ನಿಮ್ಮ ಶಾಲೆಯು ಮಗು ಸ್ನೇಹಿಯೆ? ಹಾಗಾಗಲು ಇರುವ ವಿಧಾನ::
- ಬೆತ್ತ ಬಳಸದೆ ಬಾಲ್ಯ ಉಳಿಸಿ ಎಂಬುದು ಮಕ್ಕಳ, ಶಾಲೆಯ , ತಾಯಿತಂದೆಯರ ಮತ್ತು ಒಟ್ಟಾರೆಯಾಗಿ ಸಮುದಾಯದ ಘೋಷಣೆ ಮತ್ತು ಸಂದೇಶವಾಗಬೇಕು..
- ಪ್ರತಿ ಶಾಲೆಯೂ ಒಬ್ಬ ತರಬೇತಿ ಪಡೆದ ಆಪ್ತ ಸಲಹೆಗಾರರನ್ನು ಹೋಂದಿರಬೇಕು.ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಯ ಲಕ್ಷಣಗಳಿರುವ ಮಕ್ಕಳ ಮತ್ತು ಅವರ ತಾಯಿತಂದೆಯರ/ ಪೋಷಕರಿಗೆ ಅಗತ್ಯವಿರುವ ಆಪ್ತಸಲಹೆ ನೀಡಿ ಸಹಾಯ ಮಾಡುವಂತಿರಬೇಕು
- ಶಾಲೆಯು ಸಾಮಾಜಿಕ ಕಾರ್ಯಕರ್ತನನ್ನು ಸಹಚರರ, ಕುಟುಂಬದ ಸಮುದಾಯದವರಿಂದ ಉತ್ತಮ ಪ್ರತಿಕ್ರಿಯೆ ಮೂಡಿಸಲು ಹೊಂದಿರಲೇಬೇಕು.
- ನಿಯತಕಲಿಕವಾದ ಕ್ರಮಬದ್ದ ತಾಯಿತಂದೆ , ಶಿಕ್ಷಕರ ಸಭೆ (PTA) ಗಳು ಶಾಲೆಯ ಅಗತ್ಯ.ಅಂಶವಾಗಬೇಕು.. PTAಗಳು ಶಿಕ್ಷಕರು , ತಾಯಿತಂದೆಯರು ಮಗುವಿನ ತರಗತಿಯ ಪ್ರಗತಿ ಮಾತ್ರವಲ್ಲದೆ, ಸರ್ವಾಂಗೀಣ ಅಭಿವೃದ್ಧಿ ಯ ಬಗ್ಗೆ ಸಂವಾದ ನೆಡೆಸುವ ವೇದಿಕೆಯಾಗಬೇಕು.
- ಶಿಕ್ಷಕರಿಗೆ ನೀಡುವ ಶೈಕ್ಷಣಿಕ ತರಬೇತಿಯಂತೆ ಮಕ್ಕಳ ಹಕ್ಕಿನ ಬಗ್ಗೆ ಅವರನ್ನು ಸಂವೇದನಾಶಿಲರಾಗಿಸಲು ಎಲ್ಲ ಶಾಲೆಗಳಲ್ಲಿ ತರಬೇತಿ ಮತ್ತು ಚಟುವಟಿಕೆಗಳು ಇರಬೇಕು
- ಶಾಲೆಯೊಳಗಡೆ ಮಕ್ಕಳಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಅವರು ಭಾಗವಹಿಸಲು ವೇದಿಕೆಯೊಂದು ನಿರ್ಮಾಣವಾಗಬೇಕು
- ಲೈಂಗಿಕ ಶಿಕ್ಷಣವು ಶಾಲೆಯಲ್ಲಿ ನೀಡುವ ಜೀವನ ಕೌಶಲ್ಯ ಶಿಕ್ಷಣದ ಮುಖ್ಯ ಭಾಗವಾಗಬೇಕು
- ಮೂಲ ಸೌಕರ್ಯಗಳಾದ ಶೌಚಾಲಯ (ಟಾಯಿಲೆಟ್) ಮತ್ತು ಕುಡಿಯುವ ನೀರು ಮಕ್ಕಳಿಗೆ ಶಾಲಾ ಆವರಣದಲ್ಲಿಯೇ ದೊರೆಯಬೇಕು. ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿರಬೇಕು. .
- ಗುಡಿಸಲು ಅಥವ ಒಂದೆ ಕೋಣೆಯಲ್ಲಿ ಶಾಲೆ ನಡೆಯುತ್ತಿದ್ದರೆ ಸಾಕಷ್ಟು ಅವಧಿಯ ವಿರಾಮವನ್ನು ನೀರು ಕುಡಿಯಲು ಮತ್ತು ಶೌಚಾಲಯ ಬಳಸುವುದಕ್ಕಾಗಿ ನಿತ್ಯ ನೀಡಬೇಕು.
- ವಿಕಲಚೇತನ ಸ್ನೇಹಿ ಮೂಲಸೌಕರ್ಯ ಮತ್ತು ಪಾಠೋಕರಣ ಸಾಮಗ್ರಿಗಳು ಶಾಲೆಯ ವಿಕಲ ಚೇತನರ ಬಗೆಗಿನ ಸಂವೇದನೆಯನ್ನು ಪ್ರತಿಬಿಂಬಿಸವುದು .ಸಾಧ್ಯವಾದಷ್ಟು ಎಲ್ಲವನ್ನೂ ಅಥವ ನಿಮ್ಮ ಸಂಪನ್ಮೂಲದ ಮಿತಿಯಲ್ಲಿ ಕೆಲವನ್ನಾದರೂ ಪಡೆದಿರುವ ಖಾತ್ರಿ ಮಾಡಿಕೊಳ್ಳಿ .ಸ್ಥಳೀಯ ಸಂಪನ್ಮೂಲಗಳನ್ನು ಈ ಅಗತ್ಯವನ್ನು ಪೂರೈಸಿಕೊಳ್ಳಲು ಕ್ರೋಢಿಕರಿಸಬೇಕು
- ಶಾಲೆಯ ಆವರಣದ ಹತ್ತಿರ ಮಾರಟಗಾರರು ಇರಬಾರದು
- ಶಾಲೆಗಳು ತಮ್ಮ ಶಿಕ್ಷಕರು ಮಕ್ಕಳನ್ನು ಮನೆ ಕೆಲಸಕ್ಕೆ ಬಳಸುವುದನ್ನು ನಿರುತ್ತೇಜಿಸಿದರೆ, ಅವರು ಸಮುದಾಯವು ಅನುಸರಿಸ ಬಹುದಾದ ಉತ್ತಮ ಉದಾಹರಣೆ ಕೊಟ್ಟಂತಾಗುವುದು.
- ಸಹಚರರರ ಗುಂಪನ್ನು ರಚಿಸಿ ಮಾದಕವಸ್ತುಗಳ ದುರ್ಬಳಕೆ ಅತವ ಇನ್ನಾವುದೋ ದುರ್ಬಳಕೆಯನ್ನುಶಾಲಾ ಅವರಣದಲ್ಲಿ ನಡೆಯದಂತೆ ಮಾಡುವುದು ಶಾಲೆಗಳು ಅನುಸರಿಸಬಹುದಾದ ಉತ್ತಮನಡೆ .
- ಶಿಕ್ಷಕರ ಮೇಲೆ ಮತ್ತು ಶಾಲೆಯ ಇತರ ಉದ್ಯೋಗಿಗಳ ಮೇಲೆ ಶಾಲೆಯಲ್ಲಿ ಅಥವ ಹೊರಗೆ ಮಕ್ಕಳ ಲೈಂಗಿಕ ದುರ್ಬಳಕೆಯ ದೂರುಬಂದಾಗ ಶಿಸ್ತು ಕ್ರಮದ ವಿಚಾರಣೆಯನ್ನು ನಡೆಸಲು ಮಾರ್ಗದರ್ಶಿ ಸೂತ್ರಗಳಿರಬೆಕು
- ಲಿಂಗ, ವಿಕಲತೆ, ಜಾತಿ , ಧರ್ಮ ಅಥವ ಹೆಚ್. ಐ. ವಿ ಏಡ್ಸ್ (HIV/AIDS) ಆಧಾರದ ಮೇಲೆ ತಾರತಮ್ಯವಾದರೆ ಅದನ್ನು ನಿಭಾಯಿಸಲು ಮಾರ್ಗದರ್ಶಿಸೂತ್ರಗಳು, ನಿಯಮಗಳು, ಪದ್ದತಿಗಳು ನಿಗದಿಗೊಳ್ಳಲಿ..
- ಶಾಲೆಗಳು ಮಕ್ಕಳ ರಕ್ಷಣಾ ಉಸ್ತುವಾರಿ ಕೋಶ (ಸೆಲ್) ರಚಿಸಬೇಕು. ಅದರಲ್ಲಿ ಮಕ್ಕಳು, ಅವರ ತಾಯಿತಂದೆಯರು, ಮತ್ತು ಪಂಚಾಯತಿಗಳು / ಪುರಸಭೆಗಳು ಇರಬೇಕು. ಈ ಘಟಕವು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ದಾಖಲೆ ಇಡಬೇಕು.ಮತ್ತು ಮಗುವಿನ ದುರ್ಬಳಕೆಯನ್ನು ಪೋಲೀಸರಿಗೆ ಇಲ್ಲವೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಮಾಡಬೇಕು
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 12/9/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.