ನೀರೆತ್ತುವಿಕೆ (ಪಂಪಿಂಗ್)
ಕೆಲವು ಚಿಕ್ಕ/ದೊಡ್ಡ ಹೊಂದಾಣಿಕೆಗಳಿಂದ ಮತ್ತು ಐಎಸ್ಐ ಮುದ್ರೆ ಇರುವ ಪಂಪ್ಗಳಿಗೆ ವರ್ಗಾವಣೆಗೊಳ್ಳುವ ಮೂಲಕ ಈ ಪಂಪ್ಸೆಟ್ಗಳ ಕಾರ್ಯಕ್ಷಮತೆಯನ್ನು 25% ರಿಂದ 30% ರಷ್ಟು ಹೆಚ್ಚಿಸುವ ಅವಕಾಶಗಳಿವೆ.ದೊಡ್ಡ ಕವಾಟವು ವಿದ್ಯುಚ್ಛಕ್ತಿಯ/ಡೀಸೆಲ್ನ ಉಳಿತಾಯಕ್ಕೆ ಸಹಕಾರಿ. ಏಕೆಂದರೆ, ಇದರಿಂದಾಗಿ ಬಾವಿಯ ನೀರನ್ನು ಮೇಲಕ್ಕೆತ್ತಲು ಕಡಿಮೆ ಇಂಧನ ಮತ್ತು ಶಕ್ತಿ ಸಾಕಾಗುತ್ತದೆ. ಕೊಳವೆಯಲ್ಲಿ (ಪೈಪ್ನಲ್ಲಿ) ತಿರುಗಣೆಗಳು ಮತ್ತು ಜೋಡಣೆಗಳು ಕಡಿಮೆ ಇದ್ದಷ್ಟೂ ವಿದ್ಯುಚ್ಛಕ್ತಿ ಹೆಚ್ಚು ಉಳಿತಾಯವಾಗುತ್ತದೆ ಕೊಳವೆಯಲ್ಲಿನ ತೀಕ್ಷ್ಣ ತಿರುಗಣೆಗಳು ಸಾಮಾನ್ಯ ತಿರುಗಣೆಗಳಿಗಿಂತ 70% ರಷ್ಟು ಹೆಚ್ಚು ನಷ್ಟಕ್ಕೆ ಕಾರಣವಾಗುತ್ತವೆ.ಕೇವಲ ಕೊಳವೆಯ ಎತ್ತರವನ್ನು 2 ಮೀಟರ್ಗಳಷ್ಟು ತಗ್ಗಿಸುವ ಮೂಲಕವೇ ರೈತರು ಪ್ರತಿ ತಿಂಗಳು 15 ಲೀಟರ್ಗಳಷ್ಟು ಡೀಸೆಲ್ ಅನ್ನು ಉಳಿತಾಯ ಮಾಡಬಹುದು. ಬಾವಿಯ ನೀರಿನ ಮಟ್ಟದಿಂದ 10 ಅಡಿಗಳಿಗಿಂತ ಕಡಿಮೆ ಎತ್ತರದಲ್ಲಿರುವ ಪಂಪ್ಗಳು ಹೆಚ್ಚು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತವೆ.ಉತ್ತಮ ಗುಣಮಟ್ಟದ ಪಿವಿಸಿ ಹೀರುಪಂಪ್ಗಳನ್ನೆ ಬಳಸಿ, ಶಕ್ತಿಯನ್ನು ಉಳಿಸಿ ಮತ್ತು ಶೇ.20 ರಷ್ಟು ವಿದ್ಯುಚ್ಛಕ್ತಿಯನ್ನು ಉಳಿತಾಯ ಮಾಡಿ.ಪಂಪ್ಸೆಟ್ಗೆ ಉತ್ಪಾದಕರ ಶಿಫಾರಿಸನನ್ವಯ ನಿಯಮಿತವಾಗಿ ತೈಲ ಮತ್ತು ಗ್ರೀಸ್ಗಳನ್ನು ಲೇಪಿಸುತ್ತಿರಿ.ಶಕ್ತ್ಯಂಶ ಮತ್ತು ವೋಲ್ಟೇಜ್ಗಳನ್ನು ಉತ್ತಮಪಡಿಸುವುದಕ್ಕಾಗಿ ಮೋಟಾರ್ನೊಂದಿಗೆ ಸೂಕ್ತ ಸಾಮರ್ಥ್ಯವಿರುವ, ಐಎಸ್ಐ ಮುದ್ರೆಯ ಶಂಟ್ ಕೆಪಾಸಿಟರ್ಗಳನ್ನು ಬಳಸಿ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/15/2020