ಬಾಲ್ಯವಿವಾಹ ತಡೆ ಕಾಯಿದೆ, 1929 ರ ಪ್ರಕಾರ ಬಾಲ್ಯ ಎಂದರೆಗಂಡಿಗೆ 21 ವರ್ಷ ವಯಸ್ಸು ಹೆಣ್ಣಮಗುವಿಗೆ ೧೮ ವರ್ಷ ಗಳಿಗಿಂತ ಕಡಮೆ ವಯಸ್ಸು (ಪ್ರಕರಣ 2(a)).

ಈ ಕಾಯಿದೆಯ ಅಡಿಯಲ್ಲಿ ಬರುವ ಅನೇಕರು ಶೀಕ್ಷಾರ್ಹರಾಗುವರು,

ಬಾಲ್ಯ ವಿವಾಹದ ಒಪ್ಪಂದಮಾಡಿಕೊಳ್ಳುವವರು, ನೆರವೇರಿಸುವವರು ,ಭಾಗಿಯಾಗುವವರು .ಅವರು ಕೇಳಗಿನಂತೆ ಇರುವರು :

ಒಬ್ಬಗಂಡಸು ಬಾಲ್ಯ ವಿವಾಹದ ಒಪ್ಪಂದ ಮಾಡಿಕೊಂಡರೆ, ಅವನು ೧೮ ವರ್ಷದ ಮೇಲೆ ೨೧ ವರ್ಷ ಒಳಗಿನ ವಯಸ್ಸಿನವನಾಗಿದ್ದರೆ ೧೫ ದಿನದ ವರೆಗಿನ ಸಾಮಾನ್ಯ ಸೆರೆವಾಸ ಅಥವ ೧೦೦೦ ರೂಪಾಯಿವರೆಗೆ ದಂಡ ಅಥವ ಎರಡೂ ಶಿಕ್ಷೆಗೆ ಗುರಿಯಾಗಬಹುದು. (ಪ್ರಕರಣ 3).

ಒಬ್ಬಗಂಡಸು ಬಾಲ್ಯ ವಿವಾಹದ ಒಪ್ಪಂದ ಮಾಡಿಕೊಂಡರೆ, ಅವನು ೨೧ ವರ್ಷದ ಮೇಲಿನ ವಯಸ್ಸಿನವನಾಗಿದ್ದರೆ ೩ ತಿಂಗಳವರೆಗಿನ ಸಾಮಾನ್ಯ ಸೆರೆವಾಸ ಮತ್ತು ದಂಡ ಅಥವ ಎರಡೂ ಶಿಕ್ಷೆಗೆ ಗುರಿಯಾಗಬಹುದು. (ಪ್ರಕರಣ 4 ).

ಒಬ್ಬವ್ಯಕ್ತಿಯು ಬಾಲ್ಯವಿವಾಹವನ್ನು ನೆರವೇರಿಸಿದರೆ ಅದು ಬಾಲ್ಯವಿವಾಹ ಎಂದು ನಂಬಲು ಕಾರಣವಿಲ್ಲ ಎಂದು ನಿರೂಪಿಸದಿದ್ದರೆ ಅವನಿಗೆ ತಿಂಗಳವರೆಗಿನ ಸಾಮಾನ್ಯ ಸೆರೆವಾಸ ಮತ್ತು ದಂಡ ಅಥವ ಎರಡೂ ಶಿಕ್ಷೆಗೆ ಗುರಿಯಾಗಬಹುದು. (ಪ್ರಕರಣ 5 )

ತಾಯಿ ತಂದೆಯರು ಅಥವ ಪೋಷಕರು ಮಗುವಿನ ಮದುವೆಗೆ ಅನುಮತಿಸಿದರೆ ಬೇಜಬ್ದಾರಿಯಿಂದ ತಡೆಯಲು ವಿಫಲರಾದರೆ ಅಥವ ಆ ಮದುವೆಯನ್ನು ಉತ್ತೇಜಿಸಿದರೆ ಶಿಕ್ಷಾರ್ಹನಾಗುವನು (ಪ್ರಕರಣ 6).

ಬಾಲ್ಯ ವಿವಾಹವನ್ನು ನಿಲ್ಲಿಸಬಹುದಾ?

ಬಾಲ್ಯ ವಿವಾಹವನ್ನು, ಬಾಲ್ಯ ವಿವಾಹ ತಡೆ ಕಾಯಿದೆ , 1929 ಪ್ರಕಾರ ಯಾರಾದರು ಪೋಲೀಸರಿಗೆ ಈ ರೀತಿಯ ಮದುವೆಯ ವ್ಯವಸ್ಥೆಯಾಗಿದೆ ಅಥವ ನಡೆಯಲಿದೆ ಎಂದು ದೂರು ನೀಡಿದರೆ, ಪೋಲೀಸರು ವಿಚಾರಣೆ ನಡೆಸಿ ವಿಷಯವನ್ನು ಮ್ಯಾಜಿಸ್ಟ್ರೇಟರಲ್ಲಿಗೆ ಒಯ್ಯುವರು. ಅವರು ಮದುವೆ ನಿಲ್ಲಿಸಲು ತಿಳಿಸಬಹುದು.. ಅದು ಮದುವೆ ನಿಲ್ಲಿಸಲು ಮಾಡಿದ ಆದೇಶ. ಅದನ್ನು ಉಲ್ಲಂಘಿಸಿದರೆ ಅವರಿಗೆ ೩ ತಿಂಗಳು ಸೆರೆವಾಸ ಮತ್ತು ೧೦೦೦ ರೂಪಾಯಿ ದಂಡದ ಶಿಕ್ಷೆಯಾಗುವುದು .ಬಾಲ್ಯವಿವಾಹವನ್ನು ಅದು ಆಗುವ ಮೊದಲೆ ನಿಲ್ಲಿಸಬೇಕು. ವಯಸ್ಸಿನ ಪರಿಮಿತಿಯ ಕಾನೂನು ಮೀರಿ ಆದ ಮದುವೆ ತನ್ನಷ್ಟಕ್ಕೆ ತಾನೆ ರದ್ದಾಗುವುದಿಲ್ಲ

ಮೂಲ: ಪೋರ್ಟಲ್ ತಂಡ