ಶಿಕ್ಷಕನಾಗಿ ಹೆಚ್. ಐ. ವಿ (HIV) ಸೊಂಕಿತ ಅಥವ ಪೀಡಿತ ಮಗುವಿನ ಹಕ್ಕುಗಳು ಉಲ್ಲಂಘನೆ ಆಗದಂತೆ ಹೇಗೆ ಖಾತ್ರಿ ಗೊಳಿಸುವಿರಿ?
ಮಕ್ಕಳ ವಯಸ್ಸು ಮತ್ತು ಅವರ ಪಕ್ವತೆಯ ಮಟ್ಟಕ್ಕೆ ಅನುಸಾರವಾಗಿ ಲೈಮಗಿಕ ಶಿಕ್ಷಣ ಕೊಡಬೇಕು.
- ಮಕ್ಕಳಿಗೆ ಹೆಚ್. ಐ. ವಿ ಏಡ್ಸ್ (HIV/AIDS) ಬಗ್ಗೆ ಮಾಹಿತಿ ನೀಡಿ. ಅದು ಹೇಗೆ ಹರಡುವುದು, ವ್ಯಕ್ತಿಯಮೇಲೆ ಹೇಗೆ ಪರಿಣಾಮ ಬೀರುವುದು?, ಮತ್ತು ಅದನ್ನು ತಡೆಗಟ್ಟುವುದು ಹೇಗೆ? ಎಂಬುದನ್ನು ತಿಳಿಸಿ
- ತರಗತಿಯಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಿ. ಸೊಂಕಿತ ಮಕ್ಕಳಿನ್ನು ಕಳಂಕಿತರು ಎಂದು ಭಾವಿಸದಂತೆ ಮಾಡಬೇಕು.
- ಮಕ್ಕಳ ಸುತ್ತಲೂ ರಕ್ಷಕ ವತಾವರಣವನ್ನು ನಿರ್ಮಿಸಲು ಹಲವು ಹಂತದ ಪ್ರಯತ್ನ ಬೇಕು. ಅವು ಸಂವಾದ, ಪಾಲುಗಾರಿಕೆ ಮತ್ತು ಸಮನ್ವಯ ಆಧಾರಿತ ಹಂಚಿಕೊಂಡ ವಿಶ್ಲೇಷಣೆಯಿಂದ ಸಾಧ್ಯ. ಅದರ ಬಹಳಷ್ಟು ಅಂಶಗಳು ಸಾಂಪ್ರದಾಯಿಕ ಅಭಿವೃದ್ಧಿ ಚಟುವಟಿಗಳಿಗೆ ಮತ್ತು ವಿಧಾನಗಳಿಗೆ ಸಂವಾದಿಯಾಗಿರುವವು ,ಉದಾ: ಮೂಲಸೇವೆಗಳನ್ನು ಸುಧಾರಿಸುವುದ, ಫಲಿತಾಂಶಗಳನ್ನು ಉಸ್ತುವಾರಿ ಮಾಡುವುದು ಮತ್ತು ವ್ಯಕ್ತಿಯನ್ನು ಅವನ ಅಭಿವೃದ್ಧಿಯಲ್ಲಿನ ಮುಖ್ಯ ಪಾತ್ರಧಾರಿಯಾಗಿ ಗುರುತಿಸುವುದು ಇತ್ಯಾದಿ .
ಶಿಕ್ಷಕರಿಗೆ ಸರಕಾರದ ಮಕ್ಕಳಿಗಾಗಿರುವ ಯೋಜನೆಗಳು ಮತ್ತು ಅವುಗಳ ಲಾಭದ ಅರಿವಿರಬೇಕು . ಸಹಾಯದ ಅಗತ್ಯವಿರುವ ಮಕ್ಕಳನ್ನು , ಕುಟುಂಬಗಳನ್ನು ಮತ್ತು ಅವರಿಗೆ ಈಗಿರುವ ಕಾರ್ಯಕ್ರಮಗಳ ಅಡಿಯಲ್ಲಿ ದೊರೆಯಬಹುದಾದ ಸಹಾಯವನ್ನು ಗುರುತಿಸಿರಬೇಕು ಅಂಥಹ ಮಕ್ಕಳ ಮತ್ತು ಕುಟುಂಬಗಳ ಪಟ್ಟಿಯನ್ನು ಬ್ಲಾಕ್/ತಾಲೂಕು/ಮಂಡಲಪಂಚಾಯತ್ ಸದಸ್ಯರಿಗೆ ಅಥವ BDPO ಅವರಿಗೆ ನೇರವಾಗಿ ಕೊಡಬಹುದು.
ಮಕ್ಕಳನ್ನು ನೀವು ರಕ್ಷಿಸಲು ಕೆಳಕಂಡ ವ್ಯಕ್ತಿಗಳ ಜತೆ ವ್ಯವಹರಿಸಬೇಕಾಗುವುದು :
- ಪೋಲೀಸರು
- ನಿಮ್ಮ ಪಂಚಾಯತಿ/ ನಗರಸಭೆ/ ಪುರಸಭೆಯ ಮುಖ್ಯಸ್ಥರು , ಸದಸ್ಯರು.
- ಅಂಗನವಾಡಿ ಕಾರ್ಯಕರ್ತರು.
- ಆರೋಗ್ಯ ಕಾರ್ಯಕರ್ತೆ (ಎ ಎನ್ ಎಂ) ಗಳು.
- ಬ್ಲಾಕ್ /ತಾಲೂಕು/ಮಂಡಲ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು.
- ಕ್ಷೇತ್ರ ಅಭಿವೃದ್ಧಿ ಅಧಿಕಾರಿ (ಬ್ಲಾಕ್ ಡೆವಲಪ್ ಮೆಂಟ್ ಆಫಿಸರ್ (BDO) ಅಥವ ಕ್ಷೇತ್ರ ಅಭಿವೃದ್ಧಿ ಮತ್ತು ಪಂಚಾಯ್ತಿ ಅಧಿಕಾರಿ (ಬ್ಲಾಕ್ ಡೆವಲಪ್ ಮೆಂಟ್ ಮತ್ತು ಪಂಚಾಯತ್ ಆಫಿಸರ್ (BDPO).
- ಸಮುದಾಯ ಅಭಿವೃದ್ಧಿ ಅಧಿಕಾರಿ (ಕಮ್ಯುನಿಟಿ ಡೆವಲಪ್ ಮೆಂಟ್ ಆಫೀಸರ್ (CDO) ಅಥವ ಸಮುದಾಯ ಅಭಿವೃದ್ಧಿ ಮತ್ತು ಪಂಚಾಯ್ತಿ ಅಧಿಕಾರಿ (ಕಮ್ಯುನಿಟಿ ಡೆವಲಪ್ ಮೆಂಟ್ ಮತ್ತು ಪಂಚಾಯತ್ ಆಫೀಸರ್) .
- ಜಿಲ್ಲಾ ಮ್ಯಾಜಿಸ್ಟ್ರೇಟರು / ಜಿಲ್ಲಾ ಕಲೆಕ್ಟರ್.
- ಹತ್ತಿರದ ಮಕ್ಕಳ ಕಲ್ಯಾಣ ಸಮಿತಿ.
- ನಿಮ್ಮಪ್ರದೇಶದ ಮಕ್ಕಳ ಸಹಾಯ ವಾಣಿ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 4/24/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.