ಗೋ ಅನಿಲವನ್ನು ಆಹಾರ ತಯಾರಿ ಮತ್ತು ದೀಪ ಉರಿಸಲು ಬಳಸುತ್ತಿರುವ ಕೃಷಿಕರು ಸಾಕಷ್ಟು ಇದ್ದಾರೆ. ಆದರೆ ನಮ್ಮದೇ ಶೌಚಾಲಯದ ಅನಿಲ ಬಳಸುವವರು ಜಿಲ್ಲೆಗೊಬ್ಬರಾದರೂ ಇರುವುದು ಸಂಶಯ. ಶೌಚಾಲಯದ ಅನಿಲ ಹುಟ್ಟುಹಾಕಬಲ್ಲ ಮಾನಸಿಕ ತಡೆ, ಸಾಮಾಜಿಕ ಸಮಸ್ಯೆಗಳು ಹಲವು. ಇವುಗಳೆನ್ನೆಲ್ಲಾ ಪರಿಹರಿಸಿ ಅದನ್ನು ಕೃಷಿ ಅಭಿವೃದ್ಧಿಗಾಗಿ ಬಳಸುತ್ತಿರುವ ಯುವಕರೊಬ್ಬರು ನಮ್ಮಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಯುವಕೃಷಿಕ ದಯಾನಂದ ಅಪ್ಪಯ್ಯನವರಮಠ. ದಯಾನಂದರ ಅನುಭವ ಅವರದೇ ಮಾತುಗಳಲ್ಲಿವೆ. “ನನಗೆ ನವ್ಯ ಕಲೆಯಲ್ಲಿ ಆಸಕ್ತಿ. 2004ರಲ್ಲಿ ಫೈನ್ ಆಟ್ರ್ಸ್‍ನಲ್ಲಿ ಪದವಿ ಗಳಿಸಿದೆ.
ಅದಕ್ಕೂ ಮೊದಲು ಚಿತ್ರಕಲಾ ಮತ್ತು ಪೈಂಟಿಂಗ್‍ನಲ್ಲಿ ಡಿಪ್ಲೊಮಾ ಪಡೆದಿದ್ದೆ. ನೌಕರಿಗಾಗಿ ಹುಡುಕಾಡಿದೆ. ಕೊನೆಗೆ ಸೇಲಂ ಮೂಲದ ಆರೋಗ್ಯ ಮಿಲ್ಕ್ಸ್‍ನ ಪೆÇ್ರಕ್ಯೂರ್‍ಮೆಂಟ್ ಆಫೀಸರ್ ಆಗಿ ದೇಸೂರದಲ್ಲಿ ಮೂರು ವರ್ಷ ಕೆಲಸ ಮಾಡಿದೆ. ಅಲ್ಲಿಯ ಕೆಲಸದ ಒತ್ತಡ, ಏಕತಾನತೆಯಿಂದ ಬೇಸರವಾಗತೊಡಗಿತು. ಹಾಗಾಗಿ ಅಲ್ಲಿಂದ ಹೊರಬಂದೆ. ಈ ಮಧ್ಯೆ ನಮ್ಮ ಊರಲ್ಲಿಯೇ ‘ಆದಿತ್ಯ ಮಿಲ್ಕ್’ ಉದ್ದಿಮೆ ಪ್ರಾರಂಭವಾಯಿತು. ಅಲ್ಲಿ ಎರಡು ವರ್ಷ ಕೆಲಸ ನಿರ್ವಹಿಸಿದೆ. ಅದೇಕೋ ಸ್ವಂತಿಕೆ ಕಳೆದುಕೊಂಡ ನೋವು ಹೆಚ್ಚಾಯಿತು. ಸಾಕಿನ್ನು ನೌಕರಿಯ ಸಹವಾಸ ಎಂದು ಕೃಷಿಯತ್ತ ಗಮನ ಹರಿಸಲು ಮುಂದಾದೆ. ಎದುರಾದ ದೊಡ್ಡ ಸಮಸ್ಯೆ ಕೂಡುಕುಟುಂಬದಲ್ಲಿ ಪಾಲುಗಳಾಗಿ ನಮ್ಮ ತಂದೆಯವರಿಗೆ ಹತ್ತು ಎಕರೆ ಜಮೀನು ಸಿಕ್ಕಿತು. ಶೌಚಶಕ್ತಿಯ ಕುರಗುಂದ ಮಾದರಿ ಚಿತ್ರ, ಲೇಖನ : ಶೈಲಜಾ ಬೆಳ್ಳಂಕಿಮಠ ಮಿಥೇನ್ ಹಾಗೂ ಇನ್ನಿತರ ಹಾನಿಕಾರಕ ಅನಿಲಗಳ ಸಮರ್ಪಕ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ದಯಾನಂದ ಜಗದೀಶ ಮಾಡಿ ತೋರಿಸಿದ ಈ ಶೌಚಾಧಾರಿತ ಅಭಿವೃದ್ಧಿ ಬಯಲುಸೀಮೆಗೆ ಒಂದು ಉತ್ತಮ ಸುಸ್ಥಿರ ಮಾದರಿ. ದೀಪಕ್ಕೂ ಬಳಕೆ ಮನೆಯಲ್ಲೀಗ ನಕಾರಾತ್ಮಕತೆ ಪೂರ್ತಿ ಮಾಯ ಅದು ಊರಿನ ಕೊನೆಯ ಜಾಗ.
ಸುತ್ತಲಿನ ಹದಿನೈದು ಇಪ್ಪತ್ತು ಕುಟುಂಬಗಳು ಶೌಚಕ್ಕೆ ಈ ಹೊಲದ ದಂಡೆಯನ್ನೇ ಆಶ್ರಯಿಸಿದ್ದರು. ಇದರಿಂದಾಗಿ ದಂಡೆಯ ನಾಲ್ಕು ಗುಂಟೆಯಷ್ಟು ಜಮೀನು ಯಾವುದೇ ಕೃಷಿಕಾರ್ಯ ಬಿಡಿ, ಓಡಾಡಲೂ ಆಗದಷ್ಟು ಕೊಳಕಾಗುತ್ತಿತ್ತು. ಬಯಲು ಶೌಚದಿಂದ ಆಗುವ ಪರಿಸರ ಮಾಲಿನ್ಯ, ಜಲಮಲಿನತೆ ಮತ್ತು ಆರೋಗ್ಯ ಸಮಸ್ಯೆಗೆ ಪರಿಹಾರ ರೂಪಿಸಲೇ ಬೇಕು ಅಂದುಕೊಂಡೆ. ಹೊಲದ ಒಂದು ಬದಿಯಲ್ಲಿ ನಾವೇ ಶೌಚಾಲಯ ನಿರ್ಮಿಸಿ ಬಳಕೆಗೆ ನೀಡಿದರೆ ಹೇಗೆ? ಮನೆಮಂದಿಯೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸಿದೆ.
3.3 ಅಡಿ ಘಿ 3.3 ಅಡಿ ಅಳತೆಯ ನಾಲ್ಕು ಸ್ವಯಂ ನಿರ್ವಹಣಾ ಶೌಚಾಲಯಗಳನ್ನು ನಿರ್ಮಿಸಿದೆವು. ಇದಕ್ಕೆ ಒಟ್ಟು 2.10 ಲಕ್ಷ ರೂ. ವೆಚ್ಚವಾಯಿತು. ಬೀಗ ಹಾಕಿದರೆ ಬೇರೆಯವರ ಕಿರಿಕಿರಿ ಇರುವುದಿಲ್ಲ ಎನಿಸಿ ಪ್ರತಿ ಶೌಚಾಲಯಕ್ಕೆ ಬೀಗ ಹಾಕಿ ನಾಲ್ಕುನಾಲ್ಕು ಕೀಲಿ ಕೆ ಮಾಡಿಸಿದೆ. ಒಂದು ಶೌಚಾಲಯವನ್ನು ನಾಲ್ಕು ಕುಟುಂಬಗಳು ಸೇರಿ ಬಳಸುವಂತೆ ಹೇಳಿ ಎಲ್ಲಾ ಕುಟುಂಬದ ಸದಸ್ಯರಿಗೆ ಶೌಚಾಲಯ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟೆ. ಕಳೆದ ಎರಡು ವರ್ಷಗಳಿಂದ ಹದಿನಾರು ಕುಟುಂಬಗಳು ಈ ಶೌಚಾಲಯಗಳನ್ನು ಬಳಕೆ ಮಾಡುತ್ತಿವೆ. ಒಂದು ಕುಟುಂಬದ ಕನಿಷ್ಠ ಆರು ಮಂದಿಯಂತೆ ನೂರರಷ್ಟು ಜನ ಇವನ್ನು ಉಪಯೋಗಿಸುತ್ತಿದ್ದಾರೆ. ಅಕಸ್ಮಾತ್ ಓವರ್‍ಹೆಡ್ ಟ್ಯಾಂಕಿನಲ್ಲಿ ನೀರು ಖಾಲಿಯಾದರೆ, ತಂತಮ್ಮ ಮನೆಗಳಿಂದ ತಂದು ಬಳಸಲೆಂದು ಪ್ರತಿ ಶೌಚಾಲಯಕ್ಕೆ ಐದು ಲೀಟರಿನ ಕ್ಯಾನ್ ಕೊಟ್ಟಿದ್ದೇವೆ. ನಾಲ್ಕು ಶೌಚಾಲಯಗಳಿಂದ ಪ್ರತಿ ದಿನ ಒಟ್ಟು ಹದಿನಾಲ್ಕು ಕಿಲೋ ಮಿಥೇನ್ ಅನಿಲ ಉತ್ಪಾದನೆಯಾಗುತ್ತದೆ.
ಇದನ್ನು ನಾಲ್ಕು ಘನ ಅಡಿಯ ಗೋಅನಿಲ ಯಂತ್ರದ ಜೊತೆ ಜೋಡಿಸಿದ್ದೇನೆ. ನಮ್ಮ ಕುಟುಂಬದ ಶೌಚಾಲಯವನ್ನು ಸಹ ಇದಕ್ಕೆ ಜೋಡಿಸಿದ್ದೇವೆ. ಪ್ರತಿದಿನ ಎರಡು ಬುಟ್ಟಿ (ಅಂದಾಜು ಹತ್ತು ಕಿಲೋ) ಸಗಣಿ ನೀರನ್ನು ಮಿಶ್ರಣ ಮಾಡಿ ಸೇರಿಸುವುದರಿಂದ ಯಾವುದೇ ದುರ್ವಾಸನೆ ಬರುವುದಿಲ್ಲ. ಪಂಪಿಗೆ ಅನಿಲ, ಬೆಳೆಗೆ ಗೊಬ್ಬರ ದಿನಕ್ಕೆ ಒಟ್ಟು 20 - 22 ಕಿಲೋ ಮಿಥೇನ್ ಅನಿಲ ಸಿಗುತ್ತದೆ. ಹೊರಬರುವ ಬಗ್ಗಡವನ್ನು ಎರೆಗೊಬ್ಬರ ತಯಾರಿಕೆಗೆ ಬಳಸುತ್ತಿದ್ದೇನೆ. ಹೆಚ್ಚಿನದನ್ನು ಜೀವಸಾರ ಘಟಕದೊಂದಿಗೆ - ಬಯೋಡೈಜೆಸ್ಟರ್ - ಜೋಡಿಸಿ ದೊರೆಯುವ ಸಾರವನ್ನು ಹನಿ ನೀರಾವರಿ ಮೂಲಕ ಬೆಳೆಗಳಿಗೆ ಒದಗಿಸುತ್ತೇನೆ. ಐದು ಅಶ್ವಶಕ್ತಿಯ ಮೋಟಾರ್ ಬಳಸಿ, ಜೀವಸಾರ ದ್ರವವನ್ನು ಘಟಕದಿಂದ ಮೇಲೆತ್ತಿ ಹನಿ ನೀರಾವರಿ ಪೈಪ್ ಮೂಲಕ ಸರಬರಾಜು ಮಾಡುತ್ತಿದ್ದೇವೆ. ಈ ಮೋಟಾರ್ ಮುಖ್ಯವಾಗಿ ಶೌಚಾಲಯದಿಂದ ಹೊರಬರುವ ಮಿಥೇನ್ ಅನಿಲದಿಂದ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಕೇವಲ ಶೇ. 20 ಡೀಸೆಲ್ ಇದ್ದರೆ ಸಾಕು. ಹುಳುಗಳು ಬಡಿದು ದೀಪದ ಬತ್ತಿ ಹಾಳಾಗುವುದನ್ನು ತಡೆಯಲು ಹೊಸ ವಿನ್ಯಾಸದ ದೀಪ ಅಳವಡಿಸಿದ್ದೇನೆ. ಮೊದಮೊದಲು ಶೌಚಾಲಯದ ಅನಿಲ ಸೇರಿಸಿ ಆಹಾರ ತಯಾರಿಸಿ ಬಳಸುವ ಬಗ್ಗೆ ಸಂಬಂಧಿಕರು, ಊರಿನ ಜನ ಲಘುವಾಗಿ ಮಾತಾಡಿದರು.
ಹಲವು ಪ್ರಶ್ನೆ ಕೇಳುತ್ತಿದ್ದರು. ‘ಇಂಥ ಅನಿಲ ಬಳಸಿ ತಯಾರಿಸಿದ ಅಡುಗೆ ದೇವರಿಗೆ ನೈವೇದ್ಯ ತೋರಿಸಲು ಯೋಗ್ಯ ಅಲ್ಲ’ ಎಂದು ವಾದಿಸಿದರು. ಅವರಿಗೆಲ್ಲ ನನ್ನದು ಒಂದೇ ಉತ್ತರ. ದೇಹದಲ್ಲೇ ಮಲ ಹೊತ್ತು ತಿರುಗುವ ನಾವು ದೇವರಿಗೆ ಕೈ ಮುಗಿಯುವುದಿಲ್ಲವೇ? ಪ್ರಾರ್ಥಿಸುವುದಿಲ್ಲವೇ? ಅಡುಗೆಗೆ ಬಳಸುವ ಅನಿಲ ಹೇಗೆ ಮೈಲಿಗೆ? ಜಾನುವಾರುಗಳ ಮಲಮೂತ್ರ ಬಾಚಿ ಸಾರಿಸಲು, ಗೊಬ್ಬರಕ್ಕಾಗಿ ಉಪಯೋಗಿಸಲು ಇಲ್ಲದ ಮಡಿವಂತಿಕೆ, ಶೌಚವನ್ನು ಗೊಬ್ಬರವಾಗಿ, ಅನಿಲವಾಗಿ ಬಳಸುವಾಗ ಏಕೆ? ‘ನಮ್ಮ ವಿಚಾರ, ಧೋರಣೆಗಳಲ್ಲಿ ಬದಲಾವಣೆ ತಂದಾಗ ಮಾತ್ರ ಇಂಥ ವಿಷಯಗಳಲ್ಲಿ ಮುಂದಡಿ ಇಡಲು ಸಾಧ್ಯ’ ಎನ್ನುವುದು ನನ್ನಭಿಪ್ರಾಯ. ಬಯಲು ಶೌಚದಿಂದ ಅನುಭವಿಸಿದ ತೊಂದರೆಗಳು ನಿವಾರಣೆಯಾಗಿವೆ. ನನ್ನ ತಂದೆ, ತಾಯಿ, ಪತ್ನಿ ಇವರಿಗೆ ಈ ಬಗ್ಗೆ ನಕಾರಾತ್ಮಕvಇಲ್ಲ. ನನ್ನ ವಿಚಾರ ಅಳವಡಿಕೆಯನ್ನು ಪ್ರೋತ್ಸಾಹಿಸಿದ್ದಾರೆ. ಮಳೆಗಾಲದ ಒಂದೆರಡು ತಿಂಗಳು ಬಿಟ್ಟರೆ ವರ್ಷಪೂರ್ತಿ ಸಾಕಷ್ಟು ಅನಿಲ ಸಿಗುತ್ತದೆ. ಹೆಚ್ಚಿನ ಅನಿಲ ಉತ್ಪಾದನೆಯಾದದ್ದನ್ನು ಕ್ಯಾನವಾಸ್ ಬಲೂನ್ ಬಳಕೆ ಮಾಡಿ ಸಂಗ್ರಹಿಸುವ ವಿಚಾರವಿದೆ. ಉರುವಲಿನ ಚಿಂತೆ ಇಲ್ಲ. ಕಳೆದ ಎರಡು ವರ್ಷಗಳಿಂದ ಅಡುಗೆ ಮಾಡಲು, ಸ್ನಾನಕ್ಕೆ ನೀರು ಕಾಯಿಸಲು, ಮನೆಯಲ್ಲಿ ದೀಪ ಉರಿಸಲು ಹಾಗೂ ಮೋಟಾರ್ ಪಂಪ್‍ಸೆಟ್ ನಡೆಸಲು ಇದೇ ಅನಿಲ ಉಪಯೋಗಿಸುತ್ತಿದ್ದೇವೆ. ಶೌಚಾಲಯದ ಅನಿಲ ಜೋಡಣೆಯಿಂದ ಆದ ಮುಖ್ಯ ಲಾಭ - ಹೇರಳ ಜೈವಿಕ ಗೊಬ್ಬರ, ಮಿಥೇನ್ ಅನಿಲ ಹಾಗೂ ನಿರ್ಮಲ ಪರಿಸರ.
ಸ್ವಯಂ ನಿರ್ವಹಣಾ ಶೌಚಾಲಯ ನನ್ನ ಅಭಿಪ್ರಾಯ ಪ್ರಕಾರ ಸಮುದಾಯ ಬಯಲುಸೀಮೆಗೆ ಸುಸ್ಥಿರ ಮಾದರಿ ಬಯಲು ಪ್ರದೇಶದಲ್ಲಿ ಸಂಗ್ರಹಣೆಯಾಗುವ ಸಗಣಿ ಗುಂಡಿ, ಮನುಷ್ಯರ ಶೌಚದಿಂದ ಹೆಚ್ಚಿನ ಪ್ರಮಾಣದ ಮಿಥೇನ್ ಅನಿಲ ವಾತಾವರಣಕ್ಕೆ ಸೇರುತ್ತದೆ. ಹಸಿರುಮನೆ ಅನಿಲಗಳು (ಕಾರ್ಬನ್ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಮಿಥೇನ್ ಹಾಗೂ ಕ್ಲೋರೋಫೆÇ್ಲೀರೋ ಕಾರ್ಬನ್) ಸೂರ್ಯನಿಂದ ಹೊರಸೂಸುವ ಹಾನಿಕಾರಕ ತೀಕ್ಷ್ಣ ವಿಕಿರಣಗಳು ಮತ್ತೆ ಸೂರ್ಯನೆಡೆ ಪ್ರತಿಫಲನಗೊಳ್ಳದಂತೆ ತಡೆಗೋಡೆಯಂತೆ ಕಾರ್ಯ ನಿರ್ವಹಿಸುತ್ತವೆ. ಇವುಗಳಲ್ಲಿ ಒಂದಾದ ಮಿಥೇನ್, ತಾಪಮಾನ ಏರಿಕೆಗೆ ಮೂಲವಾಗಿ ತನ್ಮೂಲಕ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗುತ್ತದೆ. ಮಿಥೇನ್ ಹಾಗೂ ಇನ್ನಿತರ ಹಾನಿಕಾರಕ ಅನಿಲಗಳನ್ನು ವಾತಾವರಣಕ್ಕೆ ಸೇರಿಸುವ ವಿದ್ಯುತ್ ಪಂಪುಗಳು, ಹೊಗೆÀ ಒಲೆಗಳು, ಜಾನುವಾರು ಸಗಣಿ, ಮೂತ್ರದ ಗುಂಡಿಗಳು, ಬಯಲು ವಿಸರ್ಜನೆ ಮಾಡುವವರ ಮಲಮೂತ್ರಗಳು, ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಸಮರ್ಪಕ ನಿರ್ವಹಣೆ ಮಾಡಬೇಕಾದÀ ಅನಿವಾರ್ಯತೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ದಯಾನಂದ ಜಗದೀಶ ಮಾಡಿ ತೋರಿಸಿದ ಮಾದರಿ ಬಯಲು ಶೌಚ ಸಾಮಾಜಿಕ ಸಮಸ್ಯೆಯಾಗಿರುವ ಬಯಲುಸೀಮೆಗೆ ಒಂದು
ಶೌಚಾಲಯಗಳು ವಿಫಲವಾಗಲು ಮುಖ್ಯ ಕಾರಣಗಳು ಎರಡು. ಒಂದು : ಮಲ ವಿಸರ್ಜಿಸಲು ಜೋಡಿಸಿದ ಭಾಂಡೆ (ಮಲಪಾತ್ರೆ) ಹಸಿಯಾಗದೆÀ ಮಲ ಜಾರಿ ಹೋಗದು. ಆನಂತರ ಸಾಕಷ್ಟು ನೀರು ಹಾಕಿದರೂ ಗಟ್ಟಿಯಾಗಿ ಹಾಗೆಯೇ ಉಳಿಯುತ್ತದೆ. ಹೀಗಾಗಿ ಶೌಚಕ್ಕಿಂತ ಮೊದಲು ನೀರು ಹಾಕುವುದು ಅತ್ಯವಶ್ಯ. ಎರಡು : ನೀರಿನ ಕೊರತೆ ಹಾಗೂ ನಿರ್ವಹಣಾ ಸಮಸ್ಯೆ. ಇವುಗಳನ್ನು ಪರಿಹರಿಸಿಕೊಳ್ಳುವ ದಿಶೆಯಲ್ಲಿ ನಮ್ಮ ಸ್ವಯಂನಿರ್ವಹಣಾ ಶೌಚಾಲಯಗಳ ಕಾರ್ಯಕ್ಷಮತೆ ಉತ್ತಮ. ಓವರ್‍ಹೆಡ್ ಟ್ಯಾಂಕಿನಿಂದ ಎರಡು ಪೈಪುಗಳು ಕೆಳಗಿಳಿಯುತ್ತವೆ. ಒಂದು ಶೌಚಾಲಯದ ಒಳಗಿರುವ ನಲ್ಲಿಗೆ ನೀರು ಪೂರೈಸುತ್ತದೆ. ಎರಡನೆಯದು, ಇನ್ನೊಂದು ಮೆಟ್ಟಲಿನ ಕೆಳಗೆ ಸ್ಪ್ರಿಂಗ್ ಮೂಲಕ ಸ್ಟೀಲ್ ಫ್ಲಶ್ ವಾಲ್ವ್ ಅಳವಡಿಸಿದ ಪೈಪಿಗೆ ನೀರು ಹರಿಸುತ್ತದೆ. ಶೌಚಾಲಯ ಪ್ರವೇಶಿಸುವ ವ್ಯಕ್ತಿ ಮೆಟ್ಟಲಿನ ಮೇಲೆ ಕಾಲಿಟ್ಟಾಗ ಫ್ಲಶ್ ವಾಲ್ವಿನಿಂದ ಅರ್ಧ ಇಂಚಿನ ಪೈಪ್ ಮೂಲಕ ನೀರು ಚಿಮ್ಮಿ ಭಾಂಡೆ ಹಸಿಯಾಗುತ್ತದೆ. ವ್ಯಕ್ತಿ ಮಲ ವಿಸರ್ಜಿಸಿ ಒಳಗಿರುವ ನೀರನ್ನು ಬಳಸಿ ಸ್ವಚ್ಚಗೊಳಿಸಿ ಹೊರಬರುತ್ತಾರೆ. ಶೌಚಾಲಯ ಸ್ವಚ್ಛವಾಗಿ ಉಳಿಯುತ್ತದೆ. ಬದಲಾದ ಕೃಷಿ ಬದುಕು ಶೌಚಾಲಯದ ಕೊಡುಗೆ ಸಿಗತೊಡಗಿದ ನಂತರ ಅನಿಲ ಘಟಕದಿಂದ ಸಾಕಷ್ಟು ಜೈವಿಕ ಬಗ್ಗಡವೂ (ಸ್ಲರಿ) ಸಿಗಲಾರಂಭಿಸಿತು. ಇದರಿಂದ ಒಳ್ಳೆ ಎರೆಗೊಬ್ಬರ ತಯಾರಿಸಿಕೊಂಡೆ. ಹೆಚ್ಚಾದ ಸ್ಲರಿಯನ್ನು ಹಿಂದೆಯೇ ಸೂಚಿಸಿದಂತೆ, ಜೀವಸಾರ ಘಟಕಕ್ಕೆ ಜೋಡಿಸಿ ಸತ್ವಭರಿತ ಜೀವಸಾರವನ್ನು ತೋಟದ ಹಣ್ಣಿನ ಗಿಡಗಳಿಗೆ ಉಣಿಸಲಾರಂಭಿಸಿದೆ. ಗಿಡಗಳ ಬೆಳವಣಿಗೆ, ಹೆಚ್ಚಿದ ಫಸಲು, ರುಚಿ ಯಲ್ಲಾದ ಬದಲಾವಣೆ ಸಾವಯವ ಒಳಸುರಿಗಳ ಬಳಕೆ ಬಗ್ಗೆ ಆಸಕ್ತಿ ಮೂಡಿಸಿತು. ರಾಸಾಯನಿಕರಹಿತ ಕೃಷಿಯೆಡೆಗೆ ಹೆಜ್ಜೆ ಹಾÀಕುವಂತೆ ಮಾಡಿತು. ಪಿತ್ರಾರ್ಜಿತ ಹತ್ತೆಕರೆಯೊಂದಿಗೆ ಈಗ ನಾನು ಖರೀದಿಸಿದ ಐದೆಕರೆ ಜಮೀನು ಸೇರಿದೆ. ಆರು ಎಕರೆ ಕಬ್ಬು, ಎರಡು ಎಕರೆ ಬಾಳೆ, ಚಿಕ್ಕು, ಮಾವು, ನುಗ್ಗೆ, ಚೆರ್ರಿ ಹಾಗೂ ಒಂದೆಕರೆ ತೆಂಗು ಬೆಳೆಸಿರುವೆ. ಎರಡು ಎಕರೆಯಲ್ಲಿ ಸೋಯಾ ಅವರೆ, ಗೋವಿನ ಜೋಳ ಹಾಗೂ ಉಳಿದ ಮಳೆಯಾಶ್ರಿತ ಭೂಮಿಯಲ್ಲಿ ಜೋಳ, ಗೋಧಿ, ಕಡಲೆ ಬೆಳೆಯುತ್ತಿದ್ದೇನೆ.
ಕಳೆದ ಮುಂಗಾರಿನಲ್ಲಿ ನಾಲ್ಕು ಎಕರೆ ಕಬ್ಬಿನ ಒಂದು ಕಣ್ಣಿನ ಸಸಿ ಮಾಡಿಕೊಂಡು ಬೀಜಾಮೃತದಿಂದ ಉಪಚರಿಸಿ ನಾಟಿ ಮಾಡಿದೆ. ಸಾಕಷ್ಟು ಹಸಿರೆಲೆ, ಎರೆಗೊಬ್ಬರ, ಜೀವಸಾರ ದ್ರವ ಬಳಸಿ ಎಕರೆಗೆ ನಲುವತ್ತು ಟನ್ ಇಳುವರಿ ಪಡೆದೆ. ಕೇವಲ ರಾಸಾಯನಿಕಗಳ ಬಳಕೆಯಿಂದ ಕೃಷಿ ಸುಸ್ಥಿರವಾಗದು ಎಂಬ ಅರಿವು ಮೂಡಿದೆ. ನನ್ನ ಆಸಕ್ತಿಯ ಇನ್ನೊಂದು ಉಪಕಸುಬು ಜೇನುಕೃಷಿ. ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಇನ್ನುಳಿದಂತೆ ಎಲ್ಲವೂ ಸ್ವಂತ ಕಲಿಕೆ. ತೋಟದಲ್ಲಿ ಹನ್ನೆರಡು ಜೇನು ಪೆÀಟ್ಟಿಗೆ ಇಟ್ಟಿರುವೆ. ಜೇನುಸಂಸಾರವನ್ನೂ ಮಾರಾಟ ಮಾಡುತ್ತೇನೆ. ಪೆಟ್ಟಿಗೆ ಸಹಿತ ಜೇನುಗೂಡಿಗೆ 4500 - 5000 ದರ. ಆಗಸ್ಟಿನಿಂದ ಏಪ್ರಿಲ್ ವರೆಗೆ ಜೇನು ಚಟುವಟಿಕೆ ಹೆಚ್ಚಿರುವುದರಿಂದ ಉತ್ತಮ ಲಾಭ ಸಿಗುತ್ತದೆ. ಜೇನುಸಂಸಾರ ಮಾರಾಟದಿಂದ (ತಿಂಗಳಿಗೆ ಕನಿಷ್ಠ 4 - 5 ಪೆಟ್ಟಿಗೆ) ತಿಂಗಳಿಗೆ 20 ರಿಂದ 25 ಸಾವಿರ ಆದಾಯ ಸಿಗುತ್ತಿದೆ. ಜೇನುತುಪ್ಪವನ್ನು ಕಿಲೋಗೆ ರೂ. 450ರಂತೆ ಮಾರಾಟ ಮಾಡುತ್ತೇನೆ. ‘ಸಮೃದ್ಧಿ ಜೇನು ಉತ್ಪಾದಕರ ಸಂಘ’ ಹುಟ್ಟುಹಾಕಿ ಸುತ್ತಲಿನ ಗ್ರಾಮಗಳಿಂದ 30 ಜನ ಸದಸ್ಯರು ಹಾಗೂ 7 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಳೆದ ತಿಂಗಳಿನಲ್ಲಿ ಜೇನು ಕೃಷಿ ಹಾಗೂ ಜೇನು ಮೇಳ ಆಯೋಜಿಸಿ ಆಸಕ್ತ ರೈತರಿಗೆ ಪರಿಣಿತರಿಂದ ಮಾಹಿತಿ ಕೊಡಿಸಿದ್ದೇವೆ. ಜೇನು ಕೃಷಿ ಬಗ್ಗೆ ಇನ್ನೂ ಹೆಚ್ಚಿನ ಕೃಷಿಕರಿಗೆ ಅರಿವು ಮೂಡಿಸಬೇಕಿದೆ. ನನ್ನಲ್ಲಿ ಜಮುನಾಪಾರಿ, ತೋತಾಪುರಿ ಹಾಗೂ ಸಿರೋಹಿ ತಳಿಯ ಹತ್ತು ಆಡುಗಳಿವೆ. ಸ್ಟಾಲ್ ಫೀಡಿಂಗ್ ಪದ್ದತಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಆಲೋಚನೆ ಇದೆ. ಇದಕ್ಕಾಗಿ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವೆ. ಮುಂದಿನ ಯೋಜನೆಗಳು ಈ ವರ್ಷದಿಂದ ಮಾವು ಹಾಗೂ ಚಿಕ್ಕು ಸಸ್ಯ ಅಭಿವೃದ್ಧಿ ಕೇಂದ್ರ (ನರ್ಸರಿ) ಮಾಡುವ ವಿಚಾರವಿದೆ. ಮಾವಿನ ಗೊಪ್ಪ ತಂದು ಸಸಿ ಬೆಳೆಸಿ, ನಮ್ಮಲ್ಲಿಯೆ ಇರುವ ಉತ್ಕೃಷ್ಟ ತಳಿಗಳಾದ ರತ್ನಾಗಿರಿ, ಧಾರವಾಡ ಆಪೂಸ್ ಹಾಗೂ ಮಲ್ಲಿಕಾ ತಳಿಗಳಿಂದ ಸಯಾನ್ ಸಂಗ್ರಹಿಸಿ ಕಸಿಕಟ್ಟಿ ಮಾರಾಟ ಮಾಡುವುದು. ಕಸಿ ಕಟ್ಟಿದ ಸಸಿಗಳನ್ನು ಖರೀದಿಸುವ ಕುರಿತು ತೋಟಗಾರಿಕೆ ಹಾಗೂ ಜಲಾನಯನ ಇಲಾಖೆ ಅಧಿಕಾರಿಗಳೊಂದಿಗೆ ವಿಚಾರಿಸಿರುವೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶ್ರಾವಣದಲ್ಲಿ ಬಾಳೆ ಗಿಡ, ಹಣ್ಣು ಹಾಗೂ ಎಲೆಗಳ ಮಾರಾಟದಿಂದ ಲಾಭ ಸಿಗುತ್ತಿದೆ. ಅದನ್ನು ಇನ್ನೂ ವ್ಯವಸ್ಥಿತವಾಗಿ ಉದ್ದಿಮೆ ರೂಪದಲ್ಲಿ ಅಭಿವೃದ್ಧಿಪಡಿಸುವ ಆಲೋಚನೆ ಇದೆ. ಬಿಡುವಿದ್ದಾಗ ಡ್ರಾಯಿಂಗ್, ಪೇಂಟಿಂಗ್ ಮಾಡುತ್ತೇನೆ. ಉದ್ಯೋಗ ಅರಸಿ ಹೋಗಿದ್ದರೆ ತಿಂಗಳಿಗೆ 30ರಿಂದ 40 ಸಾವಿರ ಗಳಿಸಬಹುದಿತ್ತು. ಆದರೆ ನೆಮ್ಮದಿ, ಖುಷಿ, ಸ್ವಂತಿಕೆ, ರಚನಾತ್ಮಕ ಆಲೋಚನೆಗಳು ಕಮರಿ ಹೋಗುತ್ತಿದ್ದವು. ಕೃಷಿಯಲ್ಲಿ ನನ್ನ ವಿಚಾರಗಳಿಗೆ ಬಲ ಬಂದಿದೆ. ಕ್ರಿಯಾತ್ಮಕ ಆಲೋಚನೆಗಳಿಗೆ ಸ್ಫೂರ್ತಿ, ಪ್ರೇರಣೆ ಸಿಕ್ಕಿದೆ. ಅಳವಡಿಕೆಗೆ ಪ್ರೋತ್ಸಾಹ ದೊರಕಿದೆ. ದಯಾನಂದ ಜಗದೀಶ ಅಪ್ಪಂಅಪ್ಪಯ್ಯನವರಮಠ 99641 24176
ಗೋ ಅನಿಲವನ್ನು ಆಹಾರ ತಯಾರಿ ಮತ್ತು ದೀಪ ಉರಿಸಲು ಬಳಸುತ್ತಿರುವ ಕೃಷಿಕರು ಸಾಕಷ್ಟು ಇದ್ದಾರೆ. ಆದರೆ ನಮ್ಮದೇ ಶೌಚಾಲಯದ ಅನಿಲ ಬಳಸುವವರು ಜಿಲ್ಲೆಗೊಬ್ಬರಾದರೂ ಇರುವುದು ಸಂಶಯ. ಶೌಚಾಲಯದ ಅನಿಲ ಹುಟ್ಟುಹಾಕಬಲ್ಲ ಮಾನಸಿಕ ತಡೆ, ಸಾಮಾಜಿಕ ಸಮಸ್ಯೆಗಳು ಹಲವು. ಇವುಗಳೆನ್ನೆಲ್ಲಾ ಪರಿಹರಿಸಿ ಅದನ್ನು ಕೃಷಿ ಅಭಿವೃದ್ಧಿಗಾಗಿ ಬಳಸುತ್ತಿರುವ ಯುವಕರೊಬ್ಬರು ನಮ್ಮಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಯುವಕೃಷಿಕ ದಯಾನಂದ ಅಪ್ಪಯ್ಯನವರಮಠ. ದಯಾನಂದರ ಅನುಭವ ಅವರದೇ ಮಾತುಗಳಲ್ಲಿವೆ. “ನನಗೆ ನವ್ಯ ಕಲೆಯಲ್ಲಿ ಆಸಕ್ತಿ. 2004ರಲ್ಲಿ ಫೈನ್ ಆಟ್ರ್ಸ್‍ನಲ್ಲಿ ಪದವಿ ಗಳಿಸಿದೆ. ಅದಕ್ಕೂ ಮೊದಲು ಚಿತ್ರಕಲಾ ಮತ್ತು ಪೈಂಟಿಂಗ್‍ನಲ್ಲಿ ಡಿಪ್ಲೊಮಾ ಪಡೆದಿದ್ದೆ. ನೌಕರಿಗಾಗಿ ಹುಡುಕಾಡಿದೆ. ಕೊನೆಗೆ ಸೇಲಂ ಮೂಲದ ಆರೋಗ್ಯ ಮಿಲ್ಕ್ಸ್‍ನ ಪೆÇ್ರಕ್ಯೂರ್‍ಮೆಂಟ್ ಆಫೀಸರ್ ಆಗಿ ದೇಸೂರದಲ್ಲಿ ಮೂರು ವರ್ಷ ಕೆಲಸ ಮಾಡಿದೆ. ಅಲ್ಲಿಯ ಕೆಲಸದ ಒತ್ತಡ, ಏಕತಾನತೆಯಿಂದ ಬೇಸರವಾಗತೊಡಗಿತು. ಹಾಗಾಗಿ ಅಲ್ಲಿಂದ ಹೊರಬಂದೆ. ಈ ಮಧ್ಯೆ ನಮ್ಮ ಊರಲ್ಲಿಯೇ ‘ಆದಿತ್ಯ ಮಿಲ್ಕ್’ ಉದ್ದಿಮೆ ಪ್ರಾರಂಭವಾಯಿತು.
ಅಲ್ಲಿ ಎರಡು ವರ್ಷ ಕೆಲಸ ನಿರ್ವಹಿಸಿದೆ. ಅದೇಕೋ ಸ್ವಂತಿಕೆ ಕಳೆದುಕೊಂಡ ನೋವು ಹೆಚ್ಚಾಯಿತು. ಸಾಕಿನ್ನು ನೌಕರಿಯ ಸಹವಾಸ ಎಂದು ಕೃಷಿಯತ್ತ ಗಮನ ಹರಿಸಲು ಮುಂದಾದೆ. ಎದುರಾದ ದೊಡ್ಡ ಸಮಸ್ಯೆ ಕೂಡುಕುಟುಂಬದಲ್ಲಿ ಪಾಲುಗಳಾಗಿ ನಮ್ಮ ತಂದೆಯವರಿಗೆ ಹತ್ತು ಎಕರೆ ಜಮೀನು ಸಿಕ್ಕಿತು. ಶೌಚಶಕ್ತಿಯ ಕುರಗುಂದ ಮಾದರಿ ಚಿತ್ರ, ಲೇಖನ : ಶೈಲಜಾ ಬೆಳ್ಳಂಕಿಮಠ ಮಿಥೇನ್ ಹಾಗೂ ಇನ್ನಿತರ ಹಾನಿಕಾರಕ ಅನಿಲಗಳ ಸಮರ್ಪಕ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ದಯಾನಂದ ಜಗದೀಶ ಮಾಡಿ ತೋರಿಸಿದ ಈ ಶೌಚಾಧಾರಿತ ಅಭಿವೃದ್ಧಿ ಬಯಲುಸೀಮೆಗೆ ಒಂದು ಉತ್ತಮ ಸುಸ್ಥಿರ ಮಾದರಿ. ದೀಪಕ್ಕೂ ಬಳಕೆ ಮನೆಯಲ್ಲೀಗ ನಕಾರಾತ್ಮಕತೆ ಪೂರ್ತಿ ಮಾಯ ಅದು ಊರಿನ ಕೊನೆಯ ಜಾಗ. ಸುತ್ತಲಿನ ಹದಿನೈದು ಇಪ್ಪತ್ತು ಕುಟುಂಬಗಳು ಶೌಚಕ್ಕೆ ಈ ಹೊಲದದಂಡೆಯನ್ನೇ ಆಶ್ರಯಿಸಿದ್ದರು. ಇದರಿಂದಾಗಿ ದಂಡೆಯ ನಾಲ್ಕು ಗುಂಟೆಯಷ್ಟು ಜಮೀನು ಯಾವುದೇ ಕೃಷಿಕಾರ್ಯ ಬಿಡಿ, ಓಡಾಡಲೂ ಆಗದಷ್ಟು ಕೊಳಕಾಗುತ್ತಿತ್ತು. ಬಯಲು ಶೌಚದಿಂದ ಆಗುವ ಪರಿಸರ ಮಾಲಿನ್ಯ, ಜಲಮಲಿನತೆ ಮತ್ತು ಆರೋಗ್ಯ ಸಮಸ್ಯೆಗೆ ಪರಿಹಾರ ರೂಪಿಸಲೇ ಬೇಕು ಅಂದುಕೊಂಡೆ. ಹೊಲದ ಒಂದು ಬದಿಯಲ್ಲಿ ನಾವೇ ಶೌಚಾಲಯ ನಿರ್ಮಿಸಿ ಬಳಕೆಗೆ ನೀಡಿದರೆ ಹೇಗೆ? ಮನೆಮಂದಿಯೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸಿದೆ.
3.3 ಅಡಿ ಘಿ 3.3 ಅಡಿ ಅಳತೆಯ ನಾಲ್ಕು ಸ್ವಯಂ ನಿರ್ವಹಣಾ ಶೌಚಾಲಯಗಳನ್ನು ನಿರ್ಮಿಸಿದೆವು. ಇದಕ್ಕೆ ಒಟ್ಟು 2.10 ಲಕ್ಷ ರೂ. ವೆಚ್ಚವಾಯಿತು. ಬೀಗ ಹಾಕಿದರೆ ಬೇರೆಯವರ ಕಿರಿಕಿರಿ ಇರುವುದಿಲ್ಲ ಎನಿಸಿ ಪ್ರತಿ ಶೌಚಾಲಯಕ್ಕೆ ಬೀಗ ಹಾಕಿ ನಾಲ್ಕುನಾಲ್ಕು ಕೀಲಿ ಕೆ ಮಾಡಿಸಿದೆ. ಒಂದು ಶೌಚಾಲಯವನ್ನು ನಾಲ್ಕು ಕುಟುಂಬಗಳು ಸೇರಿ ಬಳಸುವಂತೆ ಹೇಳಿ ಎಲ್ಲಾ ಕುಟುಂಬದ ಸದಸ್ಯರಿಗೆ ಶೌಚಾಲಯ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟೆ. ಕಳೆದ ಎರಡು ವರ್ಷಗಳಿಂದ ಹದಿನಾರು ಕುಟುಂಬಗಳು ಈ ಶೌಚಾಲಯಗಳನ್ನು ಬಳಕೆ ಮಾಡುತ್ತಿವೆ. ಒಂದು ಕುಟುಂಬದ ಕನಿಷ್ಠ ಆರು ಮಂದಿಯಂತೆ ನೂರರಷ್ಟು ಜನ ಇವನ್ನು ಉಪಯೋಗಿಸುತ್ತಿದ್ದಾರೆ. ಅಕಸ್ಮಾತ್ ಓವರ್‍ಹೆಡ್ ಟ್ಯಾಂಕಿನಲ್ಲಿ ನೀರು ಖಾಲಿಯಾದರೆ, ತಂತಮ್ಮ ಮನೆಗಳಿಂದ ತಂದು ಬಳಸಲೆಂದು ಪ್ರತಿ ಶೌಚಾಲಯಕ್ಕೆ ಐದು ಲೀಟರಿನ ಕ್ಯಾನ್ ಕೊಟ್ಟಿದ್ದೇವೆ. ನಾಲ್ಕು ಶೌಚಾಲಯಗಳಿಂದ ಪ್ರತಿ ದಿನ ಒಟ್ಟು ಹದಿನಾಲ್ಕು ಕಿಲೋ ಮಿಥೇನ್ ಅನಿಲ ಉತ್ಪಾದನೆಯಾಗುತ್ತದೆ. ಇದನ್ನು ನಾಲ್ಕು ಘನ ಅಡಿಯ ಗೋಅನಿಲ ಯಂತ್ರದ ಜೊತೆ ಜೋಡಿಸಿದ್ದೇನೆ. ನಮ್ಮ ಕುಟುಂಬದ ಶೌಚಾಲಯವನ್ನು ಸಹ ಇದಕ್ಕೆ ಜೋಡಿಸಿದ್ದೇವೆ. ಪ್ರತಿದಿನ ಎರಡು ಬುಟ್ಟಿ (ಅಂದಾಜು ಹತ್ತು ಕಿಲೋ) ಸಗಣಿ ನೀರನ್ನು ಮಿಶ್ರಣ ಮಾಡಿ ಸೇರಿಸುವುದರಿಂದ ಯಾವುದೇ ದುರ್ವಾಸನೆ ಬರುವುದಿಲ್ಲ. ಪಂಪಿಗೆ ಅನಿಲ, ಬೆಳೆಗೆ ಗೊಬ್ಬರ ದಿನಕ್ಕೆ ಒಟ್ಟು 20 - 22 ಕಿಲೋ ಮಿಥೇನ್ ಅನಿಲ ಸಿಗುತ್ತದೆ. ಹೊರಬರುವ ಬಗ್ಗಡವನ್ನು ಎರೆಗೊಬ್ಬರ ತಯಾರಿಕೆಗೆ ಬಳಸುತ್ತಿದ್ದೇನೆ. ಹೆಚ್ಚಿನದನ್ನು ಜೀವಸಾರ ಘಟಕದೊಂದಿಗೆ - ಬಯೋಡೈಜೆಸ್ಟರ್ - ಜೋಡಿಸಿ ದೊರೆಯುವ ಸಾರವನ್ನು ಹನಿ ನೀರಾವರಿ ಮೂಲಕ ಬೆಳೆಗಳಿಗೆ ಒದಗಿಸುತ್ತೇನೆ. ಐದು ಅಶ್ವಶಕ್ತಿಯ ಮೋಟಾರ್ ಬಳಸಿ, ಜೀವಸಾರ ದ್ರವವನ್ನು ಘಟಕದಿಂದ ಮೇಲೆತ್ತಿ ಹನಿ ನೀರಾವರಿ ಪೈಪ್ ಮೂಲಕ ಸರಬರಾಜು ಮಾಡುತ್ತಿದ್ದೇವೆ. ಈ ಮೋಟಾರ್ ಮುಖ್ಯವಾಗಿ ಶೌಚಾಲಯದಿಂದ ಹೊರಬರುವ ಮಿಥೇನ್ ಅನಿಲದಿಂದ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಕೇವಲ ಶೇ. 20 ಡೀಸೆಲ್ ಇದ್ದರೆ ಸಾಕು. ಹುಳುಗಳು ಬಡಿದು ದೀಪದ ಬತ್ತಿ ಹಾಳಾಗುವುದನ್ನು ತಡೆಯಲು ಹೊಸ ವಿನ್ಯಾಸದ ದೀಪ ಅಳವಡಿಸಿದ್ದೇನೆ. ಮೊದಮೊದಲು ಶೌಚಾಲಯದ ಅನಿಲ ಸೇರಿಸಿ ಆಹಾರ ತಯಾರಿಸಿ ಬಳಸುವ ಬಗ್ಗೆ ಸಂಬಂಧಿಕರು, ಊರಿನ ಜನ ಲಘುವಾಗಿ ಮಾತಾಡಿದರು. ಹಲವು ಪ್ರಶ್ನೆ ಕೇಳುತ್ತಿದ್ದರು. ‘ಇಂಥ ಅನಿಲ ಬಳಸಿ ತಯಾರಿಸಿದ ಅಡುಗೆ ದೇವರಿಗೆ ನೈವೇದ್ಯ ತೋರಿಸಲು ಯೋಗ್ಯ ಅಲ್ಲ’ ಎಂದು ವಾದಿಸಿದರು. ಅವರಿಗೆಲ್ಲ ನನ್ನದು ಒಂದೇ ಉತ್ತರ. ದೇಹದಲ್ಲೇ ಮಲ ಹೊತ್ತು ತಿರುಗುವ ನಾವು ದೇವರಿಗೆ ಕೈ ಮುಗಿಯುವುದಿಲ್ಲವೇ? ಪ್ರಾರ್ಥಿಸುವುದಿಲ್ಲವೇ? ಅಡುಗೆಗೆ ಬಳಸುವ ಅನಿಲ ಹೇಗೆ ಮೈಲಿಗೆ? ಜಾನುವಾರುಗಳ ಮಲಮೂತ್ರ ಬಾಚಿ ಸಾರಿಸಲು, ಗೊಬ್ಬರಕ್ಕಾಗಿ ಉಪಯೋಗಿಸಲು ಇಲ್ಲದ ಮಡಿವಂತಿಕೆ, ಶೌಚವನ್ನು ಗೊಬ್ಬರವಾಗಿ, ಅನಿಲವಾಗಿ ಬಳಸುವಾಗ ಏಕೆ? ‘ನಮ್ಮ ವಿಚಾರ, ಧೋರಣೆಗಳಲ್ಲಿ ಬದಲಾವಣೆ ತಂದಾಗ ಮಾತ್ರ ಇಂಥ ವಿಷಯಗಳಲ್ಲಿ ಮುಂದಡಿ ಇಡಲು ಸಾಧ್ಯ’ ಎನ್ನುವುದು ನನ್ನಭಿಪ್ರಾಯ. ಬಯಲು ಶೌಚದಿಂದ ಅನುಭವಿಸಿದ ತೊಂದರೆಗಳು ನಿವಾರಣೆಯಾಗಿವೆ. ನನ್ನ ತಂದೆ, ತಾಯಿ, ಪತ್ನಿ ಇವರಿಗೆ ಈ ಬಗ್ಗೆ ನಕಾರಾತ್ಮಕvಇಲ್ಲ. ನನ್ನ ವಿಚಾರ ಅಳವಡಿಕೆಯನ್ನು ಪ್ರೋತ್ಸಾಹಿಸಿದ್ದಾರೆ. ಮಳೆಗಾಲದ ಒಂದೆರಡು ತಿಂಗಳು ಬಿಟ್ಟರೆ ವರ್ಷಪೂರ್ತಿ ಸಾಕಷ್ಟು ಅನಿಲ ಸಿಗುತ್ತದೆ. ಹೆಚ್ಚಿನ ಅನಿಲ ಉತ್ಪಾದನೆಯಾದದ್ದನ್ನು ಕ್ಯಾನವಾಸ್ ಬಲೂನ್ ಬಳಕೆ ಮಾಡಿ ಸಂಗ್ರಹಿಸುವ ವಿಚಾರವಿದೆ. ಉರುವಲಿನ ಚಿಂತೆ ಇಲ್ಲ. ಕಳೆದ ಎರಡು ವರ್ಷಗಳಿಂದ ಅಡುಗೆ ಮಾಡಲು, ಸ್ನಾನಕ್ಕೆ ನೀರು ಕಾಯಿಸಲು, ಮನೆಯಲ್ಲಿ ದೀಪ ಉರಿಸಲು ಹಾಗೂ ಮೋಟಾರ್ ಪಂಪ್‍ಸೆಟ್ ನಡೆಸಲು ಇದೇ ಅನಿಲ ಉಪಯೋಗಿಸುತ್ತಿದ್ದೇವೆ. ಶೌಚಾಲಯದ ಅನಿಲ ಜೋಡಣೆಯಿಂದ ಆದ ಮುಖ್ಯ ಲಾಭ - ಹೇರಳ ಜೈವಿಕ ಗೊಬ್ಬರ, ಮಿಥೇನ್ ಅನಿಲ ಹಾಗೂ ನಿರ್ಮಲ ಪರಿಸರ.
ಸ್ವಯಂ ನಿರ್ವಹಣಾ ಶೌಚಾಲಯ ನನ್ನ ಅಭಿಪ್ರಾಯ ಪ್ರಕಾರ ಸಮುದಾಯ ಬಯಲುಸೀಮೆಗೆ ಸುಸ್ಥಿರ ಮಾದರಿ ಬಯಲು ಪ್ರದೇಶದಲ್ಲಿ ಸಂಗ್ರಹಣೆಯಾಗುವ ಸಗಣಿ ಗುಂಡಿ, ಮನುಷ್ಯರ ಶೌಚದಿಂದ ಹೆಚ್ಚಿನ ಪ್ರಮಾಣದ ಮಿಥೇನ್ ಅನಿಲ ವಾತಾವರಣಕ್ಕೆ ಸೇರುತ್ತದೆ. ಹಸಿರುಮನೆ ಅನಿಲಗಳು (ಕಾರ್ಬನ್ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್, ಮಿಥೇನ್ ಹಾಗೂ ಕ್ಲೋರೋಫೆÇ್ಲೀರೋ ಕಾರ್ಬನ್) ಸೂರ್ಯನಿಂದ ಹೊರಸೂಸುವ ಹಾನಿಕಾರಕ ತೀಕ್ಷ್ಣ ವಿಕಿರಣಗಳು ಮತ್ತೆ ಸೂರ್ಯನೆಡೆ ಪ್ರತಿಫಲನಗೊಳ್ಳದಂತೆ ತಡೆಗೋಡೆಯಂತೆ ಕಾರ್ಯ ನಿರ್ವಹಿಸುತ್ತವೆ. ಇವುಗಳಲ್ಲಿ ಒಂದಾದ ಮಿಥೇನ್, ತಾಪಮಾನ ಏರಿಕೆಗೆ ಮೂಲವಾಗಿ ತನ್ಮೂಲಕ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗುತ್ತದೆ. ಮಿಥೇನ್ ಹಾಗೂ ಇನ್ನಿತರ ಹಾನಿಕಾರಕ ಅನಿಲಗಳನ್ನು ವಾತಾವರಣಕ್ಕೆ ಸೇರಿಸುವ ವಿದ್ಯುತ್ ಪಂಪುಗಳು, ಹೊಗೆÀ ಒಲೆಗಳು, ಜಾನುವಾರು ಸಗಣಿ, ಮೂತ್ರದ ಗುಂಡಿಗಳು, ಬಯಲು ವಿಸರ್ಜನೆ ಮಾಡುವವರ ಮಲಮೂತ್ರಗಳು, ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಸಮರ್ಪಕ ನಿರ್ವಹಣೆ ಮಾಡಬೇಕಾದÀ ಅನಿವಾರ್ಯತೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ದಯಾನಂದ ಜಗದೀಶ ಮಾಡಿ ತೋರಿಸಿದ ಮಾದರಿ ಬಯಲು ಶೌಚ ಸಾಮಾಜಿಕ ಸಮಸ್ಯೆಯಾಗಿರುವ ಬಯಲುಸೀಮೆಗೆ ಒಂದು ಉತ್ತಮ ಸುಸ್ಥಿರ ಮಾದರಿ.ಶೌಚಾಲಯಗಳು ವಿಫಲವಾಗಲು ಮುಖ್ಯ ಕಾರಣಗಳು ಎರಡು. ಒಂದು : ಮಲ ವಿಸರ್ಜಿಸಲು ಜೋಡಿಸಿದ ಭಾಂಡೆ (ಮಲಪಾತ್ರೆ) ಹಸಿಯಾಗದೆÀ ಮಲ ಜಾರಿ ಹೋಗದು. ಆನಂತರ ಸಾಕಷ್ಟು ನೀರು ಹಾಕಿದರೂ ಗಟ್ಟಿಯಾಗಿ ಹಾಗೆಯೇ ಉಳಿಯುತ್ತದೆ. ಹೀಗಾಗಿ ಶೌಚಕ್ಕಿಂತ ಮೊದಲು ನೀರು ಹಾಕುವುದು ಅತ್ಯವಶ್ಯ. ಎರಡು : ನೀರಿನ ಕೊರತೆ ಹಾಗೂ ನಿರ್ವಹಣಾ ಸಮಸ್ಯೆ. ಇವುಗಳನ್ನು ಪರಿಹರಿಸಿಕೊಳ್ಳುವ ದಿಶೆಯಲ್ಲಿ ನಮ್ಮ ಸ್ವಯಂನಿರ್ವಹಣಾ ಶೌಚಾಲಯಗಳ ಕಾರ್ಯಕ್ಷಮತೆ ಉತ್ತಮ. ಓವರ್‍ಹೆಡ್ ಟ್ಯಾಂಕಿನಿಂದ ಎರಡು ಪೈಪುಗಳು ಕೆಳಗಿಳಿಯುತ್ತವೆ. ಒಂದು ಶೌಚಾಲಯದ ಒಳಗಿರುವ ನಲ್ಲಿಗೆ ನೀರು ಪೂರೈಸುತ್ತದೆ. ಎರಡನೆಯದು, ಇನ್ನೊಂದು ಮೆಟ್ಟಲಿನ ಕೆಳಗೆ ಸ್ಪ್ರಿಂಗ್ ಮೂಲಕ ಸ್ಟೀಲ್ ಫ್ಲಶ್ ವಾಲ್ವ್ ಅಳವಡಿಸಿದ ಪೈಪಿಗೆ ನೀರು ಹರಿಸುತ್ತದೆ. ಶೌಚಾಲಯ ಪ್ರವೇಶಿಸುವ ವ್ಯಕ್ತಿ ಮೆಟ್ಟಲಿನ ಮೇಲೆ ಕಾಲಿಟ್ಟಾಗ ಫ್ಲಶ್ ವಾಲ್ವಿನಿಂದ ಅರ್ಧ ಇಂಚಿನ ಪೈಪ್ ಮೂಲಕ ನೀರು ಚಿಮ್ಮಿ ಭಾಂಡೆ ಹಸಿಯಾಗುತ್ತದೆ. ವ್ಯಕ್ತಿ ಮಲ ವಿಸರ್ಜಿಸಿ ಒಳಗಿರುವ ನೀರನ್ನು ಬಳಸಿ ಸ್ವಚ್ಚಗೊಳಿಸಿ ಹೊರಬರುತ್ತಾರೆ. ಶೌಚಾಲಯ ಸ್ವಚ್ಛವಾಗಿ ಉಳಿಯುತ್ತದೆ. ಬದಲಾದ ಕೃಷಿ ಬದುಕು ಶೌಚಾಲಯದ ಕೊಡುಗೆ ಸಿಗತೊಡಗಿದ ನಂತರ ಅನಿಲ ಘಟಕದಿಂದ ಸಾಕಷ್ಟು ಜೈವಿಕ ಬಗ್ಗಡವೂ (ಸ್ಲರಿ) ಸಿಗಲಾರಂಭಿಸಿತು. ಇದರಿಂದ ಒಳ್ಳೆ ಎರೆಗೊಬ್ಬರ ತಯಾರಿಸಿಕೊಂಡೆ. ಹೆಚ್ಚಾದ ಸ್ಲರಿಯನ್ನು ಹಿಂದೆಯೇ ಸೂಚಿಸಿದಂತೆ, ಜೀವಸಾರ ಘಟಕಕ್ಕೆ ಜೋಡಿಸಿ ಸತ್ವಭರಿತ ಜೀವಸಾರವನ್ನು ತೋಟದ ಹಣ್ಣಿನ ಗಿಡಗಳಿಗೆ ಉಣಿಸಲಾರಂಭಿಸಿದೆ. ಗಿಡಗಳ ಬೆಳವಣಿಗೆ, ಹೆಚ್ಚಿದ ಫಸಲು, ರುಚಿ ಯಲ್ಲಾದ ಬದಲಾವಣೆ ಸಾವಯವ ಒಳಸುರಿಗಳ ಬಳಕೆ ಬಗ್ಗೆ ಆಸಕ್ತಿ ಮೂಡಿಸಿತು.
ರಾಸಾಯನಿಕರಹಿತ ಕೃಷಿಯೆಡೆಗೆ ಹೆಜ್ಜೆ ಹಾÀಕುವಂತೆ ಮಾಡಿತು. ಪಿತ್ರಾರ್ಜಿತ ಹತ್ತೆಕರೆಯೊಂದಿಗೆ ಈಗ ನಾನು ಖರೀದಿಸಿದ ಐದೆಕರೆ ಜಮೀನು ಸೇರಿದೆ. ಆರು ಎಕರೆ ಕಬ್ಬು, ಎರಡು ಎಕರೆ ಬಾಳೆ, ಚಿಕ್ಕು, ಮಾವು, ನುಗ್ಗೆ, ಚೆರ್ರಿ ಹಾಗೂ ಒಂದೆಕರೆ ತೆಂಗು ಬೆಳೆಸಿರುವೆ. ಎರಡು ಎಕರೆಯಲ್ಲಿ ಸೋಯಾ ಅವರೆ, ಗೋವಿನ ಜೋಳ ಹಾಗೂ ಉಳಿದ ಮಳೆಯಾಶ್ರಿತ ಭೂಮಿಯಲ್ಲಿ ಜೋಳ, ಗೋಧಿ, ಕಡಲೆ ಬೆಳೆಯುತ್ತಿದ್ದೇನೆ. ಕಳೆದ ಮುಂಗಾರಿನಲ್ಲಿ ನಾಲ್ಕು ಎಕರೆ ಕಬ್ಬಿನ ಒಂದು ಕಣ್ಣಿನ ಸಸಿ ಮಾಡಿಕೊಂಡು ಬೀಜಾಮೃತದಿಂದ ಉಪಚರಿಸಿ ನಾಟಿ ಮಾಡಿದೆ. ಸಾಕಷ್ಟು ಹಸಿರೆಲೆ, ಎರೆಗೊಬ್ಬರ, ಜೀವಸಾರ ದ್ರವ ಬಳಸಿ ಎಕರೆಗೆ ನಲುವತ್ತು ಟನ್ ಇಳುವರಿ ಪಡೆದೆ. ಕೇವಲ ರಾಸಾಯನಿಕಗಳ ಬಳಕೆಯಿಂದ ಕೃಷಿ ಸುಸ್ಥಿರವಾಗದು ಎಂಬ ಅರಿವು ಮೂಡಿದೆ. ನನ್ನ ಆಸಕ್ತಿಯ ಇನ್ನೊಂದು ಉಪಕಸುಬು ಜೇನುಕೃಷಿ. ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಇನ್ನುಳಿದಂತೆ ಎಲ್ಲವೂ ಸ್ವಂತ ಕಲಿಕೆ. ತೋಟದಲ್ಲಿ ಹನ್ನೆರಡು ಜೇನು ಪೆÀಟ್ಟಿಗೆ ಇಟ್ಟಿರುವೆ. ಜೇನುಸಂಸಾರವನ್ನೂ ಮಾರಾಟ ಮಾಡುತ್ತೇನೆ. ಪೆಟ್ಟಿಗೆ ಸಹಿತ ಜೇನುಗೂಡಿಗೆ 4500 - 5000 ದರ. ಆಗಸ್ಟಿನಿಂದ ಏಪ್ರಿಲ್ ವರೆಗೆ ಜೇನು ಚಟುವಟಿಕೆ ಹೆಚ್ಚಿರುವುದರಿಂದ ಉತ್ತಮ ಲಾಭ ಸಿಗುತ್ತದೆ. ಜೇನುಸಂಸಾರ ಮಾರಾಟದಿಂದ (ತಿಂಗಳಿಗೆ ಕನಿಷ್ಠ 4 - 5 ಪೆಟ್ಟಿಗೆ) ತಿಂಗಳಿಗೆ 20 ರಿಂದ 25 ಸಾವಿರ ಆದಾಯ ಸಿಗುತ್ತಿದೆ. ಜೇನುತುಪ್ಪವನ್ನು ಕಿಲೋಗೆ ರೂ. 450ರಂತೆ ಮಾರಾಟ ಮಾಡುತ್ತೇನೆ. ‘ಸಮೃದ್ಧಿ ಜೇನು ಉತ್ಪಾದಕರ ಸಂಘ’ ಹುಟ್ಟುಹಾಕಿ ಸುತ್ತಲಿನ ಗ್ರಾಮಗಳಿಂದ 30 ಜನ ಸದಸ್ಯರು ಹಾಗೂ 7 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಳೆದ ತಿಂಗಳಿನಲ್ಲಿ ಜೇನು ಕೃಷಿ ಹಾಗೂ ಜೇನು ಮೇಳ ಆಯೋಜಿಸಿ ಆಸಕ್ತ ರೈತರಿಗೆ ಪರಿಣಿತರಿಂದ ಮಾಹಿತಿ ಕೊಡಿಸಿದ್ದೇವೆ. ಜೇನು ಕೃಷಿ ಬಗ್ಗೆ ಇನ್ನೂ ಹೆಚ್ಚಿನ ಕೃಷಿಕರಿಗೆ ಅರಿವು ಮೂಡಿಸಬೇಕಿದೆ. ನನ್ನಲ್ಲಿ ಜಮುನಾಪಾರಿ, ತೋತಾಪುರಿ ಹಾಗೂ ಸಿರೋಹಿ ತಳಿಯ ಹತ್ತು ಆಡುಗಳಿವೆ. ಸ್ಟಾಲ್ ಫೀಡಿಂಗ್ ಪದ್ದತಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಆಲೋಚನೆ ಇದೆ. ಇದಕ್ಕಾಗಿ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವೆ. ಮುಂದಿನ ಯೋಜನೆಗಳು ಈ ವರ್ಷದಿಂದ ಮಾವು ಹಾಗೂ ಚಿಕ್ಕು ಸಸ್ಯ ಅಭಿವೃದ್ಧಿ ಕೇಂದ್ರ (ನರ್ಸರಿ) ಮಾಡುವ ವಿಚಾರವಿದೆ. ಮಾವಿನ ಗೊಪ್ಪ ತಂದು ಸಸಿ ಬೆಳೆಸಿ, ನಮ್ಮಲ್ಲಿಯೆ ಇರುವ ಉತ್ಕೃಷ್ಟ ತಳಿಗಳಾದ ರತ್ನಾಗಿರಿ, ಧಾರವಾಡ ಆಪೂಸ್ ಹಾಗೂ ಮಲ್ಲಿಕಾ ತಳಿಗಳಿಂದ ಸಯಾನ್ ಸಂಗ್ರಹಿಸಿ ಕಸಿಕಟ್ಟಿ ಮಾರಾಟ ಮಾಡುವುದು. ಕಸಿ ಕಟ್ಟಿದ ಸಸಿಗಳನ್ನು ಖರೀದಿಸುವ ಕುರಿತು ತೋಟಗಾರಿಕೆ ಹಾಗೂ ಜಲಾನಯನ ಇಲಾಖೆ ಅಧಿಕಾರಿಗಳೊಂದಿಗೆ ವಿಚಾರಿಸಿರುವೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶ್ರಾವಣದಲ್ಲಿ ಬಾಳೆ ಗಿಡ, ಹಣ್ಣು ಹಾಗೂ ಎಲೆಗಳ ಮಾರಾಟದಿಂದ ಲಾಭ ಸಿಗುತ್ತಿದೆ. ಅದನ್ನು ಇನ್ನೂ ವ್ಯವಸ್ಥಿತವಾಗಿ ಉದ್ದಿಮೆ ರೂಪದಲ್ಲಿ ಅಭಿವೃದ್ಧಿಪಡಿಸುವ ಆಲೋಚನೆ ಇದೆ. ಬಿಡುವಿದ್ದಾಗ ಡ್ರಾಯಿಂಗ್, ಪೇಂಟಿಂಗ್ ಮಾಡುತ್ತೇನೆ. ಉದ್ಯೋಗ ಅರಸಿ ಹೋಗಿದ್ದರೆ ತಿಂಗಳಿಗೆ 30ರಿಂದ 40 ಸಾವಿರ ಗಳಿಸಬಹುದಿತ್ತು. ಆದರೆ ನೆಮ್ಮದಿ, ಖುಷಿ, ಸ್ವಂತಿಕೆ, ರಚನಾತ್ಮಕ ಆಲೋಚನೆಗಳು ಕಮರಿ ಹೋಗುತ್ತಿದ್ದವು. ಕೃಷಿಯಲ್ಲಿ ನನ್ನ ವಿಚಾರಗಳಿಗೆ ಬಲ ಬಂದಿದೆ. ಕ್ರಿಯಾತ್ಮಕ ಆಲೋಚನೆಗಳಿಗೆ ಸ್ಫೂರ್ತಿ, ಪ್ರೇರಣೆ ಸಿಕ್ಕಿದೆ. ಅಳವಡಿಕೆಗೆ ಪ್ರೋತ್ಸಾಹ ದೊರಕಿದೆ. ದಯಾನಂದ ಜಗದೀಶ ಅಪ್ಪಂಅಪ್ಪಯ್ಯನವರಮಠ 99641 24176
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/19/2020
ನಿರ್ವಹಣಾ ಮುಂಗಡ ಪತ್ರ ೨೦೧೫-೧೬ ರ ಕುರಿತು ಇಲ್ಲಿ ತಿಳಿಸಲಾ...