- ಮಿಥ್ಯೆ: : ಬಾಲ್ಯ ವಿವಾಹವು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಅವಿವಾಹಿತ ಹುಡುಗಿಯರು ಬಲತ್ಕಾರ ಮತ್ತು ಲೈಂಗಿಕ ದುರ್ಬಳಕೆಗೆ ಹೆಚ್ಚು ಗುರಿಯಾಗುವರು.ಆದಷ್ಟು ಬೇಗ ಅವರ ಮದುವೆ ಮಾಡುವುದ ಉತ್ತಮ. ಹುಡುಗಿಗೆ ವಯಸ್ಸಾದಂತೆ ವರದಕ್ಷಿಣೆ ಮತ್ತು ಒಳ್ಳೆಯ ವರ ಹುಡುಕುವುದು ಕಷ್ಟವಾಗುವುದು.
- ಸತ್ಯ: ಯಾವುದೆ ದುರಾಚರಣೆ ಅಥವಾ ಕೆಟ್ಟ ಪದ್ದತಿಗೆ ಸಂಸ್ಕೃತಿಯು ಒಂದು ನೆಪ ಆಗಬಾರದು. ಬಾಲ್ಯ ವಿವಾಹವು ನಮ್ಮ ಸಂಸ್ಕೃತಿಯಾದರೆ, ಗುಲಾಮಗಿರಿ, ಜಾತಿಯತೆ, ವರದಕ್ಷಿಣೆ,ಸತಿ ಪದ್ಧತಿಗಳು ಸಹಾ ಆಗಿದ್ದವು. ಆದರೆ ಈಗ ಆ ಅಪಾಯಕಾರಿ ಪದ್ಧತಿಗಳನ್ನು ನಿಷೇಧಿಸುವ ಕಾಯಿದೆಗಳು ನಮ್ಮಲ್ಲಿ ಬಂದಿವೆ. ಈ ಕಾಯಿದೆಗಳು ಸಮಾಜದ ಬೇಡಿಕೆಯ ಮೇರೆಗೆ ಜಾರಿಗೆಬಂದವು. ಅಂದರೆ ಖಚಿತವಾಗಿ ಸಂಸ್ಕೃತಿಯು ಜಡವಲ್ಲ.
- ಅಲ್ಲದೆ ಒಂದೆ ಭೌಗೋಳಿಕ ಪ್ರಧೇಶದಲ್ಲಿ ಇದ್ದರೂ, ವಿಭಿನ್ನ ಜನರು ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವುರು. ಭಾರತದಲ್ಲಿ ಇರುವಂತೆ. ಬಹು ಕುಲದ, ಭಾಷೆಯ, ಧರ್ಮದ ಜನರು ತಮ್ಮದೇ ಆದ ಸಂಸ್ಕೃತಿಯನ್ನು ಅನುಸರಿಸುವರು. ಆದ್ದರಿಂದ ಭಾರತದ ಸಂಸ್ಕೃತಿಯು ಈ ಎಲ್ಲ ಸಂಸ್ಕೃತಿಗಳ ಮಿಶ್ರಣವಾಗಿದೆ.ಮತ್ತು ಕಾಲಾನುಕಾಲಕ್ಕೆ ಬದಲಾವಣೆಯಾಗುತ್ತ ಬಂದಿದೆ.
ನಾವು ನಮ್ಮ ಮಕ್ಕಳಿಗೆ ರಕ್ಷಣೆ ಬೇಕೆಂದು ಒಪ್ಪಿಕೊಂಡರೆ ನಮ್ಮ ಸಂಸ್ಕೃತಿಯು ಅದನ್ನು ಪ್ರತಿಬಿಂಬಿಸಬೇಕು. ಖಂಡಿತವಾಗಿಯೂ , ನಾವು ಸಾಂಸ್ಕೃತಿಕವಾಗಿ ನಮ್ಮ ಮಕ್ಕಳನ್ನು ಪ್ರೀತಿಸತ್ತೇವೆ ಎಂದು ಹೇಳಿಕೊಳ್ಳುವುದು ಮಾತ್ರವಲ್ಲ ಅವರ ರಕ್ಷಣೆಯ ಖಾತ್ರಿಯನ್ನು ಎಲ್ಲ ಸಮಯದಲ್ಲೂ ನೀಡಬೇಕು
ಬಾಲ್ಯ ವಿವಾಹದ ಚಿಹ್ನೆಗಳು
ಹಕ್ಕುಗಳ ಉಲ್ಲಂಘನೆಯು ಮೊದಲಿನಿಂದಲೂ ಆಗುತ್ತಲೇ ಬಂದಿದೆ. ಗಂಡು ಮಕ್ಕಳ ಬಾಲ್ಯ ವಿವಾಹವು, ಹೆಣ್ಣು ಮಕ್ಕಳ ಬಾಲ್ಯ ವಿವಾಹದಂತೆಯೇ ಅವರ ಹಕ್ಕುಗಳ ಉಲ್ಲಂಘನೆ ಆಗಿದೆ. ಅದು ಅವರ ಆಯ್ಕೆಯ ಅವಕಾಶವನ್ನು ಕಿತ್ತುಕೊಳ್ಳುತ್ತದೆ. ಅವರ ವಯಸ್ಸಿಗೆ ಮೀರಿದ ಕುಟುಂಬದ ಹೊಣೆಯನ್ನು ಹೊರಿಸುವುದು. ಆದರೆ ಹೆಣ್ಣು ಮಕ್ಕಳು ಇನ್ನೂ ಹೀನ ಪರಿಸ್ಥಿತಿಯಲ್ಲಿ ಇರುವರು ಎಂಬುದರಲ್ಲಿ ಅನುಮಾನವಿಲ್ಲ.
ಬಾಲವಧುವು ಅನೇಕ ಸಲ ಬಾಲವಿಧವೆಯಾಗಿ, ಅನೇಕ ಮಕ್ಕಳನ್ನು ನೋಡಿಕೊಳ್ಳಬೇಕಾಗುವುದು.
ನಿಮಗೆ ಗೊತ್ತೆ ?
ಜನಗಣತಿ ವರದಿ ೨೦೦೧ ಪ್ರಕಾರ ಸುಮಾರು ೩ ಲಕ್ಷ ೧೫ ವರ್ಷದೊಳಗಿನ ಹೆಣ್ಣು ಮಕ್ಕಳು ಆಗಲೇ ಕನಿಷ್ಟ ಒಂದು ಮಗುವಿಗೆ ಜನ್ಮ ನೀಡಿದ್ದಾರೆ.
ಹುಡುಗಿಯರು ೧೦-೧೪ ವರ್ಷದವರಾದರೆ ಗರ್ಭಿಣಿಯರಾಗಿದ್ದಾಗಲೇ ಇಲ್ಲವೆ ಹೆರಿಗೆ ಸಮಯದಲ್ಲಿ ಸಾಯುವ ಸಂಭವವು ಅವರು ೨೦-೨೪ ವರ್ಷದವರಾಗಿನಕಿಂತ ೫ ಪಟ್ಟು ಹೆಚ್ಚಾಗಿರುವುದು.
- ಶೀಘ್ರ ಗರ್ಭಧಾರಣೆಯು ಹೆಚ್ಚಿನ ಪ್ರಮಾಣದ ಗರ್ಭಪಾತದ ದರಕ್ಕೆ ಕಾರಣ ವಾಗಿದೆ
- ಹದಿ ಹರೆಯದ ತಾಯಿಯ ಶಿಶುವು ಹುಟ್ಟಿದಾಗ ಕಡಿಮೆ ತೂಕ ಇರುವ ಸಂಭವ ಹೆಚ್ಚಾಗಿದೆ
- ಎಳೆವಯಸ್ಸಿ ತಾಯಿಗೆ ಜನಿಸಿದ ಮಗುವು ಮೊದಲ ವರ್ಷದಲ್ಲೇ ಸಾಯುವ ಸಂಭವ ಹೆಚ್ಚು.
ಮೂಲ: ಹದಿಹರೆಯದ ಮಹಿಳೆಯ ಪರಿಸ್ಥಿತಿ
ಕೊನೆಯ ಮಾರ್ಪಾಟು : 10/15/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.