅವಕಾಶಗಳನ್ನು ಬಳಸಬಹುದು :
 • ಜುವೈನಲ್ ಜಸ್ಟೀಸ್ ಆಕ್ಟ 2000
 • ಮಕ್ಕಳನ್ನು  ಭಿಕ್ಷೆ ಬೇಡಲು ನೇಮಿಸುವುದು ಅಥವ ಬಳಸುವುದು ಶಿಕ್ಷಿಸಬಹುದಾದ ವಿಶೇಷ ಅಪರಾಧ  (ಸೆಕಷನ್ 24).
 • ದ  ಜುವೈನಲ್ ಜಸ್ಟೀಸ್ ಕಾಯಿದೆಯು  ದುರ್ಬಳಕೆಯಾದ,   ಹಿಂಸೆಗೆ ಒಳಗಾದ,  ಕಾನೂನು ಬಾಹಿರ ಚಟುವಟಿಕೆಗಳಾದ ಭಿಕ್ಷೆ ಮೊದಲಾದವುಗಳಲ್ಲಿ ತೊಡಗಿಸಿದವರನ್ನು ‘ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು’ ಎಂದು ಗುರುತಿಸಲಾಗಿದೆ.

ಭಾರತೀಯ ದಂಡ ಸಂಹಿತೆ

 • ಅಪ್ರಾಪ್ತರನ್ನು ಭಿಕ್ಷೆಬೇಡಿಸಲು  ಅಪಹರಣ ಅಥವ  ಅಂಗ ಊನ ಮಾಡುವದು  ಶಿಕ್ಷಾರ್ಹವಾಗಿದೆ  ಸೆಕಷನ್ 363A of IPC.
 • ಬಾಲಾಪರಾಧಿ ಅಥವ    ಕಾನೂನಿನೊಡನೆ ಸಂರಘರ್ಷಕ್ಕಿಳಿದ ಮಕ್ಕಳು
 • ಅಪರಾಧ ಮಾಡಿದ ಮಕ್ಕಳಿಗೆ ವಯಸ್ಕರಿಗೆ  ನೀಡುವ  ಕಠಿನ ಶಿಕ್ಷೆಯಿಂದ ರಕ್ಷಣೆ ನೀಡಲಾಗಿದೆ. ಮತ್ತು ಅವರನ್ನು ಅಪರಾಧಿಗಳು ಎನ್ನುವ ಬದಲಾಗಿ ಕಾನೂನಿನೊಡನೆ ಸಂರಘರ್ಷಕ್ಕಿಳಿದ ಮಕ್ಕಳು,  ಬಾಲಾಪರಾಧಿಗಳು  ಎನ್ನುವರು(  ಕೇರ್ ಮತ್ತು ಪರೊಟೆಕ್ಷನ್  ಅಫ್ ಚಿಲ್ಡರನ್ಸ)ಕಾಯಿದೆ ೨೦೦೦
 • ಈ ಕಾನೂನಿನ ಅಡಿಯಲ್ಲಿ  ಕಾನೂನಿನೊಡನೆ ಸಂಘರ್ಷಕ್ಕಿಳಿದ  ಪ್ರತಿ ಮಗುವಿಗೆ  ಜಾಮಿನು ನೀಡುವುದು ಕಡ್ಡಾಯ . ಅದರಿಂದ ಅವನ ಜೀವಕ್ಕೆ , ನೆಮ್ಮದಿಗೆ ಗಂಡಾಂತರವಿದ್ದರೆ ಮಾತ್ರ ವಿನಾಯಿತಿ ಇದೆ.
 • ಅವನನ್ನು ಸೆರೆಮನೆಗೆ ಕಳುಹಿಸುವ  ಬದಲು,  ಕಾನೂನು  ಪರಿವರ್ತನಾ ಮಾರ್ಗ  ಅನುಸರಿಸುವುದು.ಮತ್ತು ಅವನಿಗೆ ಬುದ್ಧಿವಾದ , ಎಚ್ಚರಿಕೆ ನೀಡಿ  ಪ್ರೊಬೆಷನ್ ಮೇಲೆ ಬಿಡುಗಡೆ ಮಾಡುವುದು .ಅವನ ವಿಶೇಷ ಗೃಹದಲ್ಲಿ ಇಡುವುದು.

ಮೂಲ: ಪೋರ್ಟಲ್ ತಂಡ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate