ನಿಮ್ಮ ತರಗತಿಗೆ ಅವನು ಹಾಜರಾಗುವುದು ಉಪಯುಕ್ತ ಎಂಬ ಭಾವನೆ ಮಗುವಿಗೆ ಬರುವಂತೆ ಮಾಡಿ
- ಕಲಿಯುವಿಕೆಯಲ್ಲಿ ಮುಕ್ತತೆ ಇರಲಿ.
- ಮಗುವಿಗೆ ಗೆಳೆಯ, ದಾರ್ಶನಿಕ ಮತ್ತು ಮಾರ್ಗದರ್ಶಿಯಾಗಿ.
- ತರಗತಿಯನ್ನು ಆಸಕ್ತಿದಾಯಕ ಮತ್ತು ಮಾಹಿತಿ ಯುಕ್ತವಾಗಿಸಿ. ಏಕ ಮುಖ ಸಂವಹನವನ್ನು ಕೈಬಿಡಿ ಮತ್ತು ಮಕ್ಕಳಿಗೆ ತಮ್ಮ ಅನುಮಾನ ಪರಿಹರಿಸಿಕೊಳ್ಳಲು , ಪ್ರಶ್ನೆಗಳನ್ನು ಕೇಳಲು ಅವಕಾಶವಿರಲಿ.
- ದುರ್ಬಳಕೆ, ಕಲಿಕೆಯಲ್ಲಿನ ನ್ಯೂನ್ಯತೆಗಳೂ ಮತ್ತು ಇತರ ಎದ್ದು ಕಾಣದ ಗುಣಗಳನ್ನು ಗುರುತಿಸುವುದನ್ನು ಕಲಿಯಿರಿ
- ಮಕ್ಕಳು ತಮ್ಮ ಅಭಿಪ್ರಾಯ, ಕಾಳಜಿ, ದುಃಖ , ಭಯ ಇತ್ಯಾದಿ.ಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಅನುವಾಗುವಂತೆ ಸಂಬಂಧ ಬೆಳಸಿಕೊಳ್ಳಿ. ಮಕ್ಕಳನ್ನು ಅನೌಪಚಾರಿಕ ಮಾತುಕತೆಯಲ್ಲಿ ತೊಡಗುವಂತೆ ಮಾಡಲು ಪ್ರಯತ್ನಿಸಿ.
- ಒಳ್ಳೆಯ ಕೇಳುಗನಾಗಿ . ಮಕ್ಕಳು ಶಾಲೆಯಲ್ಲಿ ಅಥವ ಮನೆಯಲ್ಲಿ ಎದುರಿಸುವ ಸಮಸ್ಯೆಗಳನ್ನು ಹಂಚಿಕೊಳ್ಳಿ ಮತ್ತು ಚರ್ಚಿಸಿ
- ತಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದಾದ ವಿಷಯಗಳಲ್ಲಿ ಭಾಗವಹಿಸಲು ಪ್ರೊತ್ಸಾಹಿಸಿ.
- ಪರಿಣಾಮ ಕಾರಿಯಾಗಿ ಭಾಗವಹಿಸಲು ಅವರ ಸಾಮರ್ಥ್ಯವನ್ನು ಹೆಚ್ಚಿಸಿ.
- ಶಾಲಾ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಿ .
- ಮಕ್ಕಳ ಹಕ್ಕುಗಳ ಬಗ್ಗೆ ತಾಯಿತಂದೆಯರೊಡನೆ ಶಿಕ್ಷಕ ಮತ್ತು ತಾಯಿ-ತಂದೆಯವರ (PTA) ಸಭೆಯಲ್ಲಿ ಚರ್ಚಿಸಿ.
- ಶಾರೀರಿಕ ಶಿಕ್ಷೆಗೆ ಇಲ್ಲ ಎಂದು ಹೇಳಿ. ಇತ್ಯಾತ್ಮಕ ಪೂರಕ ತಂತ್ರಗಳಾದ ಸಂಭಾಷಣೆ, ಆಪ್ತ ಸಲಹೆ ಗಳನ್ನು ಉಪಯೋಗಿಸಿ ಮಕ್ಕಳಲ್ಲಿ ಶಿಸ್ತು ಮೂಡಿಸಿ.
- ತಾರತಮ್ಯಕ್ಕೆ ಇಲ್ಲ ಎಂದು ಹೇಳಿ. ಅಲ್ಪಸಂಖ್ಯಾತ ಮತ್ತು ತಾರತಮ್ಯಕ್ಕೆ ಒಳಗಾದ ಗುಂಪಿನ ಮಕ್ಕಳನ್ನು ತಲುಪಲು ಸಕ್ರಿಯ ಕ್ರಮ ತೆಗೆದುಕೊಳ್ಳಿ
- ನಿಷೇದಾತ್ಮಕ ಕ್ಲೀಷೆಗಳನ್ನು ನಿಲ್ಲಿಸಿ ಮತ್ತು ಬಾಲ ಕಾರ್ಮಿಕರ , ಬೀದಿ ಮಕ್ಕಳ ಲೈಂಗಿಕ ದುರ್ಬಳಕೆಗೆ, ಕುಟುಂಬ ದೌರ್ಜನ್ಯಕ್ಕೆ. ಮಾದಕ ವಸ್ತು ದುರ್ಬಳಕೆಗೆ,ಗುರಿಯಾದ ಸಾಗಣಿಕೆಗೆ ಒಳಗಾದ, ಕಾನುನಿನೊಡನೆ ಸಂಘರ್ಷನೆಡಿಸಿದ ಈ ರೀತಿಯ , ರಕ್ಷಣೆ ಅವಶ್ಯವಿರುವ ಮಕ್ಕಳ ವಿರುದ್ಧದ ತಾರತಮ್ಯವನ್ನು ನಿಲ್ಲಿಸಿ
- ನಿಮ್ಮ ಮನೆ ಮತ್ತು ಕೆಲಸದ ಸ್ಥಳದಲ್ಲಿ ಬಾಲಕಾರ್ಮಿಕರ ಬಳಕೆ ನಿಲ್ಲಿಸಿ.
- ಪ್ರಜಾತಂತ್ರ ಪರವಾಗಿರಿ ಆದರೆ ಅದರೆ ಅವ್ಯವಸ್ಥೆ ಬೇಡ
- ಮಕ್ಕಳಿಗೆ ಶಾಲೆಯಲ್ಲಿ ಹಾಗೂ ಸಮುದಾಯದಲ್ಲಿ ಸುರಕ್ಷತೆಯ ಖಾತ್ರಿ ನೀಡಿ ಅಗತ್ಯವಾದರೆ ಪೋಲೀಸರ ಮತ್ತು ಕಾನೂನಿನ ಕ್ರಮದ ಸಹಾಯ ಪಡೆಯಿರಿ.
- ಅವರಿಗೆ ಹಿರಿಯರ ಮುಂದೆ, ಸಮುದಾಯದ ಮುಂದೆ ತಮ್ಮ ಅಭಿಪ್ರಾಯ ಮಂಡಿಸಲು ಪ್ರೋತ್ಸಾಹಿಸಿ.
- ಕಾರ್ಯ ಕ್ರಮಗಳ ಸಂಘಟನೆಯಲ್ಲಿ ಅವರನ್ನು ತೊಡಗಿಸಿರಿ .ಅವರಿಗೆ ಹೊಣೆ ನೀಡಿ ಮತ್ತು ಅಗತ್ಯ ಮಾರ್ಗದರ್ಶನ ನೀಡಿ.
- ಹತ್ತಿರದ ಸ್ಥಳಗಳಿಗೆ ಪಿಕ್ ನಿಕ್ ಮತ್ತು ಖುಷಿಗಾಗಿ ಕರೆದುಕೊಂಡು ಹೋಗಿ.
- ಮಕ್ಕಳನ್ನು ಸಂವಾದ/ ಚರ್ಚೆ/ ರಸಪ್ರಶ್ನೆ ಮತ್ತು ಇತರೆ ಮನರಂಜನಾ ಚಟುವಟಿಕೆಗಲ್ಲಿ ತೊಡಗಿಸಿ.
- ಹೆಣ್ಣು ಮಕ್ಕಳಿಗೆ ತರಗತಿಯಲ್ಲಿ ರಚನಾತ್ಮಕ ಕ್ರಮಗಳಿಂದ ಶಿಕ್ಷಣದಲ್ಲಿ ಭಾಗವಹಿಸುವಂತೆ ಮಾಡಿ.
- ಶಾಲೆ ಬಿಟ್ಟ , ಶಾಲೆಗೆ ಸರಿಯಾಗಿಬಾರದ ಹೆಣ್ಣು ಮಕ್ಕಳನ್ನು ವಿಚಾರಿಸಿ ಶಾಲೆಗೆ ಕ್ರಮವಾಗಿ ಹಾಜರಾಗುವುದನ್ನು ಖಾತ್ರಿಪಡಿಸಿ..
- ಎಲ್ಲ ಶಿಕ್ಷಕರು ಮಕ್ಕಳ ಸುತ್ತಲೂ ರಕ್ಷಣಾ ವಾತಾವರಣವನ್ನು ನಿರ್ಮಾಣ ಮಾಡಬಹುದು.
- ನಿಮ್ಮ ಪರಿಶೀಲನೆಯು ಅತಿ ಮುಖ್ಯ. ನಿಮ್ಮ ತರಗತಿಯಲ್ಲಿರುವ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಅದರಿಂದ ಮಾತ್ರ ಅರಿಯಬಹುದು. ನೀವು ಸಮಸ್ಯೆಯೊಂದನ್ನು ಗಮನಿಸಿದರೆ , ನಮ್ಮ ಮುಂದಿನ ಹೆಜ್ಜೆ , ಅದಕ್ಕೆ ಕಾರಣ ಏನಿರಬಹುದು ಎಂಬದನ್ನು ಅರಿಯುವುದು.
- ನಿಮ್ಮ ಮುಂದಿನ ಪ್ರಶ್ನೆ ಮಗುವು ಕುಟುಂಬ, ಬಂಧುಗಳು, ಗೆಳೆಯರಿಂದ ಒತ್ತಡಕ್ಕೆ ಒಳಗಾಗಿರುವನೆ ಎಂಬುದನ್ನು ಅರಿಯುವುದು.
- ಮಗುವಿನೊಂದಿಗೆ ಸ್ವಲ್ಪ ಸಮಯವನ್ನು ಖಾಸಗಿಯಾಗಿ ಕಳೆಯಬೇಕು. ಮಗುವಿಗೆ ಒತ್ತಾಯ,ಅವಮಾನ, ಮುಜುಗರ ಮಾಡಬಾರದು ..
- ಮಗುವು ಸಮಸ್ಯೆಯನ್ನು ಚಿತ್ರ ಬಿಡಿಸುವ , ಕಥೆ ಬರೆಯುವ, ನಿಮ್ಮಜೊತೆ, ಶಾಲಾ ಆಪ್ತ ಸಲಹೇಗಾರರ ಜತೆ ಇಲ್ಲವೆ ಸಮಾಜಿಕ ಕಾರ್ಯಕರ್ತ ಅಥವ ಗೆಳೆಯನ ಜೊತೆ ಮಾತನಾಡುವ ಮೂಲಕ ಅಭಿವ್ಯಕ್ತಿ ಗೊಳಿಸಲು ಸಹಾಅಯ ಮಾಡಿ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 10/15/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.