ಕೆಲವು ಮಕ್ಕಳಿಗೆ CBSE ಪರೀಕ್ಷೆ ಬಿಟ್ಟರೆ ಬೇರೆ ಜೀವನವೇ ಇಲ್ಲ.
CBSE ಯ X ಮತ್ತು XII ತರಗತಿಯ ಫಲಿತಾಂಶ ಬಂದ ೫-೬ ದಿನಗಳಲ್ಲಿ ದೆಹಲಿಯಲ್ಲಿ ಅರ್ಧ ಡಜನ್ ಗೂ ಹೆಚ್ಚು ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡಿಕೊಳ್ಳತ್ತಾರೆ. ನೀವು ಇದನ್ನು ಓದುತ್ತಿರುವಾಗಲೇ ಇನ್ನೂ ಅನೇಕರು ತಮಗೆ ಉತ್ತಮ ಫಲಿತಾಂಶ ಬಂದಿಲ್ಲ ಎಂದು ಜೀವನ ಕೊನೆ ಗೊಳಿಸುವ ಯೋಚನೆ ಮಾಡುತ್ತಿರಬಹುದು. ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮ ಹತ್ಯೆಯು ಗಂಭೀರ ಸಮಸ್ಯೆಯ ಸಂಕೇತ. ಈ ಮೊದಲು ಖಿನ್ನತೆ ಮತ್ತು ಹದಿಹರೆಯ ಒಟ್ಟಿಗೆ ಇರಲಾರವು ಎಂಬ ಭಾವನೆ ಇತ್ತು. ಈಗ ಬೆಳೆಯುತ್ತಿರುವ ಭಾವನೆಯ ಪ್ರಕಾರ ಹದಿಹರೆಯದವರೂ ಹೆಚ್ಚು ಹೆಚ್ಚಾಗಿ ಖಿನ್ನತೆಗೆ ಒಳಗಾಗುವರು, ಎಂದು ಹೇಳುತ್ತಾರೆ ಡಾ. ಆರ್.ಸಿ ಜಿಲೋಹ, ಪ್ರಧ್ಯಾಪಕರು ಮತ್ತು ಮನೊವಿಜ್ಞಾನ ವಿಭಾಗದ ಮುಖ್ಯಸ್ಥರು. ಜಿ.ಬಿ ಪಂತ್ ಮತ್ತು ಮೌಲಾನಾ ಅಜಾದ ಮೆಡಿಕಲ್ ಕಾಲೇಜು. ಈ ಸಮಸ್ಯೆಯು ಜಠಿಲವಾಗುತ್ತಾ ಹೋಗುವುದು. ಎಳೆ ವಯಸ್ಸಿನ ಅವರಿಗೆ ಸೊಲನ್ನು ಎದುರಿಸುವ ಗಡಸುತನವಾಗಲೀ, ಜೀರ್ಣಿಸಿಕೊಳ್ಳುವ ಅನುಭವವಾಗಲಿ ಇರುವುದಿಲ್ಲ.
ಮೆ. ಶರ್ಮ , ಟೆಲಿ-ಕೌನ್ಸಿಲರ್ ಹೇಳುತ್ತಾರೆ “ ತಾಯಿತಂದೆ ಮತ್ತು ಶಿಕ್ಷಕರು ಆಪ್ತ ಸಲಹೆಯ ಪ್ರಾಮುಖ್ಯತೆಯನ್ನು ಅರಿಯುವುದು ಅತಿ ಮುಖ್ಯ. ಪರೀಕ್ಷಾ ಫಲಿತಾಂಶವೇ ಜಗತ್ತಿನಲ್ಲಿ ಎಲ್ಲ ಅಲ್ಲ. ಅದರಿಂದ ಜಗತ್ತೇ ಕೊನೆಯಾಗುವುದಿಲ್ಲ.. ಪರೀಕ್ಷೆಯಾದ ಮೇಲೂ ಜೀವನ ಇದೆ. ನೀವು ಸರಿಯಾಗಿ, ಪರೀಕ್ಷೆ ಬರೆಯದಿದ್ದರೂ ಸಹಾ. ಅದನ್ನು ತಾಯಿತಂದೆಯರು , ಶಿಕ್ಷಕರು ಅರ್ಥಮಾಡಿ ಕೊಳ್ಳಬೇಕು”
ತಾಯಿತಂದೆಯರು ತಮ್ಮ ಮಕ್ಕಳನ್ನು ಉತ್ತಮ ಫಲಿತಾಂಶ ಬರುವ ಶಾಲೆಗೆ ಸೇರಿಸುವುದು ಸಹಜ. ಆದರೆ ಅವರನ್ನು ಯಾರಾದರೂ ಮಗುವಿನ ಬದುಕು ಮತ್ತು ಕಲ್ಯಾಣಕ್ಕಿಂತ ಅದು ಮುಖ್ಯವಾ? ಎಂದು ಕೇಳಿದ್ದಾರಾ ? ಯಾರೂ ತಮ್ಮ ಮಗುವನ್ನು ಕಳೆದುಕೊಳ್ಳಲು ಬಯಸುವುದಿಲ್ಲ.ಇದು ತಾಯಿತಂದೆಯರಿಗೆ ಇರುವ ಆಪ್ತ ಸಲಹೆಯ ಅಗತ್ಯವನ್ನು ತೋರಿಸುತ್ತದೆ. ಶಾಲೆಯ ಒತ್ತಡವು ಹೆಚ್ಚಿದಂತೆಲ್ಲ, ಅವನ ಪ್ರಗತಿ ಪತ್ರವು ಮಗು ಎಷ್ಟುಚೆನ್ನಾಗಿ ಮಾಡಿದೆ, ಎಷ್ಟು ಚೆನ್ನಾಗಿಮಾಡಿಲ್ಲ ವೆಂಬುದನ್ನು ಮಾತ್ರ ತೀಳಿಸಿದರೆ, ತರಗತಿಯ ಶಿಕ್ಷಕರು ಸದಾ ಒಂದು ಮಗುವನ್ನು ಇನ್ನೊಂದು ಮಗುವಿನ ಜೊತೆ ಹೋಲಿಸುತ್ತಿದ್ದರೆ, ವಿದ್ಯಾರ್ಥಿಗಳ ಭಾವನತ್ಮಕ, ಮಾನಸಿಕ ಅಗತ್ಯಗಳನ್ನು ನಿರ್ಲಕ್ಷಿಸಿದರೆ, ಪರಿಸ್ಥಿತಿಯು ಎಂದೂ ಬದಲಾಗಲು ಅಸಾಧ್ಯ. ಶಾಲೆಗಳು ಈ ದಿಶೆಯಲ್ಲಿ ಮೊದಲು ಕ್ರಮ ತೆಗೆದುಕೊಳ್ಳ ಬೇಕು ಮತ್ತು ತಾಯಿತಂದೆಯರಿಗೆ ಅವರ ಜೊತೆಯಲ್ಲಿ ಮಕ್ಕಳಿಗೂ ಕೂಡಾ ಆಪ್ತ ಸಲಹೆಯನ್ನು ಕೊಡಬೇಕು.
ಮೂಲ:ಸ್ಮೃತಿ ಕಕ್,ದ ತ್ರಿಬ್ಯೂನ್,ಚಂಡಿಗಡ,ಭಾರತ ಶುಕ್ರವಾರ,ಮೇ 31, 2002
ಕೊನೆಯ ಮಾರ್ಪಾಟು : 10/15/2019
ಹೆಚ್. ಐ. ವಿ (HIV) ಸೊಂಕಿತ ಅಥವ ಪೀಡಿತ ಮಗುವಿನ ಹಕ್ಕುಗಳ ...
ಕಲಿಕೆ ಗುಣಮಟ್ಟ ಅರಿಯಲು ಪರೀಕ್ಷೆ ಮತ್ತು ಕೆ.ಎ.ಎಸ್. ಪರೀಕ್...
ನಿಮ್ಮ ಶಾಲೆಯು ಮಗು ಸ್ನೇಹಿಯೆ? ಹಾಗಾಗಲು ಇರುವ ವಿಧಾನಗಳ ಬ...
ಮಕ್ಕಳಿಗೆ ಎಲ್ಲ ಶೋಷಣೆಯ ಮತ್ತು ತೊಂದರೆಯಾಗುವ ಪರಿಸ್ಥಿತಿ...