অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶಿಕ್ಷಣ ಇಲಾಖೆ ನಿರ್ದೇಶನಗಳು

ಶಿಕ್ಷಣ ಇಲಾಖೆ ನಿರ್ದೇಶನಗಳು

ಆಂದೋಳನಗಳ ಮೂಲಕ ಮಕ್ಕಳಿಗೆ ಶಾರೀರಿಕ ದಂಡನೆ ವಿರುದ್ಧ ದನಿಯೆತ್ತಲು ಮತ್ತು ಅವುಗಳ ಬಗ್ಗೆ ಸೂಕ್ತಪ್ರಾಧಿಕಾರಕ್ಕೆ ದೂರು ನೀಡುವ ಹಕ್ಕಿದೆ ಎಂದು ತಿಳಿಸಬೇಕು

ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ, ಬಾಲಾಪರಾಧಿಗಳ ವಸತಿಗಳಲ್ಲಿ ಆಶ್ರಯ ಧಾಮಗಳಲ್ಲಿ ಸೂಕ್ತ ವೇದಿಕೆ ಆರಂಭಿಸಿ ಮಕ್ಕಳು ತಮ್ಮ ದೃಷ್ಟಿಕೋನವನ್ನರಹುವ ಅವಕಾಶ ನೀಡುವುದು

ಪ್ರತೀ ಶಾಲೆಯಲ್ಲೂ ದೂರು ಪೆಟ್ಟಿಗೆಯನ್ನಿಡುವುದು.

ಪೋಷಕ – ಬೋಧಕ ಸಂಘ, ಶಾಲಾಶೈಕ್ಷಣಿಕ ಸಮಿತಿ, ಮತ್ತು ಗ್ರಾಮ ಶಿಕ್ಷಣ ಸಮಿತಿಗಳು ತಿಂಗಳಿಗೊಮ್ಮೆ ಸಭೆ ಸೇರಿ ದೂರುಪಟ್ಟಿಗೆ ತೆರೆದು ದೂರುಗಳನ್ನು ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳ ಬೇಕು.

ಹೆಚ್ಚಿನ ಆಘಾತ ಉಂಟಾಗುವ ಮೊದಲೇ ಪೋಷಕ-ಬೋಧಕ ಸಂಘವು ಮಕ್ಕಳು ನೀಡಿರುವ ದೂರುಗಳ ಬಗ್ಗೆ ತಕ್ಷಣದಕ್ರಮ ಕೈಗೊಳ್ಳಲು ಪ್ರೋತ್ಸಾಹಿಸುವುದು.

ಮಕ್ಕಳು ಶಾಲೆಯ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಶಾರೀರಿಕ ದಂಡನೆಯ ವಿರುದ್ಧ ಭಯ ಮುಕ್ತವಾಗಿ ದನಿಯೆತ್ತಲು ಮಕ್ಕಳಿಗೆ ಹಾಗೂ ಪೋಷಕರಿಗೆ ಪ್ರೋತ್ಸಾಹ ನೀಡಬೇಕು

ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಶಿಕ್ಷಣ ಇಲಾಖೆಯು ಮಕ್ಕಳ ದೂರುಗಳಿಗೆ ಪ್ರತಿಕ್ರಿಯೆಗಳನ್ನು ಪರಿಷ್ಕರಿಸಲು ವಿಧಿವಿಧಾನಗಳನ್ನು ರೂಪಿಸಬೇಕಲ್ಲದೆ, ಕ್ರಮ ಕೈಗೊಂಡಿದ್ದರ ಅನುಪಾಲನೆ ಮಾಡಬೇಕು. ಇವೆಲ್ಲಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಂಡರೆ ಮಾತ್ರ ಮಕ್ಕಳ ಶಾಲೆಗೆ ಹೋಗುವ ಅನುಭವ ಉಲ್ಲಾಸದಾಯಕವಾಗುತ್ತದೆ. ಇದು ಆಗಬೇಕಾದರೆ, ಶಿಕ್ಷಕರು ದಂಡರಹಿತರಾಗಲೇ ಬೇಕು

ಪ್ರತೀ ಮಗುವೂ ತನ್ನ ಹಕ್ಕುಗಳನ್ನು ಆನಂದಿಸುವಂತೆ ಅದನ್ನು ಸಂರಕ್ಷಿಸಬೇಕು
ಮಕ್ಕಳನ್ನು ಸಂರಕ್ಷಿಸಬೇಕು, ಸಂಸ್ಥೆಗಳನ್ನು ಅಲ್ಲ ಎಂಬುದಕ್ಕೆ ಪ್ರಾಮುಖ್ಯತೆಯನ್ನು ಖಚಿತಗೊಳಿಸಿಕೊಳ್ಳುವುದರ ದಿಸೆಯಲ್ಲಿ ಅನೇಕ ಶಿಫಾರಸುಗಳನ್ನು ಮಾಡಲಾಗಿದೆ. ಪ್ರತಿಯೊಂದು ಮಗುವೂ ಭಯಮುಕ್ತವಾಗಿ ತನ್ನ ಹಕ್ಕುಗಳನ್ನು ಅನುಭವಿಸಲು ಪೋಷಕರು ಶಿಕ್ಷಕರು ಮತ್ತು ಶಾಲಾಡಳಿತಗಳು ಒಟ್ಟಿಗೇ ಕ್ರಮ ಕೈಗೊಳ್ಳುವುದು ಅಗತ್ಯ.

ಶಿಫಾರಸುಗಳು

ಒಂದು ಸಂಸ್ಥೆ (ಶಾಲೆ/ ವಿದ್ಯಾರ್ಥಿನಿಲಯ/ ಮಕ್ಕಳ ಆಶ್ರಯ)ಯಲ್ಲಿ ನೋಂದಣಿಯಾದ ಮಕ್ಕಳ ಯೋಗಕ್ಷೇಮಕ್ಕೆ ಸಂಸ್ಥೆಯನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ಪೋಲೀಸ್ ಸ್ಟೇಷನ್/ ಕಾರಾಗೃಹದಲ್ಲಿರುವರು ಸಾವಿಗೆ ಈಡಾದರೆ ಪೋಲೀಸರನ್ನೇ ಜವಾಬ್ದಾರರನ್ನಾಗಿ ಮಾಡುವಂತೆ, ಒಂದು ಸಂಸ್ಥೆಯಲ್ಲಿನ ಮಗುವಿನ ಗಾಯ/ ಅನಾರೋಗ್ಯ ಹಲ್ಲೆ/ ಸಾವಿಗೆ ಸಂಸ್ಥೆಯನ್ನೇ ಹೊಣೆಮಾಡಲಾಗುತ್ತದೆ.

ಸಂಸ್ಥೆಯಲ್ಲಿಯೇ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಗುವಿನ ಸಾವು/ ಗಾಯ/ ಆಸ್ಪತ್ರೆಗೆ ದಾಖಲು ಈ ಪ್ರಕರಣಗಳಲ್ಲಿ ತಗುಲುವ ವೆಚ್ಚವನ್ನು ಸಂಸ್ಥೆಯೇ ಭರಿಸಬೇಕು.

ಮಕ್ಕಳ ವಿರುದ್ಧದ ಯಾವುದೇ ದೌರ್ಜನ್ಯ ಕುರಿತು ಶಿಕ್ಷಣ ಇಲಾಖೆ/ ನಿಗಮವು ಸಮಾಂತರ ವಿಚಾರಣೆಯನ್ನು ನಡೆಸಬೇಕು. ಇಂತಹ ತನಿಖೆಗಳಲ್ಲಿ ಪೋಷಕ ಬೋಧಕ ಸಂಘವನ್ನು ಸೇರ್ಪಡಿಸಿಕೊಳ್ಳಬೇಕು.

ಮಗುವು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪ್ರಸಂಗದಲ್ಲಿ, ತಂದೆ ತಾಯಿಗಳು ದೂರನ್ನು ಹಿಂತೆಗೆದರೂ, ಅಪರಾಧವನ್ನು ಸರ್ಕಾರವೇ ಗಣನೆಗೆ ತೆಗೆದುಕೊಂಡು ಮಗುವಿಗೆ ಯಾವುದೇ ರೀತಿಯ ತೊಂದರೆ ಉಂಟುಮಾಡದೇ, ಅಪರಾಧ ಎಸಗಿದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು

ತಾರತಮ್ಯವೆಸಗಿದ್ದನ್ನು ಮಗು ಹೇಳಿಕೆ ನೀಡಿದರೆ, ಎಸ್/ ಎಸ್ ಟಿ (ಪಿ.ಓ.ಎ) ಅಧಿನಿಯಮದ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಕೊಳ್ಳಬೇಕಾದ ಅಗತ್ಯವಿದೆ.

ಶಾರೀರಿಕ ದಂಡನೆಯ ಪ್ರಕರಣಗಳಲ್ಲಿ ಅಂತಹ ದಂಡನೆಯ ಕುರಿತು ಶಿಕ್ಷಣ ಇಲಾಖೆ/ ಮಂಡಳಿಯು ಸಾಮಾಜಿಕ ತನಿಖೆ ನಡೆಸಬೇಕು

ಪ್ರತೀ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಬೆಂಬಲ ನೀಡಬೇಕಲ್ಲದೆ, ಅದನ್ನು ಮಕ್ಕಳ ಕಲ್ಯಾಣಕ್ಕಾಗಿ ಸಖಲಗೊಳಿಸಬೇಕು

ಮಗುವಿನ ಸಾವು/ ಆತ್ಮಹತ್ಯೆ (ಆತ್ಮಹತ್ಯೆಗೆ ಯತ್ನ) ಇಂತಹ ಪ್ರಕರಣಗಳಲ್ಲಿ ‘ಆತ್ಮ ಹತ್ಯೆಗೆ ದುಷ್ಟ್ರೇಪರಣೆ’ ಎಂದು ಪರಿಗಣಿಸಿ ಆಡಳಿತ ವರ್ಗವನ್ನು ಉತ್ತರದಾಯಿಯನ್ನಾಗಿ ಮಾಡಬೇಕು

ಮಗುವಿನ ಆತ್ಮಹತ್ಯೆಯ ಪ್ರಕರಣವನ್ನು ‘ಆತ್ಮಹತ್ಯೆಗೆ ಯತ್ನ’ದ ಅಡಿಯಲ್ಲಿ ದಾಖಲಿಸಲಾಗದು ಏಕೆಂದರೆ ಕಾನೂನಿನಡಿಯಲ್ಲಿ ಮಗುವನ್ನು ಎರಡು ಬಾರಿ ಬಲಿಪಶುವನ್ನಾಗಿ ಮಾಡಿದಂತಾಗುತ್ತದೆ.

ಶಿಕ್ಷಕ/ ರು ರಿಂದಾಗಿ ಆತ್ಮಹತ್ಯೆ/ ಲೈಂಗಿಕ ದೂಷಣೆ/ ಆಸ್ಪತ್ರೆಗೆ ದಾಖಲು ಇಂತಹ ಪ್ರಕರಣಗಳಲ್ಲಿ ಆರೋಪಿಯನ್ನು ತಕ್ಷಣ ಅಮಾನತುಗೊಳಿಸಿ ವಿಚಾರಣೆಗೆ ಅಧೀನ ಪಡಿಸತಕ್ಕದ್ದು. ಒಂದೊಮ್ಮೆ ಮಗುವನ್ನು ಅನುಮಾನಾಸ್ಪದ ಗಾಯ/ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಿದ್ದರೆ, ಆಸ್ಪತ್ರೆಯ ಪ್ರಾಧಿಕಾರ ಇದನ್ನು ಆರೋಗ್ಯ ಕಾನೂನು ಪ್ರಕರಣವೆಂದು ದಾಖಲಿಸಿ ಮಗುವಿನ ಹೇಳಿಕೆಯನ್ನು ದಾಖಲಿಸಿ ಕೊಳ್ಳಬೇಕು

ಒಂದೊಮ್ಮೆ ಮಗು ವಿದ್ಯಾರ್ಥಿನಿಲಿಯದಲ್ಲಿ ಅನಾರೋಗ್ಯಕ್ಕೆ ಒಳಗಾದರೆ ಮಗುವನ್ನು ಆಸ್ಪತ್ರೆಗೆ ಹೇಗೆ ಕೊಂಡೊಯ್ಯ ಬೇಕು ಆ ಖರ್ಚನ್ನು ನೀಡುವುದು ಹೇಗೆ? ಅದರ ಖರ್ಚನ್ನು ಕೊಡುವವರು ಯಾರು? ಇದಕ್ಕೆ ಹೇಗೆ ನೀಡಿಕೆಯಾಗ ಬೇಕು? ಮಗುವಿನ ತಂದೆ ತಾಯಿಗಳು ಅಸ್ಪತ್ರೆಗೆ ಅಲೆದಾಡಬೇಕಾಗುವ ಖರ್ಚಿನ ನೀಡಿಕೆ ಹೇಗೆ ಎಂಬಿತ್ಯಾದಿಗಳಿಗೆ ಅಗತ್ಯವಾದ ಅನುದಾನಗಳನ್ನು ಶಿಕ್ಷಣ ಇಲಾಖೆ/ ಎಸ್.ಡ್ಲ್ಯು.ಐ.ಡಿ ಸಿದ್ಧಪಡಿಸಿಕೊಳ್ಳತಕ್ಕದ್ದು

ಖಾಸಗಿ ಸಂಸ್ಥೆಗಳು

ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಮುಂದಾದ ಖಾಸಗೀ ಸಂಸ್ಥೆಗಳು/ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಪೂರ್ವದಲ್ಲಿ ಅವುಗಳಿಗೆ ಅನುಮತಿ ನೀಡುವ ವಿಧಿವಿಧಾನಗಳು ಮತ್ತು ಅವುಗಳ ಮೇಲ್ವಿಚಾರಣೆಯ ರೀತಿಗಳನ್ನು ಪರಿಷ್ಕರಿಸಬೇಕು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate