অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೈಲ್ವೇ ಮಕ್ಕಳ ಹಕ್ಕುಗಳನ್ನು ರಕ್ಷಿಸಿ

ರೈಲ್ವೇ ಮಕ್ಕಳ ಹಕ್ಕುಗಳನ್ನು ರಕ್ಷಿಸಿ

ರೈಲ್ವೇ ಪ್ಲಾಟ್ ಫಾರಂಗಳಲ್ಲಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮಾರ್ಗದರ್ಶಿ ಸೂಚಕಗಳನ್ನು ಸಿದ್ಧಪಡಿಸಲು NCPCR ವು ಮಕ್ಕಳ ಹಕ್ಕುಗಳಿಗೆ ಶ್ರಮಿಸುವವರು ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳೊಡನೆ ಅನೇಕ ಸಭೆಗಳನ್ನು ಆಯೋಜಿಸಿದೆ. ರೈಲ್ವೇ ಪ್ಲಾಟ್ ಫಾರಂಗಳಲ್ಲಿ ಮಕ್ಕಳ ಮಾದಕ ದ್ರವ್ಯಗಳ ಸೇವನೆ, ರೇಲ್ವೆ ಪೋಲಿಸ್ ಫೋರ್ಸ ಸಿಬ್ಬಂದಿಯಿಂದ ದೈಹಿಕ ಹಿಂಸೆ, ಸೂರಿಲ್ಲದಿರುವಿಕೆ, ತಮ್ಮ ಗುರುತೇ ಇಲ್ಲದಿರುವಿಕೆ ಮತ್ತು ಪುನರ್ವಸತಿ, ಆರೋಗ್ಯ ಆರೈಕೆಗಳ ಕೊರತೆ ಮತ್ತು ಎಚ್.ಐ.ವಿ ಮತ್ತು ಏಡ್ಸ್ ಗಳಿಗೆ ಬಲಿಯಾಗುವಿಕೆ ಮುಂತಾದ ಸಮಸ್ಯೆಗಳನ್ನು NCPCR ನ ಸದಸ್ಯೆ ಶ್ರೀಮತಿ ಸಂಧ್ಯಾ ಬಜಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಚರ್ಚಿಸಲಾಯಿತು.

ಹಿಂದಿನ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಸಭೆಗಳು ಸ್ವತಃ ರೇಲ್ವೇ ಮಕ್ಕಳು ಮತ್ತು 25 ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಉಪಸ್ಥಿತಿಯಲ್ಲಿ ನಡೆದಿವೆ, ಭಾಗವಹಿಸಿದ ಸರ್ಕಾರೇತರ ಸಂಸ್ಥೆಗಳು ಸಾಥೀ, ಅನುಭವ್, ಪ್ರಾಜೆಕ್ಟ್  ಕನಸರ್ನ್ ಇಂಟರ್ ನ್ಯಾಷನಲ್, ಡೆಲ್ಲಿ ಬ್ರದರ್ ಹುಡ್ ಸೊಸೈಟಿ, ಚೇತನಾ, ಸಲಾಂ ಬಾಲಕ್ ಟ್ರಸ್ಟ್, ಆಕ್ಷನ್ ಏಡ್, ಹ್ಯೂಮನ್ ರೈಟ್ಸ್, ಜಿ ನೆಟ್ ವರ್ಕ್ಸ್, ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್ ಮತ್ತು ಚೈಲ್ಡ್ ರೈಟ್ಸ್ ಪೋರಂ.
ಸಭೆಗಳಲ್ಲಿ ಅನೇಕ ಸಲಹೆಗಳು ಮೂಡಿಬಂದವು (ಪಟ್ಟಿ ನೋಡಿ) ರೇಲ್ವೇ ಪ್ಲಾಟ್ ಫಾರಂಗಳಲ್ಲಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಆಯೋಜಿಸಲಾಗುವ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಈ ಸಲಹೆಗಳನ್ನು ಮುಂದಿಟ್ಟು ಚರ್ಚಿಸಲಾಗುವುದೆಂದು ಶ್ರೀಮತಿ ಬಜಾಜ್ ಹೇಳಿದ್ದಾರೆ. ಇದಾದ ನಂತರ ರೇಲ್ವೇ ಪ್ರಾಧಿಕಾರಕ್ಕೆ ಮಾರ್ಗ ಸೂಚಿಯನ್ನು ಜಾರಿಗೊಳಿಸಲಾಗುವುದು.

ಸಲಹೆಗಳು

  • ರೇಲ್ವೇ ಪ್ಲಾಟ್ ಫಾರಂಗಳಲ್ಲಿ ವ್ಹೈಟ್ ಪ್ಲೂಯಿಡ್ ಮಾರಾಟವನ್ನು ನಿಷೇಧಿಸಬೇಕು ಏಕೆಂದರೆ, ರೇಲ್ವೇ ಮಕ್ಕಳು ಹೆಚ್ಚು ಹೆಚ್ಚಾಗಿ ಇದರ ದುರುಪಯೋಗ ಮಾಡುತ್ತಿದ್ದಾರೆ.
  • ರೇಲ್ವೇ ಪ್ರಾಧಿಕಾರವು ರೇಲ್ವೇ ಪ್ಲಾಟ್ ಫಾರಂಗಳಲ್ಲಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ತನ್ನದೆಂದು ಒಪ್ಪಿಕೊಳ್ಳಬೇಕು
  • ರೇಲ್ವೇ ಪ್ಲಾಟ್ ಫಾರಂಗಳಲ್ಲಿ ದೈಹಿಕ ಹಾಗೂ ಲೈಂಗಿಕ ಹಿಂಸೆಗೊಳಗಾದ ಮಕ್ಕಳಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಬೇಕು
  • ರೇಲ್ವೇ ಪ್ಲಾಟ್ ಫಾರಂಗಳಲ್ಲಿರುವ ಮಕ್ಕಳನ್ನು ಬೇರೆ ಬೇರೆ ಪ್ರವರ್ಗಗಳಲ್ಲಿ ವರ್ಗೀಕರಿಸಬೇಕು
  • ರೇಲ್ವೇ ನಿಲ್ದಾಣಗಳಿಂದ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಪರಿಸರವನ್ನು ರಕ್ಷಿಸುವುದರಿಂದ ಚಿಂದಿ ಆಯುವ ಮಕ್ಕಳ ಹಕ್ಕುಗಳನ್ನೂ ರಕ್ಷಿಸಬೇಕು
  • ರೇಲ್ವೇ ಪ್ಲಾಟ್ ಫಾರಂಗಳಲ್ಲಿನ ಮಕ್ಕಳನ್ನು ರಕ್ಷಣೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರುಗಳಿಗೆ ಆರ್.ಪಿ.ಎಫ್ ಗುರುತಿನ ಚೀಟಿಗಳನ್ನು ನೀಡಬೇಕು
  • ಇಂತಹ ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿ, ಆರ್.ಪಿ.ಎಫ್ ಗೆ NCPCR ಸುತ್ತೋಲೆ ಕಳುಹಿಸಬೇಕು
  • ರೇಲ್ವೇ ಪ್ಲಾಟ್ ಫಾರಂಗಳಲ್ಲಿ ಕಾಣೆಯಾದ ಅಥವಾ ಸ್ಥಳಾಂತರಗೊಂಡ ಮಕ್ಕಳಿಗೋಸ್ಕರವಾಗಿ ಕೇಂದ್ರೀಕೃತ ದೂರು ನೀಡುವ ವ್ಯವಸ್ಥೆ ಇರಬೇಕು
  • ಮಾಹಿತಿ ವಿನಿಮಯ ಮಾಡಿಕೊಳ್ಳುವುದಕ್ಕಾಗಿ NCPCR ನಿಂದ ಕೇಂದ್ರೀಕೃತ ಡಾಟಾಬೇಸ್ ನಿರ್ವಹಿಸಲ್ಪಡ ಬೇಕು.
  • ಹತ್ತು ನಿಮಿಷಗಳ ಒಳಗೆ, ಸ್ಥಳಾಂತರಗೊಂಡ, ಕಾಣೆಯಾದ, ಹಿಂಸೆಗೊಳಗಾದ ಮಕ್ಕಳ ಬಗ್ಗೆ ಶೀಘ್ರಕ್ರಮ ಕೈಗೊಳ್ಳುವ ಶಿಷ್ಟಾಚಾರ ನಿಯಮಾವಳಿ ರೂಪಿಸಬೇಕು
  • NCPCR ನಿಂದ ಕ್ಷಿಪ್ರ ಕ್ರಮಕೈಗೊಳ್ಳುವ ವ್ಯವಸ್ಥೆ ರೂಪಿತವಾಗಬೆಕು
  • ರೇಲ್ವೇ ನಿಲ್ದಾಣದ ಸಮೀಪದಲ್ಲಿ ಒಂದು ಮಕ್ಕಳ ಕಲ್ಯಾಣ ಸಮಿತಿ ಸ್ಥಿತವಾಗಬೇಕು
  • ಆಶ್ರಯ ಗೃಹಗಳು ಕಾರಾಗೃಹದಂತಿರಬಾರದು; ನೈರ್ಮಲ್ಯ ಮತ್ತು ಆರೈಕೆಯಲ್ಲಿ ಅವು ಹೆಚ್ಚಾಗಿ ಕುಟುಂಬದಂತೆ ಇರಬೇಕು
  • ಆಶ್ರಯ ಗೃಹಗಳನ್ನು ಪರಿಷ್ಕರಣೆ ಮಾಡಬೇಕು ಮತ್ತು ಸಾಮಾಜಿಕ ಲೆಕ್ಕತಪಾಸಣೆ ಆಗಬೇಕು
  • ರೇಲ್ವೆ ಪ್ಲಾಟ್ ಫಾರಂಗಳಲ್ಲಿನ ಸ್ಥಳಾಂತರಿತ, ತಪ್ಪಿಸಿಕೊಂಡು ಬಂದ ಮತ್ತು ಹಿಂಸೆಗೆ ಒಳಗಾದ ಮಕ್ಕಳ ಆಶ್ರಯ ಗೃಹಗಳು ಮತ್ತು ಪುನರ್ವಸತಿ ಕೇಂದ್ರಗಳ ಜತೆ ಕಾರ್ಯ ಮಾಡುವ ಸರ್ಕಾರೇತರ ಸಂಸ್ಥೆಗಳ ಸಾಮಾಜಿಕ ಲೆಕ್ಕತಪಾಸಣಾ ಪ್ರಕ್ರಿಯೆಯನ್ನು NCPCR ರೂಪಿಸಬೇಕು

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate