ಮಕ್ಕಳಿಗೆ ಯಾರಿಂದ ರಕ್ಷಣೆ ನೀವು ಶಿಕ್ಷಕರಾಗಿ ನಿಮ್ಮ ವಶದಲ್ಲಿನ ಎಲ್ಲ ಮಕ್ಕಳಿಗೂ ರಕ್ಷಣೆಯ ಖಾತ್ರಿ ದೊರಕಿಸಬೇಕು. ಎಲ್ಲ ವಿಧದ ಶೋಷಣೆ, ಅಮಾನವೀಯವಾಗಿ ಮತ್ತು ಅವಮಾನಕಾರಿಯಾಗಿ ನಡಸಿಕೊಳ್ಳುವುದರಿಂದ, ನಿರ್ಲಕ್ಷ್ಯ ಗಳಿಂದ ರಕ್ಷಣೆ ಅಗತ್ಯ ಎಲ್ಲ ಮಕ್ಕಳಿಗೂ ರಕ್ಷಣೆಯ ಅಗತ್ಯವಿದ್ದರೂ ಕೆಲವರು ಅವರ ಸಾಮಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ಹಿನ್ನೆಲೆಯಿಂದಾಗಿ ಇತರರಿಗಿಂತ ಹೆಚ್ಚು ತೊಂದರೆಗೆ ಈಡಾಗುವುದರಿಂದ ,ಅವರಿಗೆ ವಿಶೇಷ ಗಮನದ ಅಗತ್ಯವಿರುತ್ತದೆ. ಇಂತಹ ಮಕ್ಕಳೆಂದರೆ ಮನೆ ಇಲ್ಲದವರು( ಫುಟ್ ಪಾತ್ ನಿವಾಸಿಗಳು,ನಿರಾಶ್ರಿತರು, ಒಕ್ಕಲೆಬ್ಬಿಸಿದವರು,ನಿರ್ವಾಸಿತರು) ಅಲೆಮಾರಿ ಮಕ್ಕಳು ಬೀದಿ ಮಕ್ಕಳು ಮತ್ತು ಓಡಿಬಂದವರು ಅನಾಥ ಮತ್ತು ತಾಯಿತಂದೆ ತೊರೆದ ಮಕ್ಕಳು ಕೂಲಿಕಾರ ಮಕ್ಕಳು ಬಾಲ ಭಿಕ್ಷುಕರು ವೇಶ್ಯೆಯರ ಮಕ್ಕಳು ಬಾಲ ವೇಶ್ಯೆಯರು ಅನೈತಿಕ ಚಟುವಟಿಗೆಗಾಗಿ ಸಾಗಿಸಲಾದವರು ಸಂಘರ್ಷಕ್ಕೆ ಒಳಗಾದವರು ಹೆಚ್ ಐ ವಿ ಏಡ್ಸ್ (HIV AIDS) ಸೋಂಕಿತರು ಮಾರಣಾಂತಿಕ ರೋಗದಿಂದ ನರಳುತ್ತಿರುವವರು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಮೂಲ: ಪೋರ್ಟಲ್ ತಂಡ