ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಾಮಾಜಿಕ ನ್ಯಾಯ

ಮಕ್ಕಳಿಗೆ ಎಲ್ಲ ಶೋಷಣೆಯ ಮತ್ತು ತೊಂದರೆಯಾಗುವ ಪರಿಸ್ಥಿತಿಯಿಂದ ರಕ್ಷಣೆ ಪಡೆವ ಹಕ್ಕು ಇದೆ. ಶಿಕ್ಷಕರಾಗಿ ನೀವು ಇವುಗಳನ್ನು ನಿಭಾಯಿಸಲು ತಿಳಿದಿರಬೇಕು.

ಮಕ್ಕಳಿಗೆ   ಎಲ್ಲ ಶೋಷಣೆಯ ಮತ್ತು ತೊಂದರೆಯಾಗುವ ಪರಿಸ್ಥಿತಿಯಿಂದ  ರಕ್ಷಣೆ ಪಡೆವ ಹಕ್ಕು ಇದೆ.  ಶಿಕ್ಷಕರಾಗಿ ನೀವು ಇವುಗಳನ್ನು ನಿಭಾಯಿಸಲು ತಿಳಿದಿರಬೇಕು. ಇದು ನಿಮಗೆ ಮಕ್ಕಳು ಎದುರಿಸುತ್ತಿರುವ ನೈಜ ಸಮಸ್ಯೆಗಳು ಮತ್ತು ಅಪಾಯದ ಪೂರ್ಣ ಅರಿವು ಇದ್ದರೆ  ಮಾತ್ರ ಸಾಧ್ಯ  ಮತ್ತು ಅದರ ನಿವಾರಣೆಗೆ   ನೀತಿ  ನಿಯಮ , ಕಾನೂನಿನಲ್ಲಿ ಲಭ್ಯವಿರುವ ಪರಿಹಾರಗಳ ಮಾಹಿತಿ ಇರಬೇಕು. ಅದರಿಂದ ಮಕ್ಕಳ ಸ್ಥಿತಿಯು ಅನುಕೂಲವಾಗುವಂತೆ ಸುಧಾರಿಸಬೇಕು

ಮಗುವಿಗೆ  ಕಾನೂನಿನ ಸಹಾಯ ಮತ್ತು ರಕ್ಷಣೆಯ ಅಗತ್ಯವಿರಬಹುದು. ಅಗತ್ಯವಿದ್ದಾಗ ಕಾನೂನಿನ ನೆರವು ಪಡೆಯದೆ  ಇರುವುದು ನಾವು ಬಹುತೇಕ ಮಾಡಬಹುದಾದ  ತಪ್ಪು.

ಸಾಮಾಜಿಕ ನ್ಯಾಯಕ್ಕಿಂತ ಕುಟುಂಬ/ಸಮುದಾಯ/ಸಮಾಜ/ ಶಕ್ತಿಯುತ ಲಾಬಿಯ ಅಸಮ್ಮತಿ ಅಥವ ಎಚ್ಚರಿಕೆಯ ಭಯವು ಬಹು ಮುಖ್ಯವಾ ? ಎಂದು ನಿಮಗೆ ನೀವೆ ಕೇಳಿಕೊಳ್ಳಿ

ಕರ್ನಾಲ ಜಿಲ್ಲೆಯಲ್ಲಿ ಐವರು ಹುಡುಗಿಯರು ೨೦೦೩ ರಲ್ಲಿ ಇಬ್ಬರು ಅಪ್ರಾಪ್ತರು ಮದುವೆಗಾಗಿ ಮಾರಾಟವಾಗುವುದನ್ನು ತಡೆದರು. ಅವರು ಮದುವೆಯನ್ನು, ಅಪರೋಕ್ಷ ಮಾರಾಟವನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಾಗ ಅವರ ಶಾಲಾ ಶಿಕ್ಷಕರು ಅಗತ್ಯ ಕಾನೂನಿನ ಕ್ರಮಕ್ಕೆ ಬೇಕಾದ ಸಹಾಯ ಮಾಡಿದರು. ವಧುವಿನ ಮತ್ತು ವರನ ಕುಟುಂಬಗಳಿಂದ , ಸಮುದಾಯ ಮತ್ತು ಗ್ರಾಮದ ಹಿರಿಯರಿಂದ ಬಹಳ ಒತ್ತಡ ಬಂದಿತು. ಹುಡುಗಿಯರಿಗೆ ಬೆದರಿಕೆಯೂ ಇತ್ತು. ಅವರ ಕುಟುಂದವರೂ ತೀವ್ರ ವಿರೋಧ ಒಡ್ಡಿದರು. ಮೊದಲಲ್ಲಿ ಪೋಲೀಸರೂ ಯಾವುದೆ ಕ್ರಮ ತೆಗೆದು ಕೊಳ್ಳಲು ತಯಾರಿರಲಿಲ್ಲ. ಎಲ್ಲ ಪ್ರಯತ್ನಗಳು ಫಲ ನೀಡದಾದಾಗ ಶಿಕ್ಷಕರು ಸ್ಥಳೀಯ ಮಾಧ್ಯಮಗಳ ಸಹಾಯದಿಂದ ಇದಕ್ಕೆ ಪ್ರಚಾರ ನೀಡಿದರು. ಆಂತಿಮವಾಗಿ ಪೋಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲು ಮಾಡಬೇಕಾಯಿತು. ಹುಡುಗಿಯರಿಗೆ ಅನುಕರಣನೀಯ ಧೈರ್ಯಕ್ಕಾ ಗಿ ದುರ್ಗಮ ಸ್ಥಿತಿಯಲ್ಲೂ ಸಾಹಸತೋರಿದ್ದಕ್ಕಾಗಿ “ಸಾಹಸ ಪ್ರಶಸ್ತಿ” ಕೊಡಲಾಯಿತು. ಈ ವಿಷಯದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿತ್ತು..ಅವರ ಸಹಾಯವಿಲ್ಲದೆ ಹುಡುಗಿಯರಿಗೆ ಸಮುದಾಯವನ್ನು ಎದುರಿಸುವುದು ಆಗುತ್ತಿರಲಿಲ್ಲ.ವಾಸ್ತವವಾಗಿ ಶಿಕ್ಷಕನು ತನ್ನ ವೃತ್ತಿಯನ್ನು ಮಾತ್ರವಲ್ಲದೆ ತನ್ನ ಪ್ರಾಣವನ್ನೆ ಪಣಕ್ಕಿಡ ಬೇಕಾಯಿತು. ಆದರೆ ನ್ಯಾಯಕ್ಕಾಗಿ ಹೋರಾಟ ಮತ್ತು ಮಗುವಿನ ರಕ್ಷಣೆಯ ಬದ್ಧತೆಯು ಅವನ ಕ್ರಮಕ್ಕೆ ದಾರಿತೋರಿದವು.

ಮೂಲ: ಪೋರ್ಟಲ್ ತಂಡ

2.98924731183
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top