ಹೆಚ್ ಐವಿ ಸೊಂಕಿತ (ಪಾಸಿಟಿವ್) ಜನರ ಹಕ್ಕುಗಳನ್ನು ರಕ್ಷಿಸುವ ಕಾಯಿದೆಯು ಈಗ ತಯಾರಿಯ ಹಂತದಲ್ಲದೆ. ಭಾರತದ ಸಂವಿಧಾನವು ಎಲ್ಲ ನಾಗರೀಕರಿಗೂ ಕೆಲವು ಮೂಲಭೂತ ಹಕ್ಕುಗಳನ್ನು ನೀಡಿದೆ. ಅವು ಹೆಚ್ ಐವಿ ಸೊಂಕಿತ (ಪಾಸಿಟಿವ್) ಆದವರಿಗೂ ಅನ್ವಯವಾಗುವವು.
ಅವು ಯಾವೆಂದರೆ: :
ಒಪ್ಪಿಗೆಯು ಮನಃ ಪೂರ್ವಕ ವಾಗಿರಬೇಕು. ಅದನ್ನು ಒತ್ತಾಯದಿಂದ, ತಪ್ಪಿನಿಂದ , ಮೋಸದಿಂದ , ಪ್ರಭಾವದಿಂದ, ಅಥವ ತಪ್ಪು ಗ್ರಹಿಕೆಯಿಂದ ಪಡೆದಿರಬಾರದು..
ಒಪ್ಪುವವನು ಎಲ್ಲ ತಿಳಿದಿರಬೇಕು. ಅದು ವಿಶೇಷವಾಗಿ ವೈದ್ಯ –ರೋಗಿ ಸಂಬಂಧ ದಲ್ಲಿ- . ವೈದ್ಯರಿಗೆ ಹೆಚ್ಚು ವಿಷಯ ತಿಳಿದಿರುವುದು. ಅವರನ್ನು ರೋಗಿಯು ನಂಬಿರುವನು. ಯಾವುದೆ ವ್ಯದ್ಯಕೀಯ ಪ್ರಕ್ರಿಯೆಗೆ ಮೊದಲು ವ್ಯೆದ್ಯರು ರೋಗಿಗೆ ಆ ಪ್ರಕ್ರಿಯೆಯಲ್ಲಿ ಇರಬಹುದಾದ ಗಂಡಾಂತರ ಮತ್ತು ಪರ್ಯಾಯವನ್ನು ತಿಳಿಸಬೇಕು. ಆಗ ರೋಗಿಯು ಎಲ್ಲವನ್ನೂ ತಿಳಿದುಕೊಂಡು ಆ ಚಿಕಿತ್ಸೆ ಬೇಕೋ ,ಬೇಡವೋ ಎಂದು ನಿರ್ಧರಿಸಬಹುದು.
ಹೆಚ್. ಐ. ವಿ (HIV) ಯ ಪರಿಣಾಮಗಳು ಇನ್ನೆಲ್ಲ ಅನಾರೋಗ್ಯಗಳಿಗಿಂತ ಭಿನ್ನವಾಗಿರುವುದು. ಆದ್ದರಿಂದ ಹೆಚ್. ಐ. ವಿ (HIV) ಪರೀಕ್ಷೆಗೆ ಸಂಬಂಧಿಸಿದವನಿಗೆ ಎಲ್ಲವನ್ನು ತಿಳಿಸಿ ಪರೀಕ್ಷೆಗೆ ಅವನ ಒಪ್ಪಿಗೆ ಪಡೆದಿರಬೇಕು. ಬೇರೆ ಯಾವುನ್ನೋ ಪತ್ತೆಮಾಡುಲು ಕೊಟ್ಟ ಒಪ್ಪಿಗೆಯನ್ನು ಹೆಚ್. ಐ. ವಿ (HIV) ಪರಿಕ್ಷೆಗೂ ಕೊಟ್ಟ ಒಪ್ಪಗೆಯೆಂದು ಎಂದು ಕೊಳ್ಳಬಾರದು. ಅವನಿಗೆ ತಿಳಿಸಿ ಒಪ್ಪಿಗೆ ಪಡೆಯದಿದ್ದರೆ ವ್ಯಕ್ತಿಯ ಹಕ್ಕಿನ ಉಲ್ಲಂಘನೆ ಆಗುವುದು. ಅವನು ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಕೇಳಬಹುದು.
ಒಬ್ಬ ವ್ಯಕ್ತಿಯು ಯಾರಿಗಾದರೂ ನಂಬಕೆಯಿಂದ ಗುಟ್ಟಿನ ವಿಷಯ ಹೇಳಿದರೆ, ಅದರ ಅರ್ಥ, ಅವನು ರಹಸ್ಯವನ್ನು ಹಂಚಿಕೊಂಡಿರುವನು ಎಂದು . ಅದನ್ನು ಬೇರೆಯವರಿಗೆ ಹೇಳುವುದು ನಂಬಿಕೆ ದ್ರೋಹ ವಾಗುವುದು.
ವ್ಯೆದ್ಯರ ಪ್ರಾಥಮಿಕ ಕರ್ತವ್ಯ ರೋಗಿಗೆ. ಅವನು ತನಗೆ ರೋಗಿಯಿಂದ ತಿಳಿದ ಮಾಹಿತಿಯ ಗೌಪ್ಯತೆಯನ್ನು ಕಾಪಾಡಬೇಕು. ಆ ವ್ಯಕ್ತಿಯ ರಹಸ್ಯವನ್ನು ಇನ್ನೊಬ್ಬರಿಗೆ ತಿಳಿಸುವ ಸಂಭವವಿದ್ದರೆ ಇಲ್ಲವೆ ತಿಳಿಸಿದರೆ ಗೌಪ್ಯತೆಯು ಭಂಗವಾಗುವುದು. ಆ ವ್ಯಕ್ತಿಯ ಹಕ್ಕಿನ ಉಲ್ಲಂಘನೆ ಯಾಗುವುದು.ಅವನು ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಕೇಳಬಹುದು.
ಹೆಚ್. ಐ. ವಿ ಏಡ್ಸ್ (HIV/AIDS) ಇರುವವರು ಬಹಳ ಸಲ ತಮ್ಮ ಹಕ್ಕಿನ ಪ್ರತಿಪಾದನೆಗಾಗಿ ನ್ಯಾಯಾಲಯಕ್ಕೆ ಹೋಗಲು ಹೆದರುವರು. ಎಲ್ಲಿ ತಮಗಿರುವ ವ್ಯಾಧಿ ಎಲ್ಲರಿಗೂ ತಿಳಿಯುವವುದೋ ಎಂಬ ಅನುಮಾನ ಅವರಿಗೆ. ಆದರೂ ಅವರು “ ಗುರುತು ಮರೆಮಾಚು” ಎಂಬ ಸಾಧನವನ್ನು ಬಳಸಿ ಹುಸಿ ಹೆಸರಲ್ಲಿ ನ್ಯಾಯ ಕೇಳಬಹುದು. ಈ ಉಪಯುಕ್ತ ತಂತ್ರದಿಂದ ಬಹಿಷ್ಕಾರದ ಮತ್ತು ತಾರತಮ್ಯದ ಭಯವಿಲ್ಲದೆ ನ್ಯಾಯವನ್ನು ಪಡೆಯ ಬಹುದು.
ಸಮಾನ ನಡವೆಳಿಕೆಯ ಹಕ್ಕು ಮೂಲಭೂತ ಹಕ್ಕಾಗಿದೆ. ಕಾನೂನು ಲಿಂಗ, ಧರ್ಮ, ಜಾತಿ ,ಕುಲ ಹುಟ್ಟಿದ ಪ್ರದೇಶದ ಆಧಾರದ ಮೇಲೆ ಯಾವುದೆ ವ್ಯಕ್ತಿಗೆ ವೃತ್ತಿಪರವಾಗಿ, ಸಾಮಾಜಿಕವಾಗಿ ಸರಕಾರದ, ಸರಕಾರಿ ನಿಯಂತ್ರಣದಲ್ಲಿನ ಸಂಸ್ಥೆಗಳು ತಾರತಮ್ಯ ಮಾಡುವುದನ್ನು ಕಾನೂನು ನಿಷೇದಿಸುತ್ತದೆ. ಸಾರ್ವಜನಿಕ ಆರೋಗ್ಯದ ಹಕ್ಕು ಕೂಡಾ ಮೂಲಭೂತ ಹಕ್ಕಾಗಿದೆ. ಅದನ್ನು ರಾಜ್ಯವು ಎಲ್ಲರಿಗೂ ಒದಗಿಸಲೇ ಬೇಕು.
ಹೆಚ್. ಐ. ವಿ ಸೊಂಕಿತ (HIV ಪಾಜಿಟಿವ್) ವ್ಯಕ್ತಿಯು ಆಸ್ಪತ್ರೆಯಲ್ಲಿ ಚಿಕೆತ್ಸೆ ಅಥವ ದಾಖಲಾಗಲು ಹೋದರೆ ಅವನನ್ನು ತಿರಸ್ಕರಿಸುವ ಹಾಗಿಲ್ಲ. ಅವರಿಗೆ ಪರಿಹಾರ ಕೊಡದಿದ್ದರೆ ಕಾನೂನಿನ ಕ್ರಮ ತೆಗೆದು ಕೊಳ್ಳಬಹುದು.
ಅದರಂತೆಯೇ , ಹೆಚ್. ಐ. ವಿ ಸೊಂಕಿತ ವ್ಯಕ್ತಿಗೆ, ಅದಕ್ಕಾಗಿ ಕೆಲಸದ ಸ್ಥಳದಲ್ಲಿ ತಾರತಮ್ಯ ಮಾಡಿದರೆ, ಕೆಲಸದಿಂದ ತೆಗೆದರೆ ಅವನಿಗೆ ಕಾನೂನಿನ ಪರಿಹಾರ ಪಡೆವ ಅವಕಾಶ ಇದೆ
ಒಬ್ಬನು ಹೆಚ್. ಐ. ವಿ ಸೊಂಕಿತ ಆಗಿದ್ದರೂ ಬೆರೆಲ್ಲ ವಿಧದಲ್ಲೂ ಯೋಗ್ಯನಾಗಿದ್ದರೆ, ಬೇರೆಯವರಿಗೆ ಅವನಿಂದ ಗಂಡಾಂತರ ಇಲ್ಲದಿದ್ದರೆ ಅವನನ್ನು ಕೆಲಸದಿಂದ ತೆಗೆಯುವ ಹಾಗಿಲ್ಲ. ಇದನ್ನು ಬಾಂಬೆ ಹೈ ಕೋರ್ಟ ಮೇ ೧೯೯೭ರಲ್ಲಿ ಎತ್ತಿಹಿಡಿದಿದೆ.
ಭಾರತ ಸರಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ೧೯೯೨ ರಲ್ಲಿ ಎಲ್ಲ ರಾಜ್ಯ ಸರಕಾರಗಳಿಗೆ ಒಂದು ಆಡಳಿತಾತ್ಮಕ ಸುತ್ತೋಲೆ ಕಳುಹಿಸಿ ಸೂಚನೆ ನೀಡಿದೆ. ಅದರಲ್ಲಿ ಎಲ್ಲ ಕೇಂದ್ರ ಮತ್ತು ರಾಜ್ಯ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಸೊಂಕಿತ ವ್ಯಕ್ತಿಗಳಿಗೆ (PLWHA) ಗಳಿಗೆ ತಾರತಮ್ಯರಹಿತ ಸೌಲಭ್ಯ ದೊರೆಯುವುದನ್ನು ಖಾತ್ರಿ ಗೊಳಿಸಬೇಕೆಂದು ತಿಳಿಸಿದೆ
ಮೂಲ : ಹೆಚ್. ಐ. ವಿ ಕಾನೂನು ವಿಷಯಗಳು
ಕೊನೆಯ ಮಾರ್ಪಾಟು : 10/15/2019
ಹೆಚ್. ಐ. ವಿ (HIV) ಸೊಂಕಿತ ಅಥವ ಪೀಡಿತ ಮಗುವಿನ ಹಕ್ಕುಗಳ ...