ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ, ಇವುಗಳಲ್ಲಿ ಮುಖ್ಯವಾದವು ವಸತಿ, ಶಿಕ್ಷಣ, ವೈದ್ಯಕೀಯ, ವಿದ್ಯುತ್ ಹಾಗೂ ಮುಂತಾದವುಗಳು. ಇವುಗಳಲ್ಲಿ ಅತಿ ಮುಖ್ಯವಾದ ಮೂಲಭೂತ ಸೌಕರ್ಯ ವಿದ್ಯುತ್, ಇತ್ತೀಚಿನ ದಿನಗಳಲ್ಲಿ ನಾವು ವಿದ್ಯುತ್ ಮೇಲೆ ಎಲ್ಲಾ ಹಂತದಲ್ಲಿಯೂ ಅವಲಂಭಿತರಾಗಿದ್ದೇವೆ. ಈ ಅತಿ ಮುಖ್ಯವಾದ ವಿದ್ಯುತ್‍ನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸಲು ಭಾರತ ಸರ್ಕಾರÀ ಮತ್ತು ಕರ್ನಾಟಕ ಸರ್ಕಾರ ಹಾಗೂ ಭಾರತದ ಇತರ ರಾಜ್ಯಗಳು ಸಹ ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ನಮ್ಮ ಭಾರತ ದೇಶದಲ್ಲಿ ಇಂದು ಸುಮಾರು 1,65,000 ಮೆಗಾ ವ್ಯಾಟ್ ವಿದ್ಯುತ್‍ನ್ನು ವಿವಿಧ ಮೂಲಗಳಿಂದ ಉತ್ಪಾದಿಸಲಾಗುತ್ತದೆ ಮತ್ತು ಇವುಗಳಲ್ಲಿ ಕಲ್ಲಿದ್ದಿಲಿನಿಂದ ಸುಮಾರು ಶೇ 60 ರಿಂದ 65 ರಷ್ಟು ಹಾಗೂ ಅಸಂಪ್ರದಾಯಕ ಮೂಲಗಳಿಂದ ಸುಮಾರು ಶೇ. 12 ಹಾಗೂ ಉಳಿದ ವಿದ್ಯುತ್ ಜಲ ಮತ್ತು ಇತರ ಮೂಲಗಳಿಂದ ಉತ್ಪಾದಿಸಲಾಗುತ್ತಿದೆ. 2007-2012 ರ ಒಳಗಡೆ ಭಾರತದ ಎಲ್ಲಾ ಹಳ್ಳಿಗಳಿಗೂ ಮತ್ತು ಎಲ್ಲಾ ಮನೆಗಳಿಗೂ ವಿದ್ಯುತ್ ಒದಗಿಸುವ ಯೋಜನೆ ಇದೆ. ಈ ವಿದ್ಯುತ್ ಯೋಜನೆಯಂತೆ ಸುಮಾರು 1,00,000 ಮೆಗಾ ವ್ಯಾಟ್ ಅಧಿಕ ವಿದ್ಯುತ್ ಬೇಕಾಗುತ್ತದೆ. ಈ ವಿದ್ಯುತ್‍ನ್ನು ನಾವು ಅಸಂಪ್ರ್ರದಾಯಕ ಮೂಲಗಳಿಂದ ಅಥವಾ ಸ್ಥಳೀಯವಾಗಿ ಲಭ್ಯವಿರುವ ಇಂಧನ ಮೂಲಗಳ ಮೂಲಕ ವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ಈ 1,00,000 ಮೆಗಾ ವ್ಯಾಟ್ ಗಳಲ್ಲಿ ನಾವು ಅಸಂಪ್ರ್ರದಾಯಕ ಮೂಲಗಳಿಂದ ಸುಮಾರು 85,000 ಮೆಗಾ ವ್ಯಾಟ್ ಗಿಂತ ಹೆಚ್ಚಾಗಿ ವಿದ್ಯುತ್ ಉತ್ಪಾದಿಸಬಹುದು. ಕರ್ನಾಟಕದಲ್ಲಿ ಸಹ ಇಂದು ನಾವು ವಿವಿಧ ಮೂಲಗಳಿಂದ ಉತ್ಪಾದಿಸುತ್ತಿರುವÀ ವಿದ್ಯುತ್ ಸುಮಾರು 13500 ಮೆಗಾ ವ್ಯಾಟ್. ಮತ್ತು ಸುಮಾರು 23683 ಮೆಗಾ ವ್ಯಾಟ್ ನ್ನು ಅಸಂಪ್ರಾದಾಯಕ ಮೂಲಗಳಿಂದ ವಿದ್ಯುತ್ ಉತ್ಪಾದಿಸಲು ಕರ್ನಾಟಕದಲ್ಲಿ ಅವಕಾಶವಿರುತ್ತದೆ, ಈಗಾಗಲೇ ಸುಮಾರು 2959 ಮೆಗಾ ವ್ಯಾಟ್ ಅಸಂಪ್ರದಾಯಕ ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ದಿನೇ ದಿನೇ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ, ಸಾಂಪ್ರದಾಯಕ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಬೃಹತ್ ಜಲ ವಿದ್ಯುತ್ ಯೋಜನೆಗಳು ಮತ್ತು ಕಲ್ಲಿದ್ದಲಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಹಾಗೂ ಇತರ ಮೂಲಗಳಿಂದ ವಿದ್ಯುತ್ ಉತ್ಪಾದಿಸಲು ಅನೇಕ ಸಮಸ್ಯೆ ಅಥವಾ ಅಡಚಣೆ, ಪರಿಸರದ ಮೇಲೆ ದುಷ್ಪರಿಣಾಮ ಹಾಗೂ ವಿದ್ಯುತ್ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳು ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವುದರಿಂದ ಬೇಡಿಕೆಗೆ ಅನುಗುಣವಾಗಿ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ ಆದ್ದÀರಿಂದ ನೈಸರ್ಗಿಕವಾಗಿ ದೊರೆಯುವ ಅಸಂಪ್ರದಾಯಕ ಮೂಲಗಳಿಂದ ವಿದ್ಯುತ್ ಉತ್ಪಾದಿಸಲು ಉತ್ತೇಜಿಸಲಾಗುತ್ತ್ತಿದೆ.
ನವೀಕರಿಸಬಹುದಾದ ಇಂಧನ (ಅಸಂಪ್ರದಾಯಕ) ಅಭಿವೃದ್ದಿ ಮೂಲಕ ವಿದ್ಯುತ್ ಉತ್ಪಾದಿಸಲು ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಅವಕಾಶಗಳು ಮತ್ತು ಅನುಕೂಲಗಳನ್ನು ರಾಜ್ಯ ಸರ್ಕಾರವು ಮಾಡಿದೆ. ಅಸಂಪ್ರದಾಯಕ ಇಂಧನ ಮೂಲಗಳಾದ ಪವನ ವಿದ್ಯುತ್, ಕಿರುಜಲ ವಿದ್ಯುತ್, ಸಹ ಉತ್ಪಾದನೆ, ಜೈವಿಕ ವಿದ್ಯುತ್, ಸೌರಶಕ್ತಿ ಮೂಲಗಳಿಂದ ವಿದ್ಯುತ್ ಯೋಜನೆಗಳನ್ನು ಅಭಿವೃದ್ದಿಪಡಿಸಿ, ಉತ್ಪಾದಿಸುವಲ್ಲಿ ಸಾಕಷ್ಟು ಪ್ರಗತಿ, ನಮ್ಮ ಭಾರತ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ನಡೆದಿದೆ. ಇದಕ್ಕೆ ಅಸಂಪ್ರದಾಯಕ ಇಂಧನ ಮೂಲಗಳ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ ಮತ್ತು ಕ್ರೆಡಲ್, ಕರ್ನಾಟಕ ಸರ್ಕಾರ, ಬೆಂಗಳೂರು ಇವರು ಸಹ ಸಾಕಷ್ಟು ಪ್ರೋತ್ಸ್ಸಾಹ ಕೊಟ್ಟಿರುತ್ತಾರೆ ಹಾಗೂ ಇದರ ಅಭಿವೃದ್ದಿಗಾಗಿ ಅನುದಾನ / ಸಹಾಯಧನ ಮತ್ತು ಇತರ ಪ್ರೋತ್ಸಾಹಕ ಯೋಜನೆಗಳನ್ನು ಸಹ ಹಮ್ಮಿಕೊಂಡಿರುತ್ತಾರೆÉ. ಇದಕ್ಕೆ ಪೂರಕವಾಗಿ ರಾಜ್ಯದ ಸಂಬಂಧಪಟ್ಟ ಇಲಾಖೆಗಳು ಸಹ ಎಲ್ಲಾ ವಿಧದಲ್ಲೂ ಸಹಕರಿಸಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆ ಅಭಿವೃದ್ದಿಪಡಿಸುವಲ್ಲಿ ಸಹಕಾರಿಯಾಗುತ್ತಿವೆ.
ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ದಿ ಹಾಗೂ ಉದ್ಯೋಗ ಸೃಷ್ಟಿಯಾಗಲು ವಿದ್ಯುಚ್ಛಕ್ತಿ ಅತ್ಯಗತ್ಯವಾಗಿ ಬೇಕಾಗಿರುವ ಒಂದು ಮೂಲಭೂತ ಸೌಕರ್ಯದ ಅವಶ್ಯಕತೆಯಾಗಿದೆ. ಕರ್ನಾಟಕದಲ್ಲಿ ಇನ್ನು ವಿದ್ಯುದ್ದೀಕರಣಗೊಳ್ಳದ ಹಳ್ಳಿಗಳು / ಮಜಿರೆಗಳು ಕಠಿಣವಾದ ಹಾಗೂ ದುರ್ಗಮವಾದ ಪ್ರದೇಶಗಳಲ್ಲಿದ್ದು, ವಿದ್ಯುತ್ ಜಾಲವನ್ನು ವಿಸ್ತÀûರಣೆ ಮಾಡಿ ವಿದ್ಯುದ್ದೀಕರಿಸಲು ಅಧಿಕ ವೆಚ್ಚ ಮತ್ತು ತಾಂತ್ರಿಕ ಅಡಚಣೆಗಳು ಇರುತ್ತª.É ಆದ್ದರಿಂದ ಈ ಹಳ್ಳಿಗಳನ್ನು ವಿಕೇಂದ್ರಿಕೃತ ಮಾದರಿಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರಶಕ್ತಿ, ಜೈವಿಕ ವಿದ್ಯುತ್ ಹಾಗೂ ಇನ್ನಿತರ ಮೂಲಗಳಿಂದ ಎಂ. ಎನ್. ಆರ್. ಇ. ನ ಗ್ರಾಮ ವಿದ್ಯುದ್ದೀಕರಣ ಯೋಜನೆಯಡಿಯಲ್ಲಿ ವಿದ್ಯುದ್ದೀಕರಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಹಾಗೂ ವಿದ್ಯುತ್ ಒದಗಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ.
ಸೌರಶಕ್ತಿಯಿಂದ ಇತರ ನವೀಕರಿಸಬಹುದಾದ ಇಂಧನ ಮೂಲಗಳು ಒಟ್ಟು ಶಕ್ತಿಯ ಅವಶ್ಯಕತೆಯ ಬಹುಪಾಲನ್ನು ಪೂರೈಸಬಹುದಾಗಿದೆ. ನವೀಕರಿಸಬಹುದಾದ ಇಂಧನಗಳ ಸಮರ್ಪಕ ಬಳಕೆಯಿಂದ ವಾತಾವರಣದ ಮಾಲಿನ್ಯವನ್ನು ಹಾಗೂ ಗ್ರೀನ್ ಹೌಸ್ ಗ್ಯಾಸ್‍ನ ಪರಿಣಾಮವನ್ನು ಸಾಕಷ್ಟು ತಗ್ಗಿಸಬಹುದಾಗಿದೆ. ಸೂರ್ಯನು ಬೆಂಕಿಯ ಭಾರೀ ಗೋಲವಾಗಿದ್ದು, ಬಿಲಿಯನ್‍ಗಟ್ಟಲೆÉ ಯೂನಿಟ್ಟುಗಳಷ್ಟು ಶಕ್ತಿಯನ್ನು ಉತ್ಪತ್ತಿ ಮಾಡಬಲ್ಲದ್ದಾಗಿದೆ. ಸೂರ್ಯಶಕ್ತಿಯು ಎ¯ಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣಗಳ ರೂಪದಲ್ಲಿ ಭೂಮಿಯನ್ನು ತÀಲುಪುತ್ತದೆ. ಇಡೀ ಭೂವಾಸಿಗಳಿಂದ ಒಂದು ವರ್ಷದಲ್ಲಿ ಉಪಯೋಗಿಸಲ್ಪಡುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ಕೇವಲ ಒಂದು ದಿನದ ಸೌರಶಕ್ತಿಯಿಂದ ಪಡೆಯಬಹುದಾಗಿದೆ. ಭೂಮಿಯ ಪ್ರತಿ ಚದುರ ಮೀಟರ್ ಮೇಲೆ ಬೀಳುವ ಸೂರ್ಯ ಶಕ್ತಿಯು 1000 ವ್ಯಾಟಿಗಿಂತ ಹೆಚ್ಚಿನ ಪ್ರ್ರಮಾಣದಲ್ಲಿರುತ್ತದೆ. ಈ ರೀತಿ ಲಭ್ಯವಿರುವ ನೈಸರ್ಗಿಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿದ್ದೇ ಆದರೆ ನಮ್ಮೆಲ್ಲರ ಇಂಧನ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದಾಗಿದೆಯಲ್ಲದೆ, ವಾತಾವರಣದಲ್ಲಿ ಸಾಕಷ್ಟು ಸ್ವಚ್ಛತೆಯನ್ನು ತರಬಹುದಾಗಿದೆ. ಸೂರ್ಯಶಕ್ತಿಯ ಬೆಳಕು ಮತ್ತು ಶಾಖ (ಉಷ್ಣದ) ರೂಪದಲ್ಲಿ ದೊರೆಯುತ್ತದೆ ಮತ್ತು ಇದನ್ನು ಎರಡು ವಿಧದಲ್ಲಿ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.
ಕರ್ನಾಟಕವು ದೇಶದಲ್ಲಿಯೇ ಅತ್ಯುತ್ತಮವಾದ ಪವನ ಶಕ್ತಿಯ ಸಾಮಥ್ರ್ಯವನ್ನು ಹೊಂದಿದೆ. ಭಾರತದಲ್ಲಿ ಪವನ ಶಕ್ತಿಯಿಂದ ಸುಮಾರು 45,000 ಮೆ. ವ್ಯಾ ಗಿಂತ ಅಧಿಕÀವಾಗಿ ವಿದ್ಯುತ್ ಉತ್ಪಾದಿಸಬಹುದು, ಇದರಲ್ಲಿ ಸುಮಾರು 9500 ಮೆ. ವ್ಯಾ. ಕರ್ನಾಟಕದಿಂದಲೇ ಉತ್ಪಾದಿಸಬಹುದು. ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ಬೇಕಾದ ವಿವರಗಳು ಕೆಳಗಿನಂತಿವೆ.
ಗಾಳಿಯಿಂದ ನೀರೆತ್ತುವ ಯಂತ್ರಗಳು ಸಹ ಲಭ್ಯವಿದ್ದು, ಇಂತಹ ಯಂತ್ರದಿಂದ ಸುಮಾರು 300 ಅಡಿ ಆಳದಿಂದ ನೀರೆತ್ತಬಹುದು, ಅಲ್ಲದೆ ಇದಕ್ಕೂ ಸಹ ಸಹಾಯ ಧನ ಇರುತ್ತದೆ. ಈ ಗಾಳಿ ಯಂತ್ರ ಕಾರ್ಯ ನಿರ್ವಹಿಸಲು ಸುಮಾರು 4 ಮೀಟರ್ / ಸೆಂಕೆಡ್ ಗಿಂತ ಹೆಚ್ಚಿನ ಗಾಳಿ ವೇಗ ಬೇಕಾಗುತ್ತದೆ. ಇದರಿಂದ ವಿದ್ಯುತ್ ಇಲ್ಲದ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಉಪಯೋಗಿಸಬಹುದು ಮತ್ತು ವ್ಯವಸಾಯ ಅಥವಾ ತೋಟಗಾರಿಕೆ ಮುಂತಾದವುಗಳಿಗೆ ಉಪಯೋಗಿಸಬಹುದು.
ಸೌರಶಕ್ತಿಯೊಂದಿಗೆ ಇತರ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿ ಅಂದರೆ ಮಿಶ್ರ ವ್ಯವಸ್ಥೆಯೊಂದಿಗೆ ವಿದ್ಯುತ್ ಉತ್ಪಾದನೆಯನ್ನು ಮಾಡಿ ವಿದ್ಯುತ್ ಪೂರೈಕೆ ಮಾಡಬಹುದಾಗಿದೆ. ಅವುಗಳು ಈ ರೀತಿಯಿವೆ.
ನಮ್ಮ ರಾಜ್ಯದ ಎಲ್ಲಾ ಭಾಗಗಳಲ್ಲಿ ಉತ್ತಮ ಸೌರಶಕ್ತಿಯ ಲಭ್ಯತೆ ಇರುತ್ತದೆ ಮತ್ತು ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡಲು ಎಂ. ಎನ್. ಆರ್. ಇ. ಮಾಹಿತಿ ಪ್ರಕಾರ 4 ಮೀಟರ್ / ಸೆಕೆಂಡ್ ಮೇಲ್ಪಟ್ಟು ಗಾಳಿ ವೇಗದಿಂದÀ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಕ್ರೆಡೆಲ್ ಸಂಸ್ಥೆಯು ಗಾಳಿಯಿಂದ ವಿದ್ಯುತ್ ಉತ್ಪಾದನೆಗೆ ಗಾಳಿಯು ಎಲ್ಲೆಲ್ಲಿ ಲಭ್ಯವಿದೆಯೆಂದು ಮಾಹಿತಿ ಪಡೆದಿದೆ. ಈಗಾಗಲೇ ರಾಜ್ಯದ ಇತರೆ ಭಾಗಗಳಲ್ಲಿ ಸುಮಾರು 65 ಹೈಬ್ರಿಡ್ ಯಂತ್ರಗಳನ್ನು ಅಳವಡಿಸಲಾಗಿದೆ. ಅಸಂಪ್ರದಾಯಕ ಇಂಧನ ಮೂಲಗಳ ಮಂತ್ರಾಲಯ, ಕೇಂದ್ರ ಸರ್ಕಾರ, ನವದೆಹಲಿಯಿಂದಲೂ ಸಹ ಹೈಬ್ರಿಡ್‍ನಿಂದ ವಿದ್ಯುತ್ ಉತ್ಪಾದನೆಗೆ ಸಹಾಯಧನ (ಸಬ್ಸಿಡಿ) ಲಭ್ಯವಿರುತ್ತದೆ.
ಮೇಲಿನ ಯೋಜನೆಯಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಹಾಗೂ ಸಮರ್ಪಕ ವಿದ್ಯುತ್ ದೊರೆಯಲಿದೆ, ಮತ್ತು ವಿದ್ಯುತ್ ವಿತರಣ ಸಂಸ್ಥೆಗೂ ಸಹ ವಿದ್ಯುತ್ ಸೋರುವಿಕೆಯಿಂದ ಉಳಿತಾಯವಾಗುತ್ತದೆ. ಆದುದರಿಂದ, ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಗಾಳಿಯ ವೇಗÀ ಹಾಗೂ ಸೌರಶಕ್ತಿಯ ಸಾಧ್ಯತೆ ಆಧಾರದ ಮೇಲೆ ಹೈಬ್ರಿಡ್ ವಿದ್ಯುತ್ ಉಪಕರಣವನ್ನು ಅಳವಡಿಸಿ, ಅದರಿಂದ ಬರುವ ವಿದ್ಯುತ್ತನ್ನು ಗ್ರಾಹಕರೆ ಉಪಯೋಗಿಸಲು ಅನುಕೂಲವಾಗುತ್ತದೆ. ಮತ್ತು ಈ ಯಂತ್ರಗಳು ನಮ್ಮ ಮನೆಯ ಚಾವಣಿ ಮೇಲೆ ಅಳÀವಡಿಸಿ ವಿದ್ಯುತ್ ಪಡೆಯಬಹುದು.
ಈಗಾಗಲೇ ಬೃಹತ್ ಜಲ ವಿದ್ಯುತ್ ಯೋಜನೆಗಳಿಂದ ಸುಮಾರು 30 % ವಿದ್ಯುತ್ ಉತ್ಪಾದಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬೃಹತ್ ಜಲ ವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಅನೇಕ ಸಮಸ್ಯೆಗಳು ಇರುತ್ತವೆ, ಇವುಗಳಲ್ಲಿ ಮುಖ್ಯವಾದವುಗಳು. ಅಂತರ ರಾಜ್ಯ ನೀರಿನ ಕಲಹ, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ, ಅರಣ್ಯ ನಾಶ, ಮತ್ತು ನಾಗರಿಕ ಪುನರ್ವಸತಿ ಮುಂತಾದ ಸಮಸ್ಯೆಗಳಿಂದ ದೊಡ್ಡ ಜಲ ವಿದ್ಯುತ್ ಯೋಜನೆಗಳ ಅನುಷ್ಟಾನ ಸ್ವಲ್ಪ ಕಷ್ಟಕರವಾಗುತ್ತಿದೆ. ಆದುದರಿಂದ ಇಂಥಹ ಸಮಸ್ಯೆಗಳಿಂದ ಮುಕ್ತವಾಗಿರುವ ಕಿರುಜಲ ವಿದ್ಯುತ್ ಯೋಜನೆಗಳಿಗೆ ಬಲವಾದ ಒತ್ತು ಸಿಕ್ಕಿರುತ್ತದೆ.
ಪರಿಸರ ಹಾಗೂ ವಾತಾವರಣದ ಮೇಲೆ ಕಿರುಜಲ ವಿದ್ಯುತ್ ಯೋಜನೆಗಳಿಂದ ಯಾವುದೇ ಪ್ರತಿಕೂಲ ಪರಿಣಾಮ ವಿರುವುದಿಲ್ಲ ಮತ್ತು ಕಡಿಮೆ ಸಮಯದಲ್ಲಿ ಇಂಥ ಯೋಜನೆಗಳು ಅನುಷ್ಟಾನಗೊಳಿಸಬಹುದಾಗಿದೆ. ಕಿರು ನೀರಾವರಿ ಹಾಗೂ ದೊಡ್ಡ ನೀರಾವರಿಯ ಕಾಲುವೆಗಳು, ಬೆಟ್ಟಗುಡ್ಡಗಳಲ್ಲಿ ಹರಿಯುವ ಹಳ್ಳಕೊಳ್ಳಗಳನ್ನು, ಹರಿಯುತ್ತಿರುವ ಝರಿ ಹಾಗೂ ಹೊಳೆಗಳನ್ನು ಬಳಸಿ
ಉತ್ಪಾದನೆ ಮಾಡಬಹುದಾದಂಥ ಕಿರುಜಲ ವಿದ್ಯುತ್ತಿನ ಸಾಮಥ್ರ್ಯ ಅಂದಾಜು 3000 ಮೆಗಾ ವ್ಯಾಟ್ ಕರ್ನಾಟಕ ರಾಜ್ಯದಲ್ಲಿರುವುದಾಗಿ ಸಮೀಕ್ಷೆಯಿಂದ ತಿಳಿದು ಬಂದಿದೆ.
ಸರ್ಕಾರವು ಖಾಸಗೀ ಬಂಡವಾಳ ಹೂಡಿಕೆದಾರರನ್ನು ಇಂಥ ಕಿರುಜಲ ವಿದ್ಯುತ್ ಯೋಜನೆಯನ್ನು ಅಭಿವೃದ್ದಿಗೊಳಿಸಲು ಪ್ರೋತ್ಸಾಹಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕವು ಅಸಂಪ್ರದಾಯಿಕ ಇಂಧನ ಮೂಲಗಳ ಕಿರುಜಲ ವಿದ್ಯುತ್ ಯೋಜನೆ ಅಭಿವೃದ್ದಿಯಲ್ಲಿÀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಂಥ ವಿದ್ಯುತ್ ಯೋಜನೆಗಳನ್ನು ರಾಜ್ಯದಲ್ಲಿ ಶೀಘ್ರ ಅಭಿವೃದ್ದಿಗೋಸ್ಕರ ಮತ್ತು ಪ್ರೋತ್ಸಾಹಿಸುವುದಕ್ಕಾಗಿಯೇ ರಾಜ್ಯ ಸರ್ಕಾರವು ಕೆಲವು ನಿಯಮಾವಳಿಗಳನ್ನು ಘೋಷಿಸಿದೆ.
ಕೃಷಿ ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿ ವಿದ್ಯುತ್ತನ್ನು ಉತ್ಪಾದಿಸಲು ನಮ್ಮ ರಾಜ್ಯದಲ್ಲಿ ಬಹಳಷ್ಟು ಅವಕಾಶವಿರುತ್ತದೆ.
ಕೃಷಿ ತ್ಯಾಜ್ಯ ವಸ್ತುಗಳಾದ ಬತ್ತದ ಹೊಟ್ಟು, ತೆಂಗಿನ ಚಿಪ್ಪು, ಜಾಲಿಯ ಗಿಡ, ಮತ್ತು ಇತರ ವಸ್ತುಗಳು ಹಾಗೂ ನಗರ ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ಉತ್ಪಾದಿಸಬಹುದು. ಈ ತಂತ್ರಜಾÐನದಿಂದ ವಿದ್ಯುತ್ ಉತ್ಪಾದಿಸಲು ಸರ್ಕಾರದಿಂದ ಸಹಾಯಧನ ಮತ್ತು ಇತರ ಇಟಿeಡಿgಥಿ ಠಿಟಚಿಟಿಣಚಿಣioಟಿ ಮೂಲಕ, ಅಂದರೆ ನಮ್ಮಲ್ಲಿರುವ ಬಂಜರು ಭೂಮಿ ಅಟಚಿss ಅ & ಆ ಭೂಮಿಯಲ್ಲಿ ಗಿಡಮರಗಳನ್ನು ಬೆಳೆದು, ಈ ಗಿಡಮರಗಳಿಂದ ಬರುವ ಕಟ್ಟಿಗೆಯಿಂದ ಮೂಲಕ ವಿದ್ಯುತ್ ಉತ್ಪಾದಿಸಬಹುದು, ಇದಕ್ಕೆ ಸಹ ಸರ್ಕಾರದಿಂದ ಅನುದಾನ ಮತ್ತು ಇತರ ಸೌಲಭ್ಯಗಳಿರುತ್ತದೆ.
ಬಯೋಗ್ಯಾಸ್ ಅಂದರೆ ಸಗಣಿ ಮತ್ತು ಇತರ ಗಿಡದ ಎಲೆಗಳಿಂದ, ಕೃಷಿ ತ್ಯಾಜ್ಯ ವಸ್ತುಗಳಿಂದ ಗ್ಯಾಸ್ ಉತ್ಪಾದಿಸಿ ಈ ಗ್ಯಾಸನ್ನು ವಿದ್ಯುತ್ ಉತ್ಪಾದಿಸಲು ಉಪಯೋಗಿಸಬಹುದು.
ಕೃಷಿ ಭೂಮಿಯಲ್ಲಿ ಬೆಳೆಯುವ ಬೇವು, ಔಡಲದಂತೆ, ನಮ್ಮ ಜಮೀನಿನ ಮೇರೆಯ ಸುತ್ತಲೂ ಹೊಂಗೆ ಗಿಡ ಹಾಗೂ ಜತ್ರೋಪ ಗಿಡಗಳನ್ನು ಬೆಳೆಯಬಹುದು ಹಾಗೂ ಈ ಗಿಡಗಳಿಂದ ಬರುವ ಬೀಜದಿಂದ ಎಣ್ಣೆಯನ್ನು ತೆಗೆದು, ಈ ಎಣ್ಣೆಯನ್ನು ಬಯೋಡೀಸಲ್ ಅಂಥ ಕರೆಯಲಾಗುವುದು, ಇದನ್ನು ಡೀಸಲ್ ಪರ್ಯಾಯವಾಗಿ ಉಪಯೋಗಿಸಬಹುದು.
ಮೇಲಿನ ವಿದ್ಯುತ್ ಮೂಲಗಳಾದ ನಿಂದ ನಾವು ಸಮರ್ಪಕವಾಗಿ ವಿದ್ಯುತ್ ಉತ್ಪಾದಿಸಬಹುದು ಹಾಗೂ ಕಡಿಮೆ ಕರ್ಚಿನಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ಪಡೆಯಬಹುದು, ಇಂತಹ ಯಂತ್ರಗಳಿಂದ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಉತ್ಪಾದಿಸಲು ಅನೇಕ ಅವಕಾಶವಿರುತ್ತದೆ ಮತ್ತು ಇದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗದ ಅವಕಾಶ ಸಹ ದೊರೆಯುತ್ತದೆ.
ನಮ್ಮ ರಾಜ್ಯದಲ್ಲಿ ಸುಮಾರು 53 ಕ್ಕಿಂತ ಹೆಚ್ಚು ಸಕ್ಕರೆ ಕಾರ್ಖಾನೆಗಳು ಇರುತ್ತವೆ. ಈ ಎಲ್ಲಾ ಕಾರ್ಖಾನೆಗಳಿಂದ ಸಹ ಉತ್ಪಾದನೆÀ ಘಟಕಗಳನ್ನು ಸ್ಥಾಪಿಸಿದರೆ ಸುಮಾರು 1500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು.
ಇದುವರೆಗೆ ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಮಾತ್ರ ಮುಖ್ಯ ಉತ್ಪಾದನೆಯಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಸಕ್ಕರೆ ಕಾರ್ಖಾನೆಗಳನ್ನು ಸಮರ್ಪಕವಾಗಿ ಉಪಯೋಗಿಸಲು, ಅಂದರೆ ಸಕ್ಕರೆ ಜೊತೆಗೆ ವಿದ್ಯುತ್ ಉತ್ಪಾದಿಸಲು ಸಹ ಅವಕಾಶವಿರುತ್ತದೆ. ಕಾರಣ ಸಕ್ಕರೆ ಉತ್ಪಾದಿಸುವ ಹಂತದಲ್ಲಿ Sಣeಚಿm ಸಹ ಉತ್ಪಾದನೆಗೆ ಅವಕಾಶವಿರುತ್ತದೆ. ಆದರೆ ಇದುವರೆವಿಗೆ ಸಕ್ಕರೆ ಉತ್ಪಾದನೆಯಾದ ನಂತರ ಸಾಮಾನ್ಯವಾಗಿ ಈ Sಣeಚಿm ನ್ನು ವಾತಾವರಣದಲ್ಲಿ ಬಿಡಲಾಗುತ್ತದೆ ಮತ್ತು ಕಬ್ಬಿನಿಂದ ಸಕ್ಕರೆ ತೆಗೆದ ನಂತರ ಕಬ್ಬಿನ ಸಿಪ್ಪೆಯನ್ನು ಅಡಿಗೆ ಮಾಡಲು, ನೀರು ಕಾಯಿಸಲು ಅಷ್ಟಾಗಿ ಖರ್ಚಾಗುವುದಿಲ್ಲ ಮತ್ತು ಈ ಕಬ್ಬಿನ ಸಿಪ್ಪೆಯನ್ನು ಗೊಬ್ಬರವಾಗಿ ಪರಿವರ್ತಿಸಲು ಸುಮಾರು 2-3 ವರ್ಷಗಳು ಬೇಕಾಗುತ್ತದೆ. ಆದುದರಿಂದ ಸ್ಥಳದ ಅಭಾವ ಮತ್ತು ಇತರೆ ಕಾರಣಗಳಿಂದ, ಈ ಕಬ್ಬಿನ ಸಿಪ್ಪೆಯನ್ನು ಸುಮ್ಮನೆ ಸುಡುವ ಬದಲು ಈಗಾಗಲೇ ಉತ್ಪತ್ತಿಯಾದ Sಣeಚಿm ನ್ನು ಪುನ: ರೀ-ಹೀಟ್ ಮಾಡಲು ಈ ಕಬ್ಬಿನ ಸಿಪ್ಪೆಯನ್ನು ಉಪಯೋಗಿಸಿ, ಸೂಪರ್ ಸ್ಟೀಮ್ ಆಗಿ ಪರಿವರ್ತನೆ ಮಾಡಿ, ಈ ಸೂಪರ್ ಸ್ಟೀಮ್‍ನ್ನು ಸ್ಟೀಮ್ ಜನರೇಟರ್ ಮೂಲಕ ಹಾಯಿಸಿ ವಿದ್ಯುತ್ ಉತ್ಪಾದಿಸಬಹುದು. ಈ ವ್ಯವಸ್ಥೆಯು ಕಲ್ಲಿದ್ದಲಿನಿಂದ ಉತ್ಪಾದಿಸುವ ಉಷ್ಣ ಸ್ಥಾವರದಂತೆ ಕೆಲಸ ಮಾಡುತ್ತದೆ.
ಇಂತಹ ಸಹ ಉತ್ಪಾದನೆ ಅಂದÀÀರೆ ಸಕ್ಕರೆ ಜೊತೆ ವಿದ್ಯುತ್À ಉತ್ಪಾದನೆ ಮಾಡುವುದರಿಂದ ಸಕ್ಕರೆ ಕಾರ್ಖಾನೆಗಳು ಲಾಭದಾಯಕವಾಗಿ ನೆಡೆಯುತ್ತª,É ಅಲ್ಲದೆ ಕಡೆಮೆ ಖರ್ಚಿನಲ್ಲಿ ವಿದ್ಯುತ್ ಉತ್ಪಾದಿಸಬಹುದು. ಇದರಿಂದ ಬರುವ ಲಾಭದಲ್ಲಿ ರೈತರಿಂದ ಹೆಚ್ಚಿನ ದರದಲ್ಲಿ ಕಬ್ಬನ್ನು ಖರೀದಿಸಬಹುದು ಮತ್ತು ರೈತರಿಗೆ, ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಇಂಥಹ ವಿದ್ಯುತ್ ಉತ್ಪಾದನೆಯಿಂದ ಪ್ರಯೋಜನವಾಗುತ್ತದೆ.
ಮೇಲಿನ ಎಲ್ಲಾ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸುವುದರಿಂದ ವಾತಾವರಣದಲ್ಲಿ ಯಾವುದೇ ಪರಿಸರ ಹಾನಿ ಇಲ್ಲ, ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದಲ್ಲಿ ದಿನದ 24 ಘಂಟೆಗಳು ಸತತವಾಗಿ ಸಮರ್ಪಕವಾಗಿ ವಿದ್ಯುತ್ತ್‍ನ್ನು ನಮ್ಮ ಪರಿಸರದಲ್ಲಿ ಪಡೆಯಬಹುದು. ಇದರಿಂದ ದೂರ ಅಥವಾ ದೊಡ್ಡ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಮತ್ತು ದೊಡ್ಡ ದೊಡ್ಡ ವಿದ್ಯುತ್ ಜಾಲಗಳನ್ನು ಅಳವಡಿಸುವುದನ್ನು ತಪ್ಪಿಸಬಹುದು. ಇದರಿಂದ ಇತರೆ ವಿದ್ಯುತ್ ಸೋರಿಕೆಗಳನ್ನು ಸಹ ತಡೆಗಟ್ಟಬಹುದು. ಒಟ್ಟಿನಲ್ಲಿ ಈ ಎಲ್ಲಾ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸಲು ಪರಸರಕ್ಕೆ ಪೂರಕವಾಗಿರುತ್ತದೆ ಮತ್ತು ನಮ್ಮೆಲ್ಲರ ವಿದ್ಯುತ್ ಬೇಡಿಕೆಯನ್ನು ಪೂರೈಸಬಹುದಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ, ಅದರಂತೆ ಸಾರ್ವಜನಿಕರು ಸಹ ಈ ಅತ್ಯಮೂಲ್ಯವಾದ ವಿದ್ಯುತ್‍ನ್ನು ಸಮರ್ಪಕವಾಗಿ, ಅವಶ್ಯಕತೆಗೆ ತಕ್ಕಂತೆ ಕಾಳಜಿ ವಹಿಸಿ ಉಪಯೋಗಿಸುವುದು ಸರ್ಕಾರದಷ್ಟೇ ಸಾರ್ವಜನಿಕರ ಆದ್ಯ ಕರ್ತವ್ಯ.
ಕೊನೆಯ ಮಾರ್ಪಾಟು : 2/15/2020
ಪ್ರೋಟೀನ್ಸ್ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿವೆ. ಅಮೈನೋ ಆಮ್...
ಕೇವಲ ಒಂದು ಬಕೆಟ್ ನೀರಿನಲ್ಲಿ ಒಂದು ಕೃತಕ ಎಲೆಯನ್ನು ಮುಳುಗ...
ಈ ಶಕ್ತಿ –ಸುರಭಿ ಜೈವಿಕ ಅನಿಅಲ ಸ್ಥಾವರವು ಸಾಂಪ್ರದಾಯಿಕ ಅನ...
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ (ಕೆ.ಆರ...