ಅನುಷ್ಠಾನ ತಂತ್ರಗಳು
- ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳು ರಾಜ್ಯದಲ್ಲಿರುವ ಸರ್ಕಾರಿ/ಖಾಸಗಿಯವರ ಒಡೆತನದಲ್ಲಿರುವ ಅನುಪಯುಕ್ತ ಹಾಗೂ ಕೃಷಿಗೆ ಯೋಗ್ಯವಲ್ಲದ ಒಣಭೂಮಿಯನ್ನು ಗುರುತಿಸುವುದು ಮತ್ತು ಪ್ರಕಟಿಸುವುದು. ಇಂತಹ ಭೂಮಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿವಾರು, ತಾಲ್ಲೂಕುವಾರು ಮತ್ತು ಜಿಲ್ಲಾವಾರು ಕೃಷಿ ಇಲಾಖೆಯ ಅನುಮೋದನೆಯೊಂದಿಗೆ ಸಿದ್ಧಪಡಿಸಲಾಗುವುದು.
- ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಸಂಸ್ಕರಣೆ ಮತ್ತು ಉತ್ಪಾದನೆಗಾಗಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಮೂಲಕ ಉದ್ದಮೆದಾರರನ್ನು ಆಹ್ವಾನಿಸುವುದು. ಪ್ರಸ್ತುತ ಕರ್ನಾಟಕ ರಾಜ್ಯ ಕೈಗಾರಿಕಾ ನೀತಿಯಡಿಯಲ್ಲಿ ನೀಡಲಾಗುತ್ತಿರುವ ರಿಯಾಯಿತಿ ಜೊತೆಗೆ ಸಾಕಷ್ಟು ಪ್ರೋತ್ಸಾಹಕಗಳನ್ನು ಉದ್ದಮೆದಾರರಿಗೆ ನೀಡಿ ಪ್ರೋತ್ಸಾಹಿಸುವುದು.
- ಖಾದ್ಯವಲ್ಲದ ಸಸ್ಯ ತೈಲ ಬೀಜಗಳ ಉತ್ಪಾದನಾ ಕೃಷಿಗೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಸ್ಥಾಪನೆಗೆ ಅವಶ್ಯವಿರುವ ಭೂಮಿಯ ಲಭ್ಯತೆಯನ್ನು ಆಧರಿಸಿ ಗುತ್ತಿಗೆ ಆಧಾರಿತ ವ್ಯವಸಾಯ ಪದ್ಧತಿಯನ್ನು ಪ್ರೋತ್ಸಾಹಿಸುವುದು. ಕೈಗಾರಿಕೆಗಳು ಭೂಮಿಯ ಒಡೆತನ ಹೊಂದಿದ ರೈತರೊಂದಿಗೆ ಅಥವಾ ಸರ್ಕಾರದೊಂದಿಗೆ (ಸರ್ಕಾರಿ ಜಮೀನುಗಳಾಗಿದ್ದಲ್ಲಿ) ಒಪ್ಪಂದ ಮಾಡಿಕೊಳ್ಳಲು ಅನುವು ಮಾಡಿಕೊಡುವುದು.
- ವೈನ ಉತ್ಪಾದನೆ, ಜರ್ಕಿನ್ಸ್ ಇತ್ಯಾದಿಗಳಂತೆ – ಬೆಳೆಗಾರರನ್ನು ಗುತ್ತಿಗೆ ಆಧಾರದ ವ್ಯವಸಾಯ ಪದ್ಧತಿಗೆ ಸಂಘಟಿಸುವುದು. ಸಮುದಾಯ ಸಂಘಟನೆ, ತರಬೇತಿ ಮತ್ತು ಸಾಮರ್ಥ್ಯ ಹೆಚ್ಚುಸುವಿಕೆ ಈ ಚಟುವಟಿಕೆಗಳನ್ನು ಏಕಕಾಲದಲ್ಲಿ ಕೈಗೊಳ್ಳುವುದು.
- ಖಾದ್ಯವಲ್ಲದ ತೈಲೋತ್ಪನ್ನ ಬೀಜ ಸಸಿಗಳ ನರ್ಸರಿಗಳನ್ನು ಅಗತ್ಯಗನುಗುಣವಾಗಿ ಕೃಷಿ ಮತ್ತು ಅರಣ್ಯ ಇಲಾಖೆಗಳು ಅಥವಾ ಖಾಸಗಿ ಉದ್ದಿಮೆದಾರರುಗಳಿಂದ ಬೆಳೆಸುವುದು.
- ಸಂಗ್ರಹಣೆ ಮತ್ತು ಸಂಸ್ಕರಣೆ ಕೇಂದ್ರಗಳನ್ನು ಸಂಬಂಧಿಸಿದ ಪ್ರದೇಶಗಳಲ್ಲಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗುವುದು. ಬೀಜ ಸಂಗ್ರಹಣೆ, ಗುಣಮಟ್ಟ ಪರೀಕ್ಷಣೆ, ತಾಂತ್ರಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ರೈತರಿಗೆ ಹಣ ಪಾವತಿ ಇವುಗಳನ್ನು ಈ ಕೇಂದ್ರಗಳು ನಿರ್ವಹಿಸುತ್ತವೆ.
- ಸ್ಥಳೀಯ, ರಾಷ್ಟೀಯ ಮತ್ತು ಅಂತರ ರಾಷ್ಟ್ರೀಯ ಸಹಯೋಗದೊಂದಿಗೆ ಅಸ್ತಿತ್ವದಲ್ಲಿರುವ ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಯಗಳಾದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಜಲಾನಯನ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಅರಣ್ಯೀಕರಣ ಯೋಜನೆ ಇತ್ಯಾದಿ ಕಾರ್ಯಕ್ರಮಗಳನ್ನು ಈ ಕಾರ್ಯಕ್ರಮದೊಂದಿಗೆ ಸಮನ್ವಯಗೊಳಿಸುವುದು.
- ಅಗತ್ಯವಾದಲ್ಲಿ, ರಾಜಸ್ಥಾನ ರಾಜ್ಯದಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಿರುವಂತೆ, (ಬಯೋಫ್ಯೂಯಲ್ ಆಧಾರಿತ ಕೈಗಾರಿಕೆಗಳು ಮತ್ತು ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ಅನುಪಯುಕ್ತ ಭೂಮಿಯ ಹಂಚಿಕೆ ಮಾಡುವ ಕುರಿತು) ಕರ್ನಾಟಕ ರಾಜ್ಯದ ಭೂ ಕಂದಾಯ ಕಾಯ್ದೆಗೂ ಸಹ ತಿದ್ದುಪಡಿ ತರಲಾಗುವುದು. ಭೂಮಿಯನ್ನು ಕೈಗಾರಿಕೆಗಳಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಬಹುದು. ಸರ್ಕಾರಿ ಭೂಮಿಯನ್ನು ಹಂಚಿಕೆ ಮಾಡುವ ಬಗ್ಗೆ ಉದ್ದಿಮೆದಾರರಿಂದ ಟೆಂಡರ್ ಆಹ್ವಾನಿಸಿ ಪರಿಗಣಿಸಲಾಗುವುದು.
- ಈಗಾಗಲೇ ಹಾಸನದಲ್ಲಿರುವ ಬಯೋಫ್ಯೂಯಲ್ ಪಾರ್ಕ್‌ನ್ನು ಬಲಪಡಿಸಲಾಗುವುದು ಮತ್ತು ಅವಶ್ಯಕವಿದ್ದಲ್ಲಿ ಪ್ರತಿ ವಿಭಾಗದಲ್ಲಿ ಒಂದು ಬಯೋಫ್ಯೂಯಲ್ ಪಾರ್ಕ್‌ನ್ನು ಸ್ಥಾಪಿಸಲಾಗುವುದು. ವಿವಿಧ ಸಸ್ಯ ತಳಿಗಳ ನಿರ್ವಹಣೆ ಮತ್ತು / ಸಂಸ್ಕರಣ ಘಟಕಗಳ ವಿವಿಧ ಮಾದರಿಗಳ ನಿರ್ವಹಣೆಯಯಲ್ಲಿ ಕೃಷಿ ಮತ್ತು ತೋಟಗಾರಿಗೆ ವಿಶ್ವ ವಿದ್ಯಾಲಯಗಳು ಪಾಲ್ಗೊಳ್ಳುವುವು. ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳು ತಾಲ್ಲೂಕು ಮಟ್ಟದಲ್ಲಿ ಇಂತಹ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದಲ್ಲಿ ಶುಲ್ಕ ಪಾವತಿಸಿ ಈ ಮಾದರಿ ಘಟಕಗಳನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
- ಖಾದ್ಯವಲ್ಲದ ಎಣ್ಣೆ ಬೀಜಗಳ ಪ್ಲಾಂಟೇಷನ್‌ಗಳಿಗೆ, ಸೂಕ್ತ ವಿಮಾ ಸೌಲಭ್ಯವನ್ನು ವಿಸ್ತರಿಸಲು ಕೃಷಿ ವಿಮಾ ಕಂಪನಿಗಳಿಗೆ ಸೂಚಿಸಲಾಗುವುದು.
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜ್ಯ ಅಯವ್ಯಯದಲ್ಲಿಲ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮಗಳಿಗೆ ಪ್ರತ್ಯೇಕ ಅನುದಾನವನ್ನು ಹಂಚಿಕೆ ಮಾಡಲಾಗುವುದು. ಈ ಅನುದಾನವನ್ನು ಸದರಿ ಮಂಡಳಿಯ ಎಲ್ಲಾ ಕಾರ್ಯ ಚಟುವಟಿಕೆಗಳಿಗಾಗಿ ಆಡಳಿತಾತ್ಮಕ, ನಿರ್ವಹಣೆ, ಪ್ರೋತ್ಸಾಹಕಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು, ಗುಣಮಟ್ಟ ನಿಯಂತ್ರಣ ಇತ್ಯಾದಿಗಳಿಗಾಗಿ ಒದಗಿಸಲಾಗುವುದು.
- ಫೀಡ್ ಸ್ಟಾಕ್, ಯಂತ್ರೋಪಕರಣ, ಉತ್ಪನ್ನಗಳು, ಕಚ್ಚಾ ಸಾಮಗ್ರಿಗಳು ಇತ್ಯಾದಿಗಳಿಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನೀತಿಗೆ ಅನುಗುಣವಾಗಿ ಪ್ರೋತ್ಸಾಹಕಗಳು ಮತ್ತು ತೆರಿಗೆ ರಿಯಾಯಿತಿಗಳನ್ನು ಪ್ರತ್ಯೇಕವಾಗಿ ಸೂಚಿಸಲಾಗುತ್ತದೆ. ತೈಲೋತ್ಪನ್ನ ಎಣ್ಣೆ ಕಾಳುಗಳನ್ನು ಉತ್ಪಾದಿಸುವ ರೈತರಿಗೆ ಸೂಕ್ತ ಬೆಲೆ ಮತ್ತು ಸಂಸ್ಕರಣ ಕೇಂದ್ರಗಳನ್ನು ಸ್ಥಾಪಿಸುವ ಕೈಗಾರಿಕೆಗಳಿಗೆ ಪ್ರೋತ್ಸಾಹ ದೊರೆಯುವಂತಾಗಲು ಉತ್ಪಾದಿತ ತೈಲ ಬೆಲೆಯನ್ನು ಸಹ ಪರಿಗಣಿಸಲಾಗುವುದು. ಸಾರಿಗೆ ಕಂಪನಿಗಳಲ್ಲಿ ಜೈವಿಕ ಇಂಧನದ ಉಪಯೋಗವನ್ನು ಹೆಚ್ಚಿಸಲು ಅವುಗಳಿಗೂ ಸಹ ಪ್ರೋತ್ಸಾಹಕಗಳನ್ನು ನೀಡಲಾಗುವುದು.
ಕರ್ನಾಟಕ ರಾಜ್ಯ ಬಯೋಫ್ಯೂಯಲ್ ನೀತಿ ನಿರೂಪಣೆ
- ಜೈವಿಕ ಇಂಧನ ಉತ್ಪಾದನೆಗೆ ಖಾದ್ಯವಲ್ಲದ ಎಣ್ಣೆ ಬೀಜಗಳನ್ನು ಮಾತ್ರ ಉಪಯೋಗಿಸುವುದು. ಖಾದ್ಯ ಎಣ್ಣೆ ಬೀಜಗಳನ್ನು ಅಡುಗೆಗಾಗಿ ಮಾತ್ರ ಮೀಸಲಿಡುವುದು.
- ಖಾದ್ಯವಲ್ಲದ ಎಣ್ಣೆ ಬೀಜಗಳ ಬಿತ್ತುವಿಕೆಯನ್ನು ಮುಖ್ಯವಾಗಿ ಒಣ ಭೂಮಿ, ಬಂಜರು ಜಮೀನುಗಳು. ಕೃಷಿಗೆ ಯೋಗ್ಯವಲ್ಲದ ಜಮೀನುಗಳು, ಅವನತಿ ಅಂಚಿನಲ್ಲಿರುವ ಅರಣ್ಯ ಭೂಮಿಗಳಲ್ಲಿ. ಸರ್ಕಾರದ ಅಥವಾ ಖಾಸಗಿ ವ್ಯಕ್ತಿಗಳ ಜಮೀನುಗಳಲ್ಲಿ ಕ್ಷೇತ್ರ ಬಿತ್ತುವಿದೆ ವಿಧಾನದಿಂದ ಕೈಗೊಳ್ಳಬಹುದಾಗಿದೆ. ಆಹಾರ ಧಾನ್ಯ ಬೆಳೆಯುವ ಭೂಮಿಗಳಲ್ಲಿ ಖಾದ್ಯವಲ್ಲದ ಎಣ್ಣೆ ಬೀಜಗಳನ್ನು ಬೆಳೆಯುವುದಕ್ಕೆ ಪ್ರೋತ್ಸಾಹಿಸದೇ ಇರುವುದರಿಂದ ಆಹಾರ ಭದ್ರತೆಗೆ ಧಕ್ಕೆಯುಂಟಾಗುವುದಿಲ್ಲ.
- ಎಣ್ಣೆ ತೆಗೆದ ನಂತರ ಬರುವ ಹಿಂಡಿಯನ್ನು ಜೈವಿಕ ಗೊಬ್ಬರವನ್ನಾಗಿ ಉಪಯೋಗಿಸಲು ಪ್ರೋತ್ಸಾಹಿಸ ತಕ್ಕದ್ದು.
- ಸರ್ಕಾರವು ಖಾಸಗಿ/ಸಾರ್ವಜನಿಕ ಪಾಲುಗಾರಿಕೆಯಲ್ಲಿ ಈ ಖಾದ್ಯವಲ್ಲದ ಎಣ್ಣೆ ಬೀಜಗಳ ಉತ್ಪಾದನೆಯನ್ನು ಕೈಗೊಳ್ಳತಕ್ಕದ್ದು. ಉದಾ. ಭೂಮಿಗಳನ್ನು ಖಾಸಗಿಯವರಿಗೆ ದೀರ್ಘಾವಧಿ ಗುತ್ತಿಗೆ ಮೇಲೆ ನೀಡಿ ಈ ಎಣ್ಣೆ ಬೀಜಗಳ ವಿವಿಧ ಜಾತಿಯ ತಳಿಗಳನ್ನು ಬೆಳೆಸಲು ಪ್ರೋತ್ಸಾಹ ನೀಡಬಹುದಾಗಿದೆ.
- ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಈ ಬೀಜಗಳನ್ನು ಸಂಗ್ರಹಿಸಿ, ಅವುಗಳನ್ನು ಕಾಲಮಿತಿಯಲ್ಲಿ ಹಾಗೂ ವಿಕೇಂದ್ರೀಕೃತ ಪದ್ಧತಿಯಲ್ಲಿ ಎಣ್ಣೆಯಾಗಿ ಪರಿವರ್ತಿಸಲು ಪ್ರೋತ್ಸಾಹ ನೀಡುವುದು.
- ಸಾಂಪ್ರಾದಾಯಿಕವಾಗಿ ಎಣ್ಣೆ ಬೀಜಗಳ ಸಂಗ್ರಹಣೆ ಮತ್ತು / ಅಥವಾ ಎಣ್ಣೆ ಉತ್ಪಾದನೆಯಲ್ಲಿ ತೊಡಗಿರುವ ಸಮುದಾಯಗಳು, ಸ್ವಸಹಾಯ ಮಹಿಳಾ ಗುಂಪುಗಳು ಹಾಗೂ ಸ್ಥಳೀಯ ಬಳಕೆದಾರರ ಸಂಘಗಳನ್ನು ಎಣ್ಣೆ ಉತ್ಪಾದನೆಗೆ ಹಾಗೂ ಬೀಜ ಸಂಗ್ರಹಕ್ಕೆ ಪ್ರೋತ್ಸಾಹಿಸುವುದು.
- ಜೈವಿಕ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಸಂಶೋದನೆಯನ್ನು ಉತ್ತೇಜಿಸಲು ಸೂಕ್ತ ಪರಿಣಿತಿವುಳ್ಳ ಸಂಸ್ಥೆಗಳಿಗೆ (ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ) ರಾಜ್ಯ ಸರ್ಕಾರವು ಅನುಕೂಲ ಒದಗಿಸುವುದು.
- ರಾಜ್ಯ ಸರ್ಕಾರವು ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಅಗತ್ಯ
ಆಡಳಿತಾತ್ಮಕ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುವುದು.
- ಕರ್ನಾಟಕ ಸರ್ಕಾರದ ಜೈವಿಕ ಇಂಧನ ನೀತಿಯ ಅನುಷ್ಠಾನದ ಉಸ್ತುವಾರಿ ನಿರ್ವಾಹಿಸಲು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು (ಕರಾಜೈಇಂಅಮಂ) ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತದೆ. ಬಯೋಫ್ಯೂಯಲ್ ಕಾರ್ಯನೀತಿಯ ಅನುಷ್ಠಾನ ಮತ್ತು ದೈನಂದಿನ ಆಡಳಿತವನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರವರ ನೇತೃತ್ವದಲ್ಲಿನ ಕಾರ್ಯಕಾರಿ ಮಂಡಳಿಯು ನಿರ್ವಹಿಸುತ್ತದೆ. ಮಂಡಳಿಯು ಒಬ್ಬ ಹಿರಿಯ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶರನ್ನಾಗಿ ಹೊಂದಲಿದೆ.
- ದಿನಾಂಕ 12.09.2013 ರಂದು ರಚನೆಯಾಗಿರುವ ಕರ್ನಾಟಕ ರಾಜ್ಯ ಬಯೋಫ್ಯೂಯಲ್ ಕಾರ್ಯಪಡೆಯು ಒಂದು ಸ್ವತಂತ್ರ ಸಂಸ್ಥೆಯಾಗಿ ಮುಂದುವರಿಯುತ್ತದೆ. ಈ ಕಾರ್ಯಪಡೆಯು ಜೈವಿಕ ಇಂಧನ ನೀತಿ ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮತ್ತು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಸಲಹೆ ನೀಡುತ್ತದೆ. ಸದರಿ ಕಾರ್ಯಪಡೆಯ ಅಧ್ಯಕ್ಷರು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿರುತ್ತಾರೆ.
ಭಾರತ ಸರಕಾರದಿಂದ ನೀತಿ ನೀರೂಪಿಸುವುದು
ಭಾರತವು Kyoto Protocolಗೆ ಸಹಿ ಹಾಕಿರುತ್ತದೆ. ಜೈವಿಕ ಇಂಧನವು Clean Development Mechanisms ನ ಒಂದು ಉಪಕರಣವಾಗಿದೆ. ಬಯೋಫ್ಯೂಯಲ್ ಉಪಯೋಗದಿಂದ ಸಂಗ್ರಹವಾಗುವ Carbon Credit ಉತ್ಪಾದಾನಾ ವಸ್ತುಗಳ ವ್ಯಾಪಾರೀಕರಣವನ್ನು ಹೆಚ್ಚು ಲಾಭದಾಯಕವಾಗಿ ಮಾಡಬಹುದು. ಇದು ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಉಗುಳುವ ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ.
ಕೇಂದ್ರ ಸರ್ಕಾವು ಪೆಟ್ರೋಲಿಯಂ ತೈಲದೊಂದಿಗೆ ಶೇ.5 ರಷ್ಟು ಬಯೋಫ್ಯೂಯಲ್‌ನ್ನು ಮಿಶ್ರಣ ಮಾಡಲು ಈಗಾಗಲೇ ಅನುಮತಿ ನೀಡಿದೆ. ಹಾಗೂ ಶೇ.5 ರಷ್ಟು ಇಥೆನಾಲ್ ಗ್ಯಾಸೋಲೀನ್ ಮಿಶ್ರಣಕ್ಕೆ ಈಗಾಗಲೇ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಒಪ್ಪಿಗೆ ನೀಡಿದ್ದು, ಅದು ಪರಿಣಾಮಕಾರಿ ಪ್ರಗತಿ ಪಥದಲ್ಲಿದೆ.
ಭಾರತ ಸರ್ಕಾರವು ಈ ಮಿಶ್ರಣವನ್ನು 2017 ನೇ ವರ್ಷದೊಳಗಾಗಿ ಹತ್ತು ಪ್ರತಿಶತಕ್ಕೆ ಹೆಚ್ಚಿಸಲು ಯೋಜಿಸಿದ. 2010 ರ ಅಂತ್ಯಕ್ಕೆ ಶೇ.5 ರಷ್ಟು ಮತ್ತು 2017 ಕ್ಕೆ 10 ರಷ್ಟು ಹಾಗೂ 2017 ರ ನಂತರ ಶೇ.10 ಕ್ಕಿಂತ ಹೆಚ್ಚಿನ ಪ್ರಮಾಣದ ಮಿಶ್ರಣವನ್ನು ಬಳಸುವ ಯೋಜನೆಯನ್ನು ಹೊಂದಿದೆ. 2017ರ ಅಂತ್ಯಕ್ಕೆ ಪೆಟ್ರೋಲ್‌ನೊಂದಿಗೆ ಶೇ.10 ರಷ್ಟು ಬಯೋಫ್ಯೂಯಲ್ ಮಿಶ್ರಣದ ಬಳಕೆಯನ್ನು ಕರ್ನಾಟಕ ರಾಜ್ಯವು ರಾಷ್ಟ್ರೀಯ ಯೋಜನೆಯೊಂದಿಗೆ ಸಾಧಿಸುವ ಗುರಿ ಹೊಂದಿರುತ್ತದೆ.
ಪ್ರಸ್ತಾವನೆ
ಭಾರತ ದೇಶವು, ಸಾಂಪ್ರದಾಯಿಕ ಇಂಧನಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಇತ್ಯಾದಿಗಳನ್ನು ಅತೀ ಹೆಚ್ಚು ಉಪಯೋಗಿಸುವ ಗ್ರಾಹಕರಲ್ಲಿ ಒಂದಾಗಿದೆ. ದೇಶದಲ್ಲಿ ಒಟ್ಟು ಬೇಡಿಕೆಯ ಪ್ರತಿಶತ ೮೫ ರಷ್ಟು ತೈಲ ಅಮದು ಮಾಡಿಕೊಳ್ಳತ್ತಿರುವುದರಿಂದ, ದೇಶದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿನ ಪ್ರಮಾಣದಲ್ಲಿ ವ್ಯಯವಾಗುತ್ತಿರುವುದರಿಂದ ದೇಶದ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಗೆ ಮಾರಕವಾಗುತ್ತಿದೆ. ದೇಶೀಯವಾಗಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಬದಲಿಯಾಗಿ ಇತರೆ ಮೂಲಗಳನ್ನು ಪತ್ತೆ ಹಚ್ಚುವ ಕಾರ್ಯ ತೀರಾ ಕ್ಷೀಣ ಅಥವಾ ದುಬಾರಿಯಾಗಿದೆ. ಬದಲಿ ಇಂಧನ ಮೂಲಗಳಾದ ಸೌರಶಕ್ತಿ ಹಾಗೂ ಗಾಳಿಯಂತ್ರ ಇವುಗಳಗೆ ತನ್ನದೇ ಆದಂತಹ ಮಿತಿಗಳಿರುತ್ತವೆ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಇಂಧಗಳಾದ ಪೆಟ್ರೋಲಿಯಂ ವಸ್ತುಗಳಿಗೆ ಬದಲಿ ಇಂಧನ ಬಳಸುವುದರಿಂದ ದೇಶದ ಇಂಧನ ಆಮದಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ತರಲು ಜೈವಿಕ ಇಂಧನವು ಇಂದು ಆಶಾ ಕಿರಣವಾಗಿದೆ.
ಹೆಚ್ಚುತ್ತಿರುವ ಇಂಧನ ಸಮಸ್ಯೆ : ಕರ್ನಾಟಕವು ಭಾರತದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ. ವಿಶೇಷವಾಗಿ ಬೆಂಗಳರು ನಗರದ ಜನಸಂಖ್ಯೆಯ ಬೆಳವಣೆಗೆ ಪ್ರತಿ ಶತ 3.5 ರಷ್ಟಿರುವುದಲ್ಲದೇ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿಯೆಂದೆನಿಸಿ ಕೊಂಡಿದೆ. ಈಗಾಗಲೇ ಬೆಂಗಳೂರು ನಗರದಲ್ಲಿರುವ 22,79,170 ದ್ವಿಚಕ್ರ ವಾಹನಗಳು ಮತ್ತು 5,26,855 ಕಾರುಗಳೊಂದಿಗೆ ಪ್ರತಿ ದಿನ ಸರಿ ಸುಮಾರು 850 ದ್ವಿಚಕ್ರ ವಾಹನ ಮತ್ತು 400 ಕಾರುಗಳು ನೊಂದಣಿಯಾಗುತ್ತದೆ. ನಾಗಾಲೋಟದ ಈ ಬೆಳವಣಿಗೆಯು ವಾಯುಮಾಲಿನ್ಯಕ್ಕೆ ಪ್ರೇರಣೆಯಾಗುವುದರೊಂದಿಗೆ, ದೇಶದ ಇಂಧನ ಆಮದು ಪ್ರಮಾಣದ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಭಾರತದ ಹಿಮಾಲಯದ ಹಿಮಾರಾಶಿಯ ಕರಗುವಿಕೆ ಮತ್ತು ಹವಾಮಾದನ ವೈಪರೀತ್ಯವು ಜಾಗತಿಕ ತಾಪಮಾನದ ವ್ಯತ್ಯಾಸದ ನೈಜತೆಗೆ ಸಾಕ್ಷಿಯಾಗಿದೆ. ಆದುದರಿಂದ, ನಮ್ಮ ದೇಶ ಮತ್ತು ರಾಜ್ಯಗಳಲ್ಲಿ ಲಭ್ಯವಿರುವ ಸಸ್ಯಬೀಜ ಮತ್ತು ಕಾಕಂಬಿ ಇವುಗಳಿಂದ ತಯಾರಿಸಬಹುದಾದ ಜೈವಿಕ ಇಂಧನವನ್ನು ನವೀಕರಿಸಬಹುದಾದ ಇಂಧನವನ್ನಾಗಿ ಪರಿವರ್ತಿಸುವುದು ಹೆಚ್ಚು ಸೂಕ್ತ ಮತ್ತು ಪ್ರಯೋಜನಕಾರಿಯಾಗಿದೆ.
ಜೈವಿಕ ಇಂಧನ ಪ್ರಯೋಜನಗಳು
- ಪ್ರತಿ ಶತ 20 ರಷ್ಟು ಬದಲಿ ಜೈವಿಕ ಇಂಧನದ ಮಿಶ್ರಣವು ಮೋಟಾರು ವಾಹನದ ಯಂತ್ರದಲ್ಲಿ ಅತೀ ಕನಿಷ್ಠ ಬದಲಾವಣೆ ತರಬಹುದು ಅಥವಾ ಯಾವುದೇ ಬದಲಾವಣೆಯ ಅವಶ್ಯಕತೆ ತರುವುದಿಲ್ಲ. ಶೇ.20ಕ್ಕಿಂತ ಹೆಚ್ಚಿನ ಜೈವಿಕ ಇಂಧನದ ಮಿಶ್ರಣವು ಯಂತ್ರದಲ್ಲಿ ಅತ್ಯಲ್ಪ ಬದಲಾವಣೆ ಅವಶ್ಯಕತೆ ತರಬಹುದು.
- ಜೈವಿಕ ಇಂಧನ ಬಳಕೆಯಿಂದಾಗಿ ವಾಹನದಿಂದ ಬಿಡುಗಡೆಯಾಗುವ ಹೈಡ್ರೋಕಾರ್ಬನ, ಕಾರ್ಬನ್ ಮಾನಾಕ್ಸೈಡ್ ಇತ್ಯಾದಿಗಳ ಪ್ರಮಾಣವು ವಾತಾರಣದಲ್ಲಿ ಸಾಕಷ್ಟು ಕಡಿಮೆಯಾಗುವುದು.
- ಜೈವಿಕ ಇಂಧನದಲ್ಲಿ ಗಂಧಕ ಇರುವುದಿಲ್ಲ, ವಾಸನಾರಹಿತವಿದ್ದು, ಪ್ರತಿಶತ 10 ರಷ್ಟು ಆಮ್ಲಜನಕ ಇರುವುದಿರಿಂದ ಇಂಧನದ ಪೂರ್ತಿ ಸುಡುವಿಕೆಗೆ ಸಹಕಾರಿಯಾಗುತ್ತಿದೆ. ಇದರಲ್ಲಿಯ ಹೆಚ್ಚಿನ ಸಂಖ್ಯೆಯ ಸಿಟೇನ್ ಇಂಧನ ಸುಡುವಿಕೆಯ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
- ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿರುವ ಹಸಿರು ಮನೆಗಳ ಅನಿಲಗಳಂತಿರದೆ, ಜೈವಿಕ ಇಂಧನವು ತಟಸ್ಥ ವಸ್ತುವಾಗಿದ್ದು, ಪರಿಸರ ಸ್ನೇಹಿಯಾಗಿರುತ್ತದೆ.
- ಜೈವಿಕ ಇಂಧನವು ಕಾರ್ಬೋಹೈಡ್ರೇಟ್ (ಇಥೆನಾಲ್) ಅಥವಾ ತೈಲ (ಬಯೋ ಡೀಜಲ್) ಮೂಲದ್ದಾಗಿರುತ್ತದೆ. ಕಾರ್ಬೋಹೈಡ್ರೇಟ್ (ಇಥೆನಾಲ್) ಮೂಲದ ಜೈವಿಕ ಇಂಧನವನ್ನು ಅತೀ ಸುಲಭವಾಗಿ ಬೆಳೆದು ವಾಣಿಜ್ಯೀಕರಣಗೊಳಿಸಬಹುದಾಗಿದೆ. ಅದರೆ ಆಹಾರಧಾನ್ಯ ಕೊರತೆಯಿಂದಾಗಿ, ಭೂ ಉಪಯೋಗದೊಂದಿಗೆ ತಳುಕು ಹಾಕಿದಾಗ ಈ ಮೂಲದ ಇಂಧನದ ಉತ್ಪಾದನೆ ಕಡಿಮೆ ಆದ್ಯತೆ ಪಡೆಯುತ್ತದೆ. ತೈಲ (ಬಯೋಡೀಜಲ್) ಮೂಲದ ಇಂಧನ ಉತ್ಪಾದನೆ ಆಕರ್ಷಣೀಯವಾಗಿದೆ.
ಜೈವಿಕ ತ್ಯಾಜ್ಯದಿಂದ ಉತ್ಪಾದಿಸಿದ ಜೈವಿಕ ಇಂಧನವನ್ನು ದ್ರವರೂಪದ ಅಥವಾ ಅನಿಲ ರೂಪದ ಇಂಧನ ಎಂದು ವ್ಯಾಖ್ಯಾನಿಸಲಾಗಿದೆ. ಇದನ್ನು ಡೀಜಲ್, ಪೆಟ್ರೋಲ್ ಅಥವಾ ಸಾಂಪ್ರದಾಯಿಕ ಇಂಧನಕ್ಕೆ ಬದಲಿ ಆಗಿ ಅಥವಾ ಅದರೊಂದಿಗೆ ಯಂತ್ರಗಳಲ್ಲಿ ಬಳಸಬಹುದು.
ಬಯೋ ಡೀಜಲ್ ಅಥವಾ ಬಯೋ ಇಥೆನಾಲ್ : ಪ್ರಸ್ತಾವಿತ ನೀತಿಯನ್ನು ಎರಡು ರೀತಿಯ ನವೀಕರಿಸುವ ಜೈವಿಕ ಇಂಧನಗಳಾಗಿ ವಿಂಗಡಿಸಲಾಗಿದೆ. (ಅ) ಬಯೋ ಡೀಜಲ್ ಮತ್ತು (ಬ) ಬಯೋ ಇಥೆನಾಲ್.
- ಸಸ್ಯ ತೈಲ ಅಥವಾ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ಮಿಥೈಲ್ ಅಥವಾ ಈಸ್ತರ್ ಈಥೈಲ್‌ನ್ನು ಬಯೋ ಡೀಜಲ್ ಎಂದು ವ್ಯಾಖ್ಯಾನಿಸಬಹುದಾಗಿದೆ. ಖಾದ್ಯವಲ್ಲದ ಸಸ್ಯಜನ್ಯದ ತೈಲವನ್ನು ಮಾತ್ರ ಈ ಕಾಉನೀತಿಯೊಳಗೆ ಪರಿಗಣಿಸಬಹುದಾಗಿದೆ. ಈ ಸಸ್ಯಜನ್ಯ ತೈಲವನ್ನು ಆಹಾರಧಾನ್ಯ ಬೆಳೆಯದಂತಹ ತುಂಡು ಭೂಮಿ ಮತ್ತು ಕೃಷಿ ಯೋಗ್ಯವಲ್ಲದ ಜಮೀನಿನಲ್ಲಿ ಬೆಳೆದ ಖಾದ್ಯವಲ್ಲದ ಎಣ್ಣೆ ಬೀಜಗಳಿಂದ ಮಾತ್ರ ತಯಾರಿಸಬಹುದಾಗಿದೆ. ಈ ಕಾರ್ಯನೀತಿಯಿಂದಾಗಿ ರಾಜ್ಯ ಆಹಾರಧಾನ್ಯದ ರಕ್ಷಣೆಗೆ ಧಕ್ಕೆಯುಂಟಾಗದಂತೆ ಜಾಗರುಕತೆ ವಹಿಸುವ ಸಲುವಾಗಿ ಈ ಒಂದು ಉದ್ದೇಶವನ್ನು ಸ್ಪಷ್ಟೀಕರಿಸಲಾಗಿದೆ. ಕೆಲವು ಸ್ಥಳೀಯ ಉದ್ದೇಶಗಳಿಗೆ ಎಲ್ಲಿ ಟ್ರಾನ್ಸ್‌ಎಸ್ಪರಿಫಿಕೇಷನ್ ಅವಶ್ಯಕವಿಲ್ಲವೋ ಅಲ್ಲಿ ನೇರವಾಗಿ ಸಸ್ಯಜನ್ಯ ತೈಲವನ್ನು ಬಯೊಡೀಜಲ್‌ಗೆ ಆಂತಾರಿಕ ಬದಲಾವಣೆಯಾಗಿ ಉಪಯೋಗಿಸಬಹುದು.
- ಸಕ್ಕರೆ ಅಂಶವಿರುವ ವಸ್ತುಗಳಾದ ಕಬ್ಬು, ಬೀಟರುಟ್, ಕಾಕಂಬಿ ಇತ್ಯಾದಿ ಹಾಗೂ ಪಿಷ್ಟ ಪದಾರ್ಥಗಳಿರುವ ಗೋವಿನ ಜೋಳ. ಪಾಚಿ ಇತ್ಯಾದಿ ಮತ್ತು ಕಬ್ಬಿನ ಸಿಪ್ಪೆ, ಕಟ್ಟಿಗೆ ತ್ಯಾಜ್ಯ ಇತ್ಯಾದಿ ಕೃಷಿ ಮತ್ತು ಅರಣ್ಯ ಮೂಲದ ತ್ಯಾಜ್ಯಗಳಿಂದ ಉತ್ಪಾದಿಸಲಾದ ಇಥೆನಾಲ್‌ನ್ನು ಜೈವಿಕ ಇಥೆನಾಲ್ (ಬಯೋಡೀಜಲ್) ಎಂದು ವ್ಯಾಖ್ಯಾನಿಸಲಾಗಿದೆ. ಈ ನೀತಿಯಲ್ಲಿ ಕಬ್ಬಿನ ಮತ್ತು ಹಸಿರು ತ್ಯಾಜ್ಯದ ಕಾಕಂಬಿ (ಮೊಲಾಸಿಸ್) ಯನ್ನು ಪರಿಗಣಿಸಲಾಗುತ್ತಿದೆ.
ಜೈವಿಕ ಇಂಧನ ಸಸ್ಯ ಜಾತಿಗಳು
ಕರ್ನಾಟಕದಲ್ಲಿ ಬೆಳೆಯುವ ಪ್ರಮುಖ ಮರ ಉತ್ಪನ್ನ ಎಣ್ಣೆಕಾಳುಗಳ ಜಾತಿಗಳಾದ ಜೆಟ್ರೋಪಾ, (ಕಾಡುಹರಳು) ಪೊಂಗೆಮಿಯಾ (ಹೊಂಗೆ), ನೀಮ್ (ಬೇವು), ಸಿಮಾರೂಬ ಮತ್ತು ಮಾವುಗಳನ್ನು ರಾಜ್ಯದಲ್ಲಿಯ ಒಣ ಭೂಮಿ ಹಾಗೂ ಖರಾಬು ಜಮೀನಿಗಳಲ್ಲಿ ಬೆಳೆಸಿ, ಅಭಿವೃದ್ಧಪಡಿಸುವುದು. ಹೊಂಗೆ, ಜಟ್ರೋಪಾ ಮತ್ತು ಬೇವುಗಳ ಬೀಜಗಳಿಂದ ಎಣ್ಣೆಗಳನ್ನು ತೆಗೆದಲ್ಲಿ ಅವುಗಳನ್ನು ಬಯೊಡೀಜಲ್ ಆಗಿ ಪರಿವರ್ತಿಸಬಹುದು ಈ ವಿಧದ ಮತಗಳಲ್ಲಿಯ ಬೀಜಗಳಲ್ಲಿ ಎಣ್ಣೆ ಪ್ರಮಾಣ ಈ ಕೆಳಗಿನಂತಿದೆ.
ಇಂದು ಎಣ್ಣೆ ಉತ್ಪಾದನೆಯ ಪ್ರಮುಖವಾಗಿ ಈ ಮರ ಉತ್ಪಾದಿತ ಬೀಜಗಳಿಂದಾಗಿದೆ ಹಾಗೂ ಸೇವನೆಗೆ ಯೋಗ್ಯವಿಲ್ಲದ್ದಾಗಿರುತ್ತದೆ. ಈ ಎಣ್ಣೆಗಳು ಅಸಂಘಟಿತ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಅವುಗಳನ್ನು ದೀಪ ಉರಿಸುವುದಕ್ಕಾಗಿ, ವನಸ್ಪತಿ ಔಷಧಗಳು, ಬಣ್ಣ ಹಾಗೂ ಚರ್ಮ ಕೈಗಾರಿಕೆಗಳಲ್ಲಿ ಉಪಯೋಗಿಸಲಾಗುತ್ತಿದೆ. ಈ ತೈಲಗಳನ್ನು ಜೈವಿಕ ಇಂಧನವಾಗಿ ಉಪಯೋಗಿಸುವ ಅರಿಕೆ ಮಾಡಿದಲ್ಲಿ ಹಾಗೂ ಹೆಚ್ಚಿನ ಅರ್ಥಿಕ ಲಾಭ ಕ್ರೋಢೀಕರಣ ಆಗುವ ಬಗ್ಗೆ ತಿಳುವಳಿಕೆ ನೀಡಿದಲ್ಲಿ ಹೆಚ್ಚಿನ ಆರ್ಥಿಕ ಸೌಲಭ್ಯವನ್ನು ಜೈವಿಕ ಇಂಧನದಿಂದ ಪಡೆಯಬಹುದಾಗಿದೆ.
ರಾಜ್ಯದಲ್ಲಿ ಜೈವಿಕ ಇಥೆನಾಲ್ ಉತ್ಪಾದನೆ
ಹೆಚ್ಚುವರಿ ಸಕ್ಕರೆ ಉತ್ಪಾದಿಸುವ ರಾಜ್ಯವೆಂದು ಹೆಗ್ಗಳಕೆ ಪಡೆದಿರುವ ಕರ್ನಾಟಕ ರಾಜ್ಯದಲ್ಲಿ ಸಕ್ಕರೆ ಉತ್ಪಾದನೆ 2.52 ರಿಂದ 3.00 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು(MMTs) ಇದ್ದು, ಇದರಲ್ಲಿ 1.2 MMTs ಸಕ್ಕರೆಯನ್ನು ಮಾತ್ರ ಬಳಸಲಾಗುತ್ತಿದೆ. ಈ ಹೆಚ್ಚುವರಿ ಉತ್ಪಾದನೆಯಿಂದ ಸಕ್ಕರೆ ಮತ್ತು ಸಕ್ಕರೆ ಉತ್ಪಾನ್ನಗಳ ಬೆಲೆಗಳಲ್ಲಿ ಕುಸಿತ ಕಂಡು ಬರುತ್ತಿದೆ. ಇದನ್ನು ಇಥೆನಾಲ್ ಆಗಿ ಪರಿವರ್ತಿಸಿ, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡು ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ 52 ಸಕ್ಕರೆ ಕಾರ್ಖಾನೆಗಳು ಇದ್ದು, ಪ್ರತಿನಿತ್ಯ 1.85,750 TCD ಕಬ್ಬನ್ನು ಅರೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹಾಗೂ ವಾರ್ಷಿಕವಾಗಿ 200 ಮಿಲಿಯನ್ ಲೀಟರ್ (MLtr) ಆಲ್ಕೋಹಾಲ್‌ನ್ನು ಉತ್ಪಾದಿಸಲಾಗುತ್ತಿದೆ. ವಾರ್ಷಿಕ 6,00,000MT ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಇಥೆನಾಲ್ ಅನ್ನು ಉತ್ಪಾದಿಸಲು ಬಳಸಬಹುದಾಗಿದೆ. 5 MMT ಕಬ್ಬನ್ನು ಬಳಸಿ 400 MLTR ಇಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ. ಬೃಹತ್ ಕೈಗಾರಿಕೆಗಳಲ್ಲಿ ಇಥೆನಾಲ್ ತೈಲಕ್ಕೆ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ. ಇಥೆನಾಲ್ ಉತ್ಪಾದನೆಯು ಉತ್ತಮ ಗುಣಮಟ್ಟವನ್ನು ಹೊಂದಿರಬೇಕು. ಅಬಕಾರಿ ಇಲಾಖೆಯಿಂದ ಹೆಚ್ಚು ಹೆಚ್ಚು ಭಟ್ಟಿ ಇಳಿಸುವಿಕೆ ಘಟಕಗಳನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಬೇಕು. ಸಕ್ಕರೆ ಉತ್ಪದನೆಗೆ ಮಿತಿ ನಿಗದಿ ಪಡಿಸಿದ ನಂತರವೇ ಹೆಚ್ಚುವರಿ ಕಬ್ಬನ್ನು ನೇರವಾಗಿ ಇಥೆನಾಲ್ ಉತ್ಪಾದನೆಗೆ ಬಳಸಲು ಅನುಮತಿ ನೀಡಬಹುದಾಗಿದೆ. ಮೊಲಾಸಸ್‌ನಿಂದ ಇಥೆನಾಲ್ ಉತ್ಪಾದನೆಯನ್ನು ಪ್ರೋತ್ಸಾಹಿಸಿದಲ್ಲಿ ನೀರಾವರಿ ಜಮೀನುಗಳಲ್ಲಿ ಖಾದ್ಯವಲ್ಲದ ಎಣ್ಣೆ ಬೀಜಗಳನ್ನು ಬೆಳೆಯುವುದನ್ನು ತಪ್ಪಿಸಬಹುದು.
ಕರ್ನಾಟಕ ಜೈವಿಕ ಇಂಧನ ನೀತಿಯ ಜಾರಿ
ಭಾರತ ದೇಶವು, ಸಾಂಪ್ರದಾಯಿಕ ಇಂಧನಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಇತ್ಯಾದಿಗಳನ್ನು ಅತೀ ಹೆಚ್ಚು ಉಪಯೋಗಿಸುವ ಗ್ರಾಹಕರಲ್ಲಿ ಒಂದಾಗಿದೆ. ದೇಶದಲ್ಲಿನ ಒಟ್ಟು ಬೇಡಿಕೆಯ ಪ್ರತಿ ಶತ 85 ರಷ್ಟು ತೈಲ ಉತ್ಪನ್ನಗಳನ್ನು ಅಮದು ಮಾಡಿಕೊಳ್ಳುತ್ತಿರುವುದರಿಂದ, ದೇಶದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿನ ಪ್ರಮಾಣದಲ್ಲಿ ವ್ಯಯವಾಗುತ್ತಿರುವುದರಿಂದ ದೇಶದ ಅರ್ಥಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಮಾರಕವಾಗುತ್ತಿದೆ. ದೇಶೀಯವಾಗಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಬದಲಿಯಾಗಿ ಇತರೆ ಮೂಲಗಳನ್ನು ಸೌರಶಕ್ತಿ ಹಾಗೂ ಗಾಳಿಯಂತ್ರ ಇವುಗಳಿಗೆ ತನ್ನದೇ ಆದಂತಹ ಮಿತಿಗಳಿರುತ್ತವೆ. ಈ ನಿಟ್ಟಿನಲ್ಲಿ ಸಾಂಪ್ರಾದಾಯಿಕ ಇಂಧನಗಳಾದ ಪೆಟ್ರೋಲಿಯಂ ವಸ್ತುಗಳಿಗೆ ಬದಲಿ ಇಂಧನ ಬಳಸುವುದರಿಂದ ದೇಶದ ಇಂಧನ ಅಮದಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ತರಲು ಜೈವಿಕ ಇಂಧನವು ಒಂದು ಆಶಾ ಕಿರಣವಾಗಿದೆ.
ಕರ್ನಾಟಕವು ಭಾರತದಲ್ಲಿಯೇ ಅತಿ ವೇಗವಾಗಿ ಬೆಳಿಯುತ್ತಿರುವ ರಾಜ್ಯವಾಗಿದೆ. ವಿಶೇಷವಾಗಿ ಬೆಂಗಳೂರು ನಗರದ ಜನಸಂಖ್ಯೆಯ ಬೆಳವಣಿಗೆ ಪ್ರತಿ ಶತ 3.5 ರಷ್ಟಿರುವುದಲ್ಲದೇ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಿಂದಿನಿಸಿ ಕೊಂಡಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಸುಮಾರು 28 ಲಕ್ಷ ವಾಹನಗಳಿದ್ದು ಪ್ರತಿ ದಿನ ಸರಿ ಸುಮಾರು 1250 ವಾಹನಗಳು ನೊಂದಣಿಯಾಗುತ್ತಿವೆ. ನಾಗಾಲೋಟದ ಈ ಬೆಳವಣಿಗೆಯು ವಾಯುಮಾಲಿನ್ಯಕ್ಕೆ ಪ್ರೇರಣೆಯಾಗುವುದರೊಂದಿಗೆ, ದೇಶದ ಇಂಧನ ಅಮದು ಪ್ರಮಾಣದ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಭಾರತದ ಹಿಮಾಲಯದ ಹಿಮಾರಾಶಿಯ ಕರಗುವಿಕೆ ಮತ್ತು ಹವಾಮಾನದ ವೈಪರೀತ್ಯವು ಜಾಗತಿಕ ತಾಪಮಾನದ ವ್ಯತ್ಯಾಸಕ ನೈಜತೆಗೆ ಸಾಕ್ಷಿಯಾಗಿದೆ. ಆದುದರಿಂದ, ನಮ್ಮ ದೇಶ ಮತ್ತು ರಾಜ್ಯಗಳಲ್ಲಿ ಲಭ್ಯವಿರುವ ಸಸ್ಯಬೀಜ ಮತ್ತು ಕಾಕಂಬಿ ಇವುಗಳಿಂದ ತಯಾರಿಸಬಹುದಾದ ಜೈವಿಕ ಇಂಧನವನ್ನು ನವೀಕರಿಸಬಹುದಾದ ಇಂಧನವನ್ನಾಗಿ ಪರಿವರ್ತಿಸುವುದು ಹೆಚ್ಚು ಸೂಕ್ತವೆಂದು ಸರ್ಕಾರವು ಮನಗಂಡು ಈ ಅಧಿಸೂಚನೆಯ ಅನುಬಂಧದಂತೆ ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ-೨೦೦೯ ಯನ್ನು ಘೋಷಿಸಿದೆ.
ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿಯು ದಿನಾಂಕ 1ನೇ ಮಾರ್ಚ್, 2009ರಿಂದ ಜಾರಿಗೆ ಬರುತ್ತದೆ.
ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿಯ ಅನುಷ್ಠಾನದ ಮೇಲ್ವಿಚಾರಣೆಗಾಗಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಇರುತ್ತದೆ. ಈ ಸಮಿತಿಯು ಮಂಡಳಿಯ ದೈನಂದಿನ ಕಾರ್ಯ ಚಟುವಟಿಕೆಗಳನ್ನು ನೋಡಿಕೋಳ್ಳತ್ತದೆ. ನೀತಿ ನಿರೂಪಣೆಗಾಗೆ ಮಂಡಳಿಯು ಒಬ್ಬ ಹಿರಿಯ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನು ಹೊಂದಲಿದೆ.
ಮೂಲ : ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ