ಇಂಧನವೆಂಬುದು ಚಲಿಸುವ ಚಕ್ರಗಳಿಗೆ ಚಾಲನೆ ದೊರಕಿಸುವ ಶಕ್ತಿ. ಎಲ್ಲೇ ಜೀವಿಗಳಿಗೂ, ಎಲ್ಲ ಚಲನೆಗೂ ಒಂದೊಂದು ಬಗೆಯ ಶಕ್ತಿ ಅವಶ್ಯಕ.ಇಂಧನ ಇಂತಹ ಶಕ್ತಿಯ ಮೂಲ. ಇಂಧನವು ಎಲ್ಲ ಬಗೆಯ ಕೈಗಾರಿಕೆಗಳಿಗೂ,ವ್ಯವಸಾಯ ಮತ್ತು ಅಭಿವೃದ್ದಿ ಚಟುವಟಿಕೆಗಳಿಗೂ ತಳಹದಿ ಇದ್ದಂತೆ. ಇಂತಹ ಅವಶ್ಯಕ ವಸ್ತುವೆನಿಸಿಕೊಳ್ಳುವ ಇಂಧನದ ಮೂಲಗಳು ಬಗೆ ಬಗೆಯಾಗಿವೆ. ಒಣಗಿದ ಕಡ್ಡಿ, ಪಳೆಯುಳಿಕೆ, ಗಾಳಿ, ನೀರು ಮತ್ತು ಸೂರ್ಯ ಇವೆಲ್ಲಾ ಇಂಧನದ ಮೂಲಗಳೆಂದು ಭಾವಿಸಲಾಗಿದೆ. ಅಲೆಯುಲಿಕೆ ಸಾಂಪ್ರದಾಯಿಕ ಇಂಧನದ ಮೂಲ ಎನಿಸಿದೆ. ಕಲ್ಲಿದ್ದಲು, ಲಿಗ್ನೈಟ್, ಪೆಟ್ರೋಲಿಯಂ ಮತ್ತು ಅನಿಲ ಇವುಗಳೆಲ್ಲವೂ ಇಂಧನದ ಮೂಲಗಳು. ಮತ್ತೊಂದು ಬಗೆಯ ಪುರಾತನ ಕಾಲದ ಇಂಧನ (ಒಣಗಿದ) ಉರುವಲು, ಪ್ರಾಣಗಳ ಸಗಣಿ, ಮತ್ತು ವ್ಯವಸಾಯದ ಉಳಿಕೆಗಳು, (ಕಸ-ಕಡ್ಡಿ) ಆದರೆ ಇವುಗಳನ್ನು ವಾಣಿಜ್ಯೇತರ ಇಂಧನವೆನ್ನುತ್ತಾರೆ.ದುರದೃಷ್ಟದಿಂದ ಸಾಂಪ್ರದಾಯಿಕ ಇಂಧನ ಮೂಲಗಳು ಕ್ರಮಕ್ರಮೆಣ ಕೊನೆಗಾಣುತ್ತಿವೆ. ಈಗ ದೊರಕುತ್ತಿರುವ ಇಂಧನ ಪ್ರಮಾಣವು ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲಾಗದೆ ಕೊರತೆಯನ್ನು ಎದುರಿಸಬೇಕಾಗಿದೆ.
ಭಾರತವು ಅಭಿವೃದ್ದಿಶೀಲ ರಾಷ್ಟ್ರವಾಗಿರುವುದರಿಂದ ಆರ್ಥಿಕ ಮತ್ತು ಕೈಗಾರಿಕೆಯ ಅಭಿವೃದ್ದಿಗಾಗಿ ಹೆಚ್ಹು ಹೆಚ್ಚಾಗಿ ಇಂಧನದ ಅವಶ್ಯಕತೆ ಇದೆ. ಭಾರತದಲ್ಲಿ ಎಲ್ಲಾ ವಿಧದ ಆರ್ಥಿಕ ಚಟುವಟಿಕೆಗಳಿಗೂ ಇಂಧನ ಉಪಯೋಗವಾಗುತ್ತಿದೆ. ಇದರ ಅವಶ್ಯಕತೆ ಮತ್ತು ಕೊರತೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಅಭಿವೃದ್ದಿ ಹೊಂದಿರುವ ರಾಷ್ಟ್ರಗಳಾದ ಅಮೇರಿಕ, ಯುರೋಪ್, ಜರ್ಮನಿ, ಜಪಾನ್ ರಾಷ್ಟ್ರಗಳಲ್ಲಿಯೂ ಈ ಕೊರತೆ ಕಂಡುಬರುತ್ತಿದೆ. ಒಂದು ರಾಷ್ಟ್ರದ ಅಭಿವೃದ್ದಿ ಮತ್ತು ಲಭ್ಯವಿರುವ ಇಂಧನ ಇವೆರಡಕ್ಕೂ ನಿಕಟ ಸಂಬಂದವಿದೆ. ಭಾರತದಲ್ಲೂ ಈಗ ನಾಲ್ಕು ದಶಕಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ೪೨ ರಷ್ಟು ವೃದ್ದಿಯಾಗಿದೆ. ಕಲ್ಲಿದ್ದಲು ಸುಮಾರು ಆರರಷ್ಟು ಮತ್ತು ಕಚ್ಚಾ ತೈಲ ೧೩೦ ರಷ್ಟು ಉತ್ಪಾದನೆ ಹೆಚ್ಚಿದೆ. ಆದರೂ ಸಹ ಅವಶ್ಯಕತೆ ಮತ್ತು ಉತ್ಪಾದನೆ ಇವುಗಳ ಮಧ್ಯೆ ದೊಡ್ಡ ಅಂತರವೆರ್ಪಟ್ಟಿದೆ. ಈ ಬಗೆಯ ಅಂತರವನ್ನು ತುಂಬಿಕೊಳ್ಳಲು ಅನೇಕ ಬಗೆಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಅವುಗಳಲ್ಲಿ ಮುಖ್ಯವಾದುವು- ಹೊರದೇಶದಿಂದ ಆಮದು ಮಾಡಿಕೊಳ್ಳುವುದು. ಸ್ಥಳೀಯ ಉತ್ಪನ್ನವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಇರುವುದನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವುದಲ್ಲದೆ ಉಳಿತಾಯ ಮಾಡುವುದನ್ನು ರೋಡಿಸಿಕೊಳ್ಳುವುದೂ ಸೇರಿದಂತೆ ಅನೇಕ ಬಗೆಯ ಮಾರ್ಗೋಪಾಯಗಳನ್ನು ಅನುಸರಿಸಲಾಗುತ್ತಿದೆ. ೨೦೦೦-೦೧ ರಲ್ಲಿ ಸುಮಾರು ೭೧೫೦೦ ಕೋಟಿ ರೂಪಾಯಿಗಳ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡು ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸಲಾಯಿತು. ನಮ್ಮ ದೇಶದಲ್ಲಿ ಎಣ್ಣೆ ಭಾವಿಗಳ ಶೋದನೆ ಮತ್ತು ಉತ್ಪಾದನೆಗಳಲ್ಲಿ ನಾವು ಆದಷ್ಟು ಪ್ರಗತಿ ಸಾದಿಸಿದ್ದೇವೆ.೧೯೭೩ ರಿಂದ ಸತತವಾಗಿ ಹೊರದೇಶಗಳ ಪೆಟ್ರೋಲಿಯಂ ಬೆಲೆ ಹೆಚ್ಚುತ್ತಲೇ ಇರುವುದರಿಂದ ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವಂತಾಗಿದೆ.ನಮ್ಮ ಸಾಗಣೆ ವಿಭಾಗವು ಮುಖ್ಯವಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿಸಿದೆ.ಆದರಿಂದ ಅದರ ಉತ್ಪನ್ನ ಮತ್ತು ಕಚ್ಚಾತೈಲ ಉತ್ಪಾದನೆಯಲ್ಲಿ ನಾವು ನೆರೆ ದೇಶಗಳೊಂದಿಗೆ ಸತತ ಸಂಬಂದವಿಟ್ಟುಕೊಳ್ಳಬೇಕಾಗಿದೆ.
ವಿದ್ಯುತ್ ಅತ್ಯಂತ ಜನಪ್ರಿಯ ಇಂಧನವಾಗಿದೆ. ರಾಷ್ಟ್ರದಲ್ಲಿ ಇತರ ಎಲ್ಲಾ ಸಾಂಪ್ರದಾಯಿಕ ಇಂಧನಗಳಿಗಿಂತ ಅತ್ಯಂತ ತ್ವರಿತವಾಗಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಇಂದನವೆಂದರೆ ವಿದ್ಯುತ್. ನಮ್ಮ ದೇಶದಲ್ಲಿ ಗಣನೀಯವಾಗಿ ವಿದ್ಯುತ್ ಉತ್ಪನ್ನದ ಪ್ರಮಾಣ ಹೆಚ್ಚುತ್ತಿರುವುದಾದರು ಕಳೆದೆರಡು ವರುಷಗಳಿಂದ ಅತ್ಯಂತ ಕೊರತೆಯನ್ನು ಎದುರಿಸುತ್ತಿದ್ದೇವೆ. ವಿದ್ಯುತ್ ವ್ಯವಸಾಯ ಮತ್ತು ಕೈಗಾರಿಕಾ ಕ್ಷೆತ್ರಗಳೆರಡರಲ್ಲು ಪ್ರಮುಖ ಪಾತ್ರ ವಹಿಸುತ್ತಿದೆ. ಬೇರೆ ರಾಷ್ಟ್ರಗಳಲ್ಲಿ ವಿದ್ಯುತ್ ಉಪಯೋಗ ಪ್ರತಿ ವ್ಯಕ್ತಿಯ ಸರಾಸರಿ ಉಪಯೋಗಕ್ಕಿಂತ ನಮ್ಮ ದೇಶದಲ್ಲಿ ಅತ್ಯಂತ ಕಡಿಮೆ. ೯ನೆ ಯೋಜನೆಯ ಪ್ರಕಾರ ವಿದ್ಯುಚ್ಚಕ್ತಿಗೆ ಮೀಸಲಿಟ್ಟ ಹಣ ಸುಮಾರು ೨೩ ಸಾವಿರ ಕೋಟಿ ರೂಪಾಯಿಗಳು. ಈ ಹಣ ನಮ್ಮ ಅವಶ್ಯಕತೆಗೆ ಸಾಲದಾಗಿದೆ ಎನ್ನುತ್ತಾರೆ. ವಿದ್ಯುತ್ ಉತ್ಪಾದನೆ ಮಾಡಲು ಅಧಿಕ ಬಂಡವಾಳ ಬೇಕಾಗುವುದು. ಅದೂ ಅಲ್ಲದೆ ಉತ್ಪಾದನೆಯಾಗುವ ವಿದ್ಯುತ್ತನ್ನು ಸರಬರಾಜು ಮತ್ತು ಸಾಗಣೆ, ನಿರ್ವಹಣೆ ಇವುಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಹಣ ಬೇಕಾಗುವುದು. ಆದುದರಿದ ಈ ವಿದ್ಯುತ್ ಉತ್ಪಾದನ ಕಾರ್ಯವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದು ಅಪೆಕ್ಷಣೇಯವಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ ದೇಶದ ಕೆಲವು ಭಾಗಗಳಲ್ಲಿ ಖಾಸಗಿ ಸಂಸ್ಥೆಗಳು ಕ್ರಿಯಾಶೀಲವಾಗಿವೆ.
ವಿಶ್ವ ಬ್ಯಾಂಕ್ ಸಹ ಈ ದಿಸೆಯಲ್ಲಿ ಅಧ್ಯಯನ ನಡೆಸಿ ವಿದ್ಯುಚ್ಛಕ್ತಿ ಮಂಡಳಿಯನ್ನು ಖಾಸಗಿಕರನಗೊಳಿಸುವುದು ಹಾಗು ಆ ಮೂಲಕ ಇಂದನ ಶಕ್ತಿಯನ್ನು ವೃದ್ದಿಸಿಕೊಳ್ಳುವುದು ದೇಶದ ಪ್ರಗತಿಗೆ ಅನಿವಾರ್ಯವೆಂದು ಸಲಹೆ ಮಾಡಿದೆ. ಖಾಸಗಿ ಸಂಸ್ಥೆಗಳಿಗೆ ವಿದ್ಯುತ್ ಉತ್ಪಾದನ ಕ್ಷೇತ್ರದಲ್ಲಿ ಹೇರಳವಾದ ಅವಕಾಶಗಳಿವೆ. ಅವರು ಮುಂದೆ ಬಂದು ವಿದ್ಯುತ್ ಉತ್ಪಾದಿಸಿ ಅಧಿಕ ಲಾಭ ಗಳಿಸುವುದಲ್ಲದೆ ದೇಶದ ಇಂಧನ ಶಕ್ತಿಯನ್ನು ವೃದ್ದಿಸಲು ನೆರವಾಗಬಹುದು.
ಪೆಟ್ರೋಲಿಯಂ ಮತ್ತು ವಿದ್ಯುಚ್ಚಕ್ತಿಗಳಲ್ಲದೆ ಇನ್ನು ಕೆಲವು ಬಗೆಯ ಇಂಧನ ಮೂಲಗಳಿವೆ. ಅಣುಶಕ್ತಿ, ಸೌರಶಕ್ತಿ, ವಾಯು ಮತ್ತು ಜೈವಿಕ ಅನಿಲ ಶಕ್ತಿ ಇವುಗಳನ್ನು ಸಹ ಇಂಧನ ಶಕ್ತಿಯನ್ನಾಗಿ ಬಳಸುವುದು ಇಂದು ಅನಿವಾರ್ಯವಾಗಿದೆ.ಅಣುಶಕ್ತಿಯಿಂದ ವಿದ್ಯುತ್ತನ್ನು ಉತ್ಪಾದಿಸುವ ವಿಧಾನ ೧೯೬೯ ರಲ್ಲಿ ಆಚರಣೆಗೆ ಬಂದಿತು. ಯುರೇನಿಯಂ ಬಳಸಿ ವಿದ್ಯುತ್ ಉತ್ಪಾದನೆ ತಾರಾಪುರ ಮತ್ತು ಕಲ್ಪಾಕಂಗಳಲ್ಲಿ ಪ್ರಾರಂಬವಾಯಿತು. ಅನಂತರ ಉತ್ತರ ಪ್ರದೇಶದ ನರೋರ ಮತ್ತು ಗುಜರಾತಿನ ಖರ್ಗಾಪುರಗಳಲ್ಲಿ ಮತ್ತೆರಡು ಉತ್ಪಾದನ ಕೇಂದ್ರಗಳನ್ನು ತೆರೆಯಲಾಯಿತು. ಈ ಬಗೆಯ ಬಳಕೆಯಿಂದ ರಷ್ಯಾದ ಚೆರ್ನೊಬಿಲ್ ನಲ್ಲಿ ಒಮ್ಮೆ ದುರಂತ ಸಂಭವಿಸಿದೆ. ಆದರೂ ಅತಿ ಜಾಗರೂಕತೆಯಿಂದ ನ್ಯೂ ಕ್ಲಿಯರ್ ಇಂಧನವನ್ನು ನಾವು ಅವಲಂಬಿಸುವುದು ಅನಿವಾರ್ಯವಾಗಿದೆ.
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋದನೆ ಮತ್ತು ಅಭಿವೃದ್ದಿ ಇವುಗಳು ನಮ್ಮ ದೇಶದ ಇಂಧನಶಕ್ತಿಯನ್ನು ಮತ್ತಷ್ಟು ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲು ಉಪಯುಕ್ತವಾಗಿವೆ. ಅಸಂಪ್ರದಾಯಿಕ ಇಂದನಗಳಿಂದ ಗಾಳಿ, ಉಬ್ಬರವಿಳಿತದ ಅಲೆಗಳು, ಜೈವಿಕ ಅನಿಲ, ಸೌರಶಕ್ತಿ ಇವುಗಳ ಉಪಯೋಗವನ್ನು ವಾಣಿಜ್ಯೇತರ ಮತ್ತು ಸಣ್ಣ ಪ್ರಮಾಣದಲ್ಲಿ ಗೃಹ ಉಪಯೋಗಕ್ಕೆ ಮಾಡಿಕೊಳ್ಳಬಹುದಾಗಿದೆ.ಆದರೆ ಇವುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿಯೂ ಶೇಘ್ರದಲ್ಲೆ ಬಳಸುವ ಪ್ರಯತ್ನ ಸಾಗಿದೆ. ಈ ಬಗೆಯ ಇಂದನ ಭಾರತದ ಕೊರತೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರವಹಿಸಬಲ್ಲದು.
ಜೈವಿಕ ಅನಿಲವನ್ನು ಅಡಿಗೆ ಮುಂತಾದವುಗಳಿಗೆ ಹಳ್ಳಿ ಮತ್ತು ನಗರಗಳಲ್ಲಿ ಉಪಯೋಗಿಸಬಹುದಾಗಿದೆ. ಏಕೆಂದರೆ ಅದು ಕಡಿಮ ವೆಚ್ಚದ್ದು ಹಾಗು ಶುದ್ದ ಮತ್ತು ಅನುಕೂಲಕರ. ಅದನ್ನು ದೀಪಕ್ಕಾಗಿ ಮತ್ತು ಚಿಕ್ಕ ಕೈಗಾರಿಕಾ ಘಟಕಗಳಲ್ಲಿ ಮೋಟಾರ್ ಚಾಲನೆಗೂ ಉಪಯೋಗಿಸಬಹುದಾಗಿದೆ. ಸೌರಶಕ್ತಿಯೂ ಕೂಡ ಭಾರತದಲ್ಲಿ ಕಡಿಮೆ ವೆಚ್ಹ ಮತ್ತು ಅನುಕೂಲಕರ ಮರು ಬಳಕೆಯ ಇಂದನ ಮೂಲವಾಗಿದೆ. ಭಾರತವು ಸೌರಶಕ್ತಿಯನ್ನು ಉಪಯೋಗಿಸಿಕೊಳ್ಳುವ ರಾಷ್ಟ್ರಗಳಲ್ಲಿ ಆಗ್ರ ಸ್ಥಾನ ಗಳಿಸಿಕೊಳ್ಳುವ ದಿನಗಳು ದೂರವಿಲ್ಲ ಹಾಗು ಇಂದನ ಕೊರತೆಯಿಂದ ಅದು ಖಂಡಿತ ಹೊರಬಂದು ಸ್ವಾವಲಂಬಿಯಾಗುವುದರಲ್ಲಿ ಸಂಶಯವಿಲ್ಲ.
ಕೊನೆಯ ಮಾರ್ಪಾಟು : 2/15/2020
ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್...
ಸೌರ ಶಕ್ತಿ – ಕರ್ನಾಟಕ ರಾಜ್ಯಕ್ಕೆ ಸುಸ್ಥಿರ ಇಂಧನ ಇದರ ಸಾರ...
ಕರ್ನಾಟಕ ಸರ್ಕಾರವು ಯಾವಾಗಲೂ ವಿದ್ಯುತ್ ಕ್ಷೇತ್ರದ ಪ್ರಗತಿಗ...
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ...