অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಾಲ ಕಾರ್ಮಿಕತೆ

ಬಾಲ ಕಾರ್ಮಿಕತೆ-ಮಿಥ್ಯಗಳು ಮತ್ತು ಸತ್ಯಗಳು

  1. ಮಿಥ್ಯೆ:   :  ಬಾಲ ಕಾರ್ಮಿಕ ಸಮಸ್ಯೆಗೆ  ಪರಿಹಾರವೇ ಇಲ್ಲ.
    • ಬಡ ತಾಯಿತಂದೆಯರು  ಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸುವುದಿಲ್ಲ. ಅವರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿ ಮನೆಗೆ ಸ್ವಲ್ಪ ಆದಾಯ ತರಲು ಬಯಸುವರು. ಈ ಮಕ್ಕಳಿಗೆ ಕೆಲಸ ಮಾಡದೆ ಬೇರೆ ಹಾದಿ ಇಲ್ಲ.  ಇಲ್ಲದಿದ್ದರೆ ಅವರ ಕುಟುಂಬವು ಉಪವಾಸ ಬೀಳುವುದು .ಅವರು ಕೆಲಸಮಾಡುವುದರಿಂದ ಭವಿಷ್ಯಕ್ಕೆ ಅಗತ್ಯವಾದ ಕೆಲವು ಕೌಶಲ್ಯಗಳನ್ನು ಪಡೆಯುವರು.
  2. ಸತ್ಯ:  ಈ ರಿತಿಯ ಮಾತನ್ನು ಕೇಳಿದಮೇಲೆ ನಾವು, ನಮಗೆ ಪ್ರಶ್ನೆ  ಹಾಕಿಕೊಳ್ಳಬೇಕು.   ಏಕೆ ಕೆಲವು ಬಡಜನರು ಎಷ್ಟೇ ತೊಂದರೆ ಇದ್ದರೂ ತಮ್ಮ ಮಕ್ಕಳನ್ನುಶಾಲೆಗೆ ಕಳುಹಿಸುವರು , ಹಾಗೆಯೇ ಕೆಲವರು ಏಕೆ ಕಳಹಿಸುವುದಿಲ್ಲ. ? ನಿಜವಾದ ಮಾತು ಎಂದರೆ ಬಡತನ ಎಂಬುದು ಮಕ್ಕಳನ್ನು ತಮ್ಮ ಅನುಕೂಲಕ್ಕಾಗಿ ಬಳಸಿ ಕೊಳ್ಳಲು ಇರುವ ಒಂದು ನೆಪ ಮಾತ್ರ. ಸಾಮಾಜಿಕ ಆಂಶಗಳೂ ಬಾಲ ಕಾರ್ಮಿಕರ ಸಮಸ್ಯೆಗೆ ತಮ್ಮ ಕೊಡುಗೆ ನೀಡುತ್ತವೆ.   ಸಾಮಾಜಿಕವಾಗಿ ಮೂಲೆಗೆ ತಳ್ಳಲಾದ ಸಮುದಾಯಗಳು ಸಂಪನ್ಮೂಲಗಳ ಬಳಕೆಗೆ ಸಮಾನ ಅವಕಾಶ ಸಿಕ್ಕದೆ ಶ್ರೇಣಿ ಕೃತ ಸಮಾಜ ವ್ಯವಸ್ಥೆಗೆ ಬಲಿಯಾದವರ   ಕುಟುಂಬಗಳು ಮತ್ತು ಅವರ ಮಕ್ಕಳು ಸಹಾ ಕೆಲಸ ಮಾಡಿದರೂ ಹಸಿವಿನಿಂದ ಬಳಲುವರು ಎಂಬುದು ನಮಗೆ ಹೊತ್ತು.  ಇದಕ್ಕೆ ಕಾರಣ ಹಸಿವು .  ಸರಿಯಾಗಿರದ ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಪರಿಣಾಮ.
  • ಎಲ್ಲ ತಾಯಿತಂದೆಯರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಬಯಸುವರು. ಕನಿಷ್ಟ ಪ್ರಾಥಮಿಕ ಶಿಕ್ಷಣವಾದರೂ ಸರಿ.   ಶಿಕ್ಷಣ ಪಡೆಯದ ತಾಯಿತಂದೆಯರಿಗೆ ಪ್ರವೇಶ ಪ್ರಕ್ರಿಯೆ ತುಂಬ ಸಂಕೀರ್ಣ ವೆನಿಸುವುದು.  ಜನ್ಮ ದಿನಾಂಕ, ಜಾತಿ ಪ್ರಮಾಣ ಪತ್ರಗಳೇ ಶಾಲೆಗೆ ಪ್ರವೇಶ ಪಡೆಯಲು ದೊಡ್ಡ ತಡೆಗಳಾಗುವವು. ಮಕ್ಕಳಿಗೆ  ವಿಶೇಷವಾಗಿ ಅವರು  ಕಲಿಯುವುದರಲ್ಲಿ ಮೊದಲ ತಲೆ ಮಾರಿನವರರಾದರೆ  ಪಠ್ಯಕ್ರಮವು ತುಂಬ ಕಠಿನವೆನಿಸುವುದು.ಅವರ ತಾಯಿತಂದೆಯರು ಅಶಿಕ್ಷಿತರಾಗಿರುವುದರಿಂದ  ಮನೆಯಲ್ಲಿ ಗೃಹ ಪಾಠ ಮಾಡುವಲ್ಲಿ ಅಗತ್ಯ ಬೆಂಬಲ ನೀಡಲಾರರು. ದೈಹಿಕ ಶಿಕ್ಷೆ, ಜಾತಿ ತಾರತಮ್ಯ. ಮೂಲ ಸೌಕರ್ಯಗಳಾದ  ಕಕ್ಕಸು, ಕುಡಿಯುವ ನೀರಿನ ಕೊರತೆ ಮೊದಲಾದ ಅಂಶಗಳು ಅವರನ್ನು ಶಾಲೆಯೀಂದ ದೂರ ಇಡುತ್ತವೆ. ಹೆಣ್ಣು ಮಕ್ಕಳಿಗೆ ತಮ್ಮ ತಂಗಿಯರನ್ನು ನೋಡಿಕೊಳ್ಳುವ ಹೊಣೆಯೂ ಮೊದಲ ಆದ್ಯತೆ   ಯಾಗುವುದು. ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲೂ ಶಿಶು ಪಾಲನಾ ಸೌಕರ್ಯಗಳು ಇಲ್ಲ  ಅಲ್ಲದೆ ಜನರ ಮನದಲ್ಲಿ ಲಿಂಗಪಕ್ಷಪಾತವೂ ಬಲವಾಗಿ ನೆಲೆಯೊಡ್ಡಿದೆ.

  • ಶಾಲೆಗೆ ಹೋಗದೆ, ಕೆಲಸಕ್ಕೆ ಹೋಗುವ ಮಕ್ಕಳು ತಮ್ಮ ಜೀವನಪೂರ್ತಿ ಅನಕ್ಷರಸ್ಥರಾಗಿ, ಕುಶಲತೆಯಿಲ್ಲದ ಕಾರ್ಮಿಕರಾಗಿಯೇ ಉಳಿಯುವರು.  ಇದಕ್ಕೆ ಕಾರಣ ಬಾಲ ಕಾರ್ಮಿಕರು ಸಾಧಾರಣವಾಗಿ ಕುಶಲತೆ ಇಲ್ಲದ ಕಾರ್ಮಿಕ ಸಮೂಹದ  ಒಂದು ಭಾಗವಾಗಿರುವರು.  ಅಲ್ಲದೆ ಅವರು ರಸಾಯನಿಕ ಮತ್ತು ಇತರೆ ಅಪಾಯಕಾರಿ  ವಸ್ತುಗಳ ಸಂಪರ್ಕಕ್ಕೆ ಬರುವರು.  ಧೀರ್ಘ ಕೆಲಸದ ಅವಧಿ , ಕೆಲಸದಲ್ಲಿ ತೊಡಗಿದಾಗಿನ ಭಂಗಿ ಮೊದಲಾದವು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವವು ಮತ್ತು ಅವರ ಬೆಳವಣಿಗೆಯನ್ನು ಕುಂಠಿತ ಗೊಳಿಸುವವು.
  • ಬಾಲ ಕಾರ್ಮಿಕರು  ಇರುವುದು ಸಂವಿಧಾನದ ಅನುಚ್ಛೇದ-೨೧ಎ ಗೆ ಪೂರ್ಣ ವ್ಯತಿರಿಕ್ತತವಾಗಿದೆ.  ಅದರ ಪ್ರಕಾರ ೬-೧೪ ವಯೋಮಾನದ  ಪ್ರತಿ ಮಗುವಿಗೂ  ಕಡ್ಡಾಯ ಉಚಿತ ಪ್ರಾಥಮಿಕ ಶಿಕ್ಷಣ ಅವನ ಮೂಲಭೂತ ಹಕ್ಕು.
  • ಇನ್ನೊಂದು ಗಣನೀಯ ಅಂಶವೆಂದರೆ, ಒಂದು ಮಗುವು ಬಾಲ  ಕಾರ್ಮಿಕನಾಗುವುದು ತಪ್ಪಿದರೆ, ಒಬ್ಬ ವಯಸ್ಕನಿಗೆ ಕೆಲಸ ದೊರಕಿದಂತೆ
  • ಭಾರತದಲ್ಲಿ ನಿರುದ್ಯೋಗಿ ವಯಸ್ಕರ ಸಂಖ್ಯೆ ಬಹು ದೊಡ್ಡದು. ಅವರು ಮಕ್ಕಳ ಜಾಗದಲ್ಲಿ ಕೆಲಸ ಮಾಡಬಲ್ಲರು. ಅದರಿಂದ ಮಕ್ಕಳಿಗೆ ತಮ್ಮ ಬಾಲ್ಯವನ್ನು ಅನುಭವಿಸುವ  ಅವಕಾಶ ದೊರೆಯುವುದು.
  • ಭಾರತದಲ್ಲಿಯೇ ಅತಿ ಹೆಚ್ಚಿನ ಬಾಲ ಕಾರ್ಮಿಕರಿದ್ದಾರೆ.    ಭಾರತದ ೨೦೦೧ರ ಜನಗಣತಿಯ ಪ್ರಕಾರ  ೧.೨೫ ಕೋಟಿ  ೫-೧೪ ವ ರ್ಷ ದೊಳಗಿನ  ಮಕ್ಕಳು ವಿವಿಧ ವೃತ್ತಿಯಲ್ಲಿ ತೊಡಗಿದ್ದಾರೆ. ಸರಕಾರೇತರ ಸಂಸ್ಥೆಗಳ ಅಂದಾಜು ಇನ್ನೂ ಹೆಚ್ಚಾಗಿದೆ. ಏಕೆಂದರೆ ಬಹಳ ಮಕ್ಕಳು ಅಸಂಘಟಿತ ವಲಯಗಳಲ್ಲಿ ಮತ್ತು  ಸಣ್ಣ ಪ್ರಮಾಣದ ಗೃಹ ಘಟಕಗಳಲ್ಲಿ ಕೆಲಸ ಮಾಡುವರು.ಅಂಥಹವರೂ ಬಾಲಕಾರ್ಮಿಕರು.
  • ಮಕ್ಕಳನ್ನು ಕಾರ್ಮಿಕರಾಗಿ ದುಡಿಯಲು ನಿತ್ಯವೂ ಸಾಗಣಿಕೆ ಮಾಡಲಾಗುತ್ತಿದೆ. ದಲ್ಲಾಳಿಗಳು, ಮಧ್ಯವರ್ತಿಗಳು ಹಳ್ಳಿಗಳಿಗೆ ಆತ್ಮೀಯರಂತೆ ಹೋಗಿ ಮಕ್ಕಳನ್ನು ದೇಶದ ವಿವಿಧ ಕಡೆ ಸಾಗಿಸುವರು. ಬಿಹಾರದ , ಬಂಗಾಲದ ಮಕ್ಕಳು ಕರ್ನಾಟಕ, ಮುಂಬಯಿ , ದೆಹಲಿಯ   ಕಸೂತಿ ಘಟಕದಲ್ಲಿ ,ತಮಿಳು ನಾಡಿನಿಂದ ಉತ್ತರಪ್ರದೇಶದ ಸಿಹಿತಿಂಡಿ ಮಾಡುವ ಘಟಕದಲ್ಲಿ ಮತ್ತು  ಸೂರತ್ತಿಗೆ  ವಜ್ರ ಮತ್ತು ಹರಳುಗಳ ಪಾಲಿಷ್ ಮಾಡಲು ಬರುವರು.ನುರಾರು ಜನರು ಮಧ್ಯಮ ವರ್ಗದವರಲ್ಲಿ ಮನೆ ಕೆಲಸದವರಾಗಿರುವರು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 1/11/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate