ಬೇಸಿಗೆಯನ್ನು ಎದುರಿಸಲು ಪರಿಸರ ಸ್ನೇಹಿ ವಿಧಾನ ಹೆಚ್ಚು ನೀರು ಕುಡಿಯಿರಿ. ಬಾಟಲಿಯಲ್ಲಿನ ನೀರು ಬೇಡ. ಅವು ತ್ಯಾಜ್ಯವನ್ನುಹೆಚ್ಚಿಸುವವು.. ನೈಸರ್ಗಿಕ ಸಂಪನ್ಮೂಲವನ್ನು ಕಡಿಮೆಮಾಡುವವು. ಕೆಫಿನ್ ಇರುವ ಪಾನೀಯ ಬೇಡ. ನೈಸರ್ಗಿಕವಾಗಿತಂಪು ಮಾಡುವ ಮಜ್ಜಿಗೆ ಕುಡಿಯಿರಿ.. ತಿಳಿ ಬಣ್ಣದ ಬಟ್ಟೆ ಧರಿಸಿ.ಹತ್ತಿ ಬಟ್ಟೆಗೆ ಆದ್ಯತೆಇರಲಿ. ದೇಹದಲ್ಲಿ ನೀರಿನ ಕೊರತೆಯಾಗುವುದನ್ನುತಪ್ಪಿಸಲು ಹೆಚ್ಚು ಹೆಚ್ಚು ದ್ರವಪದಾರ್ಥ ಸೇವಿಸಿ. ನಿಂಬೆ ಪಾನ, ಎಳನೀರು, ಹಣ್ಣಿನ ರಸ ಇತ್ಯಾದಿ. ಎಳನೀರಿನಲ್ಲಿ ಸಕ್ಕರೆ, ನಾರು, ಪ್ರೋಟೀನ್ ವಿಟಮಿನ್ಗಳು ಮತ್ತು ಲವಣಗಳು ಇರುತ್ತವೆ. ಹೆಚ್ಚು ಸಲಾಡ್ ಅನ್ನು ತಿನ್ನಿರಿ. ಕಲ್ಲಂಗಡಿ ಹಣ್ಣಿನಂತಹ ಕೆಚ್ಚು ನೀರಿನ ಅಂಶವಿರುವ ತಾಜಾ ಹಣ್ಣು ಸೇವಿಸಿ ಅದರಲ್ಲಿ 92% ನೀರು, ವಿಟಮಿನ್ ಸಿ 14% ನವರೆಗೆ ಇರುವುದುಅದು ಬೆವರಿನಿಂದ ನಷ್ಟವಾದ ನಾರಿನ ಅಂಶದ ಮರುಪೂರಣಕ್ಕೆ ಸಹಾಯಮಡುವುದು. ತುಸು ಪ್ರಮಾಣದ ವಿಟಮಿನ್ ಬಿಮತ್ತು ಪೊಟಾಸಿಯಂ ಕೂಡಾ ಅದರಲ್ಲಿದೆ.. ಹೂಜಿಯಲ್ಲಿಟ್ಟ ನೀರು ಕುಡಿಯಿರಿ ಕರಿದ ಪದಾರ್ಥಗಳನ್ನು, ರಸ್ತೆ ಬದಿಯಲ್ಲಿ ನೊಣ ಮತ್ತು ಧೂಳು ಕೂಡಬಹುದಾದ ಕತ್ತರಿಸಿದ ಹಣ್ಣುಗಳು ಬೇಡ. ಬೀಸಣಿಕೆ ಬಳಸಿ. ವಿದ್ಯುತ್ ಇಲ್ಲದಾಗಲೂ ಅದು ಸಹಾಯಕ್ಕೆ ಬರುವುದು.. ಕಿಟಕಿಗೆ ಲಾವಂಚದಿಂದ ಮಾಡಿದ ಚಾಪೆಯನ್ನು ಒದ್ದೆ ಮಾಡಿ ಪರದೆಯಂತೆ ಹಾಕಿ.. ಅದು ತಂಪಾದ ಗಾಳಿಮನೆಯಲ್ಲಿ ಪರಿಚಲಿಸಲು ಸಹಾಯ ಮಾಡುವುದು. ಮೂಲ: ಪೋರ್ಟಲ್ ತಂಡ